ವೋಟಿಗಾಗಿ ಹೆಸರು ಬದಲಿಸಿಕೊಂಡವರು, ಕೋಟಿಗಾಗಿ ದೇಶ ಮಾರುವುದಿಲ್ಲವೇ?

 

ಚಿರಂಜೀವಿ ಭಟ್‌
ಜಾತಿ ಬಗ್ಗೆ ಮಾತನಾಡಿದರೆ ಕೋಮುವಾದಿಯಾಗಿಬಿಡುತ್ತೇವೆ. ಅದೇ ಜಾತಿಯಿಂದ ಜಾತಿಗೆ ಹಾರುತ್ತಾ, ಕೊನೆಗೆ ಯಾವ ಜಾತಿಯೆಂದೂ ತಿಳಿಯದೇ ದಂಗು ಬಡಿದು ಗಾಂಧಿಎಂಬ ಹೆಸರಿಟ್ಟುಕೊಂಡು ಬಿಟ್ಟರೆ ಜಾತ್ಯತೀತವಾಗಿಬಿಡುತ್ತೇವಾ? ಇಂಥದ್ದೊಂದು ಪ್ರಶ್ನೆ ಕಾಡುವುದು ಕೆಲ ಅನುಕೂಲಸಿಂಧು ರಾಜಕಾರಣಿಗಳು ಜಾತಿ, ಹೆಸರು ಬದಲಾಯಿಸಿಕೊಂಡು ಮೋಸ ಮಾಡುತ್ತಿರುವುದನ್ನು ನೋಡಿ. ಕೇವಲ ನಾಲ್ಕು ವೋಟಿಗಾಗಿ ಹೆಸರನ್ನೇ ಬದಲಾಯಿಸಿಕೊಳ್ಳುವವರು, ನಾಳೆ ದೇಶವನ್ನೇ ಮಾರುವುದಿಲ್ಲ ಎಂದು ಏನು ಗ್ಯಾರಂಟಿ? ಇವರೆಲ್ಲ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ.

ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ರಾಜೀವ್‌ ಗಾಂಧಿ, ಇಂದಿರಾ ಗಾಂಧಿ , ಪ್ರಿಯಾಂಕಾ ಗಾಂಧಿ… ಇವರದ್ದೆಲ್ಲ ಕೊನೆಯ ಹೆಸರು ಮಹಾತ್ಮಾ ಗಾಂಧಿ ಕುಟುಂಬಸ್ಥರಂತೆ ಪೋಸು ಕೊಡವಂಥ ಹೆಸರು. ಇವರಿಗೆ ಗಾಂಧಿ ಫ್ಯಾಮಿಲಿ ಎಂದೇ ಹೆಸರು. ಆದರೆ ನಿಜವಾಗಿಯೂ ಇವರ ಹೆಸರು ರಾಹುಲ್‌ ಗಾಂಧಿಯಾ? ಸೋನಿಯಾ ಗಾಂಧಿಯಾ? ಅದೂ ಇಲ್ಲ. ಬಿಜೆಪಿಯ ಸುಬ್ರಮಣಿಯನ್‌ ಸ್ವಾಮಿಯವರು ಸೋನಿಯಾ ಗಾಂಧಿ, ಫಿರೋಜ್‌ ಗಾಂಧಿ ಮತ್ತು ರಾಹುಲ್‌ ಗಾಂಧಿಯ ಜಾತಕವನ್ನೇ ಬಯಲು ಮಾಡಿದ್ದಾರೆ. ಅಸಲಿಗೆ ಇವರ ಗಾಂಧಿ ಕುಟುಂಬದ ಕೊನೆಯ ಹೆಸರು ಘಂಡಿ. ಇಂಗ್ಲಿಷ್‌ನಲ್ಲಿ ‘ಎha್ಞdy’ ಎಂದಾಗುತ್ತದೆ. ಇದು ಪಾರ್ಸಿ ಹೆಸರು. ಫಿರೋಜ್‌ ಖಾನ್‌ರ ತಾಯಿ, ಜಹಾಂಗೀರ್‌ ಖಾನ್‌ನನ್ನು ಮದುವೆಯಾಗುವುದಕ್ಕಿಂತ ಮುಂಚೆ ಪಾರ್ಸಿಯಾಗಿದ್ದರು. ಆದರೆ ಮುಸ್ಲಿಮರನ್ನು ಮದುವೆಯಾದ ಮೇಲೆ ಅವರು ಸುಮ್ಮನೆ ಬಿಡುತ್ತಾರೆಯೇ? ಫಿರೋಜ್‌ರ ತಾಯಿಗೆ ಬೇಗಮ್‌ ಎಂದು ಹೆಸರಿಡಲಾಯಿತು.

ಆದರೆ ಬೇಗಮ್‌, ಖಾನ್‌ ಇಂಥವರನ್ನೆಲ್ಲ ಜನ ನಂಬಬೇಕಲ್ಲ? ಅದಕ್ಕೆ ಫಿರೋಜ್‌ರ ತಾಯಿಯ ಜಾತಿಸೂಚಕ ಹೆಸರು ಘಂಡಿಯನ್ನೇ ಇಟ್ಟರು. ಆಗ ಫಿರೋಜ್‌ ಖಾನ್‌ ಅವರನ್ನು ಫಿರೋಜ್‌ ಖಾನ್‌ ಘಂಡಿ ಎಂದು ಕರೆದರು. ಘಂಡಿ ಎಂಬುದನ್ನೇ ಸ್ವಲ್ಪ ಬದಲಾಯಿಸಿ, ಗಾಂಧಿ ಎಂದು ಎಲ್ಲರಿಗೂ ಹೆಸರಿಡುತ್ತಾ ಹೋದರು. ಫಿರೋಜ್‌ರನ್ನು ದತ್ತು ತೆಗೆದುಕೊಂಡು ಗಾಂಧಿ ಎಂದು ಹೆಸರಿಟ್ಟಿದ್ದೇ ಮಹಾತ್ಮಾ ಗಾಂಧಿಯವರು!
ಈಗ ಫಿರೋಜ್‌ ಮತ್ತು ಇಂದಿರಾ ಘಂಡಿಗೆ ಹುಟ್ಟಿದ ಮಗ ರಾಜೀವ್‌ ಪಾರ್ಸಿ ಆದರು. ಇನ್ನೊಂದು ಮಜಾ ನೋಡಿ, ಪಾರ್ಸಿ ರಾಜೀವ್‌ಗೂ, ಕ್ರಿಶ್ಚಿಯನ್‌ ಸೋನಿಯಾ ಘಂಡಿಗೂ ಹುಟ್ಟಿದ ರಾಹುಲ್‌ ಘಂಡಿ ಹಿಂದೂ ಅಂತೆ. ಅದರಲ್ಲೂ ಜನಿವಾರ ಧಾರಿ ಬ್ರಾಹ್ಮಣ ಅಂತೆ! ಏನ್‌ ಬ್ರಾಹ್ಮಣರು ಅಂದರೆ ಇವರಿಗೆಲ್ಲ ಅಷ್ಟು ಕಡೆಯಾಗೋದ್ರಾ? ಯಾವ್ಯಾವುದೋ ಜಾತಿಯಲ್ಲಿ ಹುಟ್ಟಿಕೊಂಡು ಚುನಾವಣೆಗೆ ಮೂರ್‌ ತಿಂಗಳಿರುವಾಗ ಬಟ್ಟೆ ಹೊಲಿಯುವ ದಾರದಿಂದ ಮೂರೆಳೆ ಜನಿವಾರವನ್ನು ಮಾಡಿ ಹಾಕಿಕೊಂಡು ಬಿಟ್ಟರೆ ಜನಿವಾರ ಧಾರಿ ಬ್ರಾಹ್ಮಣನಾ? ರಾಜಕೀಯ ಮಾಡಬೇಕು? ಆದರೆ ಇಷ್ಟು ಹೊಲಸು ಮಟ್ಟಿಗಾ? ಸರಿಯಾಗಿ ಕತ್ತಿನ ಪಟ್ಟಿ ಹಿಡಿದು ಕೇಳಿದರೆ ಈ ಘಂಡಿ ಫ್ಯಾಮಿಲಿ, ಕ್ರಿಶ್ಚಿಯನ್ನೋ? ಮುಸ್ಲಿಮ್ಮೋ? ಪಾರ್ಸಿಯೋ? ಹಿಂದೂಗಳೋ? ಒಂದೂ ಗೊತ್ತಿಲ್ಲ. ಸೋನಿಯಾ ಘಂಡಿಯ ನಿಜವಾದ ಹೆಸರೂ ಸೋನಿಯಾ ಅಲ್ಲ. ಬದಲಿಗೆ ‘ಎಡ್ವಿಗ್‌ ಆ್ಯಟೋನಿಯಾ ಅಲ್ಬೀನಾ ಮಯ್ನೋ’ ಎಂದು. ಅವರ ಅಪ್ಪ ಸ್ಟೆಫಾನೋ ಮಯ್ನೋ ರಷ್ಯನ್‌ ಜೈಲಿನಲ್ಲಿದ್ದಾಗ ಸೋನಿಯಾ, ಮರೌಚ್ಕ, ಅನೌಷ್ಕ ಎಂಬ ಹೆಂಗಸರ ಪರಿಚಯವಾಗಿ ಅವರ ನೆನಪಿನಾರ್ಥ, ಅವರಲ್ಲಿ ಒಬ್ಬರಾದ ಸೋನಿಯಾ ಹೆಸರನ್ನು ಆ್ಯಂಟೋನಿಯಾ ಮಯ್ನೊ ಅವರಿಗಿಟ್ಟು, ಸೋನಿಯಾ ಎಂದು ಕರೆಯಲು ಶುರು ಮಾಡಿದ.

ಹೆಸರಿನ ವಿಷಯದಲ್ಲೇ ಇಷ್ಟೆಲ್ಲ ಸುಳ್ಳು, ಗೊಂದಲಗಳನ್ನಿಟ್ಟುಕೊಂಡು ಇಷ್ಟು ವರ್ಷ ನಮ್ಮನ್ನೆಲ್ಲ ಇವರನ್ನು ಆಳುವುದಕ್ಕೆ ಬಿಟ್ಟಿದ್ದೇವಲ್ಲ? ಒಬ್ಬರಾದರೂ ಸಭೆಯಿಂದ ಎದ್ದು, ನಿನ್‌ ಹೆಸರು ಏನು ಎಂದು ಕೇಳಿದ್ದೇವಾ? ಯಾವ ಧರ್ಮ ನಿನ್ನದು ಎಂದು ಕೇಳಿದ್ದೇವಾ? 50 ಜನ ಇದ್ರೆ ಮುಸ್ಲಿಮ್ಮು, ನೂರ್‌ ಜನ ಇದ್ರೆ ಕ್ರಿಶ್ಚಿಯನ್ನು ಎಂದು ಹೇಳಿಕೊಳ್ಳುವ ಇವರಿಂದಲೇ ಅಲ್ಲವೇ ಭಾರತದ ಪ್ರಜಾಪ್ರಭುತ್ವ ಹಾಳಾಗುತ್ತಿರುವುದು?
ಬೇಕಾದರೆ ಹೌದೋ ಇಲ್ಲವೋ ನೋಡಿ, ಇವರ ಪಕ್ಷದ ಬುಹುತೇಕ ರಾಜಕಾರಣಿಗಳು ಅನುಕೂಲಕ್ಕಾಗಿ ಧರ್ಮ ಬದಲಾಯಿಸಿಕೊಂಡವರೇ.ವಯಸ್ಸಲ್ಲದ ವಯಸ್ಸಿನಲ್ಲಿ ಟಿವಿ ನಿರೂಪಕಿಯನ್ನು ಮದುವೆಯಾಗಿ ಸುದ್ದಿ ಮಾಡಿದ್ದ ಕಾಂಗ್ರೆಸ್‌ನ ದಿಗ್ವಿಜಯ್‌ ಸಿಂಗ್‌ ಅವರ ಹೆಸರು ಮಾತ್ರ ಸಿಂಗ್‌. ಆದರೆ ಇವರು ಮೂಲತಃ ಕ್ರಿಶ್ಚಿಯನ್‌. ಸೋನಿಯಾ ಘಂಡಿಯನ್ನು ಮೆಚ್ಚಿಸುವುದಕ್ಕೋ ಏನೋ ಕ್ರಿಶ್ಚಿಯನ್‌ ಆಗಿ ಮತಾಂತರವಾದರು. ಆದರೆ ಇವರೇ ಒಂದು ಪುಸ್ತಕ ಬರೆದುಕೊಂಡಿದ್ದಾರೆ ‘ನಾನು ಹಿಂದೂ ಧರ್ಮವನ್ನು ಆಚರಣೆ ಮಾಡುತ್ತಿದ್ದೇನೆ’ ಎಂದು. ಅಸಲಿಗೆ ಈ ಮನುಷ್ಯ ಸಿಕ್ಖನೋ? ಕ್ರಿಶ್ಚಿಯನ್ನನೋ? ಹಿಂದೂ ಧರ್ಮೀಯನೋ?

ಉತ್ತರ ಬಹಳ ಸುಲಭ. ಸಿಕ್ಖರ ಮುಂದೆ ಸಿಕ್ಖರ ವೇಷ. ಸೋನಿಯಾ ಘಂಡಿ ಮುಂದೆ ಕ್ರಿಶ್ಚಿಯನ್‌ ವೇಷ. ರಾಹುಲ್‌ ಘಂಡಿ ಯಾವಾಗ ತಾನು ಜನಿವಾರ ಧಾರಿ ಬ್ರಾಹ್ಮಣ ಎಂದು ಓಳು ಬಿಡುತ್ತಾರೋ, ಆಗ ದಿಗ್ವಿಜಯ್‌ ಸಿಂಗ್‌ ಹಿಂದೂ. ಪ್ರಾಕ್ಟಿಸಿಂಗ್‌ ಹಿಂದೂ!
ಇನ್ನು ಕಾಂಗ್ರೆಸ್‌ನ ಮತ್ತೊಬ್ಬ ನಾಯಕಿ ಅಂಬಿಕಾ ಸೋನಿ ಸಹ ಕ್ರಿಶ್ಚಿಯನ್‌.

ಕಾಂಗ್ರೆಸ್‌ನಲ್ಲಿ ಮತ್ತೊಂದು ದೊಡ್ಡ ತಲೆ ಇದೆ. ಅಹ್ಮದ್‌ ಪಟೇಲ್‌. ಇವರು ಈಗಲೂ ಕಾಂಗ್ರೆಸ್‌ನ ಎಲ್ಲ ಪ್ಲಾನ್‌ಗಳ ಹಿಂದೆ ಇರುವ ಮಾಸ್ಟರ್‌ಮೈಂಡ್‌. ಅಹ್ಮದ್‌ ಪಟೇಲ್‌ ಒಬ್ಬ ಮುಸ್ಲಿಂ. ಆದರೆ ಪಟೇಲ್‌ ಎಂಬ ಕೊನೆಯ ಹೆಸರು ಯಾಕಾಗಿ? ಇಂದಿರಾ ಘಂಡಿಯ ಪತಿ ಫಿರೋಜ್‌ ಖಾನ್‌ ಘಂಡಿ ಮುಸ್ಲಿಂ ಆದ್ದರಿಂದ ಅಂದು ಹತ್ತಿರವಾದ ಅಹ್ಮದ್‌, ಇಂದಿಗೂ ಎಲ್ಲರಿಗೂ ಅಚ್ಚುಮೆಚ್ಚು. ಬೇಕಂತಲೇ ಜಾತಿಯನ್ನು ಕೇವಲ ಪೇಪರ್‌ನಲ್ಲಿ ಅಷ್ಟೇ ತೋರಿಸಿ, ಜನರ ಮುಂದೆ ಪಟೇಲ್‌ ಎಂದೂ ನಾಟಕ, ಮುಸ್ಲಿಮರ ಮುಂದೆ ಮುಸ್ಲಿಂ ಅಂತಲೂ ನಾಟಕ.
ನಮ್ಮದೇ ರಾಜ್ಯದ ಪುರುಷೋತ್ತಮ, ದಿನೇಶ್‌ ಗುಂಡೂರಾವ್‌ ಏನು ಕಡಿಮೆ ಇಲ್ಲ. ಬಹುಶಃ ಈ ಮನುಷ್ಯರಷ್ಟು ಕಲಾವಿದ ಮತ್ತೊಬ್ಬರಿಲ್ಲ. ದಿನೇಶ್‌ ಗುಂಡೂರಾವ್‌ ಬ್ರಾಹ್ಮಣ ಎಂದು ಹೇಳಿಕೊಳ್ಳುವುದು ಪೇಪರ್‌ ದಾಖಲೆಗಳಲ್ಲಿ ಮಾತ್ರ. ಘೊಷಿಸಿಕೊಳ್ಳುವುದು ಒಂದೇ ಕಡೆ, ಅದೂ ಚುನಾವಣೆಗೆ ಸರ್ಧಿಸಲು ಸಲ್ಲಿಸುವ ನಾಮ ಪತ್ರದಲ್ಲಿ. ಅದು ಬಿಟ್ಟು ಈ ಪುಣ್ಯಾತ್ಮ ತಾನು ಬ್ರಾಹ್ಮಣ ಎಂದೂ ಎಲ್ಲೂ ಹೇಳಿಕೊಂಡಿಲ್ಲ. ಹೇಳಿಕೊಳ್ಳುವುದೂ ಇಲ್ಲ. ಯಾಕೆ ಗೊತ್ತಾ? ಇಲ್ಲಿದೆ ನೋಡಿ ಕಾರಣ: ವರ್ಷಕ್ಕೊಮ್ಮೆ ಅದ್ಯಾವುದೋ ಒಂದು ಬ್ರಾಹ್ಮಣ ಸಂಘಟನೆ ಹಾಕುವ ಹಾರಕ್ಕೆ ಕೊರಳೊಡ್ಡುವಾಗ ಈತ ಪ್ರಚಂಡ ಬ್ರಾಹ್ಮಣ. ಆಮೇಲೆ ಜಪ್ಪಯ್ಯ ಅಂದ್ರೂ ಬ್ರಾಹ್ಮಣರ ನಿಲುವಿಗೆ ಈತ ನಿಲ್ಲಲು ತಯಾರಿಲ್ಲ. ಗೋ ಹತ್ಯೆ ನಿಷೇಧದಿಂದ ಹಿಡಿದು ಸರಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ಬರುವ ಬ್ರಾಹ್ಮಣರು ಕಡಿಮೆಯಾಗುತ್ತಿರುವುದರ ವರೆಗೆ ಯಾವ ಬಗ್ಗೆಯೂ ದಿನೇಶ್‌ ಧ್ವನಿ ಎತ್ತಿಲ್ಲ. ಇನ್ನು ತಾನು ಜಾತ್ಯತೀತರನ್ನು ಓಲೈಸುವುದಕ್ಕೆ ಜಾತ್ಯತೀತರ ಹಾಗೆ ಕಾಣಿಸೋದು. ಇದರಿಂದ ದಿನೇಶ್‌ ನಮ್ಮವರು ಎಂದುಕೊಳ್ಳುತ್ತಾರೆ. ಇಷ್ಟೇ ಅಲ್ಲದೇ, ದಿನೇಶ್‌ ಅವರ ಪತ್ನಿ ಮುಸ್ಲಿಂ. ಹಾಗಾಗಿ ಮುಸ್ಲಿಂ ಕೇರಿಗಳಿಗೆ ಹೋದರೆ ಏ ಹಮಾರಾ ಆದ್ಮಿ ಹೈ ಎನ್ನುತ್ತಾರೆ. ಇವರು ಉತ್ತಮ ಆಡಳಿತ ನೀಡಿ ಎಲ್ಲ ಕೋಮಿನ ಜನರ ಬಳಿ ಹೊಗಳಿಸಿಕೊಂಡರೆ ಪರವಾಗಿಲ್ಲ. ಆದರೆ ಜಾತಿಯನ್ನಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರಲ್ಲ. ಅದೇ ದುರಂತ. ದಿನೇಶ್‌ ತಮ್ಮ ನಿಲುವು ಏನೆಂದು ಸ್ಪಷ್ಟಪಡಿಸಲಿ ನೋಡೋಣ?
ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ತಾನು ದಲಿತ ಎಂದು ಎಲ್ಲೆಲ್ಲೂ ಹೇಳಿಕೊಳ್ಳುತ್ತಿರುತ್ತಾರೆ. ಇರಲಿ. ಅದು ಅವರ ಹೆಮ್ಮೆ ಎಂದುಕೊಳ್ಳೋಣ. ಆದರೆ, ಇವರ ತಂದೆ ಬೌದ್ಧರು. ಒಬ್ಬ ಬೌದ್ಧದ ಧರ್ಮದ ಅಪ್ಪನಿಗೆ ಹುಟ್ಟಿದ ಮಗ ಅದು ಹೇಗೆ ದಲಿತ ಆಗುತ್ತಾರೆ? ಇನ್ನೊಂದು ಮಜ ನೋಡಿ, ಇವರ ಮಗನ ಹೆಸರು ಸೀನ್‌ ಪರಮೇಶ್ವರ ಅಂತ. ಅರ್ಥಾತ್‌ ಇವರ ಮಗ ಕ್ರಿಶ್ಚಿಯನ್‌. ಇದು ಹೇಗೆ ಸ್ವಾಮಿ? ನಾವು ಯಾರಾದರೂ ಬ್ರಾಹ್ಮಣರ ಮಕ್ಕಳನ್ನು ದಲಿತ ಎಂದು ಜಾತಿ ಹೆಸರು ಬದಲಾಯಿಸಿದರೆ ಜನರು ಒಪ್ಪಿಕೊಳ್ಳುತ್ತಾರಾ? ಹಾಗಾದರೆ ಪರಮೇಶ್ವರ್‌ ಅವರನ್ನು ಏಕೆ ಒಪ್ಪಿಕೊಂಡರು?

ನನಗೆ ಎಲ್ಲಕ್ಕಿಂತ ವಿಚಿತ್ರ ಎನಿಸಿದ ಮತ್ತೊಂದು ಹೆಸರು ನಲಪಾಡ್‌ ಹ್ಯಾರಿಸ್‌. ಈತ ಎಷ್ಟು ದೊಡ್ಡ ಬುದ್ಧಿವಂತ ನೋಡಿ.. ಮೊದಲಿಗೆ ಇವರ ಹೆಸರು ಕೇಳಿದ ಎಲ್ಲರೂ ಮೋಸ ಹೋಗುವುದು ಈತ ಕ್ರಿಶ್ಚಿಯನ್‌ ಎಂದು. ಆದರೆ ಅಸಲಿಗೆ ಈತ ಮುಸ್ಲಿಂ. ಅದು ಹ್ಯಾರಿಸ್‌ ಅಲ್ಲ, ಹಾರೀಸ್‌. ಹ್ಯಾರಿಸ್‌ ಎಂಬುದು ಕ್ರಿಶ್ಚಿಯನ್‌ ಹೆಸರು, ಹಾರೀಸ್‌ ಎಂಬುದು ಇಸ್ಲಾಮಿಕ್‌ ಹೆಸರು. ಇದರಿಂದ ಲಾಭ ಏನು? ಶಾಂತಿನಗರದ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರಗೊಂಡಿರುವ ಕ್ರಿಶ್ಚಿಯನ್ನರಿದ್ದಾರೆ. ಇನ್ನೂ ಅಭಿವೃದ್ಧಿ ನೋಡದೇ ಕೇವಲ ಜಾತಿ ನೋಡಿಕೊಂಡೇ ವೋಟು ಹಾಕುವ ಜನರೇ ಇರುವ ಭಾರತದಲ್ಲಿ, ಆರಾಮಾಗಿ ಹಾರೀಸ್‌ ಗೆದ್ದು ಬರುತ್ತಾರೆ. ಗೆಲ್ಲುತ್ತಿದ್ದಾರೆ.

ಇನ್ನು ಮುಸ್ಲಿಮರಿಗಂತೂ ಈ ಮನುಷ್ಯ ನಮ್ಮವ್ನು ಅಂತ ಗೊತ್ತೇ ಇದೆ. ಹಾಗಾಗಿ ಅವರ ವೋಟೂ ಹಾರೀಸ್‌ಗೇ! ಅಲ್ಲಿಗೆ ಕ್ರಿಶ್ಚಿಯನ್ನರ ಬಳಿ ತಮಿಳು ಮಾತಾಡಿ, ಮುಸ್ಲಿಮರ ಬಳಿ ಮಲಯಾಳಿ, ಉರ್ದು ಮಾತಾಡಿ ಆಯಾಸವಿಲ್ಲದೇ ವೊಟು ಪಡೆದುಕೊಂಡಂತಾಯಿತು. ಯಾರಾದರೂ ಹಾರೀಸ್‌ ಅವರನ್ನು ಹ್ಯಾರಿಸ್‌ ಎಂದಾಗ ಅವರು ಸರಿ ಮಾಡುವುದಿಲ್ಲ, ಮತ್ತು ಸ್ವತಃ ಹಾರೀಸ್‌ ಅವರೇ ತಮ್ಮ ಹೆಸರನ್ನು ಹ್ಯಾರಿಸ್‌ ಎಂದು ಹೇಳಿಕೊಳ್ಳುತ್ತಾರೆ. ಅಂದರೆ ರಾಜಕೀಯಕ್ಕೆ, ವೋಟಿಗಾಗಿ ಹೇಗೆ ಬೇಕಾದರೂ ಹೆಸರು ಬದಲಾಯಿಸಿಕೊಳ್ಳುತ್ತಾರೆ ಎಂದಾಯ್ತಲ್ಲ?
ಅತ್ತ ಕ್ರಿಶ್ಚಿಯನ್‌ ಧರ್ಮಕ್ಕೂ ನಿಷ್ಟೆ ಇಲ್ಲ, ಇತ್ತ ಇಸ್ಲಾಮ್‌ಗೂ ಮೋಸ, ಹಿಂದೂಗಳಿಗಂತೂ ಪರಮ ಮೋಸ. ಹಿಂದೂ ಧರ್ಮವನ್ನು ವಿರೋಧಿಸುವುದಕ್ಕೆ ಜಾತಿ ನಿರ್ಮೂಲನೆ ಮಾಡ್ತೀವಿ, ಮಣ್ಣು ಮಸಿ ಎಂದು ಮಾತನಾಡುವ ಇವರೆಲ್ಲ, ಶುಕ್ರವಾರ ಮಸೀದಿಯಲ್ಲಿದ್ದರೆ, ಶನಿವಾರ ಹನುಮಂತನ ಗುಡಿಯಲ್ಲಿರುತ್ತಾರೆ, ಭಾನುವಾರ ಚರ್ಚ್‌ನಲ್ಲಿ ವೈನ್‌ಗಾಗಿ ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಇವರು ಜಾತಿ ನಡುವೆ ತಂದಿಡುತ್ತಿದ್ದಾರೋ ಅಥವಾ ಜಾತಿ ನಿರ್ಮೂಲನೆ ಮಾಡುತ್ತಿದ್ದಾರೋ ನೀವೇ ನಿರ್ಧರಿಸಿ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya