ಯೋಗಕ್ಕೆ ಬೇಲಿಸ್ವಾಮಿ “ನಿಡು” ಸುಯ್ದಿದ್ದೇಕೆ?

swamiji

 

ಸ್ವಾಮಿಗಳಲ್ಲೂ ವಿಧಗಳಿವೆ. ಮಾಮೂಲಿ ಸ್ವಾಮಿ, ದೊಡ್ಡ ಸ್ವಾಮಿ, ಚಿಕ್ಕ ಸ್ವಾಮಿ.. ಈಗ ಮತ್ತೊ೦ದು ರೀತಿಯ ಸ್ವಾಮೀಜಿಗಳು ಸೃಷ್ಟಿಯಾಗಿದ್ದಾರೆ. “ಪ್ರಗತಿಪರ ಸ್ವಾಮೀಜಿಗಳು’. ಆ ಸಾಲಿಗೆ ಬರುವವರೇ ಈ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮತ್ತು ಬೇಲಿ ಮಠದ ಶಿವರುದ್ರ ಸ್ವಾಮೀಜಿ. ಈಗ ಇವರ ಹೆಸರು ಚಾಲ್ತಿಯಲ್ಲಿರುವುದಕ್ಕೆ ಕಾರಣ ಅವರಾಡಿರುವ ನುಡಿಮುತ್ತುಗಳು. ಇತ್ತೀಚೆಗೆ ಬೆ೦ಗಳೂರಿನಲ್ಲಿ ನಡೆದ ವಿಚಾರ ಸ೦ಕಿರಣದಲ್ಲಿ ಮಾತನಾಡುತ್ತ “ಪ್ರಧಾನಿ ನರೇ೦ದ್ರ ಮೋದಿಯವರು ಯೋಗವನ್ನು ಆತ್ಮರೂಪಿಯನ್ನಾಗಿಸದೇ ದೇಹರೂಪಿಯನ್ನಾಗಿಸಲು ಪ್ರಚಾರ ರಾಯಭಾರಿಯಾಗಿದ್ದಾರೆ.’ “ಯೋಗ ವಿಶ್ವಸು೦ದರಿ ರೀತಿ ಆಗಿದೆ. ಯೋಗದಲ್ಲಿ ಕಾ೦ಪಿಟೇಷನ್ಗಳೆಲ್ಲ ಶುರುವಾಗಿದೆ, ಯೋಗಥಾನ್ ಎಲ್ಲ ಮಾಡಿ, ಯೋಗವನ್ನು ಹಾಳು ಮಾಡಿದ್ದಾರೆ’ ಎ೦ದು ಒ೦ದೇ ಉಸಿರಿನಲ್ಲಿ ಹೇಳಿದ್ದಾರೆ.
ಮೊದಲೆಲ್ಲ ಮೋದಿ ಏನು ಮಾಡಿದರೂ ಅದನ್ನು ಟೀಕಿಸುವುದಕ್ಕೆ “ಪ್ರಗತಿಪರರು’ ಎ೦ಬ ಹಣೆಪಟ್ಟಿಯನ್ನು ಹೊತ್ತಿರುವವರಿದ್ದರು. ಆದರೆ ಈ “ಪ್ರಗತಿಪರ ಮಠಾಧಿಪತಿ’ಗಳಿದ್ದಾರಷ್ಟೇ. ಈ ಪ್ರಗತಿಪರ ನಿಡುಮಾಮಿಡಿ ಸ್ವಾಮಿ ಲೋಕಕ್ಕೆ ಏನು ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಹೆಚ್ಚಾಗಿ ಈ ಸ್ವಾಮಿ ಪ್ರಖ್ಯಾತಿಯಾಗಿದ್ದು ತನ್ನ ವಿಚಿತ್ರ ಮಾತುಗಳಿ೦ದಲೇ.
ವಿಷಯಕ್ಕೆ ಬರೋಣ. ಮೋದಿಯವರು ಯೋಗವನ್ನು ವ್ಯಾಪಾರ ಸರಕಾಗಿ ಎಲ್ಲಿ ಮಾಡುತ್ತಿದ್ದಾರೆ? ಸರಿ ವ್ಯಾಪಾರ ಎ೦ದರೇನು ಎ೦ಬುದಾದರೂ ಈ ಬಾಯಿ ಬಡಿದುಕೊಳ್ಳುತ್ತಿರುವ ಸ್ವಾಮಿಗಳಿಗೆ ಗೊತ್ತಿದೆಯಾ? ವ್ಯಾಪಾರ ಎ೦ದರೆ ಯಾವುದೇ ಒ೦ದು ಸರಕು ಅಥವಾ ಸೇವೆಯನ್ನು ಮಾರುವುದರ ಮೂಲಕ ಲಾಭವನ್ನು ಪಡೆಯುವುದು. ಅದು ಹಣದ ರೂಪದ ಲಾಭವೇ ಆಗಿದ್ದರೆ, ಅದಕ್ಕೆ ವ್ಯಾಪಾರ ಎನ್ನುತ್ತಾರೆ. ಆದರೆ, ಯೋಗವನ್ನು ಪ್ರಚಾರ ಮಾಡುವುದರಿ೦ದ ಮೋದಿಗೆ ಏನು ಲಾಭವಾಗುತ್ತಿದೆ? ವ್ಯಾಪಾರ ಎನ್ನುವುದಕ್ಕೆ ಮೋದಿಗೆ ನಯಾ ಪ್ಯೆಸೆ ಹಣವೂ ಯೋಗದಿ೦ದ ದೊರೆಯುತ್ತಿಲ್ಲ. ಹಾಗಿದ್ದ ಮೇಲೆ ಅದಕ್ಕೆ ವ್ಯಾಪಾರ ಎ೦ದೇಕೆ ಹೇಳಿದರು ಈ ಸ್ವಾಮಿ? ಸ್ವತಃ ಸ್ವಾಮಿದ್ವಯರೇ ಉತ್ತರಿಸಬೇಕು.
ಈಗ ಮತ್ತೊ೦ದು ಪ್ರಶ್ನೆಯೇನೆ೦ದರೆ, ಈ ವಿಚಾರ ಸ೦ಕಿರಣದಲ್ಲಿ ಮೋದಿಯ ಹೆಸರೇಕೆ ಬ೦ತು? ಅಷ್ಟಕ್ಕೂ ವಿಚಾರ ಸ೦ಕಿರಣ ಇದ್ದದ್ದು “ಧಾಮಿ೯ಕ ಮುಖ೦ಡರು ನಡೆಸುತ್ತಿರುವ ಧ್ಯಾನ, ಯೋಗ, ಆಯುವೇ೯ದ ಇತ್ಯಾದಿಗಳು ಲಾಭದಾಯಕ ಉದ್ಯಮವಾಗುತ್ತಿದೆಯೇ?’ ಎ೦ಬ ವಿಷಯದ ಮೇಲೆ. ಇಲ್ಲಿ ಮೋದಿಯನ್ನು ಎಳೆದು ತ೦ದಿದ್ದೇಕೆ? ಮೋದಿಯೇನು ಸನ್ಯಾಸಿ ಅಲ್ಲ, ಬ್ರಹ್ಮಚಾರಿಯಲ್ಲ, ದೀಕ್ಷೆ ತೆಗೆದುಕೊ೦ಡಿಲ್ಲ. ರಾಜಕೀಯ ಒ೦ದು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಇನ್ನು ಮೋದಿ ಸ್ವಾಮೀಜಿಯಾಗಿ, ಈ “ಪ್ರಗತಿಪರ’ ಸ್ವಾಮಿಗಳಿಗೆ ಸವಾಲಾಗಿ ನಿ೦ತವರೂ ಅಲ್ಲ. ಯೆಸ್, ಇಲ್ಲೇ ಸ್ವಾಮಿಗಳ ಕಾವಿಯೊಳಗಿರುವ ಒಬ್ಬ “ಪ್ರಗತಿಪರ’ ಮೆಲ್ಲನೆ ಹೊರಗೆ ಬರುವುದು.
ಸ್ವಾಮಿಗಳಾದವರು ಜನರಿಗೆ ಪ್ರವಚನ ಮಾಡುತ್ತಾ, ಅವರನ್ನು ಒಳ್ಳೆಯ ಮಾಗ೯ದತ್ತ ಕರೆದುಕೊ೦ಡು ಹೋಗಬೇಕು. ಆದರೆ, ಈ ಬೇಲಿ ಮಠದ ಸ್ವಾಮಿ ಮತ್ತು ನಿಡುಮಾಮಿಡಿ ಸ್ವಾಮಿಯೇ ಸ್ವತಃ ದಾರಿ ತಪ್ಪಿ, ಅತ೦ತ್ರರಾಗಿ ಹಲ್ಲು ಬಿಡುತ್ತಿರುವುದು ಕಣ್ಣಿಗೆ ಕಾಣಿಸುತ್ತಿದೆ. ಸ್ವಾಮಿದ್ವಯರೇ ನಿಮಗೇಕೆ ಮೋದಿಯ ಉಸಾಬರಿ? ಒಬ್ಬ ಸ್ವಾಮಿಯಾದವರಿಗೆ ವಿಚಾರ ಸ೦ಕಿರಣದಲ್ಲಿ ವಿಷಯಕ್ಕೆ ತಕ್ಕನಾಗಿ ಮಾತನಾಡುವ ಹಾಗೆ ಮನಸ್ಸಿನ ಮೇಲೆ ಹಿಡಿತವೇ ಇಲ್ಲ. ಇನ್ನು ಈ ಪುಣ್ಯಾತ್ಮರು ಜನರಿಗೇನು ಬೋಧನೆ, ಪ್ರವಚನ ಮಾಡುತ್ತಾರೆ? ಹೀಗೆ ಮಾತಿನ ಮೇಲೆ, ಮನಸ್ಸಿನ ಮೇಲೆ ಹಿಡಿತವಿಲ್ಲದವರ ಪ್ರವಚನದ ಸರಕು ಮೂರು ಕಾಸಾದರೂ ಬೆಲೆ ಬಾಳುತ್ತದೆಯೇ? ಜನರ ಕಣ್ಣು ತೆರೆಯುತ್ತದೆಯೇ? ವಿಚಾರ ಸ೦ಕಿರಣ ಮಾಡುವುದು ಜನರಿಗೆ ತಿಳಿಯದ ಎಷೆ್ಟೂೀ ವಿಚಾರಗಳನ್ನು ಅವರಿಗೆ ತಲುಪಿಸುವುದಕ್ಕಾಗಿ ಮತ್ತು ಜನರೊ೦ದಿಗೆ ಚಚೆ೯ ಮಾಡಿ ಹಲವಾರಿ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ. ಆದರೆ, ಮೊನ್ನೆ ನಡೆದ ಈ “ಪ್ರಗತಿಪರ’ ಸ್ವಾಮಿಗಳ ವಿಚಾರ ಸ೦ಕಿರಣ ಮೋದಿಯತ್ತ ತಿರುಗಿದ್ದು ನೋಡಿದರೆ ತಿಳಿಯುವುದೇನೆ೦ದರೆ, ಇದು ಬ್ಯೆಯುವ ಚಟ ತೀರಿಸಿಕೊಳ್ಳಲು ಮಾಡಿದ್ದು ಎ೦ದು.
ಅದಕ್ಕೆ ಮಾಧ್ಯಮಗಳ ಬಿಟ್ಟಿ ಪ್ರಚಾರ ಬೇರೆ. ಯಾವುದೇ ಒ೦ದು ಸ೦ಚಲನ ಮೂಡಬೇಕೆ೦ದರೆ, ಒ೦ದು ದಿನದಲ್ಲಿ ಆಗುವುದಿಲ್ಲ. ಸ್ವತಃ ಅಲ್ಲಾಹ…, ಜೀಸಸ್, ವಿಷ್ಣುವೇ ಬ೦ದು “ನಾನು ಹೇಳುತ್ತಿದ್ದೇನೆ, ಯೋಗ ಮಾಡಿ, ನಿಮ್ಮ ಮನಸ್ಸು ಮತ್ತು ದೇಹದ ಆರೋಗ್ಯ ಸರಿ ಹೋಗುತ್ತದೆ’ ಎ೦ದರೇ ಕೇಳದ ದಡ್ಡ ಶಿಖಾಮಣಿಗಳು ಪ್ರಪ೦ಚದಲ್ಲಿರುವಾಗ, ಜನರಿಗೆ ಯೋಗದ ಮಹತ್ವ ಗೊತ್ತಾಗುವುದು ಹೇಗೆ? ಭಾರತೀಯರಿಗೆ ಯೋಗದ ಪರಿಚಯವಿದ್ದರೂ ಅದನ್ನು ಬಹಳಷ್ಟು ಜನ ಅಳವಡಿಸಿಕೊ೦ಡಿರಲಿಲ್ಲ. ಕ್ರಮೇಣ ಕೆಲ ಸ೦ಘ ಸ೦ಸ್ಥೆಗಳು ಯೋಗವನ್ನು ಸಣ್ಣದಾಗಿ(ಸೂಯ೯ ನಮಸ್ಕಾರ) ಶುರು ಮಾಡಿಕೊಳ್ಳುವುದರ ಮೂಲಕ ಭಾರತದಲ್ಲಿ ಒ೦ದು ಅಲೆ ಎಬ್ಬಿಸಿದರು. ಅದು ವಿದೇಶಿಯರಿಗೆ ತಿಳಿದು ಅವರೂ ಸ್ವಯ೦ ಪ್ರೇರಿತವಾಗಿ ಆರ೦ಭೀಸಿದರು. ಹೇಳಿ ಕೇಳಿ, ಇತರ ದೇಶಗಳು ಹೆಚ್ಚು ಸತ್ಯಾ೦ಶ, ದಾಖಲೆ, ಅಧ್ಯಯನಗಳನ್ನೇ ನ೦ಬುವ೦ಥವರು. ಅ೦ಥವರು ಸಹ ಯೋಗವನ್ನು ಒಪ್ಪಿಕೊ೦ಡಿದ್ದಾರೆ ಎ೦ದರೆ ಯೋಗದಲ್ಲಿ ಒ೦ದು ಶಕ್ತಿ ಇದೆಯೆ೦ದು ಅಥ೯ವಲ್ಲವೇ? ಭಾರತದಿ೦ದ ಎದ್ದ ಆ ಅಲೆ ಇ೦ದು ವಿಶ್ವದೆಲ್ಲೆಡೆ ಮುಟ್ಟಿ, ಮೋದಿ ” ಜೂ. 21ನೇ ತಾರೀಕು ಯೋಗ ದಿನ’ ಎ೦ದಾಗ 177 ದೇಶಗಳು ಹಷ೯ ವ್ಯಕ್ತ ಪಡಿಸಿ ಯೋಗ ಮಾಡುತ್ತಿವೆ ಎ೦ದರೆ ಭಾರತಕ್ಕೆ ಇದಕ್ಕಿ೦ತಲೂ ಹೆಮ್ಮೆ ಇನ್ನೇನು ಬೇಕು? ಇ೦ದು ಈ ಒ೦ದು ದಿನ ಸಾಧ್ಯವಾಗಿದ್ದೇ, ಯೋಗಥಾನ್, ಯೋಗ ಕಾ೦ಪಿಟೇಷನ್, ಬಹುಮಾನ, ಬಿರುದು ಕೊಡುವ ಒ೦ದೊ೦ದು ಸಣ್ಣ ಕೆಲಸಗಳ ಮೂಲಕ.
ಅಲ್ಲ ಬೇಲಿ ಮಠದ ಸ್ವಾಮಿಗಳೇ, ನೀವು ಹುಟ್ಟಿದಾಕ್ಷಣವೇ ಸ್ವಾಮಿಗಳಾಗಿಬಿಟ್ರಾ? ಹುಟ್ಟಿದ ತಕ್ಷಣ ಕಾವಿ ಉಟ್ಟು ಮ೦ತ್ರಾಕ್ಷತೆ ಕೊಡಲು ಶುರು ಮಾಡಿದ್ರಾ? ತೊಟ್ಟಿಲಲ್ಲಿರಬೇಕಾದರೇ ಶೀಷಾ೯ಸನ ಹಾಕಿದ್ರಾ? ಒ೦ದು ಮೂಗು ಮುಚ್ಚಿ ಪ್ರಾಣಾಯಾಮ ಮಾಡಿದ್ರಾ? ಇಲ್ಲ ತಾನೆ? ಸ್ವಾಮಿಗಳಾದ ನಿಮ್ಮ ಮಾತುಗಳು ಎಷ್ಟು ಮೂಖ೯ತನದಿ೦ದ ಕೂಡಿದೆಯೆ೦ದು ನಿಮಗೇ ಅನಿಸುತ್ತಿಲ್ಲವೇ? ನಿಡುಮಾಮಿಡಿಯವರದ್ದು ಕಾಮಿಡಿ ಅನಿಸಲಿಲ್ಲವೇ?
ಇದೇ ಬೇಲಿ ಮಠ ಮತ್ತು ನಿಡುಮಾಮಿಡಿ ಮಠದ ಸ್ವಾಮಿಗಳು ಹೇಳುವ ಹಾಗೆ ಇ೦ದು ಯೋಗ ಕೇವಲ ವ್ಯಾಯಾಮ ಆಗಿದೆಯ೦ತೆ. ಯೋಗ ಮನಸ್ಸಿಗೆ ಸ೦ಬ೦ಧಿಸಿದ್ದು ಹೌದು. ಆದರೆ, ಕೇವಲ ಮನಸ್ಸಿಗಷ್ಟೇ ಸೀಮಿತವಾಗಿದ್ದರೆ, ಪತ೦ಜಲಿ ಮಹಷಿ೯ಗಳು ಯೋಗಕ್ಕೆ ಆಸನಗಳನ್ನು ಏಕೆ ಮಾಡಿಟ್ಟರು? ಯೋಗಾಸನ ಎ೦ಬ ಪದ ಹುಟ್ಟಿದ್ದಾದರೂ ಹೇಗೆ? ಸರಿ, ಅದೆಲ್ಲ ಬಿಡಿ, ಸುಮ್ಮನೆ ನೀವೇನೋ ಬಾಯಿಗೆ ಬ೦ದ ಹಾಗೆ ಹೇಳಿದಿರಿ ಎ೦ದು ಜನರು ಮನೆಗೆ ಹೋಗಿ ಕಣ್ಣು ಮುಚ್ಚಿ ಕುಳಿತರೆ ಯೋಗದ ಮಹತ್ವ ಅವರಿಗೆ ಗೊತ್ತಾಗುತ್ತದೆಯೇ? ಮನಸ್ಸಿನ ಪರಿವತ೯ನೆ ಯಾಗಿಬಿಡುತ್ತದೆಯೇ? ಸ್ವಾಮಿಗಳೇ, ನಿಮ್ಮ ಬುದ್ಧಿ ಮಟ್ಟ ಇನ್ನು ಎಷ್ಟು ಕೆಳಗಿದೆ ಎ೦ದು ನೀವೇ ಘೋಷಿಸಿಬಿಡಿಯಲ್ಲ? ಸ೦ಚಲನ ಹೇಗೆ ಮೂಡುತ್ತದೆ ಎನ್ನುವುದು ಗೊತ್ತಿಲ್ಲ.
ಯೋಗ ಗೊತ್ತಿಲ್ಲ, ಆಸನಗಳು ಗೊತ್ತಿಲ್ಲ, ಆದರೆ, ಮೋದಿಯನ್ನು ಮಾತ್ರ ವಿರೋಧಿಸಬೇಕು. ಈಗ ಅನುಮಾನ ಬರುವುದು ಇವರು ನಿತ್ಯವೂ ಯೋಗ ಮಾಡುತ್ತಾರೋ ಅಥವಾ ಯೋಗದ ಹೆಸರಿನಲ್ಲಿ ನಿದ್ದೆ ಮಾಡುತ್ತಾರೋ ತಿಳಿಯಬೇಕಿದೆ. ಇ೦ಥವರೆಲ್ಲ ಯೋಗದ ಬಗ್ಗೆ ಪ್ರವಚನ ಕೊಡುತ್ತಿರುವುದು ಮಾತ್ರ ನಮ್ಮ ದೌಭಾ೯ಗ್ಯವೇ ಸರಿ. ನಿಡುಮಾಮಿಡಿ ಸ್ವಾಮಿ ಕಾಯ೯ಕ್ರಮದಲ್ಲಿ ಆಡಿದ ಚಿನ್ನದ೦ಥ ಮಾತೆ೦ದರೆ ಒ೦ದೇ ಒ೦ದು – “ದೇಶದಲ್ಲಿ ದಾರಿದ್ರ್ಯಕ್ಕಿ೦ತ ಅಜ್ಞಾನವೇ ದೊಡ್ಡ ಸಮಸ್ಯೆ’ ! ಈಗ ಅ೦ಥ ಅಜ್ಞಾನ ಸ್ವಾಮಿಗಳಲ್ಲೇ ಇರುವುದು ಮಾತ್ರ ಇನ್ನೂ ದೊಡ್ಡ ಸಮಸ್ಯೆ.
ಈ ಸ್ವಾಮಿಗಳಿಗೆ ಯೋಗದ ಬಗ್ಗೆ ಬಿಲ್ಕುಲ್ ಮಾಹಿತಿ ಇಲ್ಲ ಎ೦ದು ಸಾಬೀತು ಮಾಡುವುದಕ್ಕೆ ಇದಕ್ಕಿ೦ತ ವಿಶ್ಲೇಷಣೆ ಬೇಕಾ? ಸರಿ, ಯೋಗ ಬಿಟ್ಟಾಕಿ. ಪೇಟೆ೦ಟ್, ಆಯುವೇ೯ದ ಔಷಧಗಳು, ಯೋಗದ ಇತರ ಟೆಕ್ನಿಕ್ಗಳ ಬಗ್ಗೆಯಾದರೂ ಜ್ಞಾನವಿದೆಯಾ? ಇಲ್ಲ. ಇ೦ಥವರು ಬಾಬಾ ರಾಮ್ದೇವ್ರ ಪತ೦ಜಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಿಗುವುದರ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೆ ಬೇಲಿ ಮಠದ ಸ್ವಾಮಿಗಳು ಕೊಡುವ ಉದಾಹರಣೆ ಅವರ ಬುದ್ಧಿಮತ್ತೆಯನ್ನು ಸೂಚಿಸುತ್ತದೆ. “ಎಲ್ಲರ ತಲೆ ನೋವಿಗೆ ಒ೦ದೇ ಟ್ರೀಟ್ಮೆ೦ಟ್ ಕೊಡುತ್ತಾರಾ? ಒಬ್ಬರ ತಲೆ ನೋವು ಇನ್ನೊಬ್ಬಗಿ೦ತಲೂ ವಿಭೀನ್ನ. ಆಯುವೇ೯ದದಲ್ಲಿ ಆಯಾ ವ್ಯಕ್ತಿಗೆ ಅನುಗುಣವಾಗಿ ಔಷಧ ಕೊಡುತ್ತಾರೆ. ಪತ೦ಜಲಿ ಮತ್ತು ಚವನ್ಪ್ರಾಶ ಹೆಸರಿನಲ್ಲಿ ಎಲ್ಲರಿಗೂ ಏಕರೀತಿಯ ಔಷಧಗಳು ಕೊಡುತ್ತಿದ್ದಾರೆ’ ಎ೦ದು ತಮ್ಮ ಒಳಗಿದ್ದ ಉರಿಯನ್ನು ಅರುಹಿದ್ದಾರೆ. ಆದರೆ, ಈ ಸ್ವಾಮಿಗಳಿಗೆ ಆಯುವೇ೯ದ ಮತ್ತು ಔಷಧಗಳ ಬಗ್ಗೆಯೂ ಗೊತ್ತಿಲ್ಲ, ತಾವು ದೂರುತ್ತಿರುವವರ ಬಗ್ಗೆಯೂ ಸುತಾರಾ೦ ಏನೂ ಗೊತ್ತಿಲ್ಲ ಎ೦ಬುದು ತಿಳಿಯುವುದು ಹೇಗೆ೦ದು ನೀವೇ ನೋಡಿ. ಒಬ್ಬ ಆಯುವೇ೯ದ ತಜಞನ ಬಳಿ ಒ೦ದೇ ರೀತಿಯ ಔಷಧಗಳು ಸುಮಾರಿರುತ್ತವೆ. ಶೀತ, ತಲೆ ನೋವು, ಜ್ವರ ಬ೦ದಾಗ ಬಹುತೇಕರಿಗೆ ಒ೦ದೇ ರೀತಿಯ ಔಷಧಗಳನ್ನು ಕೊಡುತ್ತಾರೆ. ಆದರೆ, ಅವರ ದೇಹದ ವಾತ, ಪಿತ್ತಕ್ಕೆ ಅನುಗುಣವಾಗಿ ಔಷಧ ತೆಗೆದುಕೊಳ್ಳುವ ಪ್ರಮಾಣವನ್ನೂ ತಿಳಿಸುತ್ತಾರೆ.
ಹದ ತಪ್ಪಿದರೆ ಅದೂ ವಿಷವೇ ಆಗುತ್ತದೆ. ಇನ್ನು ಬೇರೆ ಬೇರೆ ಕಾಯಿಲೆಗೆ ಬೇರೆ ಬೇರೆ ಔಷಧಗಳನ್ನು ಕೊಡುತ್ತಾರೆ. ಹೀಗೆ ಸಾಕಷ್ಟು ವಿಧದ ಪತ೦ಜಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ತಲೆ ನೋವಿಗೆ “ಪತ೦ಜಲಿ ಚವನ್ಪ್ರಾಶ’ ತಿನ್ನುತ್ತಾನೆ ಎ೦ದು ಯಾವ ಮುಠ್ಠಾಳ ನಿಮಗೆ ಹೇಳಿದ್ದು ಬೇಲಿ ಮಠದ ಸ್ವಾಮಿಗಳೇ? ಯಾವುದೋ ಸಮಸ್ಯೆಗೆ ಯಾವ್ಯಾವುದೋ ಮಾತ್ರೆ ತಿನ್ನಬಾರದು ಎ೦ದೇ ಬಾಬಾ ರಾಮ್ದೇವ್ ಅವರು ಅಲ್ಲಲ್ಲಿ ಪತ೦ಜಲಿ ದವಾಖಾನೆಗಳನ್ನು ಮಾಡಿ, ನುರಿತ ವೈದ್ಯರನ್ನು ಇಟ್ಟಿರುವುದು. ಇದು ಸಹ ಅವರಿಗೆ ಗೊತ್ತಿಲ್ಲ. ಈ ಬೇಲಿ ಮಠದ ಸ್ವಾಮಿ ಮತ್ತು ನಿಡುಮಾಮಿಡಿ ಸ್ವಾಮಿಗಳಿಗೆ ಹತ್ತಿರುವ ಉರಿ ಏನೆ೦ದರೆ, ಪತ೦ಜಲಿ ಉತ್ಪನ್ನಗಳ ಮೂಲಕ, ಯೋಗವನ್ನು ಹೇಳಿ ಕೊಡುವ ಮೂಲಕ ಬಾಬಾ ರಾಮ್ದೇವ್ ಜಗದ್ವಿಖ್ಯಾತಿಯಾಗಿದ್ದಾರೆ. ರವಿಶ೦ಕರ್ ಗುರೂಜಿ ವಿಶ್ವದೆಲ್ಲೆಡೆ(ಸ೦ಸ್ಕೃತಿಯೇ ಇಲ್ಲದೇ ರಾಕ್ಷಸರ೦ತೆ ಬೆಳೆದ ದೇಶದಲ್ಲೂ) ತಮ್ಮ ಆಶ್ರಮವನ್ನು ಸ್ಥಾಪಿಸಿ ವಿಶ್ವ ಶಾ೦ತಿಗಾಗಿ ಶ್ರಮಿಸುತ್ತಿದ್ದಾರೆ. ಇವರೆಲ್ಲ ಯಾವುದಾದರೂ ಕಾಯ೯ಕ್ರಮ ಮಾಡಿದರೆ, ಜನರು ಲಕ್ಷ ಲಕ್ಷ ಸ೦ಖ್ಯೆಯಲ್ಲಿ ಬರುತ್ತಾರೆ. ಮೋದಿ, ಯೋಗದಿನವನ್ನು ತ೦ದರು. ಆದರೆ, ಈ “ಪ್ರಗತಿಪರ’ ಸ್ವಾಮಿಗಳು ಕಾಯ೯ಕ್ರಮ ಮಾಡುವುದಿರಲಿ, ವಿಚಾರ ಸ೦ಕಿರಣ ಕರೆದರೇ ಮೂರು ಮತ್ತೊ೦ದು ಜನರು ಬರುತ್ತಾರೆ. ಸನ್ಮಾನ ಮಾಡಿ, ಹೂವು ಹಣ್ಣು ಕೊಡುವುದಕ್ಕೆ ಬ೦ದರೆ, ಚಪ್ಪಾಳೆ ತಟ್ಟುವವರಿಲ್ಲ… ಚಪ್ಪಾಳೆ ತಟ್ಟುವವರಿದ್ದರೆ, ಸ್ಮರಣಿಕೆ ಕೊಡಲು ಜನರಿಲ್ಲ. ಯೋಗದ ಬಗ್ಗೆ ಹೇಳಿ ಏನಾದರೂ ಪ್ರವಚನ ಕೊಡೋಣ ಎ೦ದರೆ, ಅದೂ ಜಗದ್ವಿಖ್ಯಾತಿಯಾಗಿದೆ. ಜ್ಯೋತಿಷ್ಯ ಹೇಳೋಣವೆ೦ದರೆ ಜನರು ನ೦ಬುವುದಿಲ್ಲ. ದೊಡ್ಡ ದೊಡ್ಡ ಹೋಮ, ಹವನ ಮಾಡಲು ಮ೦ತ್ರಗಳೇ ಬರುವುದಿಲ್ಲ. ಮ೦ತ್ರ ಬ೦ದರೂ ಉಚ್ಚಾರಣೆಗೆ ನಾಲಗೆಯೇ ಹೊರಳುವುದಿಲ್ಲ. ಒಮ್ಮೆ ಇವೆರಡು ಬ೦ದರೂ, ಮು೦ದುವರಿಯುವ ಹಾಗಿಲ್ಲ. ಕಾರಣ “ಪ್ರಗತಿಪರ’ ಸ್ವಾಮಿ ಎ೦ಬ ಸ್ವಯ೦ ಘೋಷಿತ, ಸ್ವಯ೦ಕೃತ ಕಮ೯. ಇನ್ನೇನಾದರೂ ಮಾಡಬೇಕಲ್ಲವೇ ಹೆಸರು ಮಾಡುವುದಕ್ಕೆ? ಖ್ಯಾತರನ್ನು ಬ್ಯೆದಾದರೂ ಏನಾದರೂ ಮಾಡುವ ತವಕವಷ್ಟೇ. ಇ೦ದು ನಿಡುಮಾಮಿಡಿ ಮತ್ತು ಬೇಲಿ ಮಠ ಸ್ವಾಮಿದ್ವಯರ “ಜ್ಞಾನ’ ಪ್ರದಶ೯ನ. ನಾಳೆ ಮತ್ತೊಬ್ಬ ಸ್ವಾಮಿಯದ್ದು

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya