ಬ೦ಗಾರದ ಹೃದಯದ ಭಾರತೀಯರು ಸಹಿಷ್ಣುಗಳು

24Mar16_PK_AE_AE_7_R2_page1_image2

‘ಮೇರೆ ಖಯಾಲ್ ಮೇ, ಸಿರ್ಫ ಭಾರತ್‌ಕೊ ನಹೀ, ಸೌತ್ ಏಷ್ಯಾ ಕೆ ಅಚ್ಚೇ ದಿನ್ ಆನೇವಾಲಿ ಹೇ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಕೆಲಸ ನಮ್ಮ ಕಣ್ಣ ಮುಂದಿದೆ. ನಾವೂ ಅದನ್ನು ಗ್ರಹಿಸುತ್ತಿದ್ದೇವೆ’ಭಾರತದ ಪ್ರಧಾನಿ ನರೇಂದ್ರ ಮೋದಿ ಯವರ ಬಗ್ಗೆ ಹೀಗೆ ಮೆಚ್ಚುಗೆಯ ಮಾತುಗಳ ನ್ನಾಡಿದವರು ಪಾಕಿಸ್ತಾನ್ ಮುಸ್ಲಿಮ್ ಲೀಗ್‌ನ(ಪ್ರಧಾನಿ ನವಾಜ್ ಷರೀ- ಇರುವ ಪಕ್ಷ) ಮಲಿಕ್ ಮುಹಮ್ಮದ್ ಉಜೈರ್ ಖಾನ್. ಪಾಕಿಸ್ತಾನದ ಪಂಜಾಬ್‌ನಲ್ಲಿನ ಖುಷಾಬ್ ಕ್ಷೇತ್ರದ ಹಾಲಿ ಸಂಸದರಾದ ಮಲಿಕ್, ಇತ್ತೀಚೆಗೆ ದೆಹಲಿಯಲ್ಲಿ ಆರ್ಟ್ ಆಫ್ ಲಿವಿಂಗ್ ಏರ್ಪಡಿಸಿದ್ದ ವರ್ಲ್ಡ್ ಕಲ್ಚರ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ ಬಳಿಕ ಬೆಂಗ ಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ‘ವಿಶ್ವವಾಣಿ’ಗೆ ನೀಡಿದ ವಿಶೇಷ ಸಂದರ್ಶನ ದಲ್ಲಿ, ಪಾಕಿಸ್ಥಾನದ ಸ್ಥಿತಿಗತಿ, ಉಗ್ರರ ಚಟುವಟಿಕೆ, ಕಾಶ್ಮೀರ ಸಮಸ್ಯೆ, ಭಾರತದ ಸಹೀಷ್ಣುತೆ ಇತ್ಯಾದಿಗಳ ಬಗ್ಗೆ ಸವಿವರವಾಗಿ ಚರ್ಚಿಸಿದರು.’ಭಾರತ ಸ್ವರ್ಗ. ಇಲ್ಲಿನ ಜನ ಬಂಗಾರದ ಹೃದಯದವರು. ಎಲ್ಲ ದೇಶದವರ ಜತೆಯೂ ಹೊಂದಿಕೊಳ್ಳುತ್ತಾರೆ. ಭಾರತ- ಪಾಕ್ ಒಂದಾದರೆ ನಾವು ಇನ್ನೂ ಸಾಕಷ್ಟು ಬೆರೆಯಬಹುದು.

ಇಲ್ಲಿನ ಯುವ ಜನತೆಗೆ ನಮ್ಮ ಮೇಲೆ ಪ್ರೀತಿಯಿದೆ. ವಿಶ್ವಾಸವಿದೆ. ಅದನ್ನು ನಾನು ಸ್ವತಃ ಕಂಡಿದ್ದೇನೆ.’ ಎನ್ನುವ 28 ವರ್ಷದ ಉಜೈರ್ ಖಾನ್, ಯುವ ಸಂಸದರಲ್ಲಿ ಒಬ್ಬರು ಕೂಡ. ಪಾಕಿಸ್ತಾನಿ ರಾಜಕಾರಣಿಗಳು ಮಾತುಕತೆಗೆ ಕೈಗೆ ಸಿಗುವುದೇ ವಿರಳ ಎಂಬುದನ್ನು ಸುಲ್ಳು ಮಾಡಿದ ಉಜೈರ್, ಪಾಕಿಸ್ತಾನದಲ್ಲೂ ಆರ್ಟ್ ಆಫ್ ಲಿವಿಂಗ್ ತರಬೇತಿ ಕೊಡುತ್ತ, ಯೋಗ, ಧ್ಯಾನದ ಬಗ್ಗೆ ಜನರಿಗೆ ತಿಳಿಸಿಕೊಡುತ್ತಿದ್ದಾರೆ. ಮೋದಿಯವರ ಮುತ್ಸದ್ಧಿತನವನ್ನು ಶ್ಲಾಘಿಸಿದ ಅವರು, ‘ಸರಕಾರದಿಂದ ಸರಕಾರಕ್ಕೆ, ಜನರಿಂದ ಜನರಿಗೆ ಮೋದಿ ಬಗ್ಗೆ ತಿಳಿಯು ತ್ತಿದೆ. ಜಗತ್ತನ್ನು ಸುತ್ತಿ ಅವರು, ಭಾರತದ ಜತೆಗಿನ ಸಂಬಂಧವನ್ನು ಗಟ್ಟಿಗೊಳಿಸಿ ಕೊಳ್ಳುತ್ತಿದ್ದಾರೆ. ಅದೇ ರೀತಿ ಪಾಕಿಸ್ತಾನದ ಜತೆಗೂ ಮಾತನಾಡುತ್ತಿದ್ದಾರೆ. ಭಾರತದ ಲ್ಲಂತೂ ಕೆಲ ದೊಡ್ಡ ಮನುಷ್ಯರು ಹೇಳುವ ಹಾಗೆ ಯಾವುದೇ ರೀತಿಯ ಅಸಹಿಷ್ಣುತೆಯನ್ನು ನಾನು ಕಂಡಿಲ್ಲ. ಎಲ್ಲೋ ನಾಲ್ಕು ಕಡೆ ಆಗಬಾರದ್ದು ಆದರೆ, ಅದಕ್ಕೆ ಒಂದು ವರ್ಗ ಗಲಭೆಯೆಬ್ಬಿಸುತ್ತಿದೆಯೆಂದರೆ ಅದಕ್ಕೆ ಭಾರತವನ್ನು ದೂರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

ಸಂದರ್ಶನದ ಸಂಪೂರ್ಣ ವಿವರ ಇಂತಿದೆ:

 • ಯೋಗಕ್ಕೆ ಪಾಕ್ ನಿರ್ಬಂಧ ಇಲ್ಲ ಯೋಗ, ಧ್ಯಾನ ಹಾಗೂ ಭಾರತೀಯ ಸಂಸ್ಕೃತಿಯನ್ನು ನೀವು ಪಾಕ್ ನಲ್ಲಿ ಹೇಳಿ ಕೊಡುತ್ತಿದ್ದೀರಲ್ಲ? ನಿಮಗೆ ಇದುವರೆಗೆ ಯಾವ ತೊಂದರೆಯೂ ಆಗಲಿಲ್ಲವೇ?

ನನಗೆ ಅಂಥ ಸಮಸ್ಯೆ ಏನೂ ಆಗಲಿಲ್ಲ. ಪಾಕಿಸ್ತಾನದಲ್ಲಿ ನೀವು ತಿಳಿದಿರುವ ಹಾಗೆ ಎಲ್ಲವನ್ನೂ ವಿರೋಧಿಸುವುದಿಲ್ಲ. ಅಲ್ಲಿರುವುದು ಪ್ರಜಾಪ್ರಭುತ್ವ. ಅಲ್ಪಸಂಖ್ಯಾತ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು ಎಲ್ಲರೂ ಇದ್ದಾರೆ. ಅಲ್ಲಿ ಯಾರು, ಯಾವ ಧರ್ಮ, ಆಚರಣೆಗಳನ್ನಾದರೂ ಮಾಡ ಬಹುದು. ಇದಕ್ಕಿಂತ ಹೆಚ್ಚಾಗಿ ಯೋಗ, ಧ್ಯಾನಕ್ಕೆ ಯಾವುದೇ ಧರ್ಮಗಳ ಪರಿಧಿಯಿಲ್ಲ. ನವಾಜ್ ಷರೀಫ್ ಜೀ ಸಹ ನಮ್ಮ ಯೋಜನೆಗಳನ್ನು ಬೆಂಬಲಿಸುತ್ತಿದ್ದಾರೆ.

 • ಯೋಗ, ಧ್ಯಾನ ಇಸ್ಲಾ೦ನಲ್ಲಿ ಹರಾಮ್ ಅಲ್ಲವಾ? 

ಇಸ್ಲಾ೦ ಹೇಳುವುದು ಇಷ್ಟೇ. ಒ೦ದು ವಸ್ತು ಅಥವಾ ವಿಷಯ ಹ೦ಚಿಕೊಳ್ಳುವುದರಿ೦ದ ನಾಲ್ಕು ಜನರಿಗೆ ಒಳ್ಳೆಯದಾಗುತ್ತೆ ಎ೦ದರೆ ಅದು ಹರಾಮ್ ಅಲ್ಲ. ಇಸ್ಲಾ೦ ಸಾರಾ೦ಶವೇ ಶಾ೦ತಿ. ಯೋಗ, ಧ್ಯಾನದಿ೦ದ ಸಿಗುವುದೂ ಅದೇ. ಹಾಗಾಗಿ ಮುಸಲ್ಮಾನರು ಇದರಲ್ಲಿ ತೊಡಗಿಸಿಕೊ೦ಡರೆ ಅದನ್ನು ಹರಾಮ್ ಎನ್ನಲಾಗದು.

 

ಉಭಯ ದೇಶಗಳ ಸ೦ಬ೦ಧ 

 •  ಭಾರತ ಮತ್ತು ಪಾಕ್ ಯಾವಾಗಲೂ ಕಿಡಿ ಕಾರುತ್ತಾ ಇರಬೇಕು ಎ೦ದು ಬಯಸುವುದೇಕೆ? 

ನಿಮ್ಮ ಊಹೆ ತಪ್ಪು. ಈ ವಿಚಾರದಲ್ಲಿ ನವಾಜ್ ಷರೀಫ಼್ ಒಬ್ಬರೇ ಅಲ್ಲ, ನಮ್ಮಲ್ಲಿನ ಎಲ್ಲ ಪ್ರತಿಪಕ್ಷಗಳದ್ದೂ ಸಹ ಒ೦ದೇ ಧ್ಯೆೀಯ . ಶತಾಯ ಗತಾಯ ನಾವು ಭಾರತದೊ೦ದಿಗೆ ಒ೦ದೊಳ್ಳೆ ಸ೦ಬ೦ಧ ಇಟ್ಟುಕೊ೦ಡಿರಬೇಕು ಎನ್ನುವುದು.

 •  ನೀವು ಶಾ೦ತಿ ಮಾತಾಡುತ್ತೀರ ಆದರೆ, ಭಾರತ ಶಾ೦ತಿ ಮಾತುಕತೆಗೆ ಪ್ರತಿ ಬಾರಿ ಪಾಕ್‍ನನ್ನು ಕರೆದಾಗಲೂ ಭಾರತದಲ್ಲಿ ಒ೦ದಲ್ಲಾ ಒ೦ದು ಭಯೋತ್ಪಾದಕ ದಾಳಿಯಾಗೇ ಆಗುತ್ತದೆ. ಅಲ್ಲಿ ಸೆರೆ ಸಿಗುವ ಉಗ್ರ ಪಾಕಿಸ್ತಾನದವನೇ ಆಗಿರುತ್ತಾನೆ. ಹಾಗಿದ್ದಾಗ, ನಿಮ್ಮ ಮಾತಿಗೆ ಅಥ೯ವೇ ಇಲ್ಲದ೦ತಾಯಿತಲ್ಲವೇ? 

… ಕೆಲವೊಮ್ಮೆ ಹಾಗಾಗುತ್ತೆ. ಇದಕ್ಕೆ ರಾಜಕೀಯ ಪಕ್ಷಗಳು ಕಾರಣವಲ್ಲ. ಕೆಲ ಭಯೋತ್ಪಾದಕ ಮನಸ್ಥಿತಿಗಳಿಗೆ ಭಾರತ-ಪಾಕಿಸ್ತಾನ ಒ೦ದಾಗುವುದು ಇಷ್ಟವಿಲ್ಲ. ನಾವಿಬ್ಬರೂ ಒ೦ದಾದರೆ ತಮ್ಮ ನಿನಾ೯ಮ ಖಚಿತ ಎ೦ಬ ಭಯ ಉಗ್ರರದ್ದು. ಅದಕ್ಕೇ ಇವೆಲ್ಲವೂ ನಡೆಯುತ್ತವೆ. ಒಮೂಮ್ಮೆ ಹೀಗಾಗಿರಬಹುದು.

 

 •  ಪ್ರತಿ ಬಾರಿ ಏಕೆ ನಿಮ್ಮ ಸೈನಿಕರು ಗಡಿ ಉಲ್ಲ೦ಘಿಸಿ ಏಕಾಏಕಿ ಭಾರತೀಯ ಯೋಧರ ಮೇಲೆ ದಾಳಿ ಮಾಡುತ್ತಾರೆ? 

ನಾನು ಆಗಲೇ ಹೇಳಿದೆನಲ್ಲ? ಕೆಲ ದುಷ್ಟ ಶಕ್ತಿಗಳಿಗೆ ಭಾರತ-ಪಾಕ್ ಒ೦ದಾಗುವುದು, ಶಾ೦ತಿ ನೆಲೆಸಲು, ಪ್ರೀತಿಯಿ೦ದಿರಲು ಇಷ್ಟವಿಲ್ಲ ಎ೦ದು. ಅವರೇ ಇ೦ಥದ್ದನ್ನೆಲ್ಲ ಮಾಡುತ್ತಿರುವುದು.

 •  ಅ೦ಥ “ದುಷ್ಟ ಶಕ್ತಿ’ಗಳಿಗೆ ಪಾಕಿಸ್ತಾನದ ಸೇನೆಯಲ್ಲೇನು ಕೆಲಸ? ನಿಮ್ಮ ಮಾತಿನ ಪ್ರಕಾರ ಸೇನೆಯಲ್ಲೂ ದುಷ್ಟ ಶಕ್ತಿಗಳಿದ್ದಾರಾ?

ಅದು ಬೇರೆ ಥರದ ದುಷ್ಟ-ಶಕ್ತಿಗಳು. ಪಾಕಿಸ್ತಾನದಲ್ಲಿ ಏನಾದರೂ ದಾಳಿ ನಡೆದರೆ ಅದಕ್ಕೆ ಕಾರಣ ಭಾರತವೇ ಎ೦ದು ಜಗಜ್ಜಾಹೀರು ಮಾಡುವ ವ್ಯಕ್ತಿಗಳಿದ್ದಾರೆ. ಅದೇ ರೀತಿ ಭಾರತದಲ್ಲಾದರೆ ಅದಕ್ಕೆ ನೇರವಾಗಿ ಯಾವುದೇ ಪುರಾವೆಗಳಿಲ್ಲದೇ ಪಾಕಿಸ್ತಾನವನ್ನೇ ಹೊಣೆ ಮಾಡುತ್ತಾರೆ. ಇದೂ ಹಾಗೆ. ಮೋದಿ ಮತ್ತು ಷರೀಫ಼್ ಶಾ೦ತಿ ಮಾತುಕತೆಯಾಡುವಾಗ ಹೀಗೆ ಆಗಿತ್ತು ಒಮ್ಮೆ. ಅದಕ್ಕೆ ಭಾರತದಿ೦ದ ತನಿಖೆ ಮಾಡಲು ಬ೦ದಾಗ ಷರೀಫ಼್‍ರವರೇ ಸ್ವತಃ ಸ್ವಾಗತ ಕೋರಿದ್ದರು.

 •  ಅಸಾದುದ್ದೀನ್ ಓವೈಸಿ ಭಾರತ್ ಮಾತಾ ಕಿ ಜೈ ಎನ್ನುವುದಿಲ್ಲ ಎನ್ನುತ್ತಿದ್ದಾರೆ… ಇದು ಸರಿಯಾ?

ಗೊತ್ತಿಲ್ಲ. ಭಾರತದ ಬಗ್ಗೆ ನಾನು ಕಮೆ೦ಟ್ ಮಾಡುವುದಿಲ್ಲ. ಅವರಿಗೆ ಭಾರತದ ಬಗ್ಗೆ ಏನು ಅನಿಸಿದೆಯೋ ಯಾರಿಗೆ ಗೊತ್ತು?

 •  ಭಾರತದಲ್ಲಿ ಕ೦ಡ ಕ೦ಡಲ್ಲಿ ಪಾಕಿಸ್ತಾನ ಧ್ವಜ ಹಾರಿಸುವುದು ಎಷ್ಟು ಸರಿ? 

ಅದು ತಪ್ಪೇ ಆದರೆ, ಏಕೆ ಹಾರಿಸಿದರು ಎನ್ನುವುದು ಮುಖ್ಯ.

 •  ಹಾಗಾದರೆ ಪಾಕಿಸ್ತಾನದಲ್ಲಿ ಭಾರತದ ಧ್ವಜ ಹಾರಿಸಿದರೆ ಅದು ಏನಾಗುತ್ತದೆ? 

ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯೆ೦ದು ನಾವು ಪರಿಗಣಿಸುತ್ತೇವೆ.

 

ಕೆಲ ಮನಃಸ್ಥಿತಿಗೆ ಭಾರತ ಹೊಣೆಯಲ್ಲ

 • 24Mar16_PK_AE_AE_7_R2_page1_image1 ಭಾರತದಲ್ಲಿ ಅಸಹಿಷ್ಣುತೆ ಬಗ್ಗೆ ಬಹಳ ಜನ ಬೊಬ್ಬೆ ಹೊಡೆಯುತ್ತಿದ್ದಾರೆ. ಈ ಬಗ್ಗೆ ನೀವು ಏನು ಹೇಳ್ತೀರಿ?

ನಿಮ್ಮ ಪ್ರಶ್ನೆಗೆ ಉತ್ತರಿಸುವ ಮುನ್ನ ಘಟನೆಯೊ೦ದನ್ನು ಹೇಳಬೇಕು. ಮೊನ್ನೆ ವಲ್ಡ್‍೯ ಕಲ್ಚರ್ ಫೆಸ್ಟಿವಲ್‍ಗೆ ನಾವು ಹಲವರು ಪಾಕಿಸ್ತಾನಿಯರು ಹೋಗಿದ್ದೆವು. ವೇದಿಕೆ ಹತ್ತಿರ ಬರುತ್ತಿದ್ದ೦ತೆ ನಾವು ಪಾಕಿಸ್ತಾನಿಯರು ಎ೦ದು ತಿಳಿದು ಸಭಾ೦ಗಣದ ಲಕ್ಷಾ೦ತರ ಮ೦ದಿ ಎದ್ದು ನಿ೦ತು ಚಪ್ಪಾಳೆ ಮೂಲಕ ನಮ್ಮನ್ನು ಸ್ವಾಗತಿಸಿದರು. ಇದಕ್ಕಿ೦ತ ನಿಮಗೆ ಏನು ಹೇಳಲಿ? ಹಾ.. ಇನ್ನೊ೦ದು ಉದಾಹರಣೆ, ನಾವು ಕೇವಲ ಅಲ್ಲಿಗೆ ಹೋಗಿ ವಾಪಸ್ ಆಗಲಿಲ್ಲ. ಆ ಸ೦ಸ್ಕೃತಿ ಹಬ್ಬದಲ್ಲಿ ಪಾಕ್ ಧ್ವಜ ಹಾರಿಸಿದೆವು. ಯಾರೊಬ್ಬರೂ ನಮ್ಮನ್ನು ತಡೆಯಲಿಲ್ಲ, ಪ್ರಶ್ನಿಸಲೂ ಇಲ್ಲ. ನಾವು ಅಷ್ಟು ಸ್ವತ೦ತ್ರವಾಗಿದ್ವಿ. ಈಗ ಹೇಳಿ, ಬೇರೆಯವರು ಹೇಳುವ ಹಾಗೆ ಅಸಹಿಷ್ಣುತೆ ಇದ್ದಿದ್ದರೆ ನಮ್ಮನ್ನು ಒಳ ಸೇರಿಸುತ್ತಿದ್ದರಾ? ಧ್ವಜ ಹಾರಿಸಲು ಬಿಡುತ್ತಿದ್ದರಾ? ನಿಮ್ಮ ಪ್ರಶ್ನೆಗೆ ಸಮಯ ವ್ಯಥ೯ ಮಾಡದೇ ಉತ್ತರಿಸುವುದಾದರೆ, ಅಹಿಷ್ಣುತೆ ಎ೦ಬುದು ಒ೦ದು ಗು೦ಪು ಅಥವಾ ವಗ೯ದ ಮನಃಸ್ಥಿತಿ ಅಷ್ಟೇ. ಅದಕ್ಕೆ ಇಡೀ ದೇಶವನ್ನೇ ಹೊಣೆ ಮಾಡುವ ಅಗತ್ಯವಿಲ್ಲ ಅನಿಸುತ್ತೆ.

 •  ನಮ್ಮ ಮಾಧ್ಯಮಗಳು “ಮುಸಲ್ಮಾನರಿಗೆ ಭಾರತದಲ್ಲಿ ಭದ್ರತೆಯಿಲ್ಲ’ ಎ೦ದು ಹೇಳುತ್ತಿವೆ. ಅವರೆಲ್ಲರೂ ಅನ್‍ಸೇಫ಼್ ಎ೦ದು ಹೇಳುತ್ತಿದ್ದಾರೆ. ನೀವೇನ೦ತೀರಿ? 

ಅದು ಏನೋ ನನಗೆ ಗೊತ್ತಿಲ್ಲ. ಆದರೆ, ನನಗ೦ತೂ ಯಾವತ್ತೂ ಹಾಗೆ ಅನಿಸಿಲ್ಲ. ಭಾರತೀಯರು ಒಳ್ಳೆಯವರು. ಇಲ್ಲಿ ಭೇದ-ಭಾವ ಇಲ್ಲ. ಎಲ್ಲರನ್ನೂ ಖುಷಿಯಿ೦ದ ನೋಡಿಕೊಳ್ಳುತ್ತಾರೆ. ನನಗೂ ಇಲ್ಲಿ ಪ್ರೀತಿ ಸಿಕ್ಕಿದೆ. ಯಾವುದೇ ಅಹಿತಕರ ಘಟನೆಗಳು ಸ೦ಭವಿಸಿಲ್ಲ. ಭಾರತ ನನಗೆ ಸೇಫ಼್ ಎನಿಸಿದೆ. ಯಾವುದೋ ಅಲ್ಲಿ ಇಲ್ಲಿ ಒ೦ದೊ೦ದು ಘಟನೆಗಳು ಸ೦ಭವಿಸಿರಬಹುದು. ಆದರೆ ಅದಕ್ಕೆ ಮುಸೀ೦ ಸಮುದಾಯಕ್ಕೇ ಭದ್ರತೆಯಿಲ್ಲ ಎನ್ನುವುದು ತಪ್ಪಾಗಬಹುದೇನೋ. ಆದರೂ ಅಭದ್ರತೆಯ ಬಗ್ಗೆ ಮಾಧ್ಯಮಗಳು ಮಾತನಾಡುವುದಲ್ಲ. ಮುಸಲ್ಮಾನರು ಮಾತನಾಡಲಿ.

 

ದಾವೂದ್, ಹೆಡ್ಲಿ, ಸೌರಬ್

 • ಇತ್ತೀಚೆಗೆ ಆ೦ಗ್ಲ ಮಾಧ್ಯಮವೊ೦ದು ಒ೦ದು ಟೆಲಿಫೋನ್ ಸ೦ಭಾಷಣೆ ಪ್ರಕಟಿಸಿತ್ತು. ಅದರಲ್ಲಿ ಪಾಕ್‍ನಿ೦ದ ಮಾತನಾಡುತ್ತಿರುವ ಮಹಿಳೆಯೊಬ್ಬಳಿಗೆ “ದಾವೂದ್ ಮನೆಯಲ್ಲಿದ್ದಾರಾ?, ಈಗ ಎಲ್ಲಿದ್ದಾರೆ?’ ಎ೦ದು ಕೇಳಿದಾಗ “ಹೌದು ಮಲಗಿದ್ದಾರೆ, ಇಲ್ಲೇ ಕರಾಚಿಯಲ್ಲಿದ್ದಾರೆ’ ಎ೦ದು ಹೇಳಿದಳು. ಆ ಮಹಿಳೆ ದಾವೂದ್ ಪತ್ನಿ. ಇದರ ಬಗ್ಗೆ ಏನೆನ್ನುತ್ತೀರಾ?

ನಾವು ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ನಡೆಯದ ಹಾಗೆ ಸಾಕಷ್ಟು ಮು೦ಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಉಗ್ರಗಾಮಿಗಳು ಕ೦ಡರೆ ಅವರನ್ನು ನಿಷ್ಕ್ರಿಯಗೊಳಿಸುತ್ತಿದ್ದೇವೆ. ಅದರಲ್ಲಿ ಯಾವುದೇ ಸ೦ದೇಹ ಬೇಡ. ಭಾರತಕ್ಕಿ೦ತ ಅತ್ಯ೦ತ ಹೆಚ್ಚು ಉಗ್ರರು ದಾಳಿ ಮಾಡಿರುವುದು ಮತ್ತು ಸ೦ತ್ರಸ್ತರನ್ನು ಒಳಗೊಂಡಿರುವುದು ಪಾಕಿಸ್ತಾನವೇ!

 • ನನ್ನ ಪ್ರಶ್ನೆಗೆ ಇದು ಉತ್ತರವಾಗಿಲ್ಲ. ದಾವೂದ್ ಪಾಕ್‍ನಲ್ಲೇ ಇದ್ದಾನಾ? ನಿಮ್ಮ ದೇಶವೇ ಅವನನ್ನು ಬಚಾವ್ ಮಾಡುತ್ತಿಲ್ಲವೇ? 

ಕೆಲ ಮಾಹಿತಿಗಳನ್ನು ನಾನು ಹ೦ಚಿಕೊಳ್ಳಲಾಗುವುದಿಲ್ಲ. ಅಸಲಿಗೆ ನನಗೆ ದಾವೂದ್ ವಿಚಾರದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

 • ಹಫೀಜ್ ಸಯೀದ್‍ನನ್ನು ಭಾರತಕ್ಕೆ ಒಪ್ಪಿಸಿ ಎ೦ದು ಕೇಳುತ್ತಲೇ ಇದ್ದೇವೆ. ಏಕೆ ತಡ ಮಾಡುತ್ತಿದ್ದೀರಿ?ಕನಿಷ್ಠ ಅವನ ಜತೆ ಮಾತನಾಡಲಾದರೂ ಬಿಡಬಹುದಿತ್ತಲ್ಲವೇ?​

ಪಾಕಿಸ್ತಾನ ಯಾವತ್ತೂ ಉಗ್ರರನ್ನು ಸಮರ್ಥಿಸಿಕೊಳ್ಳುವುದಿಲ್ಲ. ಉಗ್ರರ ಸದ್ದನ್ನು ಅಡಗಿಸಲು ನ್ಯಾಷನಲ್ ಆಕ್ಷನ್ ಪ್ಲಾನ್ ಸೇರಿದಂತೆ ಹಲವು ಯೋಜನೆಗಳನ್ನು ತಂದಿವೆ. ನಮ್ಮ ಬೆಂಬಲ ಉಗ್ರರಿಗಿಲ್ಲ. ನಾವು ಭಾರತ-ಪಾಕ್ ಸಂಬಂಧವನ್ನು ಗಟ್ಟಿಪಡಿಸುವಲ್ಲಿ ಒಟ್ಟಿಗೆ ಕೆಲಸ ಮಾಡಲು ಸಿದಟಛಿರಿದ್ದೇವೆ. ಇದು ಭದ್ರತಾ ಇಲಾಖೆಗೆ ಬಿಟ್ಟ ವಿಚಾರ. ನನಗೆ ಗೊತ್ತಿಲ್ಲ.

 • ಮೊದಲು ಸೌರ ಬ್ ಕಾಲಿಯಾನನ್ನು ಪಾಕಿಸ್ತಾನ ಕಿಡ್‍ನ್ಯಾಪ್ ಮಾಡಿ- ಕೊ೦ಡು ಹೋಗಿ, ಅವನಿಗೆ ಕೊಡಬಾರದ ಕಷ್ಟವನ್ನೆಲ್ಲ ಕೊಟ್ಟು ಹತ್ಯೆ ಮಾಡಿತ್ತು. ಇದರ ಬಗ್ಗೆ ಕೇಳಿದಾಗ ಇಲ್ಲ ನಮಗೆ ಸೌರಬ್ ಬಗ್ಗೆ ಗೊತ್ತೇ ಇಲ್ಲ ಎ೦ದು ಸಾಧಿಸಿತ್ತು. ಕೊನೆಗೆ ಪಾಕ್ ಸೈನಿಕನೇ ಹೌದು ನಾವೇ ಸೌರಬ್‍ನನ್ನು ಕೊ೦ದದ್ದು ಎ೦ದಿದ್ದಾನೆ. ಇದರ ಬಗ್ಗೆ ಏನು ಹೇಳುತ್ತೀರಾ? 

ನಾವು ಇದನ್ನು ಒ೦ದೇ ದೃಷ್ಟಿಯಲ್ಲಿ ನೋಡಬಾರದು. ಎರಡೂ ಕಡೆಯಲ್ಲಿ ತಪ್ಪುಗಳಿವೆ. ಒಮ್ಮೆ ಪಾಕಿಸ್ತಾನ ಹಾಗೆ ಮಾಡಿದರೆ, ಇನ್ನೊಮ್ಮೆ ಭಾರತ ಹಾಗೆ ಮಾಡುತ್ತದೆ. ಎರಡೂ ಕಡೆಯಿ೦ದ ಅಷ್ಟೇ ಪ್ರಮಾಣದ ತಪ್ಪುಗಳಿವೆ. ನಮ್ಮ ಯೋಧರಿಗೂ ಅ೦ಥ ಅನುಭವವಗಳು ಭಾರತದಿ೦ದ ಆಗಿದೆ. ನಾವು ಇದರ ಹೊರತಾಗಿ ಆಲೋಚಿಸಬೇಕೇ ಹೊರತು, ಇದೊ೦ದೇ ವಿಷಯವನ್ನು ಹಿಡಿದು ಚಚಿ೯ಸುವುದರಲ್ಲಿ ಯಾವುದೇ ಅಥ೯ವಿಲ್ಲ. ನಾನು ಯಾವುದೇ ಮಿಲಿಟರಿ ಬಗ್ಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಅದು ಅವರಿಗೆ ಬಿಟ್ಟ ವಿಚಾರ. ನನ್ನ ವ್ಯಾಪ್ತಿಗೆ ಬರುವುದಿಲ್ಲ.

 

 • ಐಎಸ್‍ಐ ಉಗ್ರಗಾಮಿಗಳನ್ನು ತಯಾರಿಸಿ ಭಾರತದ ಮೇಲೆ ದಾಳಿ ಮಾಡಲು ಕಳಿಸುತ್ತಿದೆ ಎ೦ಬ ಮಾಹಿತಿಯಿದೆ?

ಅದು ಶುದ್ಧ ಸುಳ್ಳು. ದಾಳಿ ಮಾಡಿಸುವ ಅವಶ್ಯಕತೆ ನಮಗಿಲ್ಲ. ಏಕೆ೦ದರೆ ನಮ್ಮ ಮೇಲೆ ಸಾಕಷ್ಟು ಭಯೋತ್ಪಾದಕ ದಾಳಿಗಳಾಗುತ್ತಿವೆ. ನಾವೇಕೆ ಕಳಿಸೋಣ?

 • ಡೇವಿಡ್ ಹೆಡ್ಲಿಯೂ ಹೇಳಿದ್ದಾನೆ, ಪಾಕಿಸ್ತಾನ ಉಗ್ರರನ್ನು ತಯಾರಿಸಿ ಕಳಿಸುತ್ತಿದೆ, ತಾನೂ ಸುಮಾರು ಸಲ ಪಾಕ್‍ಗೆ ಹೋಗಿ ಬ೦ದಿದ್ದೇನೆ ಎ೦ದು. ಮಾಧ್ಯಮಗಳು ಹಾಗೂ ದಾಖಲೆ ಹೀಗೆ ಹೇಳುತ್ತಿದೆ. 

ನಮ್ಮ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಮಾಧ್ಯಮಗಳು ಇದರ ಬಗ್ಗೆ ಸುಳ್ಳು ಹೇಳುತ್ತಿವೆ. ಪೇಶಾವರ್ ಬಾ೦ಬ್ ಸ್ಪೋಟದ ಬಗ್ಗೆ ಭಾರತೀಯ ಗುಪ್ತದಳ “ರಾ’ ವಿರುದ್ಧ ಸಹ ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ಇದಕ್ಕೇನ೦ತೀರಾ?

 

 • ಕೊನೆಯದಾಗಿ ಭಾರತದ ಬಗ್ಗೆ ಏನು ಹೇಳಲು ಬಯಸುತ್ತೀರಾ?

ಭಾರತ ಸ್ವಗ೯. ಇಲ್ಲಿರುವ ಜನರು ಬ೦ಗಾರದ ಹೃದಯದವರು. ಇಲ್ಲಿನ ಜನರು ಎಲ್ಲ ದೇಶದವರ ಜತೆಯೂ ಹೊ೦ದಿಕೊಳ್ಳುತ್ತಾರೆ. ಭಾರತ-ಪಾಕ್ ಒ೦ದಾದರೆ ಇನ್ನೂ ನಾವು ಸಾಕಷ್ಟು ಬೆರೆಯಬಹುದು. ಇಲ್ಲಿನ ಯುವ ಜನತೆಗೆ ನಮ್ಮ ಮೇಲೆ ಪ್ರೀತಿಯಿದೆ. ವಿಶ್ವಾಸವಿದೆ. ಅದನ್ನು ನಾನು ಸ್ವತಃ ಕ೦ಡಿದ್ದೇನೆ. ಪಾಕಿಸ್ತಾನವೂ ಹೀಗೇ ಇದೆ. ಈಗ ನಮ್ಮ ಪಕ್ಷದ ಜವಾಬ್ದಾರಿ ಏನೆ೦ದರೆ ಪಾಕಿಸ್ತಾನ ಸ೦ಬ೦ಧವನ್ನು ಸಹೃದಯಿ ಭಾರತದೊ೦ದಿಗೆ ಬೆಸೆಯಬೇಕು. ಇಬ್ಬರೂ ಒಟ್ಟಾಗಿ ಮು೦ದೆ ಸಾಗಬೇಕು. ನಾನು ಮತ್ತೆ ಮತ್ತೆ ಭಾರತಕ್ಕೆ ಬರುತ್ತಿರಬೇಕು ಎನಿಸುತ್ತದೆ. ಬ೦ದೇ ಬರುತ್ತೇನೆ. ಇದು ಅದ್ಬುತಗಳನ್ನು ಒಡಲಲ್ಲಿಟ್ಟುಕೊ೦ಡಿರುವ ರಾಷ್ಟ್ರ. ಹಾಗೆಯೇ ನಾನು ನಿಮ್ಮ ವಿಶ್ವವಾಣಿಯನ್ನು ಒಮ್ಮೆ ಪಾಕಿಸ್ತಾನಕ್ಕೆ ಕರೆದುಕೊ೦ಡು ಹೋಗಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಅಭೀವ್ಯಕ್ತಿ ಸ್ವಾತ೦ತ್ರ್ಯ

 

 • ಇತ್ತೀಚೆಗೆ ವಿರಾಟ್ ಕೋಹ್ಲಿ ಅಭೀಮಾನಿಯನ್ನು ಬ೦ಧಿಸಿದರು. ಇನ್ನು ಶಾಹಿದ್ ಅಫ್ರಿದಿ ಭಾರತೀಯರು ನಮ್ಮನ್ನು ಬಹಳ ಪ್ರೀತಿಸುತ್ತಾರೆ. ಭಾರತ ಒಳ್ಳೆಯ ರಾಷ್ಟ್ರ ಎ೦ದಿದ್ದಕ್ಕೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಅಭೀವ್ಯಕ್ತಿ ಸ್ವಾತ೦ತ್ರ್ಯ ಸತ್ತು ಹೋಗಿದೆಯೇ? 

ಅಭೀವ್ಯಕ್ತಿ ಸ್ವಾತ೦ತ್ರ್ಯ ಸತ್ತು ಹೋಗಿದೆ ಎ೦ದಲ್ಲ. ಅಭೀವ್ಯಕ್ತಿ ಸ್ವಾತ೦ತ್ರ್ಯದ ಜತೆಗೆ ನಾವು ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆಯೂ ಗಮನ ಕೊಡಬೇಕು. ಇನ್ನು ಈ ಎರಡು ಪ್ರಕರಣಗಳ ಬಗ್ಗೆ ಹೇಳುವುದಾದರೆ ವಾಕ್ ಸ್ವಾತ೦ತ್ರ್ಯ ಎಲ್ಲರಿಗೂ ಇದೆ. ಅವರಿಗೂ ಮಾತನಾಡಲು ಅವಕಾಶ ಕೊಡಬೇಕೆ೦ಬುದು ಸರಿ. ಅದೇ ರೀತಿ ಜೆಎನ್‍ಯು ವಿಚಾರ ಮತ್ತು ಭಾರತದಲ್ಲಿನ ಇನ್ನಿತರ ಅಭೀವ್ಯಕ್ತಿ ಸ್ವಾತ೦ತ್ರ್ಯದ ಬಗ್ಗೆಯೂ ಗಮನಹರಿಸಲಿ. ಅವರಿಗೂ ಅಭೀವ್ಯಕ್ತಿ ಸ್ವಾತ೦ತ್ರ್ಯ ನೀಡಬೇಕು.

 •  ಹಲವು ವಷ೯ಗಳ ಕಾಲ ಯೂಟ್ಯೂ ಬ್ ಬ್ಯಾನ್ ಮಾಡಿದ್ದೇಕೆ? ಈಗ ಮತ್ತೆ ಆ ಬ್ಯಾನ್ ತೆರವುಗೊಳಿಸಿದ್ದೇಕೆ? 

ಇಲ್ಲ, ಅದರಲ್ಲಿ ನಮ್ಮ ದೇಶದ ವಿರುದ್ಧ ಮತ್ತು ಇಸ್ಲಾ೦ ವಿರುದ್ಧ ಕೆಲ ಅ೦ಶಗಳು ಇದ್ದಿರಬಹುದು. ಜನರಿಗೆ ಅದರಿ೦ದ ನೋವಾಗಿರಬಹುದು. ಅದಕ್ಕೆ ಬ್ಯಾನ್ ಮಾಡಲಾಗಿತ್ತು.

 

ಪಾಕ್ ಅಲ್ಪಸ೦ಖ್ಯಾತರ ರಕ್ಷಣೆ 

 

 •  ಪಾಕಿಸ್ತಾನಿ ಕ್ರಿಕೆಟಿಗ ದಾನಿಶ್ ಕನ್ಹೇರಿಯಾ ಇತ್ತೀಚೆಗೆ, ತಾನು ಪಾಕ್‍ನಲ್ಲಿ ಅಲ್ಪಸ೦ಖ್ಯಾತ. ಅದಕ್ಕೇ ತನ್ನನ್ನು ಟೀಮ್‍ನಿ೦ದ ಹೊರ ಹಾಕಲಾಗಿದೆ. ತಾನು ಮುಸಲ್ಮಾನ ಅಲ್ಲ, ಹಿ೦ದೂ ಎ೦ಬ ಕಾರಣಕ್ಕಾಗಿಯೇ ಈ ರೀತಿ ಮಾಡಿದ್ದಾರೆ ಎನ್ನುತ್ತಿದ್ದಾರಲ್ಲ. ನೀವೇನ೦ತೀರಿ?

ಇಲ್ಲ, ಅದು ಶುದ್ಧ ಸುಳ್ಳು. ನನಗೂ ಹಲವಾರು ಜನರು ಹಿ೦ದೂ ಸ್ನೇಹಿತರಿದ್ದಾರೆ. ಅವರ್ಯಾರಿಗೂ ಇ೦ಥ ಅನುಭವವಾಗಿಲ್ಲ. ಸದನದಲ್ಲೂ ಹಿ೦ದೂಗಳು, ಸಿಖ್ಕರು, ಕ್ರಿಶ್ಚಿಯನ್ನರು ಎಲ್ಲರೂ ಇದ್ದಾರೆ. ಅವರಿಗೂ ಮೀಸಲಿದೆ. ಹಿ೦ದೂಗಳನ್ನು ನಾವು ಚೆನ್ನಾಗಿಯೇ ನಡೆಸಿಕೊಳ್ಳುತ್ತಿದ್ದೇವೆ. ಇತ್ತೀಚೆಗೆ ಹೋಳಿ ಹಬ್ಬಕ್ಕೆ ರಜಾ ದಿನ ಘೋಷಿಸಲಾಗಿದೆ. ನಮ್ಮಲ್ಲಿರುವ ದೊಡ್ಡ ದೊಡ್ಡ ಉದ್ಯಮಿಗಳು ಭಾರತೀಯರು. ಒಮ್ಮೆ ನೀವು ಪಾಕಿಸ್ತಾನಕ್ಕೆ ಬನ್ನಿ. ನಿಮಗೂ ಗೊತ್ತಾಗುತ್ತದೆ.

 

 •  ವಿಭಜನೆಗೂ ಮು೦ಚೆ ಪಾಕಿಸ್ತಾನದಲ್ಲಿ ಸಾವಿರಾರು ದೇವಸ್ಥಾನಗಳಿದ್ದವು. ಆದರೆ ಈಗ ಅವೇ ಮದರಸಾಗಳಾಗಿ ಬದಲಾಗುತ್ತಿದೆ. ಇದರ ಬಗ್ಗೆ ಹೇಳಿ?

ನಾನು ಇದರ ಬಗ್ಗೆ ಹಲವಾರು ವರದಿಗಳನ್ನು, ದಾಖಲೆಗಳನ್ನು ಓದಿದ್ದೇನೆ. ಒ೦ದಕ್ಕಿ೦ತ ಒ೦ದು ವಿಭೀನ್ನವಾಗಿದೆ. ಹಾಗಾಗಿ ಈ ವಿಷಯದಲ್ಲಿ ಒ೦ದು ಪ್ರತ್ಯೇಕ ಸಮಿತಿ ರಚಿಸಿ, ಅಧ್ಯಯನ ನಡೆಸಬೇಕು. ನನ್ನ ಅನುಭವದ ಮೇಲೆ ಹೇಳಬೇಕೆ೦ದರೆ ಪ೦ಜಾಬಿನ ನನ್ನ ಕ್ಷೇತ್ರದಲ್ಲೇ ೦ದು ದೇವಸ್ಥಾನವಿದೆ, ಕಟಾಸ್‍ರಾಜ್ ಎ೦ದು. ಅದು ಇವತ್ತಿಗೂ ಚೆನ್ನಾಗಿಯೇ ಇದೆ. ನಮ್ಮ ಸರಕಾರವೂ ದೇವಸ್ಥಾನಗಳ ಜೀಣೋ೯ದಾಟ್ಧರಕ್ಕೆ ಅನುದಾನ ಕೊಡುತ್ತಿದೆ. ಎಲ್ಲೋ ಒಮ್ಮೆ ಇ೦ಥ ಘಟನೆಗಳು ಆಗಿದ್ದಲ್ಲಿ ಖ೦ಡಿತ ನಾನು ಇದನ್ನು ಖ೦ಡಿಸುತ್ತೇನೆ.

 

ಕಾಶ್ಮೀರ ಸಮಸ್ಯೆ

ಜಮ್ಮು ಮತ್ತು ಕಾಶ್ಮೀರ ಯಾರದ್ದು? ನಿಮ್ಮ ಪ್ರಕಾರ ಈ ಸಮಸ್ಯೆಗೆ ನೆಹರೂ ಅಥವಾ ಜಿನ್ನಾ ಯಾರು ಹೊಣೆ?

ಜಮ್ಮು ಮತ್ತು ಕಾಶ್ಮೀರ ಸ್ವಲ್ಪ ಜಟಿಲ ಸಮಸ್ಯೆ. ಅದನ್ನು ಮಾತಾಡಿ ಬಗೆಹರಿಸಿಕೊಳ್ಳಬೇಕು. ಈ ಬಗ್ಗೆ ಭಾರತಕ್ಕೆ ಏನು ಸಮಸ್ಯೆ ಇದೆ, ಕಾಶ್ಮೀರಕ್ಕೆ ಏನು ಸಮಸ್ಯೆ ಇದೆ ಇತ್ಯಾದಿಗಳ ಬಗ್ಗೆ ಉಭಯತ್ರರಲ್ಲಿ ಚಚೆ೯ಯಾಗಬೇಕಿದೆ… ನಮ್ಮ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಜನತೆ ನಮಗೆ ಬಹಳವೇ ಮುಖ್ಯ. ಇದು ಆ ಪ್ರದೇಶದ ಜನತೆಗೆ ಬಿಟ್ಟ ವಿಚಾರ. ನಾವು ಈಗ ಇರುವುದು ಪ್ರಜಾಪ್ರಭುತ್ವದಲ್ಲಿ. ಅಲ್ಲಿನ ಸ್ಥಳೀಯರು ಏನು ನಿಧ೯ರಿಸುತ್ತಾರೋ ಅದೇ ಅ೦ತಿಮವಾಗಲಿ. ಅದರ ಅನುಸಾರವಾಗಿ ಭಾರತ-ಪಾಕ್ ಮಾತುಕತೆಯಾಡಲಿ. ನಾವು ಇದರ ಬಗ್ಗೆ ಮಾತಾಡುವ ಬದಲು ಮು೦ದೆಹೋಗೋಣ.

 

ನಮ್ಮದು ರಾಷ್ಟ್ರವೇ 

 ತಾರೇಖ್ ಫಾ ತಾ ವಿಶ್ವವಾಣಿಯ ಜತೆ ಮಾತನಾಡುತ್ತಾ ಪಾಕಿಸ್ತಾನದ ಬಗ್ಗೆ ಒ೦ದು ಮಾತು ಹೇಳಿದರು “ಪಾಕಿಸ್ತಾನ ಒ೦ದು ರಾಷ್ಟ್ರವಲ್ಲ, ಅದು ಮನಃ ಸ್ಥಿತಿಯಷ್ಟೇ’ ಎ೦ದು. ಇದರ ಬಗ್ಗೆ ನೀವು ಏನ೦ತೀರಿ?

ಅವರು ಯಾವ ದೃಷ್ಟಿಯಿ೦ದ ಹೇಳಿದರೋ ನನಗೆ ಗೊತ್ತಿಲ್ಲ. ನಾನ೦ತೂ ಇದನ್ನು ಒಪ್ಪುವುದೇ ಇಲ್ಲ. ಯಾರೋ ಏನೋ ಹೇಳಿದರೆ, ನನ್ನ ರಾಷ್ಟ್ರ ಬದಲಾಗುವುದಿಲ್ಲ. ನಮ್ಮದು ರಾಷ್ಟ್ರವೇ… ಮನಃಸ್ಥಿತಿಯಲ್ಲ. ಅವರ ಅಭೀವ್ಯಕ್ತಿ ಸ್ವಾತ೦ತ್ರ್ಯವನ್ನು ನಾನು ಗೌರವಿಸುತ್ತೇನೆ. ಆದರೆ ನಾನು ತಿರುಗಿ ಪ್ರಶ್ನೆ ಕೂಡ ಮಾಡಲ್ಲ. ಅಗತ್ಯವೂ ಇಲ್ಲ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya