ಇಸ್ಲಾಂ ವಿರೋಧಿ ಮಂಗಳೂರು ಮುಸ್ಲಿಮ್ಸ್‌ ಪೇಜ್‌ ಬಂದ್‌ ಆಗುವುದು ಯಾವಾಗ?

 

 

2011ರ ಮಾರ್ಚ್‌ನಲ್ಲಿ ಫ್ರಾಂಕ್‌ಫರ್ಟ್‌ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನದ ಸುಮಾರಿಗೆ ಅಮೆರಿಕದ ಯೋಧರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಮೇಲೆ ವ್ಯಕ್ತಿಯೊಬ್ಬ ದಾಳಿ ಮಾಡುತ್ತಾನೆ. ಅದೊಂದು ಪಕ್ಕಾ ಉಗ್ರಗಾಮಿಗಳ ದಾಳಿಯ ಹಾಗೆ ಮಾಡಲಾಗಿರುತ್ತದೆ. ಯಾರೋ ಒಬ್ಬ ಎಲ್ಲಿಂದಲೋ ಇದ್ದಕ್ಕಿದ್ದಂತೆ ಬರುತ್ತಾನೆ, ದಾಳಿ ಮಾಡುತ್ತಾನೆ. ಇಸ್ಲಾಮಿಕ್‌ ಉಗ್ರವಾದದ ದಾಳಿಯ ಹಾಗೆ. ಪರಿಣಾಮವಾಗಿ ವಾಯುಸೇನೆಯ ಇಬ್ಬರು ಯೋಧರು ಮೃತಪಡುವುದರ ಜತೆಗೆ ಸುಮಾರು ಯೋಧರಿಗೆ ಗಂಭೀರ ಗಾಯಗಳಾಗಿವೆ.
ತನಿಖೆ ಮಾಡುವ ಪೊಲೀಸರಿಗೆ ಶಾಕ್‌ ಆಗುತ್ತದೆ. ಏಕೆಂದರೆ, ಭಯೋತ್ಪಾದಕ ದಾಳಿ ಮಾಡಿದವನು ಒಬ್ಬ 21ರ ಹರೆಯದ ಮುಸ್ಲಿಂ ಹುಡುಗ. ಶಾಕಿಂಗ್‌ ವಿಷಯ ಅದಲ್ಲ, ಆ ಮುಸ್ಲಿಂ ಹುಡುಗ ಆರಿದ್‌, ಅದೇ ಫ್ರಾಂಕ್‌ಫರ್ಟ್‌ ವಿಮಾನನಿಲ್ದಾಣದಲ್ಲೇ ಕೆಲಸ ಮಾಡುತ್ತಿದ್ದ ಎಂಬುದು ನಿಜವಾಗಿಯೂ ಶಾಕಿಂಗ್‌ ಸಂಗತಿ.

ಸರಿ, ಈಗ ಮಾಡಿದ್ದೆಲ್ಲ ಮಾಡಿದೆ… ಅದೆಲ್ಲ ಯಾಕ್‌ ಮಾಡಿದೆ, ನಿನ್ನ ಜತೆ ಇನ್ನೂ ಯಾರ್‌ ಯಾರಿದ್ದಾರೆ ಹೇಳು ಎಂದು ಅಧಿಕಾರಿಗಳು ಕೇಳಿದಾಗ, ನನ್ನ ಜತೆ ಯಾರೂ ಇಲ್ಲ. ನಾನೊಬ್ಬನೇ ಈ ಕೃತ್ಯವನ್ನು ಮಾಡಿದೆ ಎಂದು. ಈ ಕೃತ್ಯ ಮಾಡುವುದಕ್ಕೂ ಒಂದು ದಿನದ ಹಿಂದೆ ಫೇಸ್ಬುಕ್‌ನಲ್ಲಿ ಮುಸ್ಲಿಂ ಮಹಿಳೆಯ ಅತ್ಯಾಚಾರದ ವಿಡಿಯೊವನ್ನು ಇಸ್ಲಾಮಿಕ್‌ ಉಗ್ರವಾದಿ ಪೇಜ್‌ ಒಂದು ಬಿಡುಗಡೆ ಮಾಡಿತ್ತು. ಅದನ್ನು ನೋಡಿದ್ದೆ, ನನ್ನ ರಕ್ತ ಕುದಿಯುತ್ತಿತ್ತು. ಅದಕ್ಕಾಗಿ ಅಮೆರಿಕನ್ನರ ಮೇಲೆ ದಾಳಿ ಮಾಡಿದೆ ಎಂದೇ ಒಪ್ಪಿಕೊಂಡಿದ್ದಾನೆ.

ಅಲ್ಲದೇ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ ಮೇಲೆ ತಿಳಿದಿದ್ದೇನೆಂದರೆ, ಅವನು ಆ ಫೇಸ್ಬುಕ್‌ ಪೇಜ್‌ನ ಅಡ್ಮಿನ್‌ಗಳಾದ ಕೆಲ ಮುಸ್ಲಿಮರ ಜತೆ ಇಂಥದ್ದೇ ಆಕ್ರೋಶ ಹೊರಹಾಕಿಕೊಳ್ಳುತ್ತಿದ್ದ ಎಂಬುದು.

ಅಷ್ಟೇ ಯಾಕೆ, ಶಂಕಿತ ಭಯೋತ್ಪಾದಕ ನಜೀಮ್‌ ಅಲಿಯಾಸ್‌ ಉಮರ್‌ ಶಂಶದ್‌ ಅಹ್ಮದ್‌ ಮತ್ತು ಮೂವರು ಸ್ನೇಹಿತರನ್ನು 2017ರ ಏಪ್ರಿಲ್‌ 20ರಂದು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿತ್ತು. ಆತ ಐಸಿಸ್‌ ಮುಖಂಡರಲ್ಲಿ ಒಬ್ಬ ಹಾಗೂ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಕ್ಕೆ ಹೊಂಚು ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಉಗ್ರ ಹೇಗೆ, ಯಾಕಾದ ಎಂದು ನೋಡಿದರೆ, ಆತನೂ ಫೇಸ್ಬುಕ್‌ನಲ್ಲಿ ಮುಸ್ಲಿಮರ ಬಿಟ್ಟು ಇನ್ನಿತರರನ್ನೆಲ್ಲ ಕೊಲ್ಲುವುದಕ್ಕೆ ಪ್ರೇರೇಪಿಸುವ ವಿಡಿಯೊಗಳು, ಸೊಧೀಟದ ವಿಡಿಯೊಗಳನ್ನು ನೋಡುತ್ತಿದ್ದ. ಫೇಜ್‌ ಅಡ್ಮಿನ್‌ಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಉಗ್ರವಾದದ ಬಗ್ಗೆ ಚರ್ಚಿಸುತ್ತಿದ್ದ. ಹಾಗೇ ಐಸಿಸ್‌ಗೆ ಸಂಪರ್ಕ ಸಿಕ್ಕಿದ್ದು.

ಇಸ್ಲಾಮಿಕ್‌ ಉಗ್ರವಾದದಿಂದ ಪ್ರಪಂಚದಲ್ಲಿ ಕೋಟ್ಯಂತರ ಜನರು ಪ್ರಾಣ ಬಿಟ್ಟಿದ್ದಾರೆ. ಈಗಲೂ ಇಂಥ ಉಗ್ರವಾದದಿಂದ ಜನರು ಸಾಯುತ್ತಲೇ ಇದ್ದಾರೆ. ಜಿಹಾದ್‌ ಮತ್ತು ಉಗ್ರವಾದ ಎಲ್ಲೋ ಹುಟ್ಟಿ, ಇನ್ನೆಲ್ಲೋ ಬೆಳೆಯಬೇಕು ಎಂದೇನಿಲ್ಲ. ಟೆಂಟ್‌ಗಳಲ್ಲಿ, ಮನೆಗಳಲ್ಲಿ, ಪಾಕಿಸ್ಥಾನದಲ್ಲಿ, ಭಾರತದಲ್ಲಿ. ಅಷ್ಟೇ ಏಕೆ ಮಂಗಳೂರು ಮುಸ್ಲಿಮ್ಸ್‌ ಫೇಸ್ಬುಕ್‌ ಪೇಜ್‌ ಮೂಲಕ ಆದರೂ ಉಗ್ರವಾದ ಮತ್ತು ಜಿಹಾದ್‌ ಚಾಲ್ತಿಯಲ್ಲಿರಬಹುದು.

ಹೌದು, ಮಂಗಳೂರು ಮುಸ್ಲಿಮ್ಸ್‌ ಎಂಬ ಪೇಜ್‌ ಪೂರ ಉಗ್ರವಾದದ ಮನಸ್ಥಿತಿಯನ್ನೇ ಹಬ್ಬಿಸುತ್ತಿದೆ. ಮುಸ್ಲಿಮರು ಹಿಂದೂಗಳ ವಿರುದ್ಧ ಕೆರಳಿ ಗಲಭೆಯಾಗುವವರೆಗೂ ಮಂಗಳೂರು ಮುಸ್ಲಿಮ್ಸ್‌ ಪೇಜ್‌ನ ಪಾತ್ರ ಮಾತ್ರ ಗಣನೀಯವಾದ್ದು.

ದುರಂತ ಏನು ಎಂದರೆ, ಇವರು ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರರ ಬಗ್ಗೆ ಅಸಭ್ಯವಾಗಿ ಮಾತಾಡಿದರೂ ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ನೋಡಿಕೊಂಡು ಸುಮ್ಮನೇ ಕೂರುವ ಸ್ಥಿತಿ ನಮ್ಮದಾಗಿದೆ.

ಮಹಿಳೆಯೊಬ್ಬಳಿಗೆ ಉತ್ತರ ಕೊಡುವಾಗ ಮಂಗಳೂರು ಮುಸ್ಲಿಮ್ಸ್‌ ಪೇಜ್‌ನವರು ಬರೆದುಕೊಂಡಿದ್ದು ಹೀಗೆ – ನನ್ನ ಬಳಿ ವಾದ ಬೇಡ. ಅಂಬೇಡ್ಕರ್‌ ಏನು ದೊಡ್ಡ ಶಾ*ನಾ? ಅವನು ಸಂವಿಧಾನ ತಂದ ಮಾತ್ರಕ್ಕೆ ದಲಿತರೇನು ಉದ್ಧಾರವಾದರಾ? ನಿಮ್ಮಂಥ ಸಂಘಿಗಳನ್ನು ಸಂಹಾರ ಮಾಡುವುದೇ ನಮ್ಮ ಗುರಿ. ಮಂಗಳೂರು ಮುಸ್ಲಿಮರನ್ನು ಕೆಣಕಬೇಡ. ಎಂದು ಸಾರ್ವಜನಿಕವಾಗಿಯೇ ಬೆದರಿಕೆ ಇಟ್ಟಿದೆ.

ಇದನ್ನೇ ಒಬ್ಬ ಹಿಂದೂ ಮಾಡಿದ್ದಿದ್ದರೆ, ಅವನ ಮೇಲೆ ಎಂದೂ ಹೆಸರೇ ಕೇಳಿರದ ದಲಿತ ಸಂಘಟನೆಯೊಂದು ಕೇಸು ಜಡಿದು ಪೊಲೀಸರು ಬಂಧಿಸಿಯಾಗುತ್ತಿತ್ತು. ಆದರೆ ಮುಸ್ಲಿಮ್ಸ್‌ ಪೇಜ್‌ ಹೀಗೆ ಹೇಳಿರುವುದರ ಬಗ್ಗೆ ಒಂದೇ ಒಂದೂ ಪ್ರಕರಣ ದಾಖಲಾಗಿಲ್ಲ. ಏನೂ ಆಗೇ ಇಲ್ಲ ಎಂಬಂತಿದ್ದಾರೆ.

ಇಷ್ಟೇ ಅಲ್ಲ ಅನಂತಕುಮಾರ್‌ ಮೃತಪಟ್ಟಾಗ, ಜಾತಿ ರಾಜಕಾರಣ ಕುತಂತ್ರಿ ಬ್ರಾಹ್ಮಣ ಅನಂತಕುಮಾರ್‌ ಮೇಲೆ ಹೋಗಿಯೂ ಜಾತಿ ವಿಷ ಬೀಜ ಬಿತ್ತಬೇಡ. ರಾಮ ರಾಮ ಎನ್ನುತ್ತಲೇ ಹೊಗೆ ಹಾಕಿಕೊಂಡ ಕೋಮುವಾದಿ ಅನಂತಕುಮಾರ್‌. ದೇಶ ಹಾಳು ಮಾಡಲು ಇನ್ನೊಮ್ಮೆ ಹುಟ್ಟಿ ಬರಬೇಡ ಎಂದು ಬರೆದುಕೊಂಡಿತ್ತು. ಇದಕ್ಕೆ ಸ್ವತಃ ಮುಸ್ಲಿಮರೇ ವಿರೋಧಿಸಿದ್ದರು. ಪ್ರವಾದಿಗಳು ಹೀಗೆ ನಡೆದುಕೊಳ್ಳಿ ಎಂದು ಯಾವತ್ತೂ ಹೇಳಿಲ್ಲ. ನೀವು ಇಸ್ಲಾಂ ಧರ್ಮಕ್ಕೇ ಕಳಂಕ. ಹರಾಮಿಗಳು ಎಂದು ಬಯ್ದಿದ್ದರು.

ದುರಂತ ಏನು ಎಂದರೆ, ಇವರನ್ನು ಮುಟ್ಟುವುದಕ್ಕೆ ಸ್ವತಃ ಸರ್ಕಾರದಿಂದಲೇ ಆಗುತ್ತಿಲ್ಲ.
ದಿ. ಅನಂತಕುಮಾರ್‌ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಕ್ಕೆ ಮಂಗಳೂರು ಪೊಲೀಸರು ಮಂಗಳೂರು ಮುಸ್ಲಿಮ್ಸ್‌ ಫೇಸ್ಬುಕ್‌ ಪೇಜ್‌ ಮೇಲೆ ಈಗಾಗಲೇ ಸುಮೋಟೊ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಮುಂದೇನು ಮಾಡಿದ್ದಾರೆ? ಯಾರಿಗೂ ಗೊತ್ತಿಲ್ಲ.

ಇದಕ್ಕಿಂತ ಮುಂಚೆಯೂ ಮಂಗಳೂರಿನ ಹಿಂದೂಗಳು, ರಾಜಕಾರಣಿಗಳು ಮಂಗಳೂರು ಮುಸ್ಲಿಮ್ಸ್‌ ವಿರುದ್ಧ ಪ್ರತಿಭಟಿಸಿದ್ದಾರೆ.

ಇವರನ್ನು ಹಿಡಿಯುವುದಕ್ಕೇ ಆಗುವುದಿಲ್ಲವಾ? ಸಾಧ್ಯವಿದೆ. ಅದು ಕರ್ನಾಟಕದಿಂದ ಮಾತ್ರ. ನನ್ನ ಕೆಲ ಆಪ್ತ ಮೂಲಗಳಿಗೆ ಮಂಗಳೂರು ಮುಸ್ಲಿಮ್ಸ್‌ ಪೇಜ್‌ ಬಗ್ಗೆ ಮಾಹಿತಿ ಕೇಳಿದಾಗ, ಅವರಿಂದ ಬಂದ ಉತ್ತರವಿದು: ಈ ಪೇಜ್‌ನ ಅಡ್ಮಿನ್‌ಗಳು ಫೇಕ್‌ ಅಕೌಂಟ್‌ನಲ್ಲಿದ್ದಾರೆ. ತಮಗೆ ಬೇಕಾದಾಗ ತಮ್ಮ ಪ್ರೊಫೈಲನ್ನು ಆ್ಯಕ್ಟಿವ್‌, ಡಿಆ್ಯಕ್ಟಿವ್‌ ಮಾಡುತ್ತಾರೆ.

ಇನ್ನು ಈ ಪೇಜ್‌ ಮೈಸೂರಿನಲ್ಲಿ ಆಪರೇಟ್‌ ಆಗುತ್ತಿದೆ. ಕಂಪನಿಗಳಿಗೆ ಬಳಸುವ ಮಾದರಿಯ ಬ್ರಾಡ್‌ಬ್ಯಾಂಡ್‌ನಿಂದ ಅನೇಕ ಬಾರಿ ಫೇಸ್ಬುಕ್‌ ಪೋಸ್ಟ್‌ ಆಗಿದೆ. ಇನ್ನೊಂದು ಮಾಹಿತಿ ಏನೆಂದರೆ, ಮಂಗಳೂರು ಮುಸ್ಲಿಮ್ಸ್‌ ಪೇಜ್‌ನ ಒಬ್ಬ ಅಡ್ಮಿನ್‌ನ ಹೆಸರು ಜುಬೇನ್‌ ಎಂದು. ಅವನು ತನ್ನ ಪ್ರೊಫೈಲನ್ನು ತೀರ ಖಾಸಗಿ ಸೆಟ್ಟಿಂಗ್‌ನಲ್ಲಿಟ್ಟಿದ್ದಾನೆ. ಇಡೀ ಪ್ರೊಫೈಲ್‌ನಲ್ಲಿ ಒಂದೇ ಒಂದೂ ಫೋಟೊ ಸಿಗುವುದಿಲ್ಲ. ಒಂದಷ್ಟು ಜನರ ಜತೆಗೆ ಇನ್‌ಬಾಕ್ಸ್‌ನಲ್ಲಿ ಮಾತಾಡಿ, ಪೋಸ್ಟ್‌ ಮಾಡಿ ಪುನಃ ಅಕೌಂಟ್‌ ಡಿಲೀಟ್‌ ಮಾಡಿಕೊಂಡು ಬಿಡುತ್ತಾನೆ.

ಈ ಪೇಜ್‌ ಮತ್ತು ಜುಬೇರ್‌ ಪ್ರೊಫೈಲ್‌ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳುವುದಕ್ಕೆ ಅವಕಾಶ ಇರುವುದು 1, 2, 3, 4ನೇ ಆಡಳಿತ ಹಂತದವರಿಗೆ ಮಾತ್ರ. ಅಂದರೆ, ಕರ್ನಾಟಕ ಸರ್ಕಾರಕ್ಕೆ, ಪೊಲೀಸ್‌ ಇಲಾಖೆಗೆ ಈ ಪೇಜ್‌ ಬಗ್ಗೆ ಎಲ್ಲ ಮಾಹಿತಿ ತಿಳಿದುಕೊಳ್ಳುವುದಕ್ಕೆ ಸಾಧ್ಯ. ಇವರನ್ನು ಬಿಟ್ಟು ಅಥವಾ ಇವರ ಒಪ್ಪಿಗೆಯಿಲ್ಲದೇ ಸಿಬಿಐ ಅಥವಾ ಗುಪ್ತಚರ ಇಲಾಖೆಗೂ ಮಾಹಿತಿ ಸಿಗುವುದಿಲ್ಲ. ಏನೂ ಅಲ್ಲದ ನನಗೇ ಇಷ್ಟು ಮಾಹಿತಿ ಸಿಕ್ಕಿದೆ ಎಂದರೆ, ಪೊಲೀಸರಿಗೆ-ಸರ್ಕಾರಕ್ಕೆ ಇನ್ನೆಷ್ಟು ಮಾಹಿತಿ ಸಿಗಬೇಡ?
ಈ ಗುರುತನ್ನು ಮರೆಮಾಚಿಕೊಂಡು ಪ್ರೊಫೈಲ್‌ ನಿರ್ಮಿಸುವ ಪದ್ಧತಿ ಐಸಿಸ್‌ ಮತ್ತು ಉಗ್ರಗಾಮಿಗಳ ವರ್ಗದಲ್ಲಿ ಅಭ್ಯಾಸ. ಈಗ ಮಂಗಳೂರು ಮುಸ್ಲಿಮ್ಸ್‌ ಪೇಜ್‌ ಸಹ ಹಾಗೇ ಕಾರ್ಯನಿರ್ವಹಣೆಯಾಗುತ್ತಿದೆ. ಇಷ್ಟೇ ಹೇಳಿದ ಮಾತ್ರಕ್ಕೆ ಇವರನ್ನು ಉಗ್ರಗಾಮಿಗಳು ಎಂದು ಹೇಗೆ ಪರಿಗಣಿಸುವುದು ಎಂದು ನೀವು ಕೇಳಬಹುದು. ಅದಕ್ಕೂ ಉತ್ತರವಿದೆ.

ಮಂಗಳೂರು ಮುಸ್ಲಿಮ್ಸ್‌ ಮತ್ತು ಓವೈಸಿ ಅಭಿಮಾನಿಗಳು ಎಂಬ ಪೇಜ್‌ಗಳು ಆಗಾಗ ಕೆಲವರ ಚಿತ್ರವನ್ನು ಪೋಸ್ಟ್‌ ಮಾಡಿ, ‘ನೋಡಿ, ಇವನು ಮಂಗಳೂರಿನಲ್ಲೇ ಇದ್ದಾನೆ. ಈ ಕುನ್ನಿ ಸಿಕ್ಕರೆ ಬುದ್ಧಿ ಹೇಳಿ ಬನ್ನಿ’ ಅಥವಾ ‘ಇವನು ಗಲ್‌ಧಿನಲ್ಲಿದ್ದಾನೆ.. ಇವನಿಗೆ ನಮ್ಮ ಸ್ನೇಹಿತರು ಬುದ್ಧಿ ಹೇಳಬೇಕಾಗಿ ವಿನಂತಿ’ ಎಂದು ಪೋಸ್ಟ್‌ ಮಾಡುತ್ತಾರೆ. ಇದರಿಂದ ರೊಚ್ಚಿಗೇಳುವ ಮುಸ್ಲಿಮರು, ಚಿತ್ರದಲ್ಲಿರುವ ವ್ಯಕ್ತಿಗಳ ಮೇಲೆ ದಾಳಿ ಮಾಡುತ್ತಾರೆ.

ದುಬೈನಲ್ಲಿರುವ ಹವ್ಯಾಸಿ ಲೇಖಕ ರಾಘವೇಂದ್ರ ಸುಬ್ರಮಣ್ಯ ಅವರ ಚಿತ್ರವನ್ನು ಹೀಗೇ ಪೋಸ್ಟ್‌ ಮಾಡಿದ್ದರ ಪರಿಣಾಮ, ರಾಘವೇಂದ್ರರ ಮನೆಯ ಬಳಿ ಕೆಲ ಮಂಗಳೂರು ಮುಸ್ಲಿಮರು ಬಂದಿದ್ದರು. ಇವರ ಬಗ್ಗೆ ತಕ್ಷಣವೇ ರಾಘವೇಂದ್ರ ಪೊಲೀಸರಿಗೆ ದೂರು ನೀಡಿದಾಗ, ಆ ಹುಡುಗರಿಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ದುಬೈ ಪೊಲೀಸರು ಇಲ್ಲಿಗಿಂತ ಬಹಳ ಕಟ್ಟುನಿಟ್ಟಾಗಿರುವುದರಿಂದ ರಾಘವೇಂದ್ರ ಬಚಾವ್‌ ಆಗಿದ್ದಾರೆ.

ಕಲ್ಲಡ್ಕ ಪ್ರಭಾಕರ್‌ ಭಟ್ಟ ಇವತ್ತೇ ನಿನ್ನ ಕೊನೇಯ ದಿನ ಎಂದು ಮಂಗಳೂರು ಮುಸ್ಲಿಮ್ಸ್‌ ಪೋಸ್ಟ್‌ ಹಾಕಿದ್ದನ್ನು ಇನ್ನೂ ಯಾರೂ ಮರೆತಿಲ್ಲವೆಂದು ಭಾವಿಸುತ್ತೇನೆ. ಪ್ರಶಾಂತ್‌ ಗೋಖಲೆ ಎಂಬುವವರಿಗೆ ಕಮೆಂಟ್‌ ಮಾಡಿದ ಈ ಪೇಜ್‌, ‘ಭಾರತದಲ್ಲಿ ಬಿಟ್ಟರೆ ಇನ್ನೆಲ್ಲೂ ಇಲ್ಲದ ಹಿಂದುತ್ವ ನಾಶ ಆಗುತ್ತದೆ. ನೀವೆಲ್ಲ ಅಳಿಯುತ್ತೀರಿ. ಹಿಂದೂಗಳು ಈ ದೇಶದಲ್ಲಿ ತಮ್ಮ ಪ್ರಭುತ್ವ ಸಾಧಿಸಲು ಇಸ್ಲಾಂ ಅನುವು ಮಾಡಿಕೊಡುತ್ತಿದೆ. ಇನ್ನು 50 ವರ್ಷದೊಳಗೆ ಹಿಂದೂಗಳು ನಾಶವಾಗಿ ಮುಸ್ಲಿಮರ ಗುಲಾಮರಾಗುತ್ತೀರಿ’ ಎಂದು ಬರೆದಿದೆ.

ಮಂಗಳೂರಿನಲ್ಲಿ ಅಶ್ರಫ್‌ ಕೊಲೆಯಾದ ದಿನ, ಬಿಜೆಪಿಯ ಕಾರ್ಯಕರ್ತ ಭರತ್‌ ಚಿತ್ರ ಹಾಕಿ, ‘ನಿನ್ನ ಹೆಣ ಬೀಳೋದು ಖಚಿತ. ನಿನ್ನ ಅಂತ್ಯವಾಗದೇ ಹೋರಾಟ ಪೂರ್ಣಗೊಳ್ಳುವುದಿಲ್ಲ’ ಎಂದು ಬರೆದಿತ್ತು. ಸಾಮಾನ್ಯ ಜೀವನ ಸಾಗಿಸುತ್ತಿರುವ ಮುಸ್ಲಿಮನು ರೊಚ್ಚಿಗೆದ್ದು ಕತ್ತಿ ಹಿಡಿದು ಬೀದಿಗಿಳಿಯುವುದಕ್ಕೆ ಇದಕ್ಕಿಂತ ಪ್ರೇರೇಪಣೆ ಏನು ಬೇಕು ಹೇಳಿ?

ಇಂಥ ಉಗ್ರಗಾಮಿಗಳ ಮಂಗಳೂರು ಮುಸ್ಲಿಮ್ಸ್‌ ಪೇಜ್‌ ಬಂದ್‌ ಆಗುವುದು ಯಾವಾಗ? ಬಂದ್‌ ಮಾಡಿಸುವ ಗುಂಡಿಗೆಯಾದರೂ ಯಾರಿಗಿದೆ? ಉತ್ತರ: ಗೊತ್ತಿಲ್ಲ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya