ಅಭಿವ್ಯಕ್ತಿ ಸ್ವಾತಂತ್ರ್ಯ ಮುಸ್ಲಿಮರ ಮನೆಯ ಜೀತದಾಳೇ?

 

ಭಾರತದಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತವಾದ ಹೇಗಿದೆಯಂದರೆ, ಹಿಂದೂಗಳ ಬಗ್ಗೆ ಅಲ್ಪಸಂಖ್ಯಾತರು ಮಾತಾಡಬಹುದು. ಆದರೆ ಅದೇ ಅಲ್ಪಸಂಖ್ಯಾತರ ಬಗ್ಗೆ ಹಿಂದೂಗಳು ಮಾತಾಡಿದರೆ, ಅದು ಮಹಾಪರಾಧವಾಗಿಬಿಡುತ್ತದೆ. ಅದು ಯಾರಿಗೋ ಮಾಡಿದ ಅವಮಾನವಾಗಿಬಿಡುತ್ತದೆ. ಜೀವ ಬೆದರಿಕೆಗಳು ಬರುತ್ತವೆ. ಕ್ಷಮೆ ಕೇಳುವವರೆಗೂ ಬಿಡುವುದಿಲ್ಲ. ಕ್ಷಮೆ ಕೇಳಿದ ಮೇಲೆ ಸುಮ್ಮನೆ ಬಿಡುತ್ತಾರಾ? ಅದೂ ಇಲ್ಲ. ಕ್ಷಮೆ ಕೇಳಿದ ಮೇಲೆ ಮತ್ತಷ್ಟು ಹೆಚ್ಚು ಮಾಡಿ, ರಂಪ ಮಾಡುತ್ತಾರೆ.

ಇಂಥದ್ದೊಂದು ಘಟನೆ ಮೊನ್ನೆ ಕನ್ನಡದ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ನಡೆಯಿತು. ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗಿದ್ದು ಅದರ ನಿರೂಪಕ, ಸಂಪಾದಕ ಅಜಿತ್‌ ಹನಮಕ್ಕನವರ್‌. ಭಗವಾನ್‌ ಎಂಬ ಸ್ವಘೋಷಿತ ಲೇಖಕನೊಬ್ಬ ರಾಮನ ಬಗ್ಗೆ ರಾಮಾಯಣದಲ್ಲಿ ಇಲ್ಲದ ಸಂಗತಿಯನ್ನು ಬರೆದು ಅದರ ಬಗ್ಗೆ ಒದರಿದ್ದ. ಒಂದು ಧರ್ಮದ ಭಾವನೆಗಳನ್ನು ಏಕೆ ಹಾಗೆ ಕೆರಳಿಸಬೇಕು ಎಂಬ ಬಗ್ಗೆ ಚರ್ಚೆ ಮಾಡುತ್ತಿರುವಾಗ, ಮಹೇಶ್‌ ಚಂದ್ರಗುರು ಅವರು ರಾಮನೂ ಸೇರಿದಂತೆ ಯಾರೂ ಪ್ರಶ್ನಾತೀತರಲ್ಲ ಎಂದರು. ಅವರಿಗೆ ಉತ್ತರ ಕೊಡುವಾಗ, ಸರಿಯಾಗಿ ಹೇಳಿದ್ದೀರ, ಯಾವ ವ್ಯಕ್ತಿ ಕೂಡ ಪ್ರಶ್ನಾತೀತನಲ್ಲ. ಈ ಒಂದು ಕಾನಿಧಿಡೆನ್ಸನ್ನ ಕೊಟ್ಟಿದ್ದು ನಿಮಗೆ ಈ ಸಂವಿಧಾನವೇ. ರಾಮ ಬದುಕಿದ್ದಾಗಲೇ ಆತ ಪ್ರಶ್ನಾತೀತನಾಗಿರಲಿಲ್ಲ. ಅಗಸನೂ ಕೂಡ ಪ್ರಶ್ನಿಸಿದ್ದ. ಯಾರೂ ಪ್ರಶ್ನಾತೀತರಲ್ಲ ಎಂದು ಹೇಳುವ ನೀವು ಯಾರನ್ನು ಪ್ರಶ್ನಿಸಿದರೆ ಅತ್ಯಂತ ಕಡಿಮೆ ಅಪಾಯ ಆಗಬಹುದೋ ಅಂಥವರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ. ರಾಮನನ್ನು ಪ್ರಶ್ನೆ ಮಾಡಬಹುದು. 53 ವರ್ಷ ವಯಸ್ಸಿನಲ್ಲಿ 6 ವರ್ಷದ ಪುಟ್ಟ ಹುಡುಗಿಯನ್ನು ಮದುವೆಯಾದವರನ್ನು ಪ್ರಶ್ನೆ ಮಾಡುವುದಿಲ್ಲ. ಯಾರ ಬಗ್ಗೆ ಪ್ರಶ್ನೆ ಮಾಡಿದರೆ ನಿಮ್ಮ ಮನೆಗೆ ಬಾಂಬ್‌ ಬೀಳುತ್ತೆ ಅನ್ನೋದು ಗೊತ್ತೋ ಅವರನ್ನು ಪ್ರಶ್ನೆ ಮಾಡುವುದಿಲ್ಲ ಎಂದು ಹೇಳಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಆದರೆ, ಅಜಿತ್‌ ಹನಮಕ್ಕನವರ್‌ ಇಲ್ಲಿ ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂಬುದೇ ಸ್ಪಷ್ಟವಾಗಿಲ್ಲ. ಹೀಗಿರುವಾಗ, ಒಂದು ಸಮುದಾಯ, ನಿರ್ದಿಷ್ಟವಾಗಿ ಮುಸ್ಲಿಮರು ರೊಚ್ಚಿಗೆದ್ದಿದ್ದು ಏಕೆ? ಅವರು ಪ್ರತಿಭಟಿಸುತ್ತಿರುವುದು ಏಕೆ? ಮಂಗಳೂರು ಮುಸ್ಲಿಮ್ಸ್‌ ಎಂಬ ಐಸಿಸ್‌ ಬೆಂಬಲಿಗರ ಉಗ್ರರ ಫೇಸ್ಬುಕ್‌ ಪೇಜ್‌ ಅಜಿತ್‌ ಅವರ ಪತ್ನಿಯ ಫೋಟೊ ಹಾಕಿ ನೀನು ವಿಧವೆಯಾಗುತ್ತೀಯ ಎಂದು ಹೆದರಿಸಿದ್ದೇಕೆ? ಇತಿಹಾಸದಲ್ಲಿ ಮಹಮ್ಮದರೊಬ್ಬರೇ ಹಾಗೆ ಮದುವೆಯಾಗಿದ್ದಾ? ಏನಿಲ್ಲವಲ್ಲ? ಹಾಗೆ ಬಾಲ್ಯವಿವಾಹವಾಗಿರುವ ಉದಾಹರಣೆಗಳು ಎಷ್ಟು ಬೇಕು ಕೇಳಿ.

ಕ್ರಿಸ್ತಶಕ 350ರಲ್ಲಿ ಸಂತ ಅಗಸ್ಟೀನ್‌ 10 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಾರೆ. ಕ್ರಿಸ್ತಶಕ 1400ರಲ್ಲಿ ಎರಡನೇ ರಾಜ ರಿಚರ್ಡ್‌ 7 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಾನೆ. ಕ್ರಿಸ್ತಶಕ 1500ರಲ್ಲಿ ಎಂಟನೇ ಹೆನ್ರಿ 6 ವರ್ಷದ ಬಾಲಕಿಯನ್ನು ಮದುವೆಯಾಗಿದ್ದ. ಅಜಿತ್‌ ಅವರು ಇದರ ಬಗ್ಗೆಯೂ ಉಲ್ಲೇಖಿಸುತ್ತಿರಬಹುದಲ್ಲ? ಮುಸ್ಲಿಮರೇ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ?

1983ಗಿಂತಲೂ ಮುಂಚೆ ಪಾದ್ರಿಗಳು 12 ವರ್ಷದ ಬಾಲಕಿಯರನ್ನು ಮದುವೆಯಾಗುವುದಕ್ಕೆ ಕ್ಯಾಥೋಲಿಕ್‌ ಕ್ಯಾನನ್‌ ಕಾನೂನೇ ಅನುಮತಿ ನೀಡಿತ್ತು. ಅಷ್ಟೇ ಯಾಕೆ, ಬಹಳ ಅಭಿವೃದ್ಧಿ ಹೊಂದಿದ ದೇಶ ಎಂದು ಅಮೆರಿಕವನ್ನು ನಾವು ಕರೆಯುತ್ತೀವಲ್ಲ, 1880ಕ್ಕೂ ಮುನ್ನ,ಡೆಲವೇರ್‌ನಲ್ಲಿ ಹುಡುಗಿಗೆ ಮದುವೆ ಮಾಡಬೇಕೆಂದರೆ, ಕನಿಷ್ಠ ಅವಳಿಗೆ 7 ವರ್ಷ ಆಗಿರಬೇಕು ಎಂಬ ಕಾನೂನು ಇದ್ದರೆ, ಕ್ಯಾಲಿಫೋರ್ನಿಯಾದಲ್ಲಿ ಅದು ಕನಿಷ್ಠ 10 ಷರ್ವ ವಯಸ್ಸಾಗಿರಬೇಕು ಎಂಬಂತಿತ್ತು.

ಆದರೆ ಮಂಗಳೂರಿನ ಪಾಂಡೇಶ್ವರದಲ್ಲಿ ಅಜಿತ್‌ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಅಜಿತ್‌ ಯಾವ ಧರ್ಮದ ಬಗ್ಗೆ ಹೇಳಿದ ಮಾತು ಎಂಬುದನ್ನೇ ಗ್ರಹಿಸದೇ ಮಹಮ್ಮದರಿಗೆ ಮಾಡಿದ ಅಪಮಾನ ಎಂದು ದೂರು ನೀಡಲಾಗಿದೆ.

ಸರಿ, ಈಗ ಇಸ್ಲಾಂನ ದಾರಿಯಲ್ಲೇ ಚರ್ಚಿಸೋಣ. ಮಂಗಳೂರು ಮುಸ್ಲಿಮ್ಸ್‌ ಎಂಬ ಉಗ್ರರ ಫೇಸ್ಬುಕ್‌ ಪೇಜ್‌ ಪ್ರವಾದಿ ಮಹಮ್ಮದರಿಗೆ ಚಿಕ್ಕ ವಯಸ್ಸಿನ ಹುಡುಗಿಯ ಜತೆ ಮದುವೆಯಾಗಿದ್ದರೂ ಅದು ಲೋಕ ಕಲ್ಯಾಣಕ್ಕಾಗಿ ಎಂದು ಬರೆದುಕೊಂಡಿದ್ದಾರೆ. ಅಲ್ಲಿಗೆ ಅಜಿತ್‌ ಹೇಳಿದ್ದು ಸತ್ಯ ಎಂದೇ ಆಯಿತಲ್ಲ?

ಆಯ್ತು, ಉಗ್ರರ ಪೇಜ್‌ನ್ನು ಉಲ್ಲೇಖಿಸುವುದು ಬೇಡ. ಹದೀಸ್‌ ಅನ್ನೇ ಉಲ್ಲೇಖಿಸೋಣ. ಹದೀಸ್‌ ಉಲ್ಲೇಖವನ್ನೇ ಕೊಡುತ್ತೇನೆ. ಮುಸ್ಲಿಮರು ಕುರಾನ್‌ ನಂತರದ ಸ್ಥಾನವನ್ನು ಯಾವುದಕ್ಕಾದರೂ ಕೊಡುತ್ತಾರೆ ಎಂದರೆ ಅದು ಹದೀಸ್‌ಗೆ. ಇದರಲ್ಲಿ ಮಹಮ್ಮದರು ಮದುವೆಯಾಗಿರುವ ಪುಟ್ಟ ಹುಡುಗಿ ಆಯೀಷಾ(ರಅ)ಳೇ 2200 ಹದೀಸ್‌ಗಳನ್ನು ಬರೆದಿದ್ದಾಳೆ. ತನಗೆ ಆರು ವರ್ಷವಿದ್ದಾಗಲೇ ಮದುವೆ ಮಾಡಲಾಗಿದೆ ಎಂದು ಸ್ವತಃ ಆಕೆಯೇ ಹೇಳಿಕೊಂಡಿದ್ದಾಳೆ. ತನ್ನ ಬಾಲ್ಯದ ಆ ದಿನವನ್ನು ಆಕೆ ನೆನೆಸಿಕೊಂಡಿದ್ದಾಳೆ.

ಇದನ್ನು ನಾನು ಹೇಳುತ್ತಿಲ್ಲ ಅಥವಾ ಅಜಿತ್‌ ಹೇಳಬೇಕೆಂದಿಲ್ಲ. ಇದು ಇತಿಹಾಸ.
ನೆನಪಿರಲಿ, ಮುಂದೆ ಬರೆದಿರುವ ವಿಷಯಗಳು ನನ್ನ ಅಭಿಪ್ರಾಯವಾಗಿರದೇ ನೇರ ಹದೀಸ್‌ನಿಂದಲೇ ಉಲ್ಲೇಖಿಸಲಾಗಿದೆ. ಶಹಿ ಬುಖಾರಿಯ ಸಂಪುಟ 5, ಪುಸ್ತಕ 58ರ ಹದೀಸ್‌ ಸಂಖ್ಯೆ 234ರಲ್ಲಿ ಸ್ವತಃ ಆಯೀಷಾ(ರ ಅ) ಹೇಳುವ ಮಾತಿದು:
‘ನಾನು ಆರು ವರ್ಷ ವಯಸ್ಸಿನವಳಾಗಿದ್ದಾಗ ಪ್ರವಾದಿಗೆ ನನ್ನ ಜತೆ ನಿಶ್ಚಿತಾರ್ಥವಾಯಿತು. ನಾವು ಮದೀನಾಗೆ ಹೋಗಿ ಬನಿ-ಅಲ್‌-ಹರಿತ್‌ ಬಿನ್‌ ಖಾಝ್‌ರಾಜ್‌ ಅವರ ಮನೆಯಲ್ಲಿದ್ದೆವು. ನಂತರ ನಾನು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ನನ್ನ ಕೂದಲು ಉದುರಿದವು. ನಂತರ ಪುನಃ ಅದು ಬೆಳೆಯಿತು. ನನ್ನ ಕೆಲವು ಸ್ನೇಹಿತೆಯರ ಜೊತೆ ನಾನು ಅಂದು ಬಹಳಷ್ಟು ಕಾಲ ಆಟ ಆಡುತ್ತಿರುವಾಗ ನನ್ನ ಬಳಿಗೆ ನನ್ನ ತಾಯಿ, ಉಮ್‌ ರೂಮಾನ್‌ ಬಂದಳು. ಅವಳು ನನ್ನನ್ನು ಕರೆದಳು, ನನ್ನಿಂದ ಏನು ಕೆಲಸ ಆಗಬೇಕಿತ್ತೋ ಗೊತ್ತಿಲ್ಲ. ನಾನು ಅವಳ ಬಳಿಗೆ ಹೋದೆ. ಅವಳು ನನ್ನ ಕೈಯನ್ನು ಹಿಡಿದು ಕರೆತಂದು ಮನೆಯ ದ್ವಾರದಲ್ಲಿ ನಿಲ್ಲಿಸಿದಳು. ನಾನು ಆಗ ತೀವ್ರವಾಗಿ ಉಸಿರಾಡುತ್ತಿದ್ದೆ. ಸ್ವಲ್ಪ ಸಮಯದ ನಂತರ ನನ್ನ ಉಸಿರಾಟ ಸಹಜ ಸ್ಥಿತಿಗೆ ಬಂದಾಗ, ಅವಳು ಸ್ವಲ್ಪ ನೀರು ತೆಗೆದುಕೊಂಡು ನನ್ನ ಮುಖ ಮತ್ತು ತಲೆಯನ್ನು ಉಜ್ಜಿದಳು. ನಂತರ ಅವಳು ನನ್ನನ್ನು ಮನೆಯೊಳಗೆ ಕರೆದೊಯ್ದಳು. ಮನೆಯಲ್ಲಿ ನಾನು ಕೆಲವು ಅನ್ಸಾರಿ ಮಹಿಳೆಯರನ್ನು ನೋಡಿದೆ, ಅವರು ನನಗೆ ‘ಶುಭಾಶಯ ಮತ್ತು ಅಲ್ಲಾಹುವಿನ ಆಶೀರ್ವಾದ ನಿನ್ನ ಮೇಲಿದೆ ಮತ್ತು ಅದೃಷ್ಟವಂತೆ’ ಎನ್ನುತ್ತಿದ್ದರು. ನಂತರ ನನ್ನನ್ನು ಅವರಿಗೆ ಒಪ್ಪಿಸಿದರು ಮತ್ತು ಅವರು ನನ್ನನ್ನು ಸಿದ್ಧಪಡಿಸಿದರು (ಮದುವೆಗಾಗಿ). ಅನಿರೀಕ್ಷಿತವಾಗಿ ಅಲ್ಲಾಹುವಿನ ಧರ್ಮಪ್ರಚಾರಕ ಮುಂಜಾನೆ ಮನೆಗೆ ಬಂದರು. ಆಗ ನನ್ನ ತಾಯಿಯು ನನ್ನನ್ನು ಅವರಿಗೆ ಒಪ್ಪಿಸಿದರು ಮತ್ತು ಆ ಸಮಯದಲ್ಲಿ ನಾನು ಒಂಬತ್ತು ವರ್ಷ ವಯಸ್ಸಿನ ಹುಡುಗಿಯಾಗಿದ್ದೆ.’
ಹೀಗೆಂದು ಸ್ವತಃ ಆಯೀಷಾಳೇ ಹೇಳಿಕೊಂಡ ಸತ್ಯವನ್ನೇ ಅಲ್ಲವೇ ಅಜಿತ್‌ ಸುವರ್ಣ ನ್ಯೂಸ್‌ನಲ್ಲಿ ಹೇಳಿದ್ದು.

ಸತ್ಯವನ್ನೇ ಅವರು ಅಲ್ಲಿ ಹೇಳಿದ್ದಾರೆ. ಸತ್ಯ ಹೇಳಿದ್ದಕ್ಕೆ ಈ ದೇಶದಲ್ಲಿ ಜೀವ ಬೆದರಿಕೆ ಹಾಕುತ್ತಾರೆ ಅಂತಾದರೆ, ರಾಮನು ಸೀತೆಗೆ ಹೆಂಡ ಕುಡಿಸುತ್ತಿದ್ದ ಎಂದು ಬರೆಯುವ ಭಗವಾನನಿಗೆ ಏನು ಮಾಡಬೇಕು? ಯಾವ ಕಾನೂನು ಕ್ರಮ ಕೈಗೊಳ್ಳಬೇಕು?

ಅಲ್ಲದೇ ಶಹಿ ಬುಖಾರಿಯ ಸಂಪುಟ 5, ಪುಸ್ತಕ 58ರ ಹದೀಸ್‌ ಸಂಖ್ಯೆ 236ರಲ್ಲಿ ಹಿಷಾಮ್‌ರ ತಂದೆ ಹೇಳ್ತಾರೆ: ‘ಖಾದಿಜಾ(ಪ್ರವಾದಿಯ ಮೊದಲ ಪತ್ನಿ), ಪ್ರವಾದಿ ಮದೀನಾಕ್ಕೆ ಹೊರಡುವ ಮೂರು ವರ್ಷದ ಮುಂಚೆಯೇ ಮೃತಪಟ್ಟಿದ್ದರು. ಅಲ್ಲಿ ಅವರು ಸರಿಸುಮಾರು 2 ವರ್ಷದವರೆಗೂ ಇದ್ದು ನಂತರದಲ್ಲಿ ಆಯಿಷಾಳಿಗೆ 6 ವರ್ಷವಾಗಿದ್ದಾಗ ಅವಳನ್ನು ಮದುವೆಯಾಗಿ, ಆಕೆಗೆ 9 ವರ್ಷವಾದಾಗ ಸಂಸಾರ ಶುರು ಮಾಡಿದರು’ ಎಂದು ಹೇಳಿದ್ದಾರೆ.

ಕುರಾನಿನ ಸುರಾಹ್‌ ಅನ್‌-ನೀಸಾದ 6ನೇ ಆಯತ್‌ ಅಥವಾ ಕುರಾನಿನ 4:6ರಲ್ಲಿ ‘ಮದುವೆಯಾಗುವ ವಯಸ್ಸಿನವರೆಗೂ ಕಾದು ನಂತರ ಅವರ ಜತೆ ಸಂಸಾರ ಶುರು ಮಾಡಬೇಕು’ ಎಂಬುದರ ಉಲ್ಲೇಖವಿದೆ. ಇಲ್ಲಿ ಪ್ರವಾದಿ ಮಹಮ್ಮದ್‌ ಮಾಡಿದ್ದರಲ್ಲಿ ಏನೂ ತಪ್ಪಿಲ್ಲ. ಇಸ್ಲಾಮಿನಲ್ಲಿ ಹೇಳಿರುವಂತೆಯೇ ಅವರು ನಡೆದುಕೊಂಡಿದ್ದಾರೆ.

ಮಹಮ್ಮದರ ಬಗ್ಗೆ ಈ ಸತ್ಯ ಹೇಳಿದ್ದಕ್ಕೆ ಚಾರ್ಲಿ ಹೆಬ್ಡೋ ಮೇಲೆ ದಾಳಿಯಾಗುತ್ತದೆ. ಟಿಪ್ಪುವಿನ ಬಗ್ಗೆ ಹೇಳುವಾಗ ಮಹಮ್ಮದರ ಉಲ್ಲೇಖ ಮಾಡಿದ್ದಕ್ಕೆ ಸಂತೋಷ್‌ ತಮ್ಮಯ್ಯರ ವಿರುದ್ಧ ಮುಸ್ಲಿಮರು ಬೀದಿಗಿಳಿಯುತ್ತಾರೆ, ಮಹಮ್ಮದರ ಬಗ್ಗೆ ಸತ್ಯ ಹೇಳಿದ್ದಕ್ಕೆ ಅಜಿತ್‌ ಹನಮಕ್ಕನವರ್‌ಗೆ ದೇಶ ವಿದೇಶದಿಂದೆಲ್ಲ ಫೋನ್‌ ಮಾಡಿ ಜೀವ ಬೆದರಿಕೆ ಕೊಡುವುದಲ್ಲದೇ, ಪ್ರಕರಣ ಸಹ ದಾಖಲಾಗುತ್ತೆ.

ನಡೆದ ಘಟನೆಯನ್ನು ಹಾಗೇ ಉಲ್ಲೇಖಿಸುವುದು ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂದಾದರೆ ಮೊದಲು ದೂರ ದಾಖಲಾಗಬೇಕಾಗಿರುವುದು ಆಯೀಷಾ ಮೇಲೇ ಅಲ್ಲವೇ?! ಹದೀಸ್‌ ಮೂಲಕ ಮೊದಲು ಜಗತ್ತಿಗೆ ಈ ಘಟನೆಗೆ ಅಧಿಕೃತ ರೂಪ ಕೊಟ್ಟಿದ್ದು ಈ ಬಾಲಕಿ. ನಂತರದ ಪ್ರಕರಣ ದಾಖಲಾಬೇಕಾಗಿರುವುದು, ಮುಸ್ಲಿಮರು ವಿರೋಧಿಸಬೇಕಿರುವುದು ಹಷೀಮ್‌ನ ತಂದೆಯ ಮೇಲೆ. ಆ ನಂತರ ಯಾಕುಬ್‌ ಇಬ್ನ್‌ ಶೈಬಾಹ್‌ರನ್ನು ವಿರೋಧಿಸಬೇಕು. ಏಕೆಂದರೆ ಈತ ಅತ್ಯಂತ ಮೇಧಾವಿಯಾಗಿದ್ದ ಇಸ್ಲಾಮಿನ ಮೊದಲ ತತ್ತ್ವಶಾಸ್ತ್ರಜ್ಞ. ಇಸ್ಲಾಮನ್ನು ಅನುಸಿರುತ್ತಿರುವ ಎಲ್ಲರೂ ಈತನನ್ನು ಒಪ್ಪುತ್ತಾರೆ. ಈತ ಹೇಳಿದ್ದು ಕುರಾನ್‌ ವಾಕ್ಯ ಎಂಬಂತೆ ಪಾಲಿಸುತ್ತಾರೆ. ಇವರನ್ನೆಲ್ಲ ವಿರೋಧಿಸಬೇಕಾದ ಸಮಯದಲ್ಲಿ ವಿರೋಧಿಸದೇ, ಈಗ ಅಜಿತ್‌ ಹನಮಕ್ಕನವರ್‌ ಮೇಲೆ ಹರಿಹಾಯುವುದು ಯಾವ ನ್ಯಾಯ?

ಮಂಗಳೂರು ಮುಸ್ಲಿಮ್ಸ್‌ ಎಂಬ ಪೇಜ್‌, ಮಹಮ್ಮದರ ಮದುವೆಯನ್ನು ಸಮರ್ಥಿಸಿಕೊಳ್ಳುವಾಗ ಪ್ರವಾದಿಗಳು ಲೋಕಕಲ್ಯಾಣಕ್ಕಾಗಿ ಮದುವೆಯಾದರು ಎಂದು ಹೇಳುತ್ತಾರೆ. ರಾಮಾಯಣದಲ್ಲೂ ಸೀತೆಗೆ 12 ವರ್ಷ, ರಾಮನಿಗೆ 18ವರ್ಷವಾಗಿದ್ದಾಗ ಮದುವೆಯಾಯಿತು ಎಂಬ ಉಲ್ಲೇಖವಿದೆ. ಇದನ್ನು ಸ್ವತಃ ಸೀತೆಯೇ ಹನುಮಂತನಿಗೆ ಹೇಳುತ್ತಾಳೆ. ಮಹಮ್ಮದರು ಮದುವೆಯಾದರೆ ಅದು ಲೋಕ ಕಲ್ಯಾಣಕ್ಕೆ, ರಾಮ ಮದುವೆಯಾದರೆ ಅಪಚಾರವಾ? ಅವಮಾನವಾ? ಇಂಥದ್ದನ್ನೆಲ್ಲ ಕೇಳಿಸಿಕೊಳ್ಳುತ್ತಿರುವ ನಾವೇನು ಭಾರತದಲ್ಲೇ ಇದ್ದೀವಾ? ಅಥವಾ ಪಾಕಿಸ್ಥಾನದಲ್ಲಾ?

ಅಜಿತ್‌ ಸತ್ಯ ಹೇಳಿದ್ದಾರೆ. ಅದಕ್ಕೆ ಸಾಕ್ಷಿಯೆಂಬ ಪುಸ್ತಕಗಳು ಪ್ರತಿ ಮಸೀದಿ, ಮದರಸಾಗಳಲ್ಲಿರುವ ಪುಸ್ತಕದಲ್ಲಿದೆ. ಪ್ರತಿ ಮುಸ್ಲಿಮನ ಮನೆಯಲ್ಲಿರುವ ಪುಸ್ತಕದಲ್ಲಿದೆ. ಸಹಿಸಿಕೊಳ್ಳಲಾಗುತ್ತಿಲ್ಲ ಎಂದರೆ, ಪುಸ್ತಕವನ್ನು ಏನು ಮಾಡುತ್ತೀರೋ ನೋಡಿ. ಪತ್ರಕರ್ತ ಅಜಿತ್‌ ಸತ್ಯವನ್ನಷ್ಟೇ ಬಿಚ್ಚಿದ್ದಾರೆ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya