ದೆವ್ವಗಳಿಗೆ ಅಮಾವಾಸ್ಯೆ ಹೇಗೋ, ಉಗ್ರರಿಗೆ ರಂಜಾನ್‌ ಹಾಗೆ!

ಪಾಕಿಸ್ತಾನದಿಂದ ಗಡಿ ನಿಯಮ ಉಲ್ಲಂಘನೆ, ಪಾಕ್‌ನಿಂದ ಗುಂಡಿನ ದಾಳಿ, ನಾಗರಿಕರಿಗೆ ಗಾಯ, ಮಕ್ಕಳು ಸೇರಿದಂತೆ 12 ಬಿಎಸ್‌ಎಫ್‌ ಯೋಧರ ಸಾವು, 60ಕ್ಕೂ ಹೆಚ್ಚು ಜನರಿಗೆ ಗಾಯ…ಕಳೆದ ಒಂದು ವಾರದ ಯಾವುದೇ ದಿನಪತ್ರಿಕೆಗಳನ್ನು ತೆಗೆದು ನೋಡಿ. ಎಲ್ಲದರಲ್ಲೂ ಇದೇ ಹೆಡ್‌ಲೈನ್‌ಗಳು, ಇದೇ ಸುದ್ದಿ, ಇದೇ ಸಮಾಚಾರ. ಬಹಳ ಹಿಂದೆ ಹೋಗುವುದು ಏಕೆ? ನಿನ್ನೆ ಕಾಶ್ಮೀರದಲ್ಲಿ ಕಲ್ಲು ತೂರಾಟ ಮಾಡುವ ಮುಸ್ಲಿಮರು ನಮ್ಮ 28 ಸಿಆರ್‌ಪಿಎಫ್‌ ಯೋಧರಿರುವ ವ್ಯಾನ್‌ ಅನ್ನು ನೆಲಕ್ಕುರುಳಿಸಿ, ಯೋಧನನ್ನು ನೆಲಕ್ಕೆ ಎಳೆದು ಮತ್ತಷ್ಟು ಕಲ್ಲು ಎಸೆದು ಕೊಲ್ಲಲು ನೋಡುತ್ತಾರೆ. ಸ್ಥಳಕ್ಕೆ ಬಂದ ಇನ್ನಿತರ ಯೋಧರು, ಸಾವಿನಿಂದ ಪಾರು ಮಾಡುತ್ತಾರೆ. ಆದರೆ ಆ ಯೋಧನ ತಲೆ ತುಂಬ ರಕ್ತವೋ ರಕ್ತ.
25.05.2018ರಂದು ಕಾಶ್ಮೀರದ ಬಂಡಿಪೊರಾ ವಲಯದಲ್ಲಿ ಐದು ಲಷ್ಕರ್‌-ಎ-ತಯ್ಯಬಾದ ಉಗ್ರರು ಯಾಕೂಬ್‌ ಅವರ ಮನೆಗೆ ನುಗ್ಗಿ ಅವನ ಕತ್ತನ್ನು ಸೀಳಿದ್ದಾರೆ.  ಯಾಕೆ ಹೀಗೆ? ಒಂದೇ ಸಮನೆ ಯಾಕಿಷ್ಟು ದಾಳಿಗಳು, ಹತ್ಯೆಗಳು? ಉಗ್ರರು ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರಾ? ಇಲ್ಲ. ನಾವೊಂದು ಸಂಗತಿಯನ್ನು ಗಮನಿಸೋಣ. ಈ ಎಲ್ಲ ದಾಳಿಗಳು ನಡೆದಿದ್ದು ಯಾವ ಸಮಯದಲ್ಲಿ? ಎಲ್ಲವೂ ಈ ರಂಜಾನ್‌ ಮಾಸದಲ್ಲೇ ನಡೆದಿರುವುದು.
ಈಗ ನೀವು ಕೇಳಬಹುದು, ದೀಪಾವಳಿ, ಚೌತಿ, ಸಂಕ್ರಾಂತಿ, ಯುಗಾದಿಯ ಸಮಯದಲ್ಲಿ ಆಗುವ ಹತ್ಯೆಗಳನ್ನು ಹಿಂದೂಗಳ ಮೇಲೆ ಹಾಕುತ್ತೀರಾ ಎಂದು. ಆದರೆ ಇಲ್ಲಿ ವಿಚಾರ ಮುಸ್ಲಿಮರು ಮತ್ತು ರಂಜಾನ್‌ ಅಲ್ಲ. ಬದಲಿಗೆ ಇಸ್ಲಾಂ ಅನ್ನು ತಪ್ಪಾಗಿ ಅರ್ಥೈಸಿಕೊಂಡಿರುವ, ಅದೇ ಹಳೆಯ ಗ್ರಂಥದಲ್ಲಿರುವ ಮಹಮ್ಮದರ ಕಾಲದ ವಾಕ್ಯಗಳನ್ನೇ ಪಾಲಿಸುತ್ತಿರುವ ಕೆಲ ತೀವ್ರಗಾಮಿಗಳು, ಉಗ್ರಗಾಮಿಗಳ ಬಗ್ಗೆ. ರಂಜಾನ್‌ನಲ್ಲಿ ಉಪವಾಸ ಮತ್ತು ದಾನಗಳನ್ನು ಮಾಡುವ ಮುಸ್ಲಿಮರು ಒಂದು ಕಡೆಯಾದರೆ, ಕಂಡ ಕಂಡವರನ್ನು ಕೊಲ್ಲುವ ಮುಸ್ಲಿಮರು ಇನ್ನೊಂದು ಕಡೆ. ಇಂಥವರಿಂದ ಸಭ್ಯ ಮುಸ್ಲಿಮರೂ ತಲೆ ಎತ್ತಿಕೊಂಡು ಓಡಾಡುವುದಕ್ಕೂ ಕಷ್ಟವಾಗಿದೆ.
ರಂಜಾನ್‌ ದಿನದಲ್ಲಿ ಭಾರತ ಗಡಿಯಲ್ಲಿ ಗುಂಡಿನ ದಾಳಿ ನಡೆಸಬಾರದು ಎಂದು ರಾಜನಾಥ ಸಿಂಗ್‌ ಆದೇಶ ನೀಡಿದ್ದಾರೆ. ಆದರೆ ಪಾಕ್‌ ಮುಸ್ಲಿಮರು ಇಂಥ ಶಾಂತಿ ನೀತಿಯನ್ನು ಅನುಸರಿಸುತ್ತಿದ್ದಾರಾ? ಅಥವಾ ಕುರಾನ್‌ ಅನ್ನು ಅನುಸರಿಸಿ ಜನರನ್ನು ಕೊಲ್ಲುತ್ತಿದ್ದಾರಾ?
ಹೌದು, ಭಾರತದ ಮೇಲೆ ಪಾಕ್‌ ದಾಳಿ ಮಾಡುತ್ತಿರುವುದಕ್ಕೆ ಮತ್ತು ವಿಶ್ವಾದ್ಯಂತ ರಂಜಾನ್‌ ಸಮಯದಲ್ಲಿ ಆಗುತ್ತಿರುವ ಅವಘಡಗಳಿಗೆ ಕಾರಣ ಕುರಾನ್‌ನಲ್ಲೇ ಇದೆ.  ಕುರಾನ್‌ನ ಅತ್‌-ತೌಬಾ ಸುರಾಹ್‌ 9, ಆಯತ್‌ 5ರಲ್ಲಿ ಯಥಾವತ್‌ ಹೀಗಿದೆ:
ಫಈದಾಂ ಇನ್ಸೆಲಖೋ ಎಲ್‌ಎಶ್‌ಹುರು ಎಲ್‌ಹುರುಮು ಫಕುತುಲುಲ್‌ ಮುಶ್ರಿಕೀನ ಹೇಯ್ಸು ವಜತ್ತುಮೂಹುಂ ವಹುಝೋಹುಂ ವಹ್ಸುರೂಹುಂ ವಕೊರುದು ಲೆಹುಂ ಕುಲ್ಲೆ ಮೆರುಸ್ವದೀನ್‌ ಫಇನ್‌ ತ್ಯಾಬೂ
ವಅಕ್ವಾಮೂ ಎಸ್ವಲ್ಯಾತ್ಯಾ ವಆ್ಯತವೂಂ ಅಝ್ಝಕ್ಯಾತಾ ತ್ವಖ್ವಲ್ಲೂ ಸಬೀಲೆಹುಂ ಇನ್ನೆಲ್ಲಾಹ್‌ ವಫೂರೂನ್‌ ರಹೀಮ್‌
ಇದರ ಅರ್ಥ ಹೀಗಿದೆ: ಪವಿತ್ರ ಮಾಸ(ರಂಜಾನ್‌) ಕಳೆದ ಬಳಿಕ ‘ಬಹುದೇವರ ಆರಾಧಕರ’ನ್ನು ಸಿಕ್ಕಲ್ಲಿ ಕೊಂದು ಹಾಕಿರಿ/ಹತ್ಯೆ ಮಾಡಿರಿ. ಅವರನ್ನು ಸೆರೆಹಿಡಿಯಿರಿ. ಮುತ್ತಿಗೆ ಹಾಕಿರಿ. ಬೇಹು ನಡೆಸುವಲ್ಲೆಲ್ಲ ಅವರನ್ನು ಹೊಂಚುಹಾಕುತ್ತ ಕುಳಿತುಕೊಳ್ಳಿರಿ. ಮುಂದೆ ಅವರು ಪಶ್ಚಾತ್ತಾಪಪಟ್ಟರೆ, ನಮಾಜನ್ನು ಸಂಸ್ಥಾಪಿಸಿದರೆ ಮತ್ತು ಝಕಾತ್‌ ಕೊಟ್ಟರೆ ಅವರನ್ನು ಬಿಟ್ಟುಬಿಡಿರಿ. ಏಕೆಂದರೆ ಅಲ್ಲಾಹ್‌ ಕ್ಷ ಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.
ಕುರಾನ್‌ನ 2ನೇ ಅಧ್ಯಾಯ ಅಲ್‌ ಬುಖಾರಾದ 217ನೇ ಆಯತ್‌ನಲ್ಲಿರುವ ಸಾಲುಗಳಿವು: ಎಸ್‌ಎಲ್ಲೂನೆಕ ಹಾನಿ ಎಶಹ್ರಿ ಎಲ್‌ಹೆರಾಮಿ ತಿತ್ಯಾಲಿನ್‌ಫೀಹಿ ಕುಲ್ಕಿತ್ಯಾಲುನ್‌ಫೀಹಿ ಕೆಬೀರುನ್‌ ವಸ್ವದ್ದುನ್‌ ಆ್ಯನ್‌ ಸಬೀಲಿಲ್ಲೇಹಿ ವಕುಫ್ರುನ್‌ ಬಿಹೀವೆಲ್‌ಮಸ್ಜಿದಿಲ್‌ ಹೆರಾಮಿ ವಇಹ್ರಾಜು ಎಹ್ಲಿಹೀಮಿನ್‌ ಹು ಎಕ್ಬರುವೈನ್‌ದಲ್ಲಾಹ್‌.. ವಲಿಧಿತ್ನೆತು ಅಕ್ಬುರುಮಿನಲ್‌ಖ್ವಂತಿಲ್‌ ವಲ್ಯಾಯಝಾಲೂನ ಯುಕಾತಿಲೂನೆ ಕುಂ ಹೆತ್ತಾಯರುದ್ದೂಕುಂ ದೀನಿಕುಂ ಇನಿಸ್ತತಾರೂಂ ವಮೆನ್‌ ಯರುತದಿದ್‌ಮಿನ್ಕುಂ ಆ್ಯನ್‌ ದೀನಿಹಿ ಫಯಮುತ್‌ ವಹುವ ಕ್ಯಾತಿರುನ್‌ ಫಉಲೇ..ಇಕ್‌ ಹೆಬಿಕ್ವತ್‌ ಆ್ಯಮ್ಯಾಲುಹುಂ ಫಿದ್ದುನ್ಯಾ ವಲ್‌ಆ್ಯಖಿರೊತಿ ವಉಲೇಇಕ ಅಸ್‌ಹ್ಯಾಬುನ್ನ್ಯಾರಿ ಹುಂಫೀಹೆ ಹ್ವಾಲಿದೂನ್‌.
ಇದರ ಅರ್ಥವೂ ಮೇಲಿನ ಆಯತ್‌ಗಿಂತ ಭಿನ್ನವಾಗೇನಿಲ್ಲ!
ಇದನ್ನು ವಿರೋಧಿಸುವ ಒಬ್ಬನೇ ಇಬ್ಬ ಮುಸ್ಲಿಮನನ್ನು ತೋರಿಸಿಬಿಡಿ ನೋಡೋಣ? ಜಾತ್ಯತೀತ ಎಂದು ಕರೆದುಕೊಳ್ಳುವ ನಾಲಾಯಕ್‌ಗಳು ಎಂದೋ ಬರೆದ, ಪಾಲನೆಯಲ್ಲಿಲ್ಲದ ಯಾವುದೋ ಕಾಲದ ಮನು ಸ್ಮೃತಿಯನ್ನೇ ಇನ್ನೂ ಕಂಕುಳಲ್ಲಿ ಕಟ್ಟಿಕೊಂಡು ಓಡಾಡುತ್ತಿದ್ದಾರಲ್ಲ, ಅವರಲ್ಲಿ ಒಬ್ಬನಿಗಾದರೂ ಇದರ ವಿರುದ್ಧ ಹೋರಾಡುವ ಧಮ್‌ ಇದೆಯಾ? ಪ್ರಶ್ನಿಸುವ ತಾಕತ್‌ ಇದೆಯಾ?
ಕೊಚ್ಚಿ ಕೊಲ್ಲು ಎಂದು ಬರೆದಿರುವ ಇದನ್ನೇ ಇನ್ನೂ ಓದಿಕೊಂಡು ಭಾರತದ ಮೇಲೆ ಪಾಕಿಸ್ತಾನಿಯರು ದಾಳಿ ಮಾಡುತ್ತಿದ್ದಾರಲ್ಲ ಇದಕ್ಕೆ ಯಾರು ಹೊಣೆ?
ಐಸಿಸ್‌ ಉಗ್ರಗಾಮಿಗಳು ಈ ಸಾಲಿಗೆ ಮಹತ್ವ ಕೊಟ್ಟು ವಿಶ್ವಾದ್ಯಂತ ಅಷ್ಟೆಲ್ಲ ರಕ್ತದೋಕುಳಿ ಮಾಡುತ್ತಿದ್ದಾರಲ್ಲ. ಇದಕ್ಕೇನು ಉತ್ತರ ಕೊಡುತ್ತೀರ ಜಾತ್ಯತೀತರೇ?
ಅಮೆರಿಕ ಮತ್ತು ವಿಶ್ವಾದ್ಯಂತ ಈ ರಂಜಾನ್‌ನಲ್ಲಿ ಮಾಡುವ ಹತ್ಯೆಯನ್ನು ಲೆಕ್ಕವಿಡುತ್ತಾರೆ. ಈ ಮ್ಯಾರಥಾನ್‌, ವಾಕಥಾನ್‌
ರೀತಿಯೇ ರಂಜಾನ್‌ ಮಾಸದಲ್ಲಿ ಆಗುವ ಹತ್ಯೆಗಳಿಗೆ ರಮದಾನ್‌ ಬಾಂಬಥಾನ್‌ ಎಂದು ಕರೆಯುತ್ತಾರೆ. ರಮದಾನ್‌ ಬಾಂಬಥಾನ್‌ 2017ರಲ್ಲಿ ವಿಶ್ವಾದ್ಯಂತ 174 ದಾಳಿಗಳಾಗಿದ್ದು, 1595 ಮುಸ್ಲಿಮರಲ್ಲದವರು ಮುಸ್ಲಿಮರಿಂದ ಹತ್ಯೆಯಾಗಿದ್ದಾರೆ. ರಮದಾನ್‌ ಬಾಂಬಥಾನ್‌ 2016ರಲ್ಲಿ 174 ಹಲ್ಲೆಗಳಾಗಿದ್ದು, 1850 ಹತ್ಯೆಗಳಾಗಿವೆ. ರಮದಾನ್‌ ಬಾಂಬಥಾನ್‌ 2018ರಲ್ಲಿ 11 ದಿವಸಗಳಲ್ಲಿ 53 ದಾಳಿಗಳಾಗಿದ್ದು 217 ಹತ್ಯೆಗಳಾಗಿವೆ. ಇನ್ನೂ ಬಹಳ ದಿನ ಬಾಕಿ ಇವೆ.
ಭಾರತ ಇನ್ನೂ ಏಕೆ ಬಾಯಿ ಮುಚ್ಚಿಕೊಂಡು ಇರಬೇಕು? ಪೃಥ್ವಿರಾಜ್‌ ಚೌಹಾಣ್‌ ಮೇಲೆ ಮಹಮ್ಮದ್‌ ಘೋರಿ 17 ಬಾರಿ ದಂಡೆತ್ತಿ ಬಂದ. ಸೋತು ಶರಣಾದ ಮೇಲೆ ಪೃಥ್ವಿರಾಜ್‌ ಚೌಹಾಣ್‌, ಘೋರಿಯನ್ನು ಕೊಲ್ಲದೇ ವಾಪಸ್‌ ಕಳುಹಿಸುತ್ತಿದ್ದ. ಆದರೆ ಅದೇ ಘೋರಿಯಿಂದ ಚೌಹಾಣ್‌ ಹತ್ಯೆಯಾಗುತ್ತಾನೆ ಎಂಬ ಕಥೆಯನ್ನು ನಾವು ಕೇಳಿದ್ದೇವೆ. ಈಗ ಅದೇ ರೀತಿ ಭಾರತದ ಮೇಲೂ ಆಗುತ್ತಿದೆ. ಇಸ್ಲಾಂನಲ್ಲಿ ಹೇಳಿದ್ದಾರೆ, ಕುರಾನ್‌ನಲ್ಲಿ ಇದೆ ಎಂದು ಭಾರತೀಯರನ್ನು, ವಿಶ್ವಾದ್ಯಂತ ಮುಸ್ಲಿಮರಲ್ಲದವರನ್ನು ಕೊಲ್ಲುತ್ತಿದ್ದಾರೆ.
ಅಷ್ಟೇ ಏಕೆ? ಶಹೀ ಅಲ್‌ ಬುಖಾರಿ ಸಂಪುಟ 5, ದಂಡಯಾತ್ರೆಯ ಪುಸ್ತಕ 59, ಹದಿತ್‌ 716ರಲ್ಲಿ ಒಂದು ಉಲ್ಲೇಖ ಬರುತ್ತದೆ. ಅದರಲ್ಲಿ ಪ್ರವಾದಿ ಮಹಮ್ಮದರು ಅನಾರೋಗ್ಯದಿಂದ ಹಾಸಿಗೆ ಹಿಡಿದಿರುತ್ತಾರೆ. ಆಗ ಅವರು ಮುಸ್ಲಿಮರಿಗೆ ತನ್ನ ಮೂರು ಆಸೆಗಳನ್ನು ಈಡೇರಿಸಲಿಕ್ಕೆ ಕೇಳುತ್ತಾರೆ. ಅದರಲ್ಲಿ ಮೊದಲನೆಯ ಆಸೆಯೇ ಪೇಗನ್ನರನ್ನು (ಮುಸ್ಲಿಂ ದೇವರನ್ನೂ ಆರಾಧಿಸದವ)ಅರೇಬಿಯನ್‌ ಪೆನನ್ಸುಲಾದಿಂದ ಹೊರಗಟ್ಟುವುದು. ಎರಡನೆಯದು ವಿದೇಶಿ ನಿಯೋಗಕ್ಕೆ ಉಡುಗೊರೆಯನ್ನು ಕೊಡುವುದು ಹಾಗೂ ಮೂರನೆಯದನ್ನು ಮಹಮ್ಮದ್‌ ಮರೆತುಬಿಡುತ್ತಾನೆ ಎಂಬ ಉಲ್ಲೇಖವಿದೆ.
ಹಾಗಾಗಿ ರಂಜಾನ್‌ ವೇಳೆ ಎಲ್ಲ ಕಡೆಯೂ ದಾಳಿಗಳು ಆಗುತ್ತಿವೆ. ರಂಜಾನ್‌ ಅನ್ನು ಬಹಳ ಶಾಂತಿಯುತವಾಗಿ ಆಚರಿಸುತ್ತಿರುವವರಿಗೂ ಇಂಥ ಮುಸ್ಲಿಂ ಮೂಲಭೂತವಾದಿಗಳಿಂದ ಮತ್ತು ಇಸ್ಲಾಮಿಕ್‌ ಉಗ್ರಗಾಮಿಗಳಿಂದ ಕೆಟ್ಟ ಹೆಸರು. ಒಟ್ಟಾರೆ ರಂಜಾನ್‌ ಸಮಯದಲ್ಲಿ ಒಟ್ಟು 1.6 ಬಿಲಿಯನ್‌ ಜನರು ಉಪವಾಸ ಮಾಡುತ್ತಿರುತ್ತಾರೆ ಎನ್ನುತ್ತದೆ ದಾಖಲೆಗಳು. ಪ್ರಪಂಚದ ಜನಸಂಖ್ಯೆ 7 ಬಿಲಿಯನ್‌ ಇದೆ. ಅದರಲ್ಲಿ 22 ಶೇಕಡಾ ಜನತೆ ಉಪವಾಸ ಮಾಡುತ್ತಿರುತ್ತಾರೆ. ಅದರಲ್ಲಿ ಕೆಲವರು ಹತ್ಯೆ ಮಾಡುತ್ತಿರುತ್ತಾರೆ. ಅದೇ ಕುರಾನ್‌ನ ಸಾಲನ್ನು ಜಪ ಮಾಡುತ್ತಾ ಸಮಾಜವನ್ನು ಹಾಳು ಮಾಡುತ್ತಿರುತ್ತಾರೆ.
ಉಗ್ರಗಾಮಿಗಳು ಈ ದಿನದಂದೇ ಯಾಕಾಗಿ ಕೊಲ್ಲುತ್ತಾರೆ ಎಂಬುದಕ್ಕೂ ಉತ್ತರವಿದೆ. ಇದಕ್ಕೆ ನಿರ್ದಿಷ್ಟ ಕಾರಣ ಅಂತ ಅಲ್ಲದೇ ಇದ್ದರೂ ಒಬ್ಬರಿಂದ ಒಬ್ಬರು ಪ್ರೇರೇಪಣೆ ಪಡೆದುಕೊಂಡು ಇಂಥ ಕೆಲಸದಲ್ಲಿ ನಿರತರಾಗಿರುತ್ತಾರೆ.
ರಂಜಾನ್‌ ತಿಂಗಳಿನಲ್ಲೇ ಐಸಿಸ್‌ ಅಥವಾ ಇಸ್ಲಾಮಿಕ್‌ ಸ್ಟೇಟ್‌ ಕ್ಯಾಲಿಫೈಟ್‌ ಎಂದು ಘೋಷಿಸಿಕೊಂಡಿದ್ದು. ಐಸಿಸ್‌ನ ಅಬು ಬಕ್ರ್‌ ಅಲ್‌ ಬಗ್ದಾದಿ ಪ್ರವಚನ ವೇದಿಕೆಯಲ್ಲಿ ನಿಂತು ತಾನು ಸರ್ವ ಶ್ರೇಷ್ಠ ಮೌಲ್ವಿ ಎಂದು ಘೋಷಿಸಿಕೊಂಡಿದ್ದೂ ರಂಜಾನ್‌ನ ಮೊದಲ ದಿನದಂದು.
2015ರಲ್ಲಿ ಐಸಿಸ್‌ ವಕ್ತಾರ ಅಬು ಮಹಮ್ಮದ್‌ ಅಲ್‌- ಅದ್ನಾನಿ ತನ್ನ ಅನುಯಾಯಿಗಳಿಗೆ ಕರೆ ಕೊಟ್ಟಿದ್ದನ್ನು ಇನ್ನೂ ಮರೆಯುಂತಿಲ್ಲ.:
ರಂಜಾನ್‌ ಬರುತ್ತಿದೆ, ಇದು ಆಕ್ರಮಣಗಳ ತಿಂಗಳು ಮತ್ತು ಜಿಹಾದ್‌ ತಿಂಗಳು. ಆದ್ದರಿಂದ ಎಲ್ಲರೂ ಜಾಗರೂಕರಾಗಿರಿ, ಮತ್ತು ನಿಮ್ಮಲ್ಲಿ ಪ್ರತಿಯೊಬ್ಬರೂ ಈ ಸಮಯದಲ್ಲಿ(ರಂಜಾನ್‌)ದಾಳಿ ಮಾಡುವುದನ್ನು ಅಲ್ಲಾಹುವಿನ ಹೆಸರಿನಲ್ಲಿ ಮಾಡುತ್ತಿದ್ದೇವೆಂಬುದನ್ನು ಖಚಿತಪಡಿಸಿಕೊಳ್ಳಿ. ಈ ರಂಜಾನ್‌ನಲ್ಲಿ ದೇವರಿಂದ ವಿನಂತಿಸಲ್ಪಟ್ಟರೆ ಹಾಗೂ ದೇವರು ಸಿದ್ಧರಿದ್ದರೆ, ಮುಸ್ಲಿಮರಲ್ಲದವರು ಒಂದು ತಿಂಗಳಲ್ಲಿ ವಿನಾಶವಾಗುತ್ತಾರೆ. ಆ ಕೆಲಸವನ್ನು ನಾವು ಮಾಡಬೇಕು ಎಂದಿದ್ದಾನೆ.
ಇದನ್ನೇ ಅಲ್‌-ಖೈದಾ ಸಹ ಅನುಸರಿಸಿಕೊಂಡು ಬಂದಿದ್ದು. ಹೆಂಗಸರು-ಗಂಡಸರು ಎಂಬ ಭೇದ-ಭಾವವಿಲ್ಲದೇ.
ರಂಜಾನ್‌ನ ಮಾಸದಲ್ಲೇ ಯಾಕೆ ಕೊಲೆ ಮಾಡುತ್ತೀರ ಎಂದು ತೀವ್ರಗಾಮಿಗಳ ಬಳಿ ಕೇಳಿದಾಗ ಅವರು ಹೇಳಿದ್ದು ಹೀಗಿದೆ:
1. ನಾವು ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ ಎಂಬುದನ್ನು ಜಗತ್ತಿಗೆ ಸಾರುವುದಕ್ಕೆ.
2. ಅವರ ಇಮಾನ್‌ ಅಥವಾ ನಂಬಿಕೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ. ರಂಜಾನ್‌ ಮಾಸದಲ್ಲಿ ಕೊಲ್ಲುವ ಮೂಲಕ ಏನನ್ನೋ ಸಾಬೀತು ಮಾಡಿದ ಭಾವ. ಆಗ ಅವರು ಹೆಚ್ಚು ಶಕ್ತಿಶಾಲಿಗಳಾಗುತ್ತಾರೆ ಎಂಬ ನಂಬಿಕೆ.
3. ಹುತಾತ್ಮನಾದರೆ ಜನ್ನತ್‌(ಸ್ವರ್ಗ)ಗೆ ನೇರ ಪ್ರವೇಶ. ಹಾಗಾಗಿ ತೀವ್ರಗಾಮಿಗಳು ಹುತಾತ್ಮರಾಗುವುದಕ್ಕೇ ಇಚ್ಛಿಸುತ್ತಾರೆ.
4. ಹೆಚ್ಚು ಪುಣ್ಯ ಸಂಪಾದಿಸುವುದಕ್ಕೆ. ರಂಜಾನ್‌ ತಿಂಗಳಿನಲ್ಲಿ ಕೊಂದರೆ ಅದು ಬೇರೆ ದಿನಗಳಲ್ಲಿ ಕೊಲ್ಲುವುದಕ್ಕಿಂತ ಹೆಚ್ಚು ಪುಣ್ಯ ಬರುತ್ತದೆ.
ಮುಸ್ಲಿಮರು ರಂಜಾನ್‌ ದಿನದಲ್ಲೇ ಏಕೆ ಹೆಚ್ಚು ಹತ್ಯೆ ಮಾಡುತ್ತಾರೆ ಎಂಬುದಕ್ಕೆ ಕಾರಣ ತಿಳಿದುಕೊಂಡಿರಿ. ಈಗ ಹೇಳಿ, ರಂಜಾನ್‌ ದಿನಗಳಲ್ಲಿ ಯೋಧರು ಗುಂಡಿನ ದಾಳಿ ಮಾಡಬಾರದಾ? ಕುರಾನ್‌ನಲ್ಲಿ ಹೇಳಿದ್ದಾರೆ, ಅಲ್ಲಾಹ್‌ ಹೇಳಿದ್ದಾನೆ ಎಂದು ಅವರಿಗೆ ನಮ್ಮನ್ನು ಕೊಲ್ಲಲು ಬಿಡಬೇಕಾ? ರಂಜಾನ್‌ ತಿಂಗಳು ಎಲ್ಲ ಕಡೆಯೂ ಒಂದೇ ಥರ ಇರುವುದಿಲ್ಲ ರಾಜನಾಥ್‌ ಸಿಂಗ್‌ ಅವರೇ. ರಂಜಾನ್‌ ತಿಂಗಳಿನಲ್ಲಿ ಅಷ್ಟು ಕಡಿಯಲೇ ಬೇಕೆಂದಿದ್ದರೆ ಕೋಳಿ, ಕುರಿಗಳನ್ನು ಕಡಿಯಲಿ. ಮನುಷ್ಯರನ್ನಲ್ಲ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya