ಮುಸ್ಲಿಂ ವಲಸಿಗರಿಗೆ ಜಾಗ ಕೊಡಲು, ಭಾರತವೇನು ಧರ್ಮಶಾಲೆಯೇ?

 

ಬಹುದಿನಗಳ ಬೇಡಿಕೆ ಸಂಪೂರ್ಣ ಈಡೇರುವ ಹಂತದಲ್ಲಿದೆ. ಈಡೇರಿದಂತೆಯೇ ಎಂದರೂ ತಪ್ಪಿಲ್ಲ. ಬುಧವಾರ ಕರೆದ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಗೆ ಅನುಮೋದನೆ ಸಿಕ್ಕಿದೆ. ಇದೇ ಅಧಿವೇಶನದಲ್ಲಿ ಮುಂದಿನ ವಾರ ಇದನ್ನು ಮಂಡಿಸಲಾಗುತ್ತದೆ. ಅಂದರೆ ಬಾಂಗ್ಲಾದೇಶ, ಅಘ್ಘಾನಿಸ್ಥಾನ ಹಾಗೂ ಪಾಕಿಸ್ಥಾನದಲ್ಲಿರುವ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ತಿದ್ದುಪಡಿ ಇದು. ಇದರ ಬಗ್ಗೆ ಈಗ ಸಂವಿಧಾನದ ಎಕ್ಸ್‌ಪರ್ಟುಗಳು, ಒಂದನೇ ಪುಟಕ್ಕೆ ಓದು ನಿಲ್ಲಿಸಿದವರಿಂದ ಹಿಡಿದು ಎಲ್ಲರೂ ವಿರೋಧಿಸುವವರೇ ಆಗಿದ್ದಾರೆ.

ನಾನಿಲ್ಲಿ, ಭಾರತ-ಪಾಕ್‌ ವಿಭಜನೆಯ ಸಮಯದಲ್ಲಿ ಮುಸ್ಲಿಮರು ಹಿಂದೂಗಳಿಗೆ, ಸಿಕ್ಖರಿಗೆಲ್ಲ ಎಷ್ಟು ಹಿಂಸೆ ಕೊಟ್ಟರು, ಎಷ್ಟು ಜನರಿಗೆ ಹಿಂಸೆ ಕೊಟ್ಟರು, ಎಷ್ಟು ಮಹಿಳೆಯರನ್ನು ಅತ್ಯಾಚಾರ ಮಾಡಿದರು, ಎಷ್ಟು ಕೊಲೆಗಳಾಯಿತು ಎಂದೆಲ್ಲ ಹೇಳುವುದಕ್ಕೇ ಬರುವುದಿಲ್ಲ. ಅಥವಾ ವಿಭಜನೆಯಾದ ಸಮಯದಲ್ಲಿ 28% ಇದ್ದ ಹಿಂದೂಗಳು ಈಗ 2-3% ಸಹ ಇಲ್ಲ ಎಂಬುದು ನಮಗೆಲ್ಲ ಗೊತ್ತಿರುವುದರಿಂದ ಅದರ ಬಗ್ಗೆಯೂ ಚರ್ಚೆಯಿಲ್ಲ.

ಆದರೆ, ಇಲ್ಲಿ ಚರ್ಚೆಯಾಗಬೇಕಾಗಿರುವುದು ಸಂವಿಧಾನವನ್ನು ಅವರಿಗಿಷ್ಟ ಬಂದ ಹಾಗೆ ತಿರುಚುವ ಕಳ್ಳರ ಬಗ್ಗೆ ಮತ್ತು ಕಾಂಗ್ರೆಸ್ಸೇ ಈ ತಿದ್ದುಪಡಿಯ ಬಗ್ಗೆ ಲೋಕಸಭೆ, ರಾಜ್ಯಸಭೆಯಲ್ಲಿ ಉಲ್ಲೇಖಿಸಿದ್ದಾಗ ಬಾಯಲ್ಲಿ ಬ್ರಿಟಿಷರ ಬೂಟು ಇತ್ತಾ ಎಂಬುದು ಚರ್ಚೆಯಾಗಬೇಕಿದೆ.

ಮೊದಲ ಆಕ್ಷೇಪವೇನೆಂದರೆ, ಹಿಂದೂಗಳು-ಸಿಕ್ಖರು-ಜೈನರು-ಕ್ರಿಶ್ಚಿಯನ್ನರು-ಪಾರ್ಸಿಗಳು ಇಂಥವರನ್ನೆಲ್ಲ ಒಳಗೆ ಬಿಟ್ಟುಕೊಳ್ಳಬಹುದು. ಆದರೆ, ಮುಸ್ಲಿಮರನ್ನು ಮಾತ್ರ ಯಾಕಾಗಿ ಬಿಟ್ಟುಕೊಳ್ಳುತ್ತಿಲ್ಲ?

ಸ್ವಾಮಿ, ಭಾರತ ಧರ್ಮಶಾಲೆಯಲ್ಲ, ಕಂಡ ಕಂಡವರನ್ನೆಲ್ಲ ಒಳಗೆ ಬಿಟ್ಟುಕೊಳ್ಳುವುದಕ್ಕೆ. ಈ ತಿದ್ದುಪಡಿ ಮಾಡುವುದಕ್ಕೆ ಹೊರಟಿರುವುದೇ ಮೂರು ದೇಶದಲ್ಲಿರುವ ಅಲ್ಪಸಂಖ್ಯಾತರಿಗೆ. ಯಾವ್ಯಾವುದು? ಪಾಕಿಸ್ಥಾನ-ಅಘ್ಘಾನಿಸ್ಥಾನ-ಬಾಂಗ್ಲಾದೇಶ. ಅಲ್ಲಿ ಅಲ್ಪಸಂಖ್ಯಾತರು ಮುಸ್ಲಿಮರಾ? ಹಿಂದೂಗಳಾ? ಈ ಲೆಕ್ಕದಲ್ಲಿ ಭಾರತದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರು ಎಂದು ಘೋಷಿಸಿಬಿಡಿ ಅಲ್ಲವೇ?

ಮುಸ್ಲಿಮರ ಜನಸಂಖ್ಯೆಯ ಬಗ್ಗೆ ಉದಾಹರಣೆ ಕೊಡುವುದಾದರೆ, ಕೆನಡಾದಲ್ಲಿ ಒಂದು ಪ್ರತಿಭಟನೆ ನಡೆಯುತ್ತಿತ್ತು. ಬಹುಶಃ ಅದು ಸಲಿಂಗಿಗಳ ವಿರುದ್ಧದ ಪ್ರತಿಭಟನೆಯಿರಬೇಕು. ಅದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ ಅಲ್ಲಿ ರೆಬೆಲ್‌ ನ್ಯೂಸ್‌ನ ಡೇವಿಡ್‌ ಮೆನ್ಝೀಸ್‌ ಎಂಬ ನಿರೂಪಕ, ಮುಸ್ಲಿಮರು ಪ್ರತಿಭಟಿಸುತ್ತಿರುವ ಸ್ಥಳಕ್ಕೆ ಹೋಗಿ ಅಲ್ಲಿನ ಮುಸ್ಲಿಮನೊಬ್ಬನನ್ನು ಮಾತಾಡಿಸುತ್ತಾರೆ. ಆಗ ಸಲಿಂಗಿಗಳ ಬಗ್ಗೆ ಕೇಳಿದಾಗ, ‘ಕೆನಡಾ ಹೇಗೆ ಕೆಲವಷ್ಟನ್ನು ಒಪ್ಪುವುದಿಲ್ಲವೋ, ಹಾಗೇ ಇಸ್ಲಾಮ್‌ ಸಲಿಂಗ ಕಾಮವನ್ನು ಒಪ್ಪುವುದಿಲ್ಲ’ ಎಂದ ಪ್ರತಿಭಟನಾಕಾರ. ‘ಹೌದಪ್ಪಾ, ಹಾಗಂತ ಕೆನಡಾದಲ್ಲಿ ಶರಿಯಾ ಕಾನೂನು ಬರುತ್ತಾ?’ ಎಂದಾಗ, ‘ಆ ಕಾಲ ಬಹಳ ದೂರವಿಲ್ಲ. ಶರಿಯಾ ಕಾನೂನು ಬಂದೇ ಬರುತ್ತದೆ. ನಾವೆಲ್ಲ ಮಕ್ಕಳು ಮಾಡಿಕೊಳ್ಳುತ್ತಿದ್ದೇವೆ, ನೀವೆಲ್ಲ ಏನೂ ಮಾಡುತ್ತಿಲ್ಲ. ನಿಮ್ಮ ಜನಸಂಖ್ಯೆ ಕಡಿಮೆಯಿದೆ. ನಮ್ಮದು ಹೆಚ್ಚಿದೆ. ಆಗ ಶರಿಯಾ ತರುತ್ತೇವೆ. 2060ರ ವೇಳೆಗೆ ಪ್ರಪಂಚದಲ್ಲಿ ಮುಸ್ಲಿಮರ ಜನಸಂಖ್ಯೆಯೇ ಹೆಚ್ಚಿರುತ್ತದೆ ಎಂದು ನಿಮ್ಮದೇ ಪ್ಯೂ ರಿಸರ್ಚ್‌ ತಿಳಿಸಿದೆ. ಏನ್‌ ಮಾಡಕ್ಕಾಗುತ್ತೆ ಆಗ ನಿಮಗೆ?’ ಎಂದ.

ಯಾರು ಸ್ವಾಮಿ ಅಲ್ಪಸಂಖ್ಯಾತರು? ಮುಸ್ಲಿಮರಿಗೆ ದೇಶವಿಲ್ಲ ಎಂದು ಬೊಬ್ಬೆಯಿಡುತ್ತಿರುವ ಮಂದಿ ಮುಸ್ಲಿಮನ ಈ ಮಾತಿಗೆ ಏನು ಹೇಳುತ್ತಾರೆ?! ಪ್ರಪಂಚದ ಯಾವುದೇ ದೇಶದ ಮುಸ್ಲಿಮರನ್ನು ಗಡಿಪಾರು ಮಾಡಿದರೆ ಅಥವಾ ಅವರ ಮೇಲೆ ದೌರ್ಜನ್ಯ ನಡೆದರೆ ಪ್ರಪಂಚದ 50 ಮುಸ್ಲಿಂ ರಾಷ್ಟ್ರಗಳು ಸೇರಿಸಿಕೊಳ್ಳುತ್ತದೆ. ಆದರೆ ಹಿಂದೂಗಳಿಗೆ ಇದೇ ಪರಿಸ್ಥಿತಿ ಬಂದರೆ, ಭಾರತ ಬಿಟ್ಟು ಅವರನ್ನು ಕರೆದುಕೊಳ್ಳಬಹುದಾದ ಇನ್ನೊಂದು ಸಮರ್ಥ ಹಿಂದೂ ರಾಷ್ಟ್ರ ತೋರಿಸಿ ನೋಡೋಣ?!

ಅಲ್ಪಸಂಖ್ಯಾತರಿಗೆ ಇಲ್ಲಿನ ಮುಸ್ಲಿಂ ಮೂಲಭೂತವಾದಿಗಳು ಕೇಳಬಹುದು, ಪಾಕಿಸ್ಥಾನದಲ್ಲಿ ಅಹ್ಮದೀಯರು ಅಲ್ಪಸಂಖ್ಯಾತರಾಗಿದ್ದಾರೆ ಎಂದು. ಅಲ್ಲದೇ, ಪಾಕ್‌ ಆ ಸಮುದಾಯವನ್ನು ಕಡೆಗಣಿಸುತ್ತಿದೆ. ಅವರನ್ನು ಸೇರಿಸಿಕೊಳ್ಳಬಹುದಾ? ಇಲ್ಲ ಸಾಧ್ಯವಿಲ್ಲ. ಯಾಕಂದರೆ, ಭಾರತ ಬೇಕೋ ಇಸ್ಲಾಮಿಕ್‌ ರಾಷ್ಟ್ರ ಬೇಕೋ ಎಂದು ಆಯ್ಕೆಯನ್ನಿಟ್ಟಾಗ, ಅವರು ತೆಗೆದುಕೊಂಡಿದ್ದು ಇಸ್ಲಾಮನ್ನು. ಪಾಕ್‌ ಪರಿಕಲ್ಪನೆ ಹುಟ್ಟಿಕೊಂಡಾಗ, ಸಮಸ್ತ ಅಹ್ಮದೀಯರೂ ಇಸ್ಲಾಮಿಗೆ ಬೆಂಬಲ ಕೊಟ್ಟರು. ಆಗ ದೇಶ ಬೇಡವಾಗಿತ್ತು. ಆಗ ಇಸ್ಲಾಂ ಬೇಕಿತ್ತು, ಈಗ ಪಾಕ್‌ನಲ್ಲಿ ಇವರಿವರ ನಡುವೆಯೇ ಜಗಳ ಹುಟ್ಟಿಕೊಂಡಿರುವಾಗ ಭಾರತ ಬಾಗಿಲು ತೆಗೆಯಬೇಕು ಎನ್ನಲು ಭಾರತವೇನು ಮುಸ್ಲಿಮರದ್ದಾ? ಅಥವಾ ಇವರಪ್ಪಂದಾ?

ನಮ್ಮ ಭದ್ರತಾ ವ್ಯವಸ್ಥೆಯಲ್ಲಿ ಸುಮ್ಮನೆ ಬಂದವರನ್ನೆಲ್ಲ ಒಳಗೆ ಕರೆದುಕೊಂಡು ಹೋಗುವುದಿಲ್ಲ. ನಮ್ಮಲ್ಲಿ ವಲಸೆ/ವಲಸಿಗರ ಕಾನೂನು ಇಲ್ಲದ ಕಾರಣ ನಾವು ಕೆಲ ನೀತಿಗಳನ್ನು ಅನುಸರಿಸುತ್ತೇವೆ. ಮೊದಲಿಗೆ ವಲಸೆ ಬಂದವರಿಗೆ ಮೊದಲಿದ್ದ ದೇಶದಿಂದ ಹೊರ ಹಾಕಿದ್ದಾರಾ ಎಂಬುದನ್ನು ನೋಡುವುದು, ನಂತರ ವಲಸಿಗರು ತಮಗೆ ಮೂಲ ಸೌಲಭ್ಯಗಳೇ ಸಿಗದೇ, ಜೀವನ ಸಾಗಿಸುವುದೂ ಕಷ್ಟ ಎಂದು ಬಂದರಾ ಎಂದು ನೋಡುವುದು ಮತ್ತು ಕೊನೆಯದಾಗಿ ಅವರು ನಮ್ಮ ದೇಶಕ್ಕೆ ಅದೆಷ್ಟು ಮಾರಕ ಎಂದು ನೋಡಿಕೊಳ್ಳುವುದು.

ನಮ್ಮ ದೇಶದಲ್ಲಿರುವ ಮುಸ್ಲಿಮರೇನೋ ಬಹಳ ಶಾಂತಿವಂತರು, ಶಾಂತಿಪ್ರಿಯರು, ಶಾಂತಿಧೂತರು, ಶಾಂತಿನಿವಾಸದಲ್ಲೇ ಇರುವವರು. ಆದರೆ, ಪಾಕಿಸ್ಥಾನದಲ್ಲಿರುವ ಮುಸ್ಲಿಮರು ಸಾಚಾ ಇರುತ್ತಾರೆಯೇ? ಪಾಕ್‌-ಬಾಂಗ್ಲಾ-ಆಘ್ಘಾನಿಸ್ಥಾನದಲ್ಲಿ ಪುರುಪುರು ಹುಟ್ಟುವ 10 ಮಕ್ಕಳಲ್ಲಿ 8 ಉಗ್ರಗಾಮಿಗಳೇ ಆಗಿರುತ್ತಾರೆ. ಉಳಿದ ಮುಸ್ಲಿಮರಲ್ಲಿ ತುಂಬಿರುವುದೇ ಭಾರತವಿರೋಧಿ ಮನಃಸ್ಥಿತಿ. ಹೀಗಿರುವ ಭಾರತದ ಹೊರಗಿರುವ ಉಗ್ರವಾದಿ ಮುಸ್ಲಿಮರು, ನಮ್ಮ ದೇಶದ ಶಾಂತಿಪ್ರಿಯ ಮುಸ್ಲಿಮರನ್ನು ಹಾಳು ಮಾಡಿದರೆ, ಅವರ ತಲೆ ಕೆಡಿಸುವುದಿಲ್ಲ ಎನ್ನುವುದಕ್ಕೆ ಏನಿದೆ ಗ್ಯಾರಂಟಿ? ಇವರಪ್ಪ ಜಿನ್ನಾ ಮತ್ತೆ ಹುಟ್ಟಿಬರ್ತಾನಾ? ವಲಸಿಗರನ್ನು ಒಳಗೆ ಬಿಟ್ಟುಕೊಳ್ಳುವಾಗ, ಆ ರಾಷ್ಟ್ರಕ್ಕೆ ಯಾವ ಧರ್ಮದವರು ಬರಬೇಕು, ಯಾವ ಧರ್ಮದವರು ಬರಬಾರದು ಎಂದು ನಿರ್ಧರಿಸುವ ಹಕ್ಕೂ ಇರುತ್ತದೆ. ಅದನ್ನು ಸಂವಿಧಾನವೂ ಕೊಟ್ಟಿದೆ.

ಇಲ್ಲಿ ಇನ್ನೊಂದು ಸೂಕ್ಷ್ಮವಿದೆ. ಜೋಗೇಂದ್ರನಾಥ್‌ ಮಂಡಲ್‌ ಅಥವಾ ಜೆ.ಎನ್‌.ಮಂಡಲ್‌ ಅವರು ಸಹ ಪಾಕಿಸ್ಥಾನದ ಹುಟ್ಟಿಗೆ ಪ್ರಚಾರ ಮಾಡಿದ್ದರಲ್ಲ, ಅವರು ನಾಮಶೂದ್ರ ಜಾತಿಯವರು. ಅಂದರೆ ದಲಿತ ಸಮುದಾಯಕ್ಕೆ ಸೇರಿದವರು. ಈಗ ಅಲ್ಲಿರುವ ದಲಿತರು, ನಾಮಶೂದ್ರರೂ ಬರುವ ಹಾಗಿಲ್ಲವಾ ಎಂದು ಅಲ್ಲೂ ಜಾತಿಯನ್ನು ತಂದು ಪ್ರಶ್ನಿಸುವವರಿದ್ದಾರೆ. ಏನೂ ಇಲ್ಲದಿರುವಾಗ ನಮ್ಮ ದೇಶದಲ್ಲಿ ಏನಾದರೂ ಉಳಿದಿದೆ, ಅಥವಾ ಹುಟ್ಟಿಸಬಹುದು ಎಂದರೆ ಅದು ಜಾತಿ ವಿಷಯ. ಇದನ್ನು ಎತ್ತಿ, ದಲಿತರನ್ನು ಕಡೆಗಣಿಸುತ್ತಿದ್ದಾರೆ ಎಂದುಬಿಡುವುದು.

ಉಗ್ರವಾದಿ, ಭಾರತವಿರೋಧಿ ಮುಸ್ಲಿಂ ಅಕ್ರಮ ವಲಸಿಗರನ್ನು ನಮ್ಮ ದೇಶದೊಳಕ್ಕೆ ಬರುವುದಕ್ಕೆ ಬಿಡುವುದಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಜೆ.ಎನ್‌. ಮಂಡಲ್‌ ವಿಚಾರದಲ್ಲಿ ಹಾಗಿಲ್ಲ. ಅವರು ಪಾಕ್‌ ಪರ ಇದ್ದರೂ, ಪಾಕ್‌ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದರೂ, 1950 ಹತ್ಯಾಕಾಂಡಗಳನ್ನು ನೋಡಿ, ತಾನು ಇರಬೇಕಾಗಿದ್ದ ಪಾಕ್‌ ಇದಲ್ಲ ಎನಿಸಿತ್ತು. ಪಾಕ್‌ನ ಮೊದಲ ಪ್ರಧಾನಿ ಲಿಯಾಖತ್‌ ಅಲಿ ಖಾನ್‌ ಆಗಸ್ಟ್‌ 16ರಂದು ಪಶ್ಚಿಮ ಪಂಜಾಬ್‌ನ ಸಿಕ್ಖರ ಹಕ್ಕುಗಳ ಪರವಾಗಿರುತ್ತೇನೆ ಎಂದಿದ್ದ. ಅಲ್ಲದೇ ದೇಶ ಹಾಳು ಮಾಡಿದ್ದ ನರಿ ಮಹಮ್ಮದ್‌ ಅಲಿ ಜಿನ್ನಾ ಸಹ 1947ರ ಜುಲೈ 13ರಂದು ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಅಲ್ಪಸಂಖ್ಯಾತರು ಯಾವುದೇ ಧರ್ಮದವರಾಗಿರಲಿ, ಅವರ ಹಕ್ಕುಗಳ ರಕ್ಷಣೆ ನಮ್ಮ ಜವಾಬ್ದಾರಿ, ಯಾವುದೇ ಭೇದ ಮಾಡದೇ, ಎಲ್ಲ ಪಾಕಿಸ್ಥಾನಿಯರಂತೇ ನೋಡಿಕೊಳ್ಳುತ್ತೇವೆ’ ಎಂದಿದ್ದಲ್ಲದೇ ಇನ್ನೇನೇನೋ ರೈಲು ಬಿಟ್ಟಿದ್ದ. ಈ ಹಸಿ ಸುಳ್ಳಿಗೆ ಇಸ್ಲಾಮಿನಲ್ಲಿ ತಾಖಿಯಾ ಎನ್ನುತ್ತಾರೆ. ಇದಕ್ಕೆ ಇಸ್ಲಾಂ ಒಪ್ಪುತ್ತದೆ. ಇದನ್ನೇ ಜಿನ್ನಾ ಉಪಯೋಗಿಸಿದ್ದ.

ಇದನ್ನೆಲ್ಲ ನೋಡಿದ್ದ ಜೆ.ಎನ್‌. ಮಂಡಲ್‌. 1951ರಲ್ಲಿ ಅಧಿಕಾರದಲ್ಲಿರುವಾಗಲೇ ಪಾಕ್‌ ಬಿಟ್ಟು ವಿದೇಶಕ್ಕೆ ಹಾರಿ, ಅಲ್ಲಿಂದಲೇ ‘ನಿಮ್ಮ ಸರ್ಕಾರದ ನೀತಿಗಳೆಲ್ಲವೂ ಹಿಂದೂ ವಿರೋಧಿಯಾಗಿವೆ, ಹಿಂದೂಗಳ ಹತ್ಯೆಯಾಗುತ್ತಿದೆ. ಹಾಗಾಗಿ ರಾಜೀನಾಮೆ ಕೊಡುತ್ತೇನೆಂದು’ ಪತ್ರ ಬರೆದಿದ್ದರು. ಅಂದರೆ, ಆಗಿನಿಂದಲೂ ಅಲ್ಪಸಂಖ್ಯಾತರು ಎಂದರೆ ಹಿಂದೂಗಳೇ. ಈಗಲೂ ಅಲ್ಪಸಂಖ್ಯಾತರಿಗೇ ಮಣೆ ಎಂದಿರುವುದರಿಂದ, ದಲಿತರಷ್ಟೇ ಅಲ್ಲ, ಹಿಂದೂ ಧರ್ಮಕ್ಕೆ ಸೇರಿದ ಯಾರೇ ಆದರೂ ಬರಬಹುದು.

ಈಗ ಆರ್ಟಿಕಲ್‌ 14. ಸಮಾನತೆ. ನೋಡಿ, ಈಗ ನಮ್ಮ ಭಾರತ ಸರ್ಕಾರವು ಏನಾದರೂ ವಲಸಿಗರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿದ ನಂತರವಷ್ಟೇ ಪೌರತ್ವ ಎಂದರೆ ಅದು ತಪ್ಪಾಗುತ್ತಿತ್ತು. ಅಥವಾ ಇಡೀ ಪೌರತ್ವ ಕಾಯ್ದೆಯನ್ನೇ ಬದಲಾಯಿಸಿ ಮುಸ್ಲಿಮರನ್ನು ಅವಮಾನಿಸಿದ್ದರೆ ಅದು ತಪ್ಪಾಗುತ್ತಿತ್ತು. ಆದರೆ ಈಗ ಕೇವಲ ಮೂರು ರಾಷ್ಟ್ರಗಳಲ್ಲಿ ಎಷ್ಟು ಅಲ್ಪಸಂಖ್ಯಾತ ಧರ್ಮಗಳಿವೆಯೋ, ಅವುಗಳಲ್ಲಿ ಯಾರನ್ನು ವಿಭಜನೆಯ ಕಾಲದಿಂದಲೂ ಧರ್ಮದ ಆಧಾರದ ಮೇಲೆ ಕೊಲ್ಲಲಾಗುತ್ತಿದೆಯೋ ಅಥವಾ ಕಷ್ಟ ಅನುಭವಿಸುತ್ತಿದ್ದಾರೋ ಅವರಿಗಾಗಿಯಷ್ಟೇ ತಿದ್ದುಪಡಿ ಎಂದರೆ, ಇಲ್ಲಿ ಅಸಾಂವಿಧಾನಿಕವೇನಿದೆ? ಇದನ್ನೆಲ್ಲ ಸುಪ್ರೀಂಕೋರ್ಟ್‌ ವಕೀಲರಾದ ಸಾಯಿ ದೀಪಕ್‌ ಇನ್ನೂ ಚೆನ್ನಾಗಿ ವಿವರಿಸಿದ್ದಾರೆ.

ಸಂವಿಧಾನದ ಆರ್ಟಿಕಲ್‌ 5ರಿಂದ 11ರವರೆಗೆ ಪೌರತ್ವದ ಬಗ್ಗೆ ಉಲ್ಲೇಖವಿದೆ. ಇದರ ಪ್ರಕಾರ ಈಗಾಗಲೇ ದೇಶದಲ್ಲಿರುವ ನಾಗರಿಕರನ್ನು ಜಾತಿ, ಧರ್ಮ ಇತ್ಯಾದಿಗಳ ಆಧಾರದಲ್ಲಿ ಭೇದ ಮಾಡುವಂತಿಲ್ಲ. ಆದರೆ, ಭಾರತಕ್ಕೆ ಭದ್ರತಾ ದೃಷ್ಟಿಯಿಂದ ತನ್ನ ವಲಸಿಗರ ಮೇಲೆ ಯಾವುದೇ ನೀತಿ, ಕಾನೂನನ್ನು ಅನ್ವಯ ಮಾಡುವುದಷ್ಟೇ ಅಲ್ಲ, ‘ಹೇರುವ’ ಅಧಿಕಾರವಿದೆ. ಮುಸ್ಲಿಮರು ಮಾತ್ರ ಬೇಡ ಅಂದರೂ ಯಾವನೂ ತಕರಾರು ಮಾಡುವುದಕ್ಕೆ ಅವಕಾಶವೇ ಇಲ್ಲ. ಇನ್ನು ಈ ಓವೈಸಿಯ ಮಾತೆಲ್ಲಾ ಕೇಳೋರು ಯಾರು?

ಇದೆಲ್ಲ ಬಿಡಿ, ಈ ಸಂವಿಧಾನವೆಲ್ಲ ಓದಿದೋರಿಗಷ್ಟೇ ಅರ್ಥವಾಗುವಂಥದ್ದು, ಅದನ್ನು ಹೋರಾಟದ ಅಸ್ತ್ರವನ್ನಾಗಿ ಮಾಡಿಕೊಂಡಿರುವ ದಡ್ಡರಿಗೆ ಹೇಳಿದರೂ ತಿಳಿಯುವುದಿಲ್ಲ. ಬಿಡಿ. ಕಾಂಗ್ರೆಸ್‌ ನಾಯಕರನ್ನು ಉಲ್ಲೇಖಿಸುತ್ತಾ ಕೆಳಹಂತದಲ್ಲೇ ಚರ್ಚಿಸೋಣ.
ಭಾರತದ ಸ್ವಾತಂತ್ರ್ಯವನ್ನು ಘೋಷಿಸುವಾಗ, ನೆಹರೂ ಹೇಳಿದ್ದರು, ‘ನಮ್ಮ ರಾಜಕೀಯದ ಗಡಿಯಾಚೆ ಹೋಗಿರುವ ಸಹೋದರ ಸಹೋದರಿಯರ ಬಗ್ಗೆಯೂ ನಮಗೆ ಚಿಂತೆಯಿದೆ. ಈಗ ಸಿಕ್ಕಿರುವ ಸ್ವಾತಂತ್ರ್ಯವನ್ನು ಹಂಚಿಕೊಳ್ಳುವುದಕ್ಕೆ ನಮ್ಮ ಜತೆಯಲ್ಲಿಲ್ಲ. ಆದರೆ ಅವರು ನಮ್ಮವರು, ಏನೇ ಆದರೂ ನಮ್ಮವರಾಗೇ ಇರುತ್ತಾರೆ. ಅವರ ಸುಖ ದುಃಖಗಳಲ್ಲಿ ನಮಗೂ ಪಾಲಿರಲಿ.’

2015ರ ಜೂನ್‌ 1ರಂದು ಅಸ್ಸಾಂ ಪ್ರದೇಶ ಕಾಂಗ್ರೆಸ್‌ ಕಮಿಟಿ ಹೇಳುತ್ತೆ ‘ವಿಭಜನೆಯ ನಂತರ ಹಿಂಸೆಯನ್ನು ಅನುಭವಿಸಿ ಭಾರತದಕ್ಕೆ ವಲಸೆ ಬಂದಿರುವ ಬೆಂಗಾಲಿ ಹಿಂದೂ, ಬೌದ್ಧರು, ಕ್ರಿಶ್ಚಿಯನ್ನರು ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರ, ಇನ್ನೂ ಬಗೆಹರಿಯದ ಪೌರತ್ವ ವಿಷಯವನ್ನು ತೆಗೆದುಕೊಳ್ಳುತ್ತೇವೆ.’
ಮೋದಿ ಹೇಳುವ ಅಲ್ಪಸಂಖ್ಯಾತರಲ್ಲಿ ಮುಸ್ಲಿಮರಿಲ್ಲ, ಈ ಕಾಂಗ್ರೆಸ್‌ ಹೇಳುವ ಅಲ್ಪಸಂಖ್ಯಾತರಲ್ಲಿ ಮುಸ್ಲಿಮರು-ರೋಹಿಂಗ್ಯಾಗಳಿದ್ದಾರೆಯೇ? ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟಾಗಿದೆ ಸಾರ್‌, ಇನ್ನೆಷ್ಟು ದಿನ ಗುಲಾಮಿ ಮನಸ್ಥಿತಿಯಲ್ಲಿ ಯೋಚಿಸುತ್ತೀರ? ಸತ್ಯ ತಿಳಿದುಕೊಳ್ಳಿ.

2003ರ ಡಿಸೆಂಬರ್‌ 18ರಂದು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಹೇಳಿದ್ದು ಹೀಗೆ – ‘ವಿಭಜನೆಯಾದ ಬಳಿಕ ಬಾಂಗ್ಲಾದೇಶ ಮತ್ತು ಅದರಂಥ ರಾಷ್ಟ್ರಗಳಲ್ಲಿ ಅಲ್ಲಿನ ಅಲ್ಪಸಂಖ್ಯಾತರು ಹಿಂಸೆಯನ್ನು ಅನುಭವಿಸಿದ್ದಾರೆ. ಅಂಥವರು ನಮ್ಮ ದೇಶಕ್ಕೆ ಬಂದಾಗ ಅವರಿಗೆ ಪೌರತ್ವ ನೀಡುವುದರಲ್ಲಿ ಉದಾರತೆ ತೋರುವುದು ನಮ್ಮ ನೈತಿಕ ಜವಾಬ್ದಾರಿಯಾಗಿರುತ್ತದೆ. ಪೌರತ್ವ ಕಾಯ್ದೆಯಲ್ಲಿ ತಿದ್ದುಪಡಿ ತರುವಾಗ ಇದನ್ನು ಮಾನ್ಯ ಉಪಪ್ರಧಾನಿಗಳು ಗಮನದಲ್ಲಿರಿಸಿಕೊಳ್ಳಬೇಕು’ ಎಂದರು. ಇದಕ್ಕೆ ಉಪಸಭಾಪತಿ ಹೇಳುತ್ತಾರೆ – ‘ಅಡ್ವಾಣಿಯವರೇ, ಪಾಕಿಸ್ಥಾನದಲ್ಲಿರುವ ಅಲ್ಪಸಂಖ್ಯಾತರೂ ಹಿಂಸಾಚಾರಕ್ಕೊಳಗಾಗಿದ್ದಾರೆ. ಅವರ ಬಗ್ಗೆಯೂ ಗಮನ ಹರಿಸಬೇಕು’. ಅಡ್ವಾಣಿ ಹೇಳ್ತಾರೆ – ‘ಮೇಡಂ, ಇದಕ್ಕೆ ನನ್ನ ಸಂಪೂರ್ಣ ಒಪ್ಪಿಗೆಯಿದೆ.’

ಹೇಳಿ ಈಗ, ನಿಮಗೆ ಕಾಂಗ್ರೆಸ್‌ ಮಾಡಿದರೆ ಜಾತ್ಯತೀತ, ಬಿಜೆಪಿ ಮಾಡಿದರೆ ಕೋಮುವಾದವಾ? ಈ ತಿದ್ದುಪಡಿ ಆಗಬೇಕು, ಆಗುತ್ತದೆ. ಮನಮೋಹನ್‌ ಸಿಂಗ್‌ ಆದಿಯಾಗಿ ಕಾಂಗ್ರೆಸ್‌ ನಾಯಕರಿಗೆ ಬಹಿರಂಗವಾಗಿ ಖುಷಿ ವ್ಯಕ್ತಪಡಿಸುವ ಸ್ವಾತಂತ್ರ್ಯವಿಲ್ಲದಿದ್ದರೂ, ಹೆಂಡತಿಗೆ ಹೇಳಿ ಹಾಲು ಕುಡಿಯುವುದಂತೂ ಖಂಡಿತ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya