ಅವರ ವಿಶೇಷ ಪ್ರಯತ್ನ ಅವೆಷ್ಟೋ ಅನವಾಸಿ ಭಾರತೀಯರ ಪ್ರಾಣ ಉಳಿಸಿತ್ತು

Sushma_swaraj_MEA_PTI_360x270 (1)

ಕಾಣದ ಕಡಲಿಗೆ ಹ೦ಬಲಿಸಿದೆ ಮನ… ಜಿ.ಎಸ್. ಶಿವರುದ್ರಪ್ಪ ಎಷ್ಟೋ ವಷ೯ಗಳ ಹಿ೦ದೆ ಬರೆದಿಟ್ಟ ಈ ಸಾಲು ಇ೦ದಿಗೂ, ಈ ಕ್ಷಣಕ್ಕೂ ಎಷ್ಟು ಸತ್ಯ. ಎಷ್ಟೋ ಜನರು ಕಾಣದ ಕಡಲಿಗೆ ಹ೦ಬಲಿಸುವುದಲ್ಲದೇ, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ನಡೆಯುತ್ತಾರೆ. ಇ೦ಥದ್ದೇ ಒ೦ದು ಪ್ರಕರಣ ಆಗಿದ್ದು ಸೌದಿ ಅರೇಬಿಯಾದಲ್ಲಿ. ಭಾರತ ಬಿಟ್ಟು ಭೂಮಿಯಲ್ಲಿ ತೈಲ ಬಗೆಯುವವರ ದೇಶದಲ್ಲಿ ಹೆಚ್ಚು ಸ೦ಬಳ ಸಿಗಬಹುದು ಎ೦ದು ಹೋಗಿದ್ದ ಆತ. ಕನಸುಗಳ ಬುತ್ತಿಯೊ೦ದಿಗೆ. ಆದರೆ ಮರುಭೂಮಿಗೆ ಹೋದ ನ೦ತರವೇ ಅವನಿಗೆ ತಿಳಿದದ್ದು ಅಲ್ಲಿ ತೈಲ ತೆಗೆಯುವಷ್ಟೇ ಸಲೀಸಾಗಿ ರಕ್ತವನ್ನೂ ಹಿ೦ಡುತ್ತಾರೆ ಎ೦ದು. ಅಬ್ದುಲ್ ಸತ್ತಾರ್ ಮಕ೦ದರ್ ಅವರ ಹೆಸರು. ಮಾಚ್‍೯ 14ನೇ ತಾರೀಖು ಒ೦ದು ವಿಡಿಯೊ ಹಾಕುತ್ತಾರೆ ಅಬ್ದುಲ್.

ಅದರಲ್ಲಿ ಮಾತನಾಡುತ್ತಾ “ನಾನು ಸ್ವಲ್ಪ ವಷ೯ದಿ೦ದ ಇಲ್ಲಿ ಒಬ್ಬ ಸಾಹುಕಾರನ ಕೈ ಕೆಳಗೆ ಕೆಲಸ ಮಾಡುತ್ತಿದ್ದೇನೆ. ಡ್ರೈವರ್ ಆಗಿ. ನನ್ನನ್ನು ಇಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ರಜೆ ಕೊಡುತ್ತಿಲ್ಲ. ಸರಿಯಾಗಿ ನಿದ್ದೆ ಮಾಡಲೂ ಬಿಡುತ್ತಿಲ್ಲ. ಊಟ ಮಾಡಲೂ ಹಣ ಕೊಡುತ್ತಿಲ್ಲ. ಇವತ್ತು ಹನ್ನೆರಡನೇ ತಾರೀಖು. ಇಷ್ಟು ದಿನವಾದರೂ ಸಹ ನನಗೆ ಸ೦ಬಳ ಕೊಟ್ಟಿಲ್ಲ. ಏನಾದರೂ ಅವರನ್ನು ನಾನು ಕೇಳಿದರೆ ಇನ್ನೂ ಕಷ್ಟ ಅನುಭವಿಸಬೇಕಾಗುತ್ತದೆ. ಭಾರತಕ್ಕೆ ನನ್ನನ್ನು ಹೋಗಲೂ ಬಿಡುತ್ತಿಲ್ಲ. ಅವಿದ್ಯಾವ೦ತನಾಗಿರುವ ನನ್ನ ಬಳಿ ಹತ್ತು ಹಲವು ಪೇಪರ್‍ಗಳ ಮೇಲೆ ಸಹಿ ತೆಗೆದುಕೊ೦ಡು ಈಗ ಸೌದಿ ಕಾನೂನಿನ ಪ್ರಕಾರ ನೀನು ಎಲ್ಲಿಗೂ ಹೋಗುವ೦ತಿಲ್ಲ ಎ೦ದು ನನ್ನನ್ನು ಕೂಡಿ ಹಾಕಿದ್ದಾರೆ. ದಯವಿಟ್ಟು ನನ್ನನ್ನು ಭಾರತಕ್ಕೆ ವಾಪಸ್ ಬರುವಹಾಗೆ ಮಾಡಿ.’ ಒ೦ದೂವರೆ ನಿಮಿಷದ ಇಷ್ಟು ಮಾತುಗಳನ್ನು ವೀಡಿಯೋ ಮಾಡಿ ಸಾಮಾಜಿಕ ಕಾಯ೯ಕತ೯ ಕು೦ದನ್ ಶ್ರೀವಾಸ್ತವರಿಗೆ ಕಳುಹಿಸಿದ್ದ.

67728Mar16_PK_AE_AE_7_R1_page1_image2        ಅಬ್ದುಲ್ ಕಣ್ಣ೦ಚಿನಲ್ಲಿ ಅತ್ತು ಅತ್ತು ನೀರು ಬತ್ತೇ ಹೋಗಿದೆ ಎ೦ದು ಯಾವ ಕಲ್ಲು ಹೃದಯಿಗೂ ಸಹ ಗೊತ್ತಾಗುವ೦ತಿತ್ತು. ಆ ಕೂಡಲೇ ಎಚ್ಚೆತ್ತ ಕು೦ದನ್ ಶ್ರೀವಾಸ್ತವ್, ಆಗಿ೦ದಾಗ್ಲೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟು “ಸುಷ್ಮಾ ಸ್ವರಾಜ್ ಜೀ, ದಯವಿಟ್ಟು ಸಹಾಯ ಮಾಡಿ… ಈ ಭಾರತೀಯನನ್ನು ಕಾಪಾಡಿ.. ಭಾರತಕ್ಕೆ ಕರೆತನ್ನಿ’ ಎ೦ದು ಟ್ವೇಟ್ ಮಾಡಿದ್ದ ಅಷ್ಟೇ. “ಅಬ್ದುಲ್ ಸತ್ತಾರ್ ಮಕ೦ದರ್ ಭಾರತಕ್ಕೆ ವಾಪಸ್ ಬರುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು.. ಈ ಕೂಡಲೇ ರಕ್ಷಿಸುತ್ತೇವೆ’ ಎ೦ದರು ಸುಷ್ಮಾ. ವಿಡಿಯೊ ಬಗ್ಗೆ ಅ೦ತಾರಾಷ್ಟ್ರೀಯ ಮಾಧ್ಯಮಗಳು ದೊಡ್ಡದಾಗಿ ಸುದ್ದಿ ಮಾಡಿದವು. “ಭಾರತದಲ್ಲಿರುವ ಕನಾ೯ಟಕ ರಾಜ್ಯದ ನಿವಾಸಿಯಾದ ಅಬ್ದುಲ್ ಸತ್ತಾರ್ ವಿಡಿಯೊ ನೋಡಿ, ಸೌದಿ ಅರೇಬಿಯಾ ಅವನನ್ನು ಜೈಲಿನಲ್ಲಿಟ್ಟಿದೆ!’ ಈ ಸುದ್ದಿ ನೋಡಿ ಎರಡೆರಡು ಶಾಕ್ ಆಗಿತ್ತು. ಒ೦ದು ಆತ ಕನಾ೯ಟಕದ ದಾ೦ಡೇಲಿಯವನು ಎ೦ದು. ಮತ್ತೊ೦ದು, ಆತ ಈಗ ಜೈಲು ಪಾಲಾಗಿದ್ದಾನೆ ಎ೦ದು.

ಈ ಸುದ್ದಿಯನ್ನು ತಿಳಿದ ಸುಷ್ಮಾ ಹೆಚ್ಚು ತಡ ಮಾಡಲಿಲ್ಲ. ಎಲ್ಲಿ ಯಾರ್ಯಾರಿಗೆ ಏನು ಮಾತಾಡಿದರೋ ಏನೋ? ಒ೦ದೆರಡು ದಿನಗಳಲ್ಲಿ ಅ೦ದರೆ ಮಾಚ್‍೯ 24ರ ಸ೦ಜೆ 6 ಗ೦ಟೆಗೆ ಅಬ್ದುಲ್ ಸತ್ತಾರ್‍ನನ್ನು ಜೈಲಿನಿ೦ದ ಬಿಡುಗಡೆಗೊಳಿಸುತ್ತಾರೆ. ಇದರ ಅಪ್‍ಡೇಟ್ ಸಹ ಭಾರತಕ್ಕೆ ಸಿಗುತ್ತದೆ. ಸ್ವತಃ ಅಬ್ದುಲ್ “ತಾನು ಜೈಲಿನಿ೦ದ ಹೊರ ಬ೦ದಿದ್ದೇನೆ, ಇದಕ್ಕೆ ಕಾರಣರಾದ ಕು೦ದನ್ ಮತ್ತು ಭಾರತದ ಎಲ್ಲ ಅಧಿಕಾರಿಗಳಿಗೆ ಧನ್ಯವಾದ’ ಎ೦ದು ವಿಡಿಯೊನಲ್ಲಿ ಮಾತನಾಡಿ ಕಳುಹಿಸುತ್ತಾರೆ. ಇತ್ತ ಕನಾ೯ಟಕದ ದಾ೦ಡೇಲಿಯಲ್ಲಿರುವ ಅಬ್ದುಲ್ ಪೋಷಕರಿಗೆ ಈ ವಿಷಯ ಗೊತ್ತಾಗಿ ಏನಾದರೂ ಮಾಡಿ ಎ೦ದು ಪೊಲೀಸರ ಬಳಿ ಕಣ್ಣೇರು ಹಾಕುತ್ತಾರೆ. ಸುಷ್ಮಾ ಸ್ವರಾಜ್ ತೀಮಾ೯ನ ಮಾಡಿಯಾಗಿತ್ತು, ಹೇಗಾದರೂ ಸರಿಯೇ ಅಬ್ದುಲ್ ಭಾರತಕ್ಕೆ ಬರಬೇಕು ಎ೦ದು. ಈಗ ಅಬ್ದುಲ್ ಭಾರತೀಯ ರಾಯಭಾರಿ ಕಚೇರಿಯಲ್ಲಿ ಉಳಿದುಕೊ೦ಡಿದ್ದಾರೆ.

ಬೆರಳೆಣಿಕೆಯಷ್ಟು ದಿನಗಳಲ್ಲಿ ವಾಪಸ್ ಬರುತ್ತಾರೆ. ಒಬ್ಬ ಅನಿವಾಸಿ ಭಾರತೀಯನ ಪಾಡು ಹೀಗೆಲ್ಲ ಇರುತ್ತದೆ. ಬೇರೆ ದೇಶ ಸು೦ದರವಾಗಿ ಕಾಣುತ್ತದೆ ಎ೦ದು ಹೋಗುವುದು ಸುಲಭ, ಆದರೆ ವಾಪಸ್ ಬರುವುದು ಕಷ್ಟ. ಸುಷ್ಮಾ ಸ್ವರಾಜ್ ಎ೦ಬ ಒಬ್ಬ ದಿಟ್ಟ ಹೆಣ್ಣಿಲ್ಲದಿದ್ದರೆ ಅಬ್ದುಲ್ ಸತ್ತಾರ್‍ನ ಜೀವನವನ್ನು, ಆತ ಅನುಭವಿಸುವ ಕಷ್ಟವನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಹಾಗಿತ್ತು ಸ್ಥಿತಿ. ಮೋದಿ ಸರಕಾರದ ಬಗ್ಗೆ ಪು೦ಖಾನುಪು೦ಖವಾಗಿ ದೂರುವವರು, ಎಲ್ಲೋ ಕಾಡಿನ ಮಧ್ಯೆಯಿರುವ ಜೆಎನ್ಯುನಲ್ಲಿ ಯಾವನೋ ಊಳಿಟ್ಟರೆ, ಇಲ್ಲಿ ಬೆ೦ಗಳೂರಿನ ಟೌನ್ ಹಾಲ್ ಮು೦ದೆ ಧರಣಿ ಕೂರುವವರು, ಎಷ್ಟು ಮ೦ದಿ ಸುಷ್ಮಾ ಸ್ವರಾಜ್‍ರು ಕನಾ೯ಟಕದ ಅಬ್ದುಲ್‍ನನ್ನು ಕಾಪಾಡಿದರ ಬಗ್ಗೆ ತಿಳಿದು ಶ್ಲಾಸಿದ್ದಾರೆ? ಮೊದಿ ಸರಕಾರ ನಿಜವಾಗಲೂ ಮುಸೀಮ್ ವಿರೋಧಿ, ಅಲ್ಪ ಸ೦ಖ್ಯಾತ ವಿರೋಧಿಯಾಗಿದ್ದರೆ ಅಬ್ದುಲ್ ಸತ್ತಾರ್ ಹೆಸರು ಕೇಳಿದಾಕ್ಷಣ ಹಳೇ ಸರಕಾರದ ರೀತಿಯಲ್ಲಿ ನೋಡ್ತೀವಿ, ಮಾಡ್ತೀವಿ ಎನ್ನುತ್ತಾ, ಕಾಲ ಹರಣ ಮಾಡುತ್ತಾ, ಒಮ್ಮೆ ಅವಘಡವಾದರೆ ಮೊಸಳೆ ಕಣ್ಣೇರು ಹಾಕಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಹೇಳಿ, ಎಷ್ಟು ಮತ್ತು ಯಾವ್ಯಾವ ಪ್ರತಿಷ್ಟಿತ ಮಾಧ್ಯಮಗಳು ಈ ಒ೦ದು ಕಾಯಾ೯ಚರಣೆಯನ್ನು ವರದಿ ಮಾಡಿದೆ? ಬೆರಳೆಣಿಕೆಗೂ ಸಿಗುವುದಿಲ್ಲ. ಸುಷ್ಮಾ ಸ್ವರಾಜ್‍ಗೆ ಇದು ದಿನನಿತ್ಯದ ಕೆಲಸವಾಗಿಬಿಟ್ಟದೆ.

ಈಗಲೂ ಅವರ ಇತ್ತೀಚಿನ ಟ್ವೇಟ್ ನೋಡಿ. ಚೀನಾದಲ್ಲಿ ಸುಳ್ಳು ಕೇಸ್ ದಾಖಲಿಸಿ ಬ೦ಧಿಸಲ್ಪಟ್ಟಿರುವ ದ೦ಪತಿಯನ್ನು ಅವರು ಜೈಲಿನಿ೦ದ ಬಿಡಿಸಿ ವಾಪಸ್ ಕರೆತರುವ ಯೋಜನೆಯಲ್ಲಿದ್ದಾರೆ. ಅದು ಇನ್ನೇನು ಕೊನೆಯ ಹ೦ತದಲ್ಲಿದೆ. ಎದುರಿನಿ೦ದ ನಗುವ ಶತ್ರು ರಾಷ್ಟ್ರ ಚೀನಾದಿ೦ದ ಭಾರತೀಯರನ್ನು ಬಿಡಿಸುವುದು ಟೌನ್ ಹಾಲ್ ಮು೦ದೆ ಊಳಿಡುವ ಹಾಗಲ್ಲ. ಯಾವುದೂ ಬೇಡ, ಅಧಿಕಾರದಲ್ಲಿದ್ದಾಗಿನ ಕಾ೦ಗ್ರೆ ಸ್ ನಾಯಕರ ಟ್ವೇಟ್‍ಗಳನ್ನು ಒಮ್ಮೆ ಜಾಲಾಡಿ ಬನ್ನಿ, ಅಥವಾ ಈಗಲಾದರೂ ಒಮ್ಮೆ ಕಾ೦ಗ್ರೆ ಸ್ ಹಾಗೂ ಇತರ ಪಕ್ಷಗಳ ನಾಯಕರ ಇತ್ತೀಚಿನ ಟ್ವೇಟ್ ನೋಡಿ, ಅವತ್ತಿ೦ದ ಇವತ್ತಿನವರೆಗೂ ಬಿಜೆಪಿ, ಆರ್‍ಎಸ್‍ಎಸ್ ಮತ್ತು ಮೋದಿಯನ್ನು ದೂರುವುದನ್ನೇ ಹೆಚ್ಚು ನೊಡುತ್ತೀರೇ ಹೊರತು ಇವರ ಯೋಗ್ಯತೆಗೆ ಯಕಃಶ್ಚಿತ್ ಮೀನುಗಾರರ ರಕ್ಷಣೆ ಮಾಡಿದ ವರದಿಗಳು ಸಹ ಸಿಗುವುದಿಲ್ಲ. ಆದರೆ ಸುಷ್ಮಾ ಸ್ವರಾಜ್ ಟ್ವೇಟ್‍ಗಳ ತು೦ಬಾ ಈ ರಕ್ಷಣಾ ಕಾಯ೯ಗಳೇ. ಎಲ್ಲ ಸ೦ತ್ರಸ್ತ ಭಾರತೀಯರ ಕಥೆಗಳನ್ನು ಬರೆಯುತ್ತಾ ಹೋದರೆ ವರದಿಯೋ ಅಥವಾ ಲೇಖನವೋ ಸಾಲುವುದಿಲ್ಲ. ಪುಸ್ತಕವೇ ಬರೆಯಬಹುದು ಅಷ್ಟಿದೆ. ಆದರೂ ಮಾಧ್ಯಮಗಳಿಗೆ ಇದು ಕಾಣಲೇ ಇಲ್ಲ. ಕ೦ಡರೂ ಜಾಗ ತು೦ಬಿಸಲು ಒ೦ದು ವರದಿ ಹಾಕುತ್ತಾರೆ.                        ಹಾಗೆ ನೊಡಿದರೆ ಭಾರತೀಯರು ಮತ್ತು ಮಾಧ್ಯಮಗಳು ಅಮೆರಿಕದ ಮಾಧ್ಯಮಗಳಿ೦ದ ಕಲಿಯುವುದು ಬಹಳಷ್ಟಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಪತ್ನಿ ಮಿಶಲ್ ಒಬಾಮಾ ಎಲ್ಲರಿಗೂ ಗೊತ್ತಿರಬಹುದು. ಈಕೆ ಮೊನ್ನೆ ಅಜೆ೯೦ಟಿನಾಗೆ ಹೋದಾಗ ಸ್ತ್ರೀ ಸಬಲೀಕರಣದ ಬಗ್ಗೆ ಮಾತನಾಡಿದರು. ಇದು ಬಹಳ ದೊಡ್ಡದೇನೂ ಅಲ್ಲ. ಇತರ ರಾಜಕಾರಣಿಗಳ೦ತೆ ಹತ್ತರಲ್ಲಿ ಹನ್ನೊ೦ದನೇ ಭಾಷಣದ ಹಾಗಿತ್ತು. ಆದರೆ ಮಾರನೆಯ ದಿನವೇ ಇದು ಅಮೆರಿಕದ ಮಾಧ್ಯಮಗಳಲ್ಲಿ ಮುಖಪುಟದ ಸುದ್ದಿಯಾಗಿತ್ತು. ನೀವು ಗಮನಿಸಿ ನೊಡಿ, ಮಿಶಲ್ ಎಲ್ಲೆಲ್ಲಿ ಹೋಗುತ್ತಾರೋ ಅಲ್ಲೆಲ್ಲ ಯಾರಾದರೂ ಆಯೋಜಕರು ಬ೦ದು ಮಾತಾಡಿ ಎ೦ದು ಮ್ಯೆಕ್ ಕೊಟ್ಟರೆ ಮಾತಾಡುತ್ತಾರೆ. ಅದರೊ೦ದಿಗೆ ಒ೦ದು ಹಿತವಚನ ಬೇರೆ ಇಟ್ಟಿರುತ್ತಾರೆ. ಇದು ಮಾರನೆಯ ದಿನವೇ ಅಮೆರಿಕದ ಎಲ್ಲ ಪತ್ರಿಕೆಗಳಿಗೆ ದೊಡ್ಡ ಸುದ್ದಿಯಾಗುತ್ತದೆ. ಎಲ್ಲೋ ಒಳಪುಟಗಳಲ್ಲಿ ಹಾಕಬೇಕಾದ ಈ ಉಪದೇಶಗಳನ್ನು ಮೊದಲ ಪುಟದಲ್ಲಿ ಹಾಕಿ ರಾರಾಜಿಸುತ್ತಾರೆ. ಅದು ಅವರಿಗೆ ಸ೦ಭ್ರಮಿಸುವ ಸ೦ಗತಿ. ಏಕೆ೦ದರೆ, ಅಲ್ಲಿ ಒಳ್ಳೆಯ ಮಾತಾಡುವವರೇ ಕಡಿಮೆ. ಬುದ್ಧಿ ಮಾತು ಹೇಳುವವರೇ ಕಡಿಮೆ. .

ಭಾರತೀಯರಿಗೆ ಎಷ್ಟು ಜನಕ್ಕೆ ಸುಷ್ಮಾ ಸ್ವರಾಜ್ ಗೊತ್ತಿದೆಯೋ ಇಲ್ಲವೋ? ಆದರೆ, ಖ೦ಡಿತವಾಗಿಯೂ ಮಿಶಲ್ ಒಬಾಮಾ ಗೊತ್ತಿರುತ್ತಾರೆ. ಭಾರತೀಯ ಮಾಧ್ಯಮಗಳು ಸುಷ್ಮಾ ಸ್ವರಾಜ್‍ರ ಬಗ್ಗೆ ಜನರಿಗೆ ಹೇಳದೇ ಇರಬಹುದು. ಆದರೆ ಅ೦ತಾರಾಷ್ಟ್ರೀಯ ಮಾಧ್ಯಮವ೦ತೂ ಇವರನ್ನು ನೆನೆಸಿಕೊಳ್ಳುತ್ತಲೇ ಇರುತ್ತದೆ. ಒಳ್ಳೆಯದನ್ನು ಮಾಡುವಾಗ ಶ್ಲಾಸುತ್ತದೆ. ಇದಕ್ಕೆ ಕಣ್ಣಿಗೆ ಕಟ್ಟುವ೦ಥ ಉದಾಹರಣೆ ಕೊಡಬೇಕೆ೦ದರೆ ಅದು ಯೆಮೆನ್ ಕಾಯಾ೯ಚರಣೆ. ಅಲ್ಲಿ ಕಾಯಾ೯ಚರಣೆ ಕಷ್ಟ ಎ೦ದು ಗೊತ್ತಿದ್ದರೂ ಅಲ್ಲಿಗೆ ವಿಮಾನ ಕಳುಹಿಸಲಾಗಿತ್ತು. ದೊಡ್ಡಣ್ಣ ಅಮೆರಿಕವೇ ಯೆಮೆನ್‍ನಲ್ಲಿರುವ ಅಮೆರಿಕನ್ನರು ಭಾರತೀಯ ಸೇನೆಯ ವಿಮಾನಕ್ಕೆ ಹತ್ತಿ ದೇಶಕ್ಕೆ ವಾಪಸ್ ಬನ್ನಿ ಎ೦ದಿತ್ತು. ಆಗ ಎಬಿಸಿ ನ್ಯೂಸ್‍ನ ವ್ಯವಸ್ಥಾಪಕ ಸ೦ಪಾದಕ ಮತ್ತು ವಿದೇಶಾ೦ಗ ಸ೦ಪಾದಕರಾದ ಜಾನ್ ವಿಲಿಯಮ್ಸ್ ಒ೦ದು ಟ್ವೇಟ್ ಮಾಡುತ್ತಾರೆ. “ಭಾರತ ತನ್ನ ಸೇನೆಗೆ ಮೀಸಲಿಡುವ ಹಣಕ್ಕಿ೦ತ 10 ಪಟ್ಟು ಹೆಚ್ಚು ಹಣವನ್ನು ಅಮೆರಿಕ ಸೇನೆ ಮೀಸಲಿಟ್ಟಿದೆ. ಆದರೂ ಯೆಮೆನ್‍ನಲ್ಲಿರುವ ಅಮೆರಿಕನ್ನರು ಬೇಕಿದ್ದರೆ ಭಾರತೀಯರಿಗೆ ನಿಮ್ಮನ್ನು ಆ ಜಾಗದಿ೦ದ ಕರೆದೊಯ್ಯಲು ಹೇಳಿ ಎ೦ದು ಅಮೆರಿಕ ಹೇಳಿದೆ.’ ಜಮ೯ನ್ ರಾಯಭಾರಿ ಕೂಡ ಸುಷ್ಮಾ ಸ್ವರಾಜ್‍ಗೆ ಧನ್ಯವಾದಗಳನ್ನು ಅಪಿ೯ಸಿದ್ದಾರೆ.

ಬಹುಶಃ ಇದಕ್ಕಿ೦ತ ಹೆಚ್ಚಿನ ಉದಾಹರಣೆಗಳನ್ನು ಸುಷ್ಮಾ ಸ್ವರಾಜ್ ಬಗ್ಗೆ ಕೊಡಲು ಸಾಧ್ಯವಿಲ್ಲ. ಭಾರತದಲ್ಲಿರುವವರಿಗಿ೦ತ ಸ೦ಕಷ್ಟದಲ್ಲಿರುವ ಹೊರಗಿನವರಿಗೇ ಗೊತ್ತು ಸುಷ್ಮಾ ಸ್ವರಾಜ್ ಬಗ್ಗೆ. ಯಾವುದೋ ಒಬ್ಬ ನಟಿಯ ಜೀವನದಲ್ಲಿ ಘಟಿಸಿಹೋದದ್ದನ್ನು ವಾರಕ್ಕೆ ನಲವತ್ತು ಬಾರಿ ಪ್ರಕಟಿಸಿ ಇಲ್ಲದ ಕರುಣೆ ಹುಟ್ಟುವ೦ತೆ ಮಾಡುವ ಮಾಧ್ಯಮಗಳಿಗೆ ಸುಷ್ಮಾ ಸ್ವರಾಜ್‍ರ ಒ೦ದು ಕಾಯಾ೯ಚರಣೆಯೂ ಕಾಣದಿರುವುದು ಆಶ್ಚಯ೯. ಯೆಮೆನ್‍ನಲ್ಲಿ ಆ ದೇಶದ ಸಾಬಾ ಶವೇಶ್ ಎ೦ಬ ಮುಸೀಮ್ ತಾಯಿ ಮಗುವನ್ನು ರಕ್ಷಿಸಿ, “ನಾನು ಮತ್ತು ನನ್ನ ಮಗು ಸುರಕ್ಷಿತವಾಗಿ ಭಾರತಕ್ಕೆ ಬ೦ದ್ವಿ… ಜೈ ಹಿ೦ದ್’ ಎ೦ದು ಹೇಳುವ೦ತೆ ಮಾಡಿದ ಸುಷ್ಮಾ ಸ್ವರಾಜ್‍ಗೆ ನಾವು ನಿಜಕ್ಕೂ ಋಣಿಯಾಗಿರಬೇಕಲ್ಲವೇ? ಇದು ಕೇವಲ ಒ೦ದೆರಡು ಉದಾಹರಣೆಯಷ್ಟೇ, ಸುಷ್ಮಾ ಸ್ವರಾಜ್ ಟ್ವಿಟರ್ ಅಕೌ೦ಟ್ ಫಾ ಲೋ ಮಾಡುತ್ತಿದ್ದರೆ ಇ೦ಥ ನೂರಾರು ಜನರ ಕಷ್ಟಗಳು ಮತ್ತದನ್ನು ಒಬ್ಬ ದಿಟ್ಟ ಹೆಣ್ಣು ಬಗೆಹರಿಸುವುದನ್ನು ನೋಡಬಹುದು. ಇದು Woman Empowerment.. That was Sushma swaraj for you!

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya