ನಮ್ಮ ಶಾಲೆಗಳಿಗೂ ನುಗ್ಗಿದ ಮಿಷ ‘ನರಿ’ಗಳು!

 

ಬಹಳ ವರ್ಷಗಳ ಹಿಂದೆ, 1835ರ ಫಬ್ರವರಿ 2ರಂದು ಲಾರ್ಡ್‌ ಮೆಕಾಲೆ ಭಾರತದ ಬಗ್ಗೆ ಸಂಪೂರ್ಣ ಅಧ್ಯಯನ ಮುಗಿಸಿ ಬಂದ ಮೇಲೆ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸುವುದಕ್ಕೆ ಬ್ರಿಟನ್‌ ಪಾರ್ಲಿಮೆಂಟ್‌ನಲ್ಲಿ ಹೇಳಿದ್ದರೆನ್ನಲಾದ ಮಾತಿದು: ಭಾರತದ ಉದ್ದಗಲವೂ ನಾನು ಓಡಾಡಿದ್ದೇನೆ. ಅಲ್ಲಿ ನನಗೆ ಒಬ್ಬನೇ ಒಬ್ಬ ಭಿಕ್ಷುಕ ಇಲ್ಲ, ಕಳ್ಳರಿಲ್ಲ. ಇಂಥ ಸಂಸ್ಕೃತಿ, ಆಚಾರ ವಿಚಾರಗಳಿಂದ ಸಮೃದ್ಧವಾಗಿರುವ ದೇಶವನ್ನು ನಾವು ವಶಪಡಿಸಿಕೊಳ್ಳಬೇಕು ಅಂದರೆ ಇಲ್ಲಿನ ಪುರಾತನ ವಿದ್ಯಾಭ್ಯಾಸ ಪದ್ಧತಿಯನ್ನು ಬದಲಾಯಿಸಬೇಕು. ಇಂಗ್ಲಿಷ್‌ ಎಲ್ಲಕ್ಕಿಂತಲೂ ಸರ್ವ ಶ್ರೇಷ್ಠ ಎಂಬ ಭಾವನೆಯನ್ನು ಅವರಲ್ಲಿ ತರಬೇಕು. ಆಗ ನಾವು ಏನೆಂದುಕೊಂಡಿದ್ದೇವೋ ಅದು ಸಾಧ್ಯವಾಗುತ್ತದೆ ಎಂದಿದ್ದರು.

ಆದರೆ ಈಗ ಮೆಕಾಲೆ ಹೇಳಿದ ಹಾಗೆ ನಡೆಯುತ್ತಿದೆಯಾ ಅಥವಾ ಅವನು ಹೇಳಿದ್ದನ್ನು ಕ್ರಿಶ್ಚಿಯನ್‌ ಮಿಶನರಿಗಳು ಅನುಸರಿಸುತ್ತಾ ಬಂದಿದ್ದಾರಾ? ಎಂಬ ಅನುಮಾನ ಮೂಡುತ್ತಿದೆ.  ಕಾರಣ ಮೊನ್ನೆ ಉತ್ತರ ಪ್ರದೇಶದಲ್ಲಿ ನಡೆದ ಒಂದು ಘಟನೆ.

ಉತ್ತರ ಪ್ರದೇಶದ ಮೀರತ್‌ನಲ್ಲಿ ಸೋಫಿಯಾ ಶಾಲೆ ಎಂದಿದೆ. ಸೋಫಿಯಾ ಸೊಸೈಟಿ ಆ ಶಾಲೆಯನ್ನು ನಡೆಸುತ್ತಿದೆ. ಹೆಸರೇ ಹೇಳುವಂತೆ ಇದು ಕ್ರಿಶ್ಚಿಯನ್‌ ಶಾಲೆ. ಈಗ ಶಾಲೆ ಕ್ರಿಶ್ಚಿಯನ್‌ ಮಿಷನರಿಗಳ ಟ್ರಸ್ಟ್‌ಗಳ ಅಕೌಂಟ್‌ಗಳಿಗೆ ಹಣ ಕಳುಹಿಸುತ್ತದೆ. ಯಾಕಾಗಿ ಹಣ ಕಳುಹಿಸಿತು ಏನು ಎಂಬುದಕ್ಕೆ ಸಂಸ್ಥೆಯ ಬಳಿ ಉತ್ತರವೇ ಇಲ್ಲವಾಗಿದೆ.

ಒಟ್ಟಾರೆ 2006ರಿಂದ 2014ರವರೆಗೆ ಶಾಲೆಯಲ್ಲಿ ಸಂಗ್ರಹವಾದ ಹಣವನ್ನು ಸೊಸೈಟಿಯ ಮೂಲಕ ಬೇರೆ ಬೇರೆ ಕ್ರಿಶ್ಚಿಯನ್‌ ಮಿಷನರಿಗಳ ಅಕೌಂಟ್‌ಗಳಿಗೆ ಒಟ್ಟು 2 ಕೋಟಿ 64ಲಕ್ಷದ 90 ಸಾವಿರ ರುಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಅತಿ ಹೆಚ್ಚು ಹಣ ಪಡೆದುಕೊಂಡ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ನಿಲ್ಲುವುದು ಅಜ್ಮೆರ್‌ನ ಮಿಷನ್‌ ಸಿಸ್ಟರ್ಸ್‌ ಎಂಬ ಕ್ರಿಸ್ತನ ಸಂದೇಶವನ್ನು ಸಾರುವ, ಕ್ರಿಸ್ತನ ಪ್ರೇಮವನ್ನು ಊರೆಲ್ಲ ಹಂಚುವ ಒಂದು ಸಂಸ್ಥೆಗೆ. ಅದೊಂದೇ ಸಂಸ್ಥೆಗೆ 2.11 ಕೋಟಿ ರುಪಾಯಿಗಳನ್ನು ನೀಡಲಾಗಿದೆ. ಇನ್ನು ಮೀರತ್‌ನ ಫಾತಿಮಾ ಸೊಸೈಟಿಗೆ 44.30 ಲಕ್ಷ ರುಪಾಯಿ, ಸೋಫಿಯಾ ವಿದ್ಯಾಸಂಸ್ಥೆಗೆ 7.5 ಲಕ್ಷ, ಸಂತ ಕ್ಲೇರ್‌ ಸವೀರ್‍ಸ್‌ ಸದನ್‌ಗೆ 50 ಸಾವಿರ ಹಾಗೂ ಗೋವಾದ ಮಾಡೆಲ್‌ ಸ್ಕೂಲ್‌ ಎಜುಕೇಶನಲ್‌ ಸೊಸೈಟಿಗೆ 1.5 ಲಕ್ಷ ರುಪಾಯಿ ಹಣ ವರ್ಗಾವಣೆ ಮಾಡಿದೆ.

ಆದರೆ ಸೊಸೈಟಿ ಆ್ಯಕ್ಟ್ ಪ್ರಕಾರ ಹಾಗೆಲ್ಲ ಇಷ್ಟ ಬಂದಂತೆ ಬೇರೆಯವರಿಗೆ ಸೊಸೈಟಿಯ ಹಣ ವರ್ಗಾವಣೆ ಮಾಡುವಂತಿಲ್ಲ. ಅದನ್ನು ಶಾಲೆಯ ಖರ್ಚಿಗೆ ಮಾತ್ರ ಬಳಸತಕ್ಕದ್ದು. ಆದರೆ ಸೋಫಿಯಾ ಸೊಸೈಟಿ ತನ್ನ ಶಾಲೆಗೆ ಯಾವುದನ್ನೂ ಬಳಸದೇ ಬಹುತೇಕ ಹಣವನ್ನು ಬೇರೆಡೆ ಸಾಗಿಸುತ್ತಾ ಬಂದಿದೆ.

ರೆಜಿಸ್ಟ್ರಾರ್‌ಗಳು ಇದರ ಮೇಲೆ ತಪಾಸಣೆ ಶುರು ಮಾಡಿದ್ದಾರೆ. 2015-2018ರ ವರ್ಷದವರೆಗೆ ಬಹಳ ಹಣ ವರ್ಗಾವಣೆ ಆಗಿದೆ ಎಂದು ಶಂಕಿಸಿ ಬ್ಯಾಲೆನ್ಸ್‌ ಶೀಟ್‌ ಕೊಡಿ ಎಂದು ಆದೇಶ ನೀಡಿದ್ದಾರೆ. ಅದಕ್ಕೆ ಶಾಲೆಯವರ ಉತ್ತರ ಇಲ್ಲ. ಇದಲ್ಲದೇ, ಏಪ್ರಿಲ್‌ 23ರಂದು, ಮೇ 2ರಂದು ಮತ್ತು ಮೇ 19ರಂದು ಸೊಸೈಟಿಗೆ ಈ ಸಂಬಂಧ ನೋಟಿಸ್‌ ನೀಡಿದೆ. ಇದುವರೆಗೂ ಸೊಸೈಟಿ ಇಂದ ಅಥವಾ ಸೋಫಿಯಾ ಶಾಲೆಯಿಂದ ಆಗಲಿ ಯಾವುದೇ ಪ್ರತಿಕ್ರಿಯೆ ಇಲ್ಲ.

ಇನ್ನೊಂದು ವಿಚಾರ ಗಮನಿಸಬೇಕು. ಈ ಸೋಫಿಯಾ ಶಾಲೆ ಭಾರತದಲ್ಲಿ ಇರುವುದು. ಆದರೆ ಇದು ಹಣ ಕೊಡುತ್ತಿರುವುದು ಯಾವುದೋ ಒಂದು ವಿದೇಶಿ ಮಿಷನರಿ ನಿರ್ಮಿಸಿರುವ ಮಿಷನ್‌ ಸಿಸ್ಟರ್ಸ್‌ ಎಂಬ ಸಂಸ್ಥೆಗೆ.

ಅತ್ಯಂತ ಹೆಚ್ಚು ಹಣ ಪಡೆದಿರುವ ಮಿಷನ್‌ ಸಿಸ್ಟರ್ಸ್‌ ಸಂಸ್ಥೆ ಬಹಳ ವರ್ಷಗಳಿಂದ ಏಸುವಿನ ಬಗ್ಗೆ ಜನರಿಗೆ ಹೇಳುತ್ತಾ ಬಂದಿದೆ. ಹಾಗೂ ಇದರ ಕೆಲಸವೇ ಇದು. ಬಡವರ ಮನೆಗಳಿಗೆ ಹೋಗುವುದು, ಅವರಿಗೆ ಬೈಬಲ್‌ ನೀಡಿ, ಏಸುವಿನ ಪ್ರಾರ್ಥನೆ ಮಾಡಿ, ನಿಮ್ಮನ್ನು ಏಸು ಪ್ರೀತಿಸುತ್ತಾನೆ ಎಂದು ಹೇಳುವುದು. ಇದನ್ನೇ ಮಾಡಿಕೊಂಡು ಬಂದಿರುವ ಸಂಸ್ಥೆಯನ್ನು ಹುಟ್ಟುಹಾಕಿದ್ದು ಬಿಷಪ್‌ ಹೆನ್ರಿ ಕಾವ್ಮೊಂಟ್‌ ಎಂಬುವವನಿಂದ. ಮೂಲತಃ ಫ್ರಾನ್ಸ್‌ ಪ್ರಜೆಯಾದ ಈತ 1911 ಈ ಸಂಸ್ಥೆಯನ್ನು ಶುರು ಮಾಡಿದ್ದು.

ಹೇಳಿ, ಈ ಸಂಸ್ಥೆಗೆ ಹಣ ಕೊಡುವ ದರ್ದು ಭಾರತದ ಶಾಲೆಗಳಿಗೇಕೆ ಇದೆ? ಯಾಕೆಂದರೆ, ಮೆಕಾಲೆ ಹೇಳಿದ ಹಾಗೆ ಭಾರತವನ್ನು ಒಡೆಯುವುದಕ್ಕೆ ಇಂಥ ಶಾಲೆಗಳಿಗೆ, ಅದರ ಹುಟ್ಟಿಗೆ ಸಹಾಯ ಮಾಡಿದ್ದು ಮಿಷನ್‌ ಸಿಸ್ಟರ್ಸ್‌ ಮಾದರಿಯ ಎನ್‌ಜಿಒಗಳೇ. ಈಗ ಅದರ ಋುಣ ಸಂದಾಯ ಅಷ್ಟೇ.

ಸಾಧ್ಯವಾದರೆ ಒಮ್ಮೆ. https://www.thegospelfund.com ಎಂಬ ಜಾಲತಾಣಕ್ಕೆ ಹೋಗಿ ನೋಡಿ. ಇದು ನೇರವಾಗಿ ಕ್ರಿಸ್ತನ ಪ್ರಚಾರದಲ್ಲಿ ತೊಡಗಿದೆ. ಅಷ್ಟೇ ಅಲ್ಲ, ಮತಾಂತರ ಮಾಡುವುದರಿಂದ ಹಿಡಿದು ಭಾರತದ ಬಹುತೇಕ ಕ್ರಿಶ್ಚಿಯನ್‌ ಸಂಸ್ಥೆಗಳಿಗೆ ಜೀಸಸ್‌ನ ಹೆಸರಿನಲ್ಲಿ ಹಣ ನೀಡುವುದು ಇದೇ ಸಂಸ್ಥೆ. ನಾವು ಮಾನವ ಸಾಗಣೆಯನ್ನೂ ಮಾಡುತ್ತೇವೆ ಎಂದು ಬರೆದುಕೊಂಡಿರುವ ಏಕೈಕ ಜಾಲತಾಣ ಎಂದರೆ ಇದೇ ಇರಬೇಕೇನೋ?! ಇದರ ಜತೆಗೆ ಚರ್ಚ್‌ಗಳನ್ನು ಸ್ಥಾಪಿಸುವುದು, ಬೈಬಲ್‌ ಹಂಚುವುದು ಇವೆಲ್ಲವೂ ಸಂಸ್ಥೆ ಮಾಡುವ ಕೆಲಸಗಳು ಎಂದು ಜಾಲತಾಣದಲ್ಲೇ ಹಾಕಿಕೊಂಡಿದೆ.

ಸಾಕಷ್ಟು ಸಂಸ್ಥೆಗಳು ಹೀಗೆ ಅಣಬೆಗಳಂತೆ ಹುಟ್ಟಿಕೊಂಡಿದೆ. ಇದರ ಮೂಲ ಉದ್ದೇಶ ಒಂದೇ. ಶಾಲೆಗಳಲ್ಲಿ ಮಕ್ಕಳು ಕ್ರಿಸ್ತನನ್ನೇ ಆರಾಧಿಸುವಂತೆ ಮಾಡಿ, ಕ್ರಿಸ್ತ ಹಾಗೂ ಕ್ರೈಸ್ತ ಧರ್ಮವನ್ನು ಒಪ್ಪಿಕೊಳ್ಳುವಂತೆ ಮಾಡುವುದು. ಇದೇ ಅವರ ಸಂಪೂರ್ಣ ಅಜೆಂಡಾ.

ನೀವು ಈಗಲೂ ಕ್ರಿಶ್ಚಿಯನ್‌ ಶಾಲೆಗಳಿಗೆ ಹೋದರೆ ನಿಮಗೆ ಕಾಣುವುದು ಅದೇ ಪಾಶ್ಚಿಮಾತ್ಯರ ಕಲಾಕೃತಿಗಳು, ಅವರ ಶಿಲ್ಪಕಲೆಗಳು ಇತ್ಯಾದಿ. ಅದೆಲ್ಲ ಬಿಡಿ, ಮೈಸೂರಿನಲ್ಲಿ ಕೆಲ ಕ್ರಿಶ್ಚಿಯನ್‌ ಶಾಲೆಗಳಿವೆ. ಅವುಗಳಲ್ಲಿ ಕ್ರಿಸ್ತನ ಹೆಸರಿನಲ್ಲೇ ಪ್ರೇಯರ್‌ ನಡೆಯುತ್ತದೆ. ಆಗ ಎಲ್ಲ ವಿದ್ಯಾರ್ಥಿಗಳೂ ಹಾಜರಿರಬೇಕು ಎಂಬುದು ನಿಯಮ. ಒಮ್ಮೆ ಹಾಜರಾಗದಿದ್ದರೆ ಅಲ್ಲಿನ ಮಕ್ಕಳಿಗೆ ಇಡೀ ದಿನ ಹಾಜರಾತಿ ನೀಡದಿರುವುದೂ ಉಂಟು.

ಇನ್ನು ಹಿಂದೂಗಳ ಒಡೆತನದ ಶಾಲೆಗಳಲ್ಲಿ ಕ್ರಿಶ್ಚಿಯನ್‌, ಮುಸ್ಲಿಂ ಧರ್ಮದ ಶಿಕ್ಷಕರನ್ನೂ ನೇಮಿಸಿಕೊಳ್ಳುತ್ತಾರೆ. ಆದರೆ ಕ್ರಿಶ್ಚಿಯನ್‌ ಶಾಲೆಗಳಲ್ಲಿ ಮಾತ್ರ 99% ಕ್ರಿಶ್ಚಿಯನ್‌ ಶಿಕ್ಷಕರೇ ಇರುತ್ತಾರೆ. ಆದರೆ ಇದರ ಬಗ್ಗೆ ಯಾರೂ ಧ್ವನಿ ಎತ್ತುವುದಿಲ್ಲ.

ಬೆಂಗಳೂರಿನ ಒಂದು ಪ್ರತಿಷ್ಠಿತ ಕ್ರಿಶ್ಚಿಯನ್‌ ಶಾಲೆಗಳಲ್ಲಿ  ಹಿಂದೂ ಮಕ್ಕಳಿಗೆ 10ನೇ ಕ್ಲಾಸ್‌ ಪರೀಕ್ಷೆಗೆ ಕೂರಿಸದೇ ಇರುವ, ಅಥವಾ ಅಂಕ ಕೊಡದೇ ನಪಾಸು ಮಾಡುವ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ಎಲ್ಲ ಶಾಲೆಗಳದ್ದೂ ಒಂದು ನಿಯಮವಾದರೆ ಈ ಶಾಲೆಯದ್ದು ಮಾತ್ರ ಒಂದು ನಿಯಮ. ಒಬ್ಬ ಕ್ರಿಶ್ಚಿಯನ್‌ ಹುಡುಗ ಕ್ರಾಸ್‌ ಹಾಕಿಕೊಂಡು ಶಾಲೆಗೆ ಬರಬಹುದು ಆದರೆ ರುದ್ರಾಕ್ಷಿ ಮಾಲೆ ಅಥವಾ ಸಧಿಟಿಕ ಸರ ಹಾಕಿಕೊಂಡು ಬಂದರೆ ಅವನಿಗೆ ತರಗತಿಯಲ್ಲಿ ಎಲ್ಲರ ಮುಂದೆ ಕರೆದು ಸರ ಬಿಚ್ಚಿಸುತ್ತಾರೆ. ನಿನ್ನದು ಮೂಢನಂಬಿಕೆ ಎಂದು ಇಡೀ ತರಗತಿಯ ಮಕ್ಕಳಿಗೆ ಶೇಮ್‌ ಶೇಮ್‌ ಹೇಳಲು ಹೇಳುತ್ತಾರೆ.

ಇಷ್ಟೇ ಯಾಕೆ? ಬಹುತೇಕ ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ ಮಾರಲ್‌ ಸೈನ್ಸ್‌ ಎಂಬ ಒಂದು ವಿಷಯ ಇರುತ್ತದೆ. ಇದು ಕೊನೇಯ ಪೀರಿಯಡ್‌ನಲ್ಲಿ ಅಥವಾ ವಾರದಲ್ಲಿ ಒಂದು ದಿನದಂದು ಇರುವ ತರಗತಿ. ಈ ಪೀರಿಯಡ್‌ನಲ್ಲಿ ಹಿರಿಯರಿಗೆ ಹೇಗೆ ಗೌರ ಕೊಡಬೇಕು, ಹೇಗೆ ಮಾತಾಡಿಸಬೇಕು, ನಾವು ಹೇಗೆ ಶುದ್ಧವಾಗಿರಬೇಕು, ಒಳ್ಳೆಯ ಹವ್ಯಾಸಗಳು, ಕೆಟ್ಟ ಹವ್ಯಾಸಗಳು ಮತ್ತು ನಡತೆಗಳ ಬಗ್ಗೆ ಬೋಧನೆ ಮಾಡುತ್ತಾರೆ. ಆದರೆ ಕ್ರಿಶ್ಚಿಯನ್‌ ಶಾಲೆಗಲ್ಲಿ ಮಾರೈಲ್‌ ಸೈನ್ಸ್‌ ಎಂದರೆ ಹಿಂದೂ ಪದ್ಧತಿಗಳನ್ನು ನಿಂದಿಸುವುದು, ಬಹುದೇವರ ಆರಾಧನೆ ತಪ್ಪೆನ್ನುವುದು ಮಾಡಿ, ಕೊನೆಗೆ ಜೀಸಸ್‌ ಎಂಥ ಮನುಕುಲ ಉದ್ಧಾರಕ ಎಂಬೆಲ್ಲ ವಿವರಗಳನ್ನು ಹೇಳಿ, ಕೊನೆಗೆ ಶಾಂತಿ ಮಂತ್ರ ಎಂದು ಪ್ರೇಯರ್‌ ಹೇಳಿ ಮುಗಿಸುತ್ತಾರೆ.

ಹೀಗೆ ಅಷ್ಟೂ ಕ್ರಿಶ್ಚಿಯನ್‌ ಸಂಸ್ಕೃತಿಯನ್ನು ಕಲಿಸಿದ ಮೇಲೆ ಅದೂ ಸಾಲದೆಂಬಂತೆ ಹಂತ ಹಂತವಾಗಿ ಹೇಗೆ ಅವರು ಮಕ್ಕಳಿಗೆ ಕ್ರಿಶ್ಚಿಯಾನಿಟಿ ಕಲಿಸುತ್ತಾರೆ ನೋಡಿ. ಬಹಳಷ್ಟು ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕ್ರಿಶ್ಚಿಯನ್‌ ಶಾಲೆಗಳಲ್ಲಿ ಇವತ್ತಿಗೂ ಮಕ್ಕಳನ್ನು ಮತಾಂತರ ಮಾಡುವ ಪ್ರಯತ್ನವೂ ನಡೆಯುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ಬಹಳ ನಾಜೂಕಾಗಿ, ಹಿಂದೂ ಸಂಸ್ಕೃತಿ, ಆಚಾರ ವಿಚಾರಗಳನ್ನು ಹೀಯಾಳಿಸುವ ಮೂಲಕ ಕ್ರಿಶ್ಚಿಯನ್‌ ಧರ್ಮವೇ ಶ್ರೇಷ್ಠ ಎನ್ನುತ್ತಾರೆ.

ಕೆಲ ವರ್ಷದ ಉದಾಹರಣೆಗಳನ್ನೇ ತೆಗೆದುಕೊಂಡರೆ, 2014ರಲ್ಲಿ ಬೆಂಗಳೂರಿನ ಮೇರಿ ಇಮ್ಯಾಕ್ಯುಲೇಟ್‌ ಇಂಗ್ಲಿಷ್‌ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಶಾಲೆಯ ಹೊರಗೆ ಹೋಳಿಯನ್ನು ಆಚರಿಸಿದ್ದಾರೆ ಎಂದು ಅವರಿಗೆ ಶಿಕ್ಷೆ ನೀಡಿದ್ದರು, ಶಾಲೆಗೆ ಬರದಂತೆ ನಿಬಂರ್‍ಧಿಸಿದ್ದರು. ಈ ನೋವನ್ನು ಸಹಿಸಲಾರದೇ ಪ್ರಿಯಾಂಕಾ ಮತ್ತು ಸೊನಾಲಿ ಗುಪ್ತಾ ಎಂಬ ವಿದ್ಯಾರ್ಥಿನಿಯರು ಸ್ಯಾಂಕಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೆನೆಯಬಹುದು.

ಕ್ರಿಶ್ಚಿಯನ್ನರು ಕೇವಲ ಅವರ ಧರ್ಮ ಪ್ರಚಾರ ಮಾಡಿದರೆ ಯಾರಿಗೂ ಅಡ್ಡಿಯಿಲ್ಲ. ಅದಕ್ಕೆ ಸಂವಿಧಾನವೂ ಅಡ್ಡ ಬರುವುದಿಲ್ಲ. ಆದರೆ ಜೀಸಸ್‌ನ ಬಗ್ಗೆ ಹೇಳುವುದಕ್ಕೆ ಒಳ್ಳೆಯದಿಲ್ಲದೇ ಹಿಂದೂಗಳ ದೇವರನ್ನು ನಿಂದಿಸಿದರೆ ಅದಕ್ಕೆ ಯಾರೂ ಒಪ್ಪುವುದಿಲ್ಲ.

ಹೀಗೆ ಶಾಲೆಗಳಲ್ಲಿ ಮಕ್ಕಳ ಮನಸ್ಸಿಗೆ ಕ್ರಿಸ್ತನೇ ಸರ್ವಶ್ರೇಷ್ಠ ಎಂಬುದನ್ನು ಬಿತ್ತುವುದಕ್ಕೇ ಕೆಲ ಎನ್‌ಜಿಓಗಳು ಹಣ ನೀಡುವುದು. ಕೆಲವೊಮ್ಮೆ ಯಥೇಚ್ಛವಾಗಿ ಹಣ ಬಂದರೆ, ಶಾಲೆಗಳೇ ಎನ್‌ಜಿಒಗೆ ಹಣ ನೀಡುತ್ತದೆ.

ಉತ್ತರ ಪ್ರದೇಶದಲ್ಲಿ ಸೋಫಿಯಾ ಶಾಲೆ ಹಣ ನೀಡಿರುವುದರ ಹಿಂದೆ ಇದೇ ಉದ್ದೇಶ ಕಾಣುತ್ತಿದೆ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya