ಲವ್ ಜಿಹಾದ್ ಇಲ್ಲವೆಂಬುದು ಬುದ್ಧಿಜೀವಿಗಳು, ಎಡಪಂಥೀಯರು ಹೇಳಿದ ಈ ಶತಮಾನದ ಸುಳ್ಳು!

 

ಡಿಸೆಂಬರ್ 19, 2016. ಅಖಿಲಾ ಮತ್ತು ಶಫಿನ್ ಜಹಾನ್ ಇಬ್ಬರೂ ಮದುವೆಯಾಗಿಬಿಟ್ಟರು. ಅವಳು ಅಖಿಲಾ ಆಗೇ ಇದ್ದಿದ್ದರೆ ಅದು ಲವ್ ಜಿಹಾದ್ ಎಂದು ಹೇಳಲಾಗುತ್ತಿರಲಿಲ್ಲವೇನೋ. ಯಾವಾಗ ಆಕೆ ಹಾದಿಯಾ ಆಗಿಬಿಟ್ಟಳೋ, ಅಲ್ಲಿಂದ ಎಲ್ಲವೂ ಶುರುವಾಗಿದ್ದು. ಮಗಳು ಅಖಿಲಾ ಸೇಲಂನಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಹೋಮಿಯೋಪಥಿ ಮತ್ತು ಸರ್ಜರಿಯನ್ನು ಓದುತ್ತಿದ್ದಳು. ಕಾಲೇಜಿನಿಂದ ಕಾಣೆಯಾಗಿದ್ದ ವಿಷಯ ತಿಳಿದ ಅಖಿಲಾ ತಂದೆ ಮಾಜಿ ಯೋಧ ಅಶೋಕನ್ ಮಣಿ, ಮೊದಲಿಗೆ ದೂರು ನೀಡಿದ್ದರು. ಆದರೂ ಪೊಲೀಸರು ಏಕೋ ಇದರ ಬಗ್ಗೆ ಗಮನ ಹರಿಸಿರಲಿಲ್ಲ. ಇಷ್ಟಕ್ಕೇ ಸುಮ್ಮನಾಗದ ಅಶೋಕನ್, ಕೇರಳ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಪೆಟಿಷನ್ ಇಟ್ಟರು. ಇದು ಪೋಲಿಸರ ಮೇಲೆ ಒತ್ತಡ ಹೇರಿದ್ದರಿಂದ, ಹೇಗೋ ಮಾಡಿ ಅವರ ಮಗಳನ್ನು ಹುಡುಕಿದರು.

ಹೋಗುವಾಗ ತಿಲಕ ಇಟ್ಟು ಚೂಡಿದಾರ್ ದುಪಟ್ಟಾ ಧರಿಸಿ ಹೋಗಿದ್ದ ಮಗಳ ಹಣೆಯ ಮೇಲೆ ತಿಲಕ ಇಲ್ಲ. ಎದೆ ಮೇಲಿದ್ದ ದುಪಟ್ಟಾ ಮುಖಕ್ಕೆ ಸುತ್ತಿತ್ತು. ಅಷ್ಟೇ ಏಕೆ, ಅಖಿಲಾ ಎನ್ನುವ ಹೆಸರು ಹಾದಿಯಾ ಆಗಿತ್ತು. ಮದುವೆಯಾಗಿ ಕೇವಲ ಎರಡೇ ಎರಡು ದಿನ ಆಗಿತ್ತು ಆಗ. ಹುಟ್ಟಿನಿಂದ ಬಂದ ಸಂಸ್ಕಾರ ಎರಡೇ ದಿನದಲ್ಲಿ ಬದಲಾಗಿದೆ ಎಂದಾಗ ಆ ಮಾಜಿ ಯೋಧ ಅಶೋಕನ್‌ಗೆ ಎಲ್ಲವೂ ಅರ್ಥವಾಗಿ ಹೋಯ್ತು. ಲವ್ ಜಿಹಾದ್ ನನ್ನ 24ವರ್ಷದ ಮಗಳು ಬಲಿಯಾಗಿದ್ದಾಳೆ ಎಂದು ಮತ್ತೊಂದು ದೂರು ದಾಖಲಿಸಿದರು. ಮೋಸ ಮಾಡಿ ಒಬ್ಬ ಮುಸ್ಲಿಮ್ ನನ್ನ ಮಗಳನ್ನು ಮದುವೆಯಾಗಿದ್ದಾನೆ ಎಂದರು. ಈ ಸಂಬಂಧ ಅವಳನ್ನು ಕೋರ್ಟ್ ಕೇಳಿದಾಗ, ಸ್ವಇಚ್ಛೆಯಿಂದ ತಾನು ಮದುವೆಯಾಗಿ, ಮತಾಂತರಗೊಂಡಿದ್ದೇನೆ ಎಂದು ಹೇಳಿದಳು. ಇನ್ನು ಗಂಡನ ಪಾಳಿ.. ಅವನನ್ನು ವಿಚಾರಣೆಗೊಳಪಡಿಸಿದಾಗ ತಿಳಿದ್ದಿದ್ದೇನೆಂದರೆ, ಆತ ಎಸ್‌ಡಿಪಿಐ ಕೇರಳಂ ಮತ್ತು ತನಲ್ ಎಂಬ ಗ್ರೂಪ್‌ನ ಅಡ್ಮಿನ್ ಆಗಿದ್ದ.

ಈ ಗ್ರೂಪ್‌ನಲ್ಲಿ ಐಸಿಸ್ ಜತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ 2016ರ ಅಕ್ಟೋಬರ್ 2ರಂದು ಎನ್‌ಐಎ ಇಂದ ಬಂಧನಕ್ಕೊಳಗಾಗಿದ್ದ ಮಾನ್ಸಿ ಬುರಾಕಿ ಸಹ ಇದ್ದ. ಅಂದರೆ ಶಫಿ ಜಹಾನ್‌ಗೆ ಐಸಿಸ್ ತನಕವೂ ಲಿಂಕ್ ಇದ್ದದ್ದು ಪೊಲೀಸರ ತನಿಖೆಯಿಂದ ಸಾಬೀತಾಗಿತ್ತು. ಶಫಿನ್ ಜಹಾನ್‌ಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಲ್ಲಿದ್ದಿದ್ದರೂ ಒಬ್ಬ ಬೇಹುಗಾರನಾಗಿ, ಮದುವೆಗಳ ವಿಚಾರದಲ್ಲಿ ಅವನಿಗೆ ನಿರ್ವಹಿಸಿದ ಕೆಲಸ ಮಾಡಿದ್ದಾನೆ. ಹಾಗಾಗಿ ಈ ಮದುವೆ ಅಮಾನ್ಯ ಹಾಗೂ ಕಾನೂನುಬಾಹಿರ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು. ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್ ಒಂದು ಪ್ರಕರಣದ ಸಂಬಂಧ ಲವ್ ಜಿಹಾದ್ ಎಂಬುದರ ಬಗ್ಗೆ ತನಿಖೆ ಮಾಡಿ ವರದಿ ನೀಡಲು ಕೇಳಿತ್ತು. ಅದೇ ಪ್ರಕರಣ ಇದು. ಹಾದಿಯಾ ಲವ್ ಜಿಹಾದ್ ಕೇಸ್ ಎಂದೂ ಕರೆಯುತ್ತಾರೆ. ಕೇರಳ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು.

ಇಷ್ಟಾದರೂ ಲವ್ ಜಿಹಾದ್ ಥರ್ಡ್ ಕ್ಲಾಸ್ ಬುದ್ಧಿ ಜೀವಿಗಳು ಮಾತ್ರ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಒಳಗೆ ಬಚ್ಚಿಟ್ಟುಕೊಂಡು ಲವ್ ಜಿಹಾದ್ ಎಲ್ಲ ಬಲಪಂಥೀಯರ ಸೃಷ್ಟಿ ಎಂದು ವಾದಿಸುತ್ತಿದ್ದಾರೆ. ಯಾವ ಬಾಯಲ್ಲಿ ಇಂಥ ವಾದ ಮಂಡಿಸುತ್ತಾರೆ ಇವರು? ಆಯ್ತು ಸ್ವಾಮಿ ಈ ಪ್ರಕರಣವನ್ನೇ ತೆಗೆದುಕೊಂಡರೆ, ಕೇರಳ ಹೈಕೋರ್ಟ್ ತೀರ್ಪು ನೀಡಬೇಕಿದ್ದರೆ, ಎಸ್‌ಡಿಪಿಐ ಎಂಬ ಇಸ್ಲಾಮಿಕ್ ಮೂಲಭೂತವಾದಿಗಳ ಸಂಘಟನೆ ಬಂದು ಕೋರ್ಟ್‌ನಲ್ಲೇ ಗಲಾಟೆ ಮಾಡಿತ್ತಲ್ಲ ಅದ್ಯಾಕೆ? ಇದು ಲವ್ ಜಿಹಾದ್ ಎಂದು ಕೋರ್ಟೇ ತೀರ್ಪು ನೀಡಿದ ಮೇಲೆ ಅದನ್ನು ವಿರೋಧಿಸುವುದಕ್ಕೆ ಈ ಅಸಾದುದ್ದೀನ್ ಓವೈಸಿಯೇನು ದೊಣೆ ನಾಯಕನಾ? ಅವರವರ ಇಷ್ಟಕ್ಕೆ ತಕ್ಕಂತೆ ಅವರು ಧರ್ಮ ಬದಲಾಯಿಸಿದರೆ, ಅದು ಲವ್ ಜಿಹಾದ್ ಹೇಗಾಗುತ್ತದೆ ಎಂದು ಮೂರ್ಖ ಶಿಖಾಮಣಿಯ ಹಾಗೆ ಪ್ರಶ್ನೆ ಮಾಡುವ ಅಸಾದಿದ್ದೀನ್ ಓವೈಸಿಗೆ ಏನೂ ಗೊತ್ತೇ ಇಲ್ವಾ?

Shahan Sha A vs State of Kerala (supra) ಪ್ರಕರಣದಲ್ಲಿ ಕೋರ್ಟ್ ಸ್ಪಷ್ಟವಾಗಿ ಹೇಳಿದೆ – radical organisations pursuing activities of converting young girls of Hindu religion to Islam on the pretext of love. The fact remains that such achivities are going on around us in our society.. ಅಂದರೆ – ಪ್ರೀತಿಯ ಹೆಸರು ಹೇಳುತ್ತಾ ಹಿಂದೂ ಧರ್ಮದ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡುವ ಚಟುವಟಿಕೆಗಳನ್ನು ತೀವ್ರಗಾಮಿ ಸಂಘಟನೆಗಳು ನಡೆಸುತ್ತಿವೆ. ವಾಸ್ತವವಾಗಿ ನಮ್ಮ ಸಮಾಜದಲ್ಲಿ ಅಂತಹ ಚಟುವಟಿಕೆಗಳು ನಮ್ಮ ಸುತ್ತಲೂ ನಡೆಯುತ್ತಿವೆ. ಎಂದು ಅಷ್ಟು ಖಡಕ್ಕಾಗಿ ಹೇಳಿರುವಾಗ ಅದನ್ನು ಅಲ್ಲಗಳೆಯುವ ಅಸಾದುದ್ದೀನ್ ಓವೈಸಿ ಯಾವ ಸೀಮೆಯ ವಕೀಲನಂತೆ? ಲವ್ ಜಿಹಾದಿಗಳನ್ನು ಬೆಂಬಲಿಸುವಂತೆ ಮಾತಾಡುವ ಓವೈಸಿಗೂ ಒಂದು ರಾಜಕೀಯ ಪಕ್ಷ ಬೇರೆ. ಯಾರ ಕಿವಿಗೆ ಹೂವು ಇಡುವುದಕ್ಕೆ ಬರುತ್ತಿದ್ದಾರೆ?

ಸ್ಕಾಟ್‌ಲ್ಯಾಂಡ್ ಯಾರ್ಡ್‌ನಲ್ಲಿ 2007ರ ಫೆಬ್ರವರಿ 22ರಂದು ಒಂದು ದೊಡ್ಡ ಸುದ್ದಿಯಾಗಿತ್ತು. ಅದು ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲೂ ಅದರ ಬಗ್ಗೆ ಚರ್ಚೆಯಾಗಿತ್ತು. ‘ಮೂಲಭೂತವಾದಿಗಳಿಂದ ಹಿಂದೂ ಹುಡುಗಿಯರ ಟಾರ್ಗೆಟ್’ ಎಂಬ ಸುದ್ದಿ ಅದು. ಮುಸ್ಲಿಂ ಹುಡುಗರು ಹೇಗಾದರೂ ಮಾಡಿ ಹಿಂದೂ ಹೆಣ್ಣು ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡಬೇಕು. ಅದು ಪ್ರೀತಿಯೆಂಬ ನಾಟಕವಾಡಿಯಾಗಲಿ ಅಥವಾ ಒತ್ತಾಯದಿಂದಾಗಲಿ. ಒಂದು ಹಿಂದೂ ಹುಡುಗಿಯನ್ನು ಮತಾಂತರ ಮಾಡಿದರೆ ಐದು ಸಾವಿರ ಯೂರೋಗಳಷ್ಟು ಹಣವನ್ನು ಬಹುಮಾನವಾಗಿ ಕೊಡುತ್ತಿದ್ದರು. ಈ ವಿಷಯವೂ ಅಸಾದುದ್ದೀನ್ ಓವೈಸಿಗೆ ಗೊತ್ತಿಲ್ಲದಷ್ಟು ದಡ್ಡರಾ ಅವರು?

ಲವ್ ಜಿಹಾದ್‌ಗೆ ಒಳಗಾದ ಹುಡುಗಿಯರಿಗೆ ತಾವು ಲವ್ ಜಿಹಾದ್‌ಗೆ ಒಳಗಾಗಿದ್ದೇವೆ ಎಂದು ಮತಾಂತರ ಆದಾಗ ಗೊತ್ತಾಗುವುದಿಲ್ಲ. ಬದಲಿಗೆ ಗಂಡ ಯಾವಾಗ ಮತ್ತೊಬ್ಬ ಹುಡುಗಿಯನ್ನು ಕರೆದುಕೊಂಡು ಬರುತ್ತಾನೋ ಅಥವಾ ಇವಳಿಗೆ ಒಂದು ಮಗು ಕೊಟ್ಟು ಯಾವಾಗ ಹೊರದಬ್ಬುತ್ತಾನೋ ಆಗಲೇ ಗೊತ್ತಾಗುವುದು ನಾನು ಜಿಹಾದ್‌ನ ಸಂತ್ರಸ್ತೆ ಎಂದು. ಇದು ಬುದ್ಧಿಜೀವಿಗಳು, ಎಡಪಂಥೀಯರು ಹಾಗೂ ಓವೈಸಿಯಂಥವರಿಗೆ ಬೇಕಾಗಿರುವುದು ತಮ್ಮ ಮುಸ್ಲಿಂ ಧರ್ಮದ ಜನಸಂಖ್ಯೆ ಜಾಸ್ತಿಯಾಗಬೇಕು, ಆದರೂ ಅಲ್ಪಸಂಖ್ಯಾತರು ಎಂಬ ಪಟ್ಟಿಯಲ್ಲಿ ಮೀಸಲು ಕೊಡಬೇಕು. ಇಷ್ಟೇ ಅವರಿಗೆ ಬೇಕಾದ್ದು. ಯಾರು ಜಿಹಾದ್‌ನಿಂದ ಬೀದಿಪಾಲಾದರೆ ಅವರಿಗೇನು ಹೇಳಿ?

ಮದುವೆಯಾದ ಮೇಲೆ ಹೇಗೆ ಹಿಂದೂ ಹೆಣ್ಣುಮಕ್ಕಳಿಗೆ ಟಾರ್ಚರ್ ಕೊಡುತ್ತಾರೆ ಎಂಬುದಕ್ಕೆ ಉತ್ತಮ ಉದಾಹರಣೆಯೆಂದರೆ ಅದು ತಾರಾ ಶಾಹದೇವ್ ಪ್ರಕರಣ. ತಾರಾ ಬೇರಾರೂ ಅಲ್ಲ. ರಾಷ್ಟ್ರಮಟ್ಟದ ಶೂಟರ್ ಆಕೆ. ಅವಳನ್ನು ಮದುವೆಯಾದ ರಂಜಿತ್ ಕುಮಾರ್ ಕೋಹ್ಲಿ ಎಂದು ಹೆಸರಿಟ್ಟುಕೊಂಡಿರುವ ಮುಸ್ಲಿಮ್, ಇಸ್ಲಾಂಗೆ ಮತಾಂತರವಾಗು ಎಂದು ಮದುವೆಯಾದಾಗಿನಿಂದ ಪೀಡಿಸುತ್ತಲೇ ಇದ್ದ. ಒಂದು ತಿಂಗಳು ಕತ್ತಲೆ ಕೋಣೆಯಲ್ಲಿಟ್ಟು, ಮೈ ಕೈಗಳನ್ನೆಲ್ಲ ಸುಟ್ಟು ಹಿಂಸೆ ನೀಡಿ ಅವಳ ಹೆಸರನ್ನು ಸಾರಾ ಎಂದು ಬದಲಾಯಿಸಿದ್ದ. ಅವನ ಚಕ್ರವ್ಯೂಹದಿಂದ ತಪ್ಪಿಸಿಕೊಂಡು ಬಂದು, ತನ್ನನ್ನು ಹೇಗೆ ಮೋಸ ಮಾಡಿದ್ದ ಎಂದು ಆಕೆ ವಿವರವಾಗಿ ಟಿವಿ ಮುಂದೆಯೇ ಹೇಳಿದ್ದಳು. ಈಗ ಹೇಳಿ, ಲವ್ ಜಿಹಾದ್ ಬಲಪಂಥೀಯರ ಸೃಷ್ಟಿ ಎಂದು ಬೊಬ್ಬೆ ಹಾಕುತ್ತಿರುವ ಅಡ್ನಾಡಿಗಳೆಲ್ಲ ಆಗ ಬಾಯಲ್ಲಿ ಏನು ಇಟ್ಟುಕೊಂಡಿದ್ದರು? ಯಾವ ಬಿಲದಲ್ಲಿ ಬಿಚ್ಚಿಟ್ಟುಕೊಂಡಿದ್ದರಂತೆ ಈ ಅಸಾದುದ್ದೀನ್ ಓವೈಸಿ? ಆಗ ತೆಪ್ಪಗಿದ್ದು ಈಗ ತಿಪ್ಪೆ ಸಾರುತ್ತಿರುವುದೇಕೆ? ಜಿಹಾದ್ ಇರುವುದೇ ಹಾಗೆ.

ಜಿಹಾದ್‌ಗಾಗಿ ಸುಳ್ಳು ಹೇಳಬಹುದು ಎಂಬುದು ಅವರ ಗ್ರಂಥಗಳಲ್ಲೇ ಇದೆ. ಅದಕ್ಕಾಗೇ ಒಬ್ಬ ಮುಸ್ಲಿಮನೂ ಲವ್ ಜಿಹಾದ್ ಇದೆ ಎಂದು ಒಪ್ಪಿಕೊಳ್ಳುವುದಕ್ಕೇ ತಯಾರಿಲ್ಲ. ಸಿಖ್ ಹುಡುಗಿಯರಿಗೆ ಪ್ರೀತಿಯ ಆಮಿಷವೊಡ್ಡಿ ಇಸ್ಲಾಂಗೆ ಮತಾಂತರ ಮಾಡಿಸಿ ಎಂದು ಯುನೈಟೆಡ್ ಕಿಂಗ್ಡಮ್‌ನ ಲ್ಯೂಟನ್‌ನ ಇಮಾಮ್‌ಗಳು ದಶಕಗಳ ಹಿಂದೆಯೇ ಬಹಿರಂಗವಾಗಿಯೇ ಘೋಷಿಸಿದ್ದರು. ಇನ್ನು ನಿಖರವಾಗಿ ಹೇಳಬೇಕೆಂದರೆ, ಯುಕೆಯ ಲ್ಯೂಟನ್‌ನಲ್ಲಿರುವ ಬ್ಯೂರಿ ಪಾರ್ಕ್ ಮಸೀದಿಯ ಮೊಹಮ್ಮದ್ ಸುಲೈಮಾನ್ ಎಂಬ ಇಮಾಮ್ ಹೀಗೆ ಘೋಷಿಸಿದ್ದ. ಪ್ರಿಯ ಬುದ್ಧಿಜೀವಿಗಳೇ ಇದು ಬ್ಯುರಿ ಪಾರ್ಕ್ ಮಸೀದಿಯ ನಂಬರ್ +441582725412. ನಿಮ್ಮ ಹರಾಮಿ ಮೌಳ್ವಿ ಲವ್ ಜಿಹಾದ್‌ಗೆ ಕರೆ ನೀಡಿದ್ದನೋ ಇಲ್ಲವೋ ಎಂಬುದನ್ನು ಸ್ವತಃ ಕೇಳಿ ತಿಳಿದುಕೊಳ್ಳಿ.

ವಿಷಯ ಹೀಗಿರುವಾಗ, ಮುಸ್ಲಿಮರು ಹಿಂದೂಗಳನ್ನು ಮದುವೆಯಾಗಿ ಮತಾಂತರ ಮಾಡುತ್ತಿರುವುದು ಲವ್ ಜಿಹಾದ್ ಎಂದು ಸಾಬೀತಾಗಿಬಿಟ್ಟರೆ ಜಿಹಾದ್‌ಗೆ ಅಡ್ಡಿಯಾಗುತ್ತದೆ. ಇದರಿಂದ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿರುವ ಪರಿಕಲ್ಪನೆ, ಪರಿಕಲ್ಪನೆಯಾಗೇ ಉಳಿದುಬಿಡುತ್ತದೆ. ಹಾಗಾಗಿಯೇ ಓವೈಸಿ ಸೇರಿದಂತೆ ಎಡಪಂಥ ಲವ್ ಜಿಹಾದ್ ಒಪ್ಪಿಕೊಳ್ಳಲು ತಯಾರಿಲ್ಲ. ಲವ್ ಜಿಹಾದ್ ಸುಪ್ರೀಂ ಕೋರ್ಟ್ ಒಂದೇ ಕೇಳುತ್ತಿಲ್ಲ. ಲವ್ ಜಿಹಾದ್ ಎಂಬುದು ಇದೆಯೋ ಇಲ್ಲವೋ, ಇದ್ದರೆ ಅಂಥ ಪ್ರಕರಣಗಳು ಯಾವ ಅಪರಾಧದ ಅಡಿಯಲ್ಲಿ ಬರುತ್ತದೆ. ಇದರ ಬಗ್ಗೆ ಕಾನೂನು ರಚನೆಯಾಗಿದೆಯಾ? ಎಂದು ಕೇರಳ ಹೈಕೋರ್ಟ್ ಕೇಳಿತ್ತು. ಸರಕಾರಕ್ಕೂ ಶಾಸನವನ್ನು ಜಾರಿಗೊಳಿಸಬೇಕು ಎಂದೂ 2009ರ ಡಿಸೆಂಬರ್ 10ರಂದೇ ಸೂಚಿಸಿತ್ತು.

ಇದಕ್ಕಿಂತ ಮುಂಚೆ, ಅಂದರೆ ಅಕ್ಟೋಬರ್ 22, 2009ರಲ್ಲೇ ಕರ್ನಾಟಕ ರಾಜ್ಯ ಸರಕಾರವೂ ಲವ್ ಜಿಹಾದ್ ಬಗ್ಗೆ ಆತಂಕ ವ್ಯಕ್ತಪಡಿಸಿ, ಪ್ರೀತಿಯ ಹೆಸರಲ್ಲಿ ಇಸ್ಲಾಂಗೆ ಮತಾಂತರ ಮಾಡುತ್ತಿರುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದು ಮತ್ತು ಅದನ್ನು ಸಂಪೂರ್ಣ ಬಂದ್ ಮಾಡುವುದರತ್ತ ಗಮನಹರಿಸುವುದಾಗಿ ಹೇಳಿತ್ತು. ಲವ್ ಜಿಹಾದ್ ಬಗ್ಗೆ ಇಷ್ಟು ಜಾಗೃತಿ ಮೂಡಿಸುತ್ತಾ ಬಂದಿದ್ದರು ಸಹ, ಅದರ ಮುಂದಿನ ವರ್ಷ, ಅಂದರೆ ಏಪ್ರಿಲ್ 6, 2010ರಲ್ಲಿ ಮೈಸೂರಿನಲ್ಲಿ ಒಂದು ಪ್ರಕರಣ ಸುದ್ದಿ ಮಾಡಿತ್ತು. ಮೊದಲನೇ ಪಿಯು ಓದುತ್ತಿದ್ದ ಮೈಸೂರಿನ ಕೆ.ಆರ್. ನಗರದ ನಿವಾಸಿ 17 ವರ್ಷದ ಪೂಜಾ ಎಂಬುವವಳು ಇದ್ದಕ್ಕಿದ್ದಂತೆ ಕಾಲೇಜಿನಿಂದ ಮಾಯವಾಗಿದ್ದಳು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹತ್ತೇ ದಿನದಲ್ಲಿ ಹುಡುಗಿಯನ್ನು ಬಚಾವ್ ಮಾಡಿದ್ದರು. ಅಜೀಮ್ ಹಫೀಜ್ ಎಂಬ 22ರ ಪ್ರಾಯದ ಯುವಕ ಅವಳನ್ನು ಅಪಹರಿಸಿ, ಮೋಸ ಮಾಡಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ತಯಾರಿ ಮಾಡುತ್ತಿದ್ದ ಎಂದು ಪೊಲೀಸ್ ಭಾಷೆಯಲ್ಲಿ ಕೇಳಿದ ಮೇಲೆ ತಿಳಿದುಬಂತು. ಇದು ಲವ್ ಜಿಹಾದ್ ಕೇಸ್ ಎಂದು ಪೊಲೀಸರೇ ಹೇಳಿಬಿಟ್ಟಿದ್ದರು.

ಕೇರಳದ ಮಲ್ಲಾಪುರಂನಲ್ಲಿ ಮೊಹಮ್ಮದ್ ಶಫಿ ಎಂಬ ಮೂವತ್ತು ವರ್ಷದ ಜಿಹಾದಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಆತ ಮೂವತ್ತು ಹಿಂದೂ ಹುಡುಗಿಯರನ್ನು ರೇಪ್, ಲೈಂಗಿಕ ಕಿರುಕುಳ ನೀಡಿ ಚಿತ್ರೀಕರಿಸಿದ್ದ. ಅವರನ್ನು ಇಸ್ಲಾಂಗೆ ಮತಾಂತರ ಮಾಡುತ್ತಿದ್ದ. ಬ್ಲ್ಯಾಕ್‌ಮೇಲ್ ಮಾಡಿ ಹಣ ಪೀಕುತ್ತಿದ್ದ. ಡಾ. ಸತೀಶ್ ರಾಘವನ್ ಎಂಬ ಹೆಸರನ್ನಿಟ್ಟುಕೊಂಡು ಅನಿವಾಸಿ ಭಾರತೀಯನ ಸೋಗಿನಲ್ಲಿ ಅಷ್ಟೂ ಹೆಣ್ಣುಮಕ್ಕಳನ್ನು ಖೆಡ್ಡಾಕ್ಕೆ ಕೆಡವಿಕೊಳ್ಳುತ್ತಿದ್ದ. ಹಿಂದೂ ಹುಡುಗಿಯರನ್ನು ಮಾತ್ರ ಏಕೆ ಅತ್ಯಾಚಾರ ಮಾಡುತ್ತಿದ್ದೆ ಎಂದು ಕೇಳಿದ್ದಕ್ಕೆ ಆತ ಹೇಳಿದ್ದು – ‘ಒಬ್ಬ ಕಟ್ಟರ್ ಮುಸಲ್ಮಾನನಾಗಿ ನಾನು ಮುಸ್ಲಿಂ ಹೆಣ್ಣುಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು ಅಥವಾ ಅತ್ಯಾಚಾರ ಮಾಡಬಾರದು.’ಪ್ರತಿ ಸಲ ಹಿಂದೂ ಹುಡುಗಿಯರನ್ನು ಅತ್ಯಾಚಾರ ಮಾಡಿ ಆತ ‘ನೀನಿನ್ನು ಕನ್ಯೆಯಲ್ಲ, ನಿನ್ನನ್ನು ನಾನು ಹಾಳು ಮಾಡಿದ್ದೇನೆ’ ಎಂದು ಕೂಗುತ್ತಿದ್ದ. ಐಸಿಸ್ ಪರ ಒಲವು ಹೊಂದಿರುವ ಈತನಿಗೆ ಹಿಂದೂ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುವುದು ಇಸ್ಲಾಂ ಧರ್ಮದ ಕೆಲಸ ಎಂದಿದ್ದಾನೆ. ಇದನ್ನು ಕೇಳಿದ ಮೇಲೂ ಇದು ಲವ್ ಜಿಹಾದ್ ಅಲ್ಲ, ಎಂದು ಹೇಳುವವರಿದ್ದರೆ ಮುಂದೆ ಬಂದು ತಮ್ಮ ಮೂರ್ಖತನ, ಮೌಢ್ಯ ಪ್ರದರ್ಶಿಸಬಹುದು.

ಮಾನ್ಯ ಸುಪ್ರೀಂ ಕೋರ್ಟ್ ಈಗಾಗಲೇ ಲವ್ ಜಿಹಾದ್ ಬಗ್ಗೆ ತನಿಖೆ ಮಾಡಲು ತಂಡವನ್ನು ನೇಮಿಸಿದೆ. ಇದಕ್ಕೆ ಈಗಾಗಲೇ ಲಕ್ಷಗಟ್ಟಲೆ ಖರ್ಚು ಮಾಡುತ್ತಿದೆ. ಇವೆಲ್ಲ ಮಾಡುವುದರ ಬದಲು, ಒಂದೊಂದು ಫೋನ್ ಕಾಲ್ ಮೂಲಕ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಕೇಸ್ ಡೀಟೇಲ್ಸ್‌ ತೆಗೆಸಿಬಿಟ್ಟರೆ ಸಾಕು. ಇನ್ನೂ ಬೇಕಿದ್ದರೆ, ಸಂತ್ರಸ್ತೆ ಮತ್ತು ಜಿಹಾದಿಯನ್ನು ಕರೆದು ನಿಲ್ಲಿಸಿದರೆ ಎಲ್ಲವೂ ಅವರೇ ಹೇಳುತ್ತಾರೆ. ಕೊಚ್ಚಿಯಲ್ಲಿರುವ ನ್ಯಾಷನಲ್ ಯುನಿವರ್ಸಿಟಿ ಆಫ್ ಅಡ್ವಾನ್ಸಡ್ ಲೀಗಲ್ ಸ್ಟಡೀಸ್ ವರದಿ ಮತ್ತು ಕೇರಳ ಪೊಲೀಸರ ಕ್ರೈಂ ರೆಕಾರ್ಡ್ ಬ್ಯೂರೋ ನೋಡಿದರೇ ನಿಮಗೆ ಮತಾಂತರದ ಬಗ್ಗೆ ಎಲ್ಲ ಮಾಹಿತಿಗಳು ಸಿಕ್ಕಿಬಿಡುತ್ತವೆ. 2006ರಿಂದ 2009ರ ಅವಧಿಯಲ್ಲಿ ಕೇರಳದ ಒಟ್ಟು 13 ಜಿಲ್ಲೆಗಳಲ್ಲಿ 2866 ಲವ್ ಜಿಹಾದ್‌ಗಳಾಗಿವೆ. ಅದರಲ್ಲಿ 703 ಪ್ರಕರಣಗಳು ದಾಖಲಾಗಿದ್ದು, 216 ಜನರನ್ನು ರಕ್ಷಿಸಲಾಗಿದೆ. ಅತ್ಯಂತ ಹೆಚ್ಚು ಹುಡುಗಿಯರನ್ನು ಲವ್ ಜಿಹಾದ್‌ನಿಂದ ಬವಾಚ್ ಮಾಡಿದ್ದು ಕಾಸರಗೋಡಿನಲ್ಲಿ ಮತ್ತು ಕಣ್ಣೂರಿನಲ್ಲಿ.

ಇವೆಲ್ಲ ವಿಚಾರಗಳನ್ನು ಚಹಾ ಮಾಡಿಕೊಡುವವನಿಗೂ ಗೊತ್ತು. ಆದರೆ ನಮ್ಮ ದೇಶದಲ್ಲಿ ಬುದ್ಧಿಜೀವಿಗಳಿಗೆ ಗೊತ್ತಿಲ್ಲ ಎಂದ ಮೇಲೆ ಇನ್ನೂ ಅವರನ್ನು ಗೆಣಸು ಕೀಳುವುದಕ್ಕಾ ಬುದ್ಧಿಜೀವಿಗಳು ಅಂತ ಕರೆಯೋದು? ಮಾಧ್ಯಮದಲ್ಲಿ ಚರ್ಚೆಯಲ್ಲಿ ಕೂರಿಸಿ ಇಂಥ ದಡ್ಡ ಶಿಖಾಮಣಿಗಳಿಗಾ ನಾವು ಚಿಂತಕರು ಅಂತ ಕರೆದಿದ್ದು? ಊರು ಹೋಗು, ಕಾಡು ಬಾ ಎನ್ನುವ ಇಂಥ ಬಿಳಿ ಮಂಡೆ ಎಡಪಂಥೀಯರು ಇಂಥ ಸೂಕ್ಷ್ಮ ವಿಚಾರಗಳನ್ನೆಲ್ಲ ಮುಚ್ಚಿಟ್ಟಿದ್ದಕ್ಕೇ ಇಂದು ನಾವೆಲ್ಲ ಲವ್ ಜಿಹಾದ್ ಇದೆಯೋ ಇಲ್ಲವೋ ಎಂದು ಆಲೋಚಿಸುತ್ತಾ ಕುಳಿತಿರುವುದು. ಬೌದ್ಧಿಕ ದಾರಿದ್ರ್ಯವಿರುವ ಇಂಥವರು ನಮ್ಮ ಮೇಲೆ ಯಾವುದೋ ವಿಷಯಗಳನ್ನು ಹೇರುತ್ತಿದ್ದರೆ ಅದನ್ನು ಸುಮ್ಮನೆ ನಂಬಿಬಿಡುವ ಹಂತ ತಲುಪಿದ್ದಿದ್ದರೆ ಅದಕ್ಕೆ ನಾವು ಅಧ್ಯಯನ ಮಾಡದಿರುವುದು ಮತ್ತು ಜಿಹಾದ್ ಬಗ್ಗೆ ತಿಳಿಯದಿರುವುದೇ ಕಾರಣ.

ನೀವು ಎಂದಾದರೂ ಅಸಾದುದ್ದೀನ್ ಓವೈಸಿ ಮುಸ್ಲಿಮರದ್ದು ತಪ್ಪಿದೆ ಎಂದು ಒಪ್ಪಿಕೊಂಡಿದ್ದನ್ನು ನೋಡಿದ್ದೀರಾ? ಸ್ವತಃ ಅಸಾದುದ್ದೀನ್ ಸಹೋದರ ಅಕ್ಬರುದ್ದೀನ್ ಓವೈಸಿ ‘15 ನಿಮಿಷ ಪೊಲೀಸರನ್ನು ತೆರವುಗೊಳಿಸಿ, ಹಿಂದೂಗಳನ್ನು ಕೊಚ್ಚುತ್ತೇವೆ’ ಎಂದು ಹೇಳಿದಾಗಲೇ ಅವನನ್ನು ಬೆಂಬಲಿಸಿಕೊಂಡು ಬಂದ ಭೂಪ ಈ ಅಸಾದುದ್ದೀನ್ ಓವೈಸಿ. ಇನ್ನು ಈತ ಲವ್ ಜಿಹಾದ್ ಇದೆ ಎಂದು ಒಪ್ಪಿಕೊಳ್ಳುತ್ತಾನೆ ಎಂದು ನಾವು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ ಹೇಳಿ. ನಮ್ಮಯ ಹಕ್ಕಿಯನ್ನು ಬಚ್ಚಿಟ್ಟುಕೊಳ್ಳುವುದಷ್ಟೇ ಅಲ್ಲ, ಅದಕ್ಕೆ ಲವ್ ಜಿಹಾದ್ ಬಗ್ಗೆ ಹೇಳಿದರೆ ಮಾತ್ರ ಹಕ್ಕಿಯನ್ನು ಉಳಿಸಿಕೊಳ್ಳುವುದಕ್ಕಾಗುತ್ತದೆ. ಇಲ್ಲದಿದ್ದರೆ, ಹಕ್ಕಿಯನ್ನು ಲವ್ ಜಿಹಾದ್ ತಿಂದುಹಾಕಿಬಿಡುತ್ತದೆ. ಎಚ್ಚರ!

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya