ಮೂತ್ರ ಕುಡಿದ ರೈತರು ಜಪಿಸಿದ್ದು ಮತಾಂತರದ ಮಂತ್ರ

ತಮಿಳುನಾಡು ಎಂದಾಗ ಹಲವಾರು ಸಂಗತಿಗಳು ನೆನಪಾಗುತ್ತವೆ. ಅದರಲ್ಲಿ ಅಲ್ಲಿನ ಜನರ ಓವರ್ ಆ್ಯಕ್ಟಿಂಗ್ ಸಹ ಒಂದು. ಅಮ್ಮಾ ಜಯಲಲಿತಾ ಜೈಲಿಗೆ ಹೋದಾಗ ಹಾಗೂ ಅವರು ಮೃತಪಟ್ಟಾಗ ತಮಿಳುನಾಡೇ ಮುಳುಗಿ ಹೋಗಿಬಿಡುತ್ತದೆ ಎನ್ನುವ ಹಾಗೆ ಬಹುತೇಕರು ಎದೆ ಬಡಿದುಕೊಂಡಿದ್ದರು. ಬಹುಶಃ ಜಯಲಲಿತಾ ಅವರು ಹೋದಮೇಲೆ ಇಂಥ ಯಾವುದೇ ಡ್ರಾಮಾಗಳು ನಡೆದಿಲ್ಲವಾದ್ದರಿಂದ, ಅವರ ಜತೆಗೆ ಎಲ್ಲ ಹೋಯ್ತು ಎಂದುಕೊಂಡರೆ ತಪ್ಪಾಗುತ್ತದೆ. ಇನ್ನೂ ಅತಿರೇಕದ ಕಲಾವಿದರು ಜೀವಂತ ಇದ್ದಾರೆ. ಅವರೆಲ್ಲರೂ ದೆಹಲಿಯಲ್ಲಿ ಒಂದು ಪ್ರದರ್ಶನ ನೀಡಿ ವಾಪಸ್ ಬಂದಿದ್ದಾರೆ. ಎಲ್ಲರೂ ಗಮನಿಸಿದಂತೆ ಮೂರ್ನಾಲ್ಕು ದಿನಗಳ ಹಿಂದೆ ದೇಶವೇ ತಿರುಗಿ ನೋಡುವಂತೆ ದೆಹಲಿಯಲ್ಲಿ ತಮಿಳುನಾಡಿನ ರೈತರು ಪ್ರತಿಭಟನೆ ನಡೆಸಿದ್ದರು.

ದೆಹಲಿ ಚುನಾವಣೆಯ ನಂತರ ಏನೂ ಸುದ್ದಿ ಇಲ್ಲದೇ ಕಂಗೆಟ್ಟಿದ್ದ ಮಾಧ್ಯಮಗಳು ರೈತರ ಹೋರಾಟವನ್ನು ಬಗೆಬಗೆಯ ಕೋನದಲ್ಲಿ ತೋರಿಸಿದ್ದರು. ಒಟ್ಟಾರೆ ರೈತರೆಲ್ಲ ಸೇರಿ ಪ್ರತಿಭಟಿಸಿದ್ದು 41 ದಿನಗಳು. ಈ ಪ್ರತಿಭಟನೆ ವಿವಿಧ ಹಂತಗಳನ್ನು ತಲುಪಿತ್ತು. ಮೊದಲಿಗೆ ಸುಮ್ಮನೆ ಘೋಷಣೆ ಕೂಗಿದರು, ಅರೆಬೆತ್ತಲೆ ಪ್ರತಿಭಟನೆ ಆಯಿತು, ಸತ್ತ ಇಲಿಗಳನ್ನು ತಿನ್ನುವ ಮೂಲಕ ಹೋರಾಟ ಮಾಡಿದರು, ತಮ್ಮ ಉಚ್ಚೆಯನ್ನು ತಾವೇ ಕುಡಿದು ಪ್ರತಿಭಟಿಸಿ ದರು. ಇವೆಲ್ಲಕ್ಕೂ ಕೇಂದ್ರ ಸರಕಾರ ಕ್ಯಾಾರೇ ಎನ್ನದಿದ್ದಾಗ ರಸ್ತೆಯಲ್ಲಿ ಬೆತ್ತಲೆಯಾಗಿ ಹೋರಾಟ ಮಾಡಿದ್ದೂ ಆಯಿತು. ಈಗ ನಾವೆಲ್ಲ ಆಲೋಚನೆ ಮಾಡಬೇಕಾದ್ದೇನೆಂದರೆ, ಅಲ್ಲಿ ಹೋರಾಟ ಮಾಡಿದ್ದು ನಿಜವಾಗಿಯೂ ರೈತರೇ ಅಥವಾ ರೈತರ ವೇಷದಲ್ಲಿ ಬೇರೆಯವರು ಬಂದರೇ? ಇದರ ಬಗ್ಗೆ ಸ್ವಲ್ಪ ಕೂಲಂಕಷವಾಗಿ ನೋಡೋಣ.

ಇಲ್ಲಿ ಮೊದಲನೆಯ ಅಚ್ಚರಿಯ ವಿಷಯವೇನೆಂದರೆ, ಅವರು ಪ್ರಟಿಭಟಿಸಲು ಆಯ್ಕೆ ಮಾಡಿಕೊಂಡಿದ್ದಂಥ ಸಮಯ. ಅದು ದೆಹಲಿ ಎಂಸಿಡಿ ಚುನಾವಣೆಗಿಂತ ಮೊದಲು ಮತ್ತು ಚುನಾವಣೆ ಮುಗಿಯುವ ಹಂತಕ್ಕೆ ಸರಿ ಹೋಗುವ ಹಾಗೆ 41 ದಿನಗಳನ್ನು ಫಿಕ್ಸ್ ಮಾಡಿಕೊಳ್ಳಲಾಗಿತ್ತು. ಸರಿ, ಒಬ್ಬ ಸಾಮಾನ್ಯ ರೈತ ಏನು ಮಾಡುತ್ತಾನೆ? ತನಗೆ ನೀರು ಬೇಕು, ಬೆಳೆ ನಾಶಕ್ಕೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಮೊದಲು ತಂತಮ್ಮ ರಾಜ್ಯದಲ್ಲಿ ಪ್ರತಿಭಟಿಸುತ್ತಾರೆ. ಆದರೆ ಯಾವ ರೈತರು ನೇರವಾಗಿ ದೆಹಲಿಗೇ ಹೋಗಿ ಪ್ರಧಾನಿ ಗಳ ವಿರುದ್ಧವೇ ಪ್ರತಿಭಟಿಸುತ್ತಾರೆ? ಸರಿ ಅದರ ದರ್ದಾದರೂ ಏನಿತ್ತು? ಬಹುಶಃ ಅಂಥ ತಲೆ ಇರುವುದು ತಮಿಳುನಾಡು ರೈತರಿಗೆ ಮಾತ್ರವಿರಬೇಕು. ನಮ್ಮಲ್ಲೇ ಕಾವೇರಿ ನೀರು ಬಿಡುವ ವಿಚಾರದಲ್ಲಿ ನಮ್ಮ ರೈತರು ರಾಜ್ಯದಲ್ಲಿ ಪ್ರತಿಭಟಿಸಿದರೇ ಹೊರತು, ಜಂತರ್ -ಮಂತರ್‌ಗೆ ಹೋಗಲಿಲ್ಲ. ಆದರೆ ಈ ತಮಿಳುನಾಡಿನ ಬಡ ರೈತರ ವೈಭೋಗ ನೋಡಿ, ದೆಹಲಿಗೆ ಬಂದರೂ, ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡಿದರೂ, ಅವರಿದ್ದಲ್ಲಿಗೇ ದೆಹಲಿಯ ಹೈಫೈ ರೆಸ್ಟೋರೆಂಟ್‌ನಿಂದ ಊಟ ಪಾರ್ಸಲ್ ಬರುತ್ತದೆ!

ಕುಡಿಯುವುದಕ್ಕೆ ಮಿನಿರಲ್ ವಾಟರ್ರೇ ಬರುತ್ತೆ! ಅದೂ 41 ದಿನಗಳವರೆಗೆ. ಈ ಕುರಿತು ದೆಹಲಿಯ ಪ್ರತ್ಯಕ್ಷದರ್ಶಿಗಳೇ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಯಾವುದಾದರೂ ರೈತರಿಗೆ ದೆಹಲಿಗೆ ಬಂದು, 41 ದಿನ ಹೈಫೈ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡುವ, ಲಾಡ್ಜ್‌ಗಳಲ್ಲಿ ತಂಗುವ ಶಕ್ತಿಯಿದೆಯೆಂದರೆ ಅದು ತಮಿಳುನಾಡಿನ ರೈತರಿಗೆ ಮಾತ್ರವಿರಬೇಕು. ಅಸಲಿಗೆ ಇವರೆಲ್ಲ ರೈತರೇ ಆಗಿದ್ದಿದ್ದರೆ, ಇಷ್ಟೆಲ್ಲ ವೈಭೋಗ ಅನುಭವಿಸುವುದಿರಲಿ, ತಮಿಳುನಾಡಿನ ಇನ್ನೊಂದು ಜಿಲ್ಲೆಗೂ
ಹೋಗುತ್ತಿರಲಿಲ್ಲ. ಹಾಗಾದರೆ ಇಲ್ಲಿ ಬಂದು ಹೋರಾಟ ಮಾಡಿದ್ದು ಯಾರು? ದೇಶದ್ರೋಹದ ಆರೋಪ ಹೊತ್ತವರು, ಪ್ರತ್ಯೇಕತಾವಾದಿಗಳು, ಮಾವೋವಾದಿ ಹಿನ್ನೆಲೆ, ಒಲವು ಉಳ್ಳವರು.

ಈ ಹೋರಾಟಗಾರರಲ್ಲಿ ಶೇಖ್ ಹುಸೇನ್ ಎಂಬ ಮುಖವಾಡದ ರೈತನಿದ್ದಾನೆ. ಆದರೆ ಈತ ಉಳುಮೆ ಮಾಡಿದ, ಎತ್ತು ಕಟ್ಟಿಕೊಂಡು ಬೆವರು ಸುರಿಸಿದ ಯಾವ ಉದಾಹರಣೆಯೂ ಇಲ್ಲ. ಅಸಲಿಗೆ ಇವನಿಗೆ ಹಸು, ಎತ್ತು, ಎಮ್ಮೆ ಎಂದರೆ ತಿನ್ನುವ ವಸ್ತುಗಳೇ ಹೊರತು ಬೇರೇನೂ ಅಲ್ಲ. ಇವನ ಇತಿಹಾ ದೊಡ್ಡದೇ ಇದೆ. ಈತ ಭಾರತೀಯ ಎನ್ನುವುದಕ್ಕಿಂತಲೂ ಅಫ್ಜಲ್‌ಗುರುವಿನ ಬೆಂಬಲಿಗ. ಕಾಶ್ಮೀರದಲ್ಲಿ ಸೈನ್ಯದ ವಿರುದ್ಧವೇ ಸಮರ ಸಾರಿದ ಕೀಚಕ ಎನ್ನಬಹುದು. ತನ್ನ ಬ್ಲಾಗ್ ಎಂಬ ಕಸದ ತೊಟ್ಟಿಯಲ್ಲಿ ಸೈನಿಕರ ವಿರುದ್ಧ ಬರೆದು ಕೊಳಚೆ ಕಾರಿಕೊಂಡ ಈತ ಅರೆಬೆತ್ತಲೆಯಾಗಿ ರೈತರ ಪರ ಹೋರಾಡುತ್ತಿದ್ದಾನೆ ಎಂದರೆ ನಂಬಬೇಕೆ? ಇನ್ನು ಅವರಲ್ಲಿ ಶ್ರೀ ಅಯ್ಯಕಣ್ಣು ಎಂಬ ಸೋಗಲಾಡಿ ಹೋರಾಟಗಾರನಿದ್ದಾನೆ. ಈತನೂ ಅಷ್ಟೇ, ರೈತನಲ್ಲ. ತಿರುಚನಾಪಳ್ಳಿಯಲ್ಲಿ ವಕೀಲಿ ವೃತ್ತಿ ಮಾಡುವ ಈತ ಅಪಾರ ಭೂಮಿ ಹೊಂದಿರುವ ಜಮೀನ್ದಾರ. ಆಗರ್ಭ ಶ್ರೀಮಂತ.

ಈತನಿಗೆ ದೆಹಲಿಯಲ್ಲಿ ಬಂದು ಉಚ್ಚೆ ಕುಡಿಯುವ ಅನಿವಾರ್ಯವಾದರೂ ಏನು? ಅಷ್ಟೇ ಅಲ್ಲ ಆರ್‌ಎಸ್‌ಎಸ್‌ನ ಭಾರತೀಯ ಕಿಸಾನ್ ಸಂಘದಲ್ಲಿದ್ದ ಈತ ರೈತರ ಹೆಸರಿನಲ್ಲಿ ಹಣ ಮಾಡಲು ಹೊರಟ ಕಾರಣ, ಸಂಘದಿಂದ ಒದ್ದು ಹೊರಹಾಕಲಾಗಿತ್ತು. ನಬಾರ್ಡ್‌ನಲ್ಲೂ ಹಣ ಕೊಳ್ಳೆ ಹೊಡೆದ ಆರೋಪ ಹೊತ್ತಿರುವ ಇವನ್ಯಾವ ಸೀಮೆ ರೈತ? ಇವರೆಲ್ಲರೂ ಹಣವೊಂದು ಬರುತ್ತದೆ ಎಂದರೆ ಉಚ್ಚೆಯನ್ನಾದರೂ ಕುಡಿಯುತ್ತಾರೆ, ಸತ್ತ ಇಲಿಯನ್ನಾದರೂ ತಿನ್ನುತ್ತಾರೆ ಅಥವಾ ಬೆತ್ತಲೆಯಾಗಿ ದೆಹಲಿಯನ್ನೂ ಸುತ್ತುತ್ತಾರೆ. ಕೇವಲ ಇವರಷ್ಟೇ ಅಲ್ಲ, ಇವರಿಗೆ ದೊಡ್ಡ ದೊಡ್ಡ ಎನ್ ಜಿಒಗಳೂ ಹಣ ಕೊಟ್ಟು ಸಾಥ್ ನೀಡುತ್ತಿವೆ. ಅಮೆರಿಕದ ಕೆಲವು ಎನ್‌ಜಿಒಗಳ ಗಂಜಿ ಗಿರಾಕಿಗಳು ದೆಹಲಿಯಲ್ಲಿ ರೈತರ ಹೆಸರಲ್ಲಿ ಪ್ರತಿಭಟನೆ ಮಾಡಿದರು. ಅವರೆಲ್ಲ ಇಂಥದ್ದೇ ದಂಧೆ ಮಾಡಿಯೇ ಶ್ರೀಮಂತರಾಗಿದ್ದಾರೆ. ರೈತರ ತೊಂದರೆಯನ್ನಿಟ್ಟು ಕೊಂಡು ಮೋದಿ ಸರಕಾರಕ್ಕೆ ಮಸಿ ಬಳಿಯಲು ಹೋರಾಟದ ಸೋಗು ಹಾಕುತ್ತಿದ್ದಾರಷ್ಟೇ. ಜತೆಗೆ ಇವರೆಲ್ಲ ಭಾರತದ ಅಭಿವೃದ್ಧಿ ಯೋಜನೆ ಸಹಿಸದ ‘ಗ್ರೀನ್ ಪೀಸ್ ಆರ್ಗನೈಸೇಷನ್ ’ನ ಸದಸ್ಯರು ಎಂದು ಸೈಬರ್ ತಜ್ಞ ಗೌರವ್ ಪ್ರಧಾನ್ ತಮ್ಮ ಸಾಲು ಸಾಲು ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

ಹಾಗಾದರೆ ರೈತರಿಗೆ ಇಷ್ಟೇ ಜನರಾ ಬೆಂಬಲ ನೀಡಿದ್ದು? ಇಲ್ಲ. ಇದಕ್ಕೆ ರಾಜಕೀಯ ಲೇಪವೂ ಇದೆ. ತಮಿಳುನಾಡಿನ ಶಶಿಕಲಾ ಗ್ಯಾಂಗ್ ಈ ಕೃತ್ಯ ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಅಚ್ಚರಿಯೆಂಬಂತೆ ಕಾಂಗ್ರೆಸ್ ಸಹ ಇವರಿಗೆ ಬೆಂಬಲ ಸೂಚಿಸಿತ್ತು. ಯಾವುದೋ ದೇಶದಲ್ಲಿ, ವಿದೇಶಿ ಹುಡುಗಿಯ ಜೊತೆ ಕಾಣಿಸಿಕೊಂಡ ಫೋಟೊ ನೋಡಿದ ಮೇಲೆ ರಾಹುಲ್ ಗಾಂಧಿಯ ಫೋಟೊ ನೋಡಿದ್ದು ಪ್ರತಿಭಟನಾ ನಿರತ ರೈತರ ಜತೆ ನಗುತ್ತಾ ಸೆಲ್ಫಿ ತೆಗೆಸಿಕೊಂಡ ಮೇಲೇ! ಆದರೆ ದಿನ ಕಳೆದಂತೆ ಇವರ ಒಂದೊಂದೇ ಬಣ್ಣ ಬಯಲಾಗಲು ಆರಂಭವಾದ ಕಾರಣ ಈ ಎಲ್ಲರೂ ಸುಮ್ಮನಾಗಿದ್ದಾರೆ. ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ಇವಿಷ್ಟೂ ರೈತರ ಹಿಂದೆ, ಕ್ರಿಶ್ಚಿಯನ್ ಮತಾಂತರಿಗಳ ಕೈವಾಡವಿಲ್ಲದೇ ಇರಲಿಕ್ಕೆ ಹೇಗೆ ಸಾಧ್ಯ? ಅದೂ ಮತಾಂತರಿಗಳ ತವರೂರಾದ ತಮಿಳುನಾಡಲ್ಲಿ? ಎಲ್ಲರದ್ದೂ ಒಂದು ಲೆಕ್ಕಾಚಾರವಾದರೆ, ಮತಾಂತರಿಗಳ ಲೆಕ್ಕಾಚಾರವೇ ಬೇರೆ ಇದೆ. ತಮಿಳುನಾಡಿನಲ್ಲಿರುವ ಎಲ್ಲ ಚಚ್ ಗರ್ಳ ಧ್ಯೇಯೋದ್ದೇಶ ಸದ್ಯಕ್ಕೆ ಒಂದೇ ಒಂದು. ಕಡಿಮೆ ಅವಧಿಯಾದರೂ ಚಿಂತೆಯಿಲ್ಲ ಸ್ಟಾಲಿನ್‌ರನ್ನು ಅಧಿಕಾರಕ್ಕೆ ತರಬೇಕು. ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಾದರೂ ಸರಿಯೇ ಅವರು ಅಧಿಕಾರಕ್ಕೆ ಬರಲೇಬೇಕು ಎನ್ನುವುದು ಅವರ ಚಿಂತನೆ. ಸ್ಟಾಲಿನ್ ಅಧಿಕಾರಕ್ಕೆ ಬಂದರೆ ಕ್ರಿಶ್ಚಿಯನ್ನರಿಗೆ ಮತ್ತು ಮಿಷನರಿಗಳಿಗೆ ಹಬ್ಬ ಎಂಬುದು ಅವರಿಗೂ ಗೊತ್ತು.

ತಮಿಳುನಾಡಿನಲ್ಲಿ ಮತಾಂತರಿಗಳು ಸ್ವಚ್ಛಂದವಾಗಿ ತಿರುಗಾಡು ವಂತಾಗಲು, ಮತಾಂತರ ಮಾಡುವಾಗ ಹಿಂದೂಗಳ ಬಳಿ ಒದೆ ತಿನ್ನದೇ ಇರುವುದಕ್ಕೆ ಸ್ಟಾಲಿನ್ ಎಂಬ ನಾಯಕ ಬೇಕೇ ಬೇಕು. ಇವರ ಬುದ್ಧಿಮತ್ತೆಯ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ: ಸ್ಟಾಲಿನ್ ತಮಿಳುನಾಡಿನ ರಾಹುಲ್ ಗಾಂಧಿಯಷ್ಟೇ! ಇವರನ್ನು ಸಿಎಂ ಮಾಡಿ, ಇಡೀ ರಾಜ್ಯವನ್ನೇ ಕ್ರೈಸ್ತ ಧರ್ಮೀಯರ ರಾಜ್ಯವನ್ನಾಗಿ ಮಾಡುವ ಬೃಹತ್ ಐಡಿಯಾವನ್ನೇ ಹೊಂದಿದ್ದಾರೆ ಮಿಷನರಿಗಳು. ಇದಕ್ಕೆ ಅಮೆರಿಕದ ಚರ್ಚ್‌ಗಳಿಂದ ಹೊಸ ನೋಟುಗಳೇ ಬಂದಿವೆ. ಇದೇ ಹಣದಲ್ಲೇ ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ದೇಶದ್ರೋಹಿಗಳಿಗೆ ಹೈಫೈ ಹೋಟಲ್‌ನಿಂದ ಮಟನ್ ಊಟದ ಪಾರ್ಸಲ್ ಬಂದಿದ್ದು. ಖಂಡಿತವಾಗಿಯೂ ದೇಶದ ಹಲವೆಡೆ ಬರಗಾಲ ಆವರಿಸಿದೆ.

ಪರಿಹಾರದ ಹಣ ನೀಡುವಂತೆ ಸರಕಾರದ ಮೇಲೆ ಒತ್ತಾಯ ಹೇರಬೇಕು. ಆದರೆ ರೈತರ ಹೆಸರಿನಲ್ಲಿ ಹೋರಾಟ ಮಾಡುತ್ತಿರುವವರು ಕೇಳುತ್ತಿರುವ ಬರಪರಿಹಾರ ಎಷ್ಟು ಗೊತ್ತೇ? ಬರೋಬ್ಬರಿ 4 ಸಾವಿರ ಕೋಟಿ ರುಪಾಯಿ. ಪ್ರಾಯಶಃ ನಾಲ್ಕು ಸಾವಿರ ಕೋಟಿ ರು.ಗೆ ಎಷ್ಟು ಸೊನ್ನೆ ಎಂಬುದೂ ನಿಜವಾದ ರೈತರಿಗೆ ಗೊತ್ತಿರಲಿಕ್ಕಿಲ್ಲ. ಇನ್ನು ಈ ಪರಿಹಾರ ಹಣ ನೀಡಿಲ್ಲ ಎಂದು ನರೇಂದ್ರ ಮೋದಿಯವರನ್ನು ಟೀಕಿಸಲಾಗುತ್ತದೆ. ಕೆಲವು ಚಾನೆಲ್‌ಗಳೂ ಮೋದಿಯದ್ದೇ ಎಲ್ಲ ತಪ್ಪು ಎಂಬಂತೆ ಬಿಂಬಿಸುತ್ತಿವೆ. ಪ್ರತಿಭಟನೆಗೆ ಸಿನಿಮಾ ನಾಯಕರು, ರಾಹುಲ್ ಗಾಂಧಿ ಸಾಥ್ ನೀಡಿ ‘ಒಣ ಸಾಂತ್ವಾನ’ ಹೇಳಿದ್ದಾರೆ. ಆದರೆ, ತಮಿಳುನಾಡಿಗೆ ಬರಪರಿಹಾರವಾಗಿ ಕೇಂದ್ರ ಸರಕಾರ 2014.45 ಕೋಟಿ ರುಪಾಯಿಯನ್ನು ಯಾವಾಗಲೋ ಬಿಡುಗಡೆ ಮಾಡಿದೆ. ಆದರೆ ಅಲ್ಲಿನ ಸರಕಾರ ಈ ಹಣವನ್ನೇ ಬಳಸಿಕೊಂಡಿಲ್ಲ. ಅರ್ಥಾತ್ ರೈತರಿಗೆ ವಿತರಿಸಿಲ್ಲ.

ಈ ವಿಷಯದ ಬಗ್ಗೆ ಒಬ್ಬರೂ ಮಾತನಾಡುತ್ತಿಲ್ಲ. ಏಕೆಂದರೆ, ಬೆತ್ತಲೆ ಓಡಾಡುತ್ತಿರುವ ಯಾವ ರೈತ ವೇಷಧಾರಿಗೂ ಇದು ಬೇಕಿಲ್ಲ. ಅವರಿಗೆ ಬೇಕಿರುವುದು ಕೇವಲ ಬಿಟ್ಟಿ ಪ್ರಚಾರ ಹಾಗೂ ಬಿಜೆಪಿಯನ್ನು ದೂರುವುದು ಅಷ್ಟೇ. ಯಾವಾಗ ಕೇಂದ್ರ ಸರಕಾರ ಸಹ ಈ ಮುಖವಾಡದ ರೈತರನ್ನು ಭೇಟಿ ಮಾಡಲು ನಿರಾಕರಿಸಿ, ಸಮಸ್ಯೆ ನಿವಾರಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತೋ ಆಗ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಇವರನ್ನು ಭೇಟಿ ಮಾಡುವ ನಾಟಕವಾಡಿದರು. ಆ ಹೋರಾಟಗಾರರೂ ಮರುಕ್ಷಣವೇ ಪ್ರತಿಭಟನೆ ವಾಪಸ್ ಪಡೆದರು! ಅಲ್ಲಿಗೆ ದೊಡ್ಡ ನಾಟಕವೊಂದು ತೆರೆಕಂಡಿತು. ಎಲ್ಲ ಹೋರಾಟಗಾರರು ರಾತ್ರಿ 9 ಗಂಟೆಗೆ ವಿಮಾನ ಏರಿ ಜಾಗ ಖಾಲಿ ಮಾಡಿದರು.

ಎಲ್ಲ ಟಿಕೆಟ್‌ನ ವೆಚ್ಚ ಭರಿಸಿದ್ದು ಮಾತ್ರ ಎನ್‌ಜಿಒಗಳು. ಎಲ್ಲಿಯ ರೈತರು, ಎಲ್ಲಿಯ ಎನ್‌ಜಿಒ ಹಣ? ಇವರ ನಾಟಕ ನೋಡಿ ಹೇಗಿದೆ ಎಂದು, ಬರುವಾಗ ರೈಲಿನಲ್ಲಿ ಬಂದರು, ಹೋಗುವಾಗ ವಿಮಾನ. ಇಲ್ಲಿ ಒಂದು ವಿಚಾರ ಸ್ಪಷ್ಟ: ಬರುವಾಗ ಕೆಲಸ ಆಗಬೇಕಿತ್ತು. ಅದಕ್ಕಾಾಗಿ ಬಡವರ ರೀತಿಯಲ್ಲಿ ಬಂದರು. ಹೋಗುವಾಗ ಮೋದಿ ಹೆಸರಿಗೆ ಎಷ್ಟು ಮಸಿ ಬಳಿಯಬೇಕಿತ್ತೋ, ಮಾಧ್ಯಮ ಪ್ರಚಾರ ಪಡೆದುಕೊಳ್ಳ ಬೇಕಿತ್ತೋ ಅವೆಲ್ಲವನ್ನೂ ಪಡೆದಾಯಿತು. ಇನ್ನು ಯಾರಿಗೂ ಆಗಬೇಕಾದ್ದೇನೂ ಅಲ್ಲ. ವಿಮಾನ ಏರಿ ಹಾರಿದರು. ಡ್ರಾಮಾ ಮಾಡಿದ್ದಕ್ಕೆ ಒಳ್ಳೆಯ ಬಕ್ಷೀಸು, ವಿಮಾನ ಪ್ರಯಾಣ, ಹೈಫೈ ಊಟ, ಮೋದಿ ಸರಕಾರಕ್ಕೊಂದು ಗೂಟ! ಇದು ತಮಿಳುನಾಡು ನಾಡಿನ ಮಿಷನರಿ ರೈತರ ಕಥೆ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya