ಆತ್ಮಹತ್ಯೆಯೋ, ಕೊಲೆಯೋ? ರಣಹದ್ದುಗಳಿಗಂತೂ ಹೆಣ

ಅದೆಷ್ಟು ಕನಸು ಕಟ್ಟಿಕೊಂಡಿತ್ತೋ ಏನೋ! ವಾರಕ್ಕೊಮ್ಮೆ ಅಥವಾ ಇಂಡಿಯಾ-ಪಾಕಿಸ್ತಾನ ಮ್ಯಾಚ್ ಮುಗಿದ ಮೂರನೇ ದಿನದಂದೋ ರೊಚ್ಚಿಗೆದ್ದು ಮೈದಾನಕ್ಕಿಳಿಯುವ ನಾವೇ ಮೂರು ಸಿಕ್ಸ್‌ ಹೊಡೆದಾಗ ನಾನು ಇಂಡಿಯನ್ ಟೀಮ್‌ನಲ್ಲಿ ಇದ್ದಿದ್ರೆ ಅಂತ ಕನಸು ಕಾಣ್ತೀವಿ. ಆದ್ರೆ ಆ ಪುಟ್ಟ ಹುಡುಗಿ ಅದಾಗಲೇ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್‌ನಲ್ಲಿ ಮಿಂಚುತ್ತಿದ್ದಳು. ಅವಳಿಗೆಷ್ಟು ಆಸೆ ಇದ್ದಿರಬೇಡ? ಕನಸಿನ ಗೋಪುರವೇ ಕಟ್ಟಿಕೊಂಡಿರುತ್ತೆ ನಿಜ. ಕಾವ್ಯಾಳು ತಾನು ದೊಡ್ಡ ಶಾಲೆಗೆ ಬರುವಾಗ ಮುಂದೊಂದು ದಿನ ತಾನು ಹೆಣವಾಗ್ತೇನೆ ಎಂದುಕೊಂಡಂತೂ ಬಂದಿರಲಿಕ್ಕಿಲ್ಲ. ಅವಳ ಅಪ್ಪ ಅಮ್ಮನೂ ಅಷ್ಟೇ ಆಸೆಯಿಂದ ಕಳುಹಿಸಿಕೊಟ್ಟಿರುತ್ತಾರೆ. ಆದರೆ ನಾವು ಬಯಸುವುದೇ ಒಂದು, ಆಗುವುದೇ ಒಂದಾದರೇ ಏನು ತಾನೆ ಮಾಡುವುದಕ್ಕಾಗುತ್ತೆ ಹೇಳಿ?

ಆಳ್ವಾಸ್ ಕಾಲೇಜಿನಲ್ಲಿ ಕಳೆದ ವಾರ ಮೃತಪಟ್ಟ ಹುಡುಗಿ ಕಾವ್ಯಾಾಳದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಗೊತ್ತಿಲ್ಲ. ಅದನ್ನು ನಿರ್ಧರಿಸಲು ನಾನೇನು ಕೋರ್ಟ್ ಅಲ್ಲ. ಆದರೆ ಕೆಲವು ರಣ ಹದ್ದುಗಳು ಸಾವಿನ ಮನೆಯಲ್ಲೂ ಸಾಸಿವೆಯನ್ನು ಬಾಣಲೆಗೆ ಹಾಕಿ ಒಗ್ಗರಣೆ ತಯಾರು ಮಾಡಿಕೊಳ್ಳುತ್ತಿರುವುದಂತೂ ಸ್ಪಷ್ಟವಾಗಿ ಕಣ್ಣಿಗೇ ರಾಚುತ್ತಿದೆ. ಇನ್ನೊಂದು ತಂಡ ಅದಾಗಲೇ ಕಾವ್ಯಾ ಹೆಣ ಸುತ್ತುತ್ತಿದೆ. ಈ ರಣ ಹದ್ದುಗಳು ಬೇರೆ ಯಾರೂ ಅಲ್ಲ. ಅದೇ ಎಡಪಂಥೀಯರು ಮತ್ತು ಬುದ್ಧಿಜೀವಿಗಳು. ಕಾವ್ಯಾ ಮೃತಪಟ್ಟಾಗ ಯಾರೂ ಏಕಾಏಕಿ ಒಂದು ಅವಳಿಗೆ ಬೆಂಬಲ ನೀಡಿಲ್ಲ. ಬದಲಿಗೆ, ಆಕೆ ಯಾವ ವಿದ್ಯಾಸಂಸ್ಥೆಯಲ್ಲೋ ಅಥವಾ ಅದೇ ಕಟೀಲು ಶಾಲೆಯ ಬದಿ ಮೃತಪಟ್ಟಿದ್ದರೆ, ಖಂಡಿತವಾಗಿಯೂ ಈ ಕಾವ್ಯಾಳನ್ನು ಮೂಸಿಯೂ ನೋಡುತ್ತಿರಲಿಲ್ಲ. ಆದರೆ, ಇಲ್ಲಿ ಇವರೆಲ್ಲ ಒಟ್ಟಿಗೆ ರೊಚ್ಚಿಗೇಳಲು ಕಾರಣ, ಆಳ್ವಾಸ್ ವಿದ್ಯಾಸಂಸ್ಥೆ ಎಂಬ ಹೆಸರು. ಇದೊಂದೇ ಹೆಸರು ಇವರನ್ನು ಪ್ರತಿಕ್ಷಣ ಕಾಡುತ್ತಿತ್ತು.

ಇನ್ನು ವಿರಾಸತ್, ಆಳ್ವಾಸ್ ನುಡಿಸಿರಿಯಂಥ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಎಡಪಂಥೀಯರ ಮನೆಯೊಳಗೇ ಮೆಣಸಿನಕಾಯಿ ಘಾಟು ಹಾಕಿದಂತಾಗುತ್ತಿತ್ತು. ಅಲ್ಲಿಂದ ಹೊರಬರುತ್ತಿದ್ದ ಹಿಂದೂ ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಉತ್ತಮ ವಾಗ್ಮಿಯೋ, ಬರಹಗಾರನೋ ಅಥವಾ ಪತ್ರಕರ್ತನಾಗಿ ಇವರ ಬುಡಕ್ಕೇ ಬತ್ತಿ ಇಡುತ್ತಿದ್ದರಿಂದ, ಆಳ್ವಾಸ್ ಆರ್ಭಟವನ್ನು ಮುಗಿಸಲೇಬೇಕು ಎಂದು ನಿರ್ಧರಿಸಿದ್ದರು. ಇವರಿಗೆ ಆಳ್ವಾಸ್ ನುಡಿಸಿರಿಯೊಂದೇ ನಿದ್ದೆಗೆಡಿಸಿತ್ತು ಎನ್ನುವುದಕ್ಕೆ ಉದಾಹರಣೆಗಳು ಸಿಗುತ್ತವೆ. ಆಳ್ವಾಸ್ ನುಡಿಸಿರಿಯಾದ ಕೆಲವೇ ದಿನಗಳಲ್ಲಿ ಎಡಪಂಥೀಯರು ಮತ್ತು ಬುದ್ಧಿಜೀವಿಗಳು ಸೇರಿ ನುಡಿಸಿರಿಯ ಹಾಗೇ ಒಂದು ಕಾರ್ಯಕ್ರಮ ಮಾಡಿದ್ದರು. ಅದೇನೋ ದೊಡ್ಡ ಕಾರ್ಯಕ್ರಮವೆಂಬಂತೆ ಬಿಲ್ಡಪ್ ಕೊಟ್ಟಿದ್ದರು. ಅದಕ್ಕೆ ನೊಣವೂ ಬರದೆ, ತೋಪೆದ್ದು ಹೋಗಿತ್ತು. ಆಗ ಇವರೆಲ್ಲ ಆಳ್ವಾಸ್ ಕಾಲೇಜ್ ನೋಡಿ ಕೈ ಹೊಸಕಿಕೊಂಡಿದ್ದರು. ಅಷ್ಟೇ, ಅದನ್ನು ಬಿಟ್ಟು ಬೇರೆ ಮಾರ್ಗವಿರಲಿಲ್ಲ. ದನ ತಿನ್ನುವ ಇವರ ತಲೆಗೆ ಬೇರೆ ಐಡಿಯಾಗಳು ಹೊಳೆದಿರಲಿಲ್ಲ.

ಈ ಕಾವ್ಯಾ ಮೃತಪಟ್ಟಿರುವುದು ಅತೃಪ್ತ ಎಡಪಂಥೀಯ ಆತ್ಮಗಳಿಗೆ ಮುಕ್ತಿಮಾರ್ಗ ಹತ್ತಿರ ಬಂದಂತಾಗಿದೆ ಅಷ್ಟೇ. ಇದು ಸಾಬೀತಾಗುವುದು ಇವರ ಸರಣಿ ಬರಹಗಳಿಂದ. ಕಾವ್ಯಾಳನ್ನು ಹತ್ಯೆ ಮಾಡಿದ್ದೆ ಎಂದಷ್ಟೇ ಸಾಬೀತು ಮಾಡುವುದು ಈ ಬುದ್ಧಿಜೀವಿಗಳ ಜವಾಬ್ದಾರಿ. ಆದರೆ, ಬರೆಯುತ್ತ, ಬರೆಯುತ್ತ ರೊಚ್ಚಿಗೆದ್ದು, ಯಾರೂ ಆಳ್ವಾಸ್ ಕಾಲೇಜಿಗೆ ಹೋಗಬೇಡಿ, ಅಲ್ಲಿ ಫೀಸ್ ಜಾಸ್ತಿಯಿದೆ. ‘ಆಳ್ವಾಸ್ ಶಿಕ್ಷಣ ಸಂಸ್ಥೆಯ ಸರ್ವಾಧಿಕಾರಿ ಧೋರಣೆ, ಸಾವಿರಾರು ರುಪಾಯಿ ಸುಲಿಗೆ ಅನಾವರಣಗೊಳುತ್ತಿದೆ ಆಳ್ವಾಸ್ ಕತೆಗಳು’ ಎಂದೆ ರಾಡಿ ಮಾಡಿಕೊಳ್ಳುತ್ತಿದ್ದಾರೆ.

ಆದರೆ ನನ್ನ ಪ್ರಶ್ನೆಯೇನೆಂದರೆ, ಇವೆಲ್ಲ ಪಾಯಿಂಟ್‌ಗಳು ಯಾಕಾಗಿ ಮೊದಲು ಬರದೇ ಈಗಲೇ ಬರುತ್ತವೆ ಎನ್ನುವುದೇ ಅಚ್ಚರಿ ತರಿಸುತ್ತಿದೆ. ಇವರು ಕಾವ್ಯಾ ಹತ್ಯೆಯೆಂದು ಹೆಡ್‌ಲೈನ್ ಬರೆದು, ಒಳಗೆಲ್ಲ ಕೇವಲ ಆಳ್ವಾ ವಿರುದ್ಧ ಚೀರಿಕೊಂಡಿರುತ್ತಾರೆ. ಹಾಗಾಗಿ ಈ ರಣಹದ್ದುಗಳಿಗೆ, ಕಾವ್ಯಾ ಎಂಬುವವಳು ಮತ್ತೊಬ್ಬ ರೋಹಿತ್ ವೇಮುಲಾ ಎನ್ನುವುದು ಬಿಟ್ಟರೆ, ಅದಕ್ಕಿಂತ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಎಷ್ಟು ಸಾಧ್ಯವೋ ಅಷ್ಟು ರಾಡಿಯೆಬ್ಬಿಸಿ, ಸುದ್ದಿ ಮಾಡಿ, ಹಣವೂ ಮಾಡಿಕೊಂಡು, ಸಿದ್ಧಾಂತಗಳನ್ನೂ ಸಾಧಿಸಿಕೊಳ್ಳುತ್ತಾರೆ. ನಂತರ, ಮತ್ಯಾರದ್ದಾದರೂ ಹೆಣ ಬೀಳುವ ತನಕ ಕಾಯುತ್ತಾರೆ. ಇಲ್ಲಿ ಕಾವ್ಯಾಳ ಅಪ್ಪ, ಅಮ್ಮ, ಅವಳ ತಿಥಿ ಮಾಡಿಕೊಂಡಿದ್ದರಾಯಿತು ಅಷ್ಟೆ.

ನಿಮಗೆ ನೆನಪಿರಲಿ, ನಮ್ಮ ರಾಜ್ಯದಲ್ಲಿ ಇದುವರೆಗೂ 23 ಹಿಂದೂಗಳ ಹತ್ಯೆಗಳಾಗಿವೆ. ಅದರ ಬಗ್ಗೆ ಒಂದೇ ಒಂದು ಮಾತಾಡಿಲ್ಲ. ಯಾವುದೂ ಬೇಡ ಸ್ವಾಮಿ, ಕೆಲ ವರ್ಷಗಳ ಹಿಂದೆ ಸೌಜನ್ಯ ಹತ್ಯೆಯಾಯಿತಲ್ಲ? ಆಗೇಕೆ ಈ ಬೃಹಸ್ಪತಿಗಳು ಬಾಯಿ ಬಿಡಲಿಲ್ಲ? ಕೆಲ ವರ್ಷಗಳ ಹಿಂದಷ್ಟೇ ಅಭಿಷೇಕ್ NSUI ಹುಡುಗರಿಂದ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡನಲ್ಲ. ಅದರ ಬಗ್ಗೆ ಮಾತಾಡುವುದಕ್ಕೆ ಬಾಯಲ್ಲೇನು ಕಡುಬು ತುಂಬಿಕೊಂಡಿದ್ದರೆ? ಸರಿ, ಇದೆಲ್ಲ ಬಿಡಿ, ಕೇರಳದಲ್ಲಿ ಸಾಲು ಸಾಲು ಹಿಂದೂಗಳ ಹತ್ಯೆಗಳಾಗುತ್ತಿವೆ.

ಅದನ್ನು ಮಾಡಿದವರು ಕಮ್ಯು‘ಅನಿಷ್ಟ’ ಕೈಗಳೇ ಎಂದು ಗೊತ್ತಿದ್ದರೂ ಏನು ಮಾಡುವುದಕ್ಕಾಗುತ್ತಿಲ್ಲವಲ್ಲ, ಇದರ ಬಗ್ಗೆ ಎಷ್ಟು ಲದ್ದಿಜೀವಿಗಳು ಧ್ವನಿ ಎತ್ತಿದ್ದಾರೆ ಕೇಳಿ? ಇಲ್ಲಿ ಒಂದು ಬಿಳಿ ಮಂಡೆಯೂ ಸಿಗುವುದಿಲ್ಲ. ಆದರೆ, ಕಾವ್ಯಾ ಸಾವು ಇವರನ್ನು ಮತ್ತೆ ಮಾನವೀಯತೆಯನ್ನು ಬಡಿದೆಬ್ಬಿಸಿದೆ ಎನ್ನುವುದೇ ಹಾಸ್ಯಾಸ್ಪದ ಹಾಗೂ ಅನುಮಾನಾಸ್ಪದ. ಕಾವ್ಯಾ ಸಾವಿಗೆ ನ್ಯಾಯ ಸಿಗಬೇಕು, ಅದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಜನರಿಗೆ ತಿಳಿಯಬೇಕು ಎನ್ನುವುದೆಲ್ಲವೂ ನಿಜ. ಆದರೆ ಯಾರು ನ್ಯಾಯಕ್ಕಾಗಿ ಬೇಡಿಕೆಯಿಡುತ್ತಿದ್ದಾರೆ ಎನ್ನುವುದೂ ಮುಖ್ಯ. ಶರತ್ ಮಡಿವಾಳರ ಸಾವು ಇವರನ್ನು ಚಿಂತೆಗೆ ದೂಡಲಿಲ್ಲ. ಆದರೆ ಕಾವ್ಯಾ ಸಾವಿನಿಂದ ಕರುಳು ಚುರುಕ್ ಎನ್ನುತ್ತಿದೆ ಎಂದರೆ, ಈ ಬುದ್ಧಿಜೀವಿಗಳು ಸಾವಿನಲ್ಲೂ ನನಗೆಷ್ಟು, ನಿನಗೆಷ್ಟು ಎಂದು ಲಾಭದ ಲೆಕ್ಕಾಚಾರ ಮಾಡುತ್ತಿದ್ದಾರಲ್ಲದೇ ಇನ್ನೇನು?

ತಿರುವನಂತಪುರದಲ್ಲಿ ಜುಲೈ 29ನೇ ತಾರೀಖಿನಂದು ಆರ್‌ಎಸ್‌ಎಸ್‌ನ ಕಾರ್ಯಕರ್ತ ರಾಜೇಶ್ ಹತ್ಯೆಯಾಯಿತು. ರಾತ್ರೋ ರಾತ್ರಿ ಬಂದ ಕೆಂಪು ಬಾವುಟದವರು, ಎರಡೂ ಕೈಗಳನ್ನು ಕತ್ತರಿಸಿದರು, ಕಾಲುಗಳನ್ನು ಕತ್ತರಿಸಿದರು. ರಾಜೇಶನಿಗೆ 40ಕ್ಕೂ ಅಧಿಕ ಕಡೆಗಳಲ್ಲಿ ಲಾಂಗು, ಮಚ್ಚುಗಳಿಂದ ಇರಿಯಲಾಗಿತ್ತು. ಆತ ಅಷ್ಟಾದರೂ ಜೀವ ಹಿಡಿದುಕೊಂಡು ಆಸ್ಪತ್ರೆಯಲ್ಲಿ ಅರ್ಧಮರ್ಧ ಮಾತಾಡುತ್ತ ನರಳುತ್ತಿದ್ದುದನ್ನು ನೋಡಿದರೆ, ಎಂಥ ಕಲ್ಲು ಹೃದಯವೂ ಕರಗುತ್ತದೆ. ಆದರೆ, ಸಿಪಿಎಂ ನಾಯಕರು ಇದರ ಬಗ್ಗೆ ಮಾತಾಡಬೇಕಿತ್ತು. ಮಾತಾಡಲಿಲ್ಲ. ಇಂಥ ಕಮ್ಯುನಿಸ್ಟರು ಕಾವ್ಯಾಳ ಮನೆಗೆ ಬಂದು ಸಾಂತ್ವನ ಹೇಳಿದರು ಎನ್ನುವುದೇ ದೊಡ್ಡ ದುರಂತ.

ಕೇರಳದಲ್ಲಿ ಇವರ ಪಕ್ಷದವರೇ ಮೆರವಣಿಗೆಯೊಂದರಲ್ಲಿ ನಮಗಿಷ್ಟ ಬಂದವರನ್ನು ಯಾವಾಗ ಬೇಕಾದರೂ ಕೊಲ್ಲುತ್ತೇವೆ, ನಮ್ಮ ಕೆಂಪು ಬಾವುಟದ ಸುದ್ದಿಗೆ ಬರಬೇಡಿ ಎಂದು ಘೋಷಣೆ ಕೂಗುತ್ತ ಹೋಗುತ್ತಿದ್ದರು. ಅಂದರೆ ಮನುಷ್ಯರ ಜೀವಕ್ಕೆ ಬೆಲೆಯೇ ಕೊಡದೇ ಇರುವ ಮಂದಿ ಕಾವ್ಯಾ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ ಎಂದರೆ ಇವರ ಕುತಂತ್ರಗಳು ಯಾರಿಗೇನು ಅರ್ಥವಾಗಲ್ಲ ಎಂದುಕೊಂಡಿದ್ದೀರಾ ಹೇಗೆ?
ಇಷ್ಟು ದಿನ ಪ್ರಾಣಿಗಳಂತೆ ವರ್ತಿಸಿ ಈಗ ಇದ್ದಕ್ಕಿದ್ದಂತೆ ಮನುಷ್ಯರಾಗಲು ಹೊರಟಿರುವ ಬುದ್ಧಿಜೀವಿಗಳಿಂದ ಕಾವ್ಯಾ ಸಾವಿಗೂ ನ್ಯಾಯ ಸಿಗುವುದಿಲ್ಲ, ಇಂಥ ಕ್ರೂರಿಗಳ ಮಧ್ಯಸ್ಥಿಕೆಯಿಂದ ಆ ಹುಡುಗಿಯ ಆತ್ಮಕ್ಕೂ ಶಾಂತಿ ಸಿಗುವುದಿಲ್ಲ.

ಕಾವ್ಯಾ ಸಾವಿಗೆ ನ್ಯಾಯ ಕೊಡಿಸುವುದಾಗಿ ಎಲ್ಲಿ ದಲ್ಲಾಳಿಗಳು ಹುಟ್ಟಿಕೊಂಡರೋ ಆಗಲೇ ಜನರಿಗೆ ನ್ಯಾಯ ತಿಳಿಯಬೇಕಿತ್ತು, ಈ ಬುದ್ಧಿಜೀವಿಗಳು ತಮ್ಮ ಜೋಳಿಗೆ ತುಂಬಿಸಿಕೊಳ್ಳುವುದಕ್ಕಷ್ಟೇ ಇದ್ದಾರೆ ಎಂದು. ಈಗಲೂ ಏನು ಕಾಲ ಮಿಂಚಿಲ್ಲ, ಇಂಥ ಹದ್ದುಗಳು ಸಾವಿನ ಮನೆಯ ಬಾಗಿಲು ಬಡಿದ ತಕ್ಷಣ ಜಾಗೃತರಾಗಬೇಕು. ಕಾವ್ಯಾಳದ್ದು ಕೊಲೆಯೇ ಆಗಿದ್ದರೆ, ಯಾರು ಕೊಲೆ ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ. ನ್ಯಾಯ ಕೊಡಿಸುತ್ತೇವೆಂದು ಬರುವ ಇಂಥ ಥರ್ಡ್‌ಕ್ಲಾಸ್ ಬುದ್ಧಿಜೀವಿಗಳ ಅವಶ್ಯಕತೆಯಿಲ್ಲ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya