‘ಎಡ’ದ ಬುಡಕ್ಕೆ ಬೆಂಕಿ ಇಟ್ಟ ಬಾಹುಬಲಿ!

ಬೊಗಳುವವರು ಯಾವಾಗಲೂ ಬೊಗಳುತ್ತಲೇ ಇರುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಬೊಗಳುವ ನಾಯಿ ತೀರಾ ಕಿರಿಕಿರಿ ಮಾಡಿದಾಗ ಹಾದಿಯಲ್ಲಿ ಹೋಗುವ ಜನರೇ ಅದಕ್ಕೆ ಕಲ್ಲು ಹೊಡೆದು ಬುದ್ಧಿ ಕಲಿಸುತ್ತಾರೆ. ಆದರೆ, ಕೆಲವಕ್ಕೆ ಎಷ್ಟು ಹೇಳಿದರೂ ಬುದ್ಧಿಯೇ ಬರುವುದಿಲ್ಲ. ಒಂದು ವಾರದ ಹಿಂದೆ ಬಾಹುಬಲಿ 2 ಸಿನಿಮಾ ಬಿಡುಗಡೆಯಾಯಿತು. ಜನರೆಲ್ಲರು ಅದನ್ನು ಮುಗಿಬಿದ್ದು ನೋಡುತ್ತಿದ್ದಾರೆ.

ಇದು ವಿದೇಶಗಳಲ್ಲೂ ಬಿಡುಗಡೆಯಾಗಿದ್ದು ವಿಶ್ವಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಲೇಖನ ಬರೆಯುವ ಹೊತ್ತಿಗೆ ಬಾಹುಬಲಿ 2ರ ಒಟ್ಟು ಗಳಿಕೆ 792 ಕೋಟಿ ರುಪಾಯಿ ಎಂದರೆ, ಈ ಚಿತ್ರ ಅದ್ಯಾವ ಮಟ್ಟದಲ್ಲಿ ಹೆಸರು ಮಾಡುತ್ತಿರಬಹುದು ಎಂದು ಊಹಿಸಿಕೊಳ್ಳಬಹುದು. ಈ 792 ಕೋಟಿ ರು. ಗಳಿಕೆ ಕೇವಲ 6 ದಿನಗಳದ್ದು. ಜನರೆಲ್ಲರು ಈ ಚಿತ್ರವನ್ನು ಹೊಗಳಿ ಗೆಲ್ಲಿಸುತ್ತಿರುವಾಗ ಒಂದು ವರ್ಗ ಮಾತ್ರ ಬಾಹುಬಲಿಯಲ್ಲಿ ಹುಳುಕು ತೆಗೆಯುತ್ತಾ ಕುಳಿತಿದೆ. ಹಾಗಂತ ಈ ಚಿತ್ರದಲ್ಲಿ ಹುಳುಕು ಹುಡುಕಲೇಬಾರದು ಅಥವಾ ಚಿತ್ರವನ್ನು ಟೀಕಿಸಲೇಬಾರದು ಅಂತಲ್ಲ. ಆದರೆ ಟೀಕಿಸುವಾಗ ಅವರು ಮಾಡುವ ವಾದ ಪ್ರಬುದ್ಧವಾಗಿರಬೇಕು. ಆದರೆ ಇವರ ಟೀಕೆಗಳು ಜಾತಿ ಬಿಟ್ಟು ಮೇಲೆ ಹೋಗುವುದೇ ಇಲ್ಲ.

ಈಗ ಬಾಹುಬಲಿ 2 ಬಗ್ಗೆ ಹೊಸದೊಂದು ಟೀಕೆ ಶುರುವಾಗಿದೆ. ನಮ್ಮ ದೇಶದ ಪ್ರಸಿದ್ಧ ಪತ್ರಕರ್ತರೊಬ್ಬರು ಬರೆಯುತ್ತಾರೆ – ‘ಬಾಹುಬಲಿ-2 ಸಿನಿಮಾ ತೀರ ಕೆಳಮಟ್ಟದ್ದಾಗಿದೆ. ಆ ಸಿನಿಮಾದಲ್ಲಿ ಮಾಹಿಷ್ಮತಿಯ ಮೇಲೆ ದಾಳಿ ಮಾಡುವ ಬುಡಕಟ್ಟು ಜನಾಂಗವನ್ನು ಕಪ್ಪು ವರ್ಣೀಯರಾಗಿ, ಕಪ್ಪುು ಹಲ್ಲು ಉಳ್ಳವರಾಗಿ ಬಹಳ ಹೀನವಾಗಿ ತೋರಿಸಿದ್ದಾರೆ. ಇದು ಜಾತ್ಯತೀತ ಸಿನಿಮಾ ಅಲ್ಲ. ಇದು ಕೋಮುವಾದಿಯ ಚಿತ್ರ’ ಎಂದಿದ್ದಾಾರೆ. ಇದು ಇವರು ವಾದ ಮಾಡುವ ಬಗೆ. ಈ ವರ್ಗಕ್ಕೆ ಸಿನಿಮಾದಲ್ಲಿ ಜಾತ್ಯತೀತತೆಯನ್ನು ಹುಡುಕು ಎಂದು ಹೇಳಿದ ಮೂರ್ಖ ಯಾರು ಎಂಬುದು ನನ್ನ ಪ್ರಶ್ನೆ. ಇಡೀ ಪ್ರಪಂಚವೇ ಸಿನಿಮಾ ಚೆನ್ನಾಗಿದೆ ಎಂದು ಒಂದು ಸಲಕ್ಕೆ ಸಂತೃಪ್ತಿಯಾಗದೆ ಎರಡನೇ ಸಲ ಹೋಗಿ ಸಿನಿಮಾ ನೋಡುತ್ತಿರುವಾಗ ಈ ವರ್ಗ ಮಾತ್ರ ಬಾಹುಬಲಿಯನ್ನು ತೆಗಳುತ್ತಲೇ ಇದೆ.

ಅಷ್ಟಕ್ಕೂ ಇವರೆಲ್ಲ ಯಾಕೆ ಹೀಗೆ? ಎಲ್ಲವಕ್ಕೂ ಮೂಲಕ ಕಾರಣ ಇದು ಶುದ್ಧ ಹಿಂದೂ ಚಿತ್ರ ಎಂಬುದು. ಈ ಚಿತ್ರವನ್ನು ವಿರೋಧಿಸುತ್ತಿರುವವರು ಯಾರು? ಅವರೆಲ್ಲ ಎಡಪಂಥೀಯರು, ಟೋಪಿವಾಲಾಗಳು, ಪಡಪೋಶಿ ಪತ್ರಕರ್ತರು ಮತ್ತು ಕೆಂಪು ಬಾವುಟದವರು ಅಥವಾ ಇವರೆಲ್ಲರ ಬಗ್ಗೆ ಅತೀವ ಒಲವಿರುವವರೇ. ಸಹಜವಾಗಿ ಇವರ್ಯಾರಿಗೂ ಹಿಂದೂ ಧರ್ಮ ಎಂದರೆ ಆಗುವುದಿಲ್ಲ. ಅದರಲ್ಲೂ ಹಿಂದೂ ಧರ್ಮೀಯರ ಆಳ್ವಿಕೆಯಲ್ಲಿದ್ದ ತಂತ್ರಜ್ಞಾನ, ಅರ್ಥಶಾಸ್ತ್ರ, ನ್ಯಾಯಶಾಸ್ತ್ರ ಇವುಗಳೆಲ್ಲವನ್ನು ನೋಡಿ ಕಮ್ಮಿನಿಷ್ಠರು ಮತ್ತು ಎಡಚರು ಕುದ್ದು ಹೋಗಿದ್ದಾರೆ. ಇದೇ ಕಾರಣಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ಇನ್ನು ಕೆಲವರ ವಾದ ನೋಡಬೇಕು ನೀವು.

ಅದು ಚೇತನವೇ ಇಲ್ಲದ ವಾದವಾಗಿರುತ್ತದೆ. ಅದರಲ್ಲಿ ಒಬ್ಬರು ಬರೆದುಕೊಳ್ಳುವುದು ಹೀಗೆ – ‘ವಿವಾದಗಳು, ಚಿತ್ರವಿಮರ್ಶಕರ ಟೀಕೆಗಳಾಚೆಗೂ ಬಾಹುಬಲಿ ಲಾಭ ಬಾಚಿಕೊಳ್ಳುತ್ತ ನಾಗಾಲೋಟದಲ್ಲಿದೆ. ಒಂದೆಡೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿರುವ ಸಿನಿಮಾದಲ್ಲಿ ಸನಾತನ ಅಪಮೌಲ್ಯಗಳನ್ನು ಬಿತ್ತಲಾಗಿದೆ. ಆದ್ದರಿಂದ ಗಳಿಕೆಯ ಲೆಕ್ಕದಲ್ಲಿ ಅದೆಷ್ಟು ದಾಖಲೆಗಳನ್ನು ಮುರಿದರೂ ನೈತಿಕತೆಯಲ್ಲಿ ಬಾಹುಬಲಿ ಶ್ರೇಷ್ಠತೆಯ ಅಂಚನ್ನೂ ಮುಟ್ಟಲು ಸಾಧ್ಯವಿಲ್ಲ ಎಂದು ಸೂಕ್ಷ್ಮಜ್ಞರು ಅಭಿಪ್ರಾಯಪಟ್ಟಿದ್ದಾರೆ’ ಎಂದಿದ್ದಾರೆ. ನಾವು ತಂತ್ರಜ್ಞರನ್ನು ನೋಡಿದ್ದೇವೆ, ಶಾಸ್ತ್ರಜ್ಞರನ್ನು ನೋಡಿದ್ದೇವೆ. ಆದರೆ ಈ ಸೂಕ್ಷ್ಮಜ್ಞರು ಎಂಬುವವರು ಯಾರು, ಎಲ್ಲಿದ್ದಾರೆ, ಹೇಗಿದ್ದಾರೆ ಎಂಬುದು ಮಾತ್ರ ಯಕ್ಷಪ್ರಶ್ನೆ. ಅಸಲಿಗೆ ಆ ಸೂಕ್ಷ್ಮಜ್ಞ ಎಂಬುವವನು ಯಾವ ಊರಿನ ದೊಣೆನಾಯಕ ಎಂದು ಅವನ ಅಭಿಪ್ರಾಯ ಪಡೆಯಬೇಕು?

ಇನ್ನೊಂದು ವಾದ ನೋಡಿ ಹೇಗಿದೆ ಅಂತ: ಶಿವಗಾಮಿ ಎಂಬುವವಳು ಬಲ್ಲಾಾಳದೇವ ಹಾಗೂ ಅಮರೇಂದ್ರ ಬಾಹುಬಲಿಗೆ ಎದೆಹಾಲು ಕುಡಿಸಿ, ಊಟ ಮಾಡಿಸಿ, ಲಾಲನೆ ಪಾಲನೆ ಮಾಡುತ್ತಾಳೆ. ಆದರೆ ದಡ್ಡಪಂಥೀಯರ ಪ್ರಕಾರ ಅದು ಶೋಷಣೆ ಅಥವಾ ಅನಿವಾರ್ಯ ಸೃಷ್ಟಿಸುವುದಂತೆ. ಶಿವಗಾಮಿಗೆ ಎದೆಹಾಲು ಬರದೇ ಅವರ ಗಂಡನಿಗೆ ಎದೆಹಾಲು ಬರಬೇಕಿತ್ತು ಎಂಬುದು ಸೂಕ್ಷ್ಮಜ್ಞರ ವಾದವಾಗಿತ್ತೋ ಏನೋ ಎಂಬುದು ಮಾತ್ರ ನನ್ನನ್ನು ಅತೀವವಾಗಿ ಕಾಡುತ್ತಿದೆ. ಇನ್ನು ಕೆಲ ಮಾಧ್ಯಮಗಳಂತೂ ಬಾಹುಬಲಿಯನ್ನು ನೋಡಲೇ ಬೇಡಿ ಎಂದು ಹೇಳಿ, ಅದಕ್ಕೆ ಕಾರಣವನ್ನೂ ಕೊಟ್ಟಿದೆ.Here are 5 reasons why you should not watch Bahubali 2 ಎಂಬ ಶೀರ್ಷಿಕೆಯಲ್ಲಿ ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ದೊಡ್ಡ ವರದಿಯನ್ನೇ ಮಾಡಿದೆ.

ಅಷ್ಟರ ಮಟ್ಟಿಗೆ ಇವರೆಲ್ಲರೂ ಬಾಹುಬಲಿಯ ವಿರುದ್ಧ ಸಮರ ಸಾರುತ್ತಿದ್ದಾರೆ. ಸೋಜಿಗ ಎಂದರೆ ಇದೇ ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಶಾರುಖ್ ಖಾನ್‌ರ ರಯೀಸ್ ಚಿತ್ರ ಬಂದಾಗ  Here are 5 reasons why you should watch Raees  ಎಂದು ವರದಿ ಮಾಡಿತ್ತು. ರಯೀಸ್ ಡಾನ್ ಒಬ್ಬನ ಚರಿತ್ರೆ. ಅದನ್ನು ನೋಡಬೇಕು ಎಂದು ಐದು ಕಾರಣ ಕೊಡುವ ಮಾಧ್ಯಮಗಳಿಗೆ ಬಾಹುಬಲಿಯನ್ನು ಯಾಕಾಗಿ ನೋಡಬೇಕು ಎಂಬ ಒಂದು ಕಾರಣವನ್ನೂ ಕೊಡುವುದಕ್ಕೆ ಆಗಲಿಲ್ಲ ಎಂಬುದೇ ಮಾಧ್ಯಮ ಲೋಕದ ದೊಡ್ಡ ದುರಂತ. ಇವರು ಬಾಹುಬಲಿಯನ್ನು ಯಾಕಾಗಿ ವಿರೋಧಿಸುತ್ತಿದ್ದಾರೆ ಎಂಬುದಕ್ಕೆ ಐದು ಕಾರಣವನ್ನು ಕೊಡುತ್ತೇನೆ ಕೇಳಿ.

1. ಇದು ಹಿಂದೂ ಚಿತ್ರ.

2. ಭಾರತ ಚಿತ್ರೋದ್ಯಮದ ಎಲ್ಲ ದಾಖಲೆಗಳನ್ನು ಮುರಿದ ಏಕೈಕ ಚಿತ್ರ. ಭಾರತದಲ್ಲಿ ಬಾಕ್ಸ್‌ಆಫೀಸ್ ಕೊಳ್ಳೆ ಹೊಡೆದು ಅತ್ಯಂತ ಹೆಚ್ಚು ಗಳಿಕೆ ಕಂಡ ಚಿತ್ರ.

3. ಬಾಲಿವುಡ್‌ನ ಯಾವ ರಾಜ್‌ಕುಮಾರ್ ಹಿರಾನಿಗೂ ಇಂಥ ಚಿತ್ರ ಮಾಡುವುದಕ್ಕೆ ಸಾಧ್ಯವಿಲ್ಲ. ಕಾರಣ ಅವರೆಲ್ಲರೂ ಹಿಂದೂ ಧರ್ಮವನ್ನು ದೂಷಿಸಿ ಹಣ ಮಾಡುವುದರತ್ತಲೇ ಗಮನ ಹರಿಸಿದ್ದಾರೆ.

4. ಬಾಲಿವುಡ್ಡನ್ನು ಇಂದಿಗೂ ಆಳುತ್ತಿರುವುದು ದಾವೂದ್, ಚೋಟಾ ರಾಜನ್ ಸಹಚರರು ಮತ್ತು ಪಾಕಿಸ್ತಾನದ ಡಾನ್‌ಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲಿ ಚಿತ್ರ ನಿರ್ಮಾಣಕ್ಕೆ ಹಣ ಹಾಕುವುದರಿಂದ ಹಿಡಿದು, ಒಬ್ಬ ಹಾಸ್ಯನಟನನ್ನೂ ಅವರೇ ಆಯ್ಕೆ ಮಾಡುತ್ತಾರೆ. ಪರಿಸ್ಥಿತಿ ಹೀಗಿರುವಾಗ ಇವರಿಗೆ ಹಿಂದೂ ಧರ್ಮವನ್ನು ಹೊಗಳಿ ಚಿತ್ರನಿರ್ಮಿಸುವುದಕ್ಕೆ ಹೇಗೆ ಸಾಧ್ಯ? ಬೇಕಾದರೆ ಇಸ್ಲಾಂ ಅಥವಾ ಅಲ್ಲಾನನ್ನು ಹೊಗಳಿ ಚಿತ್ರ ಮಾಡುತ್ತಾರೆ ಅಥವಾ ಒಸಾಮಾ ಬಿನ್ ಲಾಡನ್‌ನನ್ನು ಹೊಗಳಿ ಇನ್ನೊಂದು ಚಿತ್ರ ಮಾಡಿಬಿಡುತ್ತಾರೆ. ಆದರೆ ಜಪ್ಪಯ್ಯ ಎಂದರೂ ಒಂದು ಶಾತವಾಹನ, ಚೋಳರು, ಕದಂಬರು, ವಿಜಯನಗರ ಸಾಮ್ರಾಜ್ಯ, ಕೃಷ್ಣದೇವರಾಯ, ಹಂಪಿ ಇವು ಯಾವುದರ ಬಗ್ಗೆಯೂ ಒಂದು ಕಿರು ಚಿತ್ರವನ್ನೂ ತೆಗೆಯುವುದಿಲ್ಲ.

5. ಬಾಲಿವುಡ್‌ನಲ್ಲಿ ರಾಜಮೌಳಿ ಎಂಬ ಅಲ್ಪಸಂಖ್ಯಾತ ಪರ ‘ಜಾತ್ಯತೀತ’ ಇಲ್ಲ. ಅಲ್ಲಿರುವುದು ಹಿಂದೂ ದೇವರನ್ನು ಬಯ್ದು, ಕೆಟ್ಟದಾಗಿ ತೋರಿಸಿ ದುಡ್ಡು ಮಾಡುವ ರಾಜ್ ಕುಮಾರ್ ಹಿರಾನಿಯಂಥ ಮನಸ್ಥಿತಿಗಳು ಮಾತ್ರ. ಹಾಗಾಗಿ ಬಾಹುಬಲಿಯಂಥ ಮತ್ತೊಂದು ಚಿತ್ರವನ್ನು ತಮಿಳೋ, ತೆಲುಗಿನವರೋ ಮಾಡಬೇಕೇ ಹೊರತು. ಇನ್ನೊಂದು ಜನ್ಮ ಕಳೆದರೂ ಉತ್ತರ ಭಾರತೀಯರ ಬಳಿ ಆಗುವುದಿಲ್ಲ. ಬಾಹುಬಲಿಯನ್ನು ವಿರೋಧಿಸುವ ಎರಪಂಥೀಯರ ಮತ್ತೊಂದು ಪೊಳ್ಳು ವಾದವೇನೆಂದರೆ ಅಲ್ಲಿ ಕಾಲಕೇಯ ಎಂಬ ಜನಾಂಗವನ್ನು ಕೆಟ್ಟದಾಗಿ ತೋರಿಸಿದ್ದಾರೆ. ಅವರು ಕಳ್ಳರು, ದರೋಡೆಕೋರರು ಎಂದು ತೋರಿಸಿದ್ದಾರೆ ಎಂದು ಅದೇ ಹಳೇ ಪುಂಗಿ ಊದುತ್ತಿದ್ದಾರೆ.

ನಮ್ಮ ವೇದ, ಪುರಾಣ, ಶಾಸ್ತ್ರಗಳನ್ನು ಓದದೇ ಬೊಗಳುವ ಎಡಪಂಥೀಯರಿಗೆ, ಲದ್ದಿಜೀವಿಗಳಿಗೆ ಮತ್ತು ಸೂಕ್ಷ್ಮಜ್ಞರಿಗೆ ಇಂಥ ಸೂಕ್ಷ್ಮಗಳು ಅರ್ಥವಾಗಲು ಸಾಧ್ಯವಿಲ್ಲ. ಮಹಾಭಾರತದಲ್ಲಿ ಕಾಲಕೇಯರ ಉಲ್ಲೇಖವಿದೆ. ಅವರನ್ನು ದೈತ್ಯ ದಾನವರು ಎಂದೂ ಕರೆಯುತ್ತಿದ್ದರು. ನರ್ಮದಾ ತಟದಲ್ಲಿ ಮಾಹಿಷ್ಮತಿ ಎಂಬ ಊರಿತ್ತು. ಅಲ್ಲಿ ಈ ಕಾಲಕೇಯರು ಆಗಾಗ ಬಂದು ಕಾಟ ಕೊಡುತ್ತಿದ್ದರು. ಆ ರಾಜ್ಯದಲ್ಲಿ ಕಾರ್ತ್ಯವೀರ್ಯಾರ್ಜುನನ ಆಡಳಿತವಿತ್ತು. ಕೊನೆಗೆ ಕಾಲಕೇಯರ ಸಂತತಿ ನಾಶ ಮಾಡಿದವನು ಅರ್ಜುನ ಎಂಬ ಉಲ್ಲೇಖವಿದೆ. ಆದರೆ ಸಿನಿಮಾದಲ್ಲಿ ಬಾಹುಬಲಿ ಅವರನ್ನು ನಾಶ ಮಾಡುತ್ತಾನೆ ಎಂದು ತೋರಿಸಿದ್ದಾರೆ. ಇಲ್ಲಿ ಬಾಹುಬಲಿಯನ್ನು ಕಾರ್ತ್ಯವೀರ್ಯಾರ್ಜುನ ಮತ್ತು ಅರ್ಜುನನ ಸಂಕೇತವಾಗಿ ತೋರಿಸಿದ್ದಾರೆ.

ಈ ಸಿನಿಮಾದಲ್ಲಿ ಸಾಂಕೇತಿಕವಾದದ್ದು ಬಹಳ ಇದೆ. ಬಾಹುಬಲಿ ಕಟ್ಟಪ್ಪನ ತಲೆ ಮೇಲೆ ಪಾದ ಇಡುವುದು ಬಲಿ ಚಕ್ರವರ್ತಿಯ ತಲೆ ಮೇಲೆ ವಾಮನ ಕಾಲಿಟ್ಟಿದ್ದರ ಸಂಕೇತವಾಗಿ ಚಿತ್ರಿಸಿದ್ದಾರೆ. ಹೀಗೆ ದಶಾವತಾರಗಳ ಸಂಕೇತವೂ ಈ ಸಿನಿಮಾದಲ್ಲಿ ಬಳಸಲಾಗಿದೆ. ನಮ್ಮ ದೇಶದ ಮೇಲೆ ಘಜ್ನಿ, ಘೋರಿಗಳು ದಾಳಿ ನಡೆಸಿದ್ದನ್ನೂ ಸಾಂಕೇತಿಕವಾಗಿ ತೋರಿಸಿದ್ದಾರೆ. ಆದರೆ ಇದನ್ನು ಸಿನಿಮಾದ ರೀತಿಯಾಗೇ ನೋಡಿದರೆ, ಹಿಂದೂ ಧರ್ಮಕ್ಕಾಗೇ ಮಾಡಿದ ಚಿತ್ರ ಎಂದು ಅನಿಸುವುದಿಲ್ಲ. ಅಷ್ಟರ ಮಟ್ಟಿಗೆ ನಾಜೂಕಾಗಿ, ಯಾವ ಅಲ್ಪಸಂಖ್ಯಾತ ವರ್ಗಕ್ಕೂ ತೊಂದರೆಯಾಗದ ಹಾಗೆ ಸಿನಿಮಾ ಮಾಡಿದ್ದಾರೆ. ಈ ಕೂಗಾಡುವವರ ಬ್ರಿಗೇಡ್‌ಗಳು ಸಹಜವಾಗಿ ಅಲ್ಪಸಂಖ್ಯಾತರಿಗೆ ತೊಂದರೆ ಆಗಿದೆ ಎಂದು ಎದೆ ಬಡಿದುಕೊಂಡು, ಬಳೆ ಒಡೆದುಕೊಂಡು ಚೀರಾಡುತ್ತವೆ. ಆದರೆ ರಾಜಮೌಳಿಯ ಜುಟ್ಟು ಇವರಿಗೆ ಸಿಗದ ಕಾರಣ ಆತನೇ ಸರಿ ಇಲ್ಲ, ಚಿತ್ರದಲ್ಲಿ ಅತ್ಯಂತ ಕೀಳು ಮಟ್ಟದ ಗ್ರಾಫಿಕ್ ಅಳವಡಿಸಿದ್ದಾರೆ ಎಂದು ಮಕ್ಕಳು ಚಾಕಲೇಟು ಸಿಗದಿದ್ದಾಗ ಹೇಳುವ ಹಾಗೆ ಕಾರಣಗಳನ್ನು ಹೇಳುತ್ತಿದ್ದಾರೆ. ಈಗ ಐದು ಹತ್ತು ಕಾರಣ ಕೊಟ್ಟು ಚಿತ್ರ ನೋಡಬಾರದು ಎಂಬ ಟ್ರೆಂಡ್ ಶುರುವಾಗಿದೆ. ಅದೇ ಟ್ರೆಂಡನ್ನು ಅನುಸರಿಸಿಕೊಂಡು ಬಾಹುಬಲಿ ಚಿತ್ರ ಯಾಕಾಗಿ ನೋಡಬೇಕು ಎಂಬುದಕ್ಕೆ ಕಾರಣಗಳನ್ನು ಕೊಡುತ್ತೇನೆ ಕೇಳಿ:

1. ಶಿವ ತಾಂಡವದ ಸ್ತೋತ್ರ ಬಳಸಿಕೊಂಡಿದ್ದಲ್ಲದೆ, ಸಂಸ್ಕೃತದ ಹಾಡುಗಳೂ ಇವೆ.
2. ದೇವಸೇನಾ ಎಂಬ ಪಾತ್ರವಿದೆ. ಅದರಲ್ಲಿ ದೇವಸೇನಾ ತನಗೆ ವರ ಇಷ್ಟವಿಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಿ ಅವರ ದುರಹಂಕಾರಕ್ಕೆ ಉತ್ತರ ಕೊಡುವ ಪ್ರಸಂಗ, ಹಿಂದೂ ಧರ್ಮದಲ್ಲಿ ಅಂದಿನಿಂದಲೂ ಸ್ತ್ರೀಯರಿಗೆ ಎಷ್ಟು ಸ್ವಾತಂತ್ರ್ಯವಿತ್ತು ಎಂಬುದನ್ನು ಸಾರಿ ಹೇಳುತ್ತದೆ.
3. ಜನರು ನಮ್ಮ ವಿರುದ್ಧ ಹೇಗೆಲ್ಲ ಕುತಂತ್ರ ಮಾಡುತ್ತಾರೆ, ನಾವೆಷ್ಟು ಹುಷಾರಾಗಿರಬೇಕು ಎಂಬುದನ್ನು ಹೇಳಿ ಕೊಡುತ್ತದೆ.
4. ಧರ್ಮಕ್ಕಾಗಿ ಹೋರಾಡು: ಶಿವಗಾಮಿ ಅಧರ್ಮದ ಕೆಲಸ ಮಾಡು ಎಂದಾಗ ಬಾಹುಬಲಿಯು ‘ಅಮ್ಮಾ ನೀನು ಮೊದಲು ಹೇಳಿಕೊಟ್ಟ ಧರ್ಮವನ್ನು ನಾನು ಪಾಲಿಸುತ್ತೇನೆಯೇ ವಿನಾ, ಈಗ ಅಪೇಕ್ಷಿಸುತ್ತಿರುವ ಅಧರ್ಮವನ್ನು ಮಾಡಲಾರೆ’ ಎಂದು ಹೇಳಿದ.
5. ದೇವಸೇನಾಳಿಗೆ ರಾಜಮನೆತನದ ಪುರುಷನೊಬ್ಬ ಲೈಂಗಿಕ ಕಿರುಕುಳ ನೀಡಲು ಮುಂದಾದಾಗ ಅವನ ಕೈ ಕತ್ತರಿಸಿಬಿಡುತ್ತಾಳೆ. ಆ ಮೂಲಕ ಸ್ತ್ರೀಯರು ಅಬಲೆಯರಲ್ಲ ಎಂದು ತೋರಿಸಲಾಗಿದೆ.
6. ನಾವೆಲ್ಲ ಪುರಾಣದಲ್ಲಿ ಓದಿದ್ದ ಯುದ್ಧ ಪ್ರಸಂಗಗಳನ್ನು ಕಣ್ಣಾರೆ ನೋಡಿ ಮನದುಂಬಿಕೊಳ್ಳುವುದಕ್ಕಾಗಿ.
7. ಪಟ್ಟಾಭಿಷೇಕ ಹೇಗೆ ನಡೆಯುತ್ತದೆ ಎಂದು ನೋಡುವುದಕ್ಕಾಗಿ. ಹಿಂದೂಗಳ ದೇವರನ್ನು ತುಚ್ಛವಾಗಿ ಹೀಯಾಳಿಸಿ ಪಿಕೆ ಸಿನಿಮಾ ಮಾಡಿ ಮೊದಲ ದಿನ 23 ಕೋಟಿ ಗಳಿಸಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿದ್ದವರಿಗೆ, ಅದೇ ಹಿಂದೂ ಧರ್ಮಕ್ಕೆ ಗೌರವಿಸಿಯೂ ಸಿನಿಮಾ ಮಾಡಿ ಮೊದಲನೇ ದಿನದಲ್ಲೇ ನೂರು ಕೋಟಿ ಹಣ ಮಾಡಬಹುದು ಎಂದು ರಾಜಮೌಳಿ ಬಾಲಿವುಡ್ಡಿ ನವರ ಬುರುಡೆಗೇ ಹೊಡೆದಿದ್ದಾರೆ. ಅದಕ್ಕಾದರೂ ಸಿನಿಮಾ ನೋಡಲೇಬೇಕು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya