ತಿಮ್ಮಪ್ಪನ ಪಕ್ಕದಲ್ಲಿ ಪದ್ಮಾವತಿ ಬೇಕೋ, ಕ್ರಿಸ್ತ ಬೇಕೋ ನಿರ್ಧರಿಸಿ!

ಶೀಘ್ರದಲ್ಲೇ ತಿರುಪತಿ ಕ್ರಿಶ್ಚಿಯನ್ನರ ಮತ್ತು ಮುಸ್ಲಿಮರ ಪಾಲಾಗಲಿದೆ ಎಂದು ತಿಳಿಸಲು ವಿಷಾದಿಸುತ್ತೇನೆ. ಯಾರನ್ನೂ ಹೆದರಿಸುವ ಇರಾದೆ ಇಲ್ಲ. ಆದರೆ ವಾಸ್ತವ ಹಾಗಿದೆ. ನಾವೇನೋ ಬೆಂಗಳೂರಿನಿಂದಲೇ ವೆಬ್‌ಸೈಟ್‌ನಲ್ಲಿ ಹೊಟೆಲ್‌, ಬಸ್‌ ಫ್ಲೈಟ್‌ ಟಿಕೆಟ್‌ ಇಂದ ದರ್ಶನದವರೆಗೂ ಬುಕ್‌ ಮಾಡಿಕೊಂಡು ಹೋಗಿ ಬಂದುಬಿಡುತ್ತೀವಿ. ಆದರೆ ಟಿಟಿಡಿ(ತಿರುಮಲ ತಿರುಪತಿ ದೇವಸ್ಥಾನ) ಟ್ರಸ್ಟ್‌ನಲ್ಲಿ ಕೆಲಸ ಮಾಡುವ ಬಹಳ ಮಂದಿ ಕ್ರಿಶ್ಚಿಯನ್‌, ಮುಸ್ಲಿಂ ಎಂಬ ಮಾಹಿತಿ ಇದೆಯಾ? ಅದರಿಂದಾಗುವ ಅನಾಹುತಗಳೇನು ಎಂಬುದಾದರೂ ತಿಳಿದಿದೆಯಾ? ಈಗ ದಯವಿಟ್ಟು ಮತ್ತೆ ಬೇರೆ ಮತೀಯರು ಕೆಲಸ ಮಾಡಿದರೆ ಏನು? ನೀನು ಕೋಮುವಾದಿ, ನಾವು ಹಿಂದೂಗಳು ಜಾತ್ಯತೀತವಾದಿಗಳು ಎಂದೆಲ್ಲ ಬೊಬ್ಬೆಯಿಡಬೇಡಿ.
ನಾವು ಜಾತ್ಯತೀತ, ಜಾತ್ಯತೀತ ಎಂದು ಬಾಯಿ ಬಡಿದುಕೊಳ್ಳುತ್ತಿರುವ ಪರಿಣಾಮ ಏನಾಗಿದೆ ಎಂದರೆ ಟಿಟಿಡಿಯಲ್ಲಿ ಕೆಲಸ ಮಾಡುವ ಮುಸ್ಲಿಮರು, ಪ್ರತಿ ಶುಕ್ರವಾರ ನಾವು ನಮಾಜ್‌ ಮಾಡುವುದಕ್ಕೆ ಹೋಗಬೇಕಾದ್ದರಿಂದ, ಟಿಟಿಡಿ ಕಚೇರಿಯನ್ನೇ ಶುಕ್ರವಾರ ಮುಚ್ಚಬೇಕು ಎಂದು ಕಳೆದ ಐದು ವರ್ಷಗಳಿಂದಲೂ ಆಗ್ರಹಿಸುತ್ತಿದ್ದಾರೆ ಮತ್ತು ಅದರ ಕೂಗು ಈಗ ಮತ್ತೆ ಪ್ರಬಲವಾಗೇ ಕೇಳಿ ಬರುತ್ತಿದೆ.
ಯಾಕೆ? ಈಗಲೇ ಯಾಕೆ ಆ ಕೂಗು? ಅದಕ್ಕೂ ಉತ್ತರವಿದೆ. ಕಳೆದ ಎರಡು ತಿಂಗಳಿಂದ ಟಿಟಿಡಿಯ ಹೊಸ ಅಧ್ಯಕ್ಷರಾಗಿ ಸ್ಥಳೀಯ ಶಾಸಕ ಪುಟ್ಟಾ ಸುಧಾಕರ್‌ ಯಾದವ್‌ ಆಯ್ಕೆ ಆಗಿರುವುದು. ಇವರ ಹೆಸರು ಕೇಳಿದರೆ ಯಾದವ ವಂಶದವರು ಎನಿಸುತ್ತದಲ್ಲವೇ? ಹಾಗೆಂದುಕೊಂಡರೆ ಅದು ನಮ್ಮ ಭ್ರಮೆಯಷ್ಟೇ. ಸುಧಾಕರ್‌ ಮತಾಂತರವಾದ ಕ್ರಿಶ್ಚಿಯನ್‌ ಎಂಬ ಆರೋಪ ಅವರ ಮೇಲಿದೆ. ಇದಕ್ಕೆ ಸಾಕ್ಷಿಯಾಗಿ ಆತ ಬಹಳಷ್ಟು ಕ್ರಿಶ್ಚಿಯನ್‌ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ, ಕ್ರೈಸ್ತ ಮತ್ತು ಜೀಸಸ್‌ ಬಗ್ಗೆ ತಾಸುಗಟ್ಟಲೆ ಮಾತಾಡಿದ್ದಾರೆ ಅರ್ಥಾತ್‌, ‘ಏಸುವಿನ ಶುಭ ಸಂದೇಶ’ ಸಾರಿದ್ದಾರೆ!
ಹೇಳಿ ಇನ್ನೂ ನಾವು ಇಂಥದ್ದನ್ನೆಲ್ಲ ಸಹಿಸಬೇಕಾ? ಹಿಂದೂಗಳು ಜಾತ್ಯತೀತವಾದಿಗಳು ಎಂದು ಸಾಬೀತು ಮಾಡಿಕೊಳ್ಳುವದಕ್ಕೆ ಕ್ರಿಶ್ಚಿಯನ್ನರನ್ನು ದೇವಸ್ಥಾನದೊಳಕ್ಕೆ ಬಿಟ್ಟುಕೊಳ್ಳಬೇಕು ಎಂದರೆ ಕ್ರಿಶ್ಚಿಯನ್‌ ಹಿಂದೂಗಳು ಎಂದು ಕರೆದುಬಿಡಿಯಲ್ಲ? ಮುಸ್ಲಿಮರಿಗೆ ದೇವಸ್ಥಾನದಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತೀರೆಂದರೆ ಇಸ್ಲಾಮಿಕ್‌ ಹಿಂದೂಗಳು ಎಂದು ಕರೆದುಬಿಡಿಯಲ್ಲ!? ಅದನ್ನು ಬಿಟ್ಟು ಇಂಥವರನ್ನೆಲ್ಲ ಸೇರಿಸಿಕೊಂಡು ನಮಾಜ್‌ ಮಾಡುವುದಕ್ಕೂ ರಜೆ ಕೊಡುವ ದರ್ದು, ಕರ್ಮ ನಮಗೇಕೆ? ಅಷ್ಟಕ್ಕೂ ತಿರುಪತಿ ಇರುವುದು ಭಾರತದಲ್ಲೋ, ಪಾಕಿಸ್ತಾನದಲ್ಲೋ ಅಥವಾ ವ್ಯಾಟಿಕನ್‌ನಲ್ಲೋ?
ಹೀಗೆ ಎಲ್ಲರನ್ನೂ ಬಿಟ್ಟುಕೊಂಡಿದ್ದಕ್ಕೆ, ಈಗ ಕೇಳಿ ಬರುತ್ತಿರುವ ಮಾತುಗಳೇನು ಗೊತ್ತಾ? ಅಲ್ಲಿನ ಕ್ರಿಶ್ಚಿಯನ್ನರು ‘ತಿರುಪತಿ ತಿಮ್ಮಪ್ಪ ಕೇವಲ ಹಿಂದೂಗಳ ದೇವರಲ್ಲ. ಇಲ್ಲಿಗೆ ಕ್ರಿಶ್ಚಿಯನ್ನರು, ಮುಸ್ಲಿಮರು ಸೇರಿದಂತೆ ಎಲ್ಲ ಧರ್ಮೀಯರೂ ಬರುತ್ತಾರೆ. ಹಾಗಾಗಿ ಇದು ಎಲ್ಲರ ದೇವರು’ ಎಂದು ಹೇಳುತ್ತಿದ್ದಾರೆ.
ಮಿಷನರಿಗಳ ಮುಂದಿನ ಹಂತದ ಆಕ್ರಮಣ ಹೇಗೆ ಗೊತ್ತಾ? ಒಂದು ನಾಲ್ಕು ಮಂತ್ರಗಳಿಗೆ ಏಸುವಿನ ಹೆಸರು ಸೇರಿಸಿ, ನಮ್ಮಲ್ಲಿ ಮೊದಲೇ ಹೇಳಿದ್ದಾರೆ ವೆಂಕಟೇಶ್ವರ ಸ್ವಾಮಿಯೇ ಜೀಸಸ್‌ ಅವತಾರ ಎಂದು ಸಾರಿಬಿಡುವುದು.
ಅಧ್ಯಕ್ಷ ಒಬ್ಬರೇ ಅಲ್ಲ, ಟಿಟಿಡಿ ಸದಸ್ಯರಲ್ಲೂ ಒಬ್ಬ ಕ್ರಿಶ್ಚಿಯನ್‌ ಇದ್ದಾರೆ. ಆಂಧ್ರದ ಶಾಸಕಿಯಾಗಿರುವ ವಂಗಲಪುಡಿ ಅನಿತಾ ಎಂಬಾಕೆಗೆ ಈಗ ಸದಸ್ಯರ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. 2014ರಲ್ಲಿ ಈ ಮಹಿಳೆ ಟಿವಿಗೆ ನೀಡುತ್ತಿರುವ ಸಂದರ್ಶನವೊಂದರಲ್ಲಿ ‘ನಾನು ಕ್ರಿಶ್ಚಿಯನ್‌. ನನ್ನ ವ್ಯಾನಿಟಿ ಬ್ಯಾಗ್‌ ಮತ್ತು ಕಾರ್‌ನಲ್ಲಿ ಒಂದೊಂದು ಬೈಬಲ್‌ ಇಲ್ಲದೇ ಮನೆಯಿಂದ ಹೊರಗೇ ಹೋಗುವುದಿಲ್ಲ’ಎಂದಿದ್ದಾರೆ. ಆದರೆ ಈಗ ತಾನು ವೆಂಕಟೇಶ್ವರನ ಭಕ್ತೆ, ಹಿಂದೂ ನಾನು ಎನ್ನುತ್ತಿದ್ದಾರೆ. 2014ರಲ್ಲಿ ಎರಡೆರಡು ಬೈಬಲ್‌ ಹಿಡಿದುಕೊಂಡು ಓಡಾಡುವವರು 2018ರಲ್ಲಿ ಹಿಂದೂ ಆಗಿ ಟಿಟಿಡಿಯ ಸದಸ್ಯೆಯೂ ಆಗ್ತಾರೆ ಎಂದರೆ ಇದು ಜೀಸಸ್‌ ಕೃಪೆಯೋ? ಮಾತಾಡದೇ ಸುಮ್ಮನಿದ್ದ ಹಿಂದೂಗಳ ಪೌರುಷವೋ?
ಇವರೊಬ್ಬರೇ ಅಲ್ಲ, 44 ಜನರು ಬರೀ ಕ್ರಿಶ್ಚಿಯನ್‌, ಮುಸ್ಲಿಮರು ಸಿಬ್ಬಂದಿ ಟಿಟಿಡಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಟಿಟಿಡಿಯಲ್ಲಿ ಒಂದು ನಿಯಮವಿದೆ: ‘ಯಾರು ಹಿಂದೂ ಆಗಿರುತ್ತಾರೋ ಅವರಿಗೆ ಮಾತ್ರ ನೌಕರಿ ಕೊಡಬೇಕು. ಬೇರೆ ಧರ್ಮಕ್ಕೆ ಮತಾಂತರವಾಗಿರುವವರಿಗೆ ಅಥವಾ ಹಿಂದೂಗಳಲ್ಲದವರಿಗೆ ನೌಕರಿ ಕೊಡಬಾರದು’ ಎಂದು. ಆದರೆ ಈ ನಿಯಮವನ್ನೂ ಮೀರಿ ಇವರಿಗೆಲ್ಲ ಉದ್ಯೋಗ ನೀಡಲಾಗಿದೆ. ಇದರ ಅರ್ಥ, ಟಿಟಿಡಿಯನ್ನು ನಿಧಾನವಾಗಿ ಇಸ್ಲಾಮೀಕರಣ ಮಾಡಲಾಗುತ್ತಿದೆ. ಪರಮ ದಯಾಳುವಾದ ಏಸುವೇ ಆವರಿಸಿಕೊಳ್ಳುತ್ತಿದ್ದಾನೆ. 2012 ಮತ್ತು 2018ರಲ್ಲಿ ನಾಗರಾಜು, ಯಶೋದಮ್ಮ, ಕೃಷ್ಣಮ್ಮ, ಈಶ್ವರಯ್ಯ ಎಂಬ ನಾಲ್ಕು ಟಿಟಿಡಿ ನೌಕರರು ಯಾತ್ರಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದದ್ದನ್ನು ಕಂಡ ರೆಡ್‌ ಹ್ಯಾಡೆಡ್‌ ಆಗಿ ಭಕ್ತಾದಿಗಳೇ ಹಿಡಿದು ಜೈಲಿಗಟ್ಟಿದ್ದಾರೆ. ಹೌದು, ನಮ್ಮಲ್ಲಿ ಮತಾಂತರ ನಡೆಯುತ್ತಿದೆ ಎಂದು ಟಿಟಿಡಿಯವರೇ ಒಪ್ಪಿಕೊಳ್ಳುತ್ತಿದ್ದಾರೆನ್ನುವಾಗ, ಹಿಂದೂಗಳೆಷ್ಟು ನಾಚಿಕೆ ಬಿಟ್ಟು ಕುಳಿತಿದ್ದೇವೆ ಎಂದು ಲೆಕ್ಕ ಹಾಕಿ.
ಅಹಿಂದರಿಗೆ ಅವಕಾಶ ಇಲ್ಲ ಎಂಬ ನಿಯಮವಿದ್ದರೂ ಇವರೆಲ್ಲ ಬಂದು ಸೇರಿದ್ದು ಮುಖ್ಯಮಂತ್ರಿಯಾಗಿದ್ದ ವೈ.ಎಸ್‌. ರಾಜಶೇಖರ್‌ ರೆಡ್ಡಿ ಕಾಲದಲ್ಲಿ. ರೆಡ್ಡಿ ಎಂದು ಹೆಸರಿಟ್ಟುಕೊಂಡ ಮಾತ್ರಕ್ಕೆ ಇವರೇನು ಪಕ್ಕಾ ತಿಮ್ಮಪ್ಪನ ಭಕ್ತರಲ್ಲ. ಬದಲಿಗೆ ಈ ರೆಡ್ಡಿ ಪಕ್ಕಾ ಕ್ರಿಶ್ಚಿಯನ್‌.
ಇನ್ನೊಂದು ವಿಚಾರ ಎಲ್ಲ ಭಕ್ತಾದಿಗಳಲ್ಲೂ ಅಚ್ಚರಿಯನ್ನು ಹುಟ್ಟಿಸಬಹುದು. 7 ಬೆಟ್ಟದಲ್ಲಿ ಟಿಟಿಡಿ ವಶದಲ್ಲಿರುವುದು ಎರಡು ಬೆಟ್ಟಗಳು ಮಾತ್ರ. ಒಂದು ತಿಮ್ಮಪ್ಪನಿರುವ ಬೆಟ್ಟ ಹಾಗೂ ಮತ್ತೊಂದು ಬೆಟ್ಟ. ಇನ್ನು 5 ಬೆಟ್ಟಗಳು ಸರ್ಕಾರದ ಅಧೀನಲ್ಲಿದೆ. ಆದರೆ ಇದು ಸಹ ಟಿಟಿಡಿಗೇ ಸೇರಿದ್ದು ಎಂಬುದಕ್ಕೆ ಬ್ರಿಟಿಷರ ಕಾಲದ ದಾಖಲೆಗಳೂ ಇದೆ. ದಿವಂಗತ ವೈ. ಎಸ್‌. ರಾಜಶೇಖರ್‌ ರೆಡ್ಡಿ ಮುಖ್ಯಮಂತ್ರಿಯಾದಾಗ ಆ ಐದೂ ಬೆಟ್ಟಗಳಲ್ಲಿ ತಿಮ್ಮಪ್ಪನ ದೇವಸ್ಥಾನಕ್ಕೆ ಸರಿ ಸಮಾನವಾದ ದೊಡ್ಡ ಚರ್ಚ್‌ಗಳನ್ನು ನಿರ್ಮಿಸಲು ಎಲ್ಲ ಪ್ರಯತ್ನಗಳೂ ನಡೆದಿತ್ತು. ಆದರೆ ಪ್ರತಿಭಟನೆಗಳು ನಡೆದ ಮೇಲೆ ಬಂದ್‌ ಆಗಿತ್ತು. ಇಲ್ಲಿ ಈಗಲೂ ಚಿತ್ರಣ ಬದಲಾಗಿಲ್ಲ. ಐದೂ ಬೆಟ್ಟಗಳಲ್ಲಿ ಕ್ರಿಶ್ಚಿಯನ್‌ ಮಿಷನರಿಗಳು ಕಾಣಸಿಗುತ್ತಾರೆ. ಇನ್ನು ದೇವಸ್ಥಾನಕ್ಕೆ ಬರುವ ಭಕ್ತರನ್ನು ಜೀಸಸ್‌ ಮತ್ತು ಕ್ರೈಸ್ತ ಮತದತ್ತ ಸೆಳೆಯಲು ಸರ್ವ ಪ್ರಯತ್ನಗಳೂ ನಡೆಯುತ್ತಿವೆ. ಇನ್ನೊಂದೈದು ವರ್ಷದಲ್ಲಿ ಚರ್ಚ್‌ಗಳು ನಾಯಿಕೊಡೆಗಳಂತೆ ತಲೆ ಎತ್ತಿದರೆ ಅಚ್ಚರಿ ಪಡಬೇಕಿಲ್ಲ. ಹಿಂದೂಗಳೇ ಹಿಂದೂಗಳ ಧಾರ್ಮಿಕ ಕ್ಷೇತ್ರದ ಬಗ್ಗೆ ಆಸಕ್ತಿ ಕಳೆದುಕೊಂಡು ನರಸತ್ತು ಕುಳಿತಿರುವಾಗ, ಅದರ ಸದುಪಯೋಗ ಪಡೆದುಕೊಳ್ಳದೇ ಇರಲು ಮಿಷನರಿಗಳೇನು ಹಿಂದೂಗಳಾ?
ವೈ. ಎಸ್‌ ರಾಜಶೇಖರ್‌ ರೆಡ್ಡಿ ನೇಮಿಸಿದ ಟಿಟಿಡಿಯ ಮೊದಲ ಕ್ರಿಶ್ಚಿಯನ್‌ ಬಿ. ಕರುಣಾಕರ ರೆಡ್ಡಿ. ರೆಡ್ಡಿ ಅಂತಿದ್ದರೂ ಇವರೂ ಮೂಲತಃ ಕ್ರಿಶ್ಚಿಯನ್‌. ಅವರನ್ನು ನೇಮಿಸಿದ ಬಳಿಕ ಒಬ್ಬೊಬ್ಬರೇ ಕ್ರಿಶ್ಚಿಯನ್‌, ಮುಸ್ಲಿಮ್‌ ಮತೀಯ ಸಿಬ್ಬಂದಿ ಬಂದದ್ದು.
ಆಗಮ ಶಾಸ್ತ್ರದ ಪ್ರಕಾರ ವೆಂಕಟೇಶ್ವರನಿಗೆ ಬ್ರಹ್ಮೋತ್ಸವ ಸಮಯದಲ್ಲಿ ವಸ್ತ್ರವನ್ನು ಹಿಂದೂಗಳೇ ಕೊಡಬೇಕು. ಇದನ್ನು ರಾಜ ಮಹಾರಾಜರಿಂದ ಅನುಸರಿಸಿಕೊಂಡು ಬರಲಾಗಿದೆ. ಹಿಂದೂ ರಾಜರುಗಳೇ ವಸ್ತ್ರ ನೀಡುತ್ತಿದ್ದರು. ಆದರೆ ಇಲ್ಲಿ ಒಬ್ಬ ಕ್ರಿಶ್ಚಿಯನ್‌ ಆದ ರಾಜಶೇಖರ್‌ ರೆಡ್ಡಿಯವರೂ ವೆಂಕಟೇಶ್ವರನಿಗೆ ವಸ್ತ್ರ ನೀಡಿದ್ದಾರೆ. ಮತ್ತು ಅಲ್ಲಿನ ಪೂಜಾರಿಗಳು ರಾಜಶೇಖರ್‌ ರೆಡ್ಡಿಯವರು ಮುಖ್ಯಮಂತ್ರಿಗಳು ಎಂಬ ಒಂದೇ ಒಂದು ಕಾರಣಕ್ಕೆ ಆ ವಸ್ತ್ರವನ್ನು ತಿಮ್ಮಪ್ಪನಿಗೆ ಅಲಂಕರಿಸಿದ್ದಾರೆ.
ತಿಮ್ಮಪ್ಪನ ದರ್ಶನಕ್ಕೆ ನಾವು ಹಿಂದೂಗಳು ಹೋದರೇ ‘ವೆಳ್ಳಂಡಿ, ವೆಳ್ಳಂಡಿ’ ಎಂದು ಮಕ್ಕಳು ಮರಿ ಎನ್ನುವುದನ್ನೂ ಲೆಕ್ಕಿಸದೇ ಜನರ ಮಧ್ಯೆ ತಳ್ಳಿಬಿಡುವ ಅದೇ ಹಿಂದೂಗಳು, ಕ್ರಿಶ್ಚಿಯನ್ನರನ್ನು ಅಧ್ಯಕ್ಷರನ್ನಾಗಿ ಮಾಡಿ, ಅವರು ಕೊಟ್ಟ ವಸ್ತ್ರವನ್ನೇ ಸ್ವಾಮಿಗೆ ಅಲಂಕರಿಸುವುದು ಷಂಡತನದ ಪ್ರತೀಕವೋ? ಜಾತ್ಯತೀತವೋ?
ಟಿಟಿಡಿಯ ಸಿಬ್ಬಂದಿಗಳ ದುರಹಂಕಾರದ ಪರಮಾವಧಿ ನೋಡಿ, ಅವರ ಚರ್ಚ್‌ನಲ್ಲಿ ಏನಾದರೂ ಫಾದರ್‌ ಬುಲಾವ್‌ ನೀಡಿದರೆ ಅಥವಾ ಇನ್ಯಾವುದೇ ಕ್ರಿಶ್ಚಿಯನ್‌ ಕಾರ್ಯಕ್ರಮಗಳಿಗೆ ಕರೆದಾಗ ಹೋಗುವುದು ಟಿಟಿಡಿ ನೀಡಿರುವ ಕಾರ್‌ನಲ್ಲಿ. ಧಾರ್ಮಿಕ ಕೆಲಸಗಳಿಗೆ ಬಳಸಿಕೊಳ್ಳಬೇಕಾದ ಕಾರು ಚರ್ಚ್‌ ಮುಂದೆ ನಿಲ್ಲುವುದು ಜಾತ್ಯತೀತ ಎಂದಾರೆ ಅಂಥ ಜಾತ್ಯತೀತಕ್ಕೆ ನನ್ನ ತೀವ್ರ ವಿರೋಧವಿದೆ.
ತಿರುಮಲ ಬೆಟ್ಟ ಹತ್ತುವುದಕ್ಕೆ ಅಲಿಪಿರಿ ಎಂಬುದೇ ಸ್ಟಾರ್ಟಿಂಗ್‌ ಪಾಯಿಂಟ್‌. ಅಲ್ಲೇ ಭಕ್ತಾದಿಗಳು ಟಿಕೆಟ್‌ ತೆಗೆದುಕೊಳ್ಳುವುದು ಎಲ್ಲವೂ ನಡೆಯುತ್ತದೆ. ದುರಂತ ಏನೆಂದರೆ, ಬ್ರಹ್ಮೋತ್ಸವದ ಸಮಯದಲ್ಲಿ ಈ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡಿ ಅಲ್ಲಿ ‘ಹೆಲಿ ಜಾಯ್‌ ರೈಡ್‌’ ಶುರುಮಾಡಬೇಕು ಎಂದು ಹೋರಟಿದ್ದರು. ಅಂದರೆ ಏಡು ಕೊಂಡಲು ಎಂದು ಏನು ಹೇಳುತ್ತೇವೆ, ಆ ಏಳು ಬೆಟ್ಟಗಳನ್ನು ಪ್ರವಾಸಿಗರು ನೋಡುವುದಕ್ಕೆ ಅವರನ್ನು ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಒಂದು ರೌಂಡ್‌ ಹೊಡೆಸುತ್ತಾರೆ. ಅಸಲಿಗೆ ಯಾವುದೇ ಹಿಂದೂ ಧರ್ಮದ ದೇವರ ಗೋಪುರದ ಮೇಲೆ ಹೋಗುವುದು ನಿಷಿದ್ಧ. ಅದಕ್ಕೆ ಗೋಪುರದ ಮೇಲೆ ಕಲಶ ಸ್ಥಾಪನೆಯಾದ ಮೇಲೆ ಯಾರೂ ಹೋಗುವಂತಿಲ್ಲ. ಹಾಗೆ ಮಾಡಿದರೆ ಅದು ದೇವರ ತಲೆ ಮೇಲೆ ನಡೆದಂತೆ ಎಂಬ ನಂಬಿಕೆ. ಆದರೆ ಟಿಟಿಡಿಯಲ್ಲಿರುವ ಕ್ರಿಶ್ಚಿಯನ್‌ ಅಧಿಕಾರಿಗಳು ಕೇವಲ ಹಣ ಮಾಡುವುದಕ್ಕಾಗಿ ಹೆಲಿಕಾಪ್ಟರ್‌ ಯೋಜನೆಯನ್ನು ತರುವುದರಲ್ಲಿದ್ದರು. ಅಲ್ಲಿನ ಸ್ಥಳೀಯರು ಇದು ಪ್ರವಾಸಿ ತಾಣ ಅಲ್ಲ, ಧಾರ್ಮಿಕ ಕ್ಷೇತ್ರ ಎಂದು ಪ್ರತಿಭಟಿಸಿದ್ದಕ್ಕೆ ಯೋಜನೆಯನ್ನು ಕೈ ಬಿಟ್ಟಿದ್ದಾರೆ.
ಯಾರ ಅಪ್ಪನದ್ದು ಹೇಳಿ? ಒಬ್ಬ ವ್ಯಾಟಿನ್‌ನನ್ನು ತಂದು ದೇವಸ್ಥಾನದ ಟ್ರಸ್ಟ್‌ನಲ್ಲಿ ಕೂರಿಸಿದರೆ, ಅವನು ‘ಹೆಲಿ ಜಾಯ್‌ ರೈಡ್‌’ ಅನ್ನೂ ಮಾಡುತ್ತಾರೆ, ಪ್ರತಿ ಭಾನುವಾರ ವೈನ್‌ ಅನ್ನೂ ಕೊಡುತ್ತಾನೆ. ಏಕೆಂದರೆ, ಅಧ್ಯಕ್ಷನಾಗಿರುವುದೇ ತಿಮ್ಮಪ್ಪನನ್ನು ಜೀಸಸ್‌ನನ್ನಾಗಿ ಮಾಡುವುದಲ್ಲವೇ?
ರಾಜಶೇಖರ್‌ ರೆಡ್ಡಿ ಎಂಥ ಕ್ರಿಶ್ಚಿಯನ್‌ ಮೂಲಭೂತವಾದಿಯಾಗಿದ್ದರು ಎನ್ನುವುದಕ್ಕೆ ಅವರು ನೀಡಿದ್ದ ಒಂದು ಯೋಜನೆಯೇ ಸಾಕ್ಷಿ. ವಿಚ್ಛೇದನವಾದ ಕ್ರಿಶ್ಚಿಯನ್ನಿರಿಗೆ ಎರಡು ಎಕರೆ ಭೂಮಿ ನೀಡುವುದಾಗಿ ಯೋಜನೆ ಜಾರಿ ಮಾಡಿದ್ದರು. ಅದರ ಪರಿಣಾಮ ಏನಾಯಿತೆಂದರೆ, ಗಂಡ ಹೆಂಡತಿ ವಿಚ್ಛೇದನ ಆಗಿದ್ದೇವೆ ಎಂದು ಪೇಪರ್‌ನಲ್ಲಿ ತೋರಿಸಿ, ಒಬ್ಬೊಬ್ಬರು ಎರಡೆರೆಡು ಎಕರೆ ಜಮೀನು ಲಪಟಾಯಿಸಿದ್ದರು. ರೆಡ್ಡಿ ಇದ್ದ ಕಾಲದಲ್ಲಿ ಆಂಧ್ರವೆನ್ನುವುದು ಕ್ರಿಶ್ಚಿಯನ್‌ ಮಿಷನರಿಗಳ ಬೀಡಾಗಿತ್ತು. ಅವರು ಅಧಿಕಾರಕ್ಕೆ ಬರುವುದಕ್ಕೆ ಏನೆಲ್ಲ ಸಹಾಯ ಮಾಡಬಹುದು ಎಂದು ಚರ್ಚ್‌ಗಳಲ್ಲಿ ಮೀಟಿಂಗ್‌ ನಡೆಯುತ್ತಿತ್ತು. ಈಗ ಜಗನ್‌ರನ್ನು ಅಧಿಕಾರಕ್ಕೆ ತರುವುದಕ್ಕೆ ಇಂಥದ್ದೇ ಸಿದ್ಧತೆ ನಡೆಯುತ್ತಿದೆ.
ಇವರ ಕತೆ ಹಾಗಿರಲಿ, ತಿಮ್ಮಪ್ಪನ ದೇವಸ್ಥಾನದ ಒಳಗೆ ಅನ್ಯಮತೀಯರು ಹೋಗಬೇಕಾದರೆ ‘ನಾನು ಬೇರೆ ಧರ್ಮದವನಾಗಿದ್ದು, ವೆಂಕಟೇಶ್ವರ ಸ್ವಾಮಿಯನ್ನು ನಂಬುತ್ತೇನೆ’ ಎಂದು ರೆಜಿಸ್ಟರ್‌ನಲ್ಲಿ ಸಹಿ ಮಾಡಿದರೆ ಮಾತ್ರ ಒಳಗೆ ಬಿಡುವುದು. ಆದರೆ ಇದ್ಯಾವುದಕ್ಕೂ ಸಹಿ ಮಾಡದೇ, ಟೊಪ್ಪಿ ಧರಿಸಿ, ಶಿಲುಭೆಯ ಸರವನ್ನು ಕತ್ತಿಗೆ ನೇತುಹಾಕಿಕೊಂಡು ಟಿಟಿಡಿ ಆಡಳಿತ ಮಂಡಳಿಯಲ್ಲೇ ವಕ್ಕರಿಸಿ ನೌಕರಿ ಮಾಡುತ್ತಿರುವ ಅನ್ಯಮತೀಯರನ್ನು ಯಾಕಾಗಿ ಕೆಲಸದಿಂದ ತೆಗೆಯಬಾರದು ಎಂದು ಶೋಕಾಸ್‌ ನೋಟಿಸ್‌ ನೀಡಿದ್ದಕ್ಕೆ ಅವರೆಲ್ಲರೂ ಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ.
ಅವರನ್ನು ಬೇರೆ ಸರ್ಕಾರಿ ಇಲಾಖೆಗೆ ವರ್ಗಾವಣೆ ಮಾಡುತ್ತೀವೆಂದರೂ ನಾವು ಟಿಟಿಡಿಯಲ್ಲೇ ಇರುತ್ತೇವೆಂದು ಕುಳಿತಿದ್ದಾರೆ. ಅಲ್ಲೇ ಇದ್ದು ಅವರು ನಮಾಜ್‌ ಮಾಡುವುದಕ್ಕೆ ಟಿಟಿಡಿ ಕಚೇರಿಯನ್ನೇ ಶುಕ್ರವಾರ ಬಂದ್‌ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಕ್ರಿಶ್ಚಿಯನ್ನರು ತಿಮ್ಮಪ್ಪ ಎಲ್ಲರ ದೇವರು, ಎಂದು ವರಾತ ತೆಗೆದಿದ್ದಾರೆ. ಇಷ್ಟು ಜನ ಕ್ರಿಶ್ಚಿಯನ್ನರು, ಮುಸ್ಲಿಮರನ್ನು ತೆರವುಗೊಳಿಸುವುದಕ್ಕೆ ಹಿಂದೂಗಳಿಂದ ಅಷ್ಟೇ ಅಲ್ಲ, ಸ್ವತಃ ತಿಮ್ಮಪ್ಪನೇ ಬಂದರೂ ಏನು ಕಿತ್ತುಕೊಳ್ಳುವುದಕ್ಕಾಗದ ಸ್ಥಿತಿ ನಿರ್ಮಾಣವಾಗಿದೆ.
ನನ್ನ ಪ್ರಶ್ನೆ ಇಷ್ಟೇ. ಜಾತ್ಯತೀತ ಭಾರತದಲ್ಲಿ, ಹಿಂದೂ ಮಾತ್ರ ಜಾತ್ಯತೀತನಾಗಿರಬೇಕಾ? ಅಥವಾ ಅನ್ಯಮತೀಯರೂ ಜಾತ್ಯತೀತತೆಯನ್ನು ಅನುಸರಿಸುತ್ತದೋ? ತಾಕತ್ತಿದ್ದರೆ ಒಬ್ಬೇ ಒಬ್ಬ ಹಿಂದೂವನ್ನು ವಕ್‌ಧಿ ಮಂಡಳಿಯಲ್ಲೋ, ಮಸೀದಿ ಮಂಡಳಿಯಲ್ಲೋ, ಚರ್ಚ್‌ ಮಂಡಳಿಯಲ್ಲೋ, ಮಿಷನರಿಗಳ ಮಂಡಳಿಯಲ್ಲೋ ನೇಮಕ ಮಾಡಿಕೊಂಡಿದ್ದನ್ನು ತೋರಿಸಿಬಿಡಿ ನೋಡೋಣ!
ಹಿಂದೂಗಳಿಂದ ಗೋಧಿಧಿವಿಂದಾ ಆಗುವುದಕ್ಕಿಂತ ಮುಂಚೆ, ಗೋವಿಂದನನ್ನು ರಕ್ಷಿಸಿಕೊಳ್ಳಿ! ಇಲ್ಲವಾದರೆ ಮುಂದಿನ ಬಾರಿ ತಿಮ್ಮಪ್ಪನ ದರ್ಶನಕ್ಕೆ ಹೋದಾಗ ಟೋಪಿ ಧರಿಸಿ, ದೀಪದ ಬದಲು ಕ್ಯಾಂಡಲ್‌ ಹಚ್ಚಿ ಬನ್ನಿ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya