ಕುಮಾರಣ್ಣನಂಥವರು ಇರುವವರೆಗೂ ಎಸ್‌ಡಿಪಿಐಗೆ ಸಾವಿಲ್ಲ!

 

ಬೆಂಗಳೂರು ಪೊಲೀಸ್‌ ಕಮಿಷನರ್‌ ಅವರು ಶುಕ್ರವಾರ ಬಿಡುಗಡೆ ಮಾಡಿದ ಸುದ್ದಿ ನಿಜಕ್ಕೂ ಆತಂಕ ಹುಟ್ಟಿಸಿತ್ತು. ಟೌನ್‌ಹಾಲ್‌ನಲ್ಲಿ ಸಿಎಎ ಪರ ಕಾರ್ಯಕ್ರಮ ನಡೆಯುತ್ತಿದ್ದಾಗ, ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಮತ್ತು ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರನ್ನು ಹತ್ಯೆ ಮಾಡಲು ಎಸ್‌ಡಿಪಿಐ ಸ್ಕೆಚ್‌ ಹಾಕಿತ್ತು. ಒಂದೆರಡು ಕಲ್ಲುಗಳನ್ನು ಎಸೆದಾಗಲು ಸಹ ಜನರು ಕದಲಲಿಲ್ಲ. ಆ ಹತಾಶೆಯಲ್ಲಿ ಇನ್ನೊಬ್ಬ ಹುಡುಗನಿಗೆ ಚಾಕು ಹಾಕಿ ಓಡಿದ್ದಾರೆ ಎಂಬುದನ್ನು ಪೊಲೀಸರು 800 ಸಿಸಿಟಿವಿ ಕ್ಯಾಮರಾಗಳನ್ನು ಪರೀಕ್ಷಿಸಿದ ನಂತರ ತಿಳಿದು ಅವರನ್ನೆಲ್ಲ ಬಂಧಿಸಿದ್ದಾರೆ.

 

ಒಬ್ಬ ಸಂಸದನಿಗೆ ಅಥವಾ ಖ್ಯಾತನಾಮರಿಗೆ ಹಿಂದೆ ಮುಂದೆ ಜನರಿರುತ್ತಾರಾದ್ದರಿಂದ ಅವರನ್ನು ಕೊಲ್ಲುವುದು ಅಷ್ಟು ಸುಲಭವಲ್ಲ. ಎಸ್‌ಡಿಪಿಐ ಮುಸ್ಲಿಮರ ಟಾರ್ಗೆಟ್‌ ಮಿಸ್‌ ಆದದ್ದೂ ಇದೇ ಕಾರಣಕ್ಕೆ. ಇದೇ ಸಿಟ್ಟಿಗೆ ಬಲಿಯಾಗಿದ್ದು ಹಿಂದೆ ಮುಂದೆ ಯಾರೂ ಇಲ್ಲದ ಅಮಾಯಕ ಹಿಂದೂವಿನದ್ದು. ಹೀಗೆ ಹಿಂದೆ ಮುಂದೆ ಇಲ್ಲದೇ ಇಸ್ಲಾಮಿಕ್‌ ಮೂಲಭೂತವಾದಕ್ಕೆ ಬಲಿಯಾಗಿದ್ದು ರುದ್ರೇಶ್‌, ಪರೇಶ್‌ ಮೇಸ್ತಾ, ದೀಪಕ್‌, ಪ್ರಶಾಂತ್‌ ಪೂಜಾರಿ… ಹೀಗೆ ಪಟ್ಟಿ ಸಾಗುತ್ತದೆ.

 

ಇಂಥ ಸಾವುಗಳೆಲ್ಲ ಆಗಬಾರದು ಎಂದರೆ ಅದಕ್ಕೆ ಒಂದೇ ಉಪಾಯ, ಎಸ್‌ಡಿಪಿಐ ಮತ್ತು ಪಿಎಫ್‌ಐ ಬ್ಯಾನ್‌ ಆಗಬೇಕು. ದೇಶದ ಯಾವುದೇ ಗಲಭೆಯನ್ನೇ ತೆಗೆದುಕೊಳ್ಳಿ ಅದರಲ್ಲಿ ಎಸ್‌ಡಿಪಿಐ ಅಥವಾ ಪಿಎಫ್‌ಐ ಅಂತೂ ಇರಲೇಬೇಕು ಎಂಬಂತಿದೆ ಅವರ ನೆಟ್ವರ್ಕ್‌. ಇದಕ್ಕೆ ಕಾರಣವೇನೆಂದರೆ, ಸಿಮಿ ಎಂಬ ಉಗ್ರಗಾಮಿ ಸಂಘಟನೆ ಬ್ಯಾನ್‌ ಆದಾಗ ಅಲ್ಲಿದ್ದ ಉಗ್ರಗಾಮಿಗಳೆಲ್ಲ ಸುಮ್ಮನೆ ಈ ಎರಡು ಸಂಘಟನೆಗಳಿಗೆ ಬಂದು ಸೇರಿಕೊಂಡಿದ್ದರು. ಸಿಮಿಯಲ್ಲಿ ಏನು ಮಾಡುತ್ತಿದ್ದರೋ ಅದನ್ನೇ ಇಲ್ಲಿ ಸಮಯ ಬಂದಾಗಷ್ಟೇ ಸಾಧಿಸುತ್ತಿದ್ದರೆ. ಇವರಲ್ಲೂ ಎರಡು ವಿಧ:

 

  1. ಕೇಸ್‌ ಹಾಕುವವರು
  2. ಹಲ್ಲೆ/ಗಲಭೆ/ಕೊಲೆ ಮಾಡುವವರು.

 

ಕೇಸ್‌ ಮಾಡುವವರಿಗೆ ಎದುರಿಗೆ ಬಂದು ಹೋರಾಡುವುದಕ್ಕೆ ಧೈರ್ಯ ಕಡಿಮೆ ಇರುವಂಥವರು. ಆದರೆ, ಹೇರಳವಾದ ಸಮಯವಿದ್ದು ಕೇಸ್‌ ನಡೆಸುತ್ತಾರೆ. ಇವರ ವಿರುದ್ಧ ಅಥವಾ ಅಲ್ಲಾಹುವಿನ ಬಗ್ಗೆ ಕೊಂಚ ಟೀಕೆ ಮಾಡಿದರೂ ಕೇಸ್‌ ಹಾಕಿಕೊಂಡು ಸುಮ್ಮನೆ ಕೂರುತ್ತಾರೆ. ಇವರಿಗೆಲ್ಲ ಮಸೀದಿ ಸಂಘಟನೆಗಳೇ ಹಣ ಕೊಡುತ್ತವೆ. ಹೆಸರು ಮಾತ್ರ ಇವರದ್ದಷ್ಟೇ.

 

  1. ಹಲ್ಲೆ ಮಾಡುವ ಮಂದಿ ಬರುವುದೇ ಗಲಭೆ, ಪ್ರತಿಭಟನೆಗಳ ಸಂದರ್ಭದಲ್ಲಿ. ಮತ್ತೆ ಗಲಭೆಯಾದ ಮೇಲೂ ಎಲ್ಲಿದ್ದಾರೆಂದೇ ತಿಳಿಯದಂತೆ ಮಾಯವಾಗುತ್ತಾರೆ. ಇಂಥವರೇ ಸಿಎಎ ಪ್ರತಿಭಟನೆಗಳಲ್ಲಿ ಬಂದವರು. ಇವರೇ ತೇಜಸ್ವಿ, ಸೂಲಿಬೆಲೆ ಹತ್ಯೆಗೆ ಸ್ಕೆಚ್‌ ಹಾಕಿದ್ದು.

 

ಇಷ್ಟೇ ಅಲ್ಲ, ದೇಶಾದ್ಯಂತ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳು ಸಿಎಎ ಮತ್ತು ಎನ್‌ಆರ್‌ಸಿ ವಿಷಯದಲ್ಲಿ ಅಮಾಯಕ ಮುಸ್ಲಿಮರ ದಾರಿ ತಪ್ಪಿಸುವುದಕ್ಕೂ ಪ್ರಯತ್ನಿಸಿತ್ತು. ಇದರಿಂದ ಇನ್ನಷ್ಟು ಅಮಾಯಕರನ್ನು ಅನ್ಯಥಾ ಕೆರಳಿಸಿ ಸಮಾಜದಲ್ಲಿ ಶಾಂತಿ ಹಾಳು ಮಾಡುವುದು ಮೂಲ ಉದ್ದೇಶ. ಬಿದ್ರೆ ಅವರ ಹೆಣ ಬೀಳಲಿ ಅಂತಲೂ ಇರುತ್ತೆ.

ಇದೇ ಸಿಎಎ ಹೋರಾಟದಲ್ಲಿ ಮಂಗಳೂರು ಮತ್ತು ಮೀರಟ್‌ನಲ್ಲೂ ಎಸ್‌ಡಿಪಿಐನವರನ್ನು ಬಂಧಿಸಲಾಗಿದೆ. ಮಂಗಳೂರು ಪೊಲೀಸರು ಸೊಂಟದಲ್ಲಿದ್ದ ಗನ್‌ ತೆಗೆದಿದ್ದ ಕಾರಣ ಇಲ್ಲೆಲ್ಲ ಎಸ್‌ಡಿಪಿಐನವರು ಬಾಲ ಬಿಚ್ಚಲಿಲ್ಲ. ಆದರೆ, ಮೀರತ್‌ನಲ್ಲಿ ಪಾಂಪ್ಲೆಟ್‌ ಹಂಚಿ ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ಬಗ್ಗೆ ಸುಳ್ಳು ಸುದ್ದಿಗಳನ್ನು ಹಂಚುತ್ತಿದ್ದವರು ಇದೇ ಎಸ್‌ಡಿಪಿಐನವರು ಎಂಬುದನ್ನು ಮಾತ್ರ ಮರೆಯುವಂತಿಲ್ಲ.

ಅಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಇಂಥ ಪಾಂಪ್ಲೆಟ್‌ಗಳನ್ನು ಹಂಚಲಾಗುತ್ತಿತ್ತು. ಅದರಲ್ಲಿರುವ ಅಂಶಗಳು ಹೀಗಿವೆ:

 

* ನೀವೇನಾದರೂ ಮುಸ್ಲಿಮ್‌ ಆಗಿದ್ದರೆ ನಿಮ್ಮ ಬ್ಯಾಂಕ್‌ ಅಕೌಂಟ್‌ ಜಪ್ತಿ ಮಾಡಿ ನಿಮ್ಮ ಹಣವನ್ನು ತೆಗೆದುಕೊಳ್ಳಲಾಗುತ್ತದೆ.

* ನೀವೂ ರೋಹಿಂಗ್ಯಾ ಮುಸ್ಲಿಮರ ಹಾಗೆ ಪರದೇಶಿಗಳಾಗುತ್ತೀರಿ.

* ನೀವು ಯಾವುದೇ ಆಸ್ತಿಯನ್ನು ಖರೀದಿ ಮಾಡುವುದಕ್ಕಾಗುವುದಿಲ್ಲ.

* ನಿಮ್ಮನ್ನು ಜೈಲಿನಲ್ಲಿಟ್ಟು ಕೊಲ್ಲಲಾಗುತ್ತದೆ.

* ಮುಸ್ಲಿಮರಿಂದ ವೋಟ್‌ ಮಾಡುವ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತದೆ.

* ಮುಸ್ಲಿಮರಿಗೆ ಸಿಗುತ್ತಿರುವ ಸರ್ಕಾರಿ ಸವಲತ್ತುಗಳನ್ನು ಕಸಿದುಕೊಳ್ಳಲಾಗುತ್ತದೆ.

 

ಅಲ್ಲದೇ ಇವರದ್ದೆಲ್ಲ ಆ ಕ್ಷಣಕ್ಕೆ ಮಾಡುವ ಹೋರಾಟವಲ್ಲ. ಎಲ್ಲವನ್ನೂ ತಿಂಗಳುಗಟ್ಟಲೆ ಮೀಟಿಂಗ್‌ ಕರೆದು ಪ್ಲಾನ್‌ ಮಾಡಿರುತ್ತಾರೆ. ಉದಾಹರಣೆಗೆ ಸಿಎಎ/ಎನ್‌ಆರ್‌ಸಿ ವಿಚಾರವನ್ನೇ ತೆಗೆದುಕೊಂಡರೆ 2019ರ ಸೆಪ್ಟೆಂಬರ್‌, ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ರಾಷ್ಟ್ರಾದ್ಯಂತ ಪಿಎಫ್‌ಐ ಮತ್ತು ಎಸ್‌ಡಿಪಿಐನವರು ಹತ್ತಾರು ಸಲ ಭೇಟಿ ಮಾಡಿ, ಪ್ರತಿಭಟನೆಗಳನ್ನೆಲ್ಲ ಹೇಗೆ ಮಾಡಬೇಕು ಎಂಬಿತ್ಯಾದಿಗಳನ್ನು ಚರ್ಚಿಸಿದ್ದಾರೆ ಎನ್ನುವುದೂ ಬಯಲಾಗಿದೆ.

 

ಇವರು ಪ್ರತಿಯೊಂದು ಹೋರಾಟಕ್ಕೂ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಳ್ಳುತ್ತಾರೆ. ಮೀರತ್‌ ಗಲಭೆಯಲ್ಲೂ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡಿದ್ದರು. ಅದರಲ್ಲಿ ‘ಎಲ್ಲರೂ ಶಾಂತಿಯುತ ಪ್ರತಿಭಟನೆ ಮಾಡೋಣ ಆದರೆ, ನಮ್ಮ ರಕ್ಷಣೆಗಾಗಿ ಆ್ಯಸಿಡ್‌ ಬಾಟಲ್‌ಗಳನ್ನು ತಂದಿಟ್ಟುಕೊಂಡಿರಿ’ ಎಂದಿದ್ದರು. ದಯವಿಟ್ಟು ಹೇಳಿ, ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಯಾವ ವ್ಯಕ್ತಿ ಆ್ಯಸಿಡ್‌ ಬಾಟ್ಲಿಯನ್ನು ಇಟ್ಟುಕೊಂಡು ಹೋಗುತ್ತಾರೆ?

ಇಂಥ ಅಮಾಯಕ ಎಸ್‌ಡಿಪಿಐ ಮತ್ತು ಪಿಎಫ್‌ಐಅನ್ನು ಯಾಕಾಗಿ ಬ್ಯಾನ್‌ ಮಾಡಬಾರದು ಎಂಬುದಕ್ಕೆ ಒಂದೊಳ್ಳೆ ಕಾರಣ ಕೊಡಿ ನೋಡೋಣ?

 

ಎಸ್‌ಡಿಪಿಐ ಮತ್ತು ಪಿಎಫ್‌ಐನವರು ಎಲ್ಲಿರುತ್ತಾರೋ ಅಲ್ಲೆಲ್ಲ ಜಿಹಾದ್‌ ಸಾರಲಾಗುತ್ತದೆ. ಅರ್ಥಾತ್‌ ಅವರ ಮೂಲ ಉದ್ದೇಶವೇ ಇಸ್ಲಾಮೀಕರಣ. ಇದರಿಂದ ಹಿಂದೂಗಳು ಅಥವಾ ಇನ್ಯಾವುದೇ ಧರ್ಮಗಳಿರಲಿ ಅವನ್ನೆಲ್ಲ ಇಸ್ಲಾಮಿಗೆ ಮತಾಂತರ ಮಾಡುವುದೋ ಅಥವಾ ಭಯೋತ್ಪಾದನಾ ಸಂಘಟನೆ ಐಸಿಸ್‌ಗೆ ಸೇರಿಸುವ ಕೆಲಸ ಚಾಲ್ತಿಯಲ್ಲಿರುತ್ತದೆ. ಇದನ್ನು ನಾನು ಹೇಳುತ್ತಿಲ್ಲ, ಐಸಿಸ್‌ ಸಂಘಟನೆಯ ಮುಖ್ಯಸ್ಥನೇ ಇದನ್ನು ಹೇಳುತ್ತಿದ್ದಾನೆ. ಕೇರಳ ಪ್ರಾಂತದ ಐಸಿಸ್‌ ನಾಯಕ ರಶೀದ್‌ ಅಬ್ದುಲ್ಲಾ ಎಂಬ ಉಗ್ರ 2018ರಲ್ಲಿ ತನ್ನ 70ನೇ ಆವೃತ್ತಿಯ ಧ್ವನಿ ಸಂದೇಶದಲ್ಲಿ ‘ಎನ್‌ಡಿಎಫ್‌(ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌) ಮತ್ತು ಪಿಎಫ್‌ಐನವರು ಹುಟ್ಟಿಕೊಂಡಿರುವುದೇ ಮುಸ್ಲಿಂ ಸಮುದಾಯದ ವಿರುದ್ಧ ಇರುವ ಅಥವಾ ಕಾಫಿರರಾದ ಆರೆಸ್ಸೆಸ್‌ ಮತ್ತು ಇನ್ನಿತರ ಸಂಘಟನೆಗಳನ್ನು ಇಲ್ಲವಾಗಿಸುವುದಕ್ಕೆ ಎಂದು ಹೇಳಿದ್ದಾನೆ.

 

ಇಷ್ಟೇ ಅಲ್ಲದೇ ‘ಕೇರಳದ ಎಲ್ಲ ಕಡೆಯೂ ಪಿಎಫ್‌ಐನವರು ಐಸಿಸ್‌ ಬೆಂಬಲಿಗರನ್ನು ಪತ್ತೆಹಚ್ಚಿ ಅವರನ್ನು ಐಸಿಸ್‌ಗೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಕಾಫಿರ್‌ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪವನ್ನು ಮಾಡಿದ್ದಾರೆ’ ಎಂದಿದ್ದಾನೆ.

 

‘ಎಸ್‌ಡಿಪಿಐಗೂ ಮುನ್ನ ಅದೇ ಸಂಘಟನೆ ಎನ್‌ಡಿಎಫ್‌ ಎಂಬ ಹೆಸರಿನಲ್ಲಿತ್ತು. ಎನ್‌ಡಿಎಫ್‌ ಸ್ಥಾಪಕರು ಜಿಹಾದ್‌ ಫಿ ಸಬಿಲಿಲ್ಲಾಹ್‌( ಅಲ್ಲಾಹುವಿನ ಮಾರ್ಗದಲ್ಲಿ ಹೋರಾಟ) ಎಂಬ ಉದ್ದೇಶಕ್ಕಾಗಿ ಶುರು ಮಾಡಿದ್ದರು. ಇದು ಕ್ರಮೇಣ ರಾಜಕೀಯದ ಆಯಾಮವನ್ನು ಪಡೆದುಕೊಳ್ಳುತ್ತಿದ್ದಾಗ ಅಲ್ಲಿಂದ ಹುಟ್ಟಿದ್ದೇ ಎಸ್‌ಡಿಪಿಐ’ ಎಂದು ಅವನೇ ಹೇಳಿದ್ದಾನೆ.

ಈ ರಶೀದ್‌ ಅಬ್ದುಲ್ಲಾ ಎಂಬುವನು ಕಾಸರಗೋಡಿನವನಾಗಿದ್ದು, ಅಫ್ಘಾನಿಸ್ಥಾನದಿಂದ ಕಾರ್ಯನಿರ್ವಹಿಸುತ್ತಾನೆ. ಅಂದರೆ, ಎಸ್‌ಡಿಪಿಐ, ಎನ್‌ಡಿಎಫ್‌ ಮತ್ತು ಪಿಎಫ್‌ಐ ಕೈಗಳು ಕೇವಲ ಇಲ್ಲಿನದ್ದಷ್ಟೇ ಅಲ್ಲ. ಬದಲಿಗೆ ಅಫ್ಘಾನಿಸ್ಥಾನದವರೆಗೂ ಇದೆ ಎಂದರೆ, ನಮಗೆ ಗೊತ್ತಿಲ್ಲದ ಸಂಗತಿಗಳು ಇನ್ನೇನೇನಿರಬಹುದು?

 

ಪಿಎಫ್‌ಐ ಶಕ್ತಿ ಬಂದರೆ ಏನಾಗುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯೇ ಇವತ್ತಿನ ಕೇರಳ. ಆ ರಶೀದ್‌ ಹೇಳಿದಂತೆಯೇ ಕೇರಳದಲ್ಲಿ ಈಗ ಜಿಹಾದಿಗಳ ದರ್ಬಾರು ಅಧಿಕೃತವಾಗಿ ಶುರುವಾಗಿದೆ. ಕ್ರೈಸ್ತರ ಮೇಲೂ ಜಿಹಾದ್‌ ಸಾರಿ, ಅವರನ್ನು ಮತಾಂತರ ಮಾಡುತ್ತಿದ್ದಾರೆ ಎಂದು ಕ್ರಿಶ್ಚಿಯನ್‌ ಪಾದ್ರಿಗಳೇ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ.

ಇತ್ತೀಚೆಗಂತೂ ಒಂದು ಜಾಹೀರಾತು ಪೇಪರ್‌ನಲ್ಲಿ ಪ್ರಕಟವಾಗಿತ್ತು. ಅದು ಶರಿಯಾ ಅಪಾರ್ಟ್‌ಮೆಂಟಿನ ಹಾಡು. ಹೊಸದಾಗಿ ಕೊಚ್ಚಿ ಬಳಿ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಶರಿಯಾ ಕಾನೂನು ಜಾರಿಯಲ್ಲಿರುತ್ತದೆಯಂತೆ, ಅಲ್ಲದೇ ಹಲಾಲ್‌ ಸರ್ಟಿಫೈಡ್‌ ಮನೆಗಳು ಸಹ ಲಭ್ಯವಿದೆ. ಇಷ್ಟೇ ಅಲ್ಲ, ಟಾಯ್ಲೆಟ್‌-ಬಾತ್‌ರೂಮ್‌ಗಳು ಮೆಕ್ಕಾಗೆ ವಿರುದ್ಧ ದಿಕ್ಕಿನಲ್ಲಿ ಕಟ್ಟಲಾಗಿದೆ ಎಂಬೆಲ್ಲ ಆ್ಯಡ್‌ಗಳನ್ನು ನೋಡಿ ಮೊದಲಿಗೆ ದುಬೈನಲ್ಲಿರುವ ಮನೆ ಎಂದುಕೊಂಡೆ. ಆದರೆ, ಇಲ್ಲ! ಇಲ್ಲೇ ಮಂಗಳೂರಿನ ಪಕ್ಕದಲ್ಲಿರುವ ಕೇರಳದ ಪರಿಸ್ಥಿತಿ ಇದು. ಕೆಲ ಜಿರಳೆಗಳಿಗೆ ಯಾವುದಾದರೂ ಹೊಟೇಲಿಗೆ ‘ಬ್ರಾಹ್ಮಿನ್ಸ್‌ ತಟ್ಟೆ ಇಡ್ಲಿ’, ‘ಬ್ರಾಹ್ಮಿನ್ಸ್‌ ಕೆಫೆ ಬಾರ್‌’ ಎಂಬಂಥ ಹೆಸರಿಟ್ಟರೆ, ಜಾತಿಗಳ ಹೆಸರಲ್ಲಿ ಮಾಡುವುದೇಕೆ ಎಂದು ಕೊರ್ರ್‌.. ಎನ್ನುತ್ತಾರೆ. ಆದರೆ ಇಲ್ಲಿ, ವಿಶೇಷ ಕಾನೂನೇ ಜಾರಿಯಲ್ಲಿದೆ. ಇದರ ಬಗ್ಗೆ ಮಾತಾಡುವವರೇ ಇಲ್ಲ.

 

ಟ್ವಿಟರ್‌ನಲ್ಲಿ ಕೇರಳ ಪ್ರವಾಸೋದ್ಯಮದ ಅಧಿಕೃತ ಖಾತೆಯಿಂದಲೇ ಬೀಫ್‌ ಬಿರಿಯಾನಿಯೇ ಕೇರಳದ ಸಂಸ್ಕೃತಿ ಎಂಬಂತೆ, ಸಂಕ್ರಾಂತಿಯ ದಿನದಂದೇ ಉದ್ದೇಶಪೂರ್ವಕವಾಗಿ ಟ್ವೀಟ್‌ ಮಾಡಿದ್ದಾರೆ. ಆದರೆ ಬೇರೆ ಧರ್ಮದವರ ಹಬ್ಬದಲ್ಲಿ ಹಂದಿ ಮಾಂಸದ ಖಾದ್ಯಗಳನ್ನು ಇದುವರೆಗೂ ಹಾಕುವ ಸಾಹಸವನ್ನು ಮಾಡಿಯೇ ಇಲ್ಲ.

ದುರಂತ ಏನು ಗೊತ್ತಾ? ಇಷ್ಟೆಲ್ಲ ಆಗುತ್ತಿದ್ದರೂ, ನಮ್ಮ ಹಿಂದೂಗಳೇ ಇವರಿಗೆಲ್ಲ ಬೆಂಬಲ ನೀಡುತ್ತಿರುವುದು! ಎಸ್‌ಡಿಪಿಐ ಅವರು ಬಂಧನವಾದ ನಂತರ ಇವರ ಬೆನ್ನಿಗೆ ನಿಂತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಅದ್ಯಾರೋ ಸೂಲಿಬೆಲೆ, ಇನ್ನೊಬ್ಬ ಸಂಸದನ ಕೊಡುಗೆ ಏನಿದೆ ಬೆಂಗಳೂರಿಗೆ?’ ಎಂದು ನಾಚಿಕೆಯಿಲ್ಲದೇ ಹೇಳಿದ್ದಾರೆ. ಅಲ್ಲದೇ, ‘ಇದೇ ನೆಪದಲ್ಲಿ ಒಂದು ಸಮುದಾಯದ ಬಗ್ಗೆ ದೂರುವುದು ಬೇಡ’ ಎಂದೂ ಹೇಳಿದ್ದಾರೆ.

 

ನಾಚಿಕೆಯಾಗಲ್ವೇ ಕುಮಾರಸ್ವಾಮಿ ಇಂಥ ಮಾತಾಡುವುದಕ್ಕೆ? ಕೊಡುಗೆ ಕೊಟ್ಟವರು ಮಾತ್ರ ಬದುಕಿರಬೇಕಾ? ಬಾಕಿಯವರು ಬದುಕಿರಬಾರದಾ? ಅದೆಲ್ಲ ಬಿಡಿ, ನಿಮ್ಮ ಕುಟುಂಬ ಕೊಟ್ಟ ಕೊಡುಗೆಯೇನು? ನಿಮ್ಮ ಸಮ್ಮಿಶ್ರ ಸರ್ಕಾರವಿದ್ದಾಗ ‘ಅಯ್ಯಯ್ಯೋ ನನ್‌ ಕಷ್ಟ ಯಾರಿಗ್‌ ಹೇಳ್ಳಿ? ನಾನ್‌ ವಿಷಕಂಠ!’ ಅಂತೆಲ್ಲ ಕಣ್ಣೀರಿಟ್ಟಿದ್ದು ಬಿಟ್ಟರೆ ನಿಮ್ಮ ಸಾಧನೆ ಏನ್ರಿ? ಹಾಗಂತ ನಿಮ್ಮ ಮೇಲೆ ಹಲ್ಲೆಯಾಗಬೇಕು ಅಂತಲ್ಲ. ನೀವು ಬದುಕಿದ್ದರೇ ಜನರಿಗೆ ಯಾರಿಗೆ ಮತ ಹಾಕಬೇಕು ಎಂಬ ನಿರ್ಧಾರಕ್ಕೆ ಬರಲು ಸಾಧ್ಯ.

 

ಆದರೆ, ಯಾರೋ ಆರು ಜನರು ನಿಮ್ಮದೇ ರಾಜಕೀಯ ಕ್ಷೇತ್ರದ ಇಬ್ಬರನ್ನು ಮುಗಿಸುವ ಪ್ರಯತ್ನದಲ್ಲಿ ವಿಫಲವಾಗಿ ಸಾಮಾನ್ಯ ವ್ಯಕ್ತಿಯೊಬ್ಬನಿಗೆ ಚಾಕು ಹಾಕಿದ್ದಾರೆ. ‘ಈ ಸಮಯದಲ್ಲಿ ನಾನು ನಿಮ್ಮ ಜೊತೆಗಿರ್ತೀವಪ್ಪಾ’ ಅಂತ ಒಂದು ಮಾತು ಹೇಳುವುದಕ್ಕೆ ನಿಮ್ಮ ಶಸ್ತ್ರಚಿಕಿತ್ಸೆಗೊಳಗಾದ ಹೃದಯ ಒಪ್ಪಲಿಲ್ಲ ಎಂದರೆ, ಬಾಯಿ ಮುಚ್ಚಿಕೊಂಡಿರಬಹುದಿತ್ತು. ಆದರೆ ಇಂಥ ಸಮಯದಲ್ಲೂ ಹೇಳಿಕೆ ಬೇಕಾ? ಅದು ಬಿಡಿ, ಆ ಹುಡುಗನ ಜಾಗದಲ್ಲಿ ನಿಮ್ಮ ಮಗನೇ ಇದ್ದಿದ್ದರೆ ನಿಮ್ಮ ಹೇಳಿಕೆ ಹೀಗೇ ಇರುತ್ತಿತ್ತೇ? ಒದ್ದು ಒಳಗ್‌ ಹಾಕ್ರಿ ಎನ್ನುತ್ತಿದ್ದಿರಲ್ಲವೇ? ಈಗ ಮಾತ್ರ ಇಂಥ ಹೇಳಿಕೆ ಕೊಡುವುದಕ್ಕೆ ನಾಚಿಕೆ ಯಾಕಾಗಲ್ಲ ಎನ್ನುವುದನ್ನಾದರೂ ಹೇಳಿ? ಸರಿಯಾಗಿ ರಾಜಕೀಯ ಮಾಡಿದ್ರೇ ಒಂದ್‌ ವೋಟ್‌ ಹುಟ್ಟಲ್ಲ, ಹೀಗಿರುವಾಗ ಇಂಥ ಕೆಳಮಟ್ಟದ ರಾಜಕಾರಣದಿಂದಲೇ ನಿಮ್ಮ ಪಕ್ಷದ ಯೋಗ್ಯತೆಗೆ ಒಂದು ಕ್ಷೇತ್ರವನ್ನೂ ಗೆಲ್ಲುವುದಕ್ಕಾಗಲಿಲ್ಲ ಎಂದೆನಿಸುತ್ತಿಲ್ಲವೇ?

 

ಯಾವುದರಲ್ಲಿ ರಾಜಕೀಯ ಮಾಡಬೇಕು ಎಂದು ಗೊತ್ತಿಲ್ಲದೇ ವಿಚಾರ ನಪುಂಸಕರಾಗಿರುವವರಿಂದಲೇ ಅಲ್ಲವೇ ಎಸ್‌ಡಿಪಿಐ ಮತ್ತು ಪಿಎಫ್‌ಐ ಅಂಥ ಸಂಘಟನೆಗಳು ಇಂದು ಭಯೋತ್ಪಾದನೆ ಮಾಡುತ್ತಿರುವುದು?

 

ಆಗಲ್ಲ, ಕುಮಾರಸ್ವಾಮಿಯಂಥ ರಾಜಕಾರಣಿಗಳು, ನಮ್ಮನಿಮ್ಮಂಥ ಹಿಂದೂಗಳು ಎಚ್ಚುತ್ತುಕೊಳ್ಳುವ ಎಸ್‌ಡಿಪಿಐ ಅಥವಾ ಪಿಎಫ್‌ಐ ಸಂಘಟನೆಗಳನ್ನು ಬ್ಯಾನ್‌ ಮಾಡುವುದಕ್ಕಾಗುವುದಿಲ್ಲ! ಜ್ಞಾನೋದಯವಾಗುವವರೆಗೂ ಸಾಯುತ್ತಲೇ ಇರೋಣ!

 

 

 

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya