ಕುಡಿದು ರಸ್ತೆಯಲ್ಲಿ ಬಿದ್ದು ಬೆಂಗಳೂರು ಅಸುರಕ್ಷಿತ ಎನ್ನಬೇಡಿ!

 

2017ರ ಡಿಸೆಂಬರ್‌ 31ರ ರಾತ್ರಿ.. ಅಥವಾ ಜನವರಿ 1 2018 ಅಂತನೇ ಇಟ್ಕೊಳಿ. ಅವತ್ತು ಎಲ್ಲ ಹೊಸ ವರ್ಷದ ಆಚರಣೆಗೆ ಹೊಟೆಲ್‌ ಕೆಳಗೆ ನೆರೆದ್ದಿದ್ದರು. ಏನೋ ಪಾರ್ಟಿ ಮಾಡ್ತಾ ಅಲ್ಲ. ಬದಲಿಗೆ ಹೋಟೆಲ್‌ನ ರೂಮ್‌ ಒಂದರ ಕಿಟಿಕಿಯನ್ನು ನೋಡುತ್ತಾ. ಜನ ಮೇಲೆ ನೋಡೋದು, ಒಬ್ಬರ ಮುಖವನ್ನೊಬ್ಬರು ನೋಡುವುದು, ಮತ್ತು ಕೇಕೆ ಹಾಕುವುದು. ಇಷ್ಟೇ ಆಗುತ್ತಿತ್ತು. ಆ ಜಾಗದಲ್ಲಿ ನಾನೂ ಬರುತ್ತಿದ್ದೆ. ಅರೇ ಇದೇನಿರಬಹುದು ಎಂದು ಆ ಹೋಟೆಲ್‌ ಕೆಳಗೆ ನಿಂತು ಮೇಲೆ ನೋಡಿದರೆ, ಅಲ್ಲಿ ಕಂಡ ದೃಶ್ಯ ಹೀಗಿತ್ತು: ಒಬ್ಬ ಹುಡುಗಿಯ ಜತೆ ಇಬ್ಬರು ಹುಡುಗರು ಲೈಂಗಿಕ ಕ್ರಿಯೆ ನಡೆಸುತ್ತಿದ್ದಾರೆ. ಮೂರು ಜನರು ಕುಡಿಯುತ್ತಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾರೆ. ಕಿಟಕಿ ಸ್ಕ್ರೀನ್‌ ಮುಚ್ಚಿದೆಯಾದರೂ ಅದು ಒಳಗೆ ಕಾಣುವಂತೆ ಪಾರದರ್ಶಕವಾಗಿತ್ತು. ಕೆಲವರು ಕಿಸೆಯಿಂದ ಫೋನ್‌ ಎಳೆದು ವೀಡಿಯೋ ಮಾಡುತ್ತಿದ್ದರೆ, ಕೆಲವರು ಡಿಎಸ್‌ಎಲ್‌ಆರ್‌ ಕ್ಯಾಮರಾದಿಂದ ಜೂಮ್‌ ಹಾಕಿ ಕ್ಲಿಕ್ಕಿಸುತ್ತಿದ್ದರು. ಇದನ್ನು ಕಂಡ ಪೊಲೀಸರು ತಕ್ಷಣವೇ ಹೊಟೆಲ್‌ನವರಿಗೆ ತಿಳಿಸಲು ಹೋದರೆ, ಇನ್ನಷ್ಟು ಪೊಲೀಸರು ಲಾಠಿ ಬೀಸುವ ಮೂಲಕ ಪಡ್ಡೆಗಳನ್ನು ಚದುರಿಸುತ್ತಿದ್ದರು. ಏನು ಮಾಡಿದರೇನು ಬಂತು? ಎಲ್ಲವನ್ನೂ ಎಲ್ಲರೂ ನೋಡಿಯಾಯ್ತು. ಫೋಟೊ ಕ್ಲಿಕ್ಕಿಸಿಯಾಯ್ತು. ಅಲ್ಲಿದ್ದವರಿಗೆ ಉಚಿತವಾಗಿ ಬ್ಲೂ ಫಿಲ್ಮ್‌ನ ನೇರಪ್ರದರ್ಶನ ಸಿಕ್ಕಿತ್ತು. ಹಾಗೇ, ಇದೇ ಪ್ರತಿವರ್ಷ ಇಂಥದ್ದೇ ಘಟನೆಗಳು ನಡೆದು ಇದೇ ಸಂಸ್ಕೃತಿಯಾಗಿ ಹೋಯ್ತು.

ಸ್ವೇಚ್ಛೆಗೆ ಹೆಚ್ಚು ಮಹತ್ವವಿರುವ ವಿದೇಶದಲ್ಲಿ ನಾನಿದನ್ನು ನೋಡಲಿಲ್ಲ. ಬದಲಿಗೆ ನಮ್ಮ ಬೆಂಗಳೂರಿನಲ್ಲಿ. ಮಹಾತ್ಮಾ ಗಾಂಧಿ ರಸ್ತೆಯಲ್ಲಿ. ಕಳೆದ ವರ್ಷ ನೋಡಿದ ಆ ಘಟನೆ ಇನ್ನೂ ಕಣ್ಣ ಮುಂದಿದೆ. ಅಷ್ಟು ಹೇಸಿಗೆ ಹುಟ್ಟಿಸಿತ್ತು. ಹೊಸ ವರ್ಷಾಚರಣೆಯ ವೇಳೆ ನೀವೇನಾದರೂ ಎಂ.ಜಿ.ರಸ್ತೆಗೆ ಹೋದರೆ, ಗೋಧಿ ಬಣ್ಣದ ಚರ್ಮವುಳ್ಳ ಮನುಷ್ಯರು ಕಾಣುವುದಕ್ಕೆ ಇದು ಭಾರತ ಎನ್ನಬಹುದೇ ಹೊರತು, ಭಾರತದ ಯಾವ ಸಂಸ್ಕೃತಿ, ಉಡುಗೆ, ತೊಡುಗೆಗಳಿಂದಲೂ ಭಾರತ ಎಂದು ಗುರುತಿಸುವುದಕ್ಕೂ ಆಗುವುದಿಲ್ಲ. ಹಾಗಿರುತ್ತದೆ.

ಅಷ್ಟೇ ಏಕೆ, ಜನವರಿ 1ರಂದು ಹೊಸ ವರ್ಷವೆಂಬ ನೆಪದಲ್ಲಿ ಬ್ರಿಗೇಡ್‌ ರಸ್ತೆಯಲ್ಲಿ ಎಂಥೆಂಥ ಬಟ್ಟೆ ಧರಿಸಿ, ಎಷ್ಟರ ಮಟ್ಟಿಗೆ ಕುಡಿದು ಬಿದ್ದಿರುತ್ತಾರೆ ಎಂದು ಕಣ್ಣಾರೆ ನೋಡಿದರೆ, ಪರಿಸ್ಥಿತಿ ಹೇಗೆ ಹದಮೀರುತ್ತಿದೆ ಎಂದು ತಿಳಿಯುತ್ತದೆ. ಕೆಲ ಹೆಣ್ಣುಮಕ್ಕಳು ಎಷ್ಟು ಕುಡಿದಿರುತ್ತಾರೆಂದರೆ, ನಡೆಯಲೂ ಆಗದಿರುವಷ್ಟು. ಹುಡುಗರು ಅವರನ್ನು ಕರೆದುಕೊಂಡು ಹೋಗುತ್ತಿದ್ದರೆ, ಇವರು ವಾಂತಿ ಮಾಡುತ್ತಾ ಮುಂದೆ ಸಾಗುತ್ತಿರುತ್ತಾರೆ, ಕೆಲವರು ಅಳುತ್ತಿರುತ್ತಾರೆ, ಕೆಲವರು ಇನ್ನೂ ಕುಡಿಯಲು ಬೇಕು ಎಂದು ಹಠ ಹಿಡಿದಿರುತ್ತಾರೆ. ಆ ಪ್ರಪಂಚ ಎಷ್ಟು ಅಸಭ್ಯವಾಗಿರುತ್ತದೆ ಎಂಬುದನ್ನು ನೋಡಲಾದರೂ ವಾಂತಿ ವಾಸನೆಯನ್ನು ಸಹಿಸಿಕೊಂಡು ಒಮ್ಮೆ ಎಂ.ಜಿ.ರಸ್ತೆಗೆ ಹೋಗಿ ಬರಬೇಕು.
ಕ್ಷಮಿಸಿ, ತಪ್ಪು ತಿಳಿಯಬೇಡಿ. ನಾನಿಲ್ಲಿ, ಕುಡಿತ ಎಷ್ಟು ತಪ್ಪು ಎಂದು ವಿವರಿಸುತ್ತಿಲ್ಲ ಅಥವಾ ಬಟ್ಟೆಯ ಒಳಗಿರಬೇಕಾದ ಅಂಗಗಳು ಹೊರ ಜಿಗಿಯುವಂತೆ ಬಟ್ಟೆ ಧರಿಸಿ ಕುಡಿದು ರಸ್ತೆಯಲ್ಲಿ ಬೀಳಬೇಡಿ ಎಂದೂ ಬುದ್ಧಿ ಹೇಳುತ್ತಿಲ್ಲ. ಏಕೆಂದರೆ, ಕುಡಿಯಬೇಡಿ ಎಂದು ಗಾಂಧೀಜಿ ಹೇಳಿದ್ದನ್ನೇ ಕೇಳದೇ, ಅವರ ಅಷ್ಟೂ ತತ್ತ್ವಗಳನ್ನು ಅವರ ಹೆಸರಿನ ರಸ್ತೆಯಲ್ಲಿ ನಿಂತು ಬಾಟಲಿಯಿಂದ ಚಿಮ್ಮಿಸಿ ಕುಣಿಯುತ್ತಿರುವಾಗ ನಾನೆಲ್ಲ ಯಾವ ಹುಳು?
ಆದರೆ, ಇಲ್ಲಿ ಹೇಳಬೇಕಾದ ಗಂಭೀರ ವಿಷಯ ಏನೆಂದರೆ, ಮಾಡುವ ಅನಾಚಾರಗಳನ್ನೆಲ್ಲ ಮಾಡಿ ಅದನ್ನ ಬೆಂಗಳೂರಿನ ಮೇಲಂತೂ ಆರೋಪ ಹಾಕಬೇಡಿ ಎಂಬುದಷ್ಟೇ. ಪ್ರತಿ ವರ್ಷ ಇದೇ ಹಾಡಾಗಿದೆ.

ಕುಡಿದು ಕುಪ್ಪಳಿಸಿ, ಮುಂದೆ ಬಗ್ಗಿದರೂ, ಹಿಂದೆ ಬಗ್ಗಿದರೂ ಸರ್ವದರ್ಶನವಾಗುವಂಥ ಬಟ್ಟೆ ಧರಿಸಿ ವಾಂತಿ ಬರುವಷ್ಟು ಕುಡಿದು, ಎಡಗೈಯಲ್ಲೊಂದು, ಬಲಗೈಯಲ್ಲೊಂದು ಬಾಟಲಿ ಹಿಡಿದು ಫುಟ್‌ಪಾತ್‌ನಲ್ಲಿ ವಿಕಾರ ಭಂಗಿಯಲ್ಲಿ ಬಿದ್ದು, ಆಮೇಲೆ ಬೆಂಗಳೂರು ಅನ್‌ಸೇಫ್‌ ಎಂದು ಕೂಗಬೇಡಿ. ಆ ರಾತ್ರಿ ಯಾರ ಬಳಿ ಮುಟ್ಟಿಸಿಕೊಂಡೆ, ಏನು ಮಾಡಿದೆ ಎಂಬ ಅರಿವೇ ಇಲ್ಲದಷ್ಟು ಅಮಲಲ್ಲಿ ತೇಲಾಡಿ ಬೆಳಗ್ಗೆ ಪೊಲೀಸ್‌ ಠಾಣೆಗೆ ಬಂದು ರಸ್ತೆಯಲ್ಲಿ ಹೋಗುವವನು ಹೀಗೆ ಮಾಡಿದ ಎಂದು ಕೇಸ್‌ ದಾಖಲಿಸಿ, ಮಾಧ್ಯಮಗಳ ಮುಂದೆ ಬಂದು ಬೆಂಗಳೂರು ಅನ್‌ಸೇಫ್‌ ಎಂದು ಹೇಳಬೇಡಿ. ಕುಡಿತದ ಅಮಲಿನಲ್ಲಿ ಇಂಥವರು ಆಡುವ ಮಾತಿಗೆ ಮೈಕ್‌ ಹಿಡಿದು, ಮಾಧ್ಯಮಗಳು ಸಹ ಬೆಂಗಳೂರು ಸುರಕ್ಷಿತ ಅಲ್ಲ ಎಂದು ಹೇಳದಿರಲಿ.

ಪ್ರತಿ ವರ್ಷ ನನಗೆ ತೀರ ಬೇಜಾರಾಗುವ ಸಂಗತಿ ಎಂದರೆ ಇದೇ. ನನಗಷ್ಟೇ ಅಲ್ಲ. ಎಲ್ಲ ಮೂಲ ಬೆಂಗಳೂರಿಗರಿಗೂ. ಬೇರೆ ರಾಜ್ಯಗಳಿಂದ ಬೇಕು ಬೇಕು ಎಂದೇ ನಮ್ಮ ರಾಜ್ಯಕ್ಕೆ ಬರುತ್ತಾರೆ. ಅದೂ ಬೆಂಗಳೂರಿಗೇ ಬರುತ್ತಾರೆ. ಎಷ್ಟೋ ವರ್ಷಗಳಿಂದ ಇದ್ದರೂ ಇವರ ತಲೆ ಸರಿ ಇದ್ದಾಗ ಒಂದೇ ಒಂದು ದಿನ ಬೆಂಗಳೂರು ಸುರಕ್ಷಿತವಲ್ಲ ಎಂದು ಅನಿಸಿರುವುದಿಲ್ಲ.

ಆದರೆ ನ್ಯೂ ಇಯರ್‌ ದಿನ ಮಾತ್ರ ಎಲ್ಲವೂ ಅನ್‌ಸೇಫ್‌. ವರ್ಷದ 364ದಿನ ಅನ್‌ಸೇಫ್‌ ಆಗಿರುವುದಿಲ್ಲ. ಆದರೆ ನ್ಯೂ ಇಯರ್‌ ದಿನ ಅಂಗ ಪ್ರದರ್ಶನದ ಬಟ್ಟ ಧರಿಸಿದಾಗ ಟೈಟಾದಾಗಲೇ ಸಮಸ್ಯೆ ಎದುರಾಗುತ್ತದೆ ಎಂದರೆ, ಸಮಸ್ಯೆ ನೀವು ಟೈಟಾದಾಗ ಹುಟ್ಟಿದ್ದೋ ಅಥವಾ ಬೆಂಗಳೂರಿನ ಜನರಿಂದ ಹುಟ್ಟಿದ್ದೋ? ದುರಂತ ಎಂದರೆ, ಒಂಟಿ ಮಹಿಳೆಯರು ಸಿಕ್ಕರೆ ಹರಿದು ಮುಕ್ಕುವ ಬಿಹಾರ ಅಂತಹ ರಾಜ್ಯದಿಂದ ಬಂದವರೆಲ್ಲ ಬೆಂಗಳೂರು ಅನ್‌ಸೇಫ್‌ ಎನ್ನುತ್ತಾ ಕಳೆದ ಬಾರಿ ದೂರು ನೀಡಿದ್ದಾರೆ. ಇವರೆಲ್ಲ ಒಂದು ಬಾರಿಯೂ ಬಿಹಾರದಲ್ಲಿ ಹೊಸ ವರ್ಷ ಆಚರಿಸುವುದು ಪಕ್ಕದಲ್ಲಿರಲಿ, ಧಾರ್ಮಿಕ ಹಬ್ಬಗಳನ್ನು ಸಹ ಆಚರಿಸಲು ಹೋದ ಆಸಾಮಿಗಳಲ್ಲ. ಬಹುಶಃ ಇಂಥವರಿಗೆ ಮಾತ್ರ ಬೆಂಗಳೂರು ಅನ್‌ಸೇಫ್‌.

ಹೀಗೆ ಬೆಂಗಳೂರು ಮಾತ್ರ ಅನ್‌ಸೇಫ್‌ ಎನ್ನುವುದಕ್ಕಿಂತ ಮುಂಚೆ ಬೇರೆ ದೇಶಗಳಲ್ಲಿ ಏನೇನಾಗಿದೆ ಎಂಬುದನ್ನೂ ಗಮನಹರಿಸೋಣ.

2016ರಲ್ಲಿ ಜರ್ಮನಿಯಲ್ಲೂ ಹೊಸ ವರ್ಷದ ಆಚರಣೆ ನಡೆಯಿತು. ಆದರೆ ಅಂದು ಇಡೀ ದೇಶದಲ್ಲಿ ಬಹಳ ಹೆಣ್ಣು ಮಕ್ಕಳು ತಮ್ಮ ಮೇಲೆ ಅತ್ಯಾಚಾರವಾಗಿದೆ, ಅಂಥ ಪ್ರಯತ್ನ ಆಗಿದೆ, ಕಿರುಕುಳ ಆಗಿದೆ ಎಂದು ದೂರು ನೀಡಿದರು. ಆದರೆ ಅಲ್ಲಿಯ ಪೊಲೀಸ್‌ ವರದಿಯು ಅದು ಹೇಗೋ ಸೀಚ್ಚ್‌ಡಾಯ್ಚೆ ಝೈತುಂಗ್‌ ಎಂಬ ಪತ್ರಿಕೆಗೆ ಸಿಕ್ಕಿಬಿಟ್ಟಿತ್ತು. ಅದನ್ನು ನೋಡಿ ಒಮ್ಮೆ ವಿಶ್ವವೇ ಹೌಹಾರಿತ್ತು. ಬರೋಬ್ಬರಿ 2000 ಪುರುಷರಿಂದ 1200 ಮಹಿಳೆಯರ ಮೇಲೆ ಅಪರಾಧ ಕೃತ್ಯಗಳು ನಡೆದಿದೆ ಎಂಬ ಸತ್ಯ ಸಾಮಾನ್ಯವಾದದ್ದಲ್ಲ ನೋಡಿ. ಹಲವು ಜನರಿಗೆ ಶಿಕ್ಷೆಯನ್ನೂ ಕೊಟ್ಟಿತೆಂಬುದು ಬೇರೆ ಮಾತು. ಆದರೆ, ಅಲ್ಲಿ ಅಂಥ ಸಂಸ್ಕೃತಿಯಿಂದ ದೇಶದ ಮರ್ಯಾದೆ ಹೋದರೂ, ಅಲ್ಲಿನ ಮಾಧ್ಯಮಗಳು ಅಥವಾ ದೇಶವಾಸಿಗರು ಜರ್ಮನಿ ಸುರಕ್ಷಿತವಲ್ಲ ಎಂದು ಹೇಳಿಲ್ಲ. ಆದರೆ, ಅದೇ ವರ್ಷದಲ್ಲಿ ನಮ್ಮ ಎಂ.ಜಿ. ರಸ್ತೆಯಲ್ಲಿ ಒಬ್ಬ ಮಹಿಳೆಗೆ ಇಂಥ ಅನುಭವ ಒಂದಾಗಿದ್ದಕ್ಕೆ, ನೇರ ನರೇಂದ್ರ ಮೋದಿಯೇ ಉತ್ತರಿಸಬೇಕೆಂದು ಪಟ್ಟು ಹಿಡಿದಿದ್ದರು.

ಬೆಂಗಳೂರು ಅಸುರಕ್ಷಿತ ಎಂದು ಶವಪೆಟ್ಟಿಗೆಯ ಮೇಲೆ ಬರೆದಂತೆ ಬರೆದು ಬೆಂಗಳೂರನ್ನು ಗುಂಡಿಯೊಳಗೆ ಹಾಕಿ ಮಣ್ಣು ಮುಚ್ಚಿಯಾಗಿತ್ತು. ಆದರೆ, ಕುಡಿಯುವಾಗ ಮೋದಿಯನ್ನು ಕೇಳಿಕೊಂಡೇ ಕುಡಿಯುವುದಕ್ಕೆ ಹೋದೆಯಾ? ಅಥವಾ ಕನಿಷ್ಠ ಪಕ್ಷ ಅಪ್ಪ ಅಮ್ಮನಿಗಾದರೂ ಹೇಳಿ ಹೋದೆಯಾ ಎಂದು ಕೇಳಿದರೆ, ಎಲ್ಲರೂ ಕೋಮುವಾದಿಗಳು, ಮಾನವೀಯತೆ ಇಲ್ಲದವರಾಗುತ್ತೇವೆ.

ಇದು ಕೇವಲ ಒಂದು ಉದಾಹರಣೆ ಅಷ್ಟೇ. ಅಮೆರಿಕದಲ್ಲಿ ಮಗ ತಾಯಿಯನ್ನು ಕೊಂದದ್ದು, ಮದವೇರಿದ ಹುಡುಗ ಕಂಡ ಕಂಡವರಿಗೆ ಚೂರಿ ಹಾಕಿದ್ದು, ಶಾಂಘೈನಲ್ಲಿ 36ಜನರು ಮೃತಪಟ್ಟಿದ್ದು, ಒಂದಾ ಎರಡಾ? ಮರದ ಪೊಟರೆಯಲ್ಲಿನ ಜೇನುಗೂಡಿಗೆ ಹೊಗೆ ಹಾಕಿದಾಗ ಬರುವ ಬುರುಬುರು ಜೇನು ಹುಳುವಿನಂತೆ ಪ್ರಕರಣಗಳು ಹೊರಬರುತ್ತವೆ.

ದೀಪಾವಳಿಯಲ್ಲಿ ಪಟಾಕಿ ಹೊಡೆಯಬೇಡಿ ಎಂದು ಬಾಯಿ ಬಡಿದುಕಕೊಳ್ಳುವ ಬುದ್ಧಿಜೀವಿ ಭಾರತೀಯರು ಬೆಳೆಸುತ್ತಿರುವುದೂ ಇಂಥದ್ದೇ ಹೊಲಸು ಸಂಸ್ಕೃತಿಯನ್ನೇ.
ರಾಕ್ಷಸನನ್ನು ಬೆಳೆಸಿದ ಮೇಲೆ ಅವನು ಲೋಕಕಲ್ಯಾಣ ಮಾಡುವುದಿಲ್ಲ! ಮದ್ಯಪಾನ ಮಾಡಿದವನ ಮನಸ್ಸು ಏನು ಮಾಡುತ್ತದೋ ಅದಕ್ಕೆ ಮತ್ತೊಬ್ಬ ಅಂಥದ್ದೇ ಮನಸ್ಸಿನವನು ಅನುಭವಿಸಲೇ ಬೇಕಾಗುತ್ತದೆ. ಅದಕ್ಕೆ ಬೆಂಗಳೂರು ಏನು ಮಾಡುತ್ತದೆ ಹೇಳಿ? ಬೆಂಗಳೂರಿನ ಜನತೆ ಏನು ಮಾಡುವುದಕ್ಕಾಗುತ್ತದೆ. ಈಗ ಹೇಳಿ ಮಾಧ್ಯಮಗಳೇ ಮತ್ತು ಮಹಾಜನತೆಯೇ, ನಮ್ಮ ಬೆಂಗಳೂರು ಇನ್ನೂ ಅನ್‌ಸೇಫ್‌ ಎಂದು ಅನಿಸುತ್ತದೆಯೇ?

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya