ಚಾಣಕ್ಯ ವಾಕ್ಯ ಸರಿ – ‘ಕಿಂಚಿತ್‌ ಮಾತ್ರ ಸಂಭಾವನಾ ನಹೀ ಹೈ!’

ಮಹಾಭಾರತದ ಸನ್ನಿವೇಶಗಳು ಕಣ್ಣೆದುರಿಗೇ ಬರುವಂತೆ ಈಗ ನಡೆಯುತ್ತಿದೆ. ಯುದ್ಧಕ್ಕೆಂದು ರಣರಂಗದಲ್ಲಿ ಬಂದು ನಿಂತಿರುವ ಅರ್ಜುನ, ತನ್ನ ಬಂಧುಗಳನ್ನೆಲ್ಲ ನೋಡಿ ಅಯ್ಯೋ ಇಂಥದ್ದನ್ನೆಲ್ಲ ಯಾಕ್‌ ಮಾಡಬೇಕು? ನನ್ನ ಬಂಧಿಗಳನ್ನೆಲ್ಲ ಯಾಕೆ ಕೊಲ್ಲಬೇಕು? ಅದರಿಂದ ಏನು ಪ್ರಯೋಜನ ಎಂದು ಶಸ್ತ್ರಗಳನ್ನು ಕೆಳಗಿಟ್ಟಾಗ ಕೃಷ್ಣ ಕುದ್ದು ಹೋದರೂ ತೋರಿಸಿಕೊಳ್ಳದೇ ಸಮಾಧಾನದಿಂದ ಉತ್ತರಿಸಿದ್ದ.

ಹೀಗೆ ಪ್ರತಿ ಉತ್ತರಕ್ಕೂ ಒಂದೊಂದು ಪ್ರಶ್ನೆ ಕೇಳುತ್ತಿದ್ದ ಅರ್ಜುನನಲ್ಲಿ ಹೇಗಾದರೂ ಮಾಡಿ ಕೃಷ್ಣ ಒಂದು ಚೂರು ಒಪ್ಪಿಕೊಂಡರೂ ಸಾಕು, ಬಿಲ್ಲು ಬಾಣ ಬಿಸಾಕಿ ಮನೆಗೆ ಹೋಗೋಣ ಎಂಬುದೇ ಇತ್ತು. ಇವನ ಬುದ್ಧಿಯನ್ನು ಅರಿತಿದ್ದ ಕೃಷ್ಣ, ಎಲ್ಲ ಸಮಸ್ಯೆಗಳಿಗೂ ಉತ್ತರಿಸಿ, ನೀನು ಯುದ್ಧ ಮಾಡಲೇಬೇಕು ಏಕೆ? ಎಂಬುದನ್ನು ಅರ್ಜುನ ಸೋಲುವವರೆಗೂ, ಸೋತು ಶರಣಾಗುವವರೆಗೂ ಬಿಡಲಿಲ್ಲ. ಅಂದರೆ, ತನಗೆ ಬೇಕು ಎಂದರೆ ಹೇಗಾದರೂ ವಾದ ಮಾಡುತ್ತಾನೆ. ಅದಕ್ಕೆ ಕಾರಣ ಒಂದೇ, ಬಂಧುಗಳ ಮೇಲಿದ್ದ ಅಪಾರವಾದ ಮಮಕಾರ.

ಅದು ದ್ವಾಪರದ ಮಾತು ಬಿಡಿ. ಆದರೆ ಕಲಿಯುಗದಲ್ಲಿ ಏನಾಗಿದೆ? ರೋಹಿಂಗ್ಯಾ ಮುಸ್ಲಿಮರಿರಲಿ, ಪಾಕಿಸ್ಥಾನದ ಮುಸ್ಲಿಮರಿರಲಿ, ಬಾಂಗ್ಲಾದೇಶದ ಮುಸ್ಲಿಮರಿರಲಿ, ಎಲ್ಲರೂ ನಮ್ಮವರು. ಅವರೆಲ್ಲ ಭಾರತಕ್ಕೆ ಬರಬೇಕು ಎನ್ನುವ ನಮ್ಮಲ್ಲಿನ ಕೆಲ ಭಾರತೀಯರು ಹೇಗೆ ಅವರಿಗೆ ಸಂಬಂಧಿಕರಾಗಿ ಹುಟ್ಟಿದರು ಎಂಬುದೇ ತಿಳಿಯುತ್ತಿಲ್ಲ.
ಈ ಪ್ರಶ್ನೆ ಏಕೆ ಬಂತು ಎಂದರೆ, ಪೌರತ್ವ ತಿದ್ದುಪಡಿ ಕಾಯ್ದೆ ತಂದ ಮೇಲೆ ಹೋರಾಟಗಳು ನಡೆಯುತ್ತಲೇ ಇದೆ. ಮೊದಲಿಗೆ ಇದು ಮುಸ್ಲಿಮರ ವಿರೋಧಿ ಎಂದರು. ಇದು ಯಾವಾಗ ಹಾಗಲ್ಲ, ಇದು ಅನ್ವಯ ಆಗುವುದು ಪಾಕ್‌-ಬಾಂಗ್ಲಾ-ಆಘಧಿನ್‌ ಮುಸ್ಲಿಮರಿಗೆ ಮಾತ್ರ ಎಂದು ತಿಳಿಯಿತೋ, ಎನ್‌ಆರ್‌ಸಿ ವಿರುದ್ಧವೂ ಪ್ರತಿಭಟನೆ ಮಾಡ್ತೀವಿ, ಯಾಕಂದ್ರೆ ಅದು ನಿಜವಾಗಿ ಮುಸ್ಲಿಂ ವಿರೋಧಿ ಎಂದರು. ಅದೂ ಹಾಗಲ್ಲಪ್ಪ, ದಾಖಲೆ ತೋರಿಸು ಹೆಸರನ್ನು ನೊಂದಾಯಿಸಿಕೊ ಎಂದಾಗ, ಶ್ರೀಲಂಕಾದವರನ್ನೇಕೆ ತೆಗೆದುಕೊಂಡಿಲ್ಲ ಎಂದು ಕ್ಯಾತೆ ತೆಗೆದರು. ಆಗಲೂ, ಅಲ್ಲಪ್ಪ, ಅದು ಅವರವರ ನಡುವಿನ ಜನಾಂಗೀಯ ಕಲಹ. ಆದರೆ, ಭಾರತ ಒಳಗೆ ಬಿಟ್ಟುಕೊಳ್ಳುವ ಕಾನೂನು ಮಾಡಿರುವುದು ಮೂರು ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ಯಾರಾರ‍ಯರು ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಹಿಂಸಾಚಾರಕ್ಕೆ ಒಳಗಾಗಿದ್ದಾರೋ ಅವರಿಗಷ್ಟೇ ಭಾರತದ ಪೌರತ್ವ ಕೊಡುವುದಕ್ಕೆ ಎಂದಾಗಲೂ ಸಮಾಧಾನವಾಗದೇ ಈಗ ಹೊಸ ವಾದ ತೆಗೆದಿದ್ದಾರೆ. ಇದರ ಬಗ್ಗೆ ಬುದ್ಧಿವಂತರೆನಿಸಿಕೊಂಡವರು, ಮಾಜಿ ಸೈನಿಕರಿಂದ ಯಂಕಣ್ಣ, ಶೀನಣ್ಣರೂ ಬರೆಯುತ್ತಿದ್ದಾರೆ.

ಹೊಸ ಅರ್ಜುನನ ಕಾಯಿಲೆ ಇಷ್ಟೇ: ಈಗ ನೀವು ಭಾರತದಲ್ಲಿ ಮುಸ್ಲಿಮರನ್ನು ಮಾತ್ರ ಬಿಟ್ಟಿದ್ದೀರಲ್ಲ. ಹೀಗೇ ಅಮೆರಿಕ-ಇಂಗ್ಲೆಂಡ್‌ನಲ್ಲೂ ಇರುವ ಅಥವಾ ಪ್ರಪಂಚದ ಬೇರೆ ದೇಶದಲ್ಲಿರುವ ಹಿಂದೂಗಳನ್ನು ಧರ್ಮದ ಆಧಾರದ ಮೇಲೆ ಹೊರ ಹಾಕಿದರೆ ಏನು ಮಾಡ್ತೀರ?

ವಾದ ಮಾಡುವುದಕ್ಕೆ ಕಾನೂನು, ಸಂವಿಧಾನ, ಮಾನವ ಹಕ್ಕು ಎಲ್ಲವೂ ಕೈಕೊಟ್ಟ ಮೇಲೆ ದಡ್ಡಬುದ್ಧಿಜೀವಿಗಳು ಇಂಥದ್ದೇ ವಾದವನ್ನು ತೆಗೆದುಕೊಳ್ಳುತ್ತಾರೆ. ಇದರಲ್ಲೂ ಇವರನ್ನು ಎದುರಿಸಬಹುದು. ಹೇಗೆ? ಅಮೆರಿಕ-ಇಂಗ್ಲೆಂಡ್‌ನಂಥ ದೇಶಗಳಿಗೆ ಒಂದು ಸಮುದಾಯವನ್ನು ಹೊರ ಹಾಕುವ ನೈತಿಕತೆ ಇದೆಯಾ ಎಂಬ ಪ್ರಶ್ನೆಯನ್ನು ಮುಂದಿಡಬೇಕಿದೆ. ಏನೋ ವಾದ ಮಾಡಬೇಕು ಎಂದು ಮಾಡುವಾಗ ಇಂಥದ್ದನ್ನೆಲ್ಲ ಮರೆಯುತ್ತಾರೆ. ಹಿಂದೂಗಳನ್ನೋ ಅಥವಾ ಇನ್ಯಾವುದೇ ಸಮುದಾಯವನ್ನು ಹೊರಕಳಿಸುವುದಕ್ಕೆ ಅಮೆರಿಕನ್ನರು ಬಂದಿದ್ದೇ ವಲಸಿಗರಾಗಿ! ಇವರಿಗೆಲ್ಲಿ ಬೇರೆಯವರನ್ನು ಹೊರ ಕಳಿಸುವ ನೈತಿಕತೆ ಬರಬೇಕು?

ಅಮೆರಿಕಕ್ಕೆ ಅಮೆರಿಕ ಎಂದು ಹೆಸರು ಬರುವುದಕ್ಕಿಂತ ಮುಂಚಿನಿಂದಲೂ ಅಲ್ಲಿದ್ದವರು ರೆಡ್‌ ಇಂಡಿಯನ್ಸ್‌. ಅಮೆರಿಕೆಗೆ ಇವರೆಲ್ಲ ಬಂದಾಗಿನಿಂದ ಕರಿಚರ್ಮ ಬಿಳಿಚರ್ಮದ ಜಗಳಗಳು ಹೆಚ್ಚಾಗಿತ್ತು. ಒಟ್ಟು 1,500 ಯುದ್ಧ, ದಾಳಿ, ಆಕ್ರಮಣಗಳನ್ನು ರೆಡ್‌ ಇಂಡಿಯನ್‌ ವಿರುದ್ಧ ಅಮೆರಿಕನ್ನರು ಮಾಡಿದ್ದರು. ಎಲ್ಲಿಂದಲೋ ಬಂದ ಈ ಅಮೆರಿಕನ್ನರು, ರೆಡ್‌ ಇಂಡಿಯನ್ಸ್‌ ಕಪ್ಪಗಿದ್ದರು, ಭಾಷೆ ವಿಚಿತ್ರವಾಗಿತ್ತು ಎಂಬ ಕಾರಣಕ್ಕೆ 1830ರಿಂದ 1840ನೇ ಇಸವಿಯವರೆಗೆ ಒಟ್ಟಾರೆ 60 ಸಾವಿರ ರೆಡ್‌ ಇಂಡಿಯನ್ಸ್‌ರನ್ನು ಅಮೆರಿಕ ಸೇನೆಯು ಕ್ರೀಕ್‌, ಚಕ್‌ಟಾ, ಚೆರಕಿ ಮತ್ತು ಇತರೆ ಪ್ರದೇಶಗಳಿಂದ ಹೊರಹಾಕಿದೆ. ನಮ್ಮ ಕಾಶ್ಮೀರಿ ಪಂಡಿತರನ್ನು ಹೊರಹಾಕಿದ ಹಾಗೆ.

ಇನ್ನು ಮ್ಯಾಂಕೇಟೊ ಹತ್ಯಾಕಾಂಡವನ್ನು ನಮ್ಮ ಭಾರತದ ಬುದ್ಧಿಜೀವಿಗಳು ಮರೆತಿರಬಹುದು. ಆದರೆ, ಅಮೆರಿಕನ್ನರಲ್ಲ. 1862ರ ಲಿಟಲ್‌ ಕ್ರೊ ವಾರ್‌ ಎಂಬುದನ್ನು ಕೇಳಿದ್ದರೆ, ಆ ಸಮಯದಲ್ಲಿ 490 ಮಕ್ಕಳು ಮತ್ತು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದಕ್ಕೆ ಸೈನ್ಯವನ್ನು ಕಳಿಸಿದ್ದೇ ಅಧ್ಯಕ್ಷ ಲಿಂಕನ್‌. ಇದಾದ ಮೇಲೆ ಅಲ್ಲೇ ಮತ್ತೂ 300 ಜನರಿಗೆ ಮರಣದಂಡನೆ ನೀಡಲಾಗಿತ್ತು. ಇಷ್ಟೇ ಅಲ್ಲ, ವೂಂಡೆಡ್‌ ನೀ, ಸ್ಯಾಂಡ್‌ ಕ್ರೀಕ್‌ ಹತ್ಯಾಕಾಂಡ, ಕ್ರೀಕ್‌ ಯುದ್ಧ, 1800ರ ಟಿಪಿಕನೂ ನದಿಗಾಗಿ ನಡೆದ ಕದನ, ಜನೇಯ್ಡನ್ಹಟನ್‌ ಹತ್ಯಾಕಾಂಡ ಎಷ್ಟು ಬೇಕು? ಅಮೆರಿಕನ್ನರ ಕೈಗಳು ಇವತ್ತಿಗೂ ರಕ್ತಸಿಕ್ತವೇ! ಈಗ ಮರ್ಯಾದೆ ಉಳಿಸಿಕೊಳ್ಳುವುದಕ್ಕೆ ರೆಡ್‌ ಇಂಡಿಯನ್ಸರನ್ನು ಸ್ಥಳೀಯ ಅಮೆರಿಕನ್ನರು ಎಂದು ಕರೆಯುತ್ತಿದ್ದಾರೆ. ಇದೇ ಕೈಯಲ್ಲಾ ಅಮೆರಿಕ ಹಿಂದೂಗಳನ್ನು ಓಡಿಸುವುದು?

ಇಷ್ಟೇ ಅಲ್ಲ, ಬ್ರಿಟಿಷರ ವಸಾಹತುಶಾಹಿ ಚರಿತ್ರೆ ಯಾವನಿಗೆ ತಾನೆ ಗೊತ್ತಿಲ್ಲ? ನಮ್ಮ ಭಾರತದಲ್ಲಂತೂ 200 ವರ್ಷಗಳವರೆಗೆ ಇವರನ್ನು ನಾವು ಸಹಿಸಿಕೊಂಡಿದ್ದೇವೆ. ಕೊಟ್ಟ ಕಷ್ಟಗಳನ್ನು ಅನುಭವಿಸಿದ್ದೇವೆ. ಆಫ್ರಿಕಾ, ಈಜಿಪ್ತ್‌(1882), ನ್ಯೂಜಿಲೆಂಡ್‌(1840), ಫಿಜಿ, ಸುಡಾನ್‌(1899), ಬರ್ಮಾ ಹೀಗೆ ಇಡೀ ವಿಶ್ವವನ್ನೇ ವಸಾಹತುಶಾಹಿ ಆಳ್ವಿಕೆಯಿಂದ ನಡೆಸುತ್ತಿದ್ದದ್ದು ಬ್ರಿಟಿಷರು. ಭಾರತೀಯರಲ್ಲ. ಹಿಟ್ಲರ್‌ 6 ದಶಲಕ್ಷ ಯಹೂದಿಯರ ಮತ್ತು 11 ದಶಲಕ್ಷ ನಾಝಿಗಳ ಸಾವಿಗೆ ಕಾರಣವಾಗಿರಬಹುದು ನಿಜ. ಆದರೆ, ಇವನಷ್ಟೇ ದೊಡ್ಡ ಲೆಕ್ಕ ಒಟ್ಟು ವಸಾಹತುಶಾಹಿ ಆಳ್ವಿಕೆಯ ಸಾವುಗಳು. ಎಲ್ಲರೂ ಹಿಟ್ಲರ್‌ಗೆ ಬಯ್ದರೇ ವಿನಾ, ಬ್ರಿಟಿಷರ ಬಗ್ಗೆ ಮಾತಾಡೋರೇ ಇಲ್ಲ. ಅಥವಾ ಇನ್ನೂ ಆ ಬಿಳಿ ಚರ್ಮದ ಮುಂದೆ ನಿಮ್ಮ ಗುಲಾಮಿ ಡಿಎನ್‌ಎ, ‘ಇವರು ನಮ್ಮ ಪೂರ್ವಜರು ಹಾಗಾಗಿ ಬಯ್ಯಬಾರದು’ ಎಂದು ಎಚ್ಚರಿಸುತ್ತಿದೆಯೇ?

ಮೊನ್ನೆ ಬೋರಿಸ್‌ ಜಾನ್ಸನ್‌ ಮತ್ತೊಂದು ಅವಧಿಗೂ ಪ್ರಧಾನಿಯಾದರು. ಇದಾದ ಮೇಲೆ ಮುಸ್ಲಿಮರು ಜಾನ್ಸನ್‌ಗೆ ಹೆದರಿ ದೇಶ ಬಿಡುತ್ತಿದ್ದಾರೆಂಬ ಸುದ್ದಿಯಾಯ್ತು. ಆದರೆ, ಇಲ್ಲಿ ಅಡ್ಡ ಹುಟ್ಟಿರುವ ಬುದ್ಧಿಜೀವಿಗಳ ಅಪ್ಪಂದಿರೇ ಅಲ್ಲವೇ ಇಂಗ್ಲೆಂಡಿನಲ್ಲೂ ಬುದ್ಧಿಜೀವಿಗಳಾಗಿರುವುದು? ‘ಅಯ್ಯಯ್ಯೋ ಮುಸ್ಲಿಮರು ನಮ್ಮ ಮನೆಯವರು, ಬಂಧುಗಳು, ಮಿತ್ರರು’ ಎಂದೆಲ್ಲ ಪ್ರತಿಭಟನೆ ಮಾಡಿದರು. ಕಳೆದ ತಿಂಗಳಷ್ಟೇ ಪಾಕ್‌ ಮುಸ್ಲಿಮನೊಬ್ಬ ಲಂಡನ್‌ ಬ್ರಿಡ್ಜ್‌ ಮೇಲೆ ದಾಳಿ ಮಾಡಿದ್ದ. ಆದರೂ ಇವರ ಪ್ರೇಮ ಮಾತ್ರ ಕಡಿಮೆಯಾಗಿಲ್ಲ. ಹೀಗಿರುವ ದೇಶದಲ್ಲಿ, ತಾವಾಯ್ತು ತಮ್ಮ ಕೆಲಸವಾಯ್ತು ಎಂದುಕೊಂಡಿರುವ ಹಿಂದೂಗಳನ್ನು ಓಡಿಸುವ ಕಾನೂನು ತರುತ್ತಾರೆ ಎಂಬ ಆಲೋಚನೆ ಬ್ರಿಟಿಷರಿಗೆ ಹುಟ್ಟಿದವರಿಗೆ ಮಾತ್ರ ಬರಲು ಸಾಧ್ಯ.

ಇವೆಲ್ಲ ಹಳೇದಾಯಿತು ಎಂದರೆ, ಹೊಸ ವಾದವನ್ನೇ ಮುಂದಿಡೋಣ. ಹೇಳಿ, ಬೇರೆ ದೇಶಗಳಿಗೆ ಸಮಸ್ಯೆಯಾಗಿರುವುದು ಹಿಂದೂಗಳಿಂದಲೋ? ಅಥವಾ ಅಲ್ಲಿಗೆ ವಲಸೆ ಹೋಗುತ್ತಿರುವ ಇಸ್ಲಾಮಿಕ್‌ ರಾಷ್ಟ್ರಗಳ ಮುಸ್ಲಿಮರಿಂದಲೋ? ಸರಿಯಾಗಿ ನೋಡಿದರೆ, ಬೇರೆ ರಾಷ್ಟ್ರಗಳಲ್ಲಿ ಹಿಂದುಗಳು ಇದ್ದಾರೋ ಇಲ್ಲವೋ ಎಂದು ಗೊತ್ತಾಗದಂತೆ, ಆಯಾ ದೇಶದ ಸಂಸ್ಕೃತಿಗೆ ಹೊಂದಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಎಲ್ಲೂ ಒಂದು ದಿನವೂ ರಸ್ತೆಯ ಮಧ್ಯದಲ್ಲಿ ನಿಂತು ಭಗವದ್ಗೀತೆ ಓದುವುದಕ್ಕೆ ಸ್ವಾತಂತ್ರ್ಯಬೇಕು ಎಂಬ ಹೋರಾಟಗಳಿಲ್ಲ. ಪೂಜೆ ಪುನಸ್ಕಾರಗಳಿಗೆ ತೊಂದರೆಯಾಗುತ್ತದೆ ಎಂಬ ದೂರಿಲ್ಲ. ಇನ್ನು ವಿಶೇಷ ಕಾನೂನು ಎಂಬುದಂತೂ ಕೇಳಿಯೇ ಗೊತ್ತಿಲ್ಲ. ಆದರೆ, ಇಸ್ಲಾಮಿಕ್‌ ರಾಷ್ಟ್ರಗಳ ಮುಸ್ಲಿಮರು ವಲಸೆ ಹೋದಲ್ಲೆಲ್ಲ ಷರಿಯಾ ಕಾನೂನಿಗೇ ಬೇಡಿಕೆ ಇಡುವುದು. ಅದಕ್ಕಾಗೇ ಮಸೀದಿಯಲ್ಲಿ ಭೇಟಿ, ಚರ್ಚೆ ಇತ್ಯಾದಿಗಳು ನಡೆಯುತ್ತಿರುವುದರ ಬಗ್ಗೆ ನೆಟ್‌ಫ್ಲಿಕ್ಸ್‌ನಲ್ಲಿ ಡಾಕ್ಯುಮೆಂಟರಿ ಆಗುವಷ್ಟು ಹೇರಳವಾಗಿದೆ. ಮಸೀದಿಯೊಳಗಿನ ಮತಾಂತರ, ಅಮೆರಿಕದ ವಿರುದ್ಧವೇ ಷಡ್ಯಂತ್ರ ಮಾಡುವುದು, ಒಂದಾ ಎರಡಾ? ಅದಕ್ಕೇ ಎಲ್ಲರೂ ಇವರನ್ನು ವಿರೋಧಿಸುವುದು. ಭಾರತವೂ ಇದೇ ಕಾರಣಕ್ಕೆ ಇವರನ್ನು ಬಿಟ್ಟುಕೊಳ್ಳುವುದಿಲ್ಲ ಎಂದರೂ ಸರಿಯೇ!

ಭಾರತದಿಂದ ಹೋದ ಎಷ್ಟೋ ಹಿಂದೂಗಳು ಇವತ್ತು ಗೂಗಲ್‌ ಇತ್ಯಾದಿ ಕಂಪನಿಗಳ ಸಿಇಒ ಆಗಿದ್ದಾರೆ. ಪಂಚರ್‌ ಕಟ್ಟುವ ಕುಲಕಸುಬಿನವರು ಅಮೆರಿಕಕ್ಕೆ ಹೋದರೂ ಅದನ್ನೇ ಮಾಡಿಕೊಂಡಿದ್ದಾರೆ. ಅಮೆರಿಕಾದಲ್ಲಿ ಈಗೀಗ ಟ್ಯೂಬ್‌ ಇಲ್ಲದ ಟಯರುಗಳು ಬಂದಿರುವುದರಿಂದ ಕೆಲಸ ಕಡಿಮೆಯಾಗಿ, ಸಮಯ ಬಹಳ ಇರುವುದರಿಂದ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಉಗ್ರಗಾಮಿಯಾಗಿಯೂ ಹೆಸರು ಮಾಡುತ್ತಿದ್ದಾರೆ.

ಇದೂ ಬೇಡ ಸ್ವಾಮಿ. ಯಾವುದಾದರೂ ಒಂದು ದೇಶ ಇನ್ನೊಂದು ದೇಶವನ್ನು ನೋಡಿ, ಕೇಳಿ, ಒಪ್ಪಿಗೆ ತೆಗೆದುಕೊಂಡು ಕಾನೂನು ಮಾಡಿದೆಯಾ? ಹಾಗಾದರೆ ನಾವ್ಯಾಕೆ ಮಾಡ್ಬೇಕು? ಈಗ ಸೌದಿ ಅರೇಬಿಯಾ ಒಂದು ಕಾನೂನು ಮಾಡಬೇಕಾದರೆ, ಅಲ್ಲಿನ ಮುಸ್ಲಿಮರನ್ನು ನೋಡಿ ಕಾನೂನು ಮಾಡುತ್ತದೆಯೋ? ಭಾರತದಲ್ಲಿರುವ ಮುಸ್ಲಿಮರ ಮೇಲೂ ಭಾರತ ಏನಾದರೂ ಸೇಡು ತೀರಿಸಿಕೊಂಡರೆ ಎಂಬ ಸಾವಿರಾರು ಕಿಲೋಮೀಟರ್‌ ದೂ…ರಾಲೋಚನೆ ಮಾಡಿ ಕಾನೂನು ಮಾಡುತ್ತದೆಯೋ? ನಮ್ಮ ದೇಶದ ಮುಸ್ಲಿಮರ ಅಭಿವೃದ್ಧಿಗೆ ಏನು ಹಾಗೆ ಕಾನೂನು ಮಾಡಿಕೊಳ್ಳುತ್ತಾರೆ. ಆದರೆ, ಭಾರತ ಮಾತ್ರ ಅಮೆರಿಕದವರು ಏನಂದುಕೊಂಡಾರು? ಇಂಗ್ಲೆಂಡಿನವರು ಏನೆಂದುಕೊಂಡಾರು? ಎಂದೆಲ್ಲ ಆಲೋಚಿಸಿ ಕಾನೂನು ಮಾಡಬೇಕಂತೆ?! ಈ ಲಾಜಿಕ್ಕೇ ಅರ್ಥವಾಗುತ್ತಿಲ್ಲ.

ಗಲ್‌ಧಿ ರಾಷ್ಟ್ರಗಳಲ್ಲಿ ಇಸ್ಲಾಮಿಕ್‌ ರಾಷ್ಟ್ರದ ಮುಸ್ಲಿಮರನ್ನೇ ನಂಬುವುದಿಲ್ಲ. ಅವರಿಗೇ ಪೌರತ್ವ ಕೊಡುವುದಿಲ್ಲ. ಪಾಕ್‌ ಮುಸ್ಲಿಮರನ್ನು ಅಲ್ಲಿ ಡ್ರೈವರ್‌ ಕೆಲಸ ಬಿಟ್ಟು ಮೇಲಕ್ಕೇರಿಸುವುದಿಲ್ಲ. ಬಾಂಗ್ಲಾ ಮುಸ್ಲಿಮರು ಎಂದರೆ ಕೊಳಕು ಅಂತಲೇ ಭಾವಿಸುತ್ತಾರೆ. ಭಾರತದ ಮುಸ್ಲಿಮರಿಗೂ ಬಹಳ ಮರ್ಯಾದೆ ಕೊಡುವುದಿಲ್ಲ. ಆದರೆ ಭಾರತದ ಬೇರೆ ಧರ್ಮದವರಿಗೆ ಉತ್ತಮ ಸ್ಥಾನವನ್ನೇ ಕೊಡುತ್ತಾರೆ. ವೀಸಾ ಸಹ, ಪಾಕ್‌ಗಿಂಥ ಬೇಗ ಭಾರತದ ಪ್ರಜೆಗೆ ಅಪ್ರೂವ್‌ ಮಾಡುತ್ತಾರೆ. ಇದನ್ನು ನನಗೆ ಅಲ್ಲಿನ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದ ಭಾರತದ ವ್ಯಕ್ತಿಯೇ ಹೇಳಿದ್ದು.

ತಿನ್ನುವುದಕ್ಕಿಲ್ಲದೇ ಕತ್ತೆ ಮಾರಿಕೊಂಡು ದೇಶದ ಆರ್ಥಿಕತೆ ಹೆಚ್ಚಿಸುವ ಬೃಹತ್‌ ಐಡಿಯಾ ಮಾಡಿರುವ ಪಾಕ್‌ನ ಜುಬ್ಬ ಜೋಕರ್‌ ಇಮ್ರಾನ್‌ ಖಾನ್‌ ಹೇಳ್ತಾನೆ, ‘ಭಾರತದ ಮುಸ್ಲಿಮರಿಗೆ ನಾವು ಪೌರತ್ವ ಕೊಡುವುದಿಲ್ಲ’ ಎಂದು. ಅಲ್ಲ, ಆ ಕತ್ತೆಬಡವನ ಧೈರ್ಯ ನೋಡಿ! ಅವನ ರಾಷ್ಟ್ರಕ್ಕೆ ಸ್ವತಃ ಅಲ್ಲಾಹುವೇ ಹೋಗಲ್ಲ ಎಂಬುದು ಬೇರೆ ಮಾತು. ಆದರೆ ಭಾರತದಿಂದ ಮುಸ್ಲಿಮರು ಹೋಗುತ್ತಾರೆಂದು ಅವನೇ ಭ್ರಮಿಸಿ, ಅವನೇ ಯಾರೂ ಕೇಳದಿದ್ದರೂ ಹೇಳಿಕೆ ಕೊಡುತ್ತಾನೆ.

ಇಲ್ಲಿ ನಾವು ಗಮನಿಸಬೇಕಿರುವುದು ಕತ್ತೆಬಡವನ ಧೈರ್ಯವನ್ನಲ್ಲ. ಬದಲಿಗೆ ಇಸ್ಲಾಮಿಕ್‌ ರಾಷ್ಟ್ರಗಳೇ ಮುಸ್ಲಿಮರನ್ನು ಒಳಬಿಟ್ಟುಕೊಳ್ಳುವುದಿಲ್ಲ. ಇನ್ನು ನಾವ್ಯಾಕೆ ಒಳಬಿಟ್ಟುಕೊಳ್ಳಬೇಕು ಅಥವಾ ಒಳಬಿಟ್ಟುಕೊಳ್ಳದಿದ್ದರೆ ಬೇರೆ ದೇಶ ಏನೆಂದುಕೊಳ್ಳುತ್ತದೆಯೋ ಎಂದು ಯೋಚಿಸಬೇಕು? ಇಂಥ ರೋಹಿಂಗ್ಯಾ ಅಥವಾ ಪಾಕ್‌ ಮುಸ್ಲಿಮರನ್ನು ಒಳಬಿಟ್ಟುಕೊಂಡು ಯಾರನ್ನು ಮೆಚ್ಚಿಸಬೇಕಿದೆ?

ಹಾಗಾಗಿ ನೀವ್‌ ಏನ್‌ ಬೇಕಾದ್ರೂ, ಹೇಗೆ ಬೇಕಾದ್ರೂ ರೊಟ್ಟಿ ಮಗುಚಿ ಹಾಕಿ ಅಥವಾ ಉಲ್ಟಾ ನಿಂತು ಪ್ರತಿಭಟಿಸಿ, ಪೌರತ್ವ ತಿದ್ದುಪಡಿ ಕಾಯ್ದೆ ಬದಲಾಗುವ, ವಾಪಸ್‌ ತೆಗೆದುಕೊಳ್ಳುವ ‘ಕಿಂಚಿತ್‌ಮಾತ್ರ ಸಂಭಾವನಾ ನಹೀ ಹೈ!’

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya