ನೆಹರೂ ಬಣ್ಣ ಬಯಲಾಯಿತು !

ಅದು 23-01-2016. ಪ್ರತೀ ವರ್ಷ ಇಪ್ಪತ್ಮೂರಕ್ಕೆ ಎಲ್ಲ ದೇಶಪ್ರೇಮಿಗಳೂ ನೇತಾಜಿಯನ್ನ ನೆನೆದು ಕಣ್ಣೀರಿಟ್ಟು ಶೋಕಾರಚರಣೆ ಮಾಡಿ ಹೊರಡುತ್ತಿದ್ದರು. ಆದರೆ, ನಿನ್ನೆ ಮಾತ್ರ ಜನರೆಲ್ಲರೂ ರೊಚ್ಚಿಗೆದ್ದಿದ್ದರು. ಕಾರಣ, ಮೋದಿ ಸರಕಾರ ನೇತಾಜಿ ಸಾವಿನ ರಹಸ್ಯಗಳಿರುವ ಕಡತಗಳನ್ನು ಬಿಡುಗಡೆ ಮಾಡಿತ್ತು. ಇದು ಕೇವಲ ನೇತಾಜಿ ಭಕ್ತರು ಮಾತ್ರ ಕಾದು ಕುಳಿತಿದ್ದದ್ದಲ್ಲ, ಈ ದಿನಾಂಕಕ್ಕಾಗಿಯೇ ಇಡೀ ಭಾರತವೇ ಕಾಯುತ್ತಿದ್ದ ಸಂದರ್ಭ. ಇದಕ್ಕೆ ಸಾಕ್ಷಿಯಾಗಿ ಮೋದಿ ಸರಕಾರ ನೇತಾಜಿ ಸಾವಿನ ರಹಸ್ಯದ ಕಡತಗಳನ್ನುwww.netajipapers.gov.in ನಲ್ಲಿ ಬಿಡುಗಡೆ ಮಾಡುತ್ತಿದ್ದಂತೆ ಕೇವಲ 5 ತಾಸುಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಆ ಜಾಲತಾಣ ವೀಕ್ಷಿಸಿದ್ದಾರೆ. ಹಾಗಾದರೆ, ಈ ಜಾಲತಾಣದಲ್ಲಿ ನೇತಾಜಿಯ ಬಗ್ಗೆ ಇರುವ ಅಂಥ ಸ್ಫೋಟಕ ಮಾಹಿತಿಗಳಾದರೂ ಏನು? ಇದನ್ನು ಓದಿದ ನಂತರ ಮೂಡುವ ಪ್ರಶ್ನೆಗಳಾದರೂ ಏನು? ಇಲ್ಲಿದೆ ಮಾಹಿತಿ.

ಒಂದು ಮನುಷ್ಯನಿಗೆ 3 ಮರಣ ಪ್ರಮಾಣ ಪತ್ರ.
ನೆಹರೂವೇನೋ ನೇತಾಜಿ ಮೃತಪಟ್ಟಿದ್ದಾರೆ ಎಂದು ಹೇಳಿಬಿಟ್ಟರು, ಆದರೆ ಸಾಕ್ಷ್ಯ ಬೇಕಲ್ಲ? ಆ ಸಾಕ್ಷ್ಯ ಸೃಷ್ಟಿಯ ಹಿಂದೆ ಬಿದ್ದು ನೆಹರೂ ತಮ್ಮ ಬಣ್ಣವನ್ನು ಸ್ವತಃ ಬಯಲು ಮಾಡುತ್ತಾ ಬಂದರು. ಇದಕ್ಕೆ ಸಾಕ್ಷಿ ಇಲ್ಲಿದೆ ನೋಡಿ.
1946 ಅಕ್ಟೋಬರ್‌ನಲ್ಲಿ ಮೊದಲು ಒಂದು ಮರಣ ಪ್ರಮಾಣ ಪತ್ರ ಮಾಡಿಸಿದರು, ಇದರಲ್ಲಿ ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸರಿಯಾಗಿ ನಮೂದಿಸಿರಲಿಲ್ಲ. ಬದಲಿಗೆ, ನೇತಾಜಿ ಸುಮಾರು ವರ್ಷಗಳಿಂದ ಕಾಣದಿರುವುದರಿಂದ. ಅವರು ಸತ್ತಿರಬಹುದು ಎಂದು ಊಹಿಸಲಾಗುತ್ತಿದೆ ಎಂದು ಬರೆದರು.

ಆದರೆ ಇದರ ಬಗ್ಗೆ ಸಾಕಷ್ಟು ಗೊಂದಲ ಅದಾಗಲೇ ಸೃಷ್ಟಿಯಾಗಿತ್ತು. ಇನ್ನೇನೋ ಮಾತುಗಳು ಬರುತ್ತಿದ್ದವು. ಆಗ ನೆಹರೂಗೆ ಅನಿವಾರ್ಯವಾಗಿ ಮತ್ತೊಂದು ಸಾಕ್ಷ್ಯ ಸೃಷ್ಟಿ ಮಾಡಬೇಕಾಯಿತು. ಆಗ 1952ರಲ್ಲಿ ನೆಹರೂ ಮತ್ತೊಂದು ಮರಣ ಪ್ರಮಾಣ ಪತ್ರ ಮಾಡಿಸಿದರು. ಅದರಲ್ಲಿ ವೈದ್ಯರು, ನೇತಾಜಿ ವಿಮಾನ ಅಪಘಾತದಲ್ಲಿ ಸತ್ತರು ಎಂದು ಸ್ಪಷ್ಟವಾಗಿ ಬರೆದರು. ಈ ವೈದ್ಯರು ಹೇಳುತ್ತಾರೆ, ನಾನೇ ಹೆಚ್ಚು ತಿಳಿದಿರುವ ವೈದ್ಯ, ನಾನು ಬರೆದ ವರದಿಯೇ ಸತ್ಯ, ಹಾಗಾಗಿ ನನ್ನ ಮಾತು ನಂಬಬೇಕು ಎಂದರು. ಕೊನೆಗೆ ಇದೂ ಸುಳ್ಳು ಎಂದಯ ತಿಳಿದದ್ದು ಮುಖರ್ಜಿ ಕಮಿಷನ್ ಬಂದ ನಂತರವೇ. ಒಬ್ಬ ಮನುಷ್ಯನ ಮರಣ ಪ್ರಮಾಣ ಪತ್ರ ಎರಡೆರಡು ಸಲ ಹೇಗೆ ಬರಲು ಸಾಧ್ಯ ಎಂದು ನೇತಾಜಿ ಸಾವಿನ ಬಗ್ಗೆ ಸಂಶೋಧನೆ ಮಾಡುತ್ತಿರುವ ಸಂಶೋಧಕರು ಜಪಾನ್‌ಗೆ ತೆರಳಿ, ಡಾ॥ ಯುಶುಮಿಯನ್ನು ಭೇಟಿ ಮಾಡಿ, ಸಂಪೂರ್ಣವಾದ ಅಥವಾ ಯಾವ ಗೊಂದಲವೂ ಬರದಿರುವ ಹಾಗೆ ಒಂದು ವರದಿ ಕೊಡಿ ಎಂದು ಕೇಳುತ್ತಾರೆ. ಆಗ ಕೆಲ ದಿನಗಳ ನಂತರ ಯುಶುಮಿ, ಭಾರತದ ಪ್ರಮುಖ ವ್ಯಕ್ತಿಯೊಬ್ಬರ ಜತೆ ಮಾತನಾಡಿ ಬಂದು, ’ಹೌದು ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಬರೆಯುತ್ತಾರೆ. ಇದು ಫೈನಲ್ ಪ್ರಮಾಣ ಪತ್ರ ಎಂದು ಸಧ್ಯಕ್ಕೆ ತಿಳಿಯೋಣ. ಕೊನೆಗೆ ಆ ಸಂಶೋಧಕರು ಈ ದಾಖಲೆಯನ್ನು ತಂದು ಮುಖರ್ಜಿ ಕಮಿಷನ್ ಮುಂದಿಡುತ್ತಾರೆ. ಈ ವಿಷಯವನ್ನು ತನಿಖೆಯ ಸಮಯದಲ್ಲಿ ಬಹಳ ಗಂಭೀರವಾಗಿ ಪರಿಗಣಿಸಿದ ಮುಖರ್ಜಿ, ಖುದ್ದು ಜಪಾನ್‌ಗೆ ತೆರಳಿ ಡಾ॥ ಯುಶುಮಿರನ್ನು ಭೇಟಿಯಾಗಿ ವಿಚಾರಣೆ ನಡೆಸುತ್ತಾರೆ. ಅವರಿಗೆ ಮುಖರ್ಜಿ ಕೇಳಿದ್ದು ಒಂದೇ ಪ್ರಶ್ನೆ, ಯುಶುಮಿ ಹೇಳಿ, ನೇತಾಜಿ ಮೃತಪಟ್ಟಿರುವುದು 1946ರಲ್ಲಿ ಎಂದು ಇತರ ಮರಣ ಪ್ರಮಾಣ ಪತ್ರದಿಂದ ನಂಬಿದರೂ, ನೀವು ಪ್ರತ್ಯತೇಕವಾಗಿ ಮರಣ ಪ್ರಮಾಣ ಪತ್ರ ಕೊಟ್ಟಾಗ ಅದರಲ್ಲಿ ಸಹಿ ಮಾಡುವ ಜಾಗದಲ್ಲಿ 1980ಎಂದು ಇಸವಿ ನಮೂದಿಸಿದ್ದೀರಿ. 1946ರಲ್ಲಿ ಆದ ವಿಮಾನ ಅಪಘಾತಕ್ಕೆ ನೀವು 1980ದಲ್ಲಿ ಏಕೆ ಪ್ರಮಾಣ ಪತ್ರ ಕೊಡುತ್ತೀರಾ?’ ಎಂದರು. ಇದಕ್ಕೆ ಯುಶುಮಿಯಿಂದ ಬಂದ ಉತ್ತರ ಬಹಳವೇ ಆಶ್ಚರ್ಯಕಾರಿಯಾಗಿತ್ತು. ಯುಶುಮಿ ಉತ್ತರ ಹೀಗಿದೆ ’ಹೌದು ನಾನು ಹಾಗೇ ಬರೆದಿದ್ದೇನೆ. ನನಗೆ ಹಾಗೆ ಬರೆಯಲು ಯಾರೋ ಹೇಳಿದರು. ನನಗೆ ಬೇರೆ ದಿಕ್ಕು ತೋಚದ ಸ್ಥಿತಿಯಲ್ಲಿದ್ದೆ. ಅದಕ್ಕೆ ಅವರು ನನಗೆ ಹೇಗೆ ಬರೆಯಬೇಕು ಎಂದು ಡಿಕ್ಟೇಟ್ ಮಾಡಿದರೋ ಅದರಂತೆಯೇ ಬರೆದೆ.’
ಇನ್ನು ಮುಂದೆ ಪ್ರಶ್ನಿಸದ ಮುಖರ್ಜಿ ಭಾರತಕ್ಕೆ ವಾಪಾಸಾದರು ಎಂದು ಮುಖರ್ಜಿ ಕಮಿಷನ್‌ನಲ್ಲಿ ವರದಿಯಾಗಿದೆ.

ನೆಹರೂ, ನೇತಾಜಿ ಸಾವಿಗೂ ಮುಂಚೆಯೇ ಶ್ರಾದ್ಧ ಮಾಡಲು ಹೊರಟಿದ್ದರು!

ಇಂಥದ್ದೊಂದು ಮಾಹಿತಿ ಹೊರ ಬಂದದ್ದೂ ನಿನ್ನೆೆ ಬಿಡುಗಡೆ ಮಾಡಿದೆ ನೇತಾಜಿ ಕಡತಗಳಿಂದಲೇ. ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿರಲಿಲ್ಲ ಎಂದು ಹೇಳುವುದಕ್ಕೆ ಮೊತ್ತೊಂದು ಸಾಕ್ಷಿಯೇ ಈ ಪತ್ರ. ಸುಭಾಷ್ ಚಂದ್ರ ಬೋಸ್‌ರ ಅಣ್ಣನ ಮಗ ಅಮಿಯಾ ನಾಥ್ ಬೋಸ್, 1995 ಆಗಸ್ಟ್ 17ರಂದು ಅಂದಿನ ಪ್ರಧಾನಿ ಪಿವಿ ನರಸಿಂಹ್ ರಾವ್‌ಗೆ ಒಂದು ಪತ್ರ ಬರೆದಿದ್ದಾರೆ. ಅದರಲ್ಲಿ ಹೇಳುತ್ತಾರೆ ’ ನೇತಾಜಿಯ ಜೊತೆಗೆ ವಿಮಾನ ಅಪಘಾದಲ್ಲೂ ಇದ್ದ ಹಬೀಬುರ್ ರೆಹಮಾನ್, ಜೈಲಿಂದ ಬಂದ ಮೇಲೆ ಗಾಂಧೀಜಿ ಜೊತೆಗೆ ಒಂದು ಮೀಟಿಂಗ್ ಮಾಡಿದ್ದರು. ಆ ಸಮಯದಲ್ಲಿ ನಾನೂ ಸ್ವತಃ ಇದ್ದೆ. ಮೀಟಿಂಗ್ ಮುಗಿಸಿ ಹೊರಬಂದ ಗಾಂಧೀಜಿ, ಮಾಧ್ಯಮದವರನ್ನೆಲ್ಲ ಕರೆದು, ನೇತಾಜಿ ಇನ್ನೂ ಸತ್ತಿಲ್ಲ ಎಂದು ಘೋಷಿಸಿದರು. ಇತ್ತ ನೆಹರೂ ಮತ್ತು ನೇತಾಜಿಯ ಮನೆಯವರು ನೇತಾಜಿಯ ಶ್ರಾದ್ಧಕ್ಕೆ ಸಕಲ ಸಿದ್ದತೆ ಮಾಡಿಕೊಂಡಿರುತ್ತಾರೆ. ಆದರೆ, ಗಾಂಧೀಜಿಯೇ ಬಂದು ಈ ಶ್ರಾದ್ಧ ನಡೆಯಬಾರದು, ಏಕೆಂದರೆ ನೇತಾಜಿ ಇನ್ನೂ ಸತ್ತಿಲ್ಲ ಎನ್ನುತ್ತಾರೆ. ಇಲ್ಲಿ ಅನುಮಾನ ಬರುವುದೇನೆಂದರೆ ನೇತಾಜಿ ಕುಟುಂಬದವರನ್ನು ಎತ್ತಿಕಟ್ಟಿ ಏಕೆ ಮೊದಲೇ ಶ್ರಾದ್ಧ ಮಾಡಲು ಹೊರಟಿದ್ದರು? ಗಾಂಧೀಜಿ ಹೇಳುವ ತನಕ ನೆಹರೂಗೆ ನೇತಾಜಿ ಸತ್ತಿರುವ ವಿಷಯವೇ ಗೊತ್ತಿರಲಿಲ್ಲವೇ? ಇದು ಚರ್ಚಾಸ್ಪದ ವಿಷಯವಾಗಿದೆ.

ನೇತಾಜಿ ಬಂದರೆ ಅದ್ದೂರಿಯಿಂದ ಸ್ವಾಗತಿಸುತ್ತೇವೆ: ನೆಹರೂ
ಎಲ್ಲಿ ಆತುರ ಆತುರವಾಗಿ ನೇತಾಜಿ ಶ್ರಾದ್ಧ ಮಾಡಲು ಮುಂದಾಗಿದ್ದರೋ, ಆಗಲೇ ಜನರಿಗೆ ನೆಹರೂ ಮೇಲೆ ಮೊದಲು ಅನುಮಾನ ಬಂದಿದ್ದು. ಬಹಳಷ್ಟು ಜನ, ನೆಹರೂಗೆ ಪತ್ರ ಬರೆದರು. ಅದರಲ್ಲೊಬ್ಬರು, ನೇತಾಜಿ ಸಂಬಂಧಿ ಸುರೇಶ್ ಬೋಸ್. ಇವರು ಪತ್ರಗಳ ಮೇಲೆ ಪತ್ರ ಬರೆದು ನೇತಾಜಿ ಮೃತಪಟ್ಟಿರುವುದಕ್ಕೆ ದಾಖಲೆ ಕೊಡಿ ಎಂದು ಕೇಳುತ್ತಿದ್ದರು. ಪತ್ರಗಳ ಹಾವಳಿಯಿಂದ ರೋಸಿ ಹೋದ ನೆಹರೂ ಕೊನೆಗೂ ಉತ್ತರ ಕೊಟ್ಟರು. 1966ರ ಮೇ 17ರಂದು ಸುರೇಶ್ ಬೋಸ್‌ಗೆ ನೆಹರೂ ನೀಡಿರುವ ಉತ್ತರವಿದು. ’ನಿಮ್ಮ ಪತ್ರಗಳು ನಮಗೆ ತಲುಪಿವೆ, ನಾನು ಎಲ್ಲ ಪತ್ರಗಳನ್ನೂ ಓದುತ್ತಿದ್ದೇನೆ. ನೀವು ಕೇಳಿದಂತೆ ನೇತಾಜಿ ಸಾವಿನ ಬಗ್ಗೆ ನಾನು ದಾಖಲೆ ಕೊಡಲು ಸಾಧ್ಯವಿಲ್ಲ. ಆದರೆ, ಸಾಂದರ್ಭಿಕ ದಾಖಲೆಗಳ ಪ್ರಕಾರ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತು ಹೋಗಿದ್ದಾರೆ ಎಂದು ಹೇಳಬಹುದು. ಆದರೆ, ನನಗೂ ನೇತಾಜಿ ಬದುಕಿದ್ದಾರೆಂದು ಹಲವಾರು ಪತ್ರಗಳು ಬರುತ್ತಿದೆ. ನನಗೂ ಅನಿಸುವ ಪ್ರಕಾರ ನೇತಾಜಿ ಬದುಕಿರುವ ಸಾಧ್ಯತೆಗಳು ಬಹಳಷ್ಟಿದೆ. ಒಮ್ಮೆ ಅವರು ಭಾರತಕ್ಕೆ ಬಂದರೆ, ಖಂಡಿತವಾಗಿಯೂ ಅವರಿಗೆ ಅದ್ದೂರಿ ಸ್ವಾಗತ ಕೊಡುತ್ತೇವೆ ಮತ್ತು ಸಂಭ್ರಮದಿಂದ ಬರಮಾಡಿಕೊಳ್ಳುತ್ತೇವೆ’ ಎಂದು ಉತ್ತರಿಸಿದರು.

ಆದರೆ, ನೆಹರೂರ ಈ ಪ್ರತ್ಯತ್ತರದ ಬಗ್ಗೆ ಹಲವಾರು ಅನುಮಾನ ಮೂಡುತ್ತವೆ.
1) ನೆಹರೂರೇ ನೇತಾಜಿಯ ಶ್ರಾದ್ಧದ ಮುಂದಾಳತ್ವ ವಹಿಸಿದ್ದರು. ಪತ್ರದಲ್ಲಿ ’ನನಗೂ ಅನಿಸುವ ಪ್ರಕಾರ ನೇತಾಜಿ ಬದುಕಿರುವ ಸಾಧ್ಯತೆಗಳು ಬಹಳಷ್ಟಿದೆ’ ಎಂದು ಉತ್ತರ ನೀಡಿದ್ದಾರೆ. ಬದುಕಿದ್ದಾರೆ ಎಂದು ಗೊತ್ತಿರುವಾಗ ಶ್ರಾದ್ಧ ಮಾಡಲು ಹೊರಟಿದ್ದೇಕೆ?
2) ಪತ್ರದಲ್ಲಿ ’ಒಮ್ಮೆ ಅವರು ಭಾರತಕ್ಕೆ ಬಂದರೆ ಅದ್ದೂರಿ ಸ್ವಾಗತ ಕೊಡುತ್ತೇವೆ’ ಎಂದು ಬಳಸಿದ್ದೇಕೆ? ಅಂದರೆ, ನೇತಾಜಿ ಭಾರತಕ್ಕೆ ಬರುವುದಿಲ್ಲ ಎಂಬ ಖಚಿತ ಮಾಹಿತಿಯಿತ್ತೇ? ಹಾಗಾದರೆ, ಮೃತಪಟ್ಟಿದ್ಧಾರೆ ಎಂಬ ಖಚಿತ ಮಾಹಿತಿಯಿತ್ತೋ? ಅಥವಾ ಅಜ್ಞಾತ ಸ್ಥಳದಲ್ಲಿದ್ದಾರೆ ಆದರೆ ಭಾರತಕ್ಕೆ ಬರಲಾಗದ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿಯಿತ್ತೋ?

ನೇತಾಜಿಯೇ ಪತ್ರ ಬರೆದಿದ್ದರೂ ನೆಹರೂ ಕ್ಯಾರೇ ಎನ್ನಲಿಲ್ಲ!
ಇದು ಬಹಳ ದಿನಗಳಿಂದಲೇ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ನೇತಾಜಿ ನೆಹರೂಗೆ ಪತ್ರ ಬರೆದಿದ್ದರು ಎಂದು ಹರಿದಾಡುತ್ತಿತ್ತು. ಅದನ್ನು ಕಾಂಗ್ರೆಸ್ ಅಲ್ಲಗಳೆದಿತ್ತು. ಆದರೆ, ನಿನ್ನೆೆ ಬಿಡುಗಡೆಯಾದ ಕಡತಗಳಲ್ಲಿ ಎಲ್ಲವೂ ಬಟಾಬಯಲಾಗಿದೆ. ಮುಖರ್ಜಿ ಕಮಿಷನ್ ನೀಡಿರುವ ವರದಿಯಲ್ಲಿ ಹೀಗಿದೆ ’1946ರ ಏಪ್ರಿಲ್ 18ರಂದು ಪ್ರಧಾನಿ ಜವಾಹರ್‌ಲಾಲ್ ನೆಹರೂಗೆ ಪತ್ರ ಬಂದು ತಲುಪಿದೆ. ಇದರಲ್ಲಿ ನೇತಾಜಿಯವರು ತಾವು ರಷ್ಯಾದಲ್ಲಿರುವುದರ ಬಗ್ಗೆ ಖುದ್ದು ಬರೆದಿದ್ದಾರೆ. ತಾವು ಎಲ್ಲಿದ್ದೇವೆ ಎನ್ನುವ ಸ್ಥಳ ಕೂಡ ಬರೆದಿದ್ದಾರೆ. ಆದಷ್ಟು ಬೇಗ ತಮ್ಮನ್ನು ಭಾರತಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿ ಎಂದು ಕೇಳಿದ್ದಾರೆ.’ ಎಂದು ಮುಖರ್ಜಿ ಕಮಿಷನ್ ಹೇಳಿದೆ. ನೆಹರೂ ಏಕೆ ನೇತಾಜಿಯನ್ನು ರಷ್ಯಾದಿಂದ ಕರೆತರುವ ಪ್ರಯತ್ನ ಮಾಡಿಲ್ಲ? ಇನ್ನು ಇದೇ ವರದಿಯನ್ನ ನಾವು ಏಕೆ ನಂಬಬೇಕು ಎಂದರೆ ಇಲ್ಲಿ, 1955ರ ಜೂನ್ 7ರಿಂದ 23ರರವರೆಗೆ ನೆಹರೂ ರಷ್ಯಾ ಪ್ರವಾಸ ಕೈಗೊಳ್ಳುತ್ತಾರೆ. ಅಷ್ಟು ದಿನವಿಲ್ಲದ ರಷ್ಯಾ ಪಯಣ 1955ರಲ್ಲೇ ಏಕೆ? ಪ್ರವಾಸ ಮುಗಿಸಿ ಭಾರತಕ್ಕೆ ಬಂದ ನೆಹರೂ ತಮಗೆ ಬರುತ್ತಿದ್ದ ಪತ್ರಗಳಿಗೆ ಉತ್ತರ ಬರೆಯುತ್ತಿದ್ದರು. ಹಾಗೆಯೇ, ನೆಹರೂ 1966ರಲ್ಲಿ ಸುರೇಶ್ ಬೋಸ್ ಪತ್ರಕ್ಕೆ ಉತ್ತರ ಕೊಡುವಾಗ ನೆಹರೂ ಬಂದರೆ ಅದ್ದೂರಿ ಸ್ವಾಗತ ಕೊಡುತ್ತೇವೆ ಎಂದು ಹೇಳಿದ್ದು? ಅಂದರೆ, ನೆಹರೂಗೆ ಗೊತ್ತಿತ್ತೇ ನೇತಾಜಿ ವಾಪಸ್ ಬರುವುದಿಲ್ಲ ಎಂದು?

ಅಮೆರಿಕದ ಪತ್ರಕರ್ತನಿಗೆ ನೆಹರೂ ಉತ್ತರವೇನು ?
1945ರ ಆಗಸ್ಟ್ 29ನೇ ತಾರೀಕು, ಅಸೋಸಿಯೇಟೆಡ್ ಪ್ರೆಸ್ ಆಫ್ ಅಮೆರಿಕದ ಪತ್ರಕರ್ತ ಶ್ರೀ ಗೋಸ್ವಾಮಿಯವರು ನೆಹರೂಗೆ ಪತ್ರ ಬರೆಯುತ್ತಾರೆ. ಅದರಲ್ಲಿ ನೇತಾಜಿ ಇನ್ನೂ ಬದುಕಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಕೊಡಿ ಎಂದು ಕೇಳುತ್ತಾರೆ. ಈ ಪತ್ರಕ್ಕೆ ಉತ್ತರಿಸಿದ ನೆಹರೂ ’ಸುಭಾಷ್ ಚಂದ್ರ ಬೋಸ್ ಒಬ್ಬ ಯುದ್ಧ ಖೈದಿ, ಅವರ ಬಗ್ಗೆ ನಾನು ಏನನ್ನೂ ಹೇಳುವುದಕ್ಕೆ ಇಷ್ಟ ಪಡುವುದಿಲ್ಲ’ ಎಂದು ಉತ್ತರ ಬರೆದಿದ್ದಾರೆ. ಅಂದರೆ ವಿಮಾನ ಅಪಘಾತ ನಡೆದಿದೆ ಎನ್ನಲಾದ ದಿನಾಂಕ 22 ಆಗಸ್ಟ್ 1945. ಜಪಾನ್ ರೇಡಿಯೋದಲ್ಲಿ ನೇತಾಜಿ ಸಾವಿನ ವಿಷಯ ಜಗತ್ತಿಗೆ ತಿಳಿದದ್ದು 23 ಆಗಸ್ಟ್ ಗೆ.  ಕೇವಲ ಎಂಟೇ ದಿನಗಳಲ್ಲಿ ನೇತಾಜಿ ಬದುಕಿದ್ದಾರೆ ಎಂದು ಅಮೆರಿಕದ ಪತ್ರಕರ್ತ ಹೇಳಿದರೂ ಅವನ ಮಾತಿಗೂ ಬೆಲೆ ಕೊಡಲಿಲ್ಲವೇಕೆ? ಕೇವಲ ಎಂಟು ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರನೊಬ್ಬ ಯುದ್ಧ ಖೈದಿಯಾಗಿಬಿಟ್ಟನೇ? ಅಮೆರಿಕದ ಪತ್ರಕರ್ತನಿಂದ ಬಂದ ಮಾಹಿತಿಯನ್ನು ನೆಹರೂ ಯಾರಿಗೂ ಹೇಳಲಿಲ್ಲವೇಕೆ?
ಕ್ಲೆಮೆಂಟ್ ಆ್ಯಟ್ಲಿಗೆ ಬರೆದ ಪತ್ರದಲ್ಲೂ ಕಿಡಿ ಕಾರಿದ್ದ ನೆಹರೂ
ಎಲ್ಲಿ ನೇತಾಜಿ ಬದುಕಿದ್ದಾರೆ ಎಂದು ತಿಳಿಯಿತೋ ಆಗ ಗೊಂದಲಕ್ಕೆ ಬಿದ್ದರು ನೆಹರೂ. ತಕ್ಷಣವೇ ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಆ್ಯಟ್ಲಿಗೆ ಪತ್ರ ಬರೆಯುತ್ತಾರೆ. ಆ ಪತ್ರದಲ್ಲಿ ಹೀಗಿದೆ ’ನಮಗೆ ಬಂದಿರುವ ನಿಖರ ಮಾಹಿತಿಯ ಪ್ರಕಾರ ನಿಮ್ಮ ಯುದ್ಧ ಖೈದಿಯಾದ ಸುಭಾಷ್ ಚಂದ್ರ ಬೋಸ್‌ಗೆ ರಷ್ಯಾದಲ್ಲಿ ಉಳಿಯಲು ಜಾಗ ಕೊಟ್ಟಿದ್ದಾರೆ ಸ್ಟಾಲಿನ್. ಬ್ರಿಟಿಷ್ ಮತ್ತು ಅಮೆರಿಕಗೆ ಮಿತ್ರ ರಾಷ್ಟ್ರವಾಗಿರುವ ರಷ್ಯಾ, ನಂಬಿಕೆ ದ್ರೋಹ ಮಾಡಿದೆ. ದಯವಿಟ್ಟು ಈ ಬಗ್ಗೆ ಗಮನಹರಿಸಿ ಹಾಗೂ ಸುಭಾಷ್ ಚಂದ್ರ ಬೋಸ್ ವಿಷಯದಲ್ಲಿ ನಿಮಗೆ ಏನು ಸರಿಯೆನಿಸುತ್ತದೆಯೋ ಅದನ್ನೇ ಮಾಡಿ’ ಎಂದು ಬರೆದಿದ್ದಾರೆ. ನೇತಾಜಿ ಬದುಕಿದ್ದಾರೆ ಎಂದು ಗೊತ್ತಿದ್ದರೂ ಶ್ರಾದ್ಧ ಮಾಡುವುದಕ್ಕೆ ನೆಹರೂ ಮುಂದಾಳತ್ವ ವಹಿಸಿದ್ದು ಏಕೆ? ಅಧಿಕಾರ ದಾಹವೇ ಅಥವಾ ಬಣ್ಣ ಬಯಲಾಗುವುದು ಎಂಬ ಆತಂಕವೋ?

ನೇತಾಜಿ ಮಗಳಿಗೆ ಕೊಡುತ್ತಿದ್ದ 500 ರುಪಾಯಿಯನ್ನೂ ತಡೆದ ನೆಹರೂ!
ನೆಹರೂ ಮನಸ್ಥಿತಿ ಹೇಗಿತ್ತು ಎನ್ನುವುದಕ್ಕೆ ಒಂದು ಸ್ಪಷ್ಟ ಉದಾಹರಣೆ ಈ ದಾಖಲೆ. ಮುಖರ್ಜಿ ಕಮಿಷನ್‌ನಲ್ಲಿ ಸಣ್ಣ ಒಂದು ಪತ್ರ ಲಗತ್ತಿಸಿದ್ದಾರೆ. ಅದರಲ್ಲಿ ಹೀಗಿದೆ ’ಎಐಸಿಸಿಯು ನೇತಾಜಿ ಮಗಳಿಗೆ ತಿಂಗಳಿಗೆ 500ರೂಪಾಯಿಯಂತೆ 1964 ಇಸವಿಯವರೆಗೂ ಸಹಾಯ ಧನ ಕಳುಹಿಸುತ್ತಿತ್ತು. ಆದರೆ, ಆಕೆಗೆ 1965ದಲ್ಲಿ ಮದುವೆಯಾದ ಕಾರಣ ಅದನ್ನು ನಿಲ್ಲಿಸಲಾಗಿತ್ತು. ಕೊನೆಗೆ ಅದನ್ನು ನೇತಾಜಿಯ ಹೆಂಡತಿಗೆ ಕೊಡಲಾಗಿತ್ತು. ಆದರೆ, ಅವರು ಆ ಹಣವನ್ನು ನಿರಾಕರಿಸಿದ್ದರಿಂದ ಮಾಸಾಶನ ಕೊಡುವುದು ನಿಲ್ಲಿಸಲಾಗಿತ್ತು’ ಎಂದಿದ್ದಾರೆ. ದೇಶ ಭಕ್ತನ ಬೆಲೆ ಕಟ್ಟುವುದೇ ತಪ್ಪು ಹೀಗಿರುವಾಗ, ನೇತಾಜಿಯ ಮಗಳು ಮದುವೆಯಾದಳು ಎಂದ ಮಾತ್ರಕ್ಕೆ ಮಾಸಾಶನ ಕೊಡುವುದನ್ನು ನಿಲ್ಲಿಸುವುದು ಎಷ್ಟು ಸರಿ? ನೇತಾಜಿ ಹೆಂಡತಿ ಬೇಡವೆಂದ ಮಾತ್ರಕ್ಕೆ ಅಷ್ಟಕ್ಕೆ ಬಿಟ್ಟು ಕೈ ತೊಳೆದುಕೊಂಡರು ನೆಹರೂ. 500 ರುಪಾಯಿ ಉಳಿಸಿ ನೆಹರೂ ಗಳಿಸಿದ್ದಾದರೂ ಏನು?

ಆರ್‌ಎಸ್‌ಎಸ್ ಬಗೆಗೆ ನೇತಾಜಿಗಿದ್ದ ಒಲವು!
1939ರಲ್ಲಿ ಕಾಂಗ್ರೆಸ್ ವರ್ತನೆಯಿಂದ ನೊಂದ ನೇತಾಜಿ, ಆರ್‌ಎಸ್‌ಎಸ್ ಮೇಲೆ ತಮ್ಮ ಒಲವನ್ನು ತೋರಿದ್ದರು. ನಾಗ್ಪುರಕ್ಕೆ ಬಂದು ಡಾ.ಹೆಡಗೆವಾರ್‌ರನ್ನು ಭೇಟಿ ಮಾಡಿದ್ದರು. ಅಂದಿನಿಂದ ಆರ್‌ಎಸ್‌ಎಸ್‌ಗೂ ನೇತಾಜಿಗೂ ಬಹಳವೇ ಒಲವಿತ್ತು ಎಂಬುದು ಈಗ ಅನಾವರಣಗೊಂಡಿದೆ.

ನೇತಾಜಿ ಸತ್ತೇ ಇಲ್ಲ: ಅಸ್ತಿಗಾಗಿ ಹುಡುಕಾಟ
ನೇತಾಜಿ ಇನ್ನೂ ಬದುಕಿದ್ದಾರೆ ಎಂದು ನೆಹರೂಗೆ ಚೆನ್ನಾಗಿಯೇ ಗೊತ್ತು. ನೆನಪಿರಲಿ, 1945 ಆಗಸ್ಟ್ 29ರಂದು ಪತ್ರಕರ್ತನಿಂದ ಬಂದ ಮಾಹಿತಿಯಿದ್ದರೂ ಸಹ, 1945ರ ಆಗಸ್ಟ್ 30ರಂದು ನೆಹರೂ ಅಧಿಕೃತವಾಗಿ, ನೇತಾಜಿ ಸತ್ತಿದ್ದಾರೆ ಅವರ ಅವರ ಅಸ್ತಿಯೂ ನಮಗೆ ಸಿಕ್ಕಿದೆ ಎಂದು ಹೇಳುತ್ತಾರೆ. ಆದರೆ, ಆಸ್ತಿ ನೇತಾಜಿಯದ್ದೋ ಇಲ್ಲವೋ ಎಂದು ಸ್ವತಃ ಅವರಿಗೇ ಗೊತ್ತಿರುವುದಿಲ್ಲ. ಹೀಗೆಂದು ಅವರೇ ಪತ್ರ ಬರೆದಿದ್ದಾರೆ. ಇನ್ನು ರೆಂಕೂಜಿ ದೇವಸ್ಥಾನದಲ್ಲಿ ಅಸ್ತಿ ಸಿಕ್ಕಿದೆ ಎಂದು ತಿಳಿದ ನೆಹರೂ ಅದನ್ನು ತನಿಖೆ ಮಾಡಲು ಹಚ್ಚುತ್ತಾರೆ. ಆದರೆ ನೇತಾಜಿ ಸಾವಿನ ಬಗ್ಗೆ ಅದಾಗಲೇ ಸಂಶೋಧನೆ ಮಾಡುತ್ತಿರುವ ತಂಡ ’ಇಲ್ಲಿ ಯಾವುದೇ ಅಸ್ತಿ ಇಲ್ಲ, ಹಾಗಿದ್ದರೂ ರೆಂಕೂಜಿ ದೇವಸ್ಥಾನದ ಬಗ್ಗೆ ಏಕೆ ಕಣ್ಣು ಹಾಕುತ್ತಿರುವುದು’ ಎಂದು ಪತ್ರ ಬರೆದು ಅಸಮಧಾನ ತೋಡಿಕೊಂಡಿದೆ.

5 thoughts on “ನೆಹರೂ ಬಣ್ಣ ಬಯಲಾಯಿತು !

  1. Dr KS narayanacharya barediruva SUBHASHARA KANMARE pustakadalli vivaravagi modale barediddare.. Konegu avaru barediddu satya anta pratipadisalu a avakash sikkantaaytu

Leave a Reply to Manjunath Cancel reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya