ನ್ಯೂಜಿಲೆಂಡ್‌ನಲ್ಲಿ ಸತ್ತವರು ಉಗ್ರರೋ, ಸಜ್ಜನರೋ?

 

 

ಮಹಮ್ಮದ್‌ ಪೈಗಂಬರರು ಪ್ರಪಂಚವನ್ನು ಮೂರು ವಿಭಾಗಗಳನ್ನಾಗಿ ಮಾಡಿದರು. ದಾರ್‌-ಅಲ್‌-ಇಸ್ಲಾಂ, ದಾರ್‌-ಅಲ್‌-ಹರಬ್‌ ಮತ್ತು ದಾರ್‌-ಅಲ್‌-ಸಲ್ಹಾ.
ದಾರ್‌-ಅಲ್‌-ಇಸ್ಲಾಂ: ಮುಸ್ಲಿಮರು ಬಹುಸಂಖ್ಯಾತದಲ್ಲಿದ್ದರೆ ಮತ್ತು ಅದು ಮುಸ್ಲಿಂ ರಾಷ್ಟ್ರವಾಗಿದ್ದರೆ, ಎಲ್ಲ ಬೇರೆ ಧರ್ಮಗಳಿಗೆ ಬೆಳೆಯುವುದಕ್ಕೆ ಅವಕಾಶವೇ ಇರಬಾರದು. ಅವರಿಗೆ ಯಾವ ಸವಲತ್ತುಗಳೂ ಸಿಗುವುದಿಲ್ಲ. ಜೀವ ಉಳಿಯಬೇಕೆಂದರೆ, ಮತಾಂತರವಾಗಲೇಬೇಕು.

ದಾರ್‌ ಅಲ್‌ ಸಲ್ಹಾ: ಇದರಲ್ಲಿ, ಅಲ್ಪಸಂಖ್ಯಾತ ಮುಸ್ಲಿಮರನ್ನು ರಕ್ಷಿಸುವುದಕ್ಕೆ ಆಯಾ ದೇಶ, ಸರ್ಕಾರ ಒಪ್ಪಿಕೊಂಡಿರುತ್ತದೆ. ಆ ಸಮಯದಲ್ಲಿ ಒಂದಲ್ಲ ಒಂದು ಪ್ರಯತ್ನ ಮಾಡಿ, ಬಹುಸಂಖ್ಯಾತರಾಗುವುದಕ್ಕೆ ಪ್ರಯತ್ನಿಸುತ್ತಾ ಇರು ಎಂದು ಹೇಳಲಾಗಿದೆ.
ದಾರ್‌-ಅಲ್‌-ಹರಬ್‌: ಮುಸ್ಲಿಮರ ಆಳ್ವಿಕೆ ಇಲ್ಲದ ನಾಡು. ಮುಸ್ಲಿಮರು ಅತಿ ಕಡಿಮೆ ಸಂಖ್ಯೆಯಲ್ಲಿ ಇರುವ ದೇಶಗಳು ದಾರ್‌-ಅಲ್‌-ಹರಬ್‌ ವ್ಯಾಪ್ತಿಗೆ ಬರುತ್ತವೆ.

ಈಗ ದಾರ್‌-ಅಲ್‌-ಹರಬ್‌ನಂತೆ, ನ್ಯೂಜಿಲೆಂಡ್‌ ಇಷ್ಟು ವರ್ಷ ಇತ್ತು. ಅಂದರೆ, ಮುಸ್ಲಿಮರು ಕಡಿಮೆ, ಮುಸ್ಲಿಮರ ಮಾತಿಗೆ ಬೆಲೆಯೂ ಇಲ್ಲ. ಮುಸ್ಲಿಮರು, ತಾವಾಯಿತು ತಮ್ಮ ಕೆಲಸವಾಯಿತು ಎಂಬಂತಿದ್ದರು. ಕಳೆದ ವಾರ ಕ್ರೈಸ್ಟ್‌ ಚರ್ಚ್‌ ಮೇಲೆ ಯಾರೋ ತಲೆ ಕೆಟ್ಟ ವ್ಯಕ್ತಿಯೊಬ್ಬ ದಾಳಿ ಮಾಡಿ, 50 ಜನರನ್ನು ಬಲಿ ತೆಗೆದುಕೊಂಡ. ಹೌದು. ಸಾವು ನೋವಾಗಿದೆ. ಅದಕ್ಕೆ ಮರುಕ ವ್ಯಕ್ತಪಡಿಸಿಯಾಗಿದೆ. ಶೂಟ್‌ ಮಾಡಿದವನು ಸಿಕ್ಕಿದ್ದಾನೆ. ಶಿಕ್ಷೆ ಅನುಭವಿಸುತ್ತಿದ್ದಾನೆ.

ನಾವು ಈ ಸಮಯದಲ್ಲಿ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು.
1. ಇಡೀ ಪ್ರಪಂಚವೇ ಮರುಗುತ್ತಿದೆಯಲ್ಲ, ಅದಕ್ಕೆ ಸಾವಾದ ಕೆಲ ಮುಸ್ಲಿಮರು ಅರ್ಹರಾ? ನಮ್ಮೆಲ್ಲರ ಕಣ್ಣೀರಿನ ಯೋಗ್ಯತೆ ಅವರಿಗಿದೆಯಾ?
2. ನ್ಯೂಜಿಲೆಂಡ್‌ ಬದಲಾಗುತ್ತಿದೆಯಾ? ಅಥವಾ ಇಸ್ಲಾಮಿನಲ್ಲಿ ಸುಳ್ಳು ತಾಕಿಯಾಕ್ಕೆ ಒಳಗಾಗಿದೆಯಾ?
3. ಇಸ್ಲಾಂ, ಉಗ್ರಗಾಮಿಗಳು, ಮತಾಂತರ ಮಾಡುವವರು ಈಗ 50 ಜನರ ಸಾವಿನ ಪ್ರಯೋಜನವನ್ನು ತೆಗೆದುಕೊಂಡು ಜಿಹಾದ್‌ ಸಾರುತ್ತಿದ್ದಾರಾ?
ಈ ಮೂರು ಪ್ರಶ್ನೆಗಳನ್ನು ಓದಿದಾಗ, ನೀವು ನನ್ನನ್ನು ಕೋಮುವಾದಿ ಎನ್ನಬಹುದು. ಏನಿಂಥ ಅಸಂಬದ್ಧ ಪ್ರಶ್ನೆ ಎನ್ನಬಹುದು. ಆದರೆ, ಇದಕ್ಕೆ ಸಾಕ್ಷಿ ಸಮೇತ ಇಡುವ ವಾದವನ್ನು ಮಾತ್ರ ತಿರಸ್ಕರಿಸಲಾಗದು.

ಮೊದಲನೇ ಪ್ರಶ್ನೆಗೆ ಉತ್ತರ:
ಕ್ರೈಸ್ಟ್‌ ಚರ್ಚ್‌ನಲ್ಲಿ ಅಮಾಯಕ ಮುಸ್ಲಿಮರನ್ನು ಕೊಲ್ಲಲಾಗಿದೆ ಸೇರಿ ಇತ್ಯಾದಿಗಳನ್ನು ಬಿಂಬಿಸುತ್ತಿದ್ದಾರೆ. ಇದು ಪ್ರಪಂಚದ ಎಲ್ಲ ದಿನಪತ್ರಿಕೆಗಳಲ್ಲೂ ಪ್ರಕಟವಾಗಿದೆ. ಇವರಿಗೆ ಮಾನಸಿಕ, ನೈತಿಕ ಬೆಂಬಲ ನೀಡುವುದಕ್ಕೆ, ಟಿವಿ ಮಾಧ್ಯಮದ ಆ್ಯಂಕರ್‌ಗಳು ಮುಸ್ಲಿಂ ಸಾಂಪ್ರದಾಯಿಕ ಉಡುಗೆಯನ್ನೇ ಧರಿಸಿ ಸುದ್ದಿ ಓದಿದರು. ದಿನ ಪತ್ರಿಕೆಗಳ ಮುಖಪುಟ, ಸಂಪಾದಕೀಯಗಳು ಖಾಲಿ ಪ್ರಕಟವಾದವು. ಅಷ್ಟೇ ಯಾಕೆ, ಸ್ವತಃ ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡಾ ಅರ್ಡರ್ನ್‌ ಸಹ ಮುಸ್ಲಿಂ ಸಾಂಪ್ರದಾಯಿಕ ಉಡುಗೆ ತೊಟ್ಟು, ತಾನು ಮುಸ್ಲಿಮರ ಪರ ಇದ್ದೇನೆ ಎಂಬ ಸಂದೇಶವನ್ನು ಇಡೀ ಪ್ರಪಂಚಕ್ಕೇ ಹಂಚಿದರು. ಆದರೆ, ಇಷ್ಟೆಲ್ಲ ಮಾಡಿಸಿಕೊಳ್ಳುವುದಕ್ಕೆ ಸತ್ತ ಮುಸ್ಲಿಮರಲ್ಲಿ ಎಷ್ಟೋ ಜನರು ಅರ್ಹರೇ ಇರಲಿಲ್ಲ.

ಉದಾಹರಣೆಗೆ ಒಬ್ಬ ವ್ಯಕ್ತಿಯ ಪ್ರೊಫೈಲ್‌ ನೋಡಿದೆ. ಸೈಯದ್‌ ಅರೀಬ್‌ ಅಹ್ಮದ್‌. ಪಾಕಿಸ್ಥಾನದಲ್ಲಿ ಚಾರ್ಟರ್ಡ್‌ ಅಕೌಂಟಿಂಗ್‌ ಓದಿದ ಹುಡುಗ ನ್ಯೂಜಿಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ. ಈತ ಫೇಸ್ಬುಕ್‌ನಲ್ಲಿ ಘಜ್ವಾ ಇ ಹಿಂದ್‌ ಎಂಬ ಗ್ರೂಪ್‌ನಲ್ಲೂ ಇದ್ದಾನೆ. ಘಜ್ವಾ ಇ ಹಿಂದ್‌, ಎಂಬುದು ಭಾರತವನ್ನು ನಾಶ ಮಾಡುವುದಕ್ಕೆಂದೇ ಇರುವ ಸಂಘಟನೆ. ನಿಜವಾಗಿ ಇವನು ಚಾರ್ಟರ್ಡ್‌ ಅಕೌಂಟೆಂಟೇ ಆಗಿದ್ದರೆ, ಆ ಕೆಲಸವನ್ನು ಮಾಡಿಕೊಂಡೇ ಇರಬೇಕಿತ್ತು. ಭಾರತವನ್ನು ನಾಶ ಮಾಡಲು ಹೊರಟಿರುವ ಉಗ್ರ ಸಂಘಟನೆಗಳ ಸಹವಾಸವೇಕೆ?

ಅಷ್ಟೇ ಅಲ್ಲ, ಇವನ ಹೊರತಾಗಿ ಸುಮಾರು ಜನ ಸಿರಿಯಾದಿಂದ ಪಾಸ್‌ಪೋರ್ಟ್‌ ಇಲ್ಲದೇ ಬಂದವರು, ಉಗ್ರ ಸಂಘಟನೆಗಳ ಬಗ್ಗೆ ಒಲವಿರುವವರೂ ಇದ್ದಾರೆ. ಸಂತಾಪ ಸೂಚಿಸಬೇಕಿದ್ದರೆ, ಯಾರು ಅರ್ಹರೋ ಅವರಿಗೇ ಸೂಚಿಸಬೇಕಲ್ಲವೇ? ಅದನ್ನು ಬಿಟ್ಟು ಉಗ್ರರನ್ನು, ಉಗ್ರರ ಬೆಂಬಲಿಗರನ್ನು ಮತ್ತು ಒಳ್ಳೆಯವರನ್ನು ಗುಂಡಿಯಲ್ಲಿ ಮುಚ್ಚಿ ಹಾಕಿ, ಕಣ್ಣೀರು ಹಾಕಿಬಿಟ್ಟರೆ, ಉಗ್ರರೂ ಶಹೀದ್‌ಗಳೇ ಎಂದು ಒಪ್ಪಿಕೊಂಡಹಾಗಾಯಿತಲ್ಲ? ಇದು ಯಾವ ಲೆಕ್ಕದಲ್ಲಿ? ಇಸ್ಲಾಮಿನಲ್ಲಿ ಉಗ್ರನಿಗೂ ಒಳ್ಳೆಯ ಮುಸ್ಲಿಮನಿಗೂ ವ್ಯತ್ಯಾಸವೇ ಇಲ್ಲವೇ?

ಎರಡನೇ ಪ್ರಶ್ನೆಗೆ ಉತ್ತರ: ದಾರ್‌-ಅಲ್‌-ಹರಬ್‌ ಅವಸ್ಥೆಯಲ್ಲಿದ್ದ ನ್ಯೂಜಿಲೆಂಡ್‌ ಈಗ ದಾರ್‌-ಅಲ್‌-ಸಲ್ಹಾಗೆ ಬಂದಿದೆ. ಅಂದರೆ ಒಂದು ಹಂತ ಮುಂದಕ್ಕೆ ಹೋಗಿದೆ. ಈಗ ನ್ಯೂಜಿಲೆಂಡ್‌ನಲ್ಲಿ ನಡೆದ ಒಂದೇ ಒಂದು ಘಟನೆಯಿಂದ, ಮುಸ್ಲಿಮರು ಒಂದು ಹಂತ ಮೇಲೆ ಹೋಗಿ, ಮತಾಂತರದ ಕೆಲಸಕ್ಕೆ ಇಳಿದಿದ್ದಾರೆ. ಮತಾಂತರ ಮಾಡುವ ಶಿಬಿರಗಳು ಹೆಚ್ಚಾಗುತ್ತಿವೆ. ಅಷ್ಟೇ ಯಾಕೆ, ನ್ಯೂಜಿಲೆಂಡ್‌ನ ಪ್ರಧಾನಿ ಜಸಿಂಡಾ ಆರ್ಡರ್ನ್‌ರನ್ನು ಭೇಟಿ ಮಾಡಿದ ಮುಸ್ಲಿಂ ಹುಡುಗ, ನಿಜ ಹೇಳುತ್ತಿದ್ದೇನೆ. ನಿಮ್ಮನ್ನು ಭೇಟಿ ಮಾಡಲಾಗಿಯೇ ನಾನು ಇಲ್ಲಿಗೆ ಬಂದೆ. ಕಳೆದ ಮೂರು ದಿನಗಳಿಂದ ನಾನು ನಿರಂತರ ಅಳುತ್ತಿದ್ದೇನೆ. ಎಲ್ಲ ನಾಯಕರೂ ನಿಮ್ಮನ್ನು ನೋಡಿ ಕಲಿಯಲಿ ಎಂದು ಅಲ್ಲಾಹುವಿನಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಹಾಗೇ ಇನ್ನೊಂದನ್ನೂ ಪ್ರಾರ್ಥಿಸಿಕೊಂಡಿದ್ದೇನೆ. ನನ್ನ ಆಸೆ ಏನೆಂದರೆ, ಒಂದು ದಿನ ನೀವು ಇಸ್ಲಾಮನ್ನು ಒಪ್ಪಿಕೊಳ್ಳುತ್ತೀರ ಮತ್ತು ನಿಮ್ಮ ಜತೆ ಜನ್ನತ್‌(ಸ್ವರ್ಗ)ನಲ್ಲಿ ಇರಬೇಕು ಎಂದು ಹೇಳಿದ.

ಇಸ್ಲಾಮಿನ ಈ ತಾಕಿಯಾಕ್ಕೆ ಬಲಿಯಾಗದ ಜಸಿಂಡಾ ಆರ್ಡರ್ನ್‌, ನೋಡಿ ಇಸ್ಲಾಂ ಮಾನವೀಯತೆ ಕಲಿಸಿಕೊಡುತ್ತದೆ. ನನಗೆ ಅದು ಈಗಾಗಲೇ ಇದೆ ಅಂದುಕೊಂಡಿದ್ದೇನೆ ಎಂದು ಹೊರಟು ಹೋದರು. ಇನ್ನೂ ಮುಸ್ಲಿಮರ ತಲೆ ಸವರುತ್ತಲೇ ಇದ್ದ ನ್ಯೂಜಿಲೆಂಡ್‌ನಲ್ಲಿ ಅದೆಷ್ಟು ಸುದ್ದಿಯಾಯಿತೋ ಗೊತ್ತಿಲ್ಲ. ಆದರೆ, ಸುದ್ದಿಯಾಗಿ ಪಾರ್ಟಿ ಮಾಡಿದ್ದು ಮಾತ್ರ ಪಾಕಿಸ್ಥಾನದಲ್ಲಿ. ಪಾಕ್‌ ಮಾಧ್ಯಮಗಳು ಇದನ್ನು ಪ್ರೈಂ ಟೈಮಿನಲ್ಲಿ ಪ್ರಸಾರ ಮಾಡಿದ್ದವು.

ಮೂರನೇ ಪ್ರಶ್ನೆಗೆ ಉತ್ತರ: ನ್ಯೂಜಿಲೆಂಡಿಗರು ಇನ್ನೂ ಮರುಕ ವ್ಯಕ್ತಪಡಿಸತ್ತಾ, ಮುಸ್ಲಿಂ ಸಾಂಪ್ರದಾಯಿಕ ಉಡುಗೆ ತೊಡುತ್ತಾಇದ್ದಾರೆ. ಇದೇ ಸನ್ನಿ ಮುಂದುವರಿದರೆ, ಗಂಡುಮಕ್ಕಳೆಲ್ಲ ಸುನ್ನತ್‌ ಮಾಡಿಸಿಕೊಂಡರೂ ಅಚ್ಚರಿಯಿಲ್ಲ. ಆದರೆ, ಉಗ್ರಗಾಮಿಗಳು ಮತ್ತು ಭಯೋತ್ಪಾದನಾ ಸಂಘಟನೆಗಳು ಇವೆಲ್ಲ ಹಂತವನ್ನು ದಾಟಿ ಅದಾಗಲೇ ಬಹಳ ಮುಂದಿದ್ದಾರೆ.

ಅಂದರೆ , ಜಿಹಾದಿ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಈ 50 ಜನರ ಸಾವನ್ನು ಮುಂದಿಟ್ಟುಕ್ಕೊಂಡು ಹೇಗೆ, ಬಿಳಿಯರು, ಕ್ರಿಶ್ಚಿಯನ್ನರು ಅಥವಾ ಪಾಶ್ಚಾತ್ಯ ರಾಷ್ಟ್ರಗಳು ಇಸ್ಲಾಂ ವಿರುದ್ಧ ಇವೆ, ಮುಸ್ಲಿಮರ ವಿರುದ್ಧ ಇದೆ ಎಂಬುದನ್ನು ವ್ಯಾಪಕವಾಗಿ ಪ್ರಚಾರ ಮಾಡಿ, ಆದಷ್ಟು ಜನರನ್ನು ಇಸ್ಲಾಮಿಗೆ, ಆ ಮೂಲಕ ಭಯೋತ್ಪಾದನೆಗೆ ತರುವ ನೀಲಿನಕ್ಷೆಯನ್ನೂ ತಯಾರು ಮಾಡಿಯಾಗಿದೆ.

ಆನ್‌ಲೈನ್‌ನ ಭಯೋತ್ಪಾದನಾ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಸೈಟ್‌ ಇಂಟಲಿಜೆನ್ಸ್‌ ಗ್ರೂಪ್‌ನ ರೀಟಾ ಕ್ಯಾಟ್ಸ್‌ ಹೇಳುತ್ತಾರೆ, ‘ಕ್ರೈಸ್ಟ್‌ ಚರ್ಚ್‌ ದಾಳಿ ಮಾಡಿದವನು, ವಿಶ್ವಮಟ್ಟದ ಜಿಹಾದಿ ಚಳವಳಿಗೆ ಬಹಳ ದೊಡ್ಡ ಉಪಕಾರ ಮಾಡಿದಂತಾಗಿದೆ. ಇನ್ನು 10 ವರ್ಷ ನಡೆಯುವ ಹಲವಾರು ಭಯೋತ್ಪಾದನಾ ದಾಳಿಗಳಿಗೆ ಈ ಘಟನೆಯ ಪ್ರತೀಕಾರ ಎಂದು ಭಯೋತ್ಪಾದನಾ ಸಂಘಟನೆಗಳು ಹೇಳಿಕೊಳ್ಳುತ್ತವೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ’ ಎಂದಿದ್ದಾರೆ.

ಐಸಿಸ್‌ನ ವಕ್ತಾರ, ಅಬು ಅಲ್‌ ಹಸನ್‌ ಮುಹಾಜಿರ್‌ ಫೇಸ್ಬುಕ್‌ನಲ್ಲಿ ಬಿಡುಗಡೆ ಮಾಡಿದ ಆಡಿಯೋ ಸಂದೇಶದಲ್ಲಿ, ‘ಕ್ರಾಸ್‌ ಚಿಹ್ನೆ ಹೊತ್ತ ರಾಷ್ಟ್ರಗಳು ವಿಶ್ವದಲ್ಲಿರುವ ಎಲ್ಲ ಮುಸ್ಲಿಮರನ್ನು ಕೊಲ್ಲುತ್ತಾ ಬರುತ್ತಿವೆ. ಕ್ರೈಸ್ಟ್‌ ಚರ್ಚ್‌ನಲ್ಲಿ ಕಂಡ ಆ ಘೋರ ದೃಶ್ಯಗಳನ್ನು ನೋಡಿ ಮಲಗಿರುವ ಮುಸ್ಲಿಮರು ಎದ್ದೇಳಬೇಕು. ಎಲ್ಲ ಬೆಂಬಲಿಗರೂ ಇದರ ವಿರುದ್ಧ ಸೇಡು ತೀರಿಸಿಕೊಳ್ಳಬೇಕು’ ಎಂದು ಆಕ್ರೋಶದಿಂದ ಮಾತಾಡಿದ್ದಾರೆ. ಈ ಆಡಿಯೋವನ್ನು ಕೇಳಿದವನು, ಐವತ್ತು ಜನರ ಬದಲಿಗೆ, ನೂರೈವತ್ತು ಜನರ ಪ್ರಾಣ ತೆಗೆಯುವ ಮನಸ್ಸು ಮಾಡುವುದು ನಿಶ್ಚಿತ.

ಅಲ್‌-ಖೈದಾ ಉಗ್ರ ಸಂಘಟನೆಯ ಹಿರಿಯ ಸದಸ್ಯ ಅಬು ಅಬ್ದುಲ್‌ ಕರೀಮ್‌ ಅಲ್‌ ಘರ್ಬಿ ಎಂಬುವವನು ‘ಇದೇ ರೀತಿಯ ಸೇಡನ್ನು ಬೆಂಬಲಿಗರು ತೀರಿಸಿಕೊಳ್ಳಬೇಕು’ ಎಂದು ಬರೆದುಕೊಂಡಿದ್ದಾನೆ. ಭದ್ರತಾ ಇಲಾಖೆಗಳ ಅಧಿಕಾರಿಗಳು ಹೇಳುತ್ತಿರುವುದೂ ಇದನ್ನೇ, ಮುಸ್ಲಿಮರನ್ನು ಕೊಂದ ವಿಡಿಯೋ ಒಂದು ಸಾಕು, ಇನ್ನಷ್ಟು ವರ್ಷ ಉಗ್ರಗಾಮಿಗಳು ಇದನ್ನೇ ಮುಂದಿಟ್ಟುಕೊಂಡು ಭಯೋತ್ಪಾದನೆ ನಡೆಸುತ್ತಾರೆ ಎಂದಿದ್ದಾರೆ.

ಅಜ್ಜಿಗೆ ಅರಿವೆ ಚಿಂತೆಯಾದರೆ, ಮತ್ತೊಬ್ಬನ ಚಿಂತೆ ಎಂಬ ಮಾತನ್ನು ಕೇಳಿರುತ್ತೀರ. ಇದೂ ಹಾಗೆ, ಎಲ್ಲರೂ ಸತ್ತವರಿಗೆ ಸಂತಾಪ ಸೂಚಿಸುತ್ತಿದ್ದರೆ, ಅದೇ ಬಿಸಿಯಲ್ಲಿ ನಮ್ಮ ಧರ್ಮವನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂಬ ಚಿಂತೆಯಲ್ಲಿ ಉಗ್ರಗಾಮಿಗಳು, ಇಸ್ಲಾಮಿಕ್‌ ಮೂಲಭೂತವಾದಿಗಳು, ಮತಾಂತರ ಮಾಡುವವರು ನಿರತರಾಗಿದ್ದಾರೆ.

ಪಾಕಿಸ್ಥಾನದಲ್ಲಿ ಹಿಂದೂ ಹುಡುಗಿಯರನ್ನು ಅಪಹರಣ ಮಾಡಿ, ಅವರನ್ನು ಇಸ್ಲಾಮಿಗೆ ಮತಾಂತರ ಮಾಡಲಾಗಿದೆ. ಇದು ಮತ್ತೊಂದು ಮುಖ. ಇದರ ಬಗ್ಗೆ ಎಷ್ಟು ಜನರು ಮಾತಾಡಿದ್ದಾರೆಂದು ಹುಡುಕಿದರೆ, ರಸ್ತೆಯಲ್ಲಿ ನಾಲ್ಕು ಜನ ಸಿಗುವುದಿಲ್ಲ. ಅದೇ ನ್ಯೂಜಿಲೆಂಡ್‌ ದಾಳಿಯ ಬಗ್ಗೆ ಕೇಳಿ. ಅಯ್ಯೋ ಪಾಪ. ಹಾಗೆ ಮಾಡಬಾರದಿತ್ತು, ಛೇ ಎಂದು ಮರುಗುವವರೆಷ್ಟೋ, ಬುರ್ಖಾ-ಟೊಪ್ಪಿ ಹಾಕಿ ಧೈರ್ಯ ತುಂಬುವವರೆಷ್ಟೋ. ಸೋಶಿಯಲ್‌ ಮೀಡಿಯಾದಲ್ಲಿ ಸಿಗುವ ನೂರು ಲೈಕಿಗಾಗಿ ಹಾಕಿದ ಫೋಟೊಗಳ, ಸೃಷ್ಟಿಸಿದ ಹ್ಯಾಷ್‌ಟ್ಯಾಗ್‌ಗಳ ಪರಿಣಾಮವನ್ನು ಮುಂದಿನ 10 ವರ್ಷಗಳವರೆಗೆ ಅನುಭವಿಸಬೇಕಾಗುತ್ತದೆ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya