ಭಟ್ಟರನ್ನು ಕಂಡರೆ ಬೆಳಗೆರೆಗೆ ಗಡ ಗಡ!

ರವಿ ಬೆಳಗೆರೆ ಬಗ್ಗೆ ಒಂದು ಮಾತು ಹೇಳಲೇ ಬೇಕು. ಇವರಿಗೆ ಭಟ್ಟರನ್ನು ಕಂಡರೆ ಇನ್ನೂ ಭಯವಿದೆ, ಅದು ಈಗಿನದ್ದಲ್ಲ… ಭಟ್ಟರ ಜೊತೆಗಿನ ದೋಸ್ತಿ ಕಟ್ ಆದಾಗಿನಿಂದಲೂ ಭಟ್ಟರು ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ರವಿ ಬೆಳಗೆರೆ ಭಟ್ಟರ ವಿರುದ್ಧ ಬರೆದಿರುವ ಸಾಲು ಸಾಲು ಲೇಖನಗಳು. ಪತ್ರಕರ್ತರು ಒಮ್ಮೆ ಒಬ್ಬನ ಬಗ್ಗೆ ಸಂಪೂರ್ಣವಾಗಿ ಬರೆದ ಮೇಲೆ ಮತ್ತೊಮ್ಮೆ ಅವನ ಬಗ್ಗೆ ಬರೆಯುವ ಗೋಜಿಗೆ ಹೋಗುವುದಿಲ್ಲ. ಆದರೆ, ಬೆಳಗೆರೆ ಮಾತ್ರ ಭಟ್ಟರ ಬಗ್ಗೆ ಇನ್ನೂ ಬರೆಯುತ್ತಲೇ ಇದ್ದಾರೆ. ಇದರಲ್ಲೇ ತಿಳಿಯಬೇಕು ಭಟ್ಟರನ್ನು ಕಂಡರೆ ಅದೆಷ್ಟು ಭಯ ಎಂದು. ಅದೇ ಭಯದಲ್ಲೇ ಆದರಾಗಲಿ “ವಿಶ್ವನ” ಬಗ್ಗೆ ಏನಾದ್ರೂ ಬರೆಯದೆಯಾ ಅಂತ ರವಿ ಬೆಳಗೆರೆ ತೀರ್ಮಾನ ಮಾಡಿದ್ದರು ಎಂಬ ಸುದ್ದಿ ನನಗೆ ಪತ್ರಕೆ ಪ್ರಕಟವಾಗುವ ಎರಡು ದಿನಗಳ ಹಿಂದೇ ಮುಟ್ಟಿತ್ತು. ಆದರೆ, ಸಮಸ್ಯೆ ಇರುವುದು ಅಲ್ಲೇ. ಏನು ಅಂತ ಬರೆಯೋದು? ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಯಾಕಾಗಿ ಬಿಟ್ಟರು ಎಂಬ ಬಗ್ಗೆ ತಲೆ ಬುಡ ಗೊತ್ತಿಲ್ಲ.. ಜೊತೆಗೆ ಭಟ್ಟರ ಬಗ್ಗೆ ಇಲ್ಲಸಲ್ಲದ್ದು ಬರೆದರೆ ಎಡ್ವಾಟ್ಟಾದ್ರೆ ಎಂಬ ಮತ್ತೊಂದು ಭಯ ಬೇರೆ! ಅದಕ್ಕೆ ಸರಿಯಾಗಿ ಸಿಕ್ಕಿದ್ದು ಪ್ರತಾಪ್ ಸಿಂಹ, ರಾಧಾಕೃಷ್ಣ ಭಡ್ತಿ, ವಿನಾಯಕ್ ಭಟ್ ಮೂರೂರು, ರಾಘವೇಶ್ವರ ಶ್ರೀಗಳು, ಪ್ರೇಮಲತಾ ದಿವಾಕರ್, ಅಜಿತ್ ಹನಮಕ್ಕನವರ್ ಮತ್ತು ಬಡಪಾಯಿ ಪಬ್ಲಿಕ್ ಟೀವಿ ರಂಗಣ್ಣ! ಇದಕ್ಕೆ ಕವರ್ ಪೇಜ್ನಲ್ಲಿ “ಭಟ್ಟ ಬಂದ, ಭಟ್ಟ ಹೋದ… ಢಮ್ ಢಮ್ ಢಮ್!” ಎಂಬ ಶೀರ್ಷಿಕೆ, ವಿಶ್ವೇಶ್ವರ ಭಟ್ಟರ ಫೋಟೊ ಬೇರೆ. ಸರಿ, ಬಹಳ ದಿನಗಳ ನಂತರ ರವಿ ಬೆಳಗೆರೆ ತಮ್ಮ ದೋಸ್ತನ ಬಗ್ಗೆ ಬರೆದಿದ್ದಾರಲ್ಲ ನೋಡೋಣ ಎಂದು ಪತ್ರಿಕೆ ತೆಗೆದುಕೊಂಡವರಗೆ 15 ರುಪಾಯಿಗಳ ಉಂಡೆ ನಾಮ ತಿಕ್ಕಿದ ಕೀರ್ತಿ ರವಿ ಬೆಳಗೆರೆಗೆ ಸಲ್ಲಬೇಕು. ವಿಶ್ವೇಶ್ವರ ಭಟ್ಟರು ಪತ್ರಿಕೆ ಬಿಟ್ಟಿದ್ದು ವಿಶ್ವಕ್ಕೇ ಗೊತ್ತು. ಅದರ ಬಗ್ಗೆ ಬರೆದಿದ್ದಾರೆ ಎಂದು ಪೇಪರ್ ತೆಗೆದುಕೊಂಡವರಿಗೆ ನಿರಾಶೆ ಕಾದಿತ್ತು. ಏಕೆಂದರೆ ಅಲ್ಲಿದ್ದದ್ದು ಕೇವಲ “ವಿಶ್ವ ಹಂಗಿದ್ದ, ಹಿಂಗಿದ್ದ” ಎಂಬ ಮಾತುಗಳಷ್ಟೇ ಹೊರತು ಭಟ್ಟರು ಕನ್ನಡಪ್ರಭ ಏಕೆ ಬಿಟ್ಟರು ಎಂಬುದನ್ನು ಸರಿಯಾಗಿ ವಿವರಿಸಲೇ ಇಲ್ಲ. ಓವರ್ಹೆಡ್ ಟ್ಯಾಂಕಲ್ಲಿ ನೀರಿಲ್ಲದಿದ್ದಾಗ ನಲ್ಲಿಯಲ್ಲಿ ಬರುವುದು ಕಸವೇ ಎಂದು ಸಾಬೀತು ಮಾಡಿದಂತಿದೆ ರವಿ ಬೆಳಗೆರೆಯವರ ಬರೋಬ್ಬರಿ ಮೂರು ಪುಟಗಳ ಲೇಖನ. ಇದರ ಬದಲು ಮೂರು ಪುಟಗಳಿಗೆ ಜಾಹಿರಾತು ಹಾಕಿದ್ದರೆ ಸಕ್ರ್ಯುಲೇಷನ್ ಇಲ್ಲದೇ ತಡಕಾಡುತ್ತಿದ್ದ ಪತ್ರಿಕೆಗೆ ಪ್ರಿಂಟಿಂಗ್ ಚಾರ್ಜ್ ಆದ್ರೂ ಬಂದಿರೋದು. ರವಿಯವರೇ You just missed it! ಇರಲಿ, ರವಿ ಬೆಳಗೆರೆ ಹಾಗೆ ಟ್ಯಾಬ್ಲಾಯ್ಡ್ ಶೈಲಿಯಲ್ಲಿ ಬರೆಯುತ್ತಾ ಹೋದರೆ ನನ್ನದು ಮೂರಲ್ಲ, ಆರು ಪುಟಗಳಾದರೂ ಮುಗಿಯದೇ ಇರಬಹುದು. ನಿಮ್ಮ ಲೇಖನದ ಒಂದೊಂದು ಸಬ್ ಹೆಡ್ಡಿಂಗಿಗೂ ಉತ್ತರಿಸುತ್ತಾ ನಿಮಗೆ ವಿಶ್ವೇಶ್ವರ ಭಟ್ಟರ ಮೇಲೆ ಕೇವಲ ಭಯವಿತ್ತೇ ಹೊರತು ಸತ್ಯ ಸಾರುವ ಉದ್ದೇಶವಿರಲೇ ಇಲ್ಲ ಎಂದು ಸಾಬೀತು ಪಡಿಸುತ್ತೇನೆ. ವಿಷಯಕ್ಕೆ ಬರೋಣ.

ರವಿ ಬೆಳಗೆರೆ ಸಾಯಬ್ರೇ ನೀವು ಮೊದಲಿಗೆ ಲೇಖನ ಶುರು ಮಾಡಿದ್ದು ಭಟ್ಟರು ವಿಜಯ ಕರ್ನಾಟಕದಿಂದ ಓಡಿಸಿದ್ರು ಎಂದು. ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕಕ್ಕೆ ರಾಜಿನಾಮೆ ಕೊಟ್ಟಾಗಲೂ ನೀವು ಹೀಗೇ ಬರೆದಿದ್ರಿ. ವಿಜಯ ಸಂಕೇಶ್ವರ್ ಬಹಳ ಸ್ಟ್ರಿಕ್ಟ್ ಮನುಷ್ಯ. ಯಾರನ್ನೂ ಸಹಿಸಿಕೊಳ್ಳುವುದಿಲ್ಲ ಎಂದು. ಭಟ್ಟರ ನಂತರ ವಿಜಯ ಕರ್ನಾಟಕಕ್ಕೆ ಇಬ್ಬರು ಸಂಪಾದಕರು ಬಂದು ಹೋದರು. ಇಷ್ಟು ವರ್ಷ ಕಳೆದ ಮೇಲೂ ಮತ್ತೆ ವಿಜಯ ಕರ್ನಾಟಕದ ಬಗ್ಗೆ ಮಾತಾಡುವ ಅಗತ್ಯವಿತ್ತೇ? ಅಲ್ಲೇ ತಿಳಿಯುತ್ತದೆ ವಿಶ್ವೇಶ್ವರ ಭಟ್ಟರು ವಿ.ಕ. ಬಿಟ್ಟಾಗ ಪಾರ್ಟಿ ಮಾಡಲಾರಂಭಿಸಿದ ನೀವು, ಇನ್ನೂ ಪಾರ್ಟಿ ಮಾಡುತ್ತಲೇ ಇದ್ದೀರ ಎಂದು. ಇದಕ್ಕಿಂತ ಮೂರ್ಖತನ ಮತೊಂದಿದೆಯೇ? ವಿಜಯ ಕರ್ನಾಟಕ ಬಿಡುವ ಸಂದರ್ಭದಲ್ಲಿ ಅಲ್ಪ ಸ್ವಲ್ಪ ನಿಮ್ಮ ಒಡನಾಟವಿದ್ದಿದ್ದರಿಂದ ಹಲವಾರು ಕಡೆಯಿಂದ ಬಂದ ಸಣ್ಣ ಪುಟ್ಟ ಮಾಹಿತಿಗಳನ್ನು ವೈಭವೀಕರಿಸಿ ಬರೆದಿದ್ರಿ. ಆದರೆ, ಕೆಲ ವರ್ಷಳಿಂದ ನಿಮ್ಮ ಜೊತೆಗಿನ ದೋಸ್ತಿಯನ್ನು ಮತ್ತು ನಿಮ್ಮ ಛೇಲಾಗಳನ್ನು ಭಟ್ಟರು ತಮ್ಮ ಹತ್ತಿರವೂ ಬಿಟ್ಟುಕೊಳ್ಳದಿದ್ದಾಗ ನಿಮಗೆ ಯಾವ ಮಾಹಿತಿಯೂ ಸಿಗಲಿಲ್ಲ. ಅದಕ್ಕೇ ಹಳೆಯ ವಿಚಾರವನ್ನೇ ಮತ್ತೆ ಕೆದಕಿ ಬರೆದಿದ್ದೀರ. ಇಲ್ಲಿಗೆ ನೀವು ವಿಶ್ವೇಶ್ವರ ಭಟ್ಟರ ಬಗ್ಗೆ ಬರಿಯುವ ಉಮೇದಿಯಲ್ಲಿ ವಿಜಯ ಕರ್ನಾಟಕದ ವಿಷಯವನ್ನು ಕೆದಕಿ ನಿಮ್ಮ ತೆಲೆಯಲ್ಲಿ ಕನ್ನಡಪ್ರಭದ ಬಗ್ಗೆ ಏನೇನೂ ಮಾಹಿತಿ ಇಲ್ಲ ಎಂದು ಸಾಬೀತು ಪಡಿಸಿದ್ದೀರಿ.

ನಿಮ್ಮ ಎರಡನೇ ಮತ್ತು ಮೂರನೇ ಸಬ್ ಹೆಡ್ಡಿಂಗ್, “ಸಂಕೇಶ್ವರ್ ನಂಬಲಿಲ್ಲ”! ಮತ್ತು “ಉನ್ನತ ವ್ಯಾಸಂಗ ಮತ್ತು ಕ್ರೈಸ್ಟ್ ಲಾಬಿ” ಇದರಲ್ಲಿ ನೀವು ಓದುಗರಿಗೆ ಅದೇನು ಹೇಳುವುದಕ್ಕೆ ಹೊರಟಿದ್ದೀರೋ ನನಗೆ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ, ನಿಮ್ಮ ಮತ್ತು ಭಟ್ಟರ ನಡುವೆ ನಡೆದಿದ್ದ ಖಾಸಗೀ ವಿಚಾರಗಳನ್ನು ಬರೆದುಕೊಂಡಿದ್ದೀರ. ಜೊತೆಗೆ ಪ್ರತಾಪ್ ಸಿಂಹರನ್ನೂ ಎಳೆದು ತಂದಿದ್ದೀರ. ಒಂದು ಪತ್ರಿಕೆಯ ಜವಾಬ್ದಾರಿ ಹೊತ್ತ ನಿಮಗೆ ಇದು ಚೀಪ್ ಕೆಲಸ ಎನಿಸಲಿಲ್ಲವೇನು? ವಿಜಯ ಕರ್ನಾಟಕ ಬಿಟ್ಟಾಗ ಸಂಬಂಧಿಕರಿಗೆ ಫೋನಾಯಿಸದೇ ಸ್ನೇಹಿತನಿಗೆ ಒಂದು ಮಾತು ಹೇಳೋಣ ಎಂದು ನಿಮಗೆ ಹೇಳಿದ್ದು ತಪ್ಪಾಯ್ತಾ? ಕನ್ನಡಪ್ರಭದ ಬಗ್ಗೆ ಮಾತಾಡುವ ಬದಲು ನೀವೇ ಖಾಸಗಿ ವಿಚಾರ ತೆರೆದಿದ್ದಕ್ಕೆ ಹೇಳುತ್ತೇನೆ, ಹಿಂದೊಮ್ಮೆ ನಿಮ್ಮ ಮತ್ತು ಭಟ್ಟರ ನಡುವೆ ಮಾತಾಡಿದ್ದ ಮಾತುಗಳು ಹಂಚಿಕೊಂಡ ವಿಷಯಗಳೆಲ್ಲವನ್ನೂ ಬಾಯಿಗೆ ಬಂದ ಹಾಗೆ ಬರೆದಿದ್ದೀರಿ. ಇದು ನಿಮಗೇ ಸರಿ ಎನಿಸುತ್ತಾ? ಒಬ್ಬ ಚಡ್ಡಿ ದೋಸ್ತ ಎಂಬ ಮೇಲೆ ಸ್ನೇಹಿತನೊಂದಿಗೆ ಇ-ಮೇಲಿಂದ ಫೀಮೇಲ್ವರೆಗೂ ಒಂದು ನಂಬಿಕೆಯ ಮೇಲೆ ಮಾತಾಡಿರುತ್ತಾರೆ. ಸ್ನೇಹಿತ ವೈರಿಯಾದಾಗ ಆತ ಸರಿಯಿಲ್ಲ, ಒಮ್ಮೆ ನನಗೆ ಅವನು ಹಾಗೆ ಹೇಳಿದ್ದ, ಹೀಗೆ ಹೇಳಿದ್ದ ಎನ್ನುವುದಕ್ಕೂ ಮಲಗೆದ್ದ ಮೇಲೆ ಹೆಂಡತಿಯ ಫೋಟೊವನ್ನು ತೆಗೆದು “ನೋಡಿ ನನ್ನ ಹೆಂಡತಿ ಹೀಗಿದ್ದಳು, ಹೀಗಾದಳು” ಎಂದು ಸಾರ್ವಜನಿಕರಿಗೆ ತೋರಿಸುವುದಕ್ಕೂ ಏನು ವ್ಯತ್ಯಾಸವಿದೆ? ಸ್ನೇಹದಲ್ಲೂ ಟಿಆರ್ಪಿ ಹೆಚ್ಚಿಸಿಕೊಳ್ಳುವ ಪತ್ರಕರ್ತನ ಬುದ್ಧಿಯನನ್ನು ನಿಮ್ಮಿಂದ ಕಲಿಯಬೇಕಾದ್ದೇ. ಚಡ್ಡಿ ದೋಸ್ತನೇ “ಗೋಲ್ಗಪ್ಪಾ” ತಿನ್ನುವ ಕೆಲಸ ಮಾಡಿದರೇ, ಪಾಪ ಭಟ್ಟರು ಜೀವನದಲ್ಲಿ ಇನ್ಯಾರ ಮೇಲೆ ಅಷ್ಟು ನಂಬಿಕೆ ಇಟ್ಟಾರು ಹೇಳಿ?

“ಭಟ್ಟನ ಕೆಲಸ ಹೋಗುವಾಗ ನಾನೇ ಬಂದು ನನ್ನ ಕಾರು ವಯ್ಯೀ, ಚೇರ್ ನಿಂದು, ಆಫೀಸ್ ನಿಂದು ಆರಾಮಾಗಿರು ಎಂದಿದ್ದೆ. ವಿಜಯ್ ಸಂಕೇಶ್ವರ್ರನ್ನೂ soften ಮಾಡಿದ್ದೆ” ಎಂದು ಬರೆದಿದ್ದೀರಿ. ಅಬ್ಬಬ್ಬಾ! ಕಲರ್ ಕಲರ್ ಕಾಗೆ ಹಾರಿಸುವ ಕಲೆ ಬಹುಶಃ ರವಿ ಬೆಳಗೆರೆ ಬಿಟ್ಟರೆ ಪತ್ರಿಕೋಧ್ಯಮದಲ್ಲೇ ಯಾರಿಗೂ ಸಿದ್ಧಿಸಿಲ್ಲ ಎನಿಸುತ್ತದೆ. ಡೈಲಾಗ್ ಬೈ ಡೈಲಾಗ್ ಸುಳ್ಳು ಹೇಳ್ತೀರಲ್ಲ ರವಿ? I am Impressed! ಆದರೆ ನಿಮಗಿದು ತಿಳಿದಿರಲಿ, ವಿಶ್ವೇಶ್ವರ ಭಟ್ಟರು ನಿಮ್ಮ ಬಳಿ ಯಾವ ಸಹಾಯವನ್ನೂ ಪಡೆದಿಲ್ಲ. ಅಂಥ ದರ್ದೂ ಭಟ್ಟರಿಗಿರಲಿಲ್ಲ. ಇನ್ನು ಲಂಡನ್ನಿನಿಂದ ಬಂದ ಮೇಲೆ ನೀವು ಪಾರ್ಟಿ ಕೊಟ್ರಾ? ಅಲ್ಲ ರವಿ ಬೆಳಗೆರೆಯವರೇ, ಊಟ ಮಾಡಿದ ಕೈಯಲ್ಲಿ ಕಾಗೆ ಓಡಿಸಲ್ಲ ನೀವು.. ಅಂಥದ್ರಲ್ಲಿ ಗ್ರ್ಯಾಂಡ್ ಪಾರ್ಟಿ ಕೊಟ್ರಾ?! ಇನ್ನು ನೀವು ನಿಮ್ಮ ಪತ್ರಿಕೆಯಲ್ಲಿ ಬರೆಯುವುದಕ್ಕೆ ಬಹುತೇಕ ಸಾಕ್ಷಿ, ದಾಖಲೆಗಳೇ ಇರುವುದಿಲ್ಲ ಎನ್ನುವುದಕ್ಕೆ ಒಂದು ತಾಜಾ ಉದಾಹರಣೆ ಕೊಡುತ್ತೇನೆ ಕೇಳಿ. ಕೆಲ ದಿನಗಳ ಹಿಂದೆ ನಿಮ್ಮ ಪತ್ರಿಕೆಯಲ್ಲೇ ಗೀಚುವ ಅಂಕಣಕಾರರೊಬ್ಬರು ಫೇಸ್ಬುಕ್ಕಿನಲ್ಲಿ ಹಾಕಿಕೊಂಡಿದ್ದರು “ಮೇಲಿಂದ ಮೇಲೆ ಕೇಸುಗಳು! ಅಲೆದಾಟ ಸಿಕ್ಕಾಪಟ್ಟೆ ಕಂಗೆಡಸಿ ಬಿಡುತ್ತವೆ. ಕೋರ್ಟು ದಾಖಲೆ ಉಂಟೇನ್ರಿ? ಎಂದು ಕೇಳುತ್ತದೆ. ಎಲ್ಲದಕ್ಕೂ ದಾಖಲೆ ಇಟ್ಟುಕೊಂಡೇ ಬರೆಯೋಕಾಗ್ತದಾ? ಅದೂ ಟ್ಯಾಬ್ಲಾಯ್ಡ್ ಪತ್ರಿಕೆಯಲ್ಲಿ!”. ಏನ್ ಸಾರ್ ಹೀಗಂದ್ರೆ? ದಾಖಲೆಗಳಿಲ್ಲದೇ ಬಾಯಿಗೆ ಬಂದ ಹಾಗೆ ಹಲಬುವುದಕ್ಕೆ ಇದೇನ್ ಕಾಮಿಡಿ ಶೋ ಕೆಟ್ಟೋಯ್ತಾ? ಪತ್ರಿಕೆಯಲ್ಲಿ ಒಂದಕ್ಷರ ಬರೆಯುವುದಕ್ಕೂ ಮುಂಚೆ 100 ಬಾರಿ ಯೋಚಿಸಬೇಕು.. ದಾಖಲೆ ಇಟ್ಟುಕೊಳ್ಳಬೇಕು. ಈಗ ಹೇಳಿ, ಗಾಳಿಯಲ್ಲಿ ಹಿಟ್ಟು ರುಬ್ಬುತ್ತಿರುವುದು ನೀವೋ? ಭಟ್ಟರೋ? ಇನ್ನು ನಿಮ್ಮದೇ ರೀತಿಯ ಬರೆಯುವ ಚಾಳಿಯನ್ನು ಭಟ್ಟರು ಮುಂದುವರೆಸಿದ್ದರೆ ನಿಮ್ಮ ದೊಡ್ಡ ಗುಣಗಳೆಲ್ಲ ಹೊರಬರುತ್ತಿತ್ತು. ಅವರು ಹಾಗೆ ಮಾಡಲಿಲ್ಲ, ಸ್ನೇಹಿತ ಅಲ್ವಾ ಹೋಗ್ಲಿ ಬಿಡು ಎಂದು ಬಿಟ್ಟರು. ಆದರೆ, ಪ್ರತಾಪ್ ಸಿಂಹ ಏನು ನಿಮಗೆ ಸಂಬಂಧಿಕನಾ? ಅವರು ಸುಮ್ಮನಿರಲಿಲ್ಲ. ನಿಮ್ಮ ಒಂದೊಂದೇ ಗುಣಗಳನ್ನು ಮಾಧ್ಯಮದಲ್ಲಿ ಮತ್ತು ಬರವಣಿಗೆಯಲ್ಲಿ ಬಟಾಬಯಲು ಮಾಡುತ್ತಾ ಬಂದರು. ಅದನ್ನು ಸಹಿಸಲಾಗದೇ ನೀವು ಸಹ ಆಸ್ಯೂಷಲ್, ಪ್ರತಾಪ್ ಒಬ್ಬ ಹೆಣ್ಣುಬಾಕ, ವುಮೆನೈಝರ್ ಎಂದೆಲ್ಲ ಬರೆದ್ರಿ. ಮೂರನೇಯ ಹೆಡ್ಡಿಂಗ್ನ ಕೊನೆಯ ಹಂತದಲ್ಲಿ “ಅವತ್ತೇ ಸರಿಯಾಗಿ ನನ್ನ ಮತ್ತು ಭಟ್ಟನ ನಡುವೆ ಪ್ರತಾಪನ ವಿಷಯ ಬಂತು” ಎಂದು ಜಾರಿಕೊಂಡಿರಲ್ಲ? ಯಾವ ವಿಷಯ ಬಂತು ಎಂದು ಒಮ್ಮೆ ಹೇಳಿ ಸ್ವಾಮಿ.. ಜನಕ್ಕೆ ನಿಮ್ಮ ಲೀಲೆಗಳು ಗೊತ್ತಾಗುವುದೇ ಅಲ್ಲಿ. ಪ್ರತಾಪ್ ಸಿಂಹ ತಮ್ಮ ಮೊನಚಾದ ಬರವಣಿಗೆಗಳಿಂದ ಜನರ ಮನಸ್ಸನ್ನು, ಮೇಲಾಗಿ ಯುವ ಜನತೆಯನ್ನು ಹುರಿದುಂಬಿಸುತ್ತಿದ್ದರು. ಎಲ್ಲಿ ನೋಡಿದರೂ ಪ್ರತಾಪ್ ಸಿಂಹನ ಹೆಸರು ಕೇಳಿಬರುತ್ತಿತ್ತು, ಹವಾ ಇತ್ತು! ಒಬ್ಬ ಜ್ಯೂನಿಯರ್ ಆಗಿರುವ ಪ್ರತಾಪ್ ಸಿಂಹ ಬೆಳೆಯುತ್ತಿದ್ದದ್ದು ಅಸೂಯೆ ಮೂಡಿಸಿತ್ತು. ಕೊನೆಗೆ ರವಿ ಬೆಳಗೆರೆಯೇ ಪ್ರೀತಿಯ ದೋಸ್ತ ಸೋ ಕಾಲ್ಡ್ ವಿಶ್ವನ ಹತ್ರ ಹೋಗಿ “ನೋಡು ಗೌಡನಾಗಿರುವ ಪ್ರತಾಪ ಬೇಜಾನ್ ಬೆಳೆಯುತ್ತಿದ್ದಾನೆ.. ಸ್ವಲ್ಪ ಕಂಟ್ರೋಲ್ ಮಾಡು” ಎಂದರು. ನೋ ವೇಸ್.. ಅವನ ದಾರಿ ಅವನದ್ದು, ನಾನು ಅವನಿಗೆ ಒಂದು ಅವಕಾಶ ಕೊಟ್ಟೆ.. ಅದನ್ನು ಅವನು ಸರಿಯಾಗಿ ಉಪಯೋಗಿಸಿಕೊಂಡು ಬೆಳೆಯುತ್ತಿದ್ದಾನೆ ಎಂದರು ಭಟ್ಟರು. ಅಲ್ಲಿಂದ ಬೆಳಗೆರೆಗೂ ಭಟ್ಟರಿಗೂ ಕಿತ್ಕೊಂಡ್ ಬಿದ್ದಿದ್ದು ಎಂದು ರವಿ ಬೆಳಗೆರೆಯ ಸಹೋದ್ಯೋಗಿಗಳೇ ಹೇಳ್ತಾರಲ್ಲ! ಇದಕ್ಕೇನಂತೀರಾ? ಪತ್ರಿಕೋಧ್ಯಮದಲ್ಲಿ ಒಬ್ಬನ ವಿರುದ್ಧ ಯಾವ ಸಾಕ್ಷಿಯೂ ಸಿಗದಿದ್ದಾಗ ಅವನ ಹೆಸರನ್ನು ಕೆಡಿಸುವುದಕ್ಕೆ ಇರುವುದು ಎರಡೇ ಮಾರ್ಗ, ಮತ್ತು ಜನರು ಸುಲಭವಾಗಿ ನಂಬುವುದೂ ಅದನ್ನೇ.. ಒಂದೋ ಆತ ಒಬ್ಬ womanizer, ಹೆಣ್ಣುಬಾಕ, ಚಪಲ ಚನ್ನಿಗರಾಯ ಎನ್ನುವುದು. ಇದಾಗಲಿಲ್ಲವೆಂದರೆ ಆತ ಒಬ್ಬ ಭ್ರಷ್ಟ, ಸಖತ್ತಾಗಿ ದುಡ್ಡು ಮಾಡಿದ್ದಾನೆ, ಹತ್ತು ವರ್ಷಗಳ ಹಿಂದೆ ಸೈಕಲ್ನಲ್ಲಿ ಓಡಾಡುತ್ತಿದ್ದವನು ಈಗ ಆಡಿ ಕಾರಲ್ಲಿ ಹೋಗ್ತಿದ್ದಾನೆ ಎನ್ನುವುದು. ನಿಮಗೆ ಆ ವಿದ್ಯೆ ಕರಗತವಾಗಿದೆ ಎನಿಸುತ್ತದೆ. ವಿಶ್ವೇಶ್ವರ ಭಟ್ಟರ ಆಪ್ತನಾದ “ಬೋಳು ಶಂಕರ ಈಗ Audi ಕಾರ್ನಲ್ಲಿ ಓಡಾಡುತ್ತಿದ್ದಾನೆ” ಎಂದು ಹೇಳಿದ್ದೂ ಇದೇ ಬೇಸಿಸ್ ಮೇಲೆಯೇ. ಆದರೆ, ಆ ಲೆವಲ್ಲಿಗೆ ಬರುವುದಕ್ಕೆ ಎಷ್ಟು ಕಷ್ಟ ಪಟ್ಟಿದ್ದಾನೆ ಎನ್ನುವುದನ್ನು ಒಮ್ಮೆ ಆಲೋಚಿಸಿದ್ದೀರಾ? ಸರಿ, ನೀವು ದುಡ್ಡು ಮಾಡಿಲ್ವಾ ಸಾರ್? ಖಾಸಿಗಿ ಚಾನೆಲ್ ಒಂದರಲ್ಲಿ ನೀವೇ ಹೇಳಿಕೊಂಡಂತೆ 500 ಕೋಟಿ ಆಸ್ತಿಯಿದೆ. 90ರಲ್ಲಿ ಯಾರ ಬಳಿಯೋ 800 ರುಪಾಯಿ ಸಾಲ ಮಾಡಿ ಕೊಡಲೇ ಇಲ್ಲ ಎಂದು ಪುಂಗೀ ಬಿಡುತ್ತಿದ್ದ ನಿಮಗೆ ಈಗ ಎಲ್ಲಿಂದ ಬಂತು ಇಷ್ಟೊಂದು ಕಾಸು? “ಕೆಲವು ಶಿಷ್ಯರುಂಟು” ಎಂಬ ಹೆಡ್ಡಿಂಗ್ನಲ್ಲಿ ನೀವೇ ಹೇಳುತ್ತೀರಾ “ನಾನು ಒಂದು ಪತ್ರಿಕೆ ಮಾಡುವುದಕ್ಕೆ ಜೀವನ ತೇಯ್ದು ಬಿಟ್ಟೆ” ಎಂದು.. ಏನ್ ನೀಯತ್ತು ಸಾರ್ ನಿಮ್ಮದು? ನೀವ್ ದುಡ್ ಮಾಡಿದ್ರೆ ಮಾತ್ರ ಅದು ಜೀವನ ತೇಯ್ದು ಮಾಡಿದ್ದು, ಶಂಕರ ಎಂಬುವವನು ದುಡ್ಡು ಮಾಡಿದರೆ ಅದು ಬಿಟ್ಟಿ ಬಂದಿದ್ದಾ? ನೀಯತ್ತಾಗಿ ವಿಶ್ವೇಶ್ವರ ಭಟ್ಟರು ಮತ್ತು ಅವರ ಶಿಷ್ಯರು ಹೆಚ್ಚು ಸಂಭಾವನೆ ಪಡೆದರೆ, ಅವರು ಬಿಳಿ ಕುದುರೆಯಾಗಿಬಿಟ್ರಾ? ಏನ್ ಥಿಯರಿ ರವಿ ಬೆಳಗೆರೆ ನಿಮ್ಮದು? ಪತ್ರಿಕೆ ನಡೆಸುವ ದಂಧೆ ನಿಮ್ಮ ಹತ್ರ ಕಲಿಯಬೇಕು ನೋಡಿ! ಇನ್ನು ವಿಜಯ್ ಸಂಕೇಶ್ವರ್ರವರು ಯಾವುದೋ ಸೇಲ್ ಆಗದ ಪತ್ರಿಕೆಯ ಎಡಬಿಡಂಗಿ ಸಂಪಾದಕ ಬಂದು ವಿಶ್ವೇಶ್ವರ ಭಟ್ಟರ ಬಗ್ಗೆ ಚಾಡಿ ಹೇಳಿದರೆ ಕೇಳುವಷ್ಟು ಚೀಪ್ ಅಲ್ಲ.

ಮುಂದಿನ ಹೆಡ್ಡಿಂಗ್ “ನಕ ನಕ ತಿರುಗಿ” ಮತ್ತು “ಏನು ತಿದ್ದಿಕೊಂಡ”ದ ಬಗ್ಗೆ ಮಾತಾಡೋಣ. “ವಿಜಯ ಕರ್ನಾಟಕ ಬಿಟ್ಟ ಮೇಲೆ ಸ್ವಂತ ಪತ್ರಕೆ ಮಾಡ್ತೀನಿ ಎಂಬ ಭಟ್ಟ, ರಾಧಾಕೃಷ್ಣ ಭಡ್ತಿ, ವಿನಾಯಕ್ ಭಟ್ ಮತ್ತು ಪ್ರತಾಪ್ ಸಿಂಹನ ಜೊತೆಗೆ ಮಂತ್ರಾಲಯಕ್ಕೂ ಹೋಗಿ ಬಂದ” ಎಂದಿದ್ದೀರಿ.. ಅಲ್ಲ ಏನ್ ನೀವೇ ಟಿಕೆಟ್ ಬುಕ್ ಮಾಡಿಸಿಕೊಟ್ಟು ಬಸ್ಸು ಹೊರಡುವವರೆಗೂ ಇದ್ದೂ, ಆ ನಿಮ್ಮ ಕೆಂಪು ಕಣ್ಣಂಚಿನಲ್ಲಿ ನೀರು ಹಾಕುತ್ತಾ, ಟಾಟಾ ಮಾಡಿದವರ ಹಾಗೆ ಹೇಳುತ್ತೀರಲ್ಲ ರವಿ ಬೆಳಗೆರೆಯವರೇ? ಪತ್ರಿಕೆ ಮಾಡಿದ್ರೂ ಕಲ್ಲು ಹಾಕುತ್ತೀರ, ಮಾಡದಿದ್ರೂ ಕೆಣಕುತ್ತೀರ.. ಹೌದು ಪತ್ರಿಕೆ ಮಾಡುವ ಆಲೋಚನೆ ಆಗಲೂ ಇತ್ತು.. ಕಾರಣಾಂತರಗಳಿಂದ ಅದು ಸಾಕಾರಗೊಂಡಿರಲಿಲ್ಲ. ಆದರೆ ಪ್ಲಾನ್ ಡ್ರಾಪ್ ಆಗಿರಲಿಲ್ಲ. ಈಗ ಹೊಸ ಪತ್ರಿಕೆ ತರಲೇ ಬೇಕೆಂದು ಕೆಲಸ ಬಿಟ್ಟಿದ್ದಾರೆ. ಅವರೊಂದಿಗೆ ಸಹಜವಾಗಿಯೇ ಮಾನವೀಯತೆ ಮೆರೆದು ವಿನಾಯಕ್ ಭಟ್, ಪ್ರತಾಪ್ ಮತ್ತು ರಾಧಾಕೃಷ್ಣ ಭಟ್ತಿ ಬಂದಿದ್ದಾರೆ. ನೆನಪಿರಲಿ, ವಿಜಯ ಕರ್ನಾಟಕ ಬಿಡಬೇಕಿದ್ದರೆ ಪ್ರತಾಪ್ಗೆ ಆಗಷ್ಟೇ ಮದುವೆಯಾಗಿತ್ತು. ಅದನ್ನೂ ಲೆಕ್ಕಿಸದೇ ಬಂದಿದ್ದರು. ಈಗಲೂ ವಿನಾಯಕ್ ಭಟ್, ರಾಧಾಕೃಷ್ಣ ಭಡ್ತಿ ಬಂದಿದ್ದಾರೆ. ಪ್ರತಾಪ್ ಇದ್ದಿದ್ದರೆ ಅವರೂ ಹೊರಟು ಬರುತ್ತಿದ್ದರು.
ಇನ್ನು “ತಪ್ಪಾಯ್ತು ತಿದ್ಕೋತೀವಿ” ಅಂಕಣವನ್ನ ಯಾರಾದರೂ ಸಂಪಾದಕರಾದವರು ಇಡುತ್ತಾರಾ ಎಂದು ಪ್ರಶ್ನಿಸಿದ್ದೀರ. ಹಾಗಾದರೆ ನನ್ನದೊಂದು ಪ್ರಶ್ನೆಯಿದೆ, ರವಿ ಬೆಳಗೆರೆಯವರೇ ನೀವು ಉತ್ಸಾಹದಿಂದ ಬರೆಯುವಾಗ ಆಗಾಗ “ಗೋಲ್ಗಪ್ಪಾ, ಮುಕಳಿ” ಎಂದು ಬಳಸಿ ಇನ್ನೊಬ್ಬರ ಬಗ್ಗೆ ಅಸಹ್ಯವಾಗಿ ಲೇವಡಿ ಮಾಡುತ್ತೀರಲ್ಲ, ಯಾವುದೋ ಅಡ್ಡಕಸುಬಿ ಸಂಪಾದಕರು ಉಪಯೋಗಿಸುವ ಶಬ್ದಗಳನ್ನು ಗೌರವ ಸಂಪಾದಕರಾಗಿ ನೀವೇಕೆ ಉಪಯೋಗಿಸುತ್ತೀರ? ಎಂದರೆ ಹೇಗೆ ನಿಮಗೆ ಉರಿಯುತ್ತದೋ ಹಾಗೆಯೇ ಎಲ್ಲರಿಗೂ. ಬರೆಯುವಾಗ ಅವಸರದಲ್ಲಾದ ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಒಂದು ಅವಕಾಶವನ್ನು ಭಟ್ಟರೇ ಹುಟ್ಟು ಹಾಕಿಕೊಂಡರು ಅಷ್ಟೇ. ಇನ್ನು ಭಟ್ಟರು ಏಕೆ “ನಂಗೆ ಇಷ್ಟಾನೋ” ಎಂದು ಏಕೆ ಅಂಕಣಕ್ಕೆ ಹೆಸರಿಟ್ಟರು? ಜನರಿಗೆ ಏಕವಚನದಲ್ಲಿ ಸಂಬೋಧಿಸಿದ್ದೀರ ಎಂದು ಲೇವಡಿ ಮಾಡಿದ್ದೀರಿ. ಪ್ರೀತಿಯ ರವಿ, ಅವರ ಮಕ್ಕಳಿಗೆ ಅವರು ಹೆಸರಿಟ್ಕಂಡ್ರೆ ನೀವ್ಯಾಕ್ ಕೆಂಡದ್ ಮೇಲೆ ಕುಂತವರ ಥರ ಆಡ್ತೀರ್ರೀ? ಅವರ ಲೇಖನಕ್ಕೆ “ನಂಗೆ ಇಷ್ಟಾನೋ” ಎಂದು ಹೆಸರಿಟ್ಟುಕೊಳ್ಳದೇ “ರವಿಗೆ ಇಷ್ಟಾನೋ” ಎಂದು ಹೆಸರಿಟ್ಟುಕೊಳ್ಳಬೇಕಿತ್ತೇ? ನಾನು ಕೆಸರಿಬಾತ್, ಚೌಚೌಬಾತ್, ಖಾರಾಬಾತ್, ರೈಸ್ಬಾತ್, ಟೊಮೆಟೊ ಬಾತ್ ಕೇಳಿದ್ದೇನೆ. ಇದ್ಯಾವುದು ಸರ್ ಖಾಸ್ಬಾತ್ ಎಂದರೆ ಕೆಂಪಗಿರುವ ನಿಮ್ಮ ಕಣ್ಣು ಮತ್ತಷ್ಟು ಕೆಂಪಾಗುವುದಿಲ್ಲವೇ? ಅವರು ಬರಿತಾರೆ ಅದು ಅವರಿಷ್ಟ.. ನೀವು “ನಿಂಗೆ ಇಷ್ಟಾನೋ” ಎಂದು ಅಂಕಣಕ್ಕೆ ಹೆಸರಿಟ್ಟುಕೊಳ್ಳಿ.. ಯಾರ್ ಬೇಡ ಅಂತಾರೆ? “ಹತ್ಯಾಚಾರ, ಅತ್ಯಾಚಾರ” ಅಂತ ಬಳಸುತ್ತಾರೆ ಎಂದಿದ್ದೀರ. ನಿಮ್ಮ ಪತ್ರಿಕೆಗೆ ಹೇಗೆ ಒಂದು ಶೈಲಿ ಇರುತ್ತದೋ, ಕನ್ನಡಪ್ರಭಕ್ಕೂ ಅದರದ್ದೇ ಆದ ಒಂದು ಶೈಲಿಯಿದೆ. ಏಕೆ ಹಾಗೆ ಬಳುತ್ತೇವೆ ಎಂದು ಕನ್ನಡಪ್ರಭ ಹೇಳಿಕೊಂಡಿದೆ. ಪೇಪರ್ ತೆಗೆದು ಓದಿ.

ಇನ್ನೊಂದು ಹೆಡ್ಡಿಂಗ್ “ವಾಟರ್ ಜರ್ನಲಿಸ್ಟ್”! ವಿಶ್ವೇಶ್ವರ ಭಟ್ಟರ ಯಾಕೆ ಕನ್ನಡಪ್ರಭ ಬಿಟ್ಟರು ಎಂದು ಹೇಳಿಕ್ಕಾಗದೇ ರಾಧಾಕೃಷ್ಣ ಭಡ್ತಿಯವರನ್ನು ಏಕೆ ಹಿಡಿದು ಎಳೆದಾಡಿದ್ದೀರ ಎಂದೂ ದೇವ್ರಾಣೆ ಅರ್ಥವಾಗುತ್ತಿಲ್ಲ. ನೀರಿನ ಬಗ್ಗೆ ಒಂದೋ ಎರಡೋ ಲೇಖನ ಬರೆಯಬಹುದು ಅಥವಾ ಆಯಾ ಪ್ರಸಂಗಕ್ಕೆ ತಕ್ಕಂತೆ ಲೇಖನ ಬರೆಯಬಹುದು ಆದರೆ ಅಂಕಣದಲ್ಲಿ ಸದಾ ನೀರಿನ ಬಗ್ಗೆ ಲೇಖನ ಬರೆಯಕ್ಕೆ ಸಾಧ್ಯವಾ? ಎಂದಿದ್ದೀರ. ಅದೇ ನಿಮಗೂ ಮತ್ತು ಭಡ್ತಿಯವರಿಗೂ ಇರುವ ವ್ಯತ್ಯಾಸ. ಒಂದು ವಿಷಯದ ಬಗ್ಗೆ ಪುಸ್ತಕ ಬರೆದುಬಿಡಬಹುದು.. ಆದರೆ ವರ್ಷಗಟ್ಟಲೇ ಸುದೀರ್ಘವಾಗಿ ಲೇಖನ ಬರೆಯುವುದಕ್ಕೆ ತಪಸ್ಸು ಬೇಕು. ಹಾಗೆ ಬರೆಯಲು ನೀವು ಬಹುಶಃ ಮತ್ತೊಮ್ಮೆ ಹುಟ್ಟಿ ಬರಬೇಕೇನೋ..! ಏಕೆ ಎನ್ನುವುದನ್ನೂ ಸಾಬೀತು ಮಾಡುತ್ತೇನೆ ಕೇಳಿ.. ಕೆಲವು ವರ್ಷಗಳ ಹಿಂದೆ ಅಗ್ನಿ ಶ್ರೀಧರ್ ಕೃಪೆಯಿಂದ ರೌಡಿಗಳನ್ನು ಸಂದರ್ಶಿಸಿ ಬರೆಯುವ ಒಂದು ಲೇಖನ ಸರಣಿ ಶುರು ಮಾಡಿದ್ರಿ.. ಈಗ ಎಲ್ಲಿ ಹೋಯ್ತು ಅದು? ಈಗೇನು ರೌಡಿಗಳಿಗೆ ಬರವೇ? ಏಕೆ ಬರೆಯುತ್ತಿಲ್ಲ? ಏಕೆಂದರೆ, ನಿಮಗೂ ಬರೆದೂ ಬರೆದೂ ಸಾಕಾಗಿತ್ತು. ನಿಲ್ಲಿಸಿಬಿಟ್ರಿ. “ಓ ಮನಸೇ” ನಿಮ್ಮ ಮೇಲೆ ಏಕೆ ಮುನಿಸಿಕೊಂಡು ಓಡಿ ಹೋಯ್ತೋ ನೀವೇ ಉತ್ತರಿಸಬೇಕು. ಭಡ್ತಿಗೂ ಬೆಳಗೆರೆಗೂ ಇರುವ ವ್ಯತ್ಯಾಸವಿದು. ಇನ್ನೂ ಉದಾಹರಣೆಗಳ ಅವಶ್ಯಕತೆಯಿಲ್ಲ ಎಂದುಕೊಳ್ಳುತ್ತೇನೆ ಬೆಳಗೆರೆಯವರೇ..
ಇನ್ನು ವಿನಾಯಕ್ ಭಟ್ ಮೂರೂರು, ಪ್ರೇಮಲತಾ ದಿವಾಕರ್ ಬಗ್ಗೆ ಏನೇನೋ ಬರೆದರು ಎಂದೆಲ್ಲ ಹೇಳಿದ್ದೀರ.. ವಿನಾಯಕ್ ಭಟ್ಟರು ಪೊಲೀಸರ ಮತ್ತು ವೈದ್ಯಕೀಯ ವರದಿಯನ್ನ ಕೈಯಲ್ಲಿಟ್ಟುಕೊಂಡೇ ವರದಿ ಮಾಡಿದ್ದಾರೆ. ಆದರೆ ನಿಮ್ಮ ಹಾಗೆ ಅಥವಾ “ಘೋರಿ”ಯ ಹಾಗೆ ಸಗಣಿ ಸ್ವಾಮಿ ಬಳಿ ಎಷ್ಟು ಹುಡುಗಿಯರು ಎಂದೆಲ್ಲ ಒಬ್ಬ ಸಾಧುವಿನ ಬಗ್ಗೆ ಬಾಯಿಗೆ ಬಂದ ಹಾಗೆ ಬರೆದಿಲ್ಲವಲ್ಲ… ಅದೇ ನಿಮಗೂ ಮತ್ತು ವಿನಾಯಕ್ ಭಟ್ಟರಿಗೂ ಇರುವ ವ್ಯತ್ಯಾಸ. ಕನ್ನಡಪ್ರಭ ಬಿಟ್ಟಾಗ ಭಟ್ಟರಿಗೆ ಸಾತ್ ಕೊಟ್ಟಿದ್ದು ಇದೇ ವಿನಾಯಕ್ ಭಟ್ ಮತ್ತು ಭಡ್ತಿ. ಭಟ್ಟರೊಂದಿಗೆ ಯಾವ ಚೈತನ್ಯನಿಗೂ ಹೊರ ಬರುವ ಚೈತನ್ಯವಿರಲಿಲ್ಲ. ಕೆಲವರು ಭಟ್ಟರು ಖುಷಿಯಾಗಿದ್ದಾಗ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹಲ್ಲು ಕಿರಿದರೇ ಹೊರತು, ಕಷ್ಟ ಬಂದಾಗ ಭಟ್ಟ ಭಡ್ತಿ ಬಿಟ್ಟು ಯಾರೂ ಬಂದಿಲ್ಲ. ಇನ್ನು ಕೆಲವರು ಭಟ್ಟರ ಮಾತಿಗೆ ಬೆಲೆ ಕೊಟ್ಟು ಅಲ್ಲೇ ಕೆಲಸ ಮಾಡುತ್ತಿದ್ದಾರೆ.
ನಾನು ರವಿ ಬೆಳಗೆರೆಯವರನ್ನು ಸುಮಾರು ವರ್ಷಗಳ ಹಿಂದೆ ಜನಶ್ರಿಗೆ ಬಂದಾಗ ನೋಡಿದ್ದೆ. ಅವರಿಗೆ ಕುರ್ಚಿಯ ಮೇಲೆ ಕುಳಿತುಕೊಳ್ಳುವುದಕ್ಕೂ ಇನ್ನೊಬ್ಬರ ಸಹಾಯ ಬೇಕಿತ್ತು. ಕುಳಿತುಕೊಂಡಾಗ ತೊಡೆಯ ಮೇಲೆ ಇಟ್ಟಿದ್ದ ಕೈಯನ್ನು ಟೇಬಲ್ ಮೇಲೆ ಎತ್ತಿ ಇರಿಸಿದ್ದೂ ಸಹಾಯಕನೇ.. ಇಂಥ ರವಿ ಬೆಳಗೆರೆಯವರು ಭಟ್ಟರ ಬಗ್ಗೆ ಮೂರು ಪೇಜು ಪೆನ್ನು ಹಿಡಿದು ಅಲ್ಪಾವಧಿಯಲ್ಲಿ ಲೇಖನ ಬರೆದಿದ್ದಾರೆಂದರೆ ನಿಜಕ್ಕೂ ಬೆಳಗೆರೆಯವರ ಬತ್ತದ ಉತ್ಸಾಹವನ್ನು ಮೆಚ್ಚಬೇಕಾದ್ದೇ. ಇನ್ನು ಭಟ್ಟರು ವಿಜಯ ಕರ್ನಾಟಕ ಬಿಟ್ಟ ಮೇಲೆ ಇದುವರೆಗೆ ಮೂರು ಸಂಪಾದಕರು ಬಂದಿದ್ದಾರೆ. ಆದರೆ, ಯಾರ ಬಗ್ಗೆಯೂ ಒಂದಕ್ಷರ ಬರೆದಿಲ್ಲ.. ಭಟ್ಟರ ಬಗ್ಗೆ ಮಾತ್ರ ಬರೆಯುತ್ತಲೇ ಇದ್ದೀರ. ಇದೂ ಸಾಲದೇ ಒಂದು ಮುಖಪುಟದಲ್ಲೇ ಭಟ್ಟರ ಫೋಟೊ ಹಾಕಿ, ಮೂರು ಪುಟಗಳ ಲೇಖನ ಬರೆದಿದ್ದೀರ ಎಂದರೆ ಭಟ್ಟರನ್ನು ಕಂಡರೆ ಇನ್ನೂ ನಡುಕ ಇದೆ ಎಂದಾಯಿತಲ್ಲ. ಏಕೆಂದರೆ ಒಬ್ಬ ವ್ಯಕ್ತಿ ಸುಮ್ಮನಿದ್ದರೆ, ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಅವರು ಬೆಳೆಯುತ್ತಿರುವುದನ್ನು ನೋಡಿದರೆ ತೊಡೆ ನಡುಗುತ್ತದೆ. ಇದುವರೆಗೂ ನಾನು ರವಿ ಬೆಳಗೆರೆಯವರಿಗಾಗಲೀ, ಇತರರಿಗಾಗಲೀ ಅವಾಚ್ಯ ಶಬ್ದಗಳಿಂದಲೋ ಅಥವಾ ಏಕ ವಚನದ ಮಾತುಗಳನ್ನೋ ಪ್ರಯೋಗಿಸಿಲ್ಲ. ಇದು ನನಗೆ ವಿಶ್ವೀಶ್ವರ ಭಟ್ಟರು ಹೇಳಿಕೊಟ್ಟ ಪಾಠ. ಒಟ್ಟಾರೆಯಾಗಿ ನೀವು ವಿಶ್ವೇಶ್ವರ ಭಟ್ಟರು ಏಕೆ ಕನ್ನಡಪ್ರಭ ಬಿಟ್ಟರು ಎನ್ನುವ ಒಂದು ವಿಷಯ ಬಿಟ್ಟು ಭಯದಲ್ಲಿ ಮಿಕ್ಕ ಎಲ್ಲ ವಿಷಯಗಳನ್ನು ಬರೆದಿದ್ದೀರ. ಅಂದಹಾಗೆ ನಾವು ಹೊಸ ಪತ್ರಿಕೆ ತೆರೆಯುತ್ತಿದ್ದೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ನೀವೇ ನೋಡಿ ಮತ್ತೊಮ್ಮೆ ಆರು ಪುಟಗಳು ಬರೆಯುವಷ್ಟು ಶಕ್ತಿಯನ್ನು ದೇವರು ನಿಮಗೆ ಕೊಡಲಿ ಬೆಳಗೆರೆಯವರೇ.. ಧನ್ಯವಾದ. Meet you soon!

9,752 thoughts on “ಭಟ್ಟರನ್ನು ಕಂಡರೆ ಬೆಳಗೆರೆಗೆ ಗಡ ಗಡ!

 1. Pingback: Peter Griffin
 2. Pingback: Peter Falk
 3. Pingback: try this website
 4. Pingback: costco travel
 5. Pingback: business calendar
 6. Pingback: Soccer Drills
 7. Pingback: labor law attorney
 8. Pingback: cat kennels
 9. Can I simply say what a relief to seek out someone who truly is aware of what theyre speaking about on the internet. You definitely know how you can bring a problem to gentle and make it important. Extra people must read this and understand this aspect of the story. I cant consider youre not more in style because you positively have the gift.

 10. Pingback: tablet fujitsu
 11. Pingback: informatica modena
 12. Pingback: notebook fujitsu
 13. Pingback: best weight loss
 14. Pingback: fashion days
 15. Pingback: silk robe
 16. Pingback: kids video
 17. Pingback: dui attorney
 18. Pingback: security
 19. Pingback: ecograf pret
 20. Pingback: Lake fork lodging
 21. Pingback: Lodging lake fork
 22. Pingback: hpi text check
 23. Pingback: email validation
 24. Pingback: email validation
 25. Pingback: email verification
 26. Pingback: curso de detetive
 27. Pingback: stained concrete
 28. Pingback: webseite erstellen
 29. Pingback: website erstellen
 30. Pingback: homepage erstellen
 31. Pingback: plumber
 32. An interesting dialogue is price comment. I believe that it’s best to write more on this topic, it might not be a taboo topic but usually people are not sufficient to speak on such topics. To the next. Cheers

 33. Pingback: stained concrete
 34. Pingback: stained concrete
 35. Pingback: plumber
 36. Pingback: womens swimwear
 37. Pingback: movie2k
 38. Pingback: stained concrete
 39. Pingback: dr medora clinic
 40. Pingback: buy ranking
 41. Pingback: pittsburgh seo
 42. Pingback: roofing
 43. Pingback: playpen for dogs
 44. Pingback: plumbing
 45. Pingback: carpet cleaners
 46. Wonderful story, reckoned we could combine some unrelated information, nonetheless really really worth taking a appear, whoa did one particular master about Mid East has got extra problerms as well

 47. Pingback: sexy celebrities
 48. Pingback: Wiki links
 49. Pingback: Brand Bangla Eshop
 50. Pingback: casino games
 51. Pingback: Bad Credit
 52. Pingback: Elissa
 53. Pingback: Steve Corona
 54. Pingback: medical shuttle
 55. Pingback: Escort
 56. Pingback: Web Site
 57. Wonderful story, reckoned we could combine a couple of unrelated data, nevertheless seriously really worth taking a search, whoa did a single learn about Mid East has got extra problerms at the same time

 58. Pingback: cost of anal
 59. Pingback: th9 war bases
 60. Pingback: sissy joi

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya