ಅಯ್ಯಪ್ಪನ ಸನ್ನಿಧಿಯಲ್ಲಿ ಕ್ರಿಸ್ತನನ್ನು ಕೂರಿಸಲು ಮಹಿಳಾಸ್ತ್ರ!

ಶಬರಿಮಲೆಗೆ ಮಹಿಳೆಯರಿಗೂ ಪ್ರವೇಶ ಬೇಕು ಎಂಬ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ಆದರೆ ಇನ್ನೂ ಪೂರ್ತಿ ತೀರ್ಪು ಹೊರಬಂದಿಲ್ಲ. ಹಾಗಾಗಿ ಅದರ ಬಗ್ಗೆ ಮಾತಾಡುವುದು ಬೇಡ. ಈಗಾಗಲೇ ಶಬರಿಮಲೆಗೆ ಹೋಗುವುದಕ್ಕೆ ಜನರು ವ್ರತ ಶುರು ಮಾಡುತ್ತಿದ್ದಾರೆ. ಕೆಲವರು ಇನ್ನೂ ಶುರು ಮಾಡುವುದರಲ್ಲಿದ್ದಾರೆ. ಆದರೆ ಈ ಸಮಯದಲ್ಲಿ ನಾವು ಕೆಲ ಇತಿಹಾಸವನ್ನು ತಿಳಿಯಬೇಕು. ಹೀಗೆ ಈ ವಿಷಯ ಕೋರ್ಟ್‌ಗೆ ಬರುವುದಕ್ಕಿಂತ ಮುಂಚೆ ಶಬರಿಮಲೆಯಲ್ಲಿ ಏನೇನಾಗಿತ್ತು ಎಂದು ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯವಾಗುತ್ತದೆ. ಅದು ಗೊತ್ತಾದರೆ ಮಾತ್ರ ನಾವು ಶಬರಿಮಲೆಯನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯ. ಇಲ್ಲವಾದರೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ದಿನೇ ದಿನೆ ನಮ್ಮ ಕಣ್ಣ ಮುಂದೆಯೇ ಮಾಯವಾಗುವುದನ್ನು ನಾವು ನೋಡಬೇಕಾಗುತ್ತದೆ.

ಹಾಗಾದರೆ ಉದ್ದೇಶವೇನು? ಒಂದೇ, ಶಬರಿಮಲೆಯಲ್ಲಿ ಅಯ್ಯಪ್ಪನ ದೇವಸ್ಥಾನದ ಬದಲಿಗೆ ಚರ್ಚ್‌ ನಿರ್ಮಾಣ ಆಗಬೇಕು ಹಾಗೂ ಅದು ಹಿಂದೂಗಳ ತೀರ್ಥಕ್ಷೇತ್ರ ಆಗದೇ, ಕ್ರಿಶ್ಚಿಯನ್ನರ ತಾಣ ಆಗಬೇಕು ಎಂದು. ಶಬರಿಮಲೆ ಮತ್ತು ಅದರ ಸುತ್ತ ಮುತ್ತ ಮತಾಂತರಗಳು ನಡೆಯುತ್ತಿರುವುದು ಇಂದು ನಿನ್ನೆಯ ಸಂಗತಿಯಲ್ಲ. ಅದು ಬಹಳ ವರ್ಷಗಳಿಂದಲೇ ನಡೆಯುತ್ತಿದೆ. ಶಬರಿಮಲೆಗೆ ಬರುವವರಿಗೆ ಏಸುವಿನ ಬಗ್ಗೆ ಹೇಳುವುದು, ಭಕ್ತಾದಿಗಳ ಕಷ್ಟಕ್ಕೆ ಬಹುದೇವರ ಆರಾಧನೆಯೇ ಕಾರಣ ಎಂದು ಸಂತ ಥಾಮಸ್‌ ಚರ್ಚ್‌ಗೆ ಕರೆದುಕೊಂಡು ಹೋಗಿ ಮತಾಂತರ ಮಾಡಿಸುವುದು.

ಶಬರಿಮಲೆಗೆ ಲಕ್ಷಾಂತರ ಜನರು ಬರುತ್ತಾರೆ. ಅದರಲ್ಲಿ ನೂರಾರು ಜನರು ಹೋದರು ಎಂದರೂ ಏನೂ ನಷ್ಟ ಇಲ್ಲ ಎಂದು ನೀವಂದುಕೊಳ್ಳಬಹುದು. ಆದರೆ ಕ್ರಿಶ್ಚಿಯನ್‌ ಮಿಷನರಿಗಳು ಅಷ್ಟನ್ನೇ ಮಾಡಿ ಸುಮ್ಮನಾಗುತ್ತಿಲ್ಲ. ಬದಲಿಗೆ ಶಬರಿಮಲೆಯನ್ನೇ ಕ್ರಿಸ್ತನ ಸ್ಥಾನವನ್ನಾಗಿ ಮಾಡಲು ಹೊರಟಿದ್ದಾರೆ. ಹೀಗೆ ಮಾಡಿದ್ದರು ಎನ್ನುವುದಕ್ಕೆ ಇರುವ ಉದಾಹರಣೆಯೇ 1950ರ ಜೂನ್‌ 15ರಂದು ಅಯ್ಯಪ್ಪನ ದೇವಸ್ಥಾನದ ಮೇಲೆ ನಡೆದ ದಾಳಿ. ಶಬರಿಮಲೆಯ ಸುತ್ತ ಇರುವ ಮತಾಂತರಗೊಂಡ ಸಿರಿಯನ್‌ ಕ್ರಿಶ್ಚಿಯನ್ನರು ದೇವಸ್ಥಾನಕ್ಕೆ ಬೆಂಕಿ ಇಟ್ಟಿದ್ದರು. ಆ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿ. ಕೇಶವನ್‌, ‘ಒಂದು ದೇವಸ್ಥಾನ ಸುಟ್ಟು ಹೋದರೆ, ಅಷ್ಟೇ ಮಟ್ಟದ ಮೂಢನಂಬಿಕೆ ಹೋಯ್ತು ಅಂತ ಅರ್ಥ’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಆಗ ತೀವ್ರ ವಿರೋಧ ಕೇಳಿಬಂದಿತ್ತು.

ಇದಾದ ನಂತರ ಕೆಲ ವರ್ಷಗಳು ಅಲ್ಲಿ ಕ್ರಿಶ್ಚಿಯನ್‌ ಮಿಷನರಿಗಳು ಸುಮ್ಮನಿದ್ದರು. ಆದರೆ ಅಷ್ಟು ಸುಲಭವಾಗಿ ಖಾಲಿಯಂತೂ ಕುಳಿತಿರಲಿಲ್ಲ. ಮತ್ತೊಂದು ಸಂಚು ರೂಪಿಸಿದ್ದರು. ದೇವಸ್ಥಾನದಿಂದ 20ಕಿಮಿ ದೂರದಲ್ಲಿ ನೀಲಕ್ಕಲ್‌ ಎಂಬ ಜಾಗದಲ್ಲಿ ಮಹಾದೇವನ ದೇವಸ್ಥಾನವಿದೆ. ಅಲ್ಲಿ 1983ರ ಮಾರ್ಚ್‌ 24ರಂದು 2000 ವರ್ಷ ಹಳೇಯ ಮರದಿಂದ ಮಾಡಿದ ಶಿಲುಬೆ ಸಿಕ್ಕಿದೆ ಹಾಗೂ ಇದನ್ನು ಸಂತ ಥಾಮಸ್‌ ತಂದದ್ದು ಎಂದು ಒಬ್ಬ ಮಿಷನರಿ ಜನರಿಗೆ ತಿಳಿಸಿಬಿಟ್ಟಿದ್ದ! ಅಷ್ಟೇ ಅಲ್ಲ, ಚೆನ್ನೈನ ಬ್ರಾಹ್ಮಣನೊಬ್ಬ ಇದನ್ನು ತಾಳಲಾರದೇ ಸಂತ ಥಾಮಸ್‌ರನ್ನು ಚಾಕುವಿನಿಂದ ಇರಿದು ಕೊಂದಿದ್ದ ಎಂಬ ಕಥೆ ಕೂಡಾ ಕಟ್ಟಿ ಸುಳ್ಳಿನ ಮೂಟೆಯನ್ನು ಉರುಳಿಸಿ ಬಿಟ್ಟಿದ್ದ .

ಇದನ್ನೆಲ್ಲ ನಂಬಿದ ಕ್ರಿಶ್ಚಿಯನ್‌ ಭಕ್ತರು ನೀಲಕ್ಕಲ್‌ಗೆ ಬರುವುದಕ್ಕೆ ಶುರು ಮಾಡಿದರು. ಇಲ್ಲಿ ಚರ್ಚ್‌ ನಿರ್ಮಾಣಕ್ಕೆ ಆಗಿನ ಸರ್ಕಾರ ಮೇ 19ರಂದು ಒಂದು ಎಕರೆ ಜಾಗವನ್ನೂ ಕೊಟ್ಟಿತು. ಆದರೆ ಇದನ್ನು ವಿರೋಧಿಸಿ ಈಗಿನ ಮಿಜೋರಾಂ ರಾಜ್ಯಪಾಲ ಕುಮ್ಮನಮ್‌ ರಾಜಶೇಖರನ್‌ ನೀತೃತ್ವದಲ್ಲಿ 6 ತಿಂಗಳು ಹೋರಾಟ ನಡೆಯಿತು. ನಂತರವೇ ನೀಲಕ್ಕಲ್‌ನಿಂದ ನಾಲ್ಕು ಕಿಮಿ ದೂರದಲ್ಲಿ ಅರಣ್ಯಪ್ರದೇಶವನ್ನು ಚರ್ಚ್‌ ನಿರ್ಮಾಣಕ್ಕೆಂದು ನೀಡಲಾಗಿತ್ತು.

ಆದರೆ ಈ ಭೂಮಿಯಲ್ಲಿ ಸಿಕ್ಕ ಶಿಲುಬೆಯ ಬಗ್ಗೆ ಸತ್ಯ ಹೇಳಲೇಬೇಕು. ಕೇರಳದ ವಾತಾವರಣಕ್ಕೆ ಮಣ್ಣಿನಲ್ಲಿ 2000 ವರ್ಷದವರೆಗೆ ಒಂದು ಮರದ ತುಂಡು ಇರುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಈ ಶಿಲುಬೆಯನ್ನು ಒಂದು ವಾರದ ಹಿಂದೆಯೋ ಅಥವಾ ತಿಂಗಳ ಹಿಂದೆ ಮಿಷನರಿಗಳೇ ತಂದು ಹಾಕಿದ್ದಾರೆ. ಅಷ್ಟೇ ಅಲ್ಲದೇ ಆ ರಸ್ತೆಗೆ ಸಂತ ಥಾಮಸ್‌ ರಸ್ತೆ ಎಂದೂ ಶಬರಿಮಲೆ ಬೆಟ್ಟವನ್ನು ಸಂತ ಥಾಮಸ್‌ ಬೆಟ್ಟ ಎಂದೂ ಅವರೇ ಮರುನಾಮಕರಣ ಮಾಡಿಕೊಂಡಿದ್ದಾರೆ. ಆದರೆ ಈ ಮಧ್ಯೆ ಒಂದು ಘಟನೆ ನಡೆಯಿತು. ಸಂತ ಥಾಮಸ್‌ ಭಾರತಕ್ಕೆ ಬಂದೇ ಇಲ್ಲ ಮತ್ತು ಯಾವ ಚೆನ್ನೈ ಬ್ರಾಹ್ಮಣನಿಂದಲೂ ಹತ್ಯೆಯಾಗಿಲ್ಲ. ಸಂತ ಥಾಮಸ್‌ ಇಟಲಿಯ ಒರ್ಟೋನಾದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವ್ಯಾಟಿಕನ್‌ ಪ್ರಮಾಣೀಕರಿಸಿದೆ ಎಂದು ನಾಝಿ ಪೋಪ್‌ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದರು. ಇದರ ಬಗ್ಗೆ ವ್ಯಾಟಿಕನ್‌ ಸಹ ಸ್ಪಷ್ಟನೆ ನೀಡಿ ಪತ್ರ ಕಳುಹಿಸಿತ್ತು. ಅಲ್ಲಿಗೆ ಕೇರಳದಲ್ಲಿರುವ ಸಿರಿಯನ್‌ ಕ್ರಿಶ್ಚಿಯನ್ನರ ಸುಳ್ಳುಬಟಾಬಯಲಾಯಿತು.

ಸರಿ, ಅಲ್ಲಿ 2000 ವರ್ಷ ಹಿಂದಿನ ಶಿಲುಬೆ ಸಿಗುವುದಕ್ಕೆ ಕ್ರಿಶ್ಚಿಯನ್‌ ಸಂತತಿ ಏನಾದರು ಇತ್ತಾ ಎಂದು ನೋಡಿದರೆ ಅದೂ ಇಲ್ಲ. ಪಾದ್ರಿ ಎಂ ಎಲ್‌ ಮಟೀರ್‌ ಎಂಬುವವನು 1883ರಲ್ಲಿ ಒಂದು ಪುಸ್ತಕ ಪ್ರಕಟಿಸಿದ್ದ. ಅದಲ್ಲ ಕೇರಳದಲ್ಲಿರುವ ಸಿರಿಯನ್‌ ಕ್ರಿಶ್ಚಿಯನ್ನರು ಅಲ್ಲಿದ್ದವರಲ್ಲ ಅಥವಾ ವಲಸೆ ಬಂದವರೂ ಅಲ್ಲ. ಬದಲಿಗೆ, ಕೇರಳದಲ್ಲಿರುವ ಬ್ರಾಹ್ಮಣರನ್ನೇ ಮತಾಂತರ ಮಾಡಿ ಕ್ರಿಶ್ಚಿಯನ್ನರನ್ನಾಗಿ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇವರ ಉಪಟಳ ಇಷ್ಟೇ ಅಲ್ಲ. ಬಹಳ ಇದೆ. ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಜನರು ಕಾಲ್ತುಳಿತಕ್ಕೆ ಸಾಯುತ್ತಿದ್ದಾರೆ ಎಂಬೆಲ್ಲ ಕೆಲ ಪ್ರಶ್ನೆಗಳನ್ನಿಟ್ಟುಕೊಂಡು ಅಷ್ಟಮಂಗಲ ದೇವಪ್ರಶ್ನೆಯನ್ನು ಇಟ್ಟರು. ಆಗ, ಈ ದೇವಸ್ಥಾನಕ್ಕೆ ಒಂದು ಮಹಿಳೆ ಬಂದು ವಿಗ್ರಹವನ್ನು ಮುಟ್ಟಿದ್ದಾಳೆ, ಹೆಂಡ, ಮಾದಕ ವಸ್ತುಗಳ ಮಾರಾಟ ಮತ್ತು ಅನೈತಿಕ ಚಟುವಟಿಕೆಗಳು ನಡೆದಿದ್ದೇ ಅಹಿತಕರ ಘಟನೆ ನಡೆಯುವುದಕ್ಕೆ ಕಾರಣ ಎಂದು ಪಿ. ಉನ್ನಿಕೃಷ್ಣ ಪಾಣಿಕ್ಕರ್‌ ಹಾಕಿದ ಪ್ರಶ್ನೆಯಲ್ಲಿ ತಿಳಿದು ಬಂತು. ಇವೆಲ್ಲವನ್ನೂ ಮಾಡಿಸುತ್ತಿದ್ದದ್ದು ಕ್ರಿಶ್ಚಿಯನ್‌ ಮಿಷನರಿಗಳು ಎಂದೂ ತಿಳಿಯಿತು.

ದೇವಪ್ರಶ್ನೆ ಮಾಡಿಸಿ ಒಂದು ತಿಂಗಳಿಗೆ ಸರಿಯಾಗಿ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಮುಖ್ಯ ಅರ್ಚಕ ಮೋಹನಾರು ಅವರನ್ನು 2006ರ ಜುಲೈ 23ರಂದು 10 ಜನರ ಗ್ಯಾಂಗ್‌ ಅಪಹರಿಸಿ ಕ್ರಿಶ್ಚಿಯನ್‌ ಆದ ಶೋಭಾ ಜಾನ್‌ ಎಂಬುವವರ ಮನೆಗೆ ಕರೆದುಕೊಂಡು ಹೋಗಿ ಚೈನು, ಉಂಗುರ ಎಲ್ಲ ಕಿತ್ತುಕೊಂಡರು. ಶೋಭಾ ಜಾನ್‌ ಒಬ್ಬ ವೇಶ್ಯೆಯಾಗಿದ್ದು, ಭಕ್ತರ ಮನಸ್ಸಲ್ಲಿ ದೇವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವುದಕ್ಕಾಗಿ ಅರ್ಚಕರ ಬಟ್ಟೆ ತೆಗೆದು, ಶೋಭಾ ಜೊತೆ ಅಶ್ಲೀಲವಾಗಿ ಫೋಟೊ ತೆಗೆಸಿ ಕಳುಹಿಸಿದ್ದರು. ಬಳಿಕ ದೂರು ನೀಡಿದರೂ ಯಾವ ಪ್ರಯೋಜನವೂ ಆಗಿರಲಿಲ್ಲ. ಏಕೆಂದರೆ ಡಿಐಜಿಗೂ ಹಣ ಕೊಟ್ಟು ಭ್ರಷ್ಟರನ್ನಾಗಿ ಮಾಡಿದ್ದರು. ಈ ಅರ್ಚಕನನ್ನು ಸಿಕ್ಕಿಹಾಕಿಸುವುದಕ್ಕೆ ಕ್ರಿಶ್ಚಿಯನ್‌ ಚರ್ಚ್‌ ಬ್ರಿಗೇಡ್‌ ಎಂಬುದನ್ನು ಪಾಶ್ಚಾತ್ಯರು ಹುಟ್ಟುಹಾಕಿದ್ದರು. ಅವುಗಳೇ ಎಲ್ಲ ಪ್ಲಾನ್‌ಗಳನ್ನು ಮಾಡಿದ್ದು ಎಂದು ರಾಹುಲ್‌ ಈಶ್ವರ್‌ ಎಂಬುವವರು ಬಯಲು ಮಾಡಿದ್ದರು.

ಈ ಎಲ್ಲದರ ಮಾಸ್ಟರ್‌ಮೈಂಡ್‌. ಬೆಚ್ಚು ರೆಹಮಾನ್‌, ಶೋಭಾ ಜಾನ್‌, ಬಿಜು ಪೀಟರ್ಸ್‌. ಬೆಚ್ಚು ರೆಹಮಾನ್‌ ದಾವೂದ್‌ ಇಬ್ರಾಹಿಂನ ಬಂಟ ಎಂಬುದು ಮರೆಯುವಂತಿಲ್ಲ. ಕ್ರಿಶ್ಚಿಯನ್ನರು, ಮುಸ್ಲಿಮರು ಎಲ್ಲರೂ ಒಟ್ಟಾಗಿ ಶಬರಿಮಲೆಯ ಹೆಸರನ್ನು ಕೆಡಿಸಬೇಕು ಎಂದು ನಿಂತಿದ್ದರು. ಆದರೆ ಸತ್ಯ ಜಗತ್ತಿಗೆ ಅಂದು ತಿಳಿಯಿತು. ಈಗಲೂ ಸಹ ಶಬರಿಮಲೆ ಮತ್ತು ಗುರುವಾಯೂರು ದೇವಸ್ಥಾನಗಳಿಗೆ ಜಿಹಾದಿಗಳ ಬೆದರಿಕೆಗಳಿವೆ.

ನೆನಪು ಮಾಡಿಕೊಳ್ಳಿ, ಶಬರಿಮಲೆ ಹತ್ತಿರದಲ್ಲೇ ಇರುವ ಕಾಡಿನಲ್ಲಿ ಬರೋಬ್ಬರಿ 360 ಕೆ.ಜಿ ಸೊಧೀಟಕಗಳು 2016ರ ಡಿಸೆಂಬರ್‌ 3-4ರಲ್ಲಿ ಪತ್ತೆಯಾಗಿತ್ತು. ಡಿಸೆಂಬರ್‌ 6 ಬಾಬ್ರಿ ಮಸೀದಿ ಒಡೆದು ಹಾಕಿದ ದಿನವಾಗಿದ್ದರಿಂದ ಹಾಗೆ ಅದರ ಸೇಡಿಗೆ ಆ ದಿನದಂದೇ ಶಬರಿಮಲೆ ಸೊಧೀಟ ಮಾಡುವ ಪ್ಲಾನ್‌ ಇತ್ತು. ಆದರೆ ಅರಣ್ಯ ಅಧಿಕಾರಿಗಳ ಕೈಗೆ ಎಲ್ಲವೂ ಸಿಕ್ಕಿದ್ದರಿಂದ ಬಚಾವ್‌ ಆಗಿದ್ದ ಅಯ್ಯಪ್ಪ!

ಶಬರಿಮಲೆ ದೇವಸ್ವಂ ಬೋರ್ಡ್‌ ಘೋಷಿಸಿಕೊಂಡಂತೆ, ಕಳೆದ ವರ್ಷ 255 ಕೋಟಿ ರು. ಆದಾಯ ಬಂದಿದೆ. ಆದರೂ ಲಕ್ಷಗಟ್ಟಲೆ ಟಾಲ್‌, ನೀರಿನ ಬಿಲ್‌, ವಿದ್ಯುತ್‌ ಬಿಲ್‌ ಕಟ್ಟುತ್ತಲೇ ಇದೆ. ತೀರ್ಥಯಾತ್ರೆಗೆ ಬರುವ ಭಕ್ತಾದಿಗಳಿಗೆ ವ್ಯವಸ್ಥೆ ಮಾಡುವುದಕ್ಕೆ ನೀಲಕ್ಕಲ್‌ನಲ್ಲಿ 110 ಎಕರೆ ಜಾಗಕ್ಕೆ ಶಬರಿಮಲೆಯಿಂದ ಸರ್ಕಾರ 6.5 ಕೋಟಿ ರು ಪಡೆದಿತ್ತು. ಆದರೆ ನಾಲ್ಕು ಕಿಮಿ ಆಚೆಗೆ ಕಟ್ಟಿರುವ ಚರ್ಚ್‌ಗೆ 58 ಎಕರೆಯನ್ನು ಸರ್ಕಾರ ಉಚಿತವಾಗಿ ಕೊಟ್ಟಿತ್ತು. 2000 ವರ್ಷ ಹಳೇಯ ಶಿಲುಬೆ ಸಿಕ್ಕಿದೆ ಎಂದು ಸುಳ್ಳು ಹೇಳಿ ಕಟ್ಟಿದ ಚರ್ಚ್‌ನ 25ನೇ ವಾರ್ಷಿಕೋತ್ಸವಕ್ಕೆ ಕಾಂಗ್ರೆಸ್‌ನ ಆಸ್ಕರ್‌ ಫನಾಂರ್‍ಡಿಸ್‌ ಬಂದಿದ್ದಲ್ಲದೇ ಏಸುವಿನ ಬಗ್ಗೆ, ಆ ಸುಳ್ಳು ಕ್ಷೇತ್ರದ ಬಗ್ಗೆ ಭಾಷಣವನ್ನೂ ಬಿಗಿದು ಹೋಗಿದ್ದರು.

ಇಷ್ಟೆಲ್ಲ ಹೇಳಿದ ಮೇಲೆ ಕೊನೇಯದಾಗಿ ಒಂದು ವಿಷಯ ಹೇಳಬೇಕು. ಅಷ್ಟಕ್ಕೂ ಈಗ ಶಬರಿಮಲೆಗೆ ಮಹಿಳೆಯರು ಹೋಗಬೇಕು ಎಂದು ಪಿಐಲ್‌ ಹಾಕಿರುವುದು ಯಾರು ಗೊತ್ತಾ? ಮಹಿಳೆಯಲ್ಲ, ಮಹಿಳಾ ಸಂಘಟನೆಯಲ್ಲ ಅಥವಾ ಹಿಂದೂ ಗಂಡಸರೂ ಅಲ್ಲ. ಬದಲಿಗೆ ಇಂಡಿಯನ್‌ ಯಂಗ್‌ ಲಾಯರ್ಸ್‌ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ನೌಶದ್‌ ಅಹ್ಮದ್‌ ಖಾನ್‌ ಮತ್ತು ಹಾಲಿ ಅಧ್ಯಕ್ಷ ಕರಣ್‌ ಸಿಂಗ್‌ ಚಾಂಡಿಯೋಕ್‌. ಮತ್ತೊಂದು ವಿಷಯ ಏನೆಂದರೆ, ಕರಣ್‌ ಸಿಂಗ್‌ ಅವರ ಅಪ್ಪ ನನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ 2009ರ ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿಯಲ್ಲಿ ನೇಮಕೊಂಡಿದ್ದರು. ಈಗ ನಿಮಗೆ ಇದರ ಹಿಂದೆ ಯಾರಾರ‍ಯರಿದ್ದಾರೆ, ಹಾಗೂ ಸುಪ್ರೀಂ ಕೋರ್ಟ್‌ಗೆ ಹೋಗಿದ್ದೇಕೆ ಎಂದು ಸ್ಪಷ್ಟವಾಗಿ ತಿಳಿದಿರಬಹುದು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya