‘ಮೋದಿ ಸರಿಯಾಗ್ ಕೊಟ್ರು ಸಾರ್!’

ಮೊನ್ನೆ ಒಂದು ಘಟನೆ ನಡೆಯಿತು. ನಾನು ಸಹಜವಾಗಿ ಆಟೋ ಅಥವಾ ಕ್ಯಾಬ್‌ಗಳಲ್ಲಿ ಪ್ರಯಾಣ ಮಾಡುವಾಗ ಡ್ರೈವರ್‌ಗಳನ್ನು ಮಾತಾಡಿಸುವ ಅವಕಾಶ ಸಿಕ್ಕರೆ ಬಿಡುವುದಿಲ್ಲ. ರಾಜಕೀಯ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಜನರು ಏನಂತಾರೆ ಎಂದು ತಿಳಿದುಕೊಳ್ಳುವ ಹುಚ್ಚು ಕುತೂಹಲ. ಇನ್ನೂ ಹೆಚ್ಚಾಗಿ ಡ್ರೈವರ್‌ಗಳು ವಿವಿಧ ಪ್ರದೇಶಗಳನ್ನು ಸುತ್ತಿ ಹಲವು ಬಗೆಯ ಜನರ ಜತೆ ವ್ಯವಹರಿಸುವುದರಿಂದ, ಸಾಕಷ್ಟು ಸಣ್ಣ ಸಣ್ಣ ಸಮಸ್ಯೆಗಳ ಬಗ್ಗೆ ಚೆನ್ನಾಗಿಯೇ ತಿಳಿದುಕೊಂಡಿರುತ್ತಾರೆ.narendra modi - PTI_1_1_0_1_0_1_0

ಮೊನ್ನೆ ನನ್ನ ಮನೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಾಣಕ್ಕೆ ನನ್ನನ್ನು ಕರೆದುಕೊಂಡು ಹೋಗಲು ಬಂದ ಡ್ರೈವರ್ ಹೆಸರು ಮಹಮದ್ ಅಲಿ. ಆತ ಬಂದಾಗ ಬೆಳಗಿನ ಜಾವ ನಾಲ್ಕು ಗಂಟೆಯಾಗಿತ್ತು. ಮಾತಾಡುವುದಕ್ಕೆ ಏನೂ ತೋಚದೆ ನಾನು ಸುಮ್ಮನೆ ಕುಳಿತಿದ್ದೆ. ದಾರಿಯಲ್ಲಿ ಸಾಗುವಾಗ no cash ಎಂದು ಬರೆದಿದ್ದ ಎಟಿಎಂಗಳನ್ನು ನೋಡಿ, ನೋಟುಗಳ ಅಮಾನ್ಯದ ಬಗ್ಗೆ ಅವರೇ ಮಾತು ಶುರು ಮಾಡಿದರು. ‘ಏನ್ ಸಾರ್ ಮೋದಿ ತೆಗೆದುಕೊಂಡ ಈ ನಿರ್ಧಾರದಿಂದ ಎಲ್ಲರಿಗೂ ಕಷ್ಟ ಆಗಿದೆ’ ಎಂದು. ನಾನೂ ಸುಮ್ಮನೆ ಇವರ ಬಳಿ ಬೆಳಗ್ಗೆ ಬೆಳಗ್ಗೆ ಏನು ಮಾತಾಡುವುದು ಎಂದು ‘ಹೌದು ಸಾರ್’ ಎಂದು ಸುಮ್ಮನಾದೆ. ಕೊನೆಗೆ ಅವರೇ ಮಾತು ಮುಂದುವರಿಸಿ, ‘ಅಲ್ಲ ಸಾರ್ ಇದ್ರಿಂದ ಬಡವ್ರಿಗೆ ತೊಂದರೆ ಆಗಿರಬಹುದು, ಆದರೆ ಕಳ್ ನನ ಮಕ್ಳು ಬ್ಲ್ಯಾಕ್ ಮನಿ ಇಟ್ಟ ರಾಜಕಾರಣಿಗಳು, ಉದ್ಯಮಿಗಳೆಲ್ಲರೂ ಸಿಕ್ಕಾಕ್ಕೊಂಡ್ರು ನೋಡಿ ಅದೇ ಖುಷಿ. ಎರಡು ದಿನದ ಹಿಂದೆ ಒಂದ್ ಚಾನೆಲ್ ನೋಡುತ್ತಿದ್ದೆ, ಅದ್ರಲ್ಲಿ ಕರ್ನಾಟಕದ ರಾಜಕಾರಣಿಯೊಬ್ಬ ಮೋದಿ ಮಾಡಿದ್ದು ಸರಿ ಇದೆ ಆದ್ರೆ ಸ್ವಲ್ಪ ಟೈಮ್ ಕೊಡಬೇಕಿತ್ತು ಎಂದು ಹೇಳುವಾಗ ಅವರ ಮುಖ ಎಷ್ಟು ಕಪ್ಪಾಗಿತ್ತು ಎಂದು ನೋಡಿದಾಗಲೇ ನಮಗೆ ತಿಳಿಯುತ್ತೆ. ಅವರ ಬಳಿ ಎಷ್ಟು ಹಣ ಇತ್ತು ಎಂದು. ನಮಗೆ ನಮ್ ದುಡ್ಡನ್ನ ಬ್ಯಾಂಕ್‌ಗೆ ಹಾಕೋದೊಂದೇ ಸಮಸ್ಯೆ, ಆದರೆ ಶ್ರೀಮಂತ್ರಿಗೆ ಇರೋ ದುಡ್ಡನ್ನ ಕಳ್ಕೊಳಕ್ಕೋ ಆಗದೇ, ಬೇರೆಯವರಿಗೆ ಕೊಡುವುದಕ್ಕೂ ಆಗದೇ, ಕೊನೆಗೆ ಮನೆಯಲ್ಲೂ ಇಟ್ಕೊಳ್ಳಕ್ಕಾಗದೇ ಪರದಾಡುತ್ತಿದ್ದಾರೆ.

ಸರಿಯಾಗ್ ಇಟ್ಟಿದಾರೆ ನೋಡಿ ಮೋದಿ ಇವ್ರಿಗೆಲ್ಲ.. ನಾನು ಮೊನ್ನೆ ನ್ಯೂಸ್ ಚಾನಲ್ಲಿನಲ್ಲಿ ನೋಡುತ್ತಿದ್ದೆ, ಎಷ್ಟು ದುಡ್ಡನ್ನು ಮೋರಿಯೊಳಗೆ ಬಿಸಾಕಿದಾರೆ ಗೊತ್ತಾ ಸಾರ್? ಬೇರೆ ಯಾರಾದ್ರೂ ತೆಗೆದುಕೊಂಡು ಬಿಡುತ್ತಾರೆ ಎಂದು ನೋಟುಗಳನ್ನೆಲ್ಲ ಕಟ್ ಮಾಡಿ ಬಿಸಾಡಿದ್ದಾರೆ ಸ್ವಾರ್ಥಿಗಳು. ಅದನ್ನೇ ಬಡವ್ರಿಗೆ ಕೊಟ್ಟಿದ್ರೆ? ಇವ್ರ ಹೆಸ್ರೇಳ್ಕೊಂಡ್ ಊಟ ಮಾಡ್ತಿದ್ರಲ್ಲ ಸಾರ್?! ಸರ್ಯಾಗ್ ಮಾಡಿದ್ದಾರೆ ಮೋದಿ. ಸ್ವಲ್ಪ ದಿನ ತೊಂದ್ರೆ ಆಗುತ್ತೆ. ಆದ್ರೂ ಅಡ್ಜ್ಟ್ ಮಾಡ್ಕೊಳೋಣ ದೇಶಕ್ಕೋಸ್ಕರ…ಈ ಮನುಷ್ಯ ಸ್ವಲ್ಪ ವಿಚಾರಗಳನ್ನ ತಿಳಿದುಕೊಂಡ ಹಾಗಿದೆ ಎಂದು ನಾನು ಅವರನ್ನು ಮೋದಿಯ ಆಡಳಿತದ ಬಗ್ಗೆ ಅಭಿಪ್ರಾಯ ಕೇಳಿದೆ.’ಮೋದಿ ಎಷ್ಟೋ ಮಟ್ಟಿಗೆ ಸೂಪರ್ ಸಾರ್. ಆ ರಾಹುಲ್ ಗಾಂಧಿ ನೋಡಿದ್ರೆ ನಗು ಬರ್ತದೆ. ಆ ವಯ್ಯ ಪ್ರಧಾನಿ ಆಗಿದ್ರೆ ಕಥೆ ಏನು? ಅಟ್ಲೀಸ್ಟು ಮೋದಿ ಏನಾದ್ರೂ ಮಾಡ್ತಿದಾರೆ. ಆ ಮನಮೋಹನ್ ಸಿಂಗ್ ಇದ್ದಾಗ್ಲೆಲ್ಲ ದೇಶದಲ್ಲಿ ಏನಾಗ್ತಿತ್ತು ಅಂತಾನೇ ಗೊತ್ತಾಗ್ತಿರ್ಲಿಲ್ಲ ಎಂದರು.

ನನಗೂ ಕುತೂಹಲ ಹೆಚ್ಚಾಗಿತ್ತು. ಮತ್ತೊಂದು ಪ್ರಶ್ನೆ ಕೇಳಿದೆ. ಅಲ್ಲಾ ಮಹಮದ್ ಅಲಿಯವ್ರೇ ಕಾಂಗ್ರೆಸ್‌ನವರು ಮುಸ್ಲಿಮರಿಗೆ ಸಪೋರ್ಟ್ ಮಾಡ್ತಾ ಇದಾರಲ್ಲ? ನೀವ್ಯಾಕ್ ಹಿಂಗಂದ್ಬಿಟ್ರಿ? ನಿಮ್ ಸಂಘಟನೆ ಎಲ್ಲ ಅವ್ರ ಪರವೇ ಇರೋದಲ್ವಾ?’ ಎಂದೆ.
‘ಯಾವ್ ಸಂಘಟನೆ ಸಾರ್? ನನಗೆ ಒಂದರ್ಧ ಗಂಟೆ ಟೈಮ್ ಸಿಕ್ಕಿದ್ರೆ ಸಾಕು ಮಲ್ಕೊಂಡು ಬಿಡ್ತೀನಿ. ಈ ರಾಜಕಾರಣಿಗಳು ನಮ್ಮನ್ನ ಉಪಯೋಗಿಸಿಕೊಂಡರೇ ಹೊರತು, ಬೇರೆ ಏನೂ ಮಾಡಿಲ್ಲ ನಮಗಾಗಿ. ಎಲ್ಲ ಧರ್ಮದವರಿಗೂ ಅವ್ರವ್ರೇ ಸಹಾಯ ಮಾಡ್ಕೊಂಡಿದ್ದು. ರಾಜಕಾರಣಿಗಳು ಹಿಂದೂ ಮುಸ್ಲಿಂ ಅಂತ ಜಗಳ ತಂದಿಟ್ಟರೇ ಹೊರತು ಇವರ ಕೊಡುಗೆ ಬೇರೇನೂ ಇಲ್ಲ’.
ನನಗೆ ಈ ಮಾತು ಅಚ್ಚರಿ ತರಿಸಿತು. ನವೆಂಬರ್ 8ರ ರಾತ್ರಿ ಮೋದಿ ಎಸೆದ ‘ನೋಟ್ ಬಾಂಬ್’ ಕಾಳಧನ ಉಳ್ಳವರ ಪಾಲಿಗೆ ಅಟಂ ಬಾಂಬ್ ಆಗಿ ಪರಿಣಮಿಸಿತ್ತು. ಆದರೆ ಗಂಜಿ ಗಿರಾಕಿಗಳು ಒಂದೇ ಸಮನೆ ಊಳಿಡುತ್ತಿರುವ ಈ ಸಂದರ್ಭದಲ್ಲಿ ಮುಸ್ಲಿಮನೊಬ್ಬ ಹೇಳಿದ ವಿಚಾರ ನಾವೆಲ್ಲರೂ ಯೋಚನೆ ಮಾಡುವಂತೆ ಮಾಡಿದೆ.

ಇಲ್ಲಿ ಮುಸ್ಲಿಮನೇ ಏಕೆ ಎಂದು ಕೇಳಬಹುದು. ಆದರೆ, ಇಷ್ಟು ದಿನ ಆ ಹೆಸರು ಹೇಳಿಕೊಂಡೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು. ಬಸ್‌ನಲ್ಲಿ ಸೀಟು ಸಿಗದಿದ್ದರೂ ಸಾಕು, ಅಲ್ಪ ಸಂಖ್ಯಾತರಿಗೆ ತೊಂದರೆಯಾಗಿದೆ, ಮುಸ್ಲಿಮರಿಗೆ ತೊಂದರೆಯಾಗಿದೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದರು. ಈಗ ಅದೇ ಮುಸ್ಲಿಮ್ ಒಬ್ಬ, ಮೋದಿಯ ಈ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾನೆ ಎಂದರೆ, ದೇಶಕ್ಕಾಗಿ ನಾನು ಕ್ಯೂ ನಿಲ್ಲಲೂ ತಯಾರಾಗಿದ್ದೇನೆ ಎಂದರೆ, ಇಲ್ಲಿ ನಿಜಕ್ಕೂ ತೊಂದರೆಯಾಗಿರುವುದು ಯಾರಿಗೆ?

ಮೋದಿ ಈ ನಿರ್ಧಾರ ತಿಳಿಸಿದ ಎರಡು ದಿನದ ನಂತರ ಎಲ್ಲ ಬ್ಯಾಂಕ್‌ಗಳಲ್ಲೂ ನೂಕು ನುಗ್ಗಲು ಹೆಚ್ಚಾಗಿತ್ತು. ನಾನು ಅಲ್ಲಿಗೂ ಹೋಗಿ ಜನರ ಅಭಿಪ್ರಾಯವನ್ನು ಕೇಳಿ ಅದನ್ನು ವಿಡಿಯೊ ಸಹ ಮಾಡಿದ್ದೇನೆ. ನಾನು ವಿಡಿಯೊ ಮಾಡುವಾಗ, ಅವರೆಲ್ಲರೂ ಬಿಸಿಲಿನಲ್ಲಿ ಬೇಯುತ್ತಿದ್ದರು. ಆದರೂ ನನ್ನ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೋದಿ ಮಾಡಿದ್ದು ಸರಿಯಾಗೇ ಇದೆ. ನಾವು ಕ್ಯೂನಲ್ಲಿ ನಿಲ್ಲಲು ಸಮಸ್ಯೆಯೇನಿಲ್ಲ. ಜಿಯೋ ಸಿಮ್ ತೆಗೆದುಕೊಳ್ಳುವಾಗ ನಾವು ಕ್ಯೂನಲ್ಲಿ ನಿಂತಿದ್ದೇವೆ, ಸ್ಟಾರ್ ನಟರ ಸಿನಿಮಾ ನೋಡುವುದಕ್ಕೆ ಹೋದಾಗ ನಾವು ಸರತಿ ಸಾಲಿನಲ್ಲಿ ನಿಂತು ಪೊಲೀಸರ ಹೊಡೆತ ತಿಂದಿದ್ದೇವೆ. ಆದರೆ, ನಮ್ಮ ಒಳ್ಳೇದಕ್ಕೇ ನಮಗೆ ನಿಲ್ಲಕ್ಕೆ ಆಗುವುದಿಲ್ಲ ಎಂದರೆ ಹೇಗೆ? ಮೋದಿ ನಿರ್ಧಾರ ಸರಿ ಇದೆ’ ಎಂದಿದ್ದಾರೆ.

‘ಇಂಡಿಯಾ ಟುಡೆ’ಯವರ ವಿಡಿಯೊ ಒಂದು ನಿನ್ನೆ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿತ್ತು. ಅದರಲ್ಲಿ ರಾಜ್‌ದೀಪ್ ಸರ್ದೇಸಾಯಿ ವೃದ್ಧೆಯೊಬ್ಬರ ಬಳಿ ಒಬ್ಬ ಹಿರಿಯ ನಾಗರಿಕರಾಗಿ ಹೇಳಿ, ನಿಮಗೆ ಯಾವ್ಯಾವ ತೊಂದರೆಯಾಗುತ್ತಿದೆ?’ ಎಂದು ಕೇಳಿದಾಗ, ಆ ಅಜ್ಜಿ ಹೇಳಿದ್ದು – ‘ನನಗೇನೂ ತೊಂದರೆಯಾಗುತ್ತಿಲ್ಲ. ಮೋದಿ ತೆಗೆದುಕೊಂಡ ಈ ನಿರ್ಧಾರ ಸರಿಯಾಗೇ ಇದೆ’ ಎಂದು. ಇನ್ನೂ ಕೆದಕಬೇಕೆಂದು, ಇನ್ನೊಬ್ಬ ವೃದ್ಧರ ಬಳಿ ಹೋಗಿ, ನಿಮಗೇನು ತೊಂದರೆ ಆಗ್ತಿದೆ?’ ಎಂದು ಕೇಳಿದಾಗ ಅವರು ‘ನಮಗೇನು ತೊಂದರೆ ಆಗ್ತಿಲ್ಲ, ನಾವು ಬಹಳ ಖುಷಿಯಾಗೇ ಇದ್ದೇವೆ’ ಎಂದು ಹೇಳಿದರು. ಇನ್ನೂ ಹೆಚ್ಚು ಕೆದಕಿ ‘ನೀವೆಲ್ಲ ನಿಂತಿದ್ದೀರಿ ಸರಿ, ಬಡವರಿಗೆ ತೊಂದರೆಯಾಗಿದೆ’ ಎಂದು ಹೇಳಿದ್ದಕ್ಕೆ, ‘ನೋಡಿ, ನೀವು ಮತ್ತೆ ಮತ್ತೆ ಕೆದಕಬೇಡಿ. ಇಲ್ಲಿ ಸಾಲಿನಲ್ಲಿ ನಿಂತವರಲ್ಲಿ ಬಡವರಿಂದ ಹಿಡಿದು ಮಧ್ಯಮ ವರ್ಗದವರೆಗೆ ಎಲ್ಲರೂ ಇದ್ದಾರೆ. ಇಲ್ಲಿ ಯಾರೂ ಶ್ರೀಮಂತರಿಲ್ಲ. ನಿಮಗೆ ಇಲ್ಲಿರುವವರ ಯಾರದ್ದೇ ಅಭಿಪ್ರಾಯ ಕೇಳಿದರೂ, ಒಂದೇ ಉತ್ತರ ಬರುತ್ತಿದೆಯಲ್ಲ’ ಎಂದಾಗ ರಾಜ್‌ದೀಪ್ ಸುಮ್ಮನಾಗುತ್ತಾರೆ. ಇದು ಬೇರೆ ರಾಜ್ಯದ ಉದಾಹರಣೆ. ಅಸಲಿಗೆ ನೀವು ಯಾರನ್ನೇ ಕೇಳಿದರೂ ಅವರೆಲ್ಲರೂ ಕೊಡುತ್ತಿರುವ ಉತ್ತರ ಒಂದೇ ಒಂದು. ‘ಮೋದಿ ನಿರ್ಧಾರ ಸರಿಯಾಗಿದೆ’ !

ಆದರೆ, ಮೋದಿಯ ಈ ನಿರ್ಧಾರದಿಂದ ನಿಜಕ್ಕೂ ತೊಂದರೆಯಾಗಿರುವುದು ಕಾಳಧನ ಉಳ್ಳವರಿಗೆ, ರಾಜಕಾರಣಿಗಳಿಗೆ, ಇಂಥ ವರ್ಗದಿಂದ ಹಣ ತೆಗೆದುಕೊಂಡು ಕಾಲಕಾಲಕ್ಕೆ ಟೌನ್‌ಹಾಲ್ ಮುಂದೆ ದನದ ಮಾಂಸ ತಿನ್ನುತ್ತಾ ಹೋರಾಟ ಮಾಡುವವರಿಗೆ ಮತ್ತು ಗಂಜಿಕೇಂದ್ರದ ಸಾಹಿತಿಗಳಿಗೆ, ಕನ್ನಡದ ಒಂದು ಸಾಲಿಗೂ ಲಘು-ಗುರು ಹಾಕಲು ಬರದಿದ್ದರೂ ಕವಯತ್ರಿ ಎಂದು ಗುರುತಿಸಲಿಚ್ಛಿಸಿಕೊಳ್ಳುವವರಿಗೆ ಮತ್ತು ಬೆಂಕಿಪಟ್ನವನ್ನೂ ಮಾರಲಾಗದ ನಿರ್ದೇಶಕರಿಗೆ. ಇದೇ ಕಾರಣಕ್ಕಾಗಿ, ಎಲ್ಲರೂ ದಿನಕ್ಕೊಂದು ಕತೆಗಳನ್ನು ಹಾಕಿಕೊಂಡು, ‘ನಮ್ಮ ದೇಶದಲ್ಲಿ ಬಡವರೆಲ್ಲರೂ ಮೋದಿಯಿಂದ ಸಾಯುತ್ತಿದ್ದಾರೆ, ಹೆಂಗಸರು ಸಾಸಿವೆ ಡಬ್ಬದಲ್ಲಿ ಕೂಡಿಟ್ಟ ಹಣವನ್ನು ಮೋದಿ ಕೊಳ್ಳೆ ಹೊಡೆದಿದ್ದಾರೆ’ ಎನ್ನುತ್ತಿದ್ದಾರೆ.

ಸ್ವಲ್ಪ ಆಲೋಚಿಸಿ, ಮಹಿಳೆಯರು ಗಳಿಸಿರುವ ಹಣದಲ್ಲಿ 2.5ಲಕ್ಷದವರೆಗೂ ತೆರಿಗೆಯಿಲ್ಲ ಎಂದು ಹೇಳಿದ್ದಾರೆ. ನನ್ನ ಪ್ರಶ್ನೆಯೇನೆಂದರೆ, ಯಾವ ಮಹಿಳೆ ಸಾಸಿವೆ ಡಬ್ಬದಲ್ಲಿ ಎರಡೂವರೆ ಲಕ್ಷವನ್ನಿಟ್ಟಿರುತ್ತಾಳೆ? ಹಾಗೆ ಇಟ್ಟರೆ, ಸಾಸಿವೆಯನ್ನಿಡಲು ನಿಜಕ್ಕೂ ಆ ಡಬ್ಬಿಯಲ್ಲಿ ಜಾಗವಿರುತ್ತದಾ? ಇತ್ತೀಚೆಗೆ ಫೇಸ್‌ಬುಕ್, ವಾಟ್ಸ‌ಆ್ಯಪ್ ಮತ್ತು ಇತರ ಜಾಲತಾಣಗಳಲ್ಲಿ ಇಂಥ ಮೂರ್ಖರ ಗುಂಪೇ ಮತ್ತೊಂದು ಸುದ್ದಿ ಹಬ್ಬಿಸಿದೆ. ಅದೇನೆಂದರೆ ಮೋದಿಯ ಈ ನಿರ್ಧಾರ ಅಂಬಾನಿಗೆ ಮೊದಲೇ ಗೊತ್ತಿದ್ದು, ಅವರು ಜಿಯೋ ನೆಟ್‌ವರ್ಕ್ ಸ್ಥಾಪಿಸಿ ಉಚಿತ ಇಂಟರ್‌ನೆಟ್ ಮತ್ತು ಕರೆಗಳನ್ನು ಕೊಡುತ್ತಿದ್ದಾರೆ. ಮುಂದೆ ಅದಕ್ಕೆ ಕಡಿಮೆ ದರವನ್ನು ನಿಗದಿಪಡಿಸಿ ಅದರಿಂದ ಬರುವ ಹಣವನ್ನೆಲ್ಲ ವೈಟ್ ಮಾಡಿಕೊಳ್ಳುತ್ತಾರೆ ಎನ್ನುತ್ತಿದ್ದಾರೆ. ಈ ಕತೆ ಎಷ್ಟು ಬಾಲಿಶವಾಗಿದೆಯೆಂದರೆ, ರಾಜ್ಯದ ಕೆಲ ಮಂತ್ರಿಗಳ ಸಲಹೆಗಾರರ ಎಡಪಂಥೀಯ ಮೂರ್ಖ ಶಿಖಾಮಣಿಗಳೆಲ್ಲ ಒಂದು ಬಾರಲ್ಲಿ ಕುಳಿತು ಕಡಲೇಕಾಯಿ ತಿನ್ನುತ್ತಾ ಹೆಣೆದ ಕತೆ ಎಂಬುದು ಆರಾಮಾಗಿ ತಿಳಿದುಬಿಡುತ್ತದೆ. ನಾನು ಈ ವಿಷಯದ ಬಗ್ಗೆ ನಿಖರ ಮಾಹಿತಿ ತಿಳಿಯಲು ನವಿ ಮುಂಬೈನಲ್ಲಿರುವ 550 ಎಕರೆಯಲ್ಲಿ ಸ್ಥಾಪಿಸಿರುವ ಜಿಯೋ ಪಾರ್ಕ್‌ಗೆ ಮೊನ್ನೆ ಹೋಗಿದ್ದೆ. ಆ ಟೆಕ್ ಪಾರ್ಕ್‌ನಲ್ಲಿರುವ ಕಟ್ಟಡಗಳು ಎಷ್ಟು ಬೃಹದಾಕಾರದಲ್ಲಿತ್ತು ಎಂದರೆ, ಎಷ್ಟು ಸವಿಸ್ತಾರವಾಗಿ ಕಟ್ಟಿದ್ದಾರೆಂದರೆ ಅಂಥ ಒಂದೊಂದು ಕಟ್ಟದ ನಿರ್ಮಾಣಕ್ಕೆ ಕನಿಷ್ಠ ಹತ್ತತ್ತು ತಿಂಗಳಾದರೂ ಬೇಕು.

ಕೊನೆಗೆ ವಿಚಾರಿಸಿದಾಗ ಆ ಜಾಗವನ್ನು ಮುಕೇಶ್ ಅಂಬಾನಿಯವರು 2005ರಲ್ಲೇ ಖರೀದಿ ಮಾಡಿದ್ದರು. ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಷನ್‌ಗೆ ಸ್ಪರ್ಧೆ ನೀಡಲು ಒಂದು ಜಿಯೋ ನೆಟ್‌ವರ್ಕ್ ಸ್ಥಾಪಿಸಲು ಅಂದೇ ನಿರ್ಧರಿಸಲಾಗಿತ್ತು. ಇದಕ್ಕೆ ಬೇಕಾದ ಪ್ಲಾನಿಂಗ್ ಅಂದು ಶುರು ಮಾಡಿದ್ದರಿಂದಲೇ ಇಲ್ಲಿಯವರೆಗೆ ಬಂದು ನಿಂತಿದ್ದಾರೆ. ಮೋದಿಯವರು ಪ್ರಧಾನಿಯಾಗುತ್ತಾರೆ, ಅವರು ಐನೂರು ಸಾವಿರ ಮುಖಬೆಲೆಯ ನೋಟ್‌ಗಳನ್ನು ಬ್ಯಾನ್ ಮಾಡುತ್ತಾರೆ ಎಂದು ಮುಕೇಶ್ ಅಂಬಾನಿಯವರು 2005ರಲ್ಲೇ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಜಾಗ ಖರೀದಿಸಿ ಕೆಲಸ ಶುರು ಮಾಡಿದ್ದಾರೆ ಎಂದರೆ, ಮುಕೇಶ್ ಅಂಬಾನಿಯವರು ಜಿಯೋ ಸ್ಥಾಪಿಸುವುದಕ್ಕಿಂತ ಜ್ಯೋತಿಷ್ಯ ಹೇಳಿದ್ದಿದ್ದರೆ, ಯಾವ ಹೂಡಿಕೆಯೂ ಇಲ್ಲದೆ, ಲಾಸ್ ಸಹ ಆಗದೇ ದೊಡ್ಡ ಶ್ರೀಮಂತರಾಗುತ್ತಿದ್ದರೇನೋ! ಸರಿಯಾಗಿ ಕಥೆ ಹೆಣೆಯುವುದಕ್ಕೂ ಬರದೇ ಇರುವವರ ಜತೆ ಬಾರಲ್ಲಿ ಕುಳಿತರೆ ಬರುವ ಐಡಿಯಾಗಳೇ ಇಂಥವು.

ಆರ್ಥಿಕತೆಯ ಬಗ್ಗೆ ನಯಾ ಪೈಸೆಯೂ ಗೊತ್ತಿರದ ರಾಹುಲ್ ಗಾಂಧಿಯೂ ಮೋದಿಯ ನಿರ್ಧಾರವನ್ನು ವಿರೋಧಿಸಿ, ಐನೂರು ಮತ್ತು ಸಾವಿರದ ನೋಟುಗಳಿಲ್ಲದೆ ಬಡವರಿಗೆ ತೊಂದರೆಯಾಗುತ್ತಿದೆ. ನಾವು ಸಹ ಇಪ್ಪತ್ತು ಪೈಸದಿಂದ 20 ರುಪಾಯಿಯವರೆಗೂ ನೋಟುಗಳನ್ನು ಬದಲಾಯಿಸಿದ್ದೇವೆ ಎಂದಿದ್ದಾರೆ. ಆದರೆ ಪುಡಿಗಾಸನ್ನು ಬದಲಾವಣೆ ಮಾಡಿದ ಕಾಂಗ್ರೆಸ್‌ನಿಂದ ಯಾವ ಶ್ರೀಮಂತನ ಹಣಕ್ಕೂ ಹೊಡೆತ ಬೀಳಲಿಲ್ಲ. ಆಗ ಯಾರೂ ಊಳಿಡಲಿಲ್ಲ. ಕಪ್ಪು ಹಣ ಕೊಡುವವನು ಇಪ್ಪತ್ತು ರುಪಾಯಿ ನೋಟಲ್ಲಿ ಕೋಟ್ಯಂತರ ರುಪಾಯಿ ಕೊಡುತ್ತಾನೋ ಅಥವಾ ಸಾವಿರದ ನೋಟಲ್ಲೋ? ಸರಕಾರಿ ಆಫೀಸುಗಳಲ್ಲಿ ಇಪ್ಪತ್ತು ರುಪಾಯಿ ಲಂಚ ತೆಗೆದುಕೊಳ್ಳುವ ಬೆಪ್ಪತಕಡಿ ಯಾರಿದ್ದಾರೆ ಹೇಳಿ? ಅಷ್ಟೂ ತಿಳಿಯದ ಮುಗ್ಧ ರಾಹುಲ್, ಆರ್ಥಿಕತೆಯ ಬಗ್ಗೆ ಮಾತಾಡುವುದಕ್ಕೆ ಬಿಟ್ಟವರ್ಯಾರು? ಸೋನಿಯಾ ಗಾಂಧಿಯಾದರೂ ಬುದ್ಧಿ ಹೇಳಬಾರದಿತ್ತೇ?
ಅದಿರಲಿ, ನೋಟ್ ಬ್ಯಾನ್ ಮಾಡಿದ್ದರಿಂದ ಏನೇನು ಪರಿಣಾಮಗಳಾಗಿವೆ ಎಂದು ತಿಳಿದರೆ ನೀವು ಬೆರಗಾಗುತ್ತೀರಿ. ರಾಜ್ಯ ಸರಕಾರ ಜನರ ವಿರೋಧದ ನಡುವೆಯೂ ನಿರ್ಮಿಸಲು ನಿರ್ಧರಿಸಿರುವ ಸ್ಟೀಲ್ ಫ್ಲೈ ಓವರ್ ಇಂದ ಹಣ ಹೊಡೆಯುವ ಪ್ಲಾನ್ ಇದೆ ಮತ್ತು ಇದರಿಂದ ಬರುವ ಹಣ ಉತ್ತರಪ್ರದೇಶ ಚುನಾವಣೆಗೆ ಬಳಕೆಯಾಗುತ್ತದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿತ್ತು. ಅದಕ್ಕೆ ಸರಿಯಾಗಿ ಸರಕಾರ ಸಹ ಯೋಜನೆ ಕೈಬಿಡುವ ಮಾತೇ ಇಲ್ಲ ಎಂದು ಹೇಳಿತ್ತು. ಆದರೆ ನೋಟ್ ಬ್ಯಾನ್ ಆದ ಮೇಲೆ, ಸ್ಟೀಲ್ ಫ್ಲೈ ಓವರ್ ಬಗ್ಗೆ ಸರಕಾರ ಏನೂ ಮಾತಾಡುತ್ತಲೇ ಇಲ್ಲ. ಏಕೆ ಈಗ ಸ್ಟೀಲ್ ಫ್ಲೈ ಓವರ್ ಎಲ್ಲೂ ಸದ್ದೇ ಮಾಡುತ್ತಿಲ್ಲ ?

ಜಮ್ಮು ಮತ್ತು ಕಾಶ್ಮೀರದ ಒಂದು ಭಾಗದಲ್ಲಿ ಪ್ರತೀ ಶುಕ್ರವಾರ ನಮಾಜ್ ಮುಗಿದ ಮೇಲೆ ಕಲ್ಲು ತೂರಾಟ ಕಾಮನ್ ಆಗಿತ್ತು. ಇದಕ್ಕೆ ಗಿಲಾನಿ, ಒಬ್ಬರಿಗೆ 500 ರು. ಕೊಡುತ್ತಿದ್ದರು ಎಂದು ಕಲ್ಲು ತೂರಾಟ ಮಾಡುವವನೇ ಹೇಳಿದ್ದ. ಆದರೆ ಮೊನ್ನೆ ನಮಾಜ್ ನಡೆದ ಮೇಲೆ ಒಂದೇ ಒಂದೂ ಕಲ್ಲನ್ನು ಯಾರೂ ಎಸೆಯಲಿಲ್ಲ. ಮೋದಿಯ ಈ ನಿರ್ಧಾರದಿಂದ ಜನರಿಗೆ ಆಗಿರುವುದು ತೊಂದರೆಯೋ? ಉಪಯೋಗವೋ? ಒಂದು ವೇಳೆ ನೂರು ರುಪಾಯಿ ನೋಟನ್ನು ಬ್ಯಾನ್ ಮಾಡಿದ್ದಿದ್ದರೆ, ಆಗ ಸಾಮಾನ್ಯ ಜನರಿಗೆ ಮತ್ತು ದೈನಂದಿನ ವ್ಯವಹಾರಗಳಿಗೆ ತೊಂದರೆಯಾಗುತ್ತಿತ್ತು ಎಂದು ಒಪ್ಪೋಣ. ದೊಡ್ಡ ನೋಟುಗಳನ್ನು ಬ್ಯಾನ್ ಮಾಡಿರುವುದರಿಂದ ಈಗ ತೊಂದರೆಯಾಗಿರುವುದು ರಾಜಕಾರಣಿಗಳಿಗೆ, ಅವಾರ್ಡ್ ವಾಪಸಿ ಸಾಹಿತಿಗಳಿಗೆ ಮತ್ತು ಬಿಳಿ ಮಂಡೆಯ ಗಂಜಿಜೀವಿಗಳಿಗೆ ಮಾತ್ರ. ಅರಚಾಡುತ್ತಿರುವುದೂ ಅವರೇ… ಬ್ಯಾಂಕ್ ಮುಂದೆ ಸಾಲಿನಲ್ಲಿ ನಿಂತವರಿಗೇ ಇಲ್ಲದ ನೋವು ಸಾಸಿವೆ ಡಬ್ಬದ ಬುದ್ಧಿಜೀವಿಗಳಿಗ್ಯಾಕೆ?

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಒಂದು ಜೋಕು ಈ ಸಮಯಕ್ಕೆ ಬಹಳ ಆಪ್ತ ಮತ್ತು ಸೂಕ್ತವಾಗಿದೆ.
at the time of constipation, whole body with all force tries to push it out.but it the asshole which complains about pain.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya