ಆರಕ್ಷಕರು ಕೈಚೆಲ್ಲಿದ್ದಕ್ಕೇ ಅಲ್ಲವೇ ಗೋರಕ್ಷಕರು ಹುಟ್ಟಿದ್ದು?

18F0D2E (1)

ಭಾರತದ ಆ ಊರೆ೦ದರೆ ಎಲ್ಲರೂ ಹೆದರಿಕೊಳ್ಳುತ್ತಿದ್ದರು. “ಯಾಕೆ ಬೇಕಪ್ಪಾ ಆ ಊರಿನ ಸಹವಾಸ’ ಎ೦ದು ನಮ್ಮ ಹಿ೦ದೂಗಳೇ ದೂರವಿದ್ದರು. ಅಲ್ಲಿ ನಿತ್ಯವೂ ಮುಸಲ್ಮಾನರಿ೦ದ ಗೋವುಗಳು ಹತ್ಯೆಯಾಗುತ್ತಿತ್ತು. ಅದನ್ನು ನೋಡಿಯೂ ಹಿ೦ದೂಗಳು ಸುಮ್ಮನಿರಬೇಕಿತ್ತು. ಗೋವಿನ ಪ್ರಾಣ ಬಿಡಿ, ನಮ್ಮ ಪ್ರಾಣವನ್ನಾದರೂ ಉಳಿಸಿಕೊಳ್ಳೋಣ ಎ೦ದು ಎಲ್ಲರೂ ಸುಮ್ಮನಿದ್ದರು. ಒ೦ದು ದಿನ ಆ ಊರಿಗೆ, “ಗೋಹತ್ಯೆ ನಿಲ್ಲಿಸಿ’ ಎ೦ಬ ಖಡಕ್ ಆಜೆಞ ಬ೦ದಿತ್ತು ರಾಜನಿ೦ದ. ಅಲ್ಲಿನ ಗೋ ಹ೦ತಕರು ಒಪ್ಪದೇ ಮು೦ದುವರಿಸಿದಾಗ, ಅವರಿದ್ದಲ್ಲಿಯೇ ಬ೦ದ ರಾಜ, “ಗೋವಿನ ಹತ್ಯೆ ಮಾಡುವ ನಿನ್ನ ಈ ಕೈಗಳನ್ನೇ ಕತ್ತರಿಸಿಬಿಡುತ್ತೇನೆ’ ಎ೦ದು ಆ ಕ್ಷಣವೇ ಕಗಳನ್ನು ಕತ್ತರಿಸಿಬಿಟ್ಟ. ಆ ಮೂಲಕ ಹಿ೦ದೂಗಳಿಗೆ ಆತ್ಮಬಲ ತು೦ಬಿದ್ದ. ಆ ರಾಜನೇ ಪರಾಕ್ರಮಿಯಾದ ಶಿವಾಜಿ ಮಹಾರಾಜ.

     ಈಗ ಎಲ್ಲರಿಗೂ ಒ೦ದು ಅನುಮಾನ ಮೂಡಬಹುದು, ಅಲ್ಲಿದ್ದ ಜನರೇಕೆ ಗೋವಿನ ರಕ್ಷಣೆ ಮಾಡಲಿಲ್ಲ? ಶಿವಾಜಿಯೇ ಏಕೆ ಬರಬೇಕಿತ್ತು? ರಾಜನಾದ ಶಿವಾಜಿಗೂ ಗೋವಿನ ರಕ್ಷಣೆಗೂ ಏನು ಸ೦ಬ೦ಧ? ಏಕೆ೦ದರೆ, ಯಾವುದೇ ಜನರ ಭಾವನೆಗಳಿಗೆ ಧಕ್ಕೆ ಆಗದ೦ತೆ ನೋಡಿಕೊಳ್ಳುವುದು ರಾಜನ ಕತ೯ವ್ಯ. ಸಹಜವಾಗಿ ಗೋವಿನ ರಕ್ಷಣೆಯೂ ಅವನದ್ದೇ ಆಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

      ಮೊನ್ನೆ ಪ್ರಧಾನಿ ನರೇ೦ದ್ರ ಮೋದಿ ಮಾತನಾಡುತ್ತಾ, “ದೇಶದಲ್ಲಿ 70-80 ಪಸೆ೯೦ಟ್ ಗೋರಕ್ಷರು ನಕಲಿ’ ಎ೦ದಿದ್ದಾರೆ. ಮೋದಿ ಯಾವ ಸಮೀಕ್ಷೆಯ ಆಧಾರದ ಮೇಲೆ ಈ ಮಾತನ್ನು ಹೇಳಿದರೋ ಗೊತ್ತಿಲ್ಲ. ಆದರೆ, ಗೋರಕ್ಷಕರು ಎ೦ಬ ಪದ ಮತ್ತೆ ಬಳಕೆಯಾದಾಗ ಶಿವಾಜಿಯ ನೆನಪಾಯಿತು. ಅ೦ದು ಶಿವಾಜಿ ಮಾಡದ ಕೆಲಸವನ್ನು ಇ೦ದು ಹಿ೦ದೂ ಸ೦ಘಟನೆಗಳು ಮಾಡುತ್ತಿವೆ. ಅಥಾ೯ತ್, ಗೋರಕ್ಷಣೆಯ ಕೆಲಸ ಪೊಲೀಸರದ್ದಾಗಿತ್ತು. ಅವರು ಆ ಕೆಲಸ ಸರಿಯಾಗಿ ಮಾಡದ್ದಕ್ಕೆ ಇ೦ದು ಜನರೇ ತಮಗೆ ತಾವು ನ್ಯಾಯ ಒದಗಿಸಿಕೊಳ್ಳುತ್ತಿದ್ದಾರೆ. ಹೀಗೆ೦ದ ಮಾತ್ರಕ್ಕೆ ಹಿ೦ದೂ ಸ೦ಘಟನೆಗಳು ಮಾಡಿದ್ದೆಲ್ಲ ಸರಿ, ಇನ್ನು ನಾಲ್ಕು ಹೊಡೆಯಬೇಕಿತ್ತು ಎನ್ನುವುದು ನನ್ನ ವಾದವಲ್ಲ. ಯಾರೊಬ್ಬರ ಮೇಲೂ ಹಲ್ಲೆ ಮಾಡುವುದು ಕಾನೂನು ಬಾಹಿರ ಎ೦ದು ಗೋರಕ್ಷಕರಿಗೆ ತಿಳಿ ಹೇಳಬೇಕು. ಇಷ್ಟಕ್ಕೇ ಮುಗಿಯುವುದಿಲ್ಲ. ಹಲ್ಲೆ ಮಾಡುವ ಪ್ರಸ೦ಗ ಬರದೇ ಇರುವ ಹಾಗೆ ಗೋವು ಕಳ್ಳರನ್ನು ಹಿಡಿದು ಜೈಲಿಗಟ್ಟಬೇಕು. ಒ೦ದು ವ್ಯವಸ್ಥೆ ಸರಿಪಡಿಸುವುದಕ್ಕೆ ಇಷ್ಟೆಲ್ಲ ದೊಡ್ಡ ಕೆಲಸಗಳಿರುವಾಗ, ಮೋದಿ ನೇರವಾಗಿ 70ರಿ೦ದ 80 ಪಸೆ೯೦ಟ್ ಗೋರಕ್ಷರು ನಕಲಿ ಎ೦ದು ಹೇಗೆಹೇಳಿಬಿಟ್ಟರು?

     ಅಸಲಿಗೆ ಈಗೀಗ ಗೋರಕ್ಷಕರ ಆಭ೯ಟ ಕೇಳುತ್ತಿರುವ ಹಾಗೆ ಗೋವುಗಳ ಕಳ್ಳತನ ಇ೦ದು ನಿನ್ನೆಯದ್ದಲ್ಲ. ಕೆಲ ವಷ೯ಗಳ ಹಿ೦ದೆ, ಗೋಕಥೆ, ಗೋವು ರಕ್ಷಣೆಯಲ್ಲೇ ತೊಡಗಿಸಿಕೊ೦ಡಿರುವ ರಾಮಚ೦ದ್ರಾಪುರ ಮಠದ ರಾಘವೇಶ್ವರ ಶ್ರೀಗಳು, ಕಾಸರಗೋಡಿನ ಒಬ್ಬನಿಗೆ ಅಪರೂಪದ ದೊಡ್ಡ ಗೋವನ್ನು ಸಾಕಿಕೊಳ್ಳಲು ಕೊಟ್ಟಿದ್ದರು. ಗೋಕಳ್ಳರು ಒ೦ದು ರಾತ್ರಿ ಅದನ್ನೂ ಹೊತ್ತೊಯ್ದರು. ಗೋವು ಹೇಗಿದ್ದರೂ ಮಾ೦ಸದ೦ಗಡಿಯಲ್ಲಿ ಉಲ್ಟಾ ನೇತಾಡುತ್ತಿರುತ್ತದೆ ಬಿಡಿ, ಆದರೆ ಇದುವರೆಗೂ ಕದ್ದವರನ್ನು ಹುಡುಕಲಾಗಲಿಲ್ಲ. ಮ೦ಗಳೂರು ಕಡೆ ಒ೦ದು ದಶಕದಿ೦ದ ಇದೆಲ್ಲ ಬಹಳವೇ ಕಾಮನ್ ಆಗಿಬಿಟ್ಟಿದೆ. ಮೊದಲೆಲ್ಲ ರಾಸುಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದರು. ಹತ್ತಾರು ದನಗಳನ್ನು ಒ೦ದೇ ಸಲ ಸಾಗಿಸುತ್ತಿದ್ದರಿ೦ದ ಜನರ ಮತ್ತು ಪೊಲೀಸರ ಕಣ್ಣಿಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ಆದರೆ ಈಗೀಗ ಎರಡ್ಮೂರು ವಷ೯ಗಳಿ೦ದ ಕಳ್ಳರು ಹೊಸ ಐಡಿಯಾ ಮಾಡಿ ಕದಿಯುತ್ತಿದ್ದಾರೆ. ಒ೦ದೋ ಅಥವಾ ಎರಡೋ ಹಸುಗಳನ್ನು ಸ್ಕಾಪಿ೯ಯೋ, ಓಮ್ನಿ, ಟಾಟಾ ಸುಮೊದ೦ಥ ವಾಹನಗಳಲ್ಲಿ ಅಕ್ಕಿ ಮೂಟೆ ತು೦ಬಿದ ಹಾಗೆ ತು೦ಬಿ ಕದ್ದೊಯ್ಯುತ್ತಿದ್ದಾರೆ. ಮ೦ಗಳೂರಿನಲ್ಲಿ ಹೇಗೆ ಹಸುಗಳನ್ನು ಕದಿಯುತ್ತಾರೆ ಎ೦ದು ಕೇಳಿದರೆ ಎಲ್ಲರೂ ಕಾರಿನ ಬಗ್ಗೆ ಹೇಳುತ್ತಾರೆ. ಆದರೆ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಿದ್ದಾರೆ ಹೇಳಿ? ಸ್ವಯ೦ಪ್ರೇರಿತವಾಗಿ ಎಷ್ಟು ಗೋಕಳ್ಳರನ್ನು ಹಿಡಿದಿದ್ದಾರ೦ತೆ?

ಮಜಾ ಏನು ಎ೦ದರೆ “ಗೋರಕ್ಷಕರ ಕಾಟ’, “ಗೋರಕ್ಷಕರ ದಬ್ಬಾಳಿಕೆ’ ಎನ್ನುವ ಪದಗಳೇ ಇರಲಿಲ್ಲ. ಯಾವಾಗ? ಕೆಲ ಮುಸಲ್ಮಾನರು ಗೋವನ್ನು ಹೊತ್ತೊಯ್ದು, ಮಾ೦ಸ ಬೇಯಿಸಿ ತಿನ್ನುತ್ತಿದ್ದಾಗ. ಹಿ೦ದೂಗಳಿ೦ದ ಹಲ್ಲೆ ಶುರುವಾಯ್ತೋ, ಆಗ ಅದು “ಆಹಾರ ಪದ್ಧತಿ, ಬಿಟ್ಟು ಬಿಡಿ’ ಎ೦ದೆಲ್ಲ ವಾದ ಮಾಡಲು ನಿ೦ತರು. ಇದಕ್ಕೆ ರಾಜ್ಯದ ಬುದ್ಧಿಜೀವಿಗಳು ಎ೦ದು ತಮ್ಮನ್ನು ತಾವೇ ಕರೆದುಕೊಳ್ಳುವ, ಮೂರ್ ಕಾಸಿಗೆ ಬೆಲೆ ಬಾಳದ ಅಪ್ಪ ಮಾಡಿಟ್ಟ ಪತ್ರಿಕೆ ನಡೆಸುತ್ತಾ ಸುಲಿಗೆ ಮಾಡುವ ಬಿಳಿ ಕೂದಲಿನ ಪತ್ರಕತೆ೯ಯರೆಲ್ಲ ಇವರಿಗೆ ಸಾಥ ನೀಡಿದರು. ಆದರೂ ಈ ಹಾರಾಟ ನಿಲ್ಲಲಿಲ್ಲ. ಇದು ದಲಿತರ ಆಹಾರ ಪದ್ಧತಿಯೂ ಹೌದು ಎ೦ದು ಹೊಸ ರಾಗ ತೆಗೆದರು. ಅದಕ್ಕೆ ಸರಿಯಾಗಿ, ಗುಜರಾತ್‍ನ ಉನಾದಲ್ಲಿ ದಲಿತರು ಗೋವು ಕದ್ದರು ಎ೦ದು ಅವರಿಗೆ ಸಾವ೯ಜನಿಕವಾಗಿ ಥಳಿಸಲಾಯಿತು. ಅಲ್ಲಿ೦ದ ರೊಚ್ಚಿಗೆದ್ದ ನಮ್ಮ ಬುದ್ಧಿಜೀವಿಗಳು ಗೋರಕ್ಷಕರ ಹಾವಳಿ ಹೆಚ್ಚಾಗಿದೆ ಎ೦ದು ಬೊಬ್ಬೆಯಿಟ್ಟು, ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದೆ.

     ಗೋವನ್ನು ಕದ್ದು ತಿನ್ನುವ ತನಕ ಸುಮ್ಮನಿದ್ದರು, ಆಗ ಯಾರೂ ಚೀರಾಡಲಿಲ್ಲ. ತಮ್ಮ ಗೋವನ್ನು ಕಳೆದು ಕೊ೦ಡಿರುವ ಸಾಲು ಸಾಲು ಜನರು ದೂರು ದಾಖಲಿ ಸಿದರೂ ಪೊಲೀಸರ ಯೋಗ್ಯತೆಗೆ ಹಿಡಿಯಲಾಗಲಿಲ್ಲ, ಆದರೆ ಈಗ ಗೋವು ಕಳ್ಳರು ರೆಡ್ ಹ್ಯಾ೦ಡಾಗಿ ಸಿಕ್ಕಿ ಬಿದ್ದು ಹೊಡೆತ ತಿ೦ದಾಗ ಮಾತ್ರ ವಿಷಯದ ತೀಕ್ಷ$್ಣತೆ ಗೊತ್ತಾಗುತ್ತಿದೆ ಎ೦ದಾಯಿತಲ್ಲ? ಹೊಡೆತ ತಿ೦ದವನು ಸುಮ್ಮನೆ ಮನೆಗೆ ಹೋದರೂ ಇನ್ನೆಲ್ಲೂ ಇರುವವನಿಗೆ ಪೆಟ್ಟು ಬಿದ್ದ೦ತೆ ಮ್ಯೆ ತಿಕ್ಕಿಕೊ೦ಡು, ಹೋರಾಟ ಮಾಡುವು ದೇಕೆ? ಗೋರಕ್ಷಕರು, ಕಳ್ಳರಿಗೆ ಕೊಟ್ಟಿರುವ ಒದೆಗಳ ನೋವಿಗಿ೦ತ ಗೋವನ್ನು ತಮ್ಮ ಮನೆಮಗಳ೦ತೆ ಸಾಕಿರುವ ಮ೦ದಿಗೆ ಇದರ ಸಾವಿರ ಪಟ್ಟು ನೋವಾಗಿರುತ್ತದೆ. ಗೋವುಗಳನ್ನು ಸಾಕುವವರಾರೂ, ಮು೦ದೊ೦ದು ದಿನತಾನು ಕಟುಕನಿಗೆ ಮಾರುತ್ತೇನೆ ಎ೦ದು ಸಾಕುವುದಿಲ್ಲ. ಬದಲಿಗೆ ಕುಟು೦ಬದ ಸದಸ್ಯನ೦ತೆ ನೋಡಿಕೊ೦ಡಿರುತ್ತಾರೆ. ಬೇರೆಯವರಿಗೆ ಆಹಾರ ಪದ್ಧತಿ ಹೇಗೋ, ಗೋವು ಹಿ೦ದೂಗಳಿಗೆ ದೇವರ ಸಮಾನವೂ ಹೌದು. ಅಷ್ಟಾದರೂ ನಮ್ಮ ಕಾನೂನು ಗೋಮಾ೦ಸ ತಿನ್ನುವವರಿಗಾಗೇ ಕೆಲ ಷರತ್ತನ್ನೊಡ್ಡಿದೆ. ಆರೋಗ್ಯವ೦ತ ಹಸುಗಳನ್ನು ಕೊಲ್ಲಬಾರದು ಎ೦ದೆಲ್ಲ ನಿಯಮಗಳಿವೆ. ಇದನ್ನೆಲ್ಲ ಎಷ್ಟು ಗೋಮಾ೦ಸ ಭಕ್ಷಕರು, ಗೋಕಳ್ಳರು ಅನುಸರಿಸುತ್ತಿದ್ದಾರೆ? ಗೋವನ್ನು ಕೊಲ್ಲುವಾಗ ಅದರ ವೈದ್ಯಕೀಯ ಪರೀಕ್ಷೆ ಆಗಬೇಕೆ೦ದಿದೆ. ಆದರೆ, ಎಷ್ಟು ಜನರ ಗೋಮಾ೦ಸ ಭಕ್ಷಕರು ವೈದ್ಯಕೀಯ ಪರೀಕ್ಷೆ ಮಾಡಿಸಿ ಕೊಲ್ಲುತ್ತಿದ್ದಾರೆ?

        ಕಾರಿನಲ್ಲಿ ಮೂಟೆ ಹಾಕುವ ಹಾಗೆ ಹಾಕಿ ಹಸುಗಳನ್ನು ಸಾಗಿಸುತ್ತಾರಲ್ಲ, ಅವರೆಲ್ಲ ಪರೀಕ್ಷೆ ಮಾಡಿಸಿ, ಹಲಾಲ್ ಕಟ್ ಮಾಡುತ್ತಾರಾ? ಇಲ್ಲ, ಇದು ಆರೋಗ್ಯವ೦ತ ಹಸು ಎ೦ದರೆ ವಾಪಸ್ ತ೦ದು ಕದ್ದ ಮನೆಗೇ ಒಪ್ಪಿಸುತ್ತಾರಾ? ಇವರಿಗಿಷ್ಟ ಬ೦ದ ಹಾಗೆ, ಸ೦ತೆಯಲ್ಲಿ ಯಾವ ಕೊಬ್ಬಿದ ಕುರಿ ಕ೦ಡಿತೋ ಅದನ್ನು ಹೊತ್ತುಕೊ೦ಡು ಬ೦ದು ಬಲಿ ನೀಡಿದ ಹಾಗೆ ಕಣ್ಣಿಗೆ ಕ೦ಡ ಹಸುಗಳನ್ನು, ಕಾಲು ಕಟ್ಟಿ ಕಾರಿನೊಳಗೆ ಹಾಕ್ಕೊ೦ಡು ಹೋಗಿ ಹಲಾಲ್ ಕಟ್ ಮಾಡಿದರೆ, ಜನರಾದರೂ ಎಷ್ಟು ದಿನ ಎ೦ದು ನೋಡಿ- ಕೊ೦ಡು ಸುಮ್ಮನಿರುತ್ತಾರೆ? ಆರಕ್ಷಕರು ತಾವು ಎಲ್ಲಿ ಶಿವಾಜಿಗಳಾಗುವುದನ್ನು ಮರೆಯುತ್ತಾರೋ, ರೋಸಿ ಹೋದ ಜನರೇ ಶಿವಾಜಿಗಳಾಗುತ್ತಾರೆ. ಯಾರು ಎಲ್ಲೆಲ್ಲಿ, ಯಾವ್ಯಾವ ವಾಹನದಲ್ಲಿ ಬ೦ದು ಗೋವುಗಳನ್ನು ಕದಿಯುತ್ತಾರೋ ಪೊಲೀಸರಿಗೆ ಅ೦ದಾಜೇ ಸಿಕ್ಕುವುದಿಲ್ಲ ಎ೦ದೇ ತಿಳಿಯೋಣ. ಆದರೆ ಹಸುಗಳನ್ನು ರಸ್ತೆಯಲ್ಲ೦ತೂ ಕೊಲ್ಲುವುದಿಲ್ಲ ಅಲ್ಲವೇ? ಯಾವುದಾದರೂ ಒ೦ದು ಹಳೆ ಗೋಡèನ್‍ಗಳನ್ನು ಅಕ್ರಮ ಕಸಾಯಿಖಾನೆಗಳೆ೦ದು ಮಾಡಿಕೊ೦ಡಿರುತ್ತಾರೆ. ಅಸಲಿಗೆ ಇ೦ಥ ಅಕ್ರಮ ಕಸಾಯಿಖಾನೆಗಳು ಎಲ್ಲೆಲ್ಲಿವೆ ಎ೦ಬುದರ ಮಾಹಿತಿ ಪೊಲೀಸರಿಗೆ ಚೆನ್ನಾಗಿಯೇ ಇರುತ್ತದೆ. ಅಷ್ಟಾದರೂ ಯಾಕೆ ಒಬ್ಬರೂ ಕ್ರಮ ಕೈಗೊಳ್ಳುತ್ತಿಲ್ಲ? ಎಲ್ಲರೂ ಹೀಗೆ ಕೈಕಟ್ಟಿ ಕುಳಿತರೆ ಗೋವು ಕಳೆದುಕೊ೦ಡವನು, ರೊಚ್ಚಿಗೇಳದೇ
ಮೊನ್ನೆ ಕುಮಟಾದಲ್ಲಿ ಆಗಿದ್ದೂ ಇದೇ. ಹಸುಗಳನ್ನು ಖರೀದಿಸಿ ಅದನ್ನು ವಾಹನದಲ್ಲಿ ಮನೆಗೆ ತೆಗೆದುಕೊ೦ಡು ಹೋಗುತ್ತಿದ್ದ ನಾಗಭೂಷಣ ಹೆಗಡೆ ಅವರನ್ನು ಗಿ ಬ್ ಹ್ಯೆಸ್ಕೂಲ್ ಬಳಿ ತಡೆದು ಅವರಿಗೂ ಥಳಿಸಿದ್ದಲ್ಲದೇ, ವಾಹನಕ್ಕೂ ಹಾನಿ ಮಾಡಿದ್ದಾರೆ. ವಾಹನದಲ್ಲಿ ಹಸುಗಳನ್ನು ತು೦ಬಿಕೊ೦ಡು ಹೋಗುತ್ತಿದ್ದನ್ನು ನೋಡಿದ ಕೆಲವರು ಗೋರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬ೦ದು ಪೂವಾ೯ಪರ ವಿಚಾರಿಸದೇ ಥಳಿಸಿದ್ದಾರೆ. ಆಮೇಲೆ ಸತ್ಯ ಗೊತ್ತಾಯಿತು. ಆದರೆ ಏನು ಪ್ರಯೋಜನ? ಒದೆ ಬಿದ್ದಾಗಿರುತ್ತದೆ. ಇ೦ಥ ವಾತಾವರಣ ಸೃಷ್ಟಿಯಾಗಿದೆ ಎ೦ದರೆ ಇದಕ್ಕೆಲ್ಲ ಕಾರಣ ಏನು ಗೊತ್ತಾ? ಗೋರಕ್ಷರಲ್ಲ. ಗೋವಿನ ರಕ್ಷಣೆಯನ್ನೇ ಸರಕಾರ ಮರೆತದ್ದು. ಇಷ್ಟೆಲ್ಲ ಗೊತ್ತಿದ್ದೂ ಮೋದಿ ಅದು ಹೇಗೆ, ಯಾವ ಆಧಾರದ ಮೇಲೆ 70-80 ಪ್ರತಿಶತ ಗೋರಕ್ಷಕರು ನಕಲಿ ಎ೦ದಿದ್ದು? ಒ೦ದು ವೇಳೆ ಕೆಲ ಕಡೆ ನಕಲಿ ಗೋರಕ್ಷಕರು ಇದ್ದಾರೆ೦ದೇ ಇಟ್ಟು- ಕೊಳ್ಳೋಣ. ಇದನ್ನು ಸಾವ೯ಜನಿಕ ಕಾಯ೯ಕ್ರಮದಲ್ಲಿ ವಿವಿಧಾಥ೯ ಬರುವ ಹಾಗೆ ಹೇಳಿದ್ಯಾಕೆ? ಕಾಶ್ಮೀರದಲ್ಲಿ ಇಸ್ಲಾಮಿಕ್ ಉಗ್ರರು ಅಷ್ಟು ದಾಳಿ ಮಾಡುತ್ತಿದ್ದರೂ ಯಾವತ್ತಾದರೂ ಮುಸಲ್ಮಾನರ ಬಗ್ಗೆ ಮಾತನಾಡಿದ್ದೀರಾ? ಇಲ್ಲ ಅಲ್ಲವೇ? ಅದು ಹೇಗೆ ತಪ್ಪಾಗುತ್ತದೆಯೋ, ಇದೂ ಹಾಗೆ. ಸಮಸ್ಯೆಯ ಮೂಲದಲ್ಲಿ ಇದನ್ನು ಸರಿ ಮಾಡಬೇಕೇ ಹೊರತು, ಗೋರಕ್ಷಕರನ್ನು ಬ್ಯೆದರೆ ಅವರೇನು ಮಾಡುತ್ತಾರೆ? ಒ೦ದು ವಿಷಯ ನೆನಪಿರಲಿ, ಆರಕ್ಷಕರು ಕೈಚೆಲ್ಲಿದ್ದಕ್ಕೇ ಅಲ್ಲವೇ ಗೋರಕ್ಷಕರು ಹುಟ್ಟಿಕೊ೦ಡಿದ್ದು?

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya