ಕಾಶ್ಮೀರದಲ್ಲಿ ಗುಂಡಿಟ್ಟರೆ ಕರ್ನಾಟಕದವರು ಊಳಿಡುವುದೇಕೆ ?

 

kashmir7

ಆಜಾದಿ!
ಮೊದಲೆಲ್ಲ ಈ ಶಬ್ದವನ್ನು ಬ್ರಿಟಿಷರಿಂದ ನಮಗೆಲ್ಲ ಸ್ವಾತಂತ್ರ್ಯ ಬೇಕು ಎನ್ನುವುದಕ್ಕೆ ಜೋರಾಗಿ ‘ಆಜಾದಿ ಬೇಕು’ ಎಂದು ಕೂಗಲಾಗುತ್ತಿತ್ತು. ಆದರೆ, ಈಗ ಆಜಾದಿಯ ವ್ಯಾಖ್ಯೆ ಬದಲಾಗಿದೆ.

ಉಮರ್ ಖಾಲಿದ್ ಅಥವಾ ಕನ್ಹಯ್ಯ ಕೂಗಿದರೆ ಮಾತ್ರ ಆಜಾದಿಗೆ ಒಂದು ಅರ್ಥ ಎಂದು ಈಗ ಭಾವಿಸಲಾಗಿದೆ. ತಾನು -ಟ್ನಲ್ಲಿ ಬಂದು ಹೋರಾಟ ಮಾಡುವಾಗ ನೆಲದ ಮೇಲೆ ಕುಳಿತು ಆಜಾದಿ ಬೇಕು ಎಂದರೂ, ಅದಕ್ಕಿಲ್ಲಿ ಬೆಲೆಯಿದೆ.

ಈಗ ಅದೇ ಆಜಾದಿ ಕೂಗು ಕರ್ನಾಟಕದಲ್ಲೂ ಕೇಳಿ ಬರಲಿದೆ. ಈ ಬಾರಿ ಆಜಾದಿಗಾಗಿ ಕೂಗಾಡುತ್ತಿರುವುದು ಕಾಶ್ಮೀರಕ್ಕಾಗಿ. ಆಜಾದಿ ಬೇಕಾಗಿರುವುದು ಭಾರತದಿಂದ. ಸೈನ್ಯದಿಂದ. ಕಾಶ್ಮೀರದಲ್ಲಿ ನಿಯೋಜಿಸಿರುವ ಪೊಲೀಸರಿಂದ.

ಅದಕ್ಕಾಗಿ ಅರಚಾಡುತ್ತಿರುವುದು ಮಾತ್ರ ಕರ್ನಾಟಕದಲ್ಲಿ. ಅದೂ ಬೆಂಗಳೂರಿನಲ್ಲಿ. ಎಲ್ಲಿಂದೆಲ್ಲಿಗೆ ಸಂಬಂಧವಿದು. ಕಾಶ್ಮೀರದಲ್ಲಿ ಗಲಭೆಯಾದರೆ, ಕರ್ನಾಟಕದಲ್ಲಿ ಹೋರಾಟ ಮಾಡಿ ಪ್ರಯೋಜನವೇನು? ಅಸಲಿಗೆ ಹೋರಾಟ ಮಾಡುತ್ತಿರುವುದು ಯಾವ ಕಾರಣಕ್ಕಾಗಿ? ಇದರ ಒಳ ಮರ್ಮ ತಿಳಿದರೆ ಸಾಕು. ಎಲ್ಲವೂ ಬಯಲಾದಂತೆ.

ಭಾರತದಲ್ಲಿ ಗಲಭೆ ನಡೆಯವುವಾಗ ವಾತಾವರಣ ಹೇಗಿರುತ್ತದೆಯೆಂದು ಯಾರನ್ನೂ ಕೇಳುವ ಹಾಗೇ ಇಲ್ಲ. ಇಲ್ಲಿ ಗಲಭೆ ಯಾವಾಗಲೂ ಆಗುತ್ತಲೇ ಇರುತ್ತವೆ. ಈ ಗಲಭೆಗಳಲ್ಲಿ ಪೊಲೀಸರು ಗುಂಪು ಚದುರಿಸಲು ಏನೇನು ಮಾಡುತ್ತಾರೆ ಎಂಬುದೂ ತಿಳಿದ ವಿಚಾರವೇ. ಮೊದಲಿಗೆ ಗುಂಪು ರೊಚ್ಚಿಗೇಳುವ ಸ್ಥಿತಿಯಲ್ಲಿದ್ದರೆ ಅಥವಾ ಆಗಷ್ಟೇ ಸಾರ್ವಜನಿಕ ಸ್ವತ್ತುಗಳನ್ನು ಹಾನಿ ಮಾಡುತ್ತಿದ್ದರೆ, ಲಾಠಿ ಚಾರ್ಜ್ ಮಾಡುತ್ತಾರೆ. ವಾಟರ್ಗನ್ ಬಳಸುತ್ತಾರೆ. ಮೊದಲೆಲ್ಲ ಇಂಕ್ ಸೋಕಿ, ನಂತರ ಅವರನ್ನೆಲ್ಲ ಹಿಡಿಯುತ್ತಿದ್ದರು.

ಈಗ ಬಳಸುವುದು ಪೆಲೆಟ್ ಗನ್. ಇದನ್ನು ಕೊನೆಯ ಅಸ್ಠಉ ಎಂಬಂತೆ ಬಳಸಲಾಗುತ್ತದೆ. ಈ ಗನ್ನಿಂದ ಹೊರ ಬರುವ ಸಣ್ಣ ಸಣ್ಣ ಪೆಲೆಟ್ಗಳು, ಎದುರಾಳಿಯ ದೇಹದೊಳಕ್ಕೆ ಸೇರುತ್ತದೆ. ಹೀಗಾದಾಗ ಗಲಭೆಯಲ್ಲಿ ಪಾಲ್ಗೊಳ್ಳುತ್ತಿರು ವವರು, ತಮಗಾದ ಗಾಯದಿಂದ ಸ್ವಲ್ಪ ವಿಚಲಿತರಾಗಿ, ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ ಹಾಗೂ ಇನ್ನಾಗುವ ಹಾನಿ ತಪ್ಪಿಸಬಹುದು ಎಂದು ಇದರ ಉದ್ದೇಶ. ಆದರೆ, ಈ ಗನ್ಗಳನ್ನು ಯಾವುದೇ ಕಾರಣಕ್ಕೂ ಗಲಭೆಗೆ ಮೊದಲೇ ಪ್ರಯೋಗಿಸುವುದಿಲ್ಲ.

ಇದೇ ಗನ್ಗಳನ್ನು ಮೊನ್ನೆ ಕಾಶ್ಮೀರದಲ್ಲಿ ಬಳಸಲಾಗಿತ್ತು. ಇದು ಅವರ ಕೊನೆಯ ಅಸ್ಠಉವಾಗಿತ್ತು. ಮೊದಲಿಗೆ ಗಲಭೆ ನಡೆದಾಗ ಲಾಠಿ ಚಾರ್ಜ್ ಮಾಡಲಾಯ್ತು. ಯಾರೂ ಜಗ್ಗ ಲಿಲ್ಲ. ಕೊನೆಗೆ ಈ ಗಲಭೆ ಯಾವ ಮಟ್ಟಿಗೆ ಹೋಯಿತೆಂದರೆ, ಲಾಠಿ ಚಾರ್ಜ್ ಮಾಡುತ್ತಿರುವ ಪೊಲೀಸರ ಮೇಲೇ ಹಲ್ಲೆ ಮಾಡಲು ನಿಂತರು. ಕಲ್ಲು ತೂರಾಟ ಶುರುವಾಯಿತು. ಕಲ್ಲು ತೂರಾಟ ಇದ್ದದ್ದು ಪೆಟ್ರೋಲ್ ಬಾಂಬ್ ಎಸೆಯುವಲ್ಲಿಗೆ ಬಂದಿತು. ಕೊನೆಗೆ ಗಲಭೆ ತೀವ್ರಗೊಳ್ಳುತ್ತಾ ಗುಂಪು ಗುಂಪು ಹೋರಾಟಗಾರರು, ಒಬ್ಬೊಬ್ಬ ಪೊಲೀಸರನ್ನು ಹಿಡಿದು, ನೆಲಕ್ಕೆ ಹಾಕಿ ತುಳಿದು, ಅರೆಜೀವ ಮಾಡಿಬಿಡುತ್ತಿದ್ದರು. ಅಲ್ಲಿಯವರೆಗೂ ಯಾವೊಬ್ಬ ಹೋರಾಟಗಾರನಿಗೂ ಮೈಮೇಲೆ ಖಬರೇ ಇರಲಿಲ್ಲ. ನಮ್ಮ ಪೊಲೀಸರ ಬಗ್ಗೆ ಕ್ಯಾರೇ ಎಂದಿಲ್ಲ.

ಇಷ್ಟು ಬೆಳವಣಿಗೆಗಳ ನಂತರವೇ ಪೆಲೆಟ್ ಗನ್ ಬಳಸಲಾಗಿದ್ದು. ಇದು ಬಳಸಿದ್ದಕ್ಕೆ, ಹೇಗೆ ಗಲಭೆ ನಿಯಂತ್ರಣಕ್ಕೆ ಬಂತೋ, ಬೀದಿಗಿಳಿದು ಕಲ್ಲೆಸೆಯುವವರಿಗೂ ಅಷ್ಟೇ ಗಾಯಗಳಾದವು. ಮುನ್ನುಗ್ಗಿ ಕಲ್ಲೆಸೆಯುವ ಮಂದಿಗೆ ಪೆಲೆಟ್ ಗಳು ನೇರವಾಗಿ ಕಣ್ಣಿಗೇ ಬಿದ್ದು ಎಲ್ಲರೂ ಆಸ್ಪತ್ರೆಗೆ ಸೇರಿದರು. ಈಗ ನಮ್ಮ ದೇಶದ ಕೆಲಸವಿಲ್ಲದ ಚಿಂತಕರಿಂದ ಇಂಥ ಸೋ ಕಾಲ್ಡ್ ಸಂತ್ರಸ್ತರ ಪರವಾಗಿ ಕೂಗು ಕೇಳಿ ಬರುತ್ತಿದೆ. ಇವರು ಮರುಕ ಪಡುವುದನ್ನು ನೋಡಿದರೆ, ಕ್ರಾಂತಿಕಾರಿಗಳಿಗೇ ಗುಂಡು ತಾಕಿದೆಯೋ ಎಂಬಂತೆ ಕಣ್ಣೀರಿಡುತ್ತಿದ್ದಾರೆ. ಕೆಲ ಮಾಧ್ಯಮಗಳು ಮತ್ತು ಪತ್ರಕರ್ತರಂತೂ ವೈದ್ಯರಿಗಿಂತಲೂ ತಾವೇ ಮೊದಲು ಆಸ್ಪತ್ರೆಯೋಳಗೆ ಹೋಗಿ ‘ನಿಮಗೆ ಇಲ್ಲಿ ನೋವುತ್ತಿದೆಯೇ’, ‘ಹೇಳಿ, ಇನ್ನೆಲ್ಲೆಲ್ಲಿ ನೋವುತ್ತಿದೆ’ ಎಂದು ಕೇಳಿ, ಅದನ್ನೂ ಮೋದಿಯ ಮೇಲೇ ಹಾಕಿ ಚಟ ತೀರಿಸಿಕೊಳ್ಳುತ್ತಿದ್ದಾರೆ. ಆಂಗ್ಲ ಮಾಧ್ಯಮಗಳ ಬೆಂಬಲ ಎಲ್ಲಿ ಇದೆ ಎಂದು ತಿಳಿಯಿತೋ, ಬುದಿಟಛಿಜೀವಿಗಳ ಮಟ್ಟದಲ್ಲಿ, ಚಿಂತಕರ ಮಟ್ಟದಲ್ಲಿ ಪ್ರತಿಭಟನೆಗಳಾರಂಭವಾದವು. ಆದರೆ, ಇವರ ಪ್ರತಿಭಟನೆ, ಮೊದಲು ಆರಂಭವಾಗಿದ್ದು ಪೆಲೆಟ್ ಗನ್ ಗಳ ಉಪಯೋಗ ಬ್ಯಾನ್ ಆಗಬೇಕೆಂದು. ಪೆಲೆಟ್ ಗನ್ ಗಳಿಂದ ಎಷ್ಟೋ ಅಮಾಯಕರು ಕಣ್ಣು ಕಳೆದುಕೊಳ್ಳುತ್ತಿದ್ದಾರೆ. ಪೆಲೆಟ್ನಿಂದ ಪ್ರಾಣ ಹೋಗದಿದ್ದರೂ, ಮಾರಣಾಂತಿಕ ನೋವು ಮತ್ತು ಕಣ್ಣೇ ಕಳೆದುಕೊಂಡ ಮೇಲೆ ಬದುಕಿದ್ದೂ ಏನು ಉಪಯೋಗ ಎಂದೆಲ್ಲ ಒಂದೇ ಕಣ್ಣಲ್ಲಿ ಅಳುತ್ತಿದ್ದಾರೆ.

 

ಈಗ ನಾವು ಕೇಳಬೇಕಿರುವುದೇನೆಂದರೆ, ಅಲ್ಲಿ ಪ್ರತಿಭಟನೆಗೆ ಬಂದವರು ಗಲಭೆ ಎಬ್ಬಿಸಿದರೂ ಸುಮ್ಮನಿರಲು, ಅವರ್ಯಾೆರೂ ಈರುಳ್ಳಿ ಟೊಮೆಟೊ ಬೆಳೆಗೆ ಮಾನ್ಯತೆ ನೀಡಿ ಎಂದು ಬಂದವರಲ್ಲ. ನಮಗೆ ಅನ್ನ ಹಾಕುವ ರೈತರಂತೂ ಅಲ್ಲವೇ ಅಲ್ಲ. ಅಲ್ಲಿ ಗಲಭೆ ಆಗಿದ್ದು ಒಬ್ಬ ಮೋಸ್ಟ್ ವಾಂಟೆಡ್ ಉಗ್ರಗಾಮಿ ಬುರ್ಹಾನ್ ವನಿಯನ್ನು ನಮ್ಮ ಸೇನೆ ಹುಡುಕಿ ಅವನಿದ್ದಲ್ಲಿಯೇ ಹೋಗಿ, ಹತ್ಯೆ ಮಾಡಿದ್ದಕ್ಕಾಗಿ ಸಿಡಿದೆದ್ದ ಜನತೆ ಇದು. ಉಗ್ರಗಾಮಿ ಬುರ್ಹಾನನ್ನು ದೇಶಭಕ್ತನನ್ನಾ ಗಿಸಲು ಹೊರಟ ಜನತೆ ಇದು. ಹೀಗಿರುವಾಗ ಅವನ ಪರ ಪ್ರತಿಭಟನೆ ಮಾಡುವವರಿಗೆ ಒಂದೋ ಕಾಶ್ಮೀರ ಪ್ರತ್ಯೇಕವಾ ಗುವುದು ಇಷ್ಟವಿರುತ್ತದೆ. ಇಲ್ಲವೇ ಉಗ್ರವಾದದಲ್ಲಿ ಒಲವಿ ರುತ್ತದೆ. ಇಂಥವರಿಗೆ ಪೆಲೆಟ್ ಬಿದ್ದು ಕಣ್ಣು ಹೋದರೆ ಅಳುವ ಇವರು, ಎಂದಾದರೂ ಬುರ್ಹಾನ್ ಗುಂಡೇಟಿಗೆ ಬಲಿಯಾದ ಕರ್ನಲ್ ಎಮ್.ಎನ್. ರೈ ಮನೆಗೆ ಹೋಗಿ ಅವರ ೧೦ವರ್ಷದ ಪುಟ್ಟ ಮಗಳನ್ನು ಮಾತಾಡಿಸಿದ್ದಾರಾ? ಇಲ್ಲ.

ಈ ಊಳಿಡುವವರ ಹೋರಾಟದ ಅಜೆಂಡಾ ಹೇಗೆ ಬದಲಾಗುತ್ತದೆ ನೋಡಿ:

ಮೊದಲ ಹಂತದಲ್ಲಿ ಪೆಲೆಟ್ ಗನ್ ವಿರೋಧ, ಅಲ್ಲಿನ ಸಂತ್ರಸ್ತರಿಗೆಲ್ಲ ಭಾರತ ಚಿಕಿತ್ಸೆ ಕೊಡಿಸಬೇಕಂತೆ, ಎಲ್ಲ ರೀತಿಯ ಹಾನಿಗಳೆಲ್ಲವೂ ನಿಲ್ಲಬೇಕಂತೆ, ಇದಕ್ಕೆ ಸರಿಯಾಗಿ ಬೆಂಬಲ ಸಿಕ್ಕ ಮೇಲೆ, ಎರಡನೇ ಹಂತದಲ್ಲಿ ಕಾಶ್ಮೀರದಿಂದ ಮಿಲಿಟರಿಯನ್ನು ವಾಪಸ್ ಕರೆಸಿಕೊಳ್ಳಬೇಕು. ಅದೂ ವರ್ಕೌಟ್ ಆಗುತ್ತಿದ್ದಂತೆ, ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕು. ಭಾರತ ಕಾಶ್ಮೀರವನ್ನು ಬಿಟ್ಟುಕೊಡಬೇಕು.

ಈಗ ಹೋರಾಟ ಸಾಗುತ್ತಿರುವ ಹಾದಿ ಇದು. ಇಂಥ ಹೋರಾಟ ಕಾಶ್ಮೀರದಲ್ಲೋ, ದೆಹಲಿಯಲ್ಲೋ ಅಥವಾ ಉತ್ತರ ಭಾರತದಲ್ಲಿ ನಡೆದಿದ್ದರೆ ಅದನ್ನು ಒಪ್ಪಿಕೊಳ್ಳ ಬಹುದಿತ್ತು. ಆದರೆ, ಕರ್ನಾಟಕದಲ್ಲಿ ಹೋರಾಟವೇಕೆ? ದೊಡ್ಡ ದೊಡ್ಡ ‘ಸಲಹೆಗಾರ’ರ ಸಲಹೆ ಪಡೆದು ಹೋರಾಟ ಮಾಡುತ್ತಿರುವ ಇವರ್ಯಾಗರೂ ಒಂದು ಬಾರಿಯೂ ರೈತರ ಪರವಾಗಿ ಧ್ವನಿ ಎತ್ತಿದವರಲ್ಲ. ಇದೇ ಕಾಂಗ್ರೆಸ್ ಸರಕಾರ ರೈತರು ತಮ್ಮ ಬೆಳೆಗೆ ಒಳ್ಳೆಯ ಬೆಲೆ ನೀಡಿ ಎಂದು ಬಂದಾಗ, ಬೂಟು ಕಾಲಲ್ಲಿ ಒದ್ದ ಪೊಲೀಸರ ವಿರುದಟಛಿ ಇವರ ಧ್ವನಿ ಏರಲಿಲ್ಲ. ಪಿಯು ಪ್ರಶ್ನೆಪತ್ರಿಕೆ ಬಹಿರಂಗವಾಗಿ, ವಿದ್ಯಾರ್ಥಿಗಳ ಬಾಳಲ್ಲಿ ಚೆಲ್ಲಾಟವಾಡಿದ ಸರಕಾರದ ಬಗ್ಗೆ ಗೊತ್ತೇ ಇಲ್ಲ. ಸಾಲು ಸಾಲು ಪೊಲೀಸರು, ಐಎಎಸ್ ಅಽಕಾರಿಗಳು ಆತ್ಮಹತ್ಯೆ, ಹತ್ಯೆಯಾಗಿ ಹೋಗುತ್ತಿದ್ದರೂ ಯಾವೊಬ್ಬ ಚಿಂತಕನಿಗೂ ಚಿಂತೆ ಕಾಡಲಿಲ್ಲ.

ಆದರೆ, ಈಗ ಪ್ರಾಣ ಬೆಲೆ, ಮನುಷ್ಯತ್ವದ ಬೆಲೆ ಗೊತ್ತಾಗಿದ್ದಾದರೂ ಹೇಗೆ? ಮನುಷ್ಯತ್ವದ ನೆಪದಲ್ಲಿ ಕಾಶ್ಮೀರವನ್ನೂ ಪಾಕಿಸ್ತಾನಕ್ಕೆ ಸೇಲ್ ಮಾಡುವ ತಂತ್ರವೇ? ಇದೇ ಕಾಶ್ಮೀರದ ವಿಷಯವನ್ನಿಟ್ಟುಕೊಂಡು, ಇಂದು ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಯುತ್ತಿದೆ. ಅಚ್ಚರಿ ಯೆಂಬಂತೆ, ಈ ಪ್ರತಿಭಟನೆಯ ಅಜೆಂಡಾಗಳೂ ಪೆಲೆಟ್ನಿಂದ ಶುರುವಾಗಿ, ಯೋಧರನ್ನು ಹೊರ ಕಳಿಸಿ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸುತ್ತಿದೆ. ನಮ್ಮ ರಾಜ್ಯದಲ್ಲೇ ತಲೆ ಮೇಲೆ ತಲೆ ಬಿದ್ದರೂ ಮನೆಯ ಕಾಂಪೌಂಡ್ ಬಿಟ್ಟು ಹೊರ ಬರದವರು ಸಿಡಿzದಿ ದ್ದಾಜಂರ , ವು ತೂ ಂದು ಅನು ಜಿ ಹು ಟ್ಟುಡz. ಕಳೆದ ನಾಲ್ಕೈದು ದಿನಗಳಿಂದ ಸರಕಾರ ಬಹಳ ಪೇಚಿಗೆ ಸಿಲುಕಿದೆ. ಡಿವೈಎಸ್ಪಿ ಎಮ್.ಕೆ. ಗಣಪತಿ, ಜಾರ್ಜ್ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಕಾಂಗ್ರೆಸಿಗರು ನೆಮ್ಮದಿಯಿಂದ ನಿದ್ದೆ ಮಾಡುತ್ತಿಲ್ಲ ಎನ್ನುವುದಂತೂ ಸತ್ಯ.

ಇದನ್ನು ತಪ್ಪಿಸಲು ಎಡಬಿಡಂಗಿ ಪತ್ರಕರ್ತರ ತಂಡ ಮತ್ತು ಅವರ ಗಂಜಿಕೇಂದ್ರ ವಾಸಿಗಳು ಹಲವು ದಿನಗಳಿಂದ -ಸ್ಬುಕ್, ಜಾಲತಾಣ, ದಿನಪತ್ರಿಕೆ ಸೇರಿದಂತೆ ಹಲವಾರು ಕಡೆ ಗಣಪತಿಯ ಮಾನಹಾನಿಗೆ ಪ್ರಯತ್ನಿಸಿ ಸೋತಿದ್ದರು. ಇವರ ಬರವಣಿಗೆಗಳನ್ನು ಓದಿ ಮತ್ತಷ್ಟು ಜನರು ಗಣಪತಿಯವರ ಸಾವಿಗೆ ನ್ಯಾಯ ಕೇಳುತ್ತಿದ್ದರೇ ಹೊರತು ಯಾರ ಮಾತಿಗೂ ಬಗ್ಗಲಿಲ್ಲ. ಈಗ ಜನರ ಗಮನವನ್ನು ಬೇರೆಡೆ ಸೆಳೆಯಲು ಬೆಂಗಳೂರಿನಲ್ಲಿ ಹೊಸ ಬಯಲು ನಾಟಕ. ಇಲ್ಲದಿದ್ದರೆ, ಒಮ್ಮೆ ಆಲೋಚಿಸಿ, ಉಗ್ರಕಾರ್ಯಾಚರಣೆಯಲ್ಲಿ ಹುತಾತ್ಮರಾದ ಒಬ್ಬರ ಮನೆಗೂ ಹೋಗದವರು, ಸಂದೀಪ್ ಉನ್ನಿಕೃಷ್ಣನ್ ಎಂಬ ಹೆಸರೇ ಕೇಳದವರು, ಲಕ್ಷ ಲಕ್ಷ ಕಾಶ್ಮೀರಿ ಪಂಡಿತರನ್ನು ಅಲ್ಲಿನ ಮುಸಲ್ಮಾನರು ಕೊಚ್ಚಿ ಕೊಂದಾಗ, ಕಾಶ್ಮೀರದವರಾದ ಅವರನ್ನೇ ನಿರಾಶ್ರಿತರನ್ನಾಗಿ ಮಾಡಿದಾಗ ಕಣ್ಣಿಗೆ ಬಟ್ಟೆ ಕಟ್ಟಿ ಕೊಂಡು, ಮನಷ್ಯತ್ವವೆಂಬ ಪದವನ್ನೇ ಮರೆತಂತಿದ್ದ ಈ ತಂಡಕ್ಕೆ ಯಾವ ಬುದಟಛಿನ ಉಪದೇಶದಿಂದ ಜ್ಞಾನೋದಯವಾಯಿತು? ಇದು ಕೇವಲ ಊಹೆಯಲ್ಲ. ಸ್ವಲ್ಪ ನಮ್ಮ ಕರ್ನಾಟಕದ ಹಿಂದಿನ ದಿನಗಳ ಡೈರಿಯನ್ನು ತೆಗೆದು ನೋಡಿ. ಮಲ್ಲಿಕಾರ್ಜುನ ಬಂಡೆ ಸತ್ತಾಗ, ಜನರೆಲ್ಲ ರೊಚ್ಚಿಗೆದ್ದು ಇನ್ನೇನಾದರೂ ಮಾಡಿಬಿಟ್ಟಾರು ಎಂದಾದಾಗ ‘ದೇಶದಲ್ಲಿ ಅಸಹಿಷ್ಣುತೆ ಕಾಡುತ್ತಿದೆ’ ಎಂದು ಹೊಸ ಕ್ಯಾತೆ ತೆಗೆದಿದ್ದರು.

ಅದು ಮುಗಿಯುತ್ತಿದ್ದಂತೆ, ಡಿಕೆ ರವಿ ಸೇರಿದಂತೆ ಸುಮಾರು ಅಽಕಾರಿಗಳು ಅಸಹಜವಾಗಿ ಮೃತಪಟ್ಟಾಗ ಜನರು ಈ ಸಲ ಸರಕಾರವನ್ನು ಬಿಡುವುದೇ ಇಲ್ಲ ಎಂದು ಗೋಮಾಂಸ ವಿಚಾರವನ್ನು ಎತ್ತಿ, ಪ್ರತಿಭಟನೆಯ ಸೋಗಿನಲ್ಲಿ ನಾಯಿ ಮಾಂಸ ತಿಂದು ತೇಗಿದವರೂ ಇದೇ ತಂಡವೇ.

ಆದರೆ, ಇವರು ಮಾಡುವ ಹೋರಾಟಕ್ಕೆ, ಪ್ರತಿಭಟನೆಗೆ, ಟೌನ್ಹಾಲ್ ದೊಂಬರಾಟಕ್ಕೆ ಒಂದಕ್ಕೂ ಇತಿಶ್ರೀ ಹಾಡಿದ್ದಾಗಲೀ, ನ್ಯಾಯ ಒದಗಿಸಿದ್ದಾಗಲಿ ಇವರ ಇತಿಹಾಸದಲ್ಲೇ ಇಲ್ಲ. ಎಲ್ಲಿ ಜನರ ಗಮನ ಬೇರೆಡೆ ಹೋಗಿದೆ ಎಂದು ಮಾಹಿತಿ ಬಂತೋ ಇವರ ಹೋರಾಟಗಳೆಲ್ಲವೂ ನಿಜಕ್ಕೂ ನಡೆದಿತ್ತೋ ಅಥವಾ ಕನಸೋ ಎಂಬಷ್ಟರ ಮಟ್ಟಿಗೆ ಸುಮ್ಮನಿರುತ್ತಾರೆ.

ಅಷ್ಟಕ್ಕೂ ಬೆಚ್ಚಗೆ ಬೆಂಗಳೂರಿನಲ್ಲಿದ್ದುಕೊಂಡು ನಯಾ ಪೈಸೆ ಕೆಲಸ ಮಾಡದೇ, ಮೋದಿಯ ವಿದೇಶ ಪ್ರಯಾಣದ ಬಗ್ಗೆ ಟೀಕೆ ಮಾಡುತ್ತಾ ಮಕ್ಕಳನ್ನು ಮಾತ್ರ ಇಂಗ್ಲೆಂಡಿನ ಕಾರ್ಡಿ- ವಿವಿಯಲ್ಲೇ ಉನ್ನತ ಅಭ್ಯಾಸಕ್ಕೆ ಕಳಿಸಿ ಕೂರುವ ಈ ತಂಡಕ್ಕೆ ಕಾಶ್ಮೀರದಲ್ಲಿ ಯಾರು ಸತ್ತರೇನು? ಎಷ್ಟು ಜನ ಸತ್ತರೇನು? ಕಾಶ್ಮೀರಕ್ಕೂ ಕರ್ನಾಟಕಕ್ಕೂ ಎಲ್ಲಿಂದೆಲ್ಲಿಗೆ ಸಂಬಂಧ? ಈ ಎಡಬಿಡಂಗಿಗಳು ಇನ್ಯಾವುದಾದರೂ ದಾರಿ ಹುಡುಕಿ ಕೊಳ್ಳುವುದು ಉತ್ತಮ. ಜನರು ಇಂಥ ನಾಟಕಗಳನ್ನು ಹಜಾರ ನೋಡಿದ್ದಾರೆ!

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya