ಅರ್ಚಕನ ಜೀವಂತ ಸುಟ್ಟಾಗ, ಸಂವಿಧಾನವನ್ನ ಎಲ್ಲಿಟ್ಕೊಂಡಿದ್ರಿ?

ಗ್ರ್ಯಾಹಂ ಸ್ಟೇನ್ಸ್‌ ಪ್ರಕರಣ ಓದಿದ್ದೀರಾ? ಹೋಗ್ಲಿ ನೆನಪಿದ್ಯಾ? ನನಗೂ ಇರಲಿಲ್ಲ ಬಿಡಿ. ಆದರೂ ಉದ್ದೇಶಪೂರ್ವಕವಾಗಿಯೇ ನೆನಪಿಸಿಕೊಳ್ಳಬೇಕಾಗಿರುವಂಥ ಪರಿಸ್ಥಿತಿ ಈಗ ಬಂದೊದಗಿದೆ. ಏನದು ಅಂಥ ಪರಿಸ್ಥಿತಿ ಅಂತ ಕೇಳಿದ್ರಾ? ಹೇಳ್ತೀನಿ. ಅದಕ್ಕಿಂತ ಮುಂಚೆ ಈ ಗ್ರ್ಯಾಹಂ ಸ್ಟೇನ್ಸ್‌ ಪ್ರಕರಣವನ್ನು ತಿಳಿದುಕೊಂಡು ಮತ್ತೊಂದು ಪ್ರಕರಣವನ್ನೂ ತಿಳಿದುಕೊಳ್ಳೋಣ.

1999ರ ಜನವರಿ 22ರ ರಾತ್ರಿ ಕಳೆದು 23ಕ್ಕೆ ಬೀಳುವ ಹೊತ್ತು. ಒಡಿಶಾದ ಮನೋಹರಪುರದಲ್ಲಿ ಒಂದು ನಡೆಯಬಾರದ ಘಟನೆ ನಡೆದುಹೋಯ್ತು. 55ರ ಆಸುಪಾಸಿನ ಒಬ್ಬ ವಿದೇಶಿ ವ್ಯಕ್ತಿ ಹಾಗೂ 10 ಮತ್ತು 8 ವರ್ಷದ ಇಬ್ಬರು ಬಾಲಕರನ್ನ ಯಾವನೋ ಒಬ್ಬ ಬಂದು ಬೆಂಕಿ ಹಚ್ಚಿ ಸಾಯಿಸುತ್ತಾನೆ. ಸತ್ತ ವ್ಯಕ್ತಿಯೇ ಗ್ರ್ಯಾಹಂ ಸ್ಟೇನ್ಸ್‌. ಕಾರಣ ಏನು? ಈತ ಸಾಮಾನ್ಯ ಮನುಷ್ಯ ಅಲ್ಲ. ಕುಷ್ಟರೋಗಿಗಳಿಗೆ ಸೇವೆ ಮಾಡುತ್ತಿದ್ದ ಗಂಡು ಮದರ್‌ ತೆರೆಸಾ, ಪಾದಿ ಹಿಂಗೆಲ್ಲ ಹೇಳಿಸಿಕೊಳ್ಳಬೇಕು, ಈ ಮುಖವಾಡದಲ್ಲಿ ಮತಾಂತರ ಮಾಡಬೇಕೆಂದು 1965ರಲ್ಲಿ ಭಾರತಕ್ಕೆ ಬಂದು ವಾಪಸ್ಸೇ ಹೋಗದಂಥ ಪಕ್ಕಾ ಮಿಷನರಿ.

ದೇವರು, ಜೀಸಸ್‌, ಮೇರಿ ಹೀಗೆ ಆಗಿನ ಕಾಲಕ್ಕೆ ಸ್ವಲ್ಪ ಹೊಸತಾಗಿದ್ದ ಶಬ್ದಗಳನ್ನೆಲ್ಲ ಹೇಳಿ ಜನರನ್ನು ಮೋಸದಿಂದ ಮತಾಂತರ ಮಾಡುತ್ತಿದ್ದ ಈತನ ಬಗ್ಗೆ ಊರಿಂದ ಊರಿಗೆ ಮಾಹಿತಿ ಹರಡುತ್ತದೆ. ಹೆಚ್ಚಾಗಿ ಈತ ಟಾರ್ಗೆಟ್‌ ಮಾಡಿಕೊಂಡಿದ್ದು ಆದಿವಾಸಿ ಜನರನ್ನ. ಒಂದಕ್ಷರವೂ ಬರದ ಮುಗ್ಧರು, ಜ್ವರ ಬಂದರೂ ಕಾಡುದೇವಿ ಮುನಿದಿದ್ದಾಳೆಂದು ಪೂಜೆ ಮಾಡುವ ಈ ಜನಾಂಗಕ್ಕೆ ಏಸುವಿನ ಪ್ರೀತಿಯನ್ನ ಧಾರೆಯೆರೆಯಲು ಬಂದಿದ್ದವ ಈ ಗ್ರ್ಯಾಹಂ ಸ್ಟೇನ್ಸ್‌ ಎಂಬ ಆರೋಪವೂ ಇತ್ತು. ಅದೇನೇ ಇರಲಿ. ಯಾರನ್ನೂ ಕೊಲ್ಲುವುದು ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧ.

ಆದರೆ ಧಾರಾ ಸಿಂಗ್‌ ಮತ್ತು ಸಂಗಡಿಗರಿಗೆ ಇದೆಲ್ಲ ಲೆಕ್ಕಕ್ಕೆ ಬರಲಿಲ್ಲ. ಅವರ ಮನಸ್ಸಲ್ಲಿ ಇದ್ದಿದ್ದು ಒಂದೇ, ಆತ ನಮ್ಮವರನ್ನ ಕ್ರಿಶ್ಚಿಯಾನಿಟಿಗೆ ಮತಾಂತರ ಮಾಡುತ್ತಿದ್ದಾನೆ ಎಂಬುದಷ್ಟೇ. 1999ರ ಜನವರಿ 22/23ರ ಆ ರಾತ್ರಿ ಒಂದಷ್ಟು ಜನರನ್ನ ಕರೆದುಕೊಂಡು ಬಂದವನೇ, ಗ್ರ್ಯಾಹಂ ಸ್ಟೇನ್ಸ್‌, ಪುಟ್ಟ ಮಕ್ಕಳಾದ ಫಿಲಿಫ್ಸ್‌ ಮತ್ತು ಟಿಮತಿ ಕಾರೊಳಗೇ ಇರುವುದನ್ನು ನೋಡಿ ಕಾರ್‌ ಲಾಕ್‌ ಮಾಡಿ ಬೆಂಕಿ ಇಟ್ಟು ಕೊಂದರು. ಅವತ್ತು ಒಡಿಶಾದ ಮನೋಹಪುರ ಎಂಬ ಹಳ್ಳಿ ಹೊತ್ತಿ ಉರಿಯಿತು. ಆ ಕಿಡಿ, ಬಿಬಿಸಿಗೂ ಮುಟ್ಟಿ, ಕಾಡ್ಗಿಚ್ಚಿನಂತೆ ವಿಶ್ವಕ್ಕೆಲ್ಲ ಹಬ್ಬಿತು.

ಇದರ ತನಿಖೆಗೆ ಸುಪ್ರೀಂ ಕೋರ್ಟ್‌ನ ಜಸ್ಟೀಸ್‌ ಡಿಪಿ ವಾಧ್ವಾ ಕಮಿಷನ್‌ ಸ್ಥಾಪಿಸಿ ವರದಿ ಕೊಡಲು ಕೇಳಿದರು. ಸಿಬಿಐ ತನಿಖೆಯೂ ಆಯ್ತು. ಧಾರಾ ಸಿಂಗ್‌ ಮತ್ತು ತಂಡ ಜೈಲು ಸೇರಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಇಲ್ಲ, ಇಷ್ಟಕ್ಕೇ ಮುಗೀಲಿಲ್ಲ. ಕ್ರೈಸ್ತ ಮತದವರೇ ಆಗಿದ್ದ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2005ರಲ್ಲಿ ಗ್ರ್ಯಾಹಂ ಸ್ಟೇನ್ಸ್‌ನ ಹೆಂಡತಿ ಗ್ಲೇಡಿ ಸ್ಟೇನ್ಸ್‌ಗೆ ಪದ್ಮಶ್ರೀಯೂ ಕೊಟ್ಟರು! ಅದೇನೋ ಒಂದ್‌ ಗಾದೆ ಇದೆಯಲ್ಲ, ಸತ್ತ ಎಮ್ಮೆ ಹತ್ತು ಲೀಟರ್‌ ಹಾಲು ಕೊಡ್ತಿತ್ತು ಅಂತ. ಹಾಗೆ, ಈ ಮತಾಂತರಿಯನ್ನ ಹಿರೋ ಮಾಡಿಯೂ ಆಯ್ತು.

2020ಕ್ಕೆ ಬನ್ನಿ. ರಾಜಸ್ಥಾನದ ಕರೌಲಿ ಅನ್ನೋ ಜಿಲ್ಲೆ. ರಾಜಧಾನಿ ಜೈಪುರದಿಂದ 177 ಕಿಮೀ ದೂರದಲ್ಲೇ ಇರೋ ಈ ಜಿಲ್ಲೆಯಲ್ಲಿರೋ ಒಬ್ಬ ಅರ್ಚಕನನ್ನ ಮೀನಾ ಸಮುದಾಯದ ಮಂದಿ ಪೆಟ್ರೋಲ್‌ ಸುರಿದು ಬೆಂಕಿ ಕೊಟ್ಟೇ ಬಿಟ್ಟರು. ಈತ ಯಾರನ್ನೂ ಮತಾಂತರ ಮಾಡಿಲ್ಲ ಅಥವಾ ಈ ಎಡಪಂಥೀಯರ ಕೊಳೆತು ನಾರುವ ವಾದ ಇದೆಯಲ್ಲ, ದೇವಸ್ಥಾನಕ್ಕೆ ಬಿಡಲಿಲ್ಲ, ಊಟಕ್ಕೆ ಒಟ್ಟಿಗೇ ಕೂರಿಸಲಿಲ್ಲ ಇತ್ಯಾದಿ… ಇದಾವುದೂ ಅಲ್ಲಿ ನಡೆಯಲೇ ಇಲ್ಲ. ನಡೆದಿದ್ದೇನು ಹಾಗಾದ್ರೆ? ಸಜಹವಾಗಿ ಒಂದಷ್ಟು ಎಕರೆ ಭೂಮಿಯನ್ನ ದೇವಸ್ಥಾನದ ಮತ್ತು ಅರ್ಚಕರ ಹೆಸರಿಗೆ ಕೊಟ್ಟಿರುತ್ತಾರೆ. ಆದರೆ ಊರಲ್ಲಿದ್ದ ಮೀನಾ ಸಮುದಾಯದ ಕೆಲವರಿಗೆ ಇದು ಸರಿ ಎನಿಸಲಿಲ್ಲ. ಇವರಿಗೇಕೆ ಈ ಭೂಮಿ? ದೇವಸ್ಥಾನಕ್ಕೆ 5 ಎಕರೆ ಭೂಮಿ ಯಾಕೆ? ಹೀಗೆಲ್ಲ ಪ್ರಶ್ನೆ ಕೇಳಿ, ಭೂಮಿಯನ್ನು ಕಬಳಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಅರ್ಚಕ ಬಾಬುಲಾಲ್‌ ವೈಷ್ಣವ್‌ ಇದನ್ನ ತಡೆದಿದ್ದಾರೆ. ಒಂದಲ್ಲ ಎರಡಲ್ಲ, ಸುಮಾರು ಸಲ. ಆದರೆ, ಇವನಿದ್ದರೆ ತಾನೆ ಅಡಚಣೆ ಎಂದು ಏಕಾಏಕಿ ಬಂದವರೇ ಪೆಟ್ರೋಲ್‌ ಸುರಿದು ಬೆಂಕಿ ಕೊಟ್ಟಿದ್ದಾರೆ.

ತಕ್ಷಣವೇ ಆಸ್ಪತ್ರೆಗೆ ಓಡಿದ ಆತ, ತನಗೇನಾಯಿತು? ಯಾರು ಬೆಂಕಿ ಹಾಕಿದ್ದು? ಏನು ವಿವಾದ? ಎಂಬ ಮಾಹಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಆದರೆ, ಹೆಚ್ಚು ಹೊತ್ತು ಬದುಕಲಿಲ್ಲ. 50 ವರ್ಷದ ಆ ದೇಹಕ್ಕೆ ಪೆಟ್ರೋಲ್‌ ಹಾಕಿದರೆ ಆತ ಹೇಗೆ ಬದುಕಬೇಕು? ಬಾಬುಲಾಲ್‌ ವೈಷ್ಣವ್‌ ದೇವರ ಭೂಮಿಗಾಗಿ ಹೋರಾಡುತ್ತಾ ಪ್ರಾಣ ಬಿಟ್ಟರು. ಈಗ ಮೇಲೆ ಹೇಳಿದ ಮಿಷನರಿ ಪ್ರಕರಣ ಮತ್ತು ಅರ್ಚಕನ ಪ್ರಕರಣದಲ್ಲಿ ಬೆಂಕಿ ಹಾಕೇ ಕೊಂದಿದ್ದಾರೆ. ಆತನನ್ನ ಕಳುಹಿಸಿಕೊಟ್ಟಿದ್ದು ಒಂದು ಶ್ರೀಮಂತ ಸಂಸ್ಥೆ. ಇನ್ನೊಂದರಲ್ಲಿ ಈ ಬಡ ಬ್ರಾಹ್ಮಣನಿಗೆ ಜನಿವಾರ ಬಿಟ್ಟರೆ ಬೇರೇನೂ ಇಲ್ಲ.

ಎಲ್ಲಿ ಸ್ವಾಮಿ ನ್ಯಾಯ?

ಇವರಿಗೆ ಪದ್ಮಶ್ರೀ ಕೊಡೋದು ಹಾಗಿರಲಿ, ಇನ್ನೂ ಪದ್ಮಶ್ರೀ ಪಾನ್‌ ಮಸಾಲಾ ಹಾಕಿ ಉಗಿಯೋದು ನಿಲ್ಲಿಸಲಿಲ್ಲವಲ್ಲ. ಅದೇ ದುರಂತ. ಮೊನ್ನೆ ಕೇರಳದಲ್ಲಿ ಯಾವುದೋ ಒಂದು ಬಾಲಕಿ ಹಾವು ಕಡಿತದಿಂದ ತೀರಿಕೊಂಡಳು ಎಂಬ ಸುದ್ದಿಯನ್ನ ‘ದಲಿತ ಹುಡುಗಿ ಮಲಗಿದ್ದಾಗ ಕಚ್ಚಿದ ಹಾವು, ಹುಡುಗಿ ಸಾವು’ ಅನ್ನೋದನ್ನು ಹೆಡ್‌ಲೈನ್‌ನಲ್ಲಿ ಹಾಕಿ ಚಚ್ಚಿದ್ದೋ ಚಚ್ಚಿದ್ದು. ಆದರೆ, ಪಾಪ ಹಾವಿಗೇನು ಗೊತ್ತು ಆಕೆ ದಲಿತನೋ, ಬ್ರಾಹ್ಮಣನೋ, ಗೌಡನೋ ಎಂದು? ಅಂದರೆ ಇಂಥ ಪ್ರಕರಣದಲ್ಲೂ ಸತ್ತವರಾರು ಎಂದು ಜಾತಿ ಹುಡುಕುವವರು, ಈ ಅರ್ಚಕ ಸತ್ತಾಗ ಸುದ್ದಿ ಮಾಡುವುದಕ್ಕೂ ಹಿಂದೆ ಮುಂದೆ ನೋಡಿದರು. ಲೋಕಲ್‌ನಲ್ಲಿ ಬಹಳ ದೊಡ್ಡ ನ್ಯೂಸ್‌ ಆದ ನಂತರವೇ ಇಂಗ್ಲಿಷ್‌ ಮತ್ತು ಹಿಂದಿ ಮಾಧ್ಯಮಗಳು ಸುದ್ದಿಯನ್ನ ಹಾಕಿಕೊಂಡಿದ್ದು.

ಅದೂ ಹೇಗೆ? ಒಬ್ಬ ‘ಲೋಭಿ ಅರ್ಚಕ ಭೂಮಿ ಕಬಳಿಸುವುದಕ್ಕೆ ಮುಂದಾದಾಗ ತಡೆಯಲು ಬಂದವರು ಕೋಪಗೊಂಡು ಬೆಂಕಿ ಕೊಟ್ಟರು’ ಎಂದು. ಇನ್ನು ಕೆಲವರು ಸುದ್ದಿಗೆ ಹೆಚ್ಚು ಜಾಗವೇ ಕೊಟ್ಟಿಲ್ಲ. ಪ್ರಶ್ನೆ ಕೇಳಬೇಕಾಗಿರುವುದು ಯಾಕೆ ಹೀಗೆ? ಗೌನು ಹಾಕಿರುವ ಪಾದ್ರಿಯ ಒಳಗಿರುವುದೂ ಅದೇ ಜೀವ, ಮಡಿ ವಸ್ತ್ರ ಉಟ್ಟ ಅರ್ಚಕನ ಒಳಗಿರುವುದೂ ಅದೇ ಜೀವವಲ್ಲವೇ? ಬಡ ಅರ್ಚಕ ದೇವರ ಪೂಜೆ ಬಿಟ್ಟರೆ ಒಬ್ಬರನ್ನೂ ಮತಾಂತರ ಮಾಡಿದವನಲ್ಲ. ಬೇರೆ ಕಸುಬೂ ಗೊತ್ತಿಲ್ಲ. ಮೋದಿ ಪರವಾಗಿ ಮಾತನಾಡುವ ಹಿಂದೂಗಳಿಗೆ ಚಡ್ಡಿ ಎಂದೂ, ಬ್ರಾಹ್ಮಣರಿಗೆ ತಟ್ಟೆ ಕಾಸು ಎಂದು ಕರೆಯುವ ಒಬ್ಬನೂ ಇದನ್ನು ಖಂಡಿಸಲಿಲ್ಲ. ಯಾವುದೋ ಗ್ರ್ಯಾಹಂ ಸ್ಟೇನ್ಸ್‌ನಂಥ ಒಂದೆರಡು ಮತಾಂತರಿಗಳ ಹತ್ಯೆ ಆಗಿದ್ದಕ್ಕೆ ದೇಶದಲ್ಲಿ ಕ್ರಿಶ್ಚಿಯನ್ನರಿಗೆ ಉಳಿವಿಲ್ಲ ಎಂದೆಲ್ಲ ಹಬ್ಬಿಸಿದವರು ಸಾಲು ಸಾಲು ಹಿಂದೂಗಳ, ಸಾಧುಗಳ, ಬ್ರಾಹ್ಮಣರ ಹತ್ಯೆ ಸರಣಿಯಾಗಿ ಆಗುತ್ತಿದ್ದರೂ ಪತ್ತೆಯೇ ಇಲ್ಲ.

ನಿಜವಾಗಿ ದೇಶದಲ್ಲಿ ಈಗ ಹುಡುಕಿ ಹುಡುಕಿ ಕೊಲ್ಲುತ್ತಿರುವುದು ಹಿಂದೂಗಳನ್ನ. ಅದರಲ್ಲೂ ಬ್ರಾಹ್ಮಣರನ್ನ. ನಾನು ಸಾಸಿವೆಯಷ್ಟೂ ಅತಿರಂಜಕವಾಗಿ ಹೇಳುತ್ತಿಲ್ಲ. ಕಣ್ಣ ಮುಂದೆ ಕಟ್ಟುವಂಥ ಉದಾಹರಣೆಗಳಿವೆ. ಆದರೆ, ಎಲ್ಲ ರಾಜಕಾರಣಿಯೂ ಅಲ್ಪರ ಪೃಷ್ಠದಲ್ಲೇ ನಿದ್ರಿಸುತ್ತಿರುವುದರಿಂದ ಏನೇನೂ ಕಾಣುತ್ತಿಲ್ಲ. 2020 ಏಪ್ರಿಲ್‌ 16. ಮಹಾರಾಷ್ಟ್ರದಲ್ಲಿ 70 ವರ್ಷದ ಮಹಾರಾಜ್‌ ಕಲ್ಪವೃಕ್ಷಗಿರಿಯನ್ನ ಕರೆದುಕೊಂಡು ಬಂದ ಪೊಲೀಸರು ನೇರ ಟೊಪ್ಪಿಯವರ ಕೈಗಿಟ್ಟರು. ಸಾಯುವ ಆ ಕೊನೇ ಹಂತದಲ್ಲೂ ಪೊಲೀಸರು ಬಚಾವ್‌ ಮಾಡ್ತಾರೇನೋ ಎಂಬ ಸ್ಮಿತ ವದನ ಮರೆಯಕ್ಕೇ ಆಗಲ್ಲ. ಆಗಲೂ ಹಿಂದೂಗಳ ಹತ್ಯೆ ಆಗುತ್ತಿದೆ ಎಂದೆನಿಸಲಿಲ್ಲವೇ? ಧ್ವನಿ ಎತ್ತಲ್ಲ ಎಂದಮೇಲೆ ಪತ್ರಕರ್ತ ಎಂದು ಹೇಳಿಕೊಳ್ಳುವುದೇಕೆ?

ನೀವು ಸುಮ್ಮನೆ ಲೆಕ್ಕ ತೆಗೀತಾ ಹೋಗಿ. ಹಿಂದೂಗಳ ಮೇಲೆ, ಹೆಚ್ಚು ದೇವರ ಮೇಲೆ ಭಕ್ತಿ ಇರುವ ಯಾವುದೇ ಜಾತಿಯವರ ಮೇಲೆ, ಇನ್ನು ವಿಶೇಷವಾಗಿ ಬ್ರಾಹ್ಮಣರ ಮೇಲಂತೂ ಹಲ್ಲೆಗಳಾಗುತ್ತಲೇ ಇದೆ. ನಮ್ಮ ಹಿಂದೂ ದೇವರೆಂದರೆ ಮೈಯೆಲ್ಲ ಉರಿದುಕೊಂಡು ದೇವಸ್ಥಾನದ ರಥ ಸುಟ್ಟಿದ್ದು ಒಂದೆಡೆಯಾದರೆ, ಮತ್ತೊಂದು ಕಡೆ ನಂದಿ ವಿಗ್ರಹವನ್ನು ಕಿತ್ತು ಕೆಡವಿದ್ದರು. ಇನ್ನು ಕೇರಳದಲ್ಲಂತೂ ದೇವರು, ಭಕ್ತರು, ದೇವಸ್ಥಾನ ಇಂಥವುಗಳ ಪಾಡು ಕೇಳುವುದೇ ಬೇಡ. ಅದೆಲ್ಲ ಯಾಕ್‌ ಸ್ವಾಮಿ, ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಒಬ್ಬ ಮಹಿಳೆಗೆ ಹೀನಾಯವಾಗಿ ತಲೆಗೆ ಹೊಲಿಗೆ ಹಾಕುವ ಹಾಗೆ ಹೊಡೆದಿದ್ದಾರೆ. ಆಕೆ ಮಾಡಿದ ತಪ್ಪೇನು ಗೊತ್ತಾ? ದೇವಸ್ಥಾನದಲ್ಲಿ ಗಂಟೆ ಬಾರಿಸಿದ್ದು. ಸತ್ಯ ಮಾಡಿ ಹೇಳ್ತೇನೆ ಅಷ್ಟೇ ಆಕೆಯ ತಪ್ಪು. ಕವಿತಾ ಎಂಬ ಆ ಮಹಿಳೆ ನಿತ್ಯ ದೇವಸ್ಥಾನಕ್ಕೆ ಬಂದು ಗಂಟೆ ಬಾರಿಸುತ್ತಿದ್ದಳು. ಜಾತ್ಯತೀತತೆಗೇ ಹುಟ್ಟಿದ ಮಕ್ಕಳು, ನಿತ್ಯ ಬಂದು ಈಕೆಯ ಜತೆ ಇದೇ ವಿಚಾರಕ್ಕೆ ಕಿರಿಕ್‌ ಎತ್ತಿಕೊಳ್ಳುತ್ತಿದ್ದರು. ಆದರೆ ಧಾರ್ಮಿಕ ಸ್ವಾತಂತ್ರ್ಯ ಎಂದು ಅಂಬೇಡ್ಕರ್‌ ಸಂವಿಧಾನದಲ್ಲಿ ಕೊಟ್ಟಿದ್ದಾರಲ್ಲ ಎಂದು ಅದನ್ನು ನಂಬಿ ಹೋದ ಆಕೆಯ ತಲೆ ಓಪನ್‌! ಇನ್ನೂ ಸಾಕಷ್ಟು ಉದಾಹರಣೆ ಕೊಡುತ್ತೇನೆ.

ಅದ್ಯಾಕೋ ಗೊತ್ತಿಲ್ಲ ಈ ನರಸತ್ತವರಿಗೆ ದೇವಸ್ಥಾನದ ಭೂಮಿ, ದೇವಸ್ಥಾನದ ಆಸ್ತಿಯೇ ಬೇಕು. ಅದೂ ಕಿತ್ತುಕೊಳ್ಳುವುದು ಯಾರೆಂದರೆ, ಅರ್ಚಕ ಒಂದು ಮಾತಾಡಿದರೂ ಜೈಲಿಗೆ ಕಳುಹಿಸಬಲ್ಲ ತಾಕತ್ತಿರುವ ಅಲ್ಪರು, ಟೊಪ್ಪಿಗಳು, ಪರಮ ದಯಾಳುವಾದ ಪರಮಾತ್ಮನ ಕಟ್ಟಾಳುಗಳು, ರಾಜಕಾರಣಿಗಳು. ಎಷ್ಟೋ ಶತಮಾನಗಳಿಂದ ದೇವಸ್ಥಾನಕ್ಕೆ ಸೇರಿದ ಆಸ್ತಿಗಳನ್ನೇ ಬ್ರಾಹ್ಮಣರಿಂದ ಕಿತ್ತುಕೊಳ್ಳುವುದು ಈಗ ಕಾಮನ್‌ ಎಂಬಂತಾಗಿದೆ. ಇದು ಇಂದಿರಾ ಗಾಂಧಿ ಎಂಬ ಹೆಂಗಸು ಕೇಶವಾನಂದ ಭಾರತೀ ಸ್ವಾಮೀಜಿಗಳ ಮಠದ ಆಸ್ತಿಯನ್ನ ತೆಗೆದುಕೊಳ್ಳುವುದರಿಂದ ಹಿಡಿದು ಅರ್ಚಕನನ್ನು ಸಜೀವ ದಹನ ಮಾಡುವವರೆಗೂ. ಕೇವಲ ತಮಿಳುನಾಡು ಒಂದರಲ್ಲೇ 1959ರಿಂದ ಇವತ್ತಿನವರೆಗೂ 47 ಸಾವಿರ ಎಕರೆ ಭೂಮಿಯನ್ನು ದೇವಸ್ಥಾನದಿಂದ ಕಿತ್ತುಕೊಳ್ಳಲಾಗಿದೆ. ಇದು ಲೆಕ್ಕಕ್ಕೆ ಸಿಕ್ಕಿರುವುದು. ಇನ್ನು ಗ್ರಾಮ ಪಂಚಾಯಿತಿ ಲೆವೆಲ್‌ನಲ್ಲೇ ಮುಚ್ಚಿಹೋದ ಪ್ರಕರಣಗಳದ್ದು ಬೇರೆ ಲೆಕ್ಕ. ತಮಿಳುನಾಡು ಒಂದರಲ್ಲೇ ಹೀಗಾದರೆ, ಇನ್ನು ದೇಶದ ಪರಿಸ್ಥಿತಿ ಏನಾಗಿರಬೇಡ?

ಜಾತಿ ಬೇಡ, ಜಾತಿ ಬೇಡ ಎಂದು ಬ್ರಾಹ್ಮಣ/ಹಿಂದೂ ಹೆಣ್ಣುಮಕ್ಕಳನ್ನ ಹಾರಿಸಿಕೊಂಡು ಹೋಗಿ ಲವ್‌ ಜಿಹಾದ್‌ ಮಾಡುವುದು, ಕಂಡ ಕಂಡಲ್ಲಿ ಬ್ರಾಹ್ಮಣರನ್ನು ಬಯ್ಯುವುದು, ನಿಂದಿಸುವುದು, ಯಾವುದೋ ಕಾಲದ ಮನುಸ್ಮೃತಿಯನ್ನೇ ಹಿಡಿದು ಇನ್ನೂ ಹಾಳೆ ಹರಿಯುತ್ತಿರುವುದು. ಇವೆಲ್ಲ ಜಾತಿ ಬೇಡ ಎಂಬ ಹೆಸರಿನಲ್ಲಿ ಹಿಂದೂಗಳನ್ನ, ಬ್ರಾಹ್ಮಣರನ್ನ ವ್ಯವಸ್ಥಿತವಾಗಿ ಇಲ್ಲವಾಗಿಸಿ, ವಿದೇಶಿ ಸಂಸ್ಕೃತಿಯನ್ನು ಹುಟ್ಟುಹಾಕುವ ವೆಲ್‌ ಪ್ಲಾನ್ಡ್‌ ಷಡ್ಯಂತ್ರ. ಈಗ ದಿನ ನಿತ್ಯ ಸಾಯುತ್ತಿರುವವರು ಈ ಯುದ್ಧದ ಹುತಾತ್ಮರಷ್ಟೇ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya