ಮತಾಂತರ ವಿರೋಧಿಸುವವರ ವಿರೋಧಿಗಳಿಗೆ ಕೆಲವು ಪ್ರಶ್ನೆಗಳು!

23/12/2014ರ ಕನ್ನಡ ಪ್ರಭ ಪತ್ರಿಕೆಯಲ್ಲಿ ಡಾ. ಬಿ.ಎಲ್.ವೇಣುರವರು ಬರೆದಿರುವ “ಮತಾಂತರ ವಿರೋಧಿಸುವವರಿಗೆ ಕೆಲವು ಪ್ರಶ್ನೆಗಳು” ಎಂಬ ಲೇಖನಕ್ಕೆ ನನ್ನ ಅಭಿಪ್ರಾಯ.

ಡಾ. ವೇಣುರವರು ಪೆಟ್ಟು ತಿಂದವನ ಅರ್ತನಾದದ ಮೇಲೆ ಲೇಖನವನ್ನು ಬರೆದರೇ ಹೊರತು ಸತ್ಯಾಂಶಗಳನ್ನಿಟ್ಟೂಕೊಂಡಲ್ಲ ಎಂಬುದು ಅವರ ಲೇಖನದಲ್ಲೇ ಸ್ಪಷ್ಟವಾಗಿ ಗೋಚರಿಸುತ್ತದೆ. ಅರ್ತನಾದಕ್ಕೆ ಮರುಗುವುದು ಮಾನವನ ಸಹಜ ಧರ್ಮ ಆದರೆ ಒಮ್ಮೆ ಆ ಪೆಟ್ಟು ತಿಂದ ಲಕ್ಷಾಂತರ ಅರ್ತನಾದದ ಕೋಣೆಯಿಂದ ಹೊರ ಬಂದು ಸತ್ಯಾಸತ್ಯತೆಗಳ/ವಾಸ್ತವವನ್ನಿಟ್ಟುಕೊಂಡು ಆಲೋಚಿಸಬೇಕಿದೆ.
ಆಗಷ್ಟೇ ಕ್ರೈಸ್ತ ಧರ್ಮ ಕಣ್ದೆರೆದು ನೋಡುತ್ತಿರುವ ಕಾಲವದು, ಹಾಗಾಗಿ ಧರ್ಮ ಪ್ರಚಾರಕ್ಕೆ ಕೆಲ ಮಿಷನರಿಗಳನ್ನು ದೇಶ ವಿದೇಶಗಳಿಗೆ ಕಳುಹಿಸಲಾಗಿತ್ತು. ಆಗ ಅವರೆಲ್ಲರೂ ಮತಾಂತರ/ಧರ್ಮ ಪ್ರಚಾರ ಮಾಡುತ್ತಿದ್ದಾಗ ಉಪಯೋಗಿಸುತ್ತಿದ್ದದ್ದು ಒಂದೇ ವಾಕ್ಯ “You are a Sinner.. Believe Jesus, and he will get you out of all sins” ಎಂದು. ಇದೇ ರೀತಿ ಮೊದಲು ಮುಸಲ್ಮಾನ ರಾಷ್ಟ್ರಕ್ಕೆ ಹೋದಾಗ ಮೊದಲಿಗೇ “ನೀನು ಪಾಪಿಷ್ಟ” ಎಂದಿದ್ದರ ಪರಿಣಾಮ ಅಲ್ಲಿ ಇಂದಿಗೂ ಕ್ರೈಸ್ತ ಧರ್ಮ ನೆಲೆಯೂರಲಿಲ್ಲ. ಇನ್ನು ಧರ್ಮ ಪ್ರಚಾರ ಮಾಡಲು ಆ ರಾಷ್ಟ್ರಗಳಿಗೆ ಹೋದ ಪ್ರಚಾರಕರೂ ವಾಪಾಸ್ ಬಂದಿದ್ದಾರೋ ಗೊತ್ತಿಲ್ಲ ಆದರೆ ಭಾರತಕ್ಕೆ ಬಂದ ಮಿಷನರಿಗಳು ಮತ್ತು ಇನ್ನಿತರ ಧರ್ಮ ಪ್ರಚಾರಕರು ಮಾತ್ರ ಹಿಂದೂಗಳನ್ನು ಮೂರ್ಖರನ್ನಾಗಿಸಿದ ಗೆಲುವಿನ ನಗೆಯಲ್ಲಿ ವಾಪಾಸ್ ಆಗಿದ್ದಂತೂ ಸತ್ಯ. ಸಾವಿರಾರು ವರ್ಷಗಳ ಇತಿಹಾಸವಿರುವ ಧರ್ಮ ಸನಾತನ ಧರ್ಮ. ಇಲ್ಲಿ ಸನಾತನ ಧರ್ಮವನ್ನು ನಂಬಿ ಅವರವರ ಕೆಲಸ ಮಾಡಿಕೊಂಡು ಆರಾಮಾಗಿದ್ದಾಗ ಥರಾವರಿ ಬಟ್ಟೆ ಧರಿಸಿ ಬಂದ ಮತಾಂತರಿಗಳು ಭಾರತದಲ್ಲಿನ ಬಡವರಿಗೆ/ಅವಿದ್ಯಾವಂತರಿಗೆ “ನೀನು ಪಾಪಿಷ್ಟ, ಏಸುವನ್ನು ನಂಬು.. ನಿನ್ನನ್ನು ಪಾಪಗಳಿಂದ ಮುಕ್ತಗೊಳಿಸುತ್ತಾನೆ” ಎಂದಾಗ ಸ್ವಾಭಾವಿಕವಾಗಿಯೇ “ಇದ್ರೂ ಇರಬಹುದು!!” ಎಂಬ ಅನುಮಾನ ಹುಟ್ಟುತ್ತದೆ. ಬಡವನೊಬ್ಬನೇ ಅಲ್ಲ, ಕಷ್ಟದಲ್ಲಿರುವವನಿಗೆ “ನಿನ್ನ ಪಾಪಗಳು ನಿನ್ನನ್ನು ಕಾಡುತ್ತಿದೆ” ಎಂದಾಗ ಒಮ್ಮೆ ಅದರ ಬಗ್ಗೆ ಒಂದು ಬಾರಿಯಾದರೂ ಆಲೋಚಿಸುತ್ತಾನೆ. ಹಾಗೆ ಮತಾಂತರಿಗಳ ಕಣ್ಣಿಗೆ ಬಿದ್ದದ್ದು ದಲಿತರು. ಮತಾಂತರದ ಬಗ್ಗೆ ಅನೇಕ ಪ್ರಸಿದ್ದ ಲೇಖಕರು ಬರೆದಿರುವ ಪುಸ್ತಕಗಳಲ್ಲಿ ಇದೆಲ್ಲಾ ಲಭ್ಯವಿದೆ.

ಇನ್ನು ಈ ಕೆಲ ಪ್ರೀಪೇಯ್ಡ್ ಮತಾಂತರಿಗಳು/ಮಿಷನರಿಗಳು ದಲಿತರಿಗೆ ಮೊದಲು ಹುಳ ಬಿಟ್ಟಿದ್ದೇ “ನೀನೊಬ್ಬ ಪಾಪಿ” ಎಂದು. ಕೆಲ ಸೆಕ್ಯುಲರ್‌ಗಳಿಗೆ ಇಲ್ಲಿ ಮತ್ತೊಂದು ಸಂಶಯ ಹುಟ್ಟುತ್ತದೆ. ಏಕೆ ಮತಾಂತರಿಗಳು ದಲಿತರನ್ನೇ ಆಯ್ಕೆ ಮಾಡಿಕೊಳ್ಳಬೇಕಿತ್ತು ಎಂದು. ಅಸಲಿಗೆ ದಲಿತರಿಗೆ ಅವರಿಗೆ ವಿದ್ಯೆ ಹತ್ತಲಿಲ್ಲವೆಂದೋ ಅಥವಾ ಮನೆಯಲ್ಲಿ ಬಡತನವಿದ್ದೋ ಶ್ರೀಮಂತರ ಮನೆಯಲ್ಲಿ ಜೀತದಾಳಾಗಿದ್ದರು, ಇನ್ನು ಕೆಲ ಬ್ರಾಹ್ಮಣರಿಗೆ ಓದಿದ್ದು ಹೆಚ್ಚಾಗಿ ಮತಾಂತರವಾಗಿದ್ದೂ ಇದೆ. ಹೀಗೆ ಶಾಂತಿಯುತ ಭಾರತದಲ್ಲಿ ಮೊದಲು ಮಂತಾಂತರ ಮಾಡಿದ್ದು ಹೊರಗಿನಿಂದಲೇ ಹೊರತು ಒಳಗಿನಿಂದಲ್ಲ. ಎಲ್ಲಾ ಮನೆಯಲ್ಲಿಯೂ ಹೇಗೆ ಒಂದಲ್ಲಾ ಒಂದು ಮನಸ್ತಾಪಗಳಿರ್ತ್ತವೆಯೋ ಹಾಗೆ ಎಲ್ಲಾ ಧರ್ಮಗಳಲ್ಲಿಯೂ ಒಂದಲ್ಲಾ ಒಂದು ಮನಸ್ತಾಪಗಳಿರುತ್ತವೆ. ಆದರೆ ಕೇವಲ ಹಿಂದೂ ಧರ್ಮಗಳಲ್ಲಿ ಮಾತ್ರ ಇಂತಹ ಸಮಸ್ಯೆಗಳಿತ್ತು ಹಾಗಾಗಿ ಜನರು ಮತಾಂತರಗೊಳ್ಳುತ್ತಿದ್ದರು ಎನ್ನುವುದು ಶುದ್ಧ ಅಧಿಕ ಪ್ರಸಂಗತನವೇ ಸರಿ. ಏಕೆಂದರೆ ಕ್ರೈಸ್ತ ಧರ್ಮದಲ್ಲಿ ಕ್ಯಾತೋಲಿಕ್ ಮತ್ತು ರೋಮನ್ಸ್ ಎಂಬ ಎರಡು ಪಂಥದ ಜನ ಎಣ್ಣೆ ಸೀಗೇಕಾಯಿಯ ರೀತಿ ವರ್ತಿಸುತ್ತಿದ್ದಾರೆ. ಮುಸ್ಲಾನರಲ್ಲಿ ಶಿಯಾ V/s ಸುನ್ನಿ ಜಗಳದಿಂದ ಲಕ್ಷಾಂತರ ಜನರು ಪ್ರಾಣತ್ಯಾಗ ಮಾಡಿದ್ದು ಇಡೀ ಜಗತ್ತಿಗೇ ಗೊತ್ತಿದೆ.

ಮತ ಪ್ರಚಾರವಾಗಲಿ, ಸ್ವ ಇಚ್ಛೆಯ ಮತಾಂತರವಾಗಲಿ, ಸಂಧಾನದ 25ನೇ ವಿಧಿ ಅಡಿಯಲ್ಲಿ ಅಪರಾಧವಲ್ಲವೆಂಬ ಉಲ್ಲೇಕವಿರುವಾಗ ಮತಾಂತರದ ಬಗ್ಗೆ ವಿರೋಧವೇಕೆ? ಎಂದು ಪ್ರಶ್ನಿಸುವ ಡಾ. ವೇಣುರವರೇ ನಿಮ್ಮನ್ನೇ ಒಮ್ಮೆ ಈ ಪ್ರಶ್ನೆ ಕೇಳಿಕೊಳ್ಳಿ. ಅಥವಾ ಈಗ ಘರ್ ಪಾಪಸಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ ಈ ಪ್ರಶ್ನೆಗಳನ್ನೊಮ್ಮೆ ಕೇಳಿ ನೋಡಿ. ಏಕೆಂದರೆ ಇಷ್ಟು ಸಾವಿರ ವರ್ಷಗಳ ಕಾಲ ಹಿಂದೂಗಳನ್ನು ಮುಸಲ್ಮಾನ ರಾಜರುಗಳು ಹೊಡೆದು ಬಡಿದು ಮತಾಂತರ ಮಾಡಿದರು. ಕ್ರಿಶ್ಚಿಯನ್ನರು ಬಂದು ಅವರ ಧರ್ಮಕ್ಕೆ ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದರು. ಆಗ ಯಾವ 25ನೇ ವಿಧಿಯೋ ಅಥವಾ 26ನೇ ವಿಧಿಯೋ ಇರಲಿಲ್ಲ. ಆಗಲೇ ಹಿಂದೂಗಳು ಬೊಬ್ಬೆ ಹೊಡೆಯಲಿಲ್ಲ ಆದರೆ ಇಂದು ಏಕಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ನಿಮಗೆ ತಿಳಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದ್ದರು “Every man going out of the Hindu pale is not only a man less, but an enemy the more.” ! ಹೌದು, ಹಿಂದೂಗಳಿಗೆ ಅಸಲಿಗೆ ಸಮಸ್ಯೆ ಇರುವುದು ಇಲ್ಲೇ. ಹಿಂದೂ ಧರ್ಮವೇನು ಯಾವನೋ ಒಬ್ಬ ಧರ್ಮ ಬಿಟ್ಟು ಹೋದನಲ್ಲ ಎಂದು ಕೊರಗುತ್ತಾ ಕೂರುವುದಿಲ್ಲ. ಏಕೆಂದರೆ ಸನಾತನ ಧರ್ಮಕ್ಕೆ ಇಡೀ ಜಗತ್ತೇ ಒಂದು ಕುಟುಂಬವಿದ್ದಂತೆ. ಅದಕ್ಕಾಗಿಯೇ ವೇದಗಳಲ್ಲಿ ವಸುದೈವ ಕುಟುಂಬಕಮ್ ಎಂದಿದ್ದು. ಆದರೆ ನಮಗಿರುವ ಈ ಸಂಸ್ಕಾರ ಇನ್ನಿತರ ಧರ್ಮದಲ್ಲಿಲ್ಲವಲ್ಲ ಎಂಬುದೇ ಸಮಸ್ಯೆ. ಒಬ್ಬ ಹಿಂದೂ ಧರ್ಮದಿಂದ ಹೊರ ಹೋದರೆ ಆತ ನೀಯತ್ತಾಗಿ ತನ್ನ ಹೊಸ ಧರ್ಮವನ್ನು ಪಾಲಿಸುವುದನ್ನು ಬಿಟ್ಟು ಹಿಂದೂ ಧರ್ಮದ ವಿರುದ್ಧ ಇಲ್ಲಸಲ್ಲದ್ದನ್ನು ಪ್ರಚಾರ ಮಾಡುತ್ತಾನೆ. ಇಲ್ಲಿ ಹಿಂದೂ ಧರ್ಮಕ್ಕೆ ಒಬ್ಬ ಶತ್ರುವೊಬ್ಬ ಸೃಷ್ಟಿಯಾದ. ಮೊದಲು ಹಿಂದೂ ಧರ್ಮದಲ್ಲಿದ್ದವನೇ ಹಿಂದೂ ಧರ್ಮದ ಬಗ್ಗೆ ಕೆಟ್ಟ ಮಾತುಗಳನ್ನಾಡುವಾಗ ಇನ್ನುಳಿದ ಹಿಂದೂಗಳಿಗೆ ಬಿಡಿಏ ಸೈಟ್ ಸಿಕ್ಕಷ್ಟೇ ಖುಷಿಯಾಗುತ್ತದೆ. ಹಿಂದೆ ಮುಂದೆ ನೋಡದೇ ಸೈಟ್ ಖರೀದಿಸಿಬಿಡುತ್ತಾರೆ, ಅಂದರೆ ಇನ್ನಿತರ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಆಗಲೇ ಶುರುವಾಗುವುದು ಸಮಸ್ಯೆ. ಕ್ರಿಶ್ಚಿಯನ್ ಧರ್ಮಕ್ಕೋ ಅಥವಾ ಮುಸಲ್ಮಾನ್ ಧರ್ಮಕ್ಕೋ ಬಂದ ಹಿಂದೂಗಳನ್ನು ಕೀಳಾಗಿ ಕಾಣುತ್ತಾರೆ. ಮೊದಲು ಹಣದಾಸೆಗೆ ಮತಾಂತರಗೊಂಡಿರುತ್ತಾರೆ ಆದರೆ ಮತಾಂತರದ ನಂತರದ ಒಂದು ವರ್ಷಗಳ ಮೇಲೆ ಮತಾಂತರಗೊಂಡಿರುವವರೇ ಚರ್ಚಿಗೆ/ಮಸೀದಿಗೆ ತಿಂಗಳಿಗೆ ಇಂತಿಷ್ಟು ಹಣ ಎಂದು ಡೊನೇಷನ್ ಕೊಡಬೇಕು. ಅಂತಹ ಮತಾಂತರಗೊಂಡಿರುವ ಜನರನ್ನು ಯಾವ ಕ್ರಿಶ್ಚಿಯನ್ನರೂ/ಮುಸಲ್ಮಾನರೂ ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಆಗ ಹೊರಗಡೆ ಹೇಳಿಕೊಳ್ಳಲೂ ಸಾಧ್ಯವಿಲ್ಲ ಮತ್ತು ಹಿಂದೂ ಧರ್ಮಕ್ಕೆ ಮರಳಿ ಬರಲೂ ಸಾಧ್ಯವಿಲ್ಲವೆನ್ನುವ ಪರಿಸ್ಥಿತಿ. ಆ ಕೊರಗಿನಲ್ಲೇ ಕೊನೆಯುಸಿರೆಳೆದಾಗಲೂ ಮತಾಂತರಗೊಂಡಿರುವ ವ್ಯಕ್ತಿ ಸತ್ತಾಗ ಅವನ ಹೆಣವನ್ನು ಇನ್ನಿತರ ಮೂಲ ಕ್ರಿಶ್ಚಿಯನ್ನರ ಹೆಣವನ್ನು ಹೂಳಲಾಗಿರುವ ಜಾಗದಲ್ಲಿ ಹೂಳಲು ಬಿಡುವುದಿಲ್ಲ. ಇಂತಹ ಸಂಸ್ಕೃತಿ ನಮ್ಮ ಹಿಂದೂ ಧರ್ಮದಲ್ಲಿ ಇದ್ದದ್ದು ನನಗೆ ನೆನಪಿಲ್ಲ. ಇಂತಹ ಮತಾಂತರಗೊಂಡ ಜನರ ನೋವನ್ನ ತಿಳಿದು ಕೆಲ ಹಿಂದೂ ಸಂಘಟನೆಗಳು ಅಂತಹ ನೊಂದ ಜನರನ್ನು ವಾಪಾಸ್ ಕರೆಸಿಕೊಳ್ಳುವಾಗ “ಯಾವ ಜಾತಿಗೆ ಸೇರಿಸುತ್ತೀರ?”ಎಂದು ಬೊಬ್ಬೆ ಹೊಡೆದಿದ್ದು ಹಿಂದೂಗಳಲ್ಲ ಬದಲಿಗೆ ಪ್ರೀಪೇಯ್ಡ್ ಬರಹಗಾರರು, ಪ್ರೀಪೇಯ್ಡ್ ರಾಜಕಾರಣಿಗಳು ಮತ್ತದೇ ಪ್ರೀಪೇಯ್ಡ್ ಜಾತ್ಯಾತೀತವಾದಿಗಳು.

ಇನ್ನು ವೇಣುರವರು “ಸರ್ಕಾರವೇನಾದರೂ ಸಂವಿಧಾನ ರೀತ್ಯಾ ಮೀಸಲಾತಿ ಸೌಲಭ್ಯಗಳನ್ನು ಕಲ್ಪಿಸದಿದ್ದರೆ ಇಂದಿಗೂ ದೊಡ್ಡ ಪದವಿ ಪಟ್ಟಗಳಲ್ಲಿ ದಲಿತರನ್ನು, ಶೂದ್ರರನ್ನು ಕಲ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲ” ಎಂದಿದ್ದಾರೆ. ಅಲ್ಲ ಸ್ವಾಮಿ ಯಾಕೆ ಅಂತ ಈ ಮಾತಾಡ್ತಿರ್ರೀ?? ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಗೆ ಯಾವನು ಮೀಸಲಾತಿ ಕೊಟ್ಟಿದ್ದ ಸ್ವಾಮಿ?? ಅಂಬೇಡ್ಕರ್ ಅವರ ಸ್ವಂತ ಬುದ್ಧಿಯನ್ನೇ ಖರ್ಚು ಮಾಡಿ ಅಷ್ಟು ಎತ್ತರಕ್ಕೆ ಬೆಳೆಯಲಿಲ್ಲವೇ?? ಸರಿ, ಮಾತೆತ್ತಿದರೆ ಅಂಬೇಡ್ಕರ್ ಹಂಗೆ ಹೇಳಿದ್ರು, ಹಿಂಗೆ ಹೇಳಿದ್ರು ಎಂದು ಬೊಬ್ಬೆ ಹೊಡೆಯುತ್ತೀರಲ್ಲ, ಅಂಬೇಡ್ಕರ್ ಈ ಮೀಸಲಾತಿ ಕಾಯ್ದೆ ಕೇವಲ ಹತ್ತು ವರ್ಷಗಳು ಮಾತ್ರ ಇರಬೇಕೆಂದು ಬರೆದಿಟ್ಟಿದ್ದರು. ಆದರೆ ಅದನ್ನು ಯಾರಾದರೂ ಪಾಲಿಸಿದ್ದೀರಾ?? ಸಂವಿಧಾನದ ರಚನೆಯ ನಂತರ ಬಂದ ಸರ್ಕಾರ ಮತ್ತೆ ಐದು ವರ್ಷ ಇದೇ ಮೀಸಲಾತಿಯನ್ನು ಮುಂದುವರೆಸಿದರು. ಆಗ ಸ್ವತಃ ಸಂವಿಧಾನ ಶಿಲ್ಪಿಯ ಮಾತನ್ನೇ ಯಾರೂ ಕೇಳಲಿಲ್ಲ. ಮಹಾತ್ಮ ಅಂಬೇಡ್ಕರ್ ಗೆ ಮೀಸಲಾತಿ ಕಾಯ್ದೆಯ ಇನ್ನೊಂದು ಕ್ರೂರ ಮುಖವೀಊ ಗೊತ್ತಿತ್ತು ಹಾಗಾಗಿ ಮೀಸಲಾತಿಯನ್ನು ತೆಗೆಯಬೇಕೆಂದು ಬರೆದಿಟ್ಟಿದ್ದರು. ಮೀಸಲಾತಿಯ ದುಷ್ಪರಿಣಾಮದಿಂದಾಗಿ ಇಂದು 35% ತೆಗೆದು ಪಾಸಾಗುವವನೂ ವೈದ್ಯನಾಗುತ್ತಾನೆ. ಇದರನ್ ಪರಿಣಾಮ ಆಪರೇಷನ್ ಥಿಯೇಟರ್ನಲ್ಲಿ ಶಸ್ತ್ರ ಚಿಕಿತ್ಸೆ ಮಾಡುವಾಗ ಕತ್ತರಿಯನ್ನು ಹೊಟ್ಟೆಯಲ್ಲೇ ಇಟ್ಟು ಹೊಲಿಗೆ ಹಾಕುವ ವೈದ್ಯರೇ ಹೆಚ್ಚಾಗಿದ್ದಾರೆ. ಜನರು ವೈದ್ಯರ ಬಳಿ ಬರಲು ಹೆದರುತ್ತಿರುವುದು. ಅಸಲಿಗೆ ನಿಜವಾದ ಪ್ರತಿಭೆಯುಳ್ಳ ವ್ಯಕ್ತಿಗೆ ಯಾವತ್ತಿಗೂ ಬೆಲೆ ಇದ್ದೇ ಇರುತ್ತದೆ. ಭಾರತವಲ್ಲದಿದ್ದರೆ ಇನ್ನೊಂದು ರಾಷ್ಟ್ರ ಕರೆದು ಗೌರವಿಸುತ್ತದೆ. ಅಂಬೇಡ್ಕರ್ ಚಾಕಚಕ್ಯತೆಗೆ ಮೆಚ್ಚಿ ಗೌರವ ಸಮರ್ಪಿಸಿದ ದೇಶಗಳೇನು ಕಡಿಮೆಯೇ?? ಹೇಳಿ ಅವರಿಗೆ ಯಾರು ಮೀಸಲಾತಿ ಕೊಟ್ಟರು. ಹೋಗಲಿ, ಅಂಬೇಡ್ಕರ್ ಅಂಬೇಡ್ಕರ್ ಎಂದು ಬೊಬ್ಬೆ ಹೊಡೆಯುವ ಜನರು ಅವರ ಮಾತನ್ನಾದರೂ ಪಾಲಿಸಿದ್ದಾರಾ?? ಇಲ್ಲ.

“ಹಿಂದೂ ಧರ್ಮವನ್ನು ವಿರೋಧಸಿ ಹುಟ್ಟಿದ ಬೌದ್ಧಧರ್ಮ ಪ್ರಬಲವಾಗಿ ಬೆಳೆದಾಗ ಬೌದ್ದಧರ್ಮದ ವಿರುದ್ಧ ಅಪಪ್ರಚಾರ ನಡೆಸಿ ಹಲ್ಲೆಗಿಳಿದರು. ಶಂಕರಾಚಾರ್ಯರಂಥವರು ಹೆದರಿ ಧರ್ಮದ ಪುನರುತ್ಥಾನಕ್ಕೆ ಟೊಂಕಕಟ್ಟಿನಿಲ್ಲಬೇಕಾಯ್ತು” ಎಂದಿದ್ದೀರಿ. ಅಲ್ಲ ಸ್ವಾಮಿ ನಾನು ಹೆದರಿ ಟೊಂಕಕಟ್ಟಿ ನಿಂತೆ ಎಂದು ನಿಮಗೆ ಶಂಕರಾಚಾರ್ಯರು ಯಾವಾಗ ಹೇಳಿದ್ರು ಸಾರ್?? ಹಿಂದೂ ಧರ್ಮವೇನು ಶಂಕರಾಚಾರ್ಯರ ಅಪ್ಪನದ್ದಲ್ಲ ಅಥವಾ ಮಧ್ವಾಚಾರ್ಯರ ಮಾವನದ್ದಲ್ಲ ಟೊಂಕ ಕಟ್ಟಿ ನಿಲ್ಲುವುದಕ್ಕೆ. ಸಚೀವ ಆಂಜನೇಯರಂಥವರು ಮತ್ತು ನಿಮ್ಮಂತಹ So called ಜಾತ್ಯಾತೀತರ ಹಾವಳಿ ಹೆಚ್ಚಾಗಿದ್ದರಿಂದ ಜನರಲ್ಲಿ ಸತ್ಯ ಯಾವುದು? ಸುಳ್ಳು ಯಾವುದು ಎಂದು ತೋರಿಸಿ ಕೊಟ್ಟರು ಅಷ್ಟೆ. ಅಷ್ಟಕ್ಕೇ ಶಂಕರಾಚಾರ್ಯರು ಹೆದರಿ ಹಿಂದೂ ಧರ್ಮವನ್ನು ಉಳಿಸಲು ಬಂದರು ಎನ್ನುವುದು ನಿಮ್ಮ Hallucination ಅಥವಾ ಭ್ರಮೆಯಷ್ಟೇ.. ಮೊದಲು ಇಂತಹ ಭ್ರಮೆಗಳಿಂದ ಹೊರ ಬಂದು ಹಿಂದೂ ಧರ್ಮವನ್ನೊಮ್ಮೆ ನೋಡಿ ಆಗ ಎಲ್ಲವೂ ಸರಿಯಾಗಿಯೇ ಕಾಣುತ್ತದೆ.

“ಸ್ವಭಾತಃ ಸಜ್ಜನರು ಸರಳ ಜೀವಿಗಳಾದ ಕ್ರೈಸ್ತ್ರನ್ನು ಕಂಡರೇಕೆ ಭಯ? ಅವರು ದೇಶಕ್ಕಾಗಿ ಬಹಳಷ್ಟು ಮಾಡಿಲ್ಲವೇ? ಮುದ್ರಣ ತಂದರು, ಶಿಕ್ಷಣ ತಂದರು, ಆರೋಗ್ಯ ಸಂಸ್ಥೆಗಳನ್ನು ಹಳ್ಳಿಗಾಡುಗಳಲ್ಲಿ ತೆರೆದರು. ಮತ್ತು ಬಹುಮುಖ್ಯವಾಗಿ ದೀನ ದಲಿತರನ್ನು ಮೊದಲು ಮುಟ್ಟಿ ಮೈದಡವಿದರು” ಎಂದಿದ್ದೀರಿ. ನೀವು ಯಾಕಾಗಿ ಇನ್ನೂ ಮೂರನೆ ಕ್ಲಾಸಿನ ಇತಿಹಾಸದ ಪುಸ್ತಕಗಳನ್ನು ನಂಬಿ ಲೇಖನ ಬರೆಯುತ್ತಿದ್ದೀರೋ ತಿಳಿಯುತ್ತಿಲ್ಲ. ನೀವೇ ಹೇಳಿ ಸಾರ್ ಯಾವತ್ತಾದ್ರೂ ಭಾರತಕ್ಕೇ ಏನಾದ್ರೂ ಕೊರತೆಯಿತ್ತಾ? ಸಾವಿರಾರು ವರ್ಷಗಳ ಹಿಂದೆಯೇ ಋಷಿಗಳು ತಾಳೆಗರಿಯಲ್ಲಿ ಬರೆಯುತ್ತಿದ್ದರು ಅದನ್ನೇ ಕದ್ದು ಮುದ್ರಣ ಮಾಡಿದರು. ಈ ಕ್ರಿಶ್ಚಿಯ ಧರ್ಮ ಹುಟ್ಟುವುದಕ್ಕೂ ಮುಂಚೆಯೇ ಹಿಂದೂ ಧರ್ಮದಲ್ಲಿ ಅದಾಗಳು ವಿಜ್ಞಾನಿಗಳು ಆಕಾಶದಿಂದ ಹಿಡಿದು ಪಾತಾಳದವರೆಗೂ ಏನಿದೆ ಏನಿಲ್ಲ ಎಂದು ಕುಳಿತಲ್ಲೇ ಕಣ್ಣು ಮುಚ್ಚಿ ಬರೆದುಬಿಟ್ಟಿದ್ದರು. ವೇದ ಶಾಸ್ತ್ರಗಳು ರಚನೆಯಾಗಿತ್ತು, ಸಾಹಿತ್ಯ ಮುಂದುವರೆದಿದ್ದವು, ಪದ್ಯ,ಗದ್ಯ, ಪುರಾಣಗಳನ್ನು ಬರೆದಿಟ್ಟು ಹೋಗಿದ್ದರು. ಯಾವ ಖಾಯಿಲೆಗೆ ಯಾವ ಮದ್ದು ಎಂದು ಸಾವಿರಾರು ವರ್ಷಗಳ ಹಿಂದೇಯೇ ಬರೆದಿಟ್ಟಿದ್ದರು. ಪ್ಲಾಸ್ಟಿಕ್ ಸರ್ಜರಿ ಮತ್ತು ಶಸ್ತ್ರ ಚಿಕಿತ್ಸೆಯನ್ನು ಮೊದಲು ಮಾಡಿದ ಸುಶೃತರು ಜನಿಸಿದ ಭವ್ಯ ಭಾರತ ನಮ್ಮದು. ಇನ್ನು ಈ ಕ್ರಿಶ್ಚಿಯನ್ನರು ನಮ್ಮದನ್ನೇ ಕದ್ದು ಆಗ್ಲ ಭಾಷೆಯಲ್ಲಿ ಬರೆದಿಟ್ಟು ನಮಗೇ ಶಿಕ್ಷಣ ಕೊಟ್ಟಿದ್ದೇವೆ, ಔಷಧ ಆರೋಗ್ಯ ಸಂಸ್ಥೆಗಳನ್ನು ಕೊಟ್ಟಿದ್ದೇವೆ ಎಂದು ಯಾರ ಕಿವಿಯಲ್ಲಿ ಹೂವಿಡುತ್ತಿದ್ದೀರಾ ವೇಣುರವರೇ??
ಅಸಲಿಗೆ ಯಾವೊಬ್ಬ ಹಿಂದೂವಿಗೂ ಕ್ರಿಶ್ಚಿಯನ್ನರ ಕಂಡರೆ ಭಯವಿಲ್ಲ ಆದರೆ ಆದರೆ ಭಯವಿರುವುದು ಮಿಷನರಿಗಳ ಮತಾಂತರದ ಗಲೀಜು ಕೆಲಸಕ್ಕೆ. ಇ ಗಲೀಜು ಕೆಲಸಕ್ಕೆ ವರ್ಷಕ್ಕೆ ವಿದೇಶಗಳಿಂದ 145ಬಿಲಿಯನ್ ಡಾಲರ್ ಗಳು ಬಂದು ಭಾರತದಲ್ಲಿರುವ ಚರ್ಚುಗಳು ಮತ್ತು ಮಿಷನರಿಗಳ ಅಕೌಂಟಿಗೆ ಜಮಾ ಆಗುತ್ತದೆಯೆಂದು ಲೇಖಕ ಲೇಖಕ ಎ.ಎಲ್.ಭೈರಪ್ಪನವರು ಅದಾಗಲೇ ಸಾಭೀತುಪಡಿಸಿ ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ನಮಗೆ ಭಯವಿರುವುದು ಇಲ್ಲೇ..!! ಕೆಲವೊಮ್ಮೆ ಶ್ರೀಮಂತರನ್ನೇ ಕೋಟಿ ಕೋಟಿ ಹಣ ಎಂಥಾ ಜನರನ್ನೂ ಬದಲಾಯಿಸಿ ಬಿಡುತ್ತದೆ, ಇನ್ನು ನೂರು ರೂಪಾಯಿಯ ಹತ್ತು ನೋಟನ್ನು ಒಟ್ಟಗೇ ನೋಡದ ಬಡವರ ಮನಸ್ಸು ಹಣಕ್ಕಾಗಿ ಮತಾಂತರಕ್ಕೆ ಬದಲಾಗದೇ ಇರಲು ಹೇಗೆ ಸಾಧ್ಯ?? ಇಲ್ಲೇ ನಮಗೆ ಭಯವಿರುವುದು. ಮೊಘಲ್ಲರು, ಬ್ರಿಟೀಷರನ್ನೇ ಹೊಡೆದುರುಳಿಸಿದ ನಾಯಕರು ಜನಿಸಿದ ಪುಣ್ಯ ಭೂಮಿ ನಮ್ಮದು. ಭಯವೆಂಬ ಮಾತೇ ಇಲ್ಲ, ಆದರೆ ಅಮಾವಾಸ್ಯೆಯ ಕತ್ತಲಲ್ಲಿ ಕಪ್ಪನೆಯ ಮುಸುಕು ಧರಿಸಿ, ಕಪ್ಪನೆಯ ಚಾಕುವಿನಿಂದ ಇರಿದರೆ ಹೇಗೆ ಸಹಿಸಲು ಸಾಧ್ಯ ಪ್ರಿಯ ಡಾಕ್ಟರ್ ವೇಣುರವರೇ??

“ಅಂಬೇಡ್ಕರ್ ರಂತಹ ಮೇಧಾವಿಗಳೇ ಬೌದ್ಧ ಧರ್ಮಕ್ಕೆ ಮತಾಂತರಗೊಂಡರೆಂದ ಮೇಲೆ ಹಿಂದೂ ಧರ್ಮದಲ್ಲೇ ದೋಷವಿರಬೇಕಲ್ಲವೇ??” ಎಂದಿದ್ದೀರಿ. ಅಲ್ಲ ಸ್ವಾಮಿ, ಎಷ್ಟೋ ಮೇಧಾವಿಗಳು ಇಂದು ಕ್ರೈಸ್ತ ಧರ್ಮ ಬಿಟ್ಟು ಹಿಂದೂ ಧರ್ಮಕ್ಕೆ ಮತಾಂತರಗೊಂಡದ್ದಾರೆಂದ ಮಾತ್ರಕ್ಕೆ ಕ್ರೈಸ್ತ ಧರ್ಮದಲ್ಲೇ ದೋಷವಿದೆ ಎಂದು ಅರ್ಥವೇ?? ನಿಮ್ಮ ವಾದಕ್ಕೆ ಅರ್ಥವೇ ಇಲ್ವಲ್ಲ ಸ್ವಾಮಿ!? ಸ್ವಾಮಿ ವಿವೇಕಾನಂದರಂಥ ಶ್ರೇಷ್ಟರು ಹಿಂದೂ ಧರ್ಮದಲ್ಲೇ ಹುಟ್ಟಿ, ಬದುಕಿ ಇನ್ನಿತರರಿಗೆ ಮಾದರಿಯಾದರು ಆದರೆ ನಿಮ್ಮ ಲೇಖನದಲ್ಲಿ ಎಲ್ಲಾದರೂ ಈ ಮೇಧಾವಿಯ ಬಗ್ಗೆ ಉಲ್ಲೇಖಿಸಿದ್ದೀರಾ? ಏಕೆ ವಿವೇಕಾನಂದರು ಶೂದ್ರರನ್ನು ಮುಟ್ಟಿ ಮಾತನಾಡಿಸಲಲ್ಲವೇನು? ಅವರ ಜೊತೆ ಊಟ ಮಾಡಲಿಲ್ಲವೇನು?? ಇದೆಲ್ಲಾ ನಿಮ್ಮ ಕಣ್ಣಿಗೆ ಏಕೆ ಕಾಣುವುದೇ ಇಲ್ಲ??
ನೀವು ಮೇಧಾವಿ ಎಂದು ಯಾವ ಆಧಾರದ ಮೇಲೆ ಹೇಳುತ್ತೀರ?? ಆ ಅರ್ಹತೆ ವಿವೇಕಾನಂದರಿಗಿಲ್ಲವೇ??

“ಧರ್ಮ ಪ್ರಚಾರವನ್ನು ಇತರ ಧರ್ಮದವರು ಮಾತ್ರ ಮಾಡುತ್ತಾರೆಯೇ? ನಮ್ಮ ಮಠಾಧೀಶರುಗಳು ವೀದೇಶಗಳಿಗೆ ಹಾರಿ ತಮ್ಮ ತಮ್ಮ ಧರ್ಮ ಪ್ರಚಾರ ಮಾಡುತ್ತಿಲ್ಲವೇ? ಅದನ್ನೇ ಇನ್ನೊಬ್ಬರು ಮಾಡಿದರೆ ಮತ್ಸರವೇಕೆ?” ಎಂದಿದ್ದೀರಿ. ಆದರೆ ನೀವು ಸ್ವಲ್ಪ ಇತಿಹಾಸದ ಪುಟಗಳನ್ನೊಮ್ಮೆ ತಿರುವಿಹಾಕಿ ಸಾರ್. ಇನ್ನು ಮಿಗಿಲಾಗಿ ನೀವು ಧರ್ಮ ಪ್ರಚಾರಕ್ಕೂ ಮತಾಂತರಕ್ಕೂ ವ್ಯತ್ಯಾಸವನ್ನ ತಿಳಿಯಿರಿ. ಹಿಂದೂಗಳು ಯಾವತ್ತೂ ಧರ್ಮ ಪ್ರಚಾರಕ್ಕೆ ತಡೆಯೊಡ್ಡಲಿಲ್ಲ ಬದಲಿಗೆ ತಡೆಯೊಡ್ಡಿದ್ದು ಸ್ವ ಇಚ್ಛೆಯಿಲ್ಲದ ಮತಾಂತರಕ್ಕೆ. ಸುಮ್ಮನೆ ವಿಷಯಾಂತರ ಮಾಡಿ ಜನರಿಗೆ ಗಲಿಬಿಲಿಯುಂಟು ಮಾಡಬೇಡಿ. ಕ್ರಿಶ್ಚಿಯ ಮಿಷನರಿಗಳು ನಮ್ಮಲ್ಲಿ ಬಂದು ಧರ್ಮ ಪ್ರಚಾರ ಮಾಡುವುದಲ್ಲದೇ ಮತಾಂತರ ಮಾಡಿಸಿದರು ಆದರೆ ಯಾವೊಬ್ಬ ಹಿಂದೂ ಮಠಾಧೀಶನೂ ಸಹ ಬೇರೆಯವರನ್ನು ಜನರ ಸ್ವ-ಇಚ್ಛೆಯಿಲ್ಲದೇ ಆಮಿಷಗಳನ್ನೊಡ್ಡಿ ಮತಾಂತರ ಮಾಡಲಿಲ್ಲ.. ಒಮ್ಮೆ ಮಾಡಿದ್ದಿದ್ದರೆ ತೋರಿಸಿ ನೋಡೋಣ. ಇನ್ನು ಹಿಂದೂ ಧರ್ಮ ಗುರುಗಳಿಗೇನು ಫಾರಿನ್ ಇಂದ ಹಣ ಬರುವುದಿಲ್ಲವೇ? ಎಂದು ಪ್ರಶ್ನಿಸಿದ್ದೀರಿ. ಹೌದು ಹಿಂದೂ ಧರ್ಮ ಗುರುಗಳಿಗೆ ಹಣ ಬರುತ್ತದೆ ಆದರೆ ಅದಕ್ಕೆಲ್ಲವೂ ಸರ್ಕಾರಕ್ಕೆ ಲೆಕ್ಕ ತೋರಿಸುತ್ತಾರೆ ಆದರೆ ಕ್ರಿಶ್ಚಿಯನ್ ಮಿಷನರಿಗಳಿಗೆ ಬರುವ ಬರೋಬ್ಬರಿ ಹಣ 145ಬಿಲಿಯನ್ ಡಾಲರ್ ಗೆ ಲೆಕ್ಕ ತೋರಿಸಿದ್ದಾರಾ ಕೇಳಿ??
ಕೊನೆಯದಾಗಿ ಒಂದು ವಿಷಯವನ್ನು ಸ್ಪಷ್ಟ ಪಡಿಸಿತ್ತಿದ್ದೇನೆ. ದಲಿತರ ಮುಗ್ದತೆಯನ್ನೇ ದಾಳವಾಗಿಟ್ಟುಕೊಂಡು ಹಿಂದೂಗಳಿಂದ ಅವರನ್ನು ಬೇರ್ಪಡಿಸಿ ಮತಾಂತರ ಮಾಡಿಸುತ್ತಿರುವುದು ಅನ್ಯ ಧರ್ಮೀಯರು ಹೊರತು ಹಿಂದೂಗಳಲ್ಲ! ಹಿಂದೂಗಳ ಹೋರಾಟ ಯಾವ ಧರ್ಮ ಪ್ರಚಾರದ ವಿರುದ್ದವಲ್ಲ ಬದಲಿಗೆ ಮತಾಂತರದ ವಿರುದ್ಧ. ಮತ್ತೊಬ್ಬರ ತಾಯಿ ರೇಷ್ಮೆ ಸೀರೆಯುಟ್ಟಿದ ಮಾತ್ರಕ್ಕೆ ಹರಕಲು ಸೀರೆಯಟ್ಟರೂ ಉತ್ತಮ ಸಂಸ್ಕಾರ ಕೊಟ್ಟ ಹೆತ್ತ ತಾಯಿಯ ಒಡಲಿಗೆ ಒದ್ದು ರೇಷ್ಮೆ ಸೀರೆಯುಟ್ಟ ತಾಯಿಯ ಬಳಿ ಓಡುವವರಿಗೆ ಏನೆಂದು ಕರೆಯಬೇಕು ನೀವೇ ಹೇಳಿ?!

11,664 thoughts on “ಮತಾಂತರ ವಿರೋಧಿಸುವವರ ವಿರೋಧಿಗಳಿಗೆ ಕೆಲವು ಪ್ರಶ್ನೆಗಳು!

 1. ಆಗ್ರ ಮತಾಂತರದ ಉದ್ದೇಶ ಮತಾಂತರವೇ?

  =================
  ಸಾಧ್ವಿ ಜ್ಯೋತಿ ನಿರಂಜನ್, ಸಾಕ್ಷಿ ಮಹಾರಾಜ್ ಮತ್ತು ಸುಶ್ಮಾ ಸ್ವರಾಜ್‍ರನ್ನು ವಿವಾದದಿಂದ ರಕ್ಷಿಸಲು ಆಗ್ರಾದ ಮಧುನಗರ ಕೊಳೆಗೇರಿಯು ಯಶಸ್ವಿಯಾಗಿದೆ. ಪಾರ್ಲಿಮೆಂಟ್‍ನಲ್ಲಿ ಕಪ್ಪುಹಣದ ಚರ್ಚೆ ನಡೆಯುತ್ತಿದ್ದಾಗ ಸಾಧ್ವಿ ದೆಹಲಿಯ ಕಾರ್ಯಕ್ರಮದಲ್ಲಿ ವಿವಾದಿತ ಹೇಳಿಕೆಯೊಂದನ್ನು ಕೊಟ್ಟರು. ಪಾರ್ಲಿಮೆಂಟು ಸಾಧ್ವಿಯ ಸುತ್ತ ತಿರುಗತೊಡಗಿತು. ಕಪ್ಪು ಹಣವನ್ನು ಕೈಬಿಟ್ಟು ಪ್ರತಿಪಕ್ಷ ಗಳು ಸಾಧ್ವಿಯನ್ನು ಎತ್ತಿಕೊಂಡವು. ಅದೇ ವೇಳೆ ಸಾಕ್ಷಿ ಮಹಾರಾಜ್ ಎಂಬ ಸಂಸದ ಗೋಡ್ಸೆ ಯನ್ನು ಮಹಾನ್ ದೇಶಭಕ್ತ ಎಂದು ಹೊಗಳಿದರು. ಸಾಧ್ವಿಯ ಸುತ್ತ ನೆರೆದಿದ್ದ ವಿರೋಧ ಪಕ್ಷಗಳು ಮಹಾರಾಜ್‍ರ ಸುತ್ತ ನೆರೆದುವು. ಅವರಿಂದ ಮೂರು ಮೂರು ಬಾರಿ ಕ್ಷಮೆ ಯಾಚನೆಯನ್ನು ಪಡೆಯುವ ಹೊತ್ತಲ್ಲೇ ಭಗವದ್ಗೀತೆ ರಾಷ್ಟ್ರ ಗ್ರಂಥವಾಗಬೇಕು ಎಂದು ಸುಶ್ಮಾ ಸ್ವರಾಜ್ ಹೇಳಿಕೆ ನೀಡಿದರು. ಸಾಧ್ವಿ ಮತ್ತು ಸಾಕ್ಷಿಯನ್ನು ಕೈಬಿಟ್ಟ ವಿರೋಧ ಪಕ್ಷಗಳು ಸುಶ್ಮಾರನ್ನು ತರಾಟೆಗೆ ತೆಗೆದು ಕೊಂಡವು. ಈ ಕುರಿತಂತೆ ಮಾಧ್ಯಮಗಳಲ್ಲಿ ಚರ್ಚೆಗಳೂ ನಡೆದುವು. ಈ ಚರ್ಚೆ ಇನ್ನೂ ಮುಗಿಯು ವುದಕ್ಕಿಂತ ಮೊದಲೇ ಆಗ್ರಾದ ಕೊಳೆಗೇರಿಯ 56 ಮುಸ್ಲಿಮ್ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಸುದ್ದಿ ಪ್ರಕಟವಾದುವು. ಮಾಧ್ಯಮಗಳಲ್ಲಿ ಮಾತ್ರವಲ್ಲ, ಪಾರ್ಲಿಮೆಂಟಿನಲ್ಲೂ ಇದು ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಯಿತು. ಇದೀಗ ಈ ಸುದ್ದಿಯನ್ನು ಮರೆಸುವಂತೆ ಡಿ. 25ರಂದು ಸಂಘಪರಿವಾರ ಅಲೀಘಡ್‍ನಲ್ಲಿ ನಡೆಸಲುದ್ದೇಶಿಸಿರುವ ಮತಾಂತರ ಕಾರ್ಯಕ್ರಮವು ಪ್ರಚಾರ ಪಡೆಯುತ್ತಿದೆ. ಅಂತೂ ಕಪ್ಪು ಹಣದ ಸುತ್ತ ಆರಂಭಗೊಂಡ ಚರ್ಚೆಯು ಬೇಕಾಬಿಟ್ಟಿ ತಿರುವು ಪಡೆದು ಮೋದಿಯನ್ನೂ ಮತ್ತು ಅವರ ಪಕ್ಷವನ್ನೂ ರಕ್ಷಿಸುವಲ್ಲಿ ಸಫಲವಾಗಿದೆ.
  ನಿಜವಾಗಿ, ಆಗ್ರಾ ಮತಾಂತರ ಪ್ರಕರಣಕ್ಕೆ ಬಿಜೆಪಿ ನೀಡುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಆ ಇಡೀ ಪ್ರಕ್ರಿಯೆಯೇ ಸಂಚಿನಂತೆ ಕಾಣುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಪಾರ್ಲಿಮೆಂಟಿನಲ್ಲಿ ಹೇಳಿಕೆ ನೀಡಿದ ವೆಂಕಯ್ಯ ನಾಯ್ಡುರವರು, ‘ದೇಶದಾದ್ಯಂತ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರೋಣ’ ಎಂದರು. ಬಹುಶಃ ಆಗ್ರಾದ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಹೇಳಿಕೆ ಗಳನ್ನೂ ಮತ್ತು ವೆಂಕಯ್ಯ ನಾಯ್ಡು ಅವರ ಹೇಳಿಕೆಯನ್ನೂ ಜೊತೆಯಾಗಿಟ್ಟು ನೋಡಿದರೆ ಷಡ್ಯಂತ್ರದ ಅಸ್ಪಷ್ಟ ಚಿತ್ರವೊಂದು ಮೂಡಿಬರುತ್ತದೆ. ಮತಾಂತರ ವಿರೋಧಿ ಕಾನೂನನ್ನು ರಚಿಸುವ ಉದ್ದೇಶದಿಂದಲೇ ಆಗ್ರದಲ್ಲಿ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತೇ? ಆಗ್ರಾದಲ್ಲಿ ಮತಾಂತರ ನಡೆದೇ ಇಲ್ಲ ಎಂದು ಅದರಲ್ಲಿ ಭಾಗವಹಿಸಿದವರು ಹೇಳಿಕೊಳ್ಳುತ್ತಿದ್ದಾರೆ. ರೇಶನ್ ಕಾರ್ಡನ್ನು ಪಡಕೊಳ್ಳುವುದಕ್ಕಾಗಿ ನಾವು ಆ ಕಾರ್ಯಕ್ರಮಕ್ಕೆ ಹೋಗಿರುವುದಾಗಿ ಅನೇಕರು ಹೇಳಿ ಕೊಂಡಿದ್ದಾರೆ. ಅದರಲ್ಲಿ ಭಾಗವಹಿಸಿದವರು ಆ ಕಾರ್ಯಕ್ರಮದ ಬಳಿಕವೂ ಮಸೀದಿಗೆ ಹೋದದ್ದು ಮತ್ತು ಮಾಧ್ಯಮಗಳ ಮುಂದೆ ತಾವು ಮುಸ್ಲಿಮರೇ ಆಗಿರುವುದಾಗಿ ಹೇಳಿಕೊಂಡಿರುವುದೂ ನಡೆ
  ದಿದೆ. ಇವೆಲ್ಲ ಸೂಚಿಸುವುದೇನನ್ನು? ಮತಾಂತರ ಎಂಬುದು ಒಂದು ಪೂಜಾ ಕಾರ್ಯಕ್ರಮದ ಸುತ್ತ ನೆರೆಯುವುದರ ಹೆಸರು ಅಲ್ಲವಲ್ಲ. ಅದು ಸೈದ್ಧಾಂತಿಕ ಪರಿವರ್ತನೆ. ಒಂದು ಸಿದ್ಧಾಂತದಿಂದ ವಿಮುಖ ಗೊಂಡು ಇನ್ನೊಂದರಲ್ಲಿ ನೆಲೆ, ಬೆಲೆ ಹುಡುಕುವ ಪ್ರಕ್ರಿಯೆ. ಆಗ್ರಾ ಮತಾಂತರ ಪ್ರಕರಣದಲ್ಲಿ ಇಂಥ ಯಾವ ಅಂಶಗಳೂ ವ್ಯಕ್ತಗೊಂಡೇ ಇಲ್ಲ. ಬಡ ಮನುಷ್ಯರು ಒಂದು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದುದನ್ನು ಬಿಟ್ಟರೆ ಉಳಿದಂತೆ ಯಾವ ಬದಲಾವಣೆಗಳೂ ನಡೆದಿಲ್ಲ. ಇಂಥದ್ದೊಂದು ನಿರ್ಜೀವ ಕಾರ್ಯಕ್ರಮವನ್ನು ಸಂಘಪರಿವಾರ ಹಮ್ಮಿಕೊಂಡಿರುವುದಕ್ಕೆ ಕಾರಣಗಳೇನು? ಸಂಘ ನಿಜವಾಗಿಯೂ ಮತಾಂತರ ಮಾಡಲು ಬಯಸಿತ್ತೇ ಅಥವಾ ಅಂಥದ್ದೊಂದು ಹುಯಿಲೆಬ್ಬಿಸುವ ಉದ್ದೇಶವನ್ನಷ್ಟೇ ಹೊಂದಿತ್ತೇ? ಮತಾಂತರವು ದೇಶದಾದ್ಯಂತ ಚರ್ಚೆಗೊಳಗಾಗಲಿ ಮತ್ತು ಮತಾಂತರ ವಿರೋಧಿ ಕಾನೂನನ್ನು ರಚಿಸಲು ಕೇಂದ್ರ ಸರಕಾರಕ್ಕೆ ತಕ್ಕ ಸಂದರ್ಭ ಒದಗಿ ಬರಲಿ ಎಂಬ ತಂತ್ರ ಅದರ ಹಿಂದಿತ್ತೇ?
  ಮತಾಂತರ ವೈಯಕ್ತಿಕವಾದುದು. ಕಾಂಗ್ರೆಸಿಗನೋರ್ವ ಬಿಜೆಪಿಗನಾಗುವುದು, ಬಿಜೆಪಿಗನೋರ್ವ ಕಮ್ಯುನಿಸ್ಟನಾಗುವುದು ಅಥವಾ ಕಮ್ಯುನಿಸ್ಟನು ಕಾಂಗ್ರೆಸಿಗನಾಗುವುದು ಹೇಗೆ ಸಹಜ ಮತ್ತು ಸರಾಗವೋ ಹಿಂದೂವೊಬ್ಬ ಮುಸ್ಲಿಮ್ ಆಗುವುದು, ಮುಸ್ಲಿಮನೋರ್ವ ಕ್ರೈಸ್ತ ಆಗುವುದು ಅಥವಾ ಕ್ರೈಸ್ತನೋರ್ವ ಹಿಂದೂ ಆಗುವುದು ಕೂಡ ಅಷ್ಟೇ ಸಹಜ ಮತ್ತು ಸರಾಗ ಆಗಬೇಕು. ಬಿಜೆಪಿ ಸಿದ್ಧಾಂತದಿಂದ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಸಿದ್ಧಾಂತರವಾಗುವುದು ಸಾಮಾಜಿಕ ತಲ್ಲಣ ಸೃಷ್ಟಿಸುವುದಿಲ್ಲವಾದರೆ ಇಸ್ಲಾಮ್‍ನಿಂದ ಹಿಂದೂ ಧರ್ಮಕ್ಕೆ ಧರ್ಮಾಂತರವಾಗುವುದು ಯಾಕೆ ತಲ್ಲಣ ಉಂಟು ಮಾಡ ಬೇಕು? ಧರ್ಮಾಂತರ ಓರ್ವ ವ್ಯಕ್ತಿಯ ಸಹಜ ಸ್ವಾತಂತ್ರ್ಯ. ಸಿದ್ಧಾಂತಗಳನ್ನು ಅಧ್ಯಯನ ನಡೆಸುತ್ತ ಆತ ಒಂದರಿಂದ ಇನ್ನೊಂದಕ್ಕೆ ವಾಲಬಲ್ಲ. ಚೆಗೆವಾರನನ್ನು ಓದುತ್ತಾ ಪುಳಕಿತಗೊಂಡ ವ್ಯಕ್ತಿ ಮುಂದೆ ಪ್ರವಾದಿ ಮುಹಮ್ಮದ್‍ರನ್ನು(ಸ) ಓದುತ್ತಾ ಪ್ರಭಾವಿತನಾಗಬಲ್ಲ. ಅದು ಅಧ್ಯಯನನಿರತ ವ್ಯಕ್ತಿಯ ಸ್ವಾತಂತ್ರ್ಯ. ಈ ಸ್ವಾತಂತ್ರ್ಯಕ್ಕೆ ಅಪಾಯ ಒದಗುವುದು ಯಾವಾಗ ಎಂದರೆ ಆಮಿಷಗಳು ಇಲ್ಲವೇ ಬೆದರಿಕೆಗಳು ಈ ಪ್ರಕ್ರಿಯೆಯಲ್ಲಿ ಜಾಗ ಪಡಕೊಂಡಾಗ. ಅಧ್ಯಯನ ದಿಂದಾಗಿ ಓರ್ವ ವ್ಯಕ್ತಿಯಲ್ಲಿ ಉಂಟಾಗುವ ಸೈದ್ಧಾಂತಿಕ ಬದಲಾವಣೆಗೂ ಬೆದರಿಕೆಗಳ ಕಾರಣಕ್ಕಾಗಿ ಓರ್ವ ವ್ಯಕ್ತಿ ಸಿದ್ಧಾಂತವನ್ನು ಬದಲಿಸಿಕೊಳ್ಳುವುದಕ್ಕೂ ವ್ಯತ್ಯಾಸ ಇದೆ. ಯಾವ ಸಿದ್ಧಾಂತವೂ ಆಮಿಷಗಳಿಂದಲೋ ಬೆದರಿಕೆಗಳಿಂದಲೋ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಆದ್ದರಿಂದಲೇ, ಧರ್ಮದಲ್ಲಿ ಬಲಾತ್ಕಾರವಿಲ್ಲ (2:256) ಎಂದು ಪವಿತ್ರ ಕುರ್‍ಆನ್ ಬಲವಾಗಿ ಸಾರಿದೆ. ಇದು ಆಗ್ರದಲ್ಲಿ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡವರಿಗೆ ಗೊತ್ತಿಲ್ಲ ಎಂದಲ್ಲ. ರೇಶನ್ ಕಾರ್ಡ್‍ಗಿಂತಲೂ ಬೆಲೆಬಾಳುವ ಆಮಿಷವನ್ನು ಇನ್ನಾರೋ ಒಡ್ಡಿದರೆ ಇವರು ತಮ್ಮ ನಿಷ್ಠೆಯನ್ನು ಖಂಡಿತ ಬದಲಿಸ ಬಲ್ಲರು. ಯಾಕೆಂದರೆ, ಹಸಿದವರಿಗೆ ಹೊಟ್ಟೆಯೇ ಮೊದಲ ಧರ್ಮ. ಹಸಿವಿನಿಂದ ಮುಕ್ತವಾಗಬೇಕೋ ಅಥವಾ ಸಿದ್ಧಾಂತ ಬೇಕೋ ಎಂಬೆರಡು ಆಯ್ಕೆಗಳ ಮುಂದೆ ಬಡವರು ಹಸಿವಿನಿಂದ ಮುಕ್ತವಾಗುವು ದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆಗ್ರದಲ್ಲಿ ಇಂಥದ್ದೊಂದು ಆಮಿಷದ ಮೂಲಕ ಜನರನ್ನು ಸೇರಿಸಲಾಗಿದೆ. ಬಹುಶಃ ಸೇರಿಸಿದವರಿಗೆ ಒಂದು ಉದ್ದೇಶವಿರುವಂತೆಯೇ ಸೇರಿದವರಿಗೂ ಒಂದು ಉದ್ದೇಶವಿತ್ತು. ಸೇರಿದವರ ಉದ್ದೇಶ ರೇಶನ್ ಕಾರ್ಡ್ ಮತ್ತಿತರ ಸೌಲಭ್ಯ ಪಡಕೊಳ್ಳುವುದು. ಆದರೆ ಸೇರಿಸಿದವರ ಉದ್ದೇಶ! ಹಿಂದೂ ಧರ್ಮಕ್ಕೆ ಮತಾಂತರಿಸುವುದೋ ಅಥವಾ ಮತಾಂತರ ವಿರೋಧಿ ಕಾನೂನು ರಚನೆಗೆ ಮೋದಿ ಸರಕಾರಕ್ಕೆ ಅವಕಾಶ ಸೃಷ್ಟಿಸಿಕೊಡುವುದೋ? ಸದ್ಯದ ಚರ್ಚೆಗಳನ್ನು ನೋಡಿದರೆ ಆ ಮತಾಂತರದ ಉದ್ದೇಶ ಏನೆಂದು ಸ್ಪಷ್ಟವಾಗುತ್ತದೆ.

 2. 今では全世界のアウトドアを愛する人々に圧倒的な支持を受けていますColumbia(コロンビア)画像と実物では、ご使用のブラウザ、モニター解像度により多少色具合が異なって見える場合もございますが、予めご了承ください。
  銉炪儷銉嬨儉銈ゃ儖銉炽偘銉嗐兗銉栥儷 http://www.quimiart.com.br/calend/css/brmgriq_h2n5.html

 3. Thank you, I’ve recently been searching for information approximately this
  subject for ages and yours is tthe greatest I have found oout till now.
  However, what in regards too the conclusion? Are you sure about the
  supply?

 4. So it is very essential to have a professional website designer for every organization and
  business. It is always a good practice, before signing the agreement,
  to consider all your options and pick up the website designer
  that best suits your need. When you prioritized based mostly on the over general concerns, you will have made your task of choosing a
  Santa Barbara Website Designer a lot easier.

 5. It is exactly similar to Becoming only Good, but not Effective.
  Sometime web designers will use techniques that would never
  be considered for non-ecommerce websites. This is why most Pinoys working abroad
  subscribe to Pinoy channels provided by their local cable company.

 6. How are you supposed to know which web designer to choose.
  Take advantage of their expertise in coming up with the page that speaks your business.
  This is why most Pinoys working abroad subscribe to Pinoy channels
  provided by their local cable company.

 7. Initial Data Independent Sales (FDIS) is a registered ISO/MSP of Wells Fargo Bank, N.A., Walnut Creek, CA.
  American Express demands separate approval.

 8. Paste a photograph on the entrance aspect of the card.

  The psychic reader is somebody that can truly pick up correct and insightful info.
  Get a book or go on-line to get a listing of meanings for all the cards.

 9. If there are any discrepancies, don’t just sit there and allow the
  psychic move on. Mercury influences our ideas and Uranus produces unexpected occurrences.
  But it also conveys the feeling that he is probably becoming careful now.

 10. Howdy! I’m aat work browsing our blo froom my neww iphone 3gs!
  Just wanted to say I love reading through your blog and look
  forward too all your posts! Carry oon the excellent work!

 11. Gгeat blog you hɑve here but I wаs curious ɑbout
  if youu knew of ɑny messzage boards thhat cover the ѕame topics talked aЬout here?
  I’d really liike to Ƅe ɑ ρart of community where I can ɡet comments fгom other
  knowledgeable individuals tɦɑt share thе same intеrest.
  If you hаve any recommendations, please let me
  know. Kudos!

 12. Taxes are owed on hardly any money that is withdrawn over account.
  You can do a person need want making use of house like sell, leave, or pay it off without paying penalties.
  The baby boomer generation is stepping into retirement.

 13. The PBS anchors now, unabashedly, make funny faces to emphasis their agreement
  with the rhetoric and the blatant attacks of the ‘conservatives’.

 14. Ad Google Ad – Sense to Your Site: Earn extra cash by adding Google
  Ad – Sense to. Many zebra crossings are placed within metres of the junction. This feature is found in models such as Lexus, Toyota, Ford, Volkswagen,.

 15. I just want to say I am newbie to weblog and absolutely enjoyed your page. Probably I’m going to bookmark your blog post . You surely have outstanding articles. Thanks a bunch for sharing with us your web site.

 16. Drifting smoke doesn’t know it’s created to stay on the outside of.
  The ordinary loans that cash advance heard of is different with the sort of home mortgages.
  Short sales are most popular in time consuming real estate market.

 17. I just want to mention I am newbie to blogs and certainly loved your website. Almost certainly I’m going to bookmark your site . You absolutely have wonderful writings. Bless you for sharing your web site.

 18. Do you have a spam issue on this website; I also am a blogger, and I was wondering your situation; many of us have developed some nice practices and we are looking to trade strategies with other folks, why not shoot me an email if interested.

 19. I just want to say I am just very new to blogging and site-building and honestly enjoyed this web-site. Very likely I’m planning to bookmark your website . You amazingly have fantastic posts. Many thanks for sharing with us your website page.

 20. I just want to say I am very new to blogging and actually savored this web page. Probably I’m going to bookmark your blog post . You actually have awesome article content. Thanks for revealing your web site.

 21. I like the helpful info you provide in your articles.
  I’ll bookmark your weblog and check again here frequently. I am
  quite certain I’ll learn many new stuff right
  here! Best of luck for the next!

 22. Pingback: long tail pro seo
 23. Pingback: Punk rock clothes
 24. Pingback: marketing mix song
 25. Pingback: legal counsel
 26. Pingback: legal forms online
 27. Pingback: weight diet
 28. Pingback: beautypedia
 29. Pingback: kids video
 30. Pingback: ヴィトン pdv
 31. Pingback: Video hier
 32. Pingback: dui attorney
 33. Pingback: Radical Firearms
 34. Pingback: notebook modena
 35. Pingback: alli weight loss
 36. Pingback: laminateur
 37. Pingback: Smartphone zombies
 38. Pingback: pure silk
 39. Pingback: security melbourne
 40. Pingback: slotmachines
 41. Pingback: banheiras
 42. Pingback: article
 43. Pingback: ecografe
 44. Pingback: Lodging lake fork
 45. Pingback: Massage
 46. Pingback: Facials
 47. Pingback: Math Shortcuts
 48. Pingback: Chester Weekend
 49. Pingback: email verifier
 50. Pingback: curso de detetive
 51. Pingback: Austin IT Service
 52. Pingback: dog grooming
 53. Pingback: webseite erstellen
 54. Pingback: bikini luxe coupon
 55. Pingback: plumber
 56. Pingback: stained concrete
 57. Pingback: movie2k
 58. Pingback: dr Medora
 59. Pingback: roofing
 60. Pingback: mover
 61. Pingback: edm
 62. Pingback: dog playpen
 63. Pingback: physiq vodka
 64. Pingback: health conscious
 65. Pingback: carpet cleaners
 66. Pingback: softestore.com
 67. Pingback: online roulette
 68. Pingback: Brand Bangla Eshop
 69. Pingback: Wiki links
 70. Pingback: hot bhabi
 71. Pingback: Sell SMTP
 72. Pingback: sms gratuit
 73. Pingback: free phones
 74. Pingback: batik air
 75. Pingback: Escort
 76. Pingback: FCPX Effects
 77. Pingback: double head shot
 78. Pingback: double head shot
 79. Pingback: apple shooter
 80. Pingback: Cheap Sunglasses
 81. Pingback: forex broker list
 82. Pingback: right here
 83. we prefer to honor a lot of other world-wide-web web sites around the internet, even if they arent linked to us, by linking to them. Under are some webpages worth checking out

 84. Pingback: rap instrumental
 85. Pingback: best property porn
 86. Pingback: kit tattoo
 87. Pingback: twitter favorites
 88. Pingback: kit tattoo
 89. Pingback: th9 war bases
 90. Wonderful story, reckoned we could combine a couple of unrelated information, nonetheless seriously worth taking a search, whoa did a single learn about Mid East has got far more problerms at the same time

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya