ಧರ್ಮದ ಆಧಾರದಲ್ಲಿ ಕೂಳು ಹಾಕುವವರೆಗೂ ಅನುಭವಿಸುತ್ತಲೇ ಇರಿ…!

 

 

ಅಲ್ಪಸಂಖ್ಯಾತರಿಗಾಗಿ ವಿಶೇಷ ಯೋಜನೆಗಳಿಗೆ 72 ಕೋಟಿ ರು., ಶಿಕ್ಷಣದಲ್ಲಿ ಅಲ್ಪಸಂಖ್ಯಾತರನ್ನು ಮೇಲೆತ್ತಲು ಒಂದರಿಂದ ಹತ್ತನೇ ತರಗತಿವರೆಗೂ ಕೊಡುವ ಸ್ಕಾಲರ್‌ಶಿಪ್‌ 1220.30 ಕೋಟಿ ರು., ಪದವಿ, ಪದವಿ ಪೂರ್ವ ಶಿಕ್ಷಣದಲ್ಲಿ ಇವರನ್ನು ಮೇಲೆತ್ತುವುದಕ್ಕೆ ಕೊಡುವ ಸ್ಕಾಲರ್‌ಶಿಪ್‌ 496.01 ಕೋಟಿ ರು., ತಾಂತ್ರಿಕ ಕೋರ್ಸ್‌ ಮಾಡುವ ಅಲ್ಪಸಂಖ್ಯಾತರಿಗೆ ನೀಡುವ ಸ್ಕಾಲರ್‌ಶಿಪ್‌ 366.43 ಕೋಟಿ ರು., ಒಟ್ಟಾರೆ ಶಿಕ್ಷಣ ಕ್ಷೇತ್ರದಲ್ಲಿ ಇವರಿಗೆ ಖರ್ಚು ಮಾಡುತ್ತಿರುವ ಹಣ: 2362.74 ಕೋಟಿ ರು.
ಕೌಶಲಾಭಿವೃದ್ಧಿ ಯೋಜನೆಗಳಿಗೆ 557 ಕೋಟಿ ರು., ಅಲ್ಪಸಂಖ್ಯಾತರಿಗೆ ವಿಶೇಷ ಯೋಜನೆಗಳು ಒಟ್ಟು ಮೊತ್ತ72ಕೋಟಿ ರು., ಅಲ್ಪಸಂಖ್ಯಾತರ ಬಗ್ಗೆಯೇ ಅಭಿವೃದ್ಧಿ ಯೋಜನೆಗಳ ಅಧ್ಯಯನ, ಸಂಶೋಧನೆ, ಪ್ರಚಾರಕ್ಕಾಗಿ 60 ಕೋಟಿ ರು.
ಲೆಕ್ಕ ಹೇಳುತ್ತಾ ಹೋದರೆ, ಸಾಕಷ್ಟಿದೆ. ಒಟ್ಟು ಲೆಕ್ಕ ಹೇಳುವುದಾದರೆ, 4700 ಕೋಟಿ ರು.
ನಾವೆಲ್ಲ ನಡುಬಗ್ಗಿಸಿ ದುಡಿದ ಹಣದಲ್ಲಿ ತೆರಿಗೆ ಅಂತ ಕಿತ್ತು, ಅದರಲ್ಲಿ ಇಂಥ ವಿಶೇಷ ಯೋಜನೆಗಳನ್ನು ಅನುಭವಿಸುವ ಓವೈಸಿ, ವಾರಿಸ್‌ ಪಠಾಣ್‌ರಂಥವರು ‘ನಾವು 15 ಕೋಟಿ ಇದ್ದೀವಿ, ನೀವು ನೂರು ಕೋಟಿ ಇದ್ದೀರ… ನಾವೆಲ್ಲ ಮನಸ್ಸು ಮಾಡಿದ್ರೆ ಏನಾಗುತ್ತದೆ ಗೊತ್ತಾ’ಎನ್ನುವುದು. ಅಥವಾ 15 ನಿಮಿಷ ಪೊಲೀಸರನ್ನು ಹಿಂತೆಗೆದುಕೊಳ್ಳಿ ಆಗ ನೋಡಿ ನಾವು ನಮ್ಮ ತಾಕತ್‌ ತೋರಿಸುತ್ತೇವೆ ಎಂದು ಹಲಬುತ್ತಾ ಇರುತ್ತಾರೆ. ಇನ್ನು ಇವರದ್ದೇ ಕುಡಿಗಳಾದ ಲಿಯೋನಾಳಂಥ ಮರಿ ಕ್ರಿಮಿಗಳು ‘ಪಾಕಿಸ್ಥಾನ್‌ ಜಿಂದಾಬಾದ್‌’ ಎನ್ನುತ್ತಿದ್ದಾವೆ.

ಇದೆಲ್ಲ ತಿಂದು ಕೊಬ್ಬಿರುವವರ ಧಿಮಾಕಿನ ಮಾತುಗಳಲ್ಲವಾ? ಮನೆಯಲ್ಲಿ, ಮನೆಯ ಹೊರಗೆ ದೃಷ್ಟಿ ಹಾಯಿಸಿದಲ್ಲೆಲ್ಲವೂ ನಮ್ಮ ಹಣದಿಂದ ಕೊಡುವ ಬಿಟ್ಟಿ ಯೋಜನಗಳು ಒಂದೇ ಎರಡೇ? ಮದುವೆ ಭಾಗ್ಯದಿಂದ ಹಿಡಿದು ಹುಟ್ಟುವ ಮಕ್ಕಳೂ ಒಂದು ಸಮುದಾಯದಲ್ಲಿ ಹುಟ್ಟಿದರು ಎಂಬ ಕಾರಣಕ್ಕೆ ‘ಭಾಗ್ಯವಂತ’ರಾಗೇ ಹುಟ್ಟಿ, ಆಡುವ ಮಾತುಗಳೇನು? ‘ಭಾರತ್‌ ತೇರೆ ಟುಕಡೆ ಹೋಂಗೆ, ಇನ್ಶಾ ಅಲ್ಲಾಹ್‌!’ ಜೆಎನ್‌ಯುನಂಥ ಕಾಲೇಜುಗಳಲ್ಲಿ ಬಿಟ್ಟಿ ತಿನ್ನುವವರ ಯೋಗ್ಯತೆಗಳೇ ಹೇಳುತ್ತವಲ್ಲ.

ಪ್ರಶ್ನೆ ಏನೆಂದರೆ, ಒಂದು ಸಮುದಾಯದಲ್ಲಿ ಹುಟ್ಟಿದರು ಎಂಬ ಕಾರಣಕ್ಕೆ ಇವರಿಗೆ ಯೋಜನೆಗಳನ್ನು ನೀಡಬಹುದೇ? ಸಂವಿಧಾನದ ಪ್ರಕಾರ, ಯಾವುದೇ ಯೋಜನೆಗಳನ್ನು ಜನರನ್ನು ಮೇಲೆತ್ತಬಹುದೇ ವಿನಾ, ಅವರಿಗಾಗೇ ವಿಶೇಷ ಯೋಜನೆಗಳನ್ನು ಮಾಡುವಂತಿಲ್ಲ. ನಾವೆಲ್ಲ ಕೊಟ್ಟಿರುವ ತೆರಿಗೆ ಹಣದಲ್ಲಂತೂ ಯಾವುದೇ ಒಂದು ಧರ್ಮಕ್ಕೆ ಬಿಟ್ಟಿ ಕೂಳು ಹಾಕುವಂತೆಯೇ ಇಲ್ಲ. ಇದು ಸಂವಿಧಾನದ ಆರ್ಟಿಕಲ್‌ 14, 15 ಮತ್ತು 27ರ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ನೀರಜ್‌ ಸಕ್ಸೇನಾ ಮತ್ತು ಒಂದೈದು ಜನರು ಈ ಸುಪ್ರೀಂ ಕೋರ್ಟ್‌ನಲ್ಲಿ ಈ ಸಂಬಂಧ ದಾವೆ ಹೂಡಿದ್ದಾರೆ. ಅಲ್ಪಸಂಖ್ಯಾತ ರಾಷ್ಟ್ರೀಯ ಆಯೋಗ ಕಾಯ್ದೆ 1972 ವಿರುದ್ಧ ಸಿಡಿದೆದ್ದಿದ್ದಾರೆ!

ಇಲ್ಲಿ ಸಮಸ್ಯೆ ಏನೆಂದರೆ, ಈ ಯೋಜನೆಗಳನ್ನು ಒಂದು ನಿರ್ದಿಷ್ಟ ಧರ್ಮಕ್ಕೆ ಮಾತ್ರ ಎಂದಿರುವುದು. ‘ಮಾತ್ರ’ ಎಂಬ ಪದವೇ ತಲೆ ಬಿಸಿ ಮಾಡಿರುವುದು. ಮಾತ್ರ ಎಂಬುದರಿಂದ ಆಗುವ ಸಮಸ್ಯೆ ಏನೆಂದರೆ, 1. ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಅವರನ್ನು ಅಲ್ಪಸಂಖ್ಯಾತರು ಎಂದು ಹೇಳುವುದು. 2. ಹಿಂದೂಗಳಿಂದ ಅವರನ್ನು ಪ್ರತ್ಯೇಕಿಸಿ, ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿಗಷ್ಟೇ ಯೋಜನೆ ರೂಪಿಸುವುದು.

ಇಲ್ಲಿ ಬಹುಸಂಖ್ಯಾತ ಹಿಂದೂಗಳೇ ತಮಗೆ ಹೊಟ್ಟೆಗಿಲ್ಲ ಎಂದು ಭಿಕ್ಷೆ ಬೇಡುವ ಸ್ಥಿತಿಗೆ ಬಂದಿರುವಾಗ, ಇನ್ನೊಬ್ಬರನ್ನು ನಮ್ಮ ಹಣದಿಂದ ಉದ್ಧಾರ ಮಾಡುವ ದರ್ದಾದರೂ ಏನಿದೆ ನಮಗೆ? 2019-20ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಈ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗಳಿಗಾಗಿ 4700 ಕೋಟಿ ರು. ಮೀಸಲಿಟ್ಟಿದೆ. ಈ ವಕ್‌ಧಿ ಮತ್ತು ವಕ್‌ಧಿ ಆಸ್ತಿಗಳಿಗೂ ಅನುಕೂಲ ಮಾಡಿಕೊಡುವ ಹಾಗೆ ಯಾಕೆ ಹಿಂದೂಗಳ ಟ್ರಸ್ಟ್‌, ಮಠಗಳಿಗೂ ಅನುಕೂಲ ಮಾಡಿಕೊಡಬಾರದು? ಎಷ್ಟೋ ದೇವಸ್ಥಾನಗಳು ದೇಣಿಗೆಯಿಲ್ಲದೇ ಮುಚ್ಚಿಹೋಗುತ್ತಿವೆ. ಪೂಜೆ ನಿಲ್ಲುತ್ತಿದೆ. ಎಷ್ಟು ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲಾಗಿದೆ? ಕಲೆಕ್ಷನ್‌ ಜಾಸ್ತಿ ಇರುವ ದೇವಸ್ಥಾನಕ್ಕೆ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದು ಎಂದು ಬೋರ್ಡ್‌ ನೇತು ಹಾಕುವ ಬದಲು ಇನ್ನೇನು ಮಾಡಿದ್ದೀರ? ಹೋಗಲಿ ಬೋರ್ಡ್‌ ಇರುವ ದೇವಸ್ಥಾನವನ್ನಾದರೂ ಎಷ್ಟು ಉದ್ಧಾರ ಮಾಡಿದ್ದೀರ? ನಮ್ಮದೇ ತೊಳೆಯುವುವದಕ್ಕೆ ಬಿದ್ದಿರುವಾಗ, ನಮ್ಮ ಹುಂಡಿಯಿಂದ ವಕ್‌ಧಿಗೆ ಕೊಡುವುದೇಕೆ?

ಈ ಬಿಟ್ಟಿ ಯೋಜನೆಗಳಲ್ಲಿ ಇನ್ನೊಂದು ಬಹುಮುಖ್ಯ ಸಮಸ್ಯೆ ಏನೆಂದರೆ, ಅಲ್ಪಸಂಖ್ಯಾತರ ಆರ್ಥಿಕತೆಯ ಬಗ್ಗೆ ವಿಚಾರಿಸದೇ ಎಷ್ಟೋ ಯೋಜನೆಗಳನ್ನು ಅನ್ವಯ ಮಾಡಿದ್ದು, ಹಿಂದೂಗಳು ಬಡವರಾಗಿದ್ದರೂ ಅವರಿಗೆ ಇಂಥ ಯೋಜನೆಗಳು ಅನ್ವಯವೇ ಆಗುವುದಿಲ್ಲ ಎಂಬಂತಾಗಿದೆ. ಯಾವ ಕಾರಣಕ್ಕೆ?

ಒಂದು ವಿಚಾರ ಗಮನ ಹರಿಸಿ, ಧರ್ಮಾತೀತವಾಗಿ ಜನರು ತೆರಿಗೆ ಕಟ್ಟುವುದು ಭಾರತೀಯರ ಸಮಗ್ರ ಅಭಿವೃದ್ಧಿಗೆ. ಆದರೆ, ಸರ್ಕಾರ ಇಲ್ಲಿ, ತೆರಿಗೆ ಕಟ್ಟಿಸಿಕೊಳ್ಳುವಾಗ ಯಾವುದೇ ತಾರತಮ್ಯ ಮಾಡದೇ ಇರುವುದು ಜವಾಬ್ದಾರಿ ಹಾಗೂ ಕರ್ತವ್ಯ. ಆದರೆ ಅದೇ ಹಣದ ಬಳಕೆಯಲ್ಲಿ ಬಹುಸಂಖ್ಯಾತರಾದ ಹಿಂದೂಗಳನ್ನು ಕಡೆಗಣಿಸಿ, ಒಂದು ಸಮುದಾಯದ ಅಭಿವೃದ್ಧಿಗೆ ಭಾರಿ ಮೊತ್ತವನ್ನು ಮೀಸಲಿಡುವುದಿದೆಯಲ್ಲ, ಅದು ಖಂಡನಾರ್ಹ ಎಂಬುದು ಸುಪ್ರೀಂಕೋರ್ಟ್‌ ಮುಂದೆ ಅರ್ಜಿ ಸಲ್ಲಿಸಿರುವ ಹಿಂದೂಗಳ ವಾದ.

ಮತ್ತಿನ್ನೇನು? ನಮ್ಮ ಹಣದಲ್ಲಿ ನಮ್ಮನ್ನು ಬಿಟ್ಟು ಇನ್ಯಾರನ್ನೋ ಉದ್ಧಾರ ಮಾಡುತ್ತಿರುವುದನ್ನು ಇಷ್ಟು ವರ್ಷವಾದರೂ ನಾವು ಹೇಗೆ ಸಹಿಸಿಕೊಂಡು ಬಂದ್ವಿ ಎಂಬುದೇ ಅರ್ಥವಾಗುತ್ತಿಲ್ಲ. ಕಾಂಗ್ರೆಸ್‌ಗೇನೋ ಮುಸ್ಲಿಮರ ಅಥವಾ ಇನ್ಯಾವುದೋ ಅಲ್ಪಸಂಖ್ಯಾತರ ಮತಗಳನ್ನು ಗಳಿಸುವ ಇರಾದೆಯಿತ್ತು. ಅವರನ್ನು ಓಲೈಸುವುದಕ್ಕೆ ಏನೋ ಮಾಡಿದರು. ಆದರೆ ಅದೇ ಓಲೈಕೆ ದಶಕಗಳಿಂದಲೂ ನಡೆದುಕೊಂಡು ಬಂದರೆ, ನಮ್ಮ ಹಿಂದೂಗಳು ಭಿಕ್ಷೆ ಎತ್ತುವುದಕ್ಕೆ ಹೋಗಬೇಕೇ?

ಅದೆಲ್ಲ ಬಿಡಿ, ಹಿಂದೂಗಳು ಎಂದ ಮಾತ್ರಕ್ಕೆ ಅವರಿಗೆ ಸವಲತ್ತುಗಳನ್ನೇ ಕೊಡದೇ ದೂರ ಇಡುವುದನ್ನು ಯಾವ ಸಂವಿಧಾನ ಒಪ್ಪುತ್ತದೆ?

ಸಂವಿಧಾನದ ಆರ್ಟಿಕಲ್‌ 25-30ರವರೆಗೆ ಅಲ್ಪಸಂಖ್ಯಾತರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದೆಯೇ ವಿನಾ, ಅವರಿಗಾಗೇ ವಿಶೇಷ ಯೋಜನೆಗಳನ್ನು ಕೊಡಬೇಕು ಎಂದು ಎಲ್ಲೂ ಇಲ್ಲ. ಅದನ್ನು ಸಂವಿಧಾನ ಎಂದಿಗೂ ಒಪ್ಪುವುದಿಲ್ಲ. ಸಂವಿಧಾನದ ಆರ್ಟಿಕಲ್‌ 30ರಲ್ಲಿ ಅಲ್ಪಸಂಖ್ಯಾತರು ಎಂದಿದೆ ಎಂಬ ಒಂದೇ ಒಂದು ಅಂಶವನ್ನು ಇಟ್ಟುಕೊಂಡು, ರಾಜಕೀಯ ಕಾರಣಗಳಿಗೆ ಒಂದು ಸಮುದಾಯ, ಆರ್ಥಿಕವಾಗಿ ಹಿಂದುಳಿಯದೇ ಇದ್ದರೂ ಅಂಥವರಿಗೆ ಆರ್ಥಿಕ ಸಹಾಯ ನೀಡುವ ಯೋಜನೆಗಳಿಂದ ದೇಶಕ್ಕೆ ಆಗುವ ಲಾಭವಾದರೂ ಏನು ಸ್ವಾಮಿ? ಈಗ ಪಾಕಿಸ್ಥಾನಕ್ಕೆ ಜಿಂದಾಬಾದ್‌ ಹೇಳುತ್ತಿರುವವರು ನಮ್ಮ ಹಣದಿಂದ ಕೊಬ್ಬುತ್ತಿರುವವರೇ ಅಲ್ಲವೇ?

ಇನ್ನು ಸರ್ಕಾರವು ವಿವಿಧ ರಾಜ್ಯಗಳಲ್ಲಿನ ಪೂರ್ವನಿರ್ಧಾರಿತ 6 ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳನ್ನು ನೀಡಲು ನಿರ್ದೇಶನ ನೀಡಿದೆ. ವಿದ್ಯಾರ್ಥಿಗಳು ಆ ಆರು ಅಲ್ಪಸಂಖ್ಯಾತ ಸಮುದಾಯದಲ್ಲಿ ಹುಟ್ಟಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಸ್ಕಾಲರ್‌ಶಿಪ್‌ಗೆ ಅರ್ಹರು ಎಂದಾದರೆ, ಬೇರೆ ಸಮುದಾಯದಲ್ಲಿ ಹುಟ್ಟಿದ್ದು ಅವರ ವಿದ್ಯಾರ್ಥಿಗಳ ತಪ್ಪಾ?

ಒಬ್ಬ ಬಡ ಬ್ರಾಹ್ಮಣ ವಿದ್ಯಾರ್ಥಿಗೆ ಆತ ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ್ದಕ್ಕೆ ಸ್ಕಾಲರ್‌ಶಿಪ್‌ ಸಿಗುವುದಿಲ್ಲ ಎಂದರೆ, ಸಮಾನತೆ ಎಂಬುದಿರುವುದು ಸುಡುವುದಕ್ಕಾ? ಸಂವಿಧಾನ ಇಂಥದ್ದನ್ನು ಯಾವತ್ತೂ ಒಪ್ಪಿಯೇ ಇಲ್ಲ. ಹೀಗಿರುವಾಗ, ಅಲ್ಪಸಂಖ್ಯಾತರಿಗಷ್ಟೇ ವಿಶೇಷ ಸವಲತ್ತೇಕೆ? ತೀರ ಕಿತ್ತುಕೊಂಡು ತಿನ್ನುವ ಬಡತನವು, ಯೋಜನೆ ಪಡೆಯುವುದಕ್ಕೆ ಅರ್ಹವಾಗಲಾರದು ಎಂದರೆ, ಅಂಥ ಯೋಜನೆಗಳು ಯಾಕಾಗಿ, ಯಾರಿಗಾಗಿ?

ಯಾಕೆ ನಮ್ಮನ್ನು ಉದ್ಧಾರ ಮಾಡುವುದಕ್ಕೆ ಹಣವಿಲ್ಲವಾ? ಬಹುಸಂಖ್ಯಾತರಿಗೂ ಯೋಜನೆಗಳನ್ನು ಕೊಡುತ್ತಾ ಹೋದರೆ ಖಜಾನೆಯಲ್ಲಿರುವ ಹಣ ಖಾಲಿ ಆಗಿಬಿಡುತ್ತದೆ ಎಂಬ ಭಯವೇ? ಹಾಗಾದರೆ, ಗಾಂಧೀಜಿಯವರ ಒಂದು ವಾಕ್ಯ ನೆನಪಿಟ್ಟುಕೊಳ್ಳಿ, world has enough for everyone’s needs, but not everyone’s greed ಅಂದರೆ, ಜನರ ಅವಶ್ಯಕತೆಗೆ ಎಷ್ಟು ಬೇಕೋ ಅಷ್ಟು ಪ್ರಪಂಚದಲ್ಲಿದೆ. ಆದರೆ, ಆಡಂಬರಕ್ಕೆ ಇಲ್ಲ ಎಂಬ ಮಾತು ಇಲ್ಲಿ ಅನುಸಂಧೇಯ.

ಇಂಥ ಒಂದು ಸಮುದಾಯವನ್ನು ಮಾತ್ರ ಎತ್ತಿಹಿಡಿಯುವುದರಿಂದ, ಸಮಾಜದಲ್ಲಿ ಮತ್ತೆ ಅಸಮತೋಲನವೇ ತಾಂಡವವಾಡುತ್ತದೆ. ಜನರು ಒಬ್ಬರನ್ನು ಕಂಡರೆ ಮತ್ತೊಬ್ಬರು ಅಸೂಯೆಪಟ್ಟುಕೊಳ್ಳುವಂತಾಗುತ್ತದೆ. ಓಹ್‌ ಇದನ್ನು ನಾನು ಹೇಳಿದ್ದರೆ ಕೋಮುವಾದವಾಗುತ್ತಿತ್ತು. ಆದರೆ, Bal Patil v/s Union of India ಪ್ರಕರಣದಲ್ಲಿ ‘ಇಂಥ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕೋರುವ ಅಭ್ಯಾಸ ಏನಿದೆ, ಅಂಥ ಪ್ರವೃತ್ತಿಯಿಂದ ಭಾರತದ ಸಾರ್ವಭೌಮತ್ವ, ಸಮಗ್ರತೆ, ಏಕತೆಗೆ ಧಕ್ಕೆಯುಂಟಾಗಿ ಪ್ರತ್ಯೇಕತಾಭಾವ ಹುಟ್ಟಬಹುದು’ ಎಂದು ಸ್ವತಃ ಸುಪ್ರೀಂ ಕೋರ್ಟ್‌ ಎಚ್ಚರಿಸಿತ್ತು. ಈಗ ಇದು ಎರಡನೇ ಬಾರಿಗೆ ಸುಪ್ರೀಂಕೋರ್ಟ್‌ ಗುಡುಗುತ್ತಿರುವುದು. ಈಗ ಅಲ್ಪಸಂಖ್ಯಾತರಿಗೆ ಮಾತ್ರ ಎಂಬ ಯೋಜನೆಗಳು ಎಂಬುದರ ವಿರುದ್ಧ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.

ಬಹಳ ಖೇದಕರ ಸಂಗತಿ ಯಾವುದು ಗೊತ್ತಾ? ಯುಪಿಎಸ್‌ಸಿ, ಎಸ್‌ಎಸ್‌ಸಿ ಎಂಬ ನಾಗರಿಕ ಸೇವಾ ಪರೀಕ್ಷೆಗಳ ಮೊದಲ ಹಂತ ಪಾಸ್‌ ಮಾಡಿದವರಿಗೆ ಆರ್ಥಿಕ ನೆರವು ಸರ್ಕಾರ ನೀಡಿದೆ. 2019-20ರ ಬಜೆಟ್‌ನ ಪ್ಯಾರಾ ನಂಬರ್‌ 6.7ರಲ್ಲಿ ಹೀಗೆ ಮಾಡುವ ಉದ್ದೇಶವೇನು ಎಂದು ಹೇಳುವಾಗ, ‘ಸಿವಿಲ್‌ ಸಿರ್ವಿಸಸ್‌ನಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಹೆಚ್ಚಿರಲಿ’ ಎಂಬ ಕಾರಣಕ್ಕೆ ಎಂದು ಹೇಳಿದೆ! ಪದೇಪದೆ ಅಲ್ಪಸಂಖ್ಯಾತರನ್ನು ಎಳೆದೆಳೆದು ತರುವ ಇರಾದೆ ಸರ್ಕಾರಕ್ಕೇಕೆ ಸ್ವಾಮಿ? ಆರ್ಥಿಕವಾಗಿ ಹಿಂದುಳಿದವರಿಗೆ ಇಂಥ ಸೌಲಭ್ಯ ಎಂದರೆ ಎಷ್ಟೋ ಖುಷಿಯಾಗುತ್ತಿತ್ತು. ಇವತ್ತಿಗೂ, ದಿಲ್ಲಿಗೆ ಹೋಗಿ, ವಾರನ್ನ ಮಾಡಿಕೊಂಡು, ಮನೆ ಮಠ ಮಾರಿ 2 ಲಕ್ಷ ರು.ಗಳನ್ನು ಕೊಟ್ಟು ಐಎಎಸ್‌ ಕೋಚಿಂಗ್‌ ಹೋಗುವವರೂ ಇದ್ದಾರೆ. ಅವರಲ್ಲಿ ನಿಜವಾದ ಟ್ಯಾಲೆಂಟ್‌ ಹುಡುಕಿ ನೆರವು ನೀಡಿದರೆ ಯಾರು ಬೇಡ ಅಂತಿದ್ರು? ಹೀಗೆ ಯಾರಾರ‍ಯರಿಗೋ ನೆರವು ನೀಡುವುದು ತೆವಲೇ ಅಲ್ಲವಾ?

ಇಂಥ ದಡ್ಡತನ ಮಾಡುವುದಕ್ಕೇ ಅಲ್ಲವೇ ದೇಶವಿರೋಧಿ ಐಪಿಎಸ್‌, ಐಎಎಸ್‌ ಅಧಿಕಾರಿಗಳು ಹುಟ್ಟಿಕೊಳ್ಳುತ್ತಿರುವುದು? ಕಾಶ್ಮೀರಿ ಐಎಎಸ್‌ ಅಧಿಕಾರಿ ಶಾ ಫೈಸಲ್‌ ನೆನಪಿದೆಯಾ? ಆತ 2019ರ ಜನವರಿ 9ಕ್ಕೆ ರಾಜೀನಾಮೆ ನೀಡಿದ್ದ. ಜಮ್ಮು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಹತ್ಯೆಗಳಾಗುತ್ತಿವೆ ಎಂಬ ಕಾರಣ ಕೊಟ್ಟು, ನಂತರ ಆತ ಮಾತಾಡಿದ್ದೆಲ್ಲವೂ ಪ್ರತ್ಯೇಕತೆಯ ಬಗ್ಗೆ! ಅದೂ ಪಕ್ಕಾ ರಾಜಕಾರಣಿಯ ಹಾಗೆ. ಮುಂಬೈನ ಐಜಿ ಅಬ್ದುರ್‌ ರಹಮಾನ್‌ ಎಂಬ ಐಪಿಎಸ್‌ ಅಧಿಕಾರಿ ಯಾವತ್ತೋ ರಾಜೀನಾಮೆ ಕೊಟ್ಟು ಸಿಎಎ ಮೇಲೆ ಎತ್ತಿಹಾಕಿ ಅದಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದ. ಇಂಥ ಕ್ರಿಮಿಗಳನ್ನು ಓದಿಸಿದ್ದು ನಾವು ನಮ್ಮ ಕುಟುಂಬಕ್ಕೆಂದು ದುಡಿದ ಹಣದಲ್ಲೇ ಅಲ್ಲವೇ? ಬಿಟ್ಟಿ ದುಡ್ಡಲ್ಲಿ ಓದುವವರಿಗೆ ಸಿಎಎ ಎಂದರೆ ಏನೆಂದು ಗೊತ್ತಿರುವುದಕ್ಕೆ ಹೇಗೆ ಸಾಧ್ಯ?

ಇನ್ನೆಷ್ಟು ವರ್ಷ ಇಂಥವರನ್ನು ಸಾಕೋದು ಸ್ವಾಮಿ? ಹಿಂದೂಗಳು ಬೀದಿಗೆ ಬೀಳುವವರೆಗೂನಾ? ಅಥವಾ ದೇಶದಲ್ಲಿ ಪ್ರಜಾಪ್ರಭುತ್ವ ಹೋಗಿ, ವಿಗ್ರಹಾರಾಧನೆ ನಿಂತು ಹೋಗುವವರೆಗೂನಾ? ಉದ್ಧಾರ ಮಾಡುವುದಾದರೆ, ಬಹುಸಂಖ್ಯಾತರನ್ನೂ ಉದ್ಧಾರ ಮಾಡಿ. ಅದನ್ನು ಬಿಟ್ಟು ಅಲ್ಪಸಂಖ್ಯಾತರಿಗೆ ‘ಮಾತ್ರ’ ಎಂಬ ಯೋಜನೆಗಳನ್ನು ಕೊಟ್ಟರೆ, ‘ಕಾಪಾಡಪ್ಪ’ ಎಂದು ಬೇಡಿಕೊಳ್ಳಲೂ ವಿಗ್ರಹಗಳಿಲ್ಲದೇ ಹೋದೀತು.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya