ಅಕ್ಬರ್ ಶಾಂತಿಪ್ರಿಯನಂತೆ, ಭಗತ್ ಸಿಂಗ್ ಉಗ್ರಗಾಮಿಯಂತೆ

16Apr16_PK_AE_AE_7_R1_page1_image4

ಒಂದು ನಾಣ್ನುಡಿ ಇದೆ. ಒಬ್ಬ ಗುರುವೇನಾದರೂ ತಪ್ಪು ಮಾಡಿದರೆ ಅಥವಾ ಏನಾದರೂ ತಪ್ಪು ಬೋಧಿಸಿದರೆ ಅವನ ಶಿಷ್ಯಂದಿರು ಕೆಡುತ್ತಾರಂತೆ. ಪೋಷಕರು ತಪ್ಪು ಮಾಡಿದರೆ ಅವರ ಮಕ್ಕಳು ಕೆಡುತ್ತಾರೆ. ಆದರೆ, ಒಬ್ಬ ಲೇಖಕ ತಪ್ಪು ಮಾಡಿದರೆ ಇಡೀ ಪೀಳಿಗೆಯೇ ದಾರಿ ತಪ್ಪುತ್ತದೆ. ಈ ಮಾತು ಕೇಳುವುದಕ್ಕೆ ಕಠಿಣ ಎನಿಸಿದರೂ ಇದು ಸಾರ್ವಕಾಲಿಕ ಸತ್ಯ. ಇಂಥ ನಾಣ್ನುಡಿಗೆ ಉದಾಹರಣೆ NCERT(National Council Of Research and Training) ಮುದ್ರಿಸುತ್ತಿರುವ ಪುಸ್ತಕಗಳು. ಗ್ರಹಚಾರ ಏನೆಂದರೆ ಇವರು ಮುದ್ರಿಸುವ ಪುಸ್ತಕಗಳು ಯಾರು ಬೇಕಾದರೂ ತೆಗೆದುಕೊಂಡು, ಓದದೆಯೂ ಬಿಸಾಡುವಂಥದ್ದಲ್ಲ. ಕಡ್ಡಾಯವಾಗಿ ಓದಬೇಕು ಎನ್ನುವಂಥದ್ದು. ಇಲ್ಲಿ ಓದುಗರೂ ಯಾರೂ ಮೇಧಾವಿಗಳಲ್ಲ. ಇನ್ನೂ ಜಗತ್ತೇ ಗೊತ್ತಿರದ ಮಕ್ಕಳು.

ಈ ಮಕ್ಕಳ ಪಠ್ಯದಲ್ಲಿರುವ ಅಂಶಗಳು ನೋಡಿ: ೮ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬರೆದಿದ್ದಾರೆ ‘ಪಾಕಿಸ್ತಾನವು ನಮಗೆ ಏನೇ ತೊಂದರೆ ಮಾಡಿರಬಹುದು, ಅಥವಾ ಅಲ್ಲಿನ ಮುಸಲ್ಮಾನರಿಗೆ ಏನೇ ಮಾಡಿರಬಹುದು. ಆದರೆ ನಮಗೆ ಪಾಕಿಸ್ತಾನದೊಂದಿಗೆ ಸಭ್ಯ ರೀತಿಯಲ್ಲಿ ಒಂದು ಒಪ್ಪಂದವಿದೆ. ಅದರ ಪ್ರಕಾರ ನಾವು ಪಾಕಿಸ್ತಾನಿಯರಿಗೆ ಭದ್ರತೆಯನ್ನು ಒದಗಿಸಿಕೊಡಬೇಕು. ಅಂಥ ಜಾತ್ಯತೀತ ನಾಡಲ್ಲಿ ನಾವು ಅವರ ಹಕ್ಕುಗಳಿಗಾಗಿ ಪ್ರತಿಪಾದಿಸಬೇಕು.’

 

‘ಕ್ರಾಂತಿಕಾರಿ ಉಗ್ರವಾದ: 

ಭಗತ್ ಸಿಂಗ್, ರಾಜಗುರು, ಸುಖದೇವರು ಈ ಕ್ರಾಂತಿಕಾರಿ ಉಗ್ರವಾದಕ್ಕೆ ನಾಂದಿ ಹಾಡಿದವರು. ಅವರಿಗೆ ಸ್ವಾತಂತ್ರ್ಯವನ್ನು ಭಿಕ್ಷೆಯ ರೀತಿಯಲ್ಲಿ ಬೇಡಲು ಇಷ್ಟವಿರಲಿಲ್ಲ. ಹಾಗಾಗಿ ತಮ್ಮದೇ ತಂಡ ಕಟ್ಟಿ, ಶಸ್ಠಾಉಸ್ಠಉಗಳ ಅಭ್ಯಾಸ ಕೊಟ್ಟು ಉಗ್ರವಾದ ನಡೆಸಿದರು.’

‘ಮೋದಿಯಿಂದ ಎಷ್ಟೋ ಹಳ್ಳಿಗಳು ನಾಶವಾಗಿ ಹೋಗಿವೆ, ಎಷ್ಟೋ ರೈತರು, ಹಳ್ಳಿಗರು ನಿರ್ಗತಿಕರಾಗಿದ್ದಾರೆ.’

‘ಹಿಂದೂಗಳು, ಭಾರತೀಯರು ಇಡೀ ಜಗತ್ತಿಗೆ ಭಾರತವೇ ಸಾಕಷ್ಟು ಕೊಡುಗೆ ನೀಡಿದೆ ಎಂದು ತಿಳಿದವರು. ಆದರೆ ಮೊದಲೇ ಜಗತ್ತು ಬಹಳ ಮುಂದಿತ್ತು’

ಇದೆಲ್ಲ ಮಕ್ಕಳಿಗೆ ಹೇಳಿಕೊಡುವಂಥ ಪಾಠವಾ? ಮಕ್ಕಳ ಬಳಿ ಹೋಗಿ ಮೋದಿಯಿಂದ ದೇಶ ಹಾಳಾಗಿದೆ ಎಂದು ಯಾವುದೇ ಪುರಾವೆ ಇಲ್ಲದೇ ಹೇಳಿದರೆ, ಭಾರತೀಯರು ಜಗತ್ತಿಗೆ ಏನೂ ಕೊಟ್ಟಿಲ್ಲ ಎಂದರೆ ಅದನ್ನೇ ಉರು ಹೊಡೆದು ಪರೀಕ್ಷೆ ಪಾಸಾಗಿ ಮತ್ತೆ ಅಂಥದ್ದೇ ಮನಸ್ಥಿತಿ ಬೆಳೆಸಿಕೊಳ್ಳುತ್ತಾರೆ. ಇನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಅನವರತ ಶ್ರಮಿಸಿದ ಭಗತ್ ಸಿಂಗ್, ರಾಜ ಗುರು, ಸುಖದೇವರು ಉಗ್ರಗಾಮಿಗಳು ಎಂದರೆ ದೇಶಕ್ಕಾಗಿ ಮಡಿದವರು ನೆಹರೂರವರೇ? ಈ ಅಷ್ಟೂ ಪಾಠಗಳು ಶ್ರೀಮಂತ ಶಾಲೆಗಳು ಅನುಸರಿಸುವ ಇಸಿಎಸ್ಸಿ ಸಿಲೆಬಸ್ನಲ್ಲಿ, ಇಂಗ್ಲಿಷ್ ಭಾಷೆಯಲ್ಲಿದೆ. ಮಗುವಿನ ಮನಸ್ಥಿತಿ ಹೇಗಿರುತ್ತದೆ ಎಂದರೆ, ಅಮ್ಮ ಯಾರನ್ನು ತೋರಿಸಿ ‘ಮಗು, ಇವರನ್ನು ಅಪ್ಪ ಎಂದು ಕರಿ’ ಎಂದರೆ ಅವರನ್ನು ಅಪ್ಪ ಎಂದು ಕರೆಯುತ್ತದೆ. ಅಮ್ಮ ಏನು ಹೇಳಿಕೊಡುತ್ತಾಳೋ ಅದೇ ಸತ್ಯ. ಮಗು ಎಷ್ಟು ನಂಬಿರುತ್ತದೆ ಎಂದರೆ ತನ್ನ ಹೆಸರನ್ನೂ ಅಮ್ಮ ಹೇಳಿದ ಮೇಲೇ ಅದಕ್ಕೆ ಗೊತ್ತು. ಇದಾದ ನಂತರ ಮಕ್ಕಳು ನಂಬುವುದು ಶಾಲೆ ಮತ್ತು ಮಾಸ್ತರರು. ಇಂಥ ಮಗುವಿನ ತಲೆಯಲ್ಲಿ ಮೋದಿ ಕೆಟ್ಟವರು, ಭಗತ್ ಸಿಂಗ್, ರಾಜಗುರು ಸುಖದೇವರು ಉಗ್ರಗಾಮಿಗಳು ಎಂದು ತುಂಬುವುದರಿಂದ ಅವರು ಆ ಕ್ಷಣ ಪರೀಕ್ಷೆ ಬರೆದು ಬುದಿಟಛಿವಂತರಾಗಬಹುದು. ಆದರೆ ಇದರಿಂದ ಆಗಬಹುದಾದ ದೊಡ್ಡ ಪರಿಣಾಮವೆಂದರೆ ಒಂದು ಪಂಗಡವೇ ಉಗ್ರಗಾಮಿಗಳಾಗಬಹುದು, ನಕ್ಸಲರಾಗಬಹುದು. ಹೆಚ್ಚೆಂದರೆ ಬುದಿಟಛಿಜೀವಿ ಎಂಬ ಸ್ವಘೋಷಿತ ಪಟ್ಟ ಗಿಟ್ಟಿಸಿಕೊಳ್ಳಬಹುದು. ಇಂಥ ಪಾಠ ಹೇಳಿಕೊಟ್ಟ ಘೆಇಉಖ ಮುಖ್ಯ ಉದ್ದೇಶವಾದರೂ ಏನು? ಏನು ಸಾಧಿಸಿತು?

ಮಕ್ಕಳ ಮನಸ್ಸಲ್ಲಿ ವಿಷಬೀಜ ಬಿತ್ತುವುದರಿಂದಾಗುವ ಪರಿಣಾಮವನ್ನು ತಿಳಿಸುವಂಥ ಘಟನೆಯಿಲ್ಲಿದೆ – ಪ್ರಧಾನಿ ಮೋದಿಯವರು ಯಾವುದೋ ಒಂದು ದಿನ ಎಲ್ಲ ಶಾಲೆಗಳೂ ತಮ್ಮ ಕಿರುಮಾತನ್ನು ಪ್ರಸಾರ ಮಾಡುವಂತೆ ಆಜ್ಞೆ ನೀಡಿದರು. ಪ್ರಧಾನಿಯಿಂದಲೇ ಇಂಥ ಆಜ್ಞೆ ಬಂದಾಗ ಪಾಲಿಸದೇ ಇರಲು ಸಾಧ್ಯವಿರಲಿಲ್ಲ. ಆದರೆ ವೀಡಿಯೋವನ್ನು ಪ್ರಸಾರ ಮಾಡಿಯಾದ ಮೇಲೆ ಬಂದ ಕೆಲವು ಟೀಚರ್‌ಗಳು ಮತ್ತು ಹೊರಗಿನವರು ಮೋದಿ ಬಗ್ಗೆ ಇಲ್ಲಸಲ್ಲದ್ದು ಹೇಳಿ ಅವರ ತಲೆ ತುಂಬಿಸಿದ್ದಾರೆ. ಇದರ ಪರಿಣಾಮ, ಮಕ್ಕಳಿಗೆ ಮೋದಿಯ ಮಾತುಗಳು ಹೇಗನಿಸಿತು ಎಂದು ಮಾಧ್ಯಮಗಳು ಕೇಳಿದಾಗ ನಾಲಿಗೆಗೂ ಮನಸ್ಸಿಗೂ ಮತ್ತು ದೊಡ್ಡವರು ಹೇಳಿಕೊಟ್ಟ ಮಾತುಗಳಿಗೂ ಫಿಲ್ಟರ್ ಇಲ್ಲದೇ ‘ಯಾರು ಮೋದಿನಾ? ಏನ್ ಅವ್ನು ಏನ್ ಸಾಧನೆ ಮಾಡಿದಾನೆ ಅಂತ ನಾವು ಅವನ ಮಾತು ಕೇಳಬೇಕು? ಪ್ರಧಾನಿ ಯಾರು ಬೇಕಾದ್ರೂ ಆಗಬಹುದು. ಆತ ನಮ್ಮ ಟೈಮೆಲ್ಲ ವೇಸ್ಟ್ ಮಾಡಿದ’ ಎಂದೆಲ್ಲ ಮಾತಾಡಿದರು. ಮಾಧ್ಯಮದವರು ಆ ವೀಡಿಯೋ ಮಾಡುತ್ತಿದ್ದಾಗ ಮಕ್ಕಳ ಪಕ್ಕದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇದ್ದದ್ದು ಕಂಡು ಬಂತು.

ಯಾರೋ ಮೂರನೆಯವರು ಬಂದು ಮೋದಿ ವಿರುದ್ಧ ಕೇವಲ ಒಂದು ತಾಸು ಮಾತಾಡಿದ್ದಕ್ಕೆ ಮಕ್ಕಳು ಈ ರೀತಿಯಲ್ಲಿ ಮೋದಿಯ ಬಗ್ಗೆ ಅಸಹ್ಯ ಹುಟ್ಟಿಸಿಕೊಂಡು, ದೊಡ್ಡವರು ಎನ್ನದೇ ಏಕವಚನದಲ್ಲಿ ಮಾತಾಡುತ್ತಾರೆ ಎಂದಾದರೆ ಇಡೀ ವರ್ಷವಷ್ಟೇ ಅಲ್ಲ, 7,8,9,10ನೇ ತರಗತಿಯಲ್ಲಿ ಇಂಥದ್ದೇ ಪಾಠ ಓದಿಕೊಂಡು ರ್ಯಾಂ ಕ್ನಲ್ಲಿ ಪಾಸಾದವರು ಅದು ಎಷ್ಟರ ಮಟ್ಟಿಗೆ ದೇಶ, ಕಾಶ್ಮೀರ ವಿವಾದ, ಪಾಕಿಸ್ತಾನ, ಹಿಂದೂ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮೂಡಿಸಿಕೊಂಡಿರಬಹುದು. 10ನೇ ತರಗತಿಯ ನಂತರ ಇವರೆಲ್ಲರೂ ಕಾಲೇಜು ಪಾಲಾಗುವುದರಿಂದ, ತಾವು ಇಷ್ಟು ದಿನ ಕಲಿತಿದ್ದೆಲ್ಲ ಸುಳ್ಳು ಎಂದು ಅವರಿಗೆ ಅರಿವೇ ಇರುವುದಿಲ್ಲ. ಎಲ್ಲೋ ನೂರಕ್ಕೆ ಒಬ್ಬಿಬ್ಬರು ಹೊರಗಡೆಯೂ ಒಳ್ಳೆಯ ಸಂಸ್ಕಾರ ಸಿಕ್ಕು ಸರಿ ದಾರಿ ಹಿಡಿಯುತ್ತಾರೆ.

ಐಸಿಎಸ್ಸಿ ಸಿಲೆಬಸ್ಸಲ್ಲಿ ಇಂಥ ಪಾಠಗಳನ್ನು ಅಂದು ಕಪಿಲ್ ಸಿಬಲ್ ಕಾಲದಲ್ಲಿ ಹಾಕಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಸ್ಮೃತಿ ಇರಾನಿ ಬಂದರೂ ಅಂಥ ಡಿಸ್ಟಾರ್ಟೆಡ್ ಇತಿಹಾಸ ಪುಸ್ತಕಗಳನ್ನು ಇನ್ನೂ ಬದಲಾಯಿಸಲಾಗೇ ಇಲ್ಲ. ಕಾಂಗ್ರೆಸ್ನವರಿಗೆ ಮೋದಿಯ ಬಗ್ಗೆ ಯಾವ್ಯಾವ ಅಭಿಪ್ರಾಯಗಳಿತ್ತೋ ಅವಷ್ಟನ್ನೂ ಪುಸ್ತಕಗಳಲ್ಲಿ ಓದಬಹುದು. ೨೦೦೨ರ ಗುಜರಾತ್ ಹತ್ಯಾಕಾಂಡದಿಂದ ಹಿಡಿದು ಮೋದಿ ಒಬ್ಬ ಮೋಸಗಾರ ಎನ್ನುವವರೆಗೂ.

ಮಹಾರಾಷ್ಟ್ರದ ಜಬಲ್ಪುರದ NCERT ಪುಸ್ತಕದಲ್ಲಿ ಮಹಾಪುರುಷರ ಪಟ್ಟಿ ಎಂಬ ತಲೆ ಬರಹ ಕೊಟ್ಟು ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್‌ರಿಗೆ ಮೂರನೇ ಸ್ಥಾನದಲ್ಲಿರಿಸಿದ್ದಾರೆ. ಇವರ ಕೆಳಗಡೆ ಅಟಲ್ ಬಿಹಾರಿ ವಾಜಪೇಯಿಯವರ ಫೋಟೊ ಹಾಕಿದ್ದಾರೆ. ಇತಿಹಾಸವನ್ನೂ ಹಾಳು ಮಾಡಿದ್ದಲ್ಲದೇ ಮಹಾಪುರುಷರ ಸಾಲಲ್ಲಿ ಶತ್ರು ರಾಷ್ಟ್ರದ ಮಾಜಿ ಪ್ರಧಾನಿಯನ್ನಿರಿಸಿದ್ದಾರೆ ಎಂದರೆ, ನಿಜಕ್ಕೂ ಕಾಂಗ್ರೆಸ್, ದೇಶದ ಮಕ್ಕಳನ್ನು ಹಾಳು ಮಾಡಬೇಕೆಂದು ಪಣ ತೊಟ್ಟಿದೆ ಎನ್ನುವುದು ಸಾಬೀತಾಗುತ್ತದೆ. ಇದೇ ಮಕ್ಕಳಿಗೆ ರಾಹುಲ್ ಗಾಂಧಿ ದೊಡ್ಡ ವೀರ, ಶೂರ, ಕೆಳಮಟ್ಟದಿಂದ ಮೇಲೆ ಬಂದವರು, ಬಡವರ ಬಂಧು, ಮೇಧಾವಿ ಎಂದೆಲ್ಲ ಹೊಗಳಿ ಅವರ ಬಗ್ಗೆಯೇ ನಾಲ್ಕು ಪುಟಗಳ ವಿವರಣೆ ಬೇರೆ ಇದೆ. ಸರಿಯಾಗಿ ಮಾತಾಡಲೂ ಬರದೇ, ಒಂದು ಮಾತಾಡಲು ಹೋಗಿ ಮತ್ತೊಂದು ಮಾತಾಡಿ ನಗೆಗೀಡಾಗುವ ರಾಹುಲ್ ಗಾಂಧಿಗೆ ನಾಲ್ಕು ಪುಟ ಮೀಸಲಿಡುವ ಅವಶ್ಯಕತೆಯಾದರೂ ಏನಿದೆ? ಮತ್ತು ಮಕ್ಕಳು ರಾಹುಲ್ ಗಾಂಧಿ ಬಗ್ಗೆ ಮರೆಯಲೇ ಬಾರದು ಎಂದು ಪ್ರತೀ ಪುಟದ ಕೊನೆಗೆ ಅವರ ಜೀವನದ ಬಗ್ಗೆ ಪ್ರಶ್ನೆಗಳನ್ನು ಉತ್ತರಿಸಬೇಕಾಗುತ್ತದೆ.

ಪಂಜಾಬ್ನಿಂದ ಟಿಬೆಟ್ ತನಕ ತನ್ನ ರಾಜ್ಯವನ್ನು ಪರಾಕ್ರಮದಿಂದ ವಿಸ್ತರಿಸಿದ ಮಹಾರಾಜ ರಂಜಿತ್ ಸಿಂಗ್ ಬಗ್ಗೆ ಕೇವಲ ಹತ್ತೇ ಹತ್ತು ಸಾಲಲ್ಲಿ ಮುಗಿಸಿ, ಯಾವುದೋ ದೇಶದಿಂದ ಬಂದು ನಮ್ಮ ದೇಶವನ್ನು ಆಕ್ರಮಿಸಿಕೊಂಡ, ದೇವಸ್ಥಾನಗಳನ್ನು ಖುದ್ದು ನಿಂತು ಧ್ವಂಸ ಮಾಡಿದ ಅಕ್ಬರ್ ಬಗ್ಗೆ ಒಂದು ಪಾಠವೇ ಇದೆ. ಇದರಿಂದ ಮಕ್ಕಳು ಅಕ್ಬರ್ ದಿ ಗ್ರೇಟ್ ಎನ್ನುತ್ತಾರೆಯೇ ವಿನಃ ರಂಜಿತ್ ಸಿಂಗ್ನ ಸಾಹಸ ಪರಿಚಯವೇ ಆಗುವುದಿಲ್ಲ. ಕಾಂಗ್ರೆಸ್ನವರ ಈ ದಬ್ಬಾಳಿಕೆ ಮತ್ತು ಮಕ್ಕಳ ಮೂಲಕ ತಮ್ಮ ಇರಾದೆ ತೀರಿಸಿಕೊಳ್ಳುವ ಇವರ ವರ್ತನೆಯನ್ನು ಪ್ರಶ್ನಿಸಿದ್ದಕ್ಕೆ ಇವೆಲ್ಲವೂ ಇತಿಹಾಸ, ಸೋನಿಯಾ ಗಾಂಧಿ ಮತ್ತು ರಾಹುಲ್ ದೇಶ ಕಂಡ ಅತ್ಯುತ್ತಮ ನಾಯಕರು. ಅವರ ಪರಿಚಯ ಮಕ್ಕಳಿಗಿರಬೇಕು ಎಂದಿದ್ದರು. ಆದರೆ, ಆಂಧ್ರಪ್ರದೇಶ ಇಬ್ಭಾಗವಾಗಿ ತೆಲಂಗಾಣ ರಾಜ್ಯ ನಿರ್ಮಾಣವಾಗಲು ಕಾರಣರಾದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಬಗ್ಗೆ ಅಲ್ಲಿನ ಪಠ್ಯಪುಸ್ತಕಗಳಲ್ಲಿ ೧೪ ಪುಟಗಳ ಒಂದು ಪಾಠ ಸೇರಿಸಿದ್ದಕ್ಕೆ ‘ಇದು ಸರ್ವಾಧಿಕಾರ, ಚಂದ್ರಶೇಖರ್ರ ಹಿಟ್ಲರ್ ವಾದ’ ಎಂದೆಲ್ಲ ಪ್ರತಿಕ್ರಿಯಿಸಿತ್ತು.

ಇತಿಹಾಸದಿಂದ ಕಲಿಯುವುದು ಬಹಳ ಇದೆ, ಆದರೆ ದುರುದ್ದೇಶ ಪೂರಿತ ಇತಿಹಾಸದಿಂದ ಮಕ್ಕಳ ಭವಿಷ್ಯವೇನೂ ನೆಟ್ಟಗಾಗುವ ಹಾಗೆ ಕಾಣುತ್ತಿಲ್ಲ. ಇನ್ನೂ ಇಂಥ ಅನಿಷ್ಟ ಪಠ್ಯಕ್ರಮವನ್ನು ಬದಲಾಯಿಸದೇ ಅಸಡ್ಡೆ ತೋರಿದರೆ ಮಕ್ಕಳು ಭಾರತದ ಪ್ರಜ್ವಲ ಇತಿಹಾಸವನ್ನು ಓದುವ ಬದಲು ಕಟ್ಟುಕತೆಗಳನ್ನೇ ಓದಿ, ಭಾರತದ ಹಣೆಬರಹವೇ ಇಷ್ಟು ಎಂದು ತಪ್ಪು ದಾರಿ ಹಿಡಿಯುವ ಕಾಲ ಬಹಳ ದೂರವಿಲ್ಲ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya