ವಿರೋಧಿಗಳನ್ನು ಬಂಧಿಸುವುದಕ್ಕೆ ಸದಾ ಸಿದ್ಧ ಸರ್ಕಾರ!

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಸುಳ್ಳು
ಪ್ರಚಾರ, ಯೋಜನೆ ಘೋಷಣೆಗಳಿಗೆ ಬ್ರೇಕ್‌
ಬಿದ್ದಿದೆ. ಇದೇ ಕಾರಣಕ್ಕೆ ಕಾಂಗ್ರೆಸ್‌
ಪಕ್ಷವನ್ನು ಟೀಕಿಸುತ್ತಿರುವವರನ್ನು
ಸದ್ದಿಲ್ಲದೇ ಯಾವುದಾದರೊಂದು ಪ್ರಕರಣದಲ್ಲಿ
ಸಿಲುಕಿಸಿ ಬಂಧನ ಭಾಗ್ಯ
ಕರುಣಿಸಲಾಗುತ್ತಿದೆ.

ಸಿದ್ದರಾಮಯ್ಯ ಸರ್ಕಾರದ ಬಂಧನ ಭಾಗ್ಯ
ಯೋಜನೆ ಮತ್ತೆ ಶುರುವಾದಂತಿದೆ. ಯಾವಾಗ
ತಮ್ಮ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ
ಅಥವಾ ಪಕ್ಷಕ್ಕೆ ಯಾರಾರ‍ಯರು
ಮಾರಕಾಗುತ್ತಿದ್ದಾರೆ ಎಂದು ಅನಿಸುತ್ತದೆಯೋ

ಅಂಥವರನ್ನು ಬಂಧಿಸುವುದು
ಕಾಂಗ್ರೆಸ್‌ಗೇನೂ ಹೊಸತಲ್ಲ.
ಸಿದ್ದರಾಮಯ್ಯನವರ ಮಗ ಸತ್ತಾಗ, ಆತ
ಯಾವ ಪಾರ್ಟಿಯಲ್ಲಿ ಕುಡಿಯುತ್ತಿದ್ದ ಎಂದು
ಬರೆದಿದ್ದವರಿಗೆಲ್ಲ ಒಂದು ಸುತ್ತಿನ ಬೆದರಿಕೆ,
ಬಂಧನಗಳೆಲ್ಲ ಆಗಿತ್ತು. ಇನ್ನು ಲೇಖಕರಾದ
ರೋಹಿತ್‌ ಚಕ್ರತೀರ್ಥರಂಥವರು
ಕಾಂಗ್ರೆಸ್‌ ವಿರುದ್ಧ ಒಂದೆರಡು ಲೇಖನ
ಬರೆದರೆ ಸಾಕು ಪೊಲೀಸರಿಂದ ಒಮ್ಮೆ
ಬುಲಾವ್‌ ಬರುತ್ತದೆ. ನಿಮ್ಮ ಮನೆಯನ್ನು,
ಲ್ಯಾಪ್‌ಟಾಪ್‌ ತಪಾಸಣೆ ಮಾಡಬೇಕು ಎಂದು
ಹೇಳುತ್ತದೆ ಆ ಪೊಲೀಸ್‌ ಧ್ವನಿ. ಅದರಂತೆ
ಈಗ ಪೋಸ್ಟ್‌ಕಾರ್ಡ್‌ ಎಂಬ ನ್ಯೂಸ್‌ ಜಾಲತಾಣದ
ಪ್ರಧಾನ ಸಂಪಾದಕ ಮಹೇಶ್‌ ವಿಕ್ರಮ್‌
ಹೆಗಡೆಯನ್ನು ಬಂಧಿಸಿದ್ದಾರೆ ಅಷ್ಟೇ.
ಪೋಸ್ಟ್‌ಕಾರ್ಡ್‌ ನ್ಯೂಸ್‌ ಬಹಳ
ಪ್ರಖ್ಯಾತವಾಗಿದ್ದು ಇದನ್ನು ದಿನಕ್ಕೆ 13ಲಕ್ಷ
ಮಂದಿ ಓದುತ್ತಿದ್ದರು. ಕಾಂಗ್ರೆಸ್‌
ಬಂಡವಾಳವನ್ನು ಬಯಲಿಗೆಳೆಯುತ್ತಿದ್ದ
ಇವರನ್ನು ಯಾವುದೋ ಒಂದ ಸಣ್ಣ ತಪ್ಪನ್ನು
ಹಿಡಿದು, ಚುನಾವಣೆಯ ಸಮಯದಲ್ಲಿ
ಪಕ್ಷಕ್ಕೆ ಧಕ್ಕೆಯಾಗದಿರಲಿ ಎಂದು
ಬಂಧಿಸಲಾಗಿದೆ. ಇದು ಕೇವಲ ಆರೋಪವಲ್ಲ.

ಬದಲಿಗೆ ದ್ವೇಷವಿದೆ ಎಂಬುದಕ್ಕೆ ಸಾಕಷ್ಟು
ದಾಖಲೆಗಳಿವೆ.
ಪ್ರಕರಣದಲ್ಲಿ ಆದದ್ದು ಇಷ್ಟೇ: ಜೈನ
ಮುನಿಗಳೊಬ್ಬರು ಕಾರು ಅಪಘಾತದಿಂದ
ಗಾಯಗೊಂಡಿದ್ದರು. ಆದರೆ ಸಾಮಾಜಿಕ
ಜಾಲತಾಣದಲ್ಲಿ ಇದು ಮುಸ್ಲಿಮರಿಂದ ಹಲ್ಲೆ
ಎಂದು ಹರಿದಾಡುತ್ತಿತ್ತು. ಅದೇ ಶೀರ್ಷಿಕೆಯನ್ನು
ಹಾಕಿ ಪೋಸ್ಟ್‌ಕಾರ್ಡ್‌ ಪ್ರಕಟಿಸಿತ್ತು.
ಆತುರದಲ್ಲಿ ಆದ ತಪ್ಪು ಇದು. ಇದನ್ನು
ಯಾರೂ ಸಮರ್ಥಿಸಿಕೊಳ್ಳುತ್ತಿಲ್ಲ. ಒಂದು ಸಣ್ಣ
ವಿಷಾದವನ್ನು ಪ್ರಕಟಿಸಿಬಿಟ್ಟಿದ್ದರೆ ಮುಗಿದೇ
ಹೋಗುವಂಥ ಸಂಗತಿಗೆ ಮಹೇಶ್‌
ವಿಕ್ರಮ್‌ ಹೆಗಡೆ ವಿರುದ್ಧ ಐಟಿ ಕಾಯಿದೆಯಡಿ
ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್‌ 66ಎ
ಆಗಲೇ ತೆರವುಗೊಂಡಿರುವುದರಿಂದ
ಮಹೇಶ್‌ರನ್ನು ಆ ಪ್ರಕರಣದಿಂದ ಕೈಬಿಟ್ಟು,
ಸೆಕ್ಷನ್‌ 153ಎ(ಧರ್ಮ/ಜಾತಿಯನ್ನು ಒಡೆಯುವ
ಪ್ರಯತ್ನ) ಹಾಕಿ ಸೈಬರ್‌ ಕ್ರೈಮ್‌ನಿಂದ
ಅದನ್ನು ಕೇವಲ ಒಂದೆರಡೇ ದಿನದಲ್ಲಿ ಸಿಸಿಬಿಗೆ
ವರ್ಗಾಯಿಸಿಕೊಂಡು ಹೆಗಡೆಯವರನ್ನು
ಬಂಧಿಸಿದ್ದಾರೆ.
ಇವರನ್ನು ಬಂಧಿಸುವುದಕ್ಕೆ ಸಿಕ್ಕ ನೆಪ
ಜೈನ ಮುನಿಗಳು ಅಷ್ಟೇ. ಮಹೇಶ್‌

ವಿಕ್ರಮ್‌ ಹೆಗಡೆಯವರನ್ನು
ಬಂಧಿಸುವುದಕ್ಕೆ ಸುಮಾರು ಕಾರಣಗಳಿವೆ.
ಒಂದೆರಡು ತಿಂಗಳ ಹಿಂದೆ ನಟಿ ರಮ್ಯಾ ಅವರ
ಒಂದು ವಿಡಿಯೊ ಹೊರಬಿದ್ದಿತ್ತು. ಟ್ವಿಟರ್‌ನಲ್ಲಿ ನಕಲಿ
ಅಕೌಂಟ್‌ಗಳನ್ನು ಹೇಗೆ ಸೃಷ್ಟಿಸುವುದು,
ಬಾಟ್‌ಗಳು ಎಂದರೇನು ಎಂದು ಕಾಂಗ್ರೆಸ್‌
ಕಾರ್ಯಕರ್ತರಿಗೆ ಪಾಠ ಮಾಡುತ್ತಿರುವಂಥ
ವಿಡಿಯೊ ಅದು. ಮಹೇಶ್‌ ಹೆಗಡೆ ಇದನ್ನು
ಟ್ವಿಟರ್‌ನಲ್ಲಿ ಹಾಕಿದಾಗ, ಇದು ನನ್ನದಲ್ಲ,
ಎಡಿಟೆಡ್‌ ಎಂದು ಹೇಳಿದ್ದರು ರಮ್ಯಾ.
ಅದಕ್ಕೆ ಉತ್ತರಿಸಿದ ಮಹೇಶ್‌ ಹೆಗಡೆ,
ಹಾಗಾದರೆ ನನ್ನ ಮೇಲೆ ಮಾನನಷ್ಟ
ಮೊಕದ್ದಮೆ ಹಾಕಿ ನೋಡೋಣ ಎಂದಿದ್ದರು.
ಆಗ ಪ್ರಕರಣ ದಾಖಲಾಗಿಲ್ಲ. ಈಗ
ಬಂಧನವಾಗಿದ್ದಾರೆ.
ಮಹೇಶ್‌ ವಿಕ್ರಮ್‌ ಹೆಗಡೆಯನ್ನು
ಬಂಧಿಸಿದ್ದು ವಿಷಯವೇ ಅಲ್ಲ. ಏಕೆಂದರೆ
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಪ್ಪು
ಮಾಡಿದರೆ ಶಿಕ್ಷೆಯಾಗಬೇಕು. ಆದರೆ
ಸಿದ್ದರಾಮಯ್ಯ ಮತ್ತು ಅವರ ಆಪ್ತರು
ಮಾತ್ರ ಇದಕ್ಕೆ ಹೊರತಾಗಿದ್ದಾರಾ ಎಂಬುದೇ
ಪ್ರಶ್ನೆ. ಮಹೇಶ್‌ ವಿಕ್ರಮ್‌
ಹೆಗಡೆಯನ್ನು ಬಂಧಿಸಬಹುದಾದರೆ

ಸಿದ್ದರಾಮಯ್ಯನವರನ್ನೂ
ಬಂಧಿಸಬಹುದಲ್ಲವೇ?
ಗುಜರಾತ್‌ನಲ್ಲಿ ದಲಿತನೊಬ್ಬ
ಕುದುರೆಯನ್ನು ಖರೀದಿಸಿದ್ದಾನೆ ಎಂದು
ಮೇಲ್ವರ್ಗದವರು ಹೊಡೆದು ಕೊಂದರು
ಎಂಬ ಸುದ್ದಿಯನ್ನು ಮುಖ್ಯಮಂತ್ರಿ ಅವರು
ಮೊನ್ನೆಯಷ್ಟೇ ಟ್ವಿಟರ್‌ನಲ್ಲಿ
ಬರೆದುಕೊಂಡಿದ್ದರು. ಆದರೆ ಈ ಪ್ರಕರಣ
ಕುದುರೆಯ ವಿಚಾರಕ್ಕಲ್ಲ, ಬದಲಿಗೆ ಹೆಣ್ಣು
ಮಕ್ಕಳಿಗೆ ಚುಡಾಯಿಸಿದ್ದಕ್ಕೆ ಮತ್ತು
ವೈಯಕ್ತಿಕ ದ್ವೇಷಕ್ಕೆ ಆದದ್ದು ಎಂದು
ಗುಜರಾತ್‌ ಪೊಲೀಸರೇ ಹೇಳಿದ್ದಾರೆ. ಈಗ
ಹೇಳಿ ಸುಳ್ಳು ಹೇಳಿದ
ಮುಖ್ಯಮಂತ್ರಿಯವರಿಗೆ ಏನು ಮಾಡಬೇಕು?
ದಲಿತರು ಮತ್ತು ಹಿಂದೂ ಮೇಲ್ವರ್ಗ ಎಂದು
ಇವರೇನು ಹೇಳುತ್ತಿದ್ದಾರೆ ಅವರಿಬ್ಬರ
ಮಧ್ಯೆ ಗಲಭೆಗೆ ಒಂದು ರಾಜ್ಯದ
ಮುಖ್ಯಮಂತ್ರಿಯೇ ಕಾರಣವಾಗಿರುವಾಗ ಅವರ
ವಿರುದ್ಧ ಧರ್ಮ/ಜಾತಿಗಳ ನಡುವೆ ಕಲಹ
ಪ್ರಕರಣ ದಾಖಲಾಗುವುದಿಲ್ಲ ಏಕೆ?
ಹೇಳಿ,ಎಷ್ಟು ದಿನ ಪೊಲೀಸ್‌ ಸಿಎಂ
ವಶದಲ್ಲಿರುತ್ತಾರೆ?

ಲಿಂಗಾಯತವನ್ನು ಹಿಂದೂ ಧರ್ಮದಿಂದ
ಕೈಬಿಡುವುದಕ್ಕೆ ಒಪ್ಪಿಗೆ ಸೂಚಿಸಿದ್ದು
ಸಿದ್ದರಾಮಯ್ಯ. ಊರಿಗೆಲ್ಲ ಬುದ್ಧಿ ಹೇಳುವ
ಸಿದ್ದರಾಮಯ್ಯ ಜಾತಿ/ಧರ್ಮವನ್ನು
ಕಾನೂನಾತ್ಮಕವಾಗೇ ಒಡೆಯಲು ಅನುಮತಿ
ಸೂಚಿಸಿದರು. ಇದು ಹೇಗಿದೆ ಎಂದರೆ, ಪೊಲೀಸ್‌
ಶೂಟ್‌ ಮಾಡಿದರೆ ಎನ್‌ಕೌಂಟರ್‌, ಪಬ್ಲಿಕ್‌ ಶೂಟ್‌
ಮಾಡಿದರೆ ಕೊಲೆ ಎಂಬಂತಿದೆ. ಹಾಗಾದರೆ ಜನರ
ಭಾವನೆಗಳಿಗೆ ಬೆಲೆಯೇ ಇಲ್ಲವಾ?
ಪೊಲೀಸರಿಗೆ ಮುಖ್ಯಮಂತ್ರಿಯ ವಿರುದ್ಧ
ಅಂತೂ ಕೆಮ್ಮುವುದಕ್ಕಾಗಲ್ಲ, ಕನಿಷ್ಠ
ಪಕ್ಷ ಮುಖ್ಯಮಂತ್ರಿ ಅವರ
ಅಕ್ಕಪಕ್ಕದಲ್ಲೇ ಇರುವವರಿಗಾದರೂ
ಇಂಥಾ ಕಾನೂನು ಅನ್ವಯಿಸಬೇಕಲ್ಲವೇ?
ಕಾಂಗ್ರೆಸ್‌ ಆಡಳಿತದಲ್ಲಿ ಪೊಲೀಸರು ಯಾವ
ಮಟ್ಟಿಗೆ ಜೀತದಾಳುಗಳಾಗಿರುತ್ತಾರೆ
ಎನ್ನುವುದಕ್ಕೆ ಪ್ರಭಾ ಬೆಳವಂಗಲ
ಪ್ರಕರಣವೇ ಸಾಕ್ಷಿ. ಚಿಂತಕಿ ಎಂದು
ಕರೆಸಿಕೊಳ್ಳುವ ಪ್ರಭಾ ಅವರು ಕಳೆದ
ವರ್ಷ ಯಾವುದೋ ಕಿರುಚಿತ್ರದ ಫೋಟೊ ಹಾಕಿ,
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ
ಆದಿತ್ಯನಾಥರು ಯಾವುದೋ ಹುಡುಗಿಯ ಜತೆ
ಹಾಸಿಗೆಯಲ್ಲಿದ್ದಾರೆ ಎಂಬರ್ಥದಲ್ಲಿ

ಫೇಸ್ಬುಕ್‌ನಲ್ಲಿ ಹಾಕಿದ್ದರು. ಇವರ
ವಿರುದ್ಧ ರಾಜ್ಯದಲ್ಲಿ 20 ಪ್ರಕರಣಗಳು
ದಾಖಲಾಗಿತ್ತು. ಪೊಲೀಸರಿಗೆ ಧಮ್‌
ಇರಲಿಲ್ಲವಾ ಇವರನ್ನು ಬಂಧಿಸುವುದಕ್ಕೆ?
ಯಾಕ್‌ ಸಾರ್‌ ಇವ್ರನ್ನ ಬಂಧಿಸ್ತಾ ಇಲ್ಲ ಎಂದು
ಪೊಲೀಸರನ್ನು ಕೇಳಿದರೆ, ನಿಮಗೇ
ಗೊತ್ತಲ್ವಾ ನಮಗೆ ಯಾರ್‌ ಕಡೆಯಿಂದ
ಪ್ರೆಶರ್‌ ಇದೆ ಅಂತ ಎಂದು
ಜಾರಿಕೊಂಡುಬಿಡುತ್ತಿದ್ದರು. ದುರಂತ ಏನು
ಗೊತ್ತಾ? ಇದೇ ಪ್ರಭಾ ಬೆಳವಂಗಲರ
ವಿರುದ್ಧ ಪ್ರಕರಣ ದಾಖಲಾಗಿ ಪ್ರತಿಭಟನೆ
ನಡೆಯುತ್ತಿರುವಾಗ ರಾಜಾರೋಷವಾಗಿ
ಕಮೀಷನರ್‌ ಕಚೇರಿಗೆ ಹೋಗಿ, ಕುರ್ಚಿ
ಮೇಲೆ ಕುಳಿತು ಕಮೀಷನರ್‌ರನ್ನು
ಭೇಟಿಯಾಗಿ ಬರುತ್ತಾರೆ. 20 ಪ್ರಕರಣ
ದಾಖಲಾಗಿರುವ ಆರೋಪಿ ಎದುರಿಗೆ ಬಂದರೂ
ಬಂಧಿಸದ ಪೊಲೀಸರು, ಒಂದೇ ಒಂದು
ಪ್ರಕರಣದಲ್ಲಿ ಮಹೇಶ್‌ ವಿಕ್ರಮ್‌
ಹೆಗಡೆಯವರನ್ನು ಬಂಧಿಸಿದ್ದಾರೆ ಎಂದರೆ
ಏನರ್ಥ? ಯಾರ ಕಿವಿಯ ಮೇಲೆ ಇವರು
ಲಾಲ್‌ಬಾಗ್‌ ಇಡಲು ಹೊರಟಿದ್ದಾರೆ.
ಎಷ್ಟು ಪ್ರಕರಣಗಳು ಬೇಕು?
ಚಿತ್ರದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಹಿಂದೂಗಳ ವಿರುದ್ಧ ಸುಳ್ಳು

ಪ್ರಕರಣಗಳು, ವಕೀಲ ತೇಜಸ್ವಿ ಸೂರ್ಯರ
ವಿರುದ್ಧ ಸುಳ್ಳು ಪ್ರಕರಣ, ಸಂಸದ
ಪ್ರತಾಪ್‌ ಸಿಂಹ ವಿರುದ್ಧ. ಅಷ್ಟೇ ಏಕೆ?
ಪ್ರತಿಭಟನೆ ಮಾಡುತ್ತಿದ್ದ ರೈತರ
ವಿರುದ್ಧವೂ ಹತ್ಯೆ ಯತ್ನ ಎಂಬ ಪ್ರಕರಣ
ದಾಖಲಗಿದೆ. ಇದನ್ನು ತೆಗೆಸಿಕೊಳ್ಳಲು
ರೈತರು ಅದೆಷ್ಟು ದಿನ ಕೋರ್ಟು , ಕಚೇರಿ
ಎಂದು ಅಲೆದು ಹಣ ಖರ್ಚು ಮಾಡಿದರೋ
ಲೆಕ್ಕವಿಲ್ಲ.
ಬೇಕು ಅಂತಲೇ ಪ್ರಕರಣದಲ್ಲಿ ಫಿಕ್ಸ್‌
ಮಾಡುವ ಬುದ್ಧಿಯನ್ನು ಕಾಂಗ್ರೆಸ್‌
ಬಿಡುವುದ್ಯಾವಾಗ?
ನಿಜವಾಗಿಯೂ ಪೊಲೀಸರಿಗೆ ಧಮ್‌ ಇದ್ದಿದ್ದೇ
ಆದರೆ ಕಾಗೋಡು ತಿಮ್ಮಪ್ಪ ಭಾಷಣ
ಮಾಡುವ ಭರದಲ್ಲಿ ಬ್ರಾಹ್ಮಣರು ಮತ್ತು
ಹಿಂದೂಗಳನ್ನು ಅವಮಾನ ಮಾಡಿದರಲ್ಲ.
ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು
ಮಾಡಿದ್ದ ಅವರ ಮೇಲೆ ಯಾವ ಪ್ರಕರಣ
ದಾಖಲಾಯ್ತು? ಏಕೆ ಬಂಧಿಸಲಿಲ್ಲ ಹೇಳಿ?
ಯಾಕೆಂದರೆ ಆಡಳಿತ ಸರ್ಕಾರಕ್ಕೆ ಋುಣ ಸಂದಾಯ
ಮಾಡಲೇಬೇಕಲ್ಲ.
ರೋಶನ್‌ ಬೇಗ್‌ ಪ್ರಧಾನಿಯನ್ನು
ಬೋಳಿಮಗ ಎಂದು ಬೈದದ್ದು ಯಾರಿಗೇನೂ

ಗೊತ್ತಿಲ್ಲದ ವಿಚಾರವಲ್ಲ. ಏನು ಮಾಡಿದೆ
ಕಾಂಗ್ರೆಸ್‌ ಅವರಿಗೆ? ದೇಶದ ಪ್ರಧಾನಿಯನ್ನು
ಬಯ್ದರೆ ಯಾವ ಶಿಕ್ಷೆಯೂ ಇಲ್ಲ ಆದರೆ ಒಂದು
ಟ್ವೀಟ್‌ ಹಾಕಿದ್ದಕ್ಕೆ ಜೈಲಿನ ಜತೆಗೆ ಬೇಲ್‌
ಸಹ ಸಿಗದ ಹಾಗೆ ಮಾಡಲಾಗುತ್ತದೆ.
ಇದು ಕಾಂಗ್ರೆಸ್‌ ಸರ್ಕಾರದ ವೈಶಿಷ್ಟ್ಯ.
ಮೊನ್ನೆಯಷ್ಟೇ ಒಂದು ಸುದ್ದಿ ಹರಿದಾಡಿತ್ತು.
ಹಿರಿಯ ನಟಿ ಜಯಂತಿಯವರುಅನಾರೋಗ್ಯದಿಂದ
ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು.
ಒಂದಾದಮೇಲೆ ಒಂದು ಕನ್ನಡ ದೃಶ್ಯ
ಮಾಧ್ಯಮಗಳು ಜಯಂತಿಯವರ ಮರಣಕ್ಕೆ
ವಿಷಾದ ವ್ಯಕ್ತಪಡಿಸಿದವು. ಅಷ್ಟೇ ಯಾಕೆ
ನಮ್ಮ ಕಾಂಗ್ರೆಸ್‌ ಸಹ ಜಯಂತಿಯವರ
ಸಾವಿಗೆ ವಿಷಾದ ವ್ಯಕ್ತಪಡಿಸಿತ್ತು. ಇದಕ್ಕೆ
ಟ್ವಿಟರ್‌ನಲ್ಲಿ ಜಯಂತಿಯವರ ಹತ್ತಿರದ
ಸಂಬಂಧಿಯೊಬ್ಬರು ಉಗಿದು, ಜಯಂತಿಯವರು
ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು ಹೌದು
ಆದರೆ ಗುಣಮುಖರಾಗುತ್ತಿದ್ದಾರೆ ಎಂದು
ಹೇಳಿದಾಗ, ಎಲ್ಲ ಮಾಧ್ಯಮಗಳೂ
ಸುಮ್ಮನಾಗಿಬಿಟ್ಟಿದ್ದವು.
2 ವಾರಗಳ ಹಿಂದೆ ಮತ್ತೊಂದು ಸುದ್ದಿ
ಹರಿದಾಡಿತ್ತು. ನಟ ಬುಲೆಟ್‌ ಪ್ರಕಾಶ್‌ ತೀವ್ರ
ಅನಾರೋಗ್ಯದಿಂದ ಆಸ್ಪತ್ರೆಯ

ಐಸಿಯುನಲ್ಲಿದ್ದಾರೆ ಎಂದು. ನಂತರ ಸ್ವತಃ
ಬುಲೆಟ್‌ ಪ್ರಕಾಶ್‌ ಒಂದು ವಿಡಿಯೊ ಮಾಡಿ, ನಾನು
ಆಸ್ಪತ್ರೆ ಸೇರಿದ್ದೇನೆ ಎಂದು ಸುದ್ದಿ ಹಬ್ಬಿಸಿದ
ತಿರಬೋಕಿ ಯಾರು ಎಂದು ಕೇಳಿದಾಗ ಎಲ್ಲ
ಮಾಧ್ಯಮಗಳೂ ಕೈ ಕಟ್ಟಿ ಬಾಯ್‌
ಮುಚ್ಚಿದ್ದರು. ಅಂದರೆ ಕೆಲವೊಮ್ಮೆ ಇಂಥ
ತಪ್ಪುಗಳಾಗುತ್ತವೆ. ಆದರೆ ಇಂಥ ತಪ್ಪಿಗೆ
ನೇರವಾಗಿ ಜೈಲಿಗೆ ಹಾಕಿ ಬೇಲ್‌ ಸಿಗದ
ಹಾಗೆ ಮಾಡಿದರೆ? ಅದೂ ಸರ್ಕಾರದ
ದ್ವೇಷದಿಂದ? ಇವರಂತೆ ಎಲ್ಲರನ್ನೂ
ಬಂಧಿಸುತ್ತಾ ಹೋದರೆ ಇಷ್ಟೊತ್ತಿಗೆ
ಬಹುತೇಕ ಪತ್ರಕರ್ತರೂ ಜೈಲಿನಲ್ಲೇ
ಇರಬೇಕಾಗಿರುತ್ತಿತ್ತಲ್ಲವೇ?
ಚುನಾವಣಾ ದಿನಾಂಕ ಘೋಷಣೆಯಾದರೂ
ಕಾಂಗ್ರೆಸ್‌ಗೆ ಮಾತ್ರ ಆ ನೀತಿ ಸಂಹಿತೆ
ಅನ್ವಯಿಸುವುದಿಲ್ಲ ಎನಿಸುತ್ತದೆ.
ತಮಗಾಗದವರನ್ನು ಬಂಧಿಸಿಕೊಂಡು, ಯಾವ
ರೈಲಿನ ಮೇಲಾದರೂ ಸದಾ ಸಿದ್ಧ ಸರ್ಕಾರ
ಎಂಬ ಪೋಸ್ಟರ್‌ ಅಂಟಿಸಿಕೊಂಡೇ ಇರುತ್ತಾರೆ.
ಗೂಂಡಾಗಿರಿಯ ಪರಮಾವಧಿ ಎಂದರೆ ಇದೇನಾ?

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya