ನೋಡಿ, ಇವರೇ ನೆಹರೂ ಹಾಕಿದ ಬಿಸ್ಕತ್ತು ತಿಂದವರ ಮಕ್ಕಳು!

 

ರಾಮಭಕ್ತ ಗೋಪಾಲ್‌ ಎಂಬ 17 ವರ್ಷದ ಹುಡುಗ ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಗನ್‌ ತೆಗೆದುಕೊಂಡು ರಸ್ತೆಯಲ್ಲಿ ಕೂಗಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ 30.01.2020ರಂದು ನಡೆಯಿತು. ಇದಾಗಿದ್ದೇ ತಡ, ಎಲ್ಲರೂ ಬಹಳ ರೊಚ್ಚಿಗೆದ್ದು ಆ ಹುಡುಗನ ಫೋಟೊ ಹಾಕಿ ಗೋಡ್ಸೆ ಮತ್ತೆ ಬಂದ, ಇದು ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆ ಎಂದರೆ ಪೋಸ್ಟ್‌ ಹಾಕುವುದಕ್ಕೆ ಶುರು ಮಾಡಿದರು.

ಪ್ರಶ್ನೆ ಏಳುವುದು ಯಾಕಾಗಿ ಇವರೆಲ್ಲ ಈ ಹುಡುಗನ ವಿಷಯ ಇಟ್ಟುಕೊಂಡು ರಬ್ಬರ್‌ಬ್ಯಾಂಡಿನ ಹಾಗೆ ಎಳೆಯುತ್ತಿದ್ದಾರೆ? ಇದರ ಉದ್ದೇಶವೇನು? ಯಾರು ಹೀಗೆ ಪದೇಪದೆ ಹಿಂದೂಗಳನ್ನು ಎಳೆದು ತರುತ್ತಿರುವುದು? ಇಂಥ ಕೆಲಸಕ್ಕೆ ಯಾರು ಹಣ ಕೊಡುತ್ತಾರೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಂಡರೆ, ಇವತ್ತಿನಿಂದ ಮುಂದೆ ನಡೆಯುವ ಎಲ್ಲ ಡ್ರಾಮಾಗಳಿಗೂ ಇದನ್ನು ಹೋಲಿಕೆ ಮಾಡಿಕೊಳ್ಳಬಹುದು.

ಇವರೇ ಎಡಪಂಥೀಯರು! ಅಲ್ಲಲ್ಲ, ನೆಹರೂ ಹಾಕಿದ ಬಿಸ್ಕರ್‌ ತಿಂದವರು ಮತ್ತವರ ಮಕ್ಕಳು!

ಸತತ 40 ದಿನಗಳಿಂದಲೂ ದೇಶದೆಲ್ಲೆಡೆ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಲೇ ಇದೆ. ದಿನಕ್ಕೆ 1500ರು. ಹಣ ಮತ್ತು ಬಿರಿಯಾನಿಯಿಂದ ನಡೆಯುತ್ತಿರುವ ಎಷ್ಟೋ ಪ್ರತಿಭಟನೆಗಳಲ್ಲಿ ಶಹೀನ್‌ ಬಾಗ್‌ ಪ್ರತಿಭಟನೆಯೂ ಒಂದು. ಕೆಲವೆಡೆ ಶಾಂತಿಯುತ ಧರ್ಮದ ಮಂದಿ ಗನ್‌ ಎಳೆದು ತೋರಿಸಿದ್ದಾರೆ, ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ ಮತ್ತು ಇದೇ ಜಾಮಿಯಾದಲ್ಲಿ ಮೊಹಮ್ಮದ್‌ ಇಲಿಯಾಸ್‌ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈಗ ಟೈರಿಗೆ ಬೆಂಕಿ ಕೊಟ್ಟು ಪೊಲೀಸರ ಮೇಲೆ ಎಸೆಯುತ್ತಿದ್ದ ವಿಡಿಯೊ, ಫೋಟೊಗಳು ಸಹ ಇವೆ.

ಇಂಥ ಎಷ್ಟೋ ಪ್ರಕರಣಗಳನ್ನು ಜನರ ಸ್ಮೃತಿಯಿಂದ ಅಳಿಸುವುದು ಹೇಗೆ? ಅಳಿಸುವ ಜವಾಬ್ದಾರಿ ಹೊತ್ತ ಎಡಪಂಥೀಯರಿಗೆ ಸಿಕ್ಕಿದ್ದೇ ರಾಮಭಕ್ತ ಗೋಪಾಲ! ಅದೆಲ್ಲ ಬಿಡಿ, ಎಡಪಂಥೀಯರು ಎಂದರೆ ಯಾರು? ಅವರು ಹೀಗೆಲ್ಲ ಯಾಕೆ ಮಾಡ್ತಾರೆ ಎಂದು ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುವ ಎಂಜಿನಿಯರ್‌ ಗೆಳತಿಯೊಬ್ಬಳು ಕೇಳಿದ ಪ್ರಶ್ನೆಗೆ ಇಲ್ಲೇ ಉತ್ತರಿಸುತ್ತೇನೆ. ಇವರೇಕೆ ಹೀಗೆ ಎಂದು ನೀವೇ ನಿರ್ಧರಿಸಿ.

ನಮ್ಮ ದೇಶಕ್ಕೆ ದರಿದ್ರ ಬಂದು ವಕ್ಕರಿಸಿದ್ದೇ ನೆಹರೂ ಕಾಲದಲ್ಲಿ. ಎಷ್ಟೋ ದರಿದ್ರಗಳಲ್ಲಿ ಈ ಸುಳ್ಳು ಎಡಪಂಥೀಯರೂ ಒಂದು. ಈಗ ಹೇಗೆ ಎಡಪಂಥೀಯರು ಉದ್ಯೋಗವಿಲ್ಲದೇ ಅಂಡಲೆಯುತ್ತಿದ್ದಾರೋ, ಹಾಗೆ ನೆಹರೂ ಕಾಲದಲ್ಲೂ ಇದ್ದರು. ವಿದೇಶದಲ್ಲಿ ಓದುವಾಗ ಅದೇ ಸಂಸ್ಕೃತಿ ಆಚಾರ ವಿಚಾರ ಕಲಿತುಕೊಂಡು, ಭಾರತ ಸಂಸ್ಕೃತಿ ಮತ್ತು ಆಚಾರಗಳಲ್ಲಿ ಅವರಿಗೆ ಕಂಡು ನ್ಯೂನತೆಗಳಿಗೆ ಎಡಪಂಥದಲ್ಲಿ ಪರಿಹಾರವಿದೆ ಎಂದುಕೊಂಡ ವರ್ಗ ಇದು. ಸ್ವಾತಂತ್ರ್ಯಪೂರ್ವದಲ್ಲಿ ಇದಕ್ಕೆಲ್ಲ ಮಾನ್ಯತೆಯೇ ಇಲ್ಲದಿದ್ದಿದ್ದರಿಂದ ಎಲ್ಲವೂ ಬಾಲ ಮುದುಡಿಕೊಂಡಿದ್ದವು.

ಆದರೆ ದುರಂತ ಏನಾಯಿತೆಂದರೆ, ಸ್ವಾತಂತ್ರ್ಯ ಸಿಕ್ಕ ಮೇಲೆ ಅಧಿಕಾರ ಹಸ್ತಾಂತರ ಮಾಡುವ ಸಂದರ್ಭದಲ್ಲಿ ಇನ್ನೂ ಚುನಾವಣೆಯೆಲ್ಲ ಇಲ್ಲದ ಕಾಲದಲ್ಲಿ, ಪ್ರಧಾನ ಮಂತ್ರಿ ಪಟ್ಟ ಸಹಜವಾಗಿ ಕಾಂಗ್ರೆಸ್‌ನ ಅಧ್ಯಕ್ಷರಿಗೆ ಹೋಗಬೇಕಿತ್ತು. ಆ ಸಮಯದಲ್ಲಿ ಅಧ್ಯಕ್ಷರಾಗಿದ್ದ ಮೌಲಾನಾ ಅಬುಲ್‌ ಕಲಾಂ ಅಝಾದ್‌, ತಾನೇ ಅಧ್ಯಕ್ಷರಾಗಿ ಮುಂದುವರಿಯುತ್ತೇನೆಂದು ಮಹಾತ್ಮಾ ಗಾಂಧಿಯವರಲ್ಲಿ ಕೇಳಿಕೊಂಡರು. ಆಗ ಗಾಂಧಿ ಒಪ್ಪಲಿಲ್ಲ. ಆಗ 15 ಪ್ರಾಂತೀಯ ಸಮಿತಿ ರಚನೆ ಮಾಡಿದರು. ಅದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಂದ ಮತಗಳಲ್ಲಿ ಸರ್ದಾರ್‌ ವಲ್ಲಭಾಯಿ ಪಟೇಲರಿಗೆ 12 ಮತಗಳು ಬಂತು, 3 ಯಾರಿಗೂ ಬೆಂಬಲ ನೀಡಲಿಲ್ಲ. ನೆಹರೂ ಯೋಗ್ಯತೆಗೆ ಒಂದು ಮತವೂ ಬಂದಿಲ್ಲ. ವಲ್ಲಭಾಯಿ ಪಟೇಲರು ಅಧ್ಯಕ್ಷರಾದರು. ಮುಂದೆ ಅವರೇ ಪ್ರಧಾನಿಯಾಗಬಹುದಿತ್ತು. ಆದರೆ, ಹೊಟ್ಟೆಕಿಚ್ಚಿನ ಕೋಳಿಯಂತಿದ್ದ ನೆಹರೂ ಜಟರಾಗ್ನಿಯನ್ನು ತಡೆಯಲಾಗದೇ ಮಕ್ಕಳ ಹಾಗೆ, ಗಾಂಧೀಜಿಯವರಲ್ಲಿ ಅತ್ತು ಕರೆದು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡರು. ಗಾಂಧೀಜಿಯವರ ಒಂದೇ ಒಂದು ಮಾತಿಗೆ ಗೌರವಿಸಿ, ವಲ್ಲಭಾಯಿ ಪಟೇಲ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ನೆಹರೂ ಕೈಗಿಟ್ಟರು.

ಇನ್ನು ಹೇಳುವುದಕ್ಕೇನಿದೆ? ನೆಹರೂವೇ ಪ್ರಧಾನ ಮಂತ್ರಿಯಾದರು. ಅರ್ಥಾತ್‌ ಕಳ್ಳತನದಿಂದ ಅಧಿಕಾರ ಪಡೆದಿದ್ದು. ಇಷ್ಟೇ ಅಲ್ಲದೇ, ಭಾರತದ ವಿಭಜನೆಯ ಕಲ್ಪನೆ ಬ್ರಿಟಿಷರದ್ದಾದರೂ, ಅವರೇ ಶುರು ಮಾಡಿದ್ದರೂ, ಅದಕ್ಕೆ ಬೆಂಬಲ ನೀಡಿದ್ದು ಕಾಂಗ್ರೆಸ್‌. ಇದನ್ನು ವಿರೋಧಿಸಿದ ಏಕೈಕ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ನೆಹರೂ ಕಳ್ಳ ಎಂದು ಜನ ಆಡಿಕೊಂಡರೆ ಮರ್ಯಾದೆ ಹೋಗುತ್ತದಲ್ಲ ಎಂಬುದು ನೆಹರೂ ಚಿಂತನೆ. ಹೀಗಿರುವಾಗ ತನ್ನ ಯೋಗ್ಯತೆ ಮತ್ತು ವಿಭಜನೆಗೆ ಬೆಂಬಲಿಸಿದ ಕಾಂಗ್ರೆಸ್‌ ಯೋಗ್ಯತೆ ಜನರಿಗೆ ತಿಳಿದರೆ ಕಾಂಗ್ರೆಸ್‌ ದೇಶದಲ್ಲಿ ಉಳಿಯುವುದೇ ಇಲ್ಲವೆಂಬ ಖಾತ್ರಿ ಇತ್ತು ನೆಹರೂಗೆ. ಕಾಂಗ್ರೆಸ್‌ಗೆ ದೊಡ್ಡ ಎದುರಾಳಿಯಾಗಿದ್ದದ್ದು ಆರೆಸ್ಸೆಸ್‌ ಎಂಬುದರಲ್ಲಿ ಯಾವುದೇ ಅನುಮಾನ ಇರಲಿಲ್ಲ ಅವರಿಗೆ.

ನಾಯಿಗಳಂತೆ ಕುಳಿತಿದ್ದ ಎಡಪಂಥವನ್ನು ಆರೆಸ್ಸೆಸ್‌ ಮತ್ತು ಭಾರತೀಯ ಸಂಸ್ಕೃತಿಗಳ ವಿರುದ್ಧ ಛೂ ಬಿಟ್ಟಿದ್ದು ಇದೇ ನೆಹರೂ. ಆ ಮೂಲಕ ಆರೆಸ್ಸೆಸ್‌ ನೆಲಕಚ್ಚುತ್ತದೆ, ಸೂರ್ಯಚಂದ್ರರಿರುವವರೆಗೂ ಕಾಂಗ್ರೆಸ್‌ ಭಾರತದಲ್ಲಿರುತ್ತದೆ ಎಂಬುದು ಆಶಯ. ಬಿಸ್ಕತ್ತಿಗೆ ಬಾಯೊಡಿದ್ದ ಬಡಪಂಥೀಯರು ದಾಳಿ ಮಾಡುವುದಕ್ಕೆ ಶುರು ಮಾಡಿದರು.
ಇತಿಹಾಸ ನಿರ್ಮಿಸುವ ಕೆಲಸ ಅಜೆಂರ್‍ಟಾಗಿ ಆಗಬೇಕಿತ್ತು. ಆಗ ಆರ್‌ ಸಿ ಮುಜುಮ್ದಾರ್‌ ಅವರಿಗೆ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ಬರೆಯುವುದಕ್ಕೆ ಗುತ್ತಿಗೆ ಕೊಟ್ಟಿದ್ದಾಯಿತು. ಸ್ವಾತಂತ್ರ್ಯ ಚಳವಳಿ ಶುರುವಾಗಿದ್ದೇ ಕಾಂಗ್ರೆಸ್‌ನಿಂದ ಮತ್ತು ಸ್ವಾತಂತ್ರ್ಯಕ್ಕೆ ಸಹಾಯ ಮಾಡಿದ್ದೇ ಕಾಂಗ್ರೆಸ್‌ ಮತ್ತು ನೆಹರೂ ಕುಟುಂಬ. ಆನಂದ ಭವನದಿಂದಲೇ ಎಲ್ಲವೂ ಶುರುವಾಗಿದ್ದು ಎಂದು ದಾಖಲಾಗಬೇಕೆಂದು ಆಶಿಸಿದ್ದರು ನೆಹರೂ. ಆದರೆ ಪ್ರಾಮಾಣಿಕವಾಗಿ ಇತಿಹಾಸ ಬರೆಯುತ್ತಿದ್ದ ಅವರ ನಡೆ ನೆಹರೂಗೆ ಇಷ್ಟವಾಗಲಿಲ್ಲ. ಅದನ್ನು ಇನ್ನೊಬ್ಬರಿಗೆ ಕೊಟ್ಟು ಬರೆಸಿದರು.

ಇಂದಿರಾ ಗಾಂಧಿಯ ರಾಜಕೀಯದ ಹಾದಿ ಕುಸಿಯುತ್ತಿದ್ದಾಗ ಅವರಿಗೆ ಬೆಂಬಲ ಕೊಟ್ಟು ಮೇಲೆತ್ತಿದ್ದು ಇದೇ ಎಡಪಂಥೀಯರು, ಕಮ್ಯುನಿಸ್ಟರು. ಅವರ ಶಕ್ತಿ ರಾಜಕೀಯವಾಗಿ ಹೆಚ್ಚಾಗಿತ್ತು. ಬಿಸ್ಕತ್‌ ತಿನ್ನುವ ನಾಯಿಗಳು ಮಾಂಸ ಕೇಳಲು ನಿಂತರು. ಎಡಪಂಥೀಯರನ್ನು ಅಧಿಕೃತಗೊಳಿಸಬೇಕೆಂದು ಆಗ್ರಹಿಸಿದರು. ಅಂದರೆ ಸರ್ಕಾರದಲಿ, ಸರ್ಕಾರಿ ಸಂಸ್ಥೆಗಳಲ್ಲಿ ಸ್ಥಾನ ಮಾನಗಳು(ಇಲ್ಲದಿದ್ದರೂ) ಬೇಕೆಂದು ಆಗ್ರಹಿಸಿದರು. ಕೊಡಲೇ ಬೇಕಾಗದ ಅನಿವಾರ್ಯ ಇಂದಿರಮ್ಮಳಿಗೂ ಇತ್ತು. ಅಲ್ಲದೇ, ನೆಹರೂ ಕಳ್ಳತನ ಮಾಡಿದ್ದು, ಪ್ರಾಂಥೀಯ ಸಮಿತಿಯ ಮತಗಳು, ವಲ್ಲಭಾಯಿ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದು ಮುಂದಿನ ತಲೆಮಾರಿಗೆ ತಿಳಿಯಬಾರದೆಂಬುದೂ ಮನಸ್ಸಲ್ಲಿತ್ತಲ್ಲ, ಪಠ್ಯ ಪುಸ್ತಕಗಳನ್ನು ಬದಲಾಯಿಸಬೇಕೆಂಬ ಕಲ್ಪನೆ ಹುಟ್ಟಿದ್ದು ಆಗಲೇ! ಆ ರಾಕ್ಷಸ ಕಲ್ಪನೆಗೆ ಹುಟ್ಟಿದ್ದೇ ಮರಿ ರಾಕ್ಷಸರನ್ನು ತಯಾರಿಸುವ ಜೆಎನ್‌ಯು!

ಜೆಎನ್‌ಯು ಶುರುವಾಗಿ ವರ್ಷವಾಗಿತ್ತಷ್ಟೇ. ಆಗ ಅದರ ಮೊದಲ ಉಪಕುಲಪತಿ ಜಿ. ಪಾರ್ಥಸಾರಥಿ ನೇತೃತ್ವದ ಶೈಕ್ಷಣಿಕ ಪಠ್ಯಕ್ರಮದ ಪರಿಷ್ಕರಣೆಯ ಆಯೋಗವನ್ನು ಇಂದಿರಾಗಾಂಧಿ ಸರ್ಕಾರ ರಚಿಸಿತ್ತು. ಇದು ವಿದ್ಯಾರ್ಥಿಗಳು ಓದುವ ಇತಿಹಾಸ ಪಠ್ಯಪುಸ್ತಕವನ್ನು ತಿರುಚುವುದಕ್ಕೆ ಮಾಡಿದ ಮೊದಲ ಪ್ರಯತ್ನ. ಇದೆಲ್ಲ ನಮಗೆ ಗೊತ್ತಾಗಿತ್ತು ಹೇಗೆಂದರೆ, ಭೈರಪ್ಪನವರೂ ಆಯೋಗದ ಸದಸ್ಯರಾಗಿದ್ದರು. ಇಲ್ಲದಿದ್ದರೆ ಇವೆಲ್ಲ ನಮ್ಮ ಕಿವಿಗೂ ಬೀಳುತ್ತಿರಲಿಲ್ಲ.

ಆಗೇನಾಯಿತು ಎಂದರೆ, ಮುಸ್ಲಿಮರು ದಾಳಿ ಮಾಡಿದ್ದು, ದೇವಸ್ಥಾನ ಧ್ವಂಸ ಮಾಡಿದ್ದು, ಹಿಂದೂಗಳ ಮೇಲೆ ಹಿಂಸಾಚಾರ ನಡೆಸಿದ್ದೆಲ್ಲವೂ ಇತಿಹಾಸದಿಂದ ತೆಗೆಸಿ, ಮುಸ್ಲಿಂ ಅರಸರ ಬಗ್ಗೆ ಸದ್ಭಾವನೆಯ ಸಸಿಯನ್ನು ನೆಡುವ ಬಗ್ಗೆ ಪ್ರಸ್ತಾವನೆ ಬಂತು. ಆದರೆ ಭೈರಪ್ಪನವರು ಹೇಳಿದ್ದೇ ಬೇರೆ. ಒಂದು ಮಗುವಿಗೆ ನೀವು ಈಗ ಕೊಟ್ಟಿರುವುದನ್ನೇ ಸತ್ಯ ಎಂದು ಓದಿಕೊಂಡು ಹೋಗುತ್ತದೆ. ಆದರೆ ಆ ಮಗು ಕಾಶಿ ವಿಶ್ವನಾಥ ಮಂದಿರಕ್ಕೆ ಹೋದಾಗ ನೋಡುವುದೇನು? ಸಹಜವಾಗಿ ಶಿವಲಿಂಗವನ್ನು ನಂದಿ ನೋಡುತ್ತಿರುತ್ತದೆ. ಆದರೆ ಇಲ್ಲ ನಂದಿ ಗ್ಯಾನವಾಪಿ ಮಸೀದಿಯನ್ನು ನೋಡುತ್ತಿರುತ್ತದೆ. ಶಿವಲಿಂಗ ಯಾವುದೇ ಮೂಲೆಯಲ್ಲಿದೆ. ಆಗ ಮಗುವಿನ ಮನಸ್ಸಿನಲ್ಲಿ ಬರುವ ಪ್ರಶ್ನೆಗೆ ಉತ್ತರ ಕೊಡುವುದು ಹೇಗೆ? ಅದಕ್ಕಾಗಿ ನಾವು ಇತಿಹಾಸವನ್ನು ಹೇಗಿದೆಯೋ ಹಾಗೆಯೇ ಹೇಳಿ, ಇದನ್ನೆಲ್ಲ ಮಾಡಿದ್ದು ಔರಂಗಜೇಬ್‌ ಹೌದು. ಆದರೆ, ಇದು ಇತಿಹಾಸವೇ ವಿನಾ ವರ್ತಮಾನ ಅಲ್ಲ ಎಂದು ಮಕ್ಕಳಿಗೆ ಹೇಳಿಕೊಡಬೇಕು. ಇತಿಹಾಸದ ಘಟನೆಗಳಿಗೆ ಈಗಿನ ಮುಸ್ಲಿಮರನ್ನು ಜವಾಬ್ದಾರರನ್ನಾಗಿ ಮಾಡಬಾರದು ಎಂದು ಹೇಳಿಕೊಡಬೇಕು. ಇತಿಹಾಸವನ್ನು ಕಲಿಸುತ್ತಲೇ ಸದ್ಭಾವನೆಯನ್ನು ಪಾಠವನ್ನು ಹೀಗೆ ಕಲಿಸಬೇಕು ಎಂದರು. ಇದರ ಬಗ್ಗೆ ಪ್ರೊ.ಪ್ರೇಮಶೇಖರ್‌ ಅವರು ತಮ್ಮ ಭಾಷಣದಲ್ಲಿ ಬಹಳ ಸವಿಸ್ತಾರವಾಗಿ ವಿವರಿಸಿದ್ದಾರೆ.

ಇಷ್ಟೆಲ್ಲ ಆದಮೇಲೆ ಅವತ್ತಿನ ಸಭೆಯನ್ನು ಪಾರ್ಥಸಾರಥಿ ಮುಗಿಸಿದರು. ಮುಂದಿನ 10 ದಿನಗಳಲ್ಲಿ ಭೈರಪ್ಪನವರಿಗೆ ಒಂದು ಪತ್ರ ಬರುತ್ತದೆ. ಅದರಲ್ಲಿ, ನಿಮ್ಮ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ ಎಂದು ಬರೆದಿತ್ತು. ಅವರ ಸಹೋದ್ಯೋಗಿಯನ್ನು ಆ ಜಾಗಕ್ಕೆ ತುಂಬಿದರು. ಎಡಪಂಥೀಯರು ಹೀಗೆ ಬೆಳೆಯುತ್ತಾ ಬಂದರು. ಎಲ್ಲವನ್ನೂ ಪ್ರಶ್ನಿಸಿ, ಚರ್ಚಿಸಿ ಒಪ್ಪಿಕೊಳ್ಳಿ ಎನ್ನುತ್ತಿದ್ದ ಉದಾರವಾದ, ಎಡಪಂಥ ಇತ್ಯಾದಿಗಳು, ಭಾರತದಲ್ಲಿ ಬದಲಾಗಿತ್ತು. ನಾನು ಹೇಳಿದ್ದೇ ಸತ್ಯ. ನನ್ನನ್ನು ವಿರೋಧಿಸಿದರೆ, ನೀನು ಇರುವುದಿಲ್ಲ ಎಂಬ ಬಲಪ್ರಯೋಗ ಶುರು ಮಾಡಿಕೊಂಡಿತ್ತು. ಇಂಥ ಅಯೋಗ್ಯರನ್ನು ಸಹಿಸಿಕೊಳ್ಳುವ ಹಿಂದೂಗಳು ಕೊಮುವಾದಿಗಳಾದರು, ತಮ್ಮದಲ್ಲದ ನಿಲುವನ್ನು ಹೊಂದಿರುವ ಯಾರನ್ನೂ ಒಪ್ಪಿಕೊಳ್ಳದ ಬುದ್ಧಿಜೀವಿಗಳು ಸಹಿಷ್ಣುಗಳು, ಉದಾರವಾದಿಗಳು, ಜಾತ್ಯತೀತವಾದಿಗಳು ಎನಿಸಿಕೊಂಡರು. ಎಂಥ ಜೋಕ್‌ ಅಲ್ಲವಾ ಇದು?!

ಇದರಿಂದಲೇ, ಹಿಂದೂಗಳು-ಹಿಂದೂಗಳ ದೇವತೆಗಳು- ಆಚಾರ- ವಿಚಾರ ಎಲ್ಲವನ್ನೂ ವಿರೋಧಿಸುವ ಬಣ ಹುಟ್ಟಿಕೊಂಡಿತ್ತು. ಅವರೆಲ್ಲ ಬೇರೆ ಯಾರೂ ಅಲ್ಲ, ಅದೇ ಜೆಎನ್‌ಯು ಪ್ರೊಫೆಸರ್‌ಗಳ ಮಕ್ಕಳು, ಸ್ನೇಹಿತರು ಇತ್ಯಾದಿಗಳು. ಶಾಲೆ, ಕಾಲೇಜು, ರಂಗಭೂಮಿ, ಇತ್ಯಾದಿ ಕ್ಷೇತ್ರದಲ್ಲಿ ಇಂಥವರನ್ನೇ ತುಂಬುತ್ತಾ ಬಂದರು. ಇವರೆಲ್ಲ ಯಾರು ಎಂದರೆ, ನಮ್ಮ ದೇಶ, ಧರ್ಮ, ಭಾರತೀಯ ಇತಿಹಾಸ ಹೀಗೆ ಎಲ್ಲವನ್ನೂ ವಿರೋಧಿಸುವ ಮಂದಿ.
ಈಗ ನಾವು ಪ್ರಸ್ತುತಕ್ಕೆ ಬರೋಣ. ಯಾವುದೋ ಹುಡುಗ ಗನ್‌ ಎತ್ತಿಕೊಂಡು ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಹೆದರಿಸಿದ. ಅವನು ತನ್ನ ಹೆಸರನ್ನ ರಾಮಭಕ್ತ ಗೋಪಾಲ ಎಂದು ಕೂಗಿದ ಅಂದ ಮಾತ್ರಕ್ಕೇ ಇವರೆಲ್ಲ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಹಿಂದೂ ಉಗ್ರವಾದ ಇದೆ ಎಂದೆಲ್ಲ ಬೊಬ್ಬೆ ಹಾಕುತ್ತಿದ್ದಾರೆ.

ಇಂಥ ಹಾರಾಟ ಚೀರಾಟ ಯಾಕೆ ಎಂದರೆ, ಶಹೀನ್‌ ಬಾಗ್‌ನ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಗನ್‌ ಹೊರ ತೆಗೆದಿದ್ದ ಮೊಹಮ್ಮದ್‌ ಎಂಬ ಹುಡುಗನ ಪ್ರಕರಣವನ್ನು ಮರೆಸುವುದಕ್ಕಾಗಿ. ಆ ಪ್ರತಿಭಟನೆಗೆ ವರದಿ ಮಾಡುವುದಕ್ಕೆ ಹೋದ ಪತ್ರಕರ್ತರ ಮೇಲೆ ದಾಳಿ ಮಾಡಿದ ಪ್ರಕರಣ ಮರೆಸುವುದಕ್ಕಾಗಿ, ಶರ್ಜೀಲ್‌ ಇಮಾಮ್‌ ಎಂಬ ಹುಡುಗ ಅಸ್ಸಾಮ್‌ನ್ನು ಭಾರತದಿಂದ ಬೇರ್ಪಡಿಸುವತ್ತ ಕೆಲಸ ಸಾಗಲಿ ಎಂದ ಪ್ರಕರಣದಲ್ಲಿ ಬಂಧಿತನಾದದ್ದನ್ನು ಮರೆಸುವುದಕ್ಕಾಗಿ, ಜೆಎನ್‌ಯುದಲ್ಲಿ ಎಬಿವಿಪಿಯವರು ದಾಳಿ ಮಾಡಿದ್ದರು ಎಂದು ಪುಕಾರು ಹಬ್ಬಿಸಿದ್ದರೂ, ದಾಳಿ ಮಾಡಿದವರು ಎಡಪಂಥೀಯರು ಎಂಬ ಗೊತ್ತಾದ ಸತ್ಯವನ್ನು ಮರೆಸುವುದಕ್ಕೆ ಮತ್ತು ಎಲ್ಲಕ್ಕಿಂತ ಮೇಲಾಗಿ ಇಸ್ಲಾಮಿಕ್‌ ಉಗ್ರವಾದದ ಕೊಳೆಯನ್ನು ತೊಳೆಯುವುದಕ್ಕಾಗಿ. ಆದರೆ, ಏನೇ ಮಾಡಿದರೂ, ಇಸ್ಲಾಮಿಕ್‌ ಉಗ್ರಗಾಮಿಗಳು ಮನೆಮನೆಯಲ್ಲಿ ಹುಟ್ಟುವವರೆಗೂ ಇಸ್ಲಾಮಿಕ್‌ ಉಗ್ರವಾದ ನಿಲ್ಲುವುದಿಲ್ಲ ಎಂಬುದು ವಾಸ್ತವ.

ಏನ ಕೇನ ಪ್ರಕಾರೇಣ ಇವರಿಗೆ ಬೆಂಬಲ ಕೊಡಬೇಕು, ಕಳಂಕ ಹೋಗಲಾಡಿಸಬೇಕು ಎಂದು ಸೋಗಲಾಡಿಗಳು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಏಕೆಂದರೆ, ನೆಹರೂ ಬಿಸ್ಕತ್‌ ತಿಂದ ತಂದೆ-ತಾಯಂದಿರಿಗೆ ಹುಟ್ಟಿದವರೇ ಇಂದಿನ ಸೋಗಲಾಡಿಗಳು. ಅದರ ಋುಣ ಇನ್ನೂ ಇದೆ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya