ನಿಮಗೆಲ್ಲ ರೆಡ್ ಲೇಬಲ್ ಟೀ ಪುಡಿಯ ಜಾಹೀರಾತು ನೆನಪಿದೆಯಾ? ಹಿಂದೂ ವೃದ್ಧ ದಂಪತಿ ಮನೆ ಕೀ ಮರೆತದ್ದಕ್ಕೆ, ಮಗ ಬರಲಿ ಎಂದು ತಮ್ಮ ಮನೆ ಮುಂದೆ ಕಾಯುತ್ತಾ ನಿಂತಿರುತ್ತಾರೆ. ಅಷ್ಟರಲ್ಲಿ ಮುಸ್ಲಿಂ ಮಹಿಳೆಯೊಬ್ಬಳು, ಹಿಂದೂ ದಂಪತಿಯ ಪಕ್ಕದಲ್ಲೇ ಇರುವ ತಮ್ಮ ಮನೆಯೊಳಗೆ ಹೋಗುತ್ತಿರುತ್ತಾಳೆ. ಆಗಲೇ ಹಿಂದೂ ಮನೆಯವನಿಗೆ ತಾತ್ಸಾರ. ಪಾಪ ಆ ವೃದ್ಧ ಹಿಂದೂ ದಂಪತಿಯು ಕಾಯುತ್ತಿರುವುದನ್ನು ನೋಡಲಾರದೇ, ಮುಸ್ಲಿಂ ಮಹಿಳೆ ‘ಬನ್ನಿ ಒಳಗೆ ಕೂತ್ಕೊಳಿ, ಚಹಾ ಮಾಡ್ಕೊಡ್ತೀನಿ’ ಎನ್ನುತ್ತಾಳೆ. ಆಗ, ಹಿಂದೂ ವೃದ್ಧೆ ಅವರ ಯಜಮಾನರಿಗೆ ‘ಇವ್ರ್ ಮನೆಯಿಂದ ಒಳ್ಳೇ ಚಹಾ ಪರಿಮಳ ಬರುತ್ತೆ’ ಎನ್ನುತ್ತಾರೆ. ಆದರೂ ಒಳ ಹೋಗಲ್ಲ. ಕೊನೆಗೆ ಚಹಾ ಮಾಡಿದ ಮೇಲೆ ಪರಿಮಳಕ್ಕೆ ಮಾರುಹೋಗಿ, ಮುಸ್ಲಿಮರ ಮನೆಗೆ ಇವ್ರು ಹೋಗ್ತಾರೆ.
ಇದು ನೋಡುವುದಕ್ಕೆ ಅಹಾ, ಏನ್ ಚೆನ್ನಾಗಿದೆ ಇದು.. ಹಿಂಗೇ ಇರಬೇಕು ನಮ್ ದೇಶ ಎನ್ನಿಸುತ್ತದೆ. ಇನ್ನೊಂದು ಉದಾಹರಣೆ ನೋಡಿ,
ಗಣೇಶ ಚತುರ್ಥಿಗೆ ಗಣಪತಿ ಬಪ್ಪನ ಮೂರ್ತಿ ತರುವುದಕ್ಕೆ ಒಬ್ಬ ಹಿಂದೂ ಅಂಗಡಿಗೆ ಬರುತ್ತಾನೆ. ವಿಧವಿಧವಾದ ಸುಂದರ ವಿಗ್ರಹಗಳು. ವೃದ್ಧ ಕಲಾವಿದನೊಬ್ಬ ಯಾವ್ಯಾವ ಮೂರ್ತಿಯ ವಿಶೇಷತೆ ಏನು ಎಂಬುದನ್ನೆಲ್ಲ ಶಾಸ್ತ್ರ ತಿಳಿದವರಂತೆ ಹೇಳುತ್ತಿರುತ್ತಾರೆ. ಆ ಕಲಾವಿದ ಏಕಾಏಕಿ ಟೋಪಿಯನ್ನು ಜೇಬಿನಿಂದ ತೆಗೆಯುತ್ತಾರೆ. ಆಗಲೇ ತಿಳಿಯುತ್ತೆ, ಗಣಪತಿ ಮೂರ್ತಿ ಕೆತ್ತಿದ ಕಲಾವಿದ ವೃದ್ಧ ಎಂದು. ಇದನ್ನು ನೋಡಿದ ಯುವಕ ಮೂರ್ತಿ ಬೇಡವೆಂದು ಹೊರಡಲು ಮುಂದಾಗುತ್ತಾನೆ. ಆಗ ವೃದ್ಧ ‘ಅಯ್ಯೋ ಒಂದು ಲೋಟ್ ಚಹಾ ಆದ್ರೂ ಕುಡ್ಕೊಂಡ್ ಹೋಗಿ’ ಎನ್ನುತ್ತಾರೆ.
ಅರೇ, ಇದೂ ಚೆನ್ನಾಗಿದೆ ಅಲ್ವಾ ಅಂತ ಹೇಳ್ತಿದೀರಾ?
ಹೋಳಿ ಹಬ್ಬದಂದು ಬಾಲಕನಿಗೆ ಬಿಳಿ ಜುಬ್ಬ ಹಾಕೇ ನಮಾಜ್ ಮಾಡುವುದಕ್ಕೆ ಹೋಗಬೇಕಾಗಿರುತ್ತೆ. ಹಿಂದೂಗಳೆಲ್ಲ ಕಂಡ ಕಂಡವರಿಗೆ ಹೋಳಿ ಎರಚುತ್ತಿರುತ್ತಾರೆ(ಹಾಗೆ ಉದ್ದೇಶಪೂರ್ವಕವಾಗೇ ಬಿಂಬಿಸುವುದು). ಹೆದರಿಕೊಂಡೇ ಹೋಗುವ ಬಾಲಕನಿಗೆ ಅಡ್ಡವಾಗಿ ಬಂದು ಹೋಳಿ ಬಣ್ಣ ತಾಗದಂತೆ ಮಸೀದಿವರೆಗೂ ಬಿಟ್ಟು ಬರುವ ಇನ್ನೊಬ್ಬ ಬಾಲಕಿ. ಇದು ಸರ್ಫ್ ಎಕ್ಸೆಲ್ ವಾಷಿಂಗ್ ಪೌಡರ್ನ ಜಾಹೀರಾತು.
ಈಗ ಒಂದ್ ಅನುಮಾನ ಬರಲಿಕ್ಕೆ ಶುರುವಾಯ್ತಾ? ಎಲ್ಲ ಕಡೆಯೂ ಇದೇನು ಹಿಂದೂಗಳೇ ಮುಸ್ಲಿಮರನ್ನ ಕೀಳಾಗಿ ಕಂಡು, ಮುಸ್ಲಿಮರು ಮಾತ್ರ ವಿಶಾಲ ಹೃದಯಿಗಳಾಗಿ ಹಿಂದೂಗಳ ಮೂದಲಿಕೆಗೂ ತಾಳ್ಮೆಯಿಂದ ಪ್ರತಿಕ್ರಿಯಿಸುತ್ತಿದ್ದಾರಲ್ಲ ಎಂದು. ಇಂಥ ಉದಾಹರಣೆಗಳು ಸುಮಾರಿವೆ. ಕೊನೇ ಉದಾಹರಣೆ ಕೊಡ್ತೀನಿ, ನಂತ ಇದರ ಹಣೆಬರವನ್ನು ಅರಿಯೋಣ.
ಟೈಟಾನ್ನ ತನಿಷ್ಕ್ನ ಒಂದು ಜಾಹೀರಾತು. ಮುಸ್ಲಿಂ ಅತ್ತೆ, ಹಿಂದೂ ಸೊಸೆಯ ಸೀಮಂತಕ್ಕೆ ಹಿಂದೂ ಸಂಪ್ರದಾಯದಂತೆ ಭರ್ಜರಿ ತಯಾರಿ ಮಾಡಿರುತ್ತಾಳೆ. ಖುಷಿಯಾಗುವ ಸೊಸೆ, ನಿಮ್ಮಲ್ಲಿ ಇಂಥ ಆಚರಣೆಯೇ ಇಲ್ಲವಲ್ಲ? ಎಂದು ಕೇಳಿದಾಗ, ‘ಮಗಳಿಗಾಗಿ ಇಷ್ಟೂ ಮಾಡದಿದ್ದರೆ ಹೇಗೆ?’ ಎಂದು ಕೇಳಿ ತನಿಷ್ಕ್ನ ನೆಕ್ಲೇಸ್ ಹಾಕುತ್ತಾಳೆ. ಸೊಸೆ ಭಾವುಕಳಾಗುತ್ತಾಳೆ.
2020ರ ಅಕ್ಟೋಬರ್ 12ರಂದು ಹಿಂದೂಗಳು ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಕ್ಕೆ ಹೆದರಿದ ಟೈಟಾನ್, ಈ ಜಾಹೀರಾತನ್ನು ಡಿಲೀಟ್ ಮಾಡಿಸಿದರು.
ಈ ಜಾಹೀರಾತೂ ಚೆನ್ನಾಗೇ ಇತ್ತಲ್ಲ, ಇದರಲ್ಲಿ ವಿವಾದಾತ್ಮಕವೇನಿದೆ ಎಂದು ಕೇಳುತ್ತಿದ್ದೀರಾ?
ಹಾಗಾದರೆ, ಇದನ್ನೇ ಉಲ್ಟಾ ಮಾಡಿ, ಹಿಂದೂ ಹುಡುಗನಿದ್ದು, ಮುಸ್ಲಿಂ ಹುಡುಗಿಯಿರುವ ಹಾಗೆ ಮಾಡಬಹುದಿತ್ತಲ್ಲ? ಮಾಡಿದ್ದರೆ ಏನಾಗುತ್ತಿತ್ತು? ಸಿಂಪಲ್, ತನಿಷ್ಕ್ ಸ್ಟೋರ್ಗಳಲ್ಲಿ ಡೈಮಂಡ್ ಸ್ಟೋನ್ ಇರುವ ಬದಲು ಬಾಂಧವರು ಎಸೆದ ಸ್ಟೋನ್(ಕಲ್ಲು) ಇರುತ್ತಿತ್ತು.
ಸುಮ್ಮನೇ ಊಹೆ ಮಾಡುತ್ತಿಲ್ಲ, 2001ರಲ್ಲಿ ಸನ್ನಿ ಡಿಯೋಲ್ನ ಗದರ್ ಎಂಬ ಚಿತ್ರ ಬಿಡುಗಡೆಯಾಗಿತ್ತು. ಸಿನಿಮಾದ ಒಂದು ದೃಶ್ಯದಲ್ಲಿ ಕೋಮುಗಲಭೆಯಿಂದ ಬಚಾವ್ ಮಾಡುವುದಕ್ಕೆ ಸಿಖ್ ಧರ್ಮದ ಸನ್ನಿ ಡಿಯೋಲ್, ಮುಸ್ಲಿಂ ಹುಡುಗಿಯ ಹಣೆಗೆ ಸಿಂಧೂರ ಇಡುತ್ತಾನೆ. ಅಷ್ಟೇ. ಮುಂದೆ ಚಿತ್ರಮಂದಿರದಲ್ಲಿ ಸೌಂಡು ಬಂದಿದ್ದೆಲ್ಲ ಧಾಂ ಧೂಂ ಎಂಬ ಪೆಟ್ರೋಲ್ ಬಾಂಬ್ ಸದ್ದುಗಳು, ಭಾರತದಲ್ಲಿ ಸುಮಾರು ಗಲಭೆಗಳಾಯಿತು. ಯಾಕಾಗಿ? ಮುಸ್ಲಿಂ ಮಹಿಳೆಯೆಂಬ ಪಾತ್ರದ ಹಣೆಗೆ ಸಿಂಧೂರ ಇಟ್ಟಿದ್ದಕ್ಕಾಗಿ. ಒಂದು ಪಾತ್ರದ ಹಣೆಗೆ ಸಿಂಧೂರ ಇಟ್ಟರೇ ಸಹಿಸಿಕೊಳ್ಳದೇ ಊರೆಲ್ಲ ಬೆಂಕಿ ಇಟ್ಟವರು ಬಹಳ ಬಹಳ ತಾಳ್ಮೆ ಇರುವವರು, ಹಿಂದೂಗಳು ಸರಿ ಇಲ್ಲ, ಸಂಕುಚಿತ ಮನಸ್ಸಿನವರು, ಜಾತಿ ಜಾತಿ ಎನ್ನುವವರು ಎಂಬಿತ್ಯಾದಿ ಜಾಹೀರಾತುಗಳನ್ನ ಮಾಡುವಾಗ ಮೈ ಉರಿಯದೇ ಇರಲು ಸಾಧ್ಯವೇ?
ಸರ್ಫ್ ಎಕ್ಸೆಲ್, ತನಿಷ್ಕ್, ರೆಡ್ ಲೇಬಲ್ನಂಥ ಜಾಹೀರಾತುಗಳು ಕೇವಲ ಒಂದು ಧರ್ಮವನ್ನು ಒಳ್ಳೆಯವರನ್ನಾಗಿ ತೋರಿಸುವ ಒಂದೇ ಒಂದು ಕಾರಣಕ್ಕೆ ಮಾಡಿದರೂ ಸರಿನಪ್ಪಾ ಅಂತ ಒಪ್ಪಿಕೊಳ್ಳಬಹುದು, ಯಾಕಂದ್ರೆ ಎಲ್ಲ ಧರ್ಮದಲ್ಲಿ, ಎಲ್ಲರೂ ಕೆಟ್ಟವರಲ್ಲ. ಇಸ್ಲಾಮಿಕ್ ಉಗ್ರಗಾಮಿಗಳಿದ್ದರೂ, ಒಳ್ಳೆಯ ಮುಸ್ಲಿಮರೂ ಇದ್ದಾರೆ. ಆದರೆ ಇಲ್ಲಿ, ಇಂಥ ಜಾಹೀರಾತಿನಲ್ಲಿ ಇವೆಲ್ಲ ನಾರ್ಮಲ್ ಎಂದು ನಮಗೆ ಅನಿಸಿದರೂ ಇದರ ಹಿಂದೆ ದೀರ್ಘಕಾಲದ ಯೋಜನೆಯುಳ್ಳ ದೊಡ್ಡ ಅಜೆಂಡಾಗಳೇ ಇರುತ್ತವೆ.
ಅದೇ, ಲವ್ ಜಿಹಾದ್.
ಇದೆಂಥದ್ದು ಹೊಸ ಆ್ಯಂಗಲ್ ಎನ್ನಬೇಡಿ.. ಯಾಕಂದ್ರೆ ಇದು ಬಹಳ ವರ್ಷಗಳಿಂದಲೇ ನಡೆದುಕೊಂಡು ಬಂದಿದೆ. ಹಿಂದೂ ಹೆಣ್ಣುಮಕ್ಕಳನ್ನ ಮದುವೆಯಾದರೆ ಜಾತಿಗೆ ಇಂತಿಷ್ಟು ಎಂದು ಹಣ ಕೊಡುವ ಸ್ಕೀಮ್ಗಳೂ ಇದ್ದ ಪೋಸ್ಟರ್ಗಳನ್ನ ನೋಡಿದ್ದೇವೆ. ಅದಕ್ಕಾಗಿ ಕೆಲ ಮುಸ್ಲಿಂ ಹುಡುಗರು ಹಿಂದೂಗಳ ಹೆಸರಿಟ್ಟುಕೊಂಡು ಮದುವೆಯಾದ ಮೇಲೆ ಮುಸ್ಲಿಂ ಎಂದು ಹೇಳಿ, ವಿಚ್ಛೇದನ ನೀಡಿದ್ದೂ ಇದೆ. ಆದರೆ, ಇವೆಲ್ಲ ರಾಕ್ಷಸಿ ಸ್ವರೂಪದ ಮದುವೆ. ಹುಡುಗಿಯೇ ಸ್ವ-ಇಚ್ಛೆಯಿಂದ ಮುಸ್ಲಿಮನನ್ನು ವರಿಸಿದರೆ? ಆಗ ಯಾವುದೇ ಸಮಸ್ಯೆಯೇ ಇರುವುದಿಲ್ಲ ಎಂಬುದು ಇವರ ಐಡಿಯಾ. ಆದರೆ, ಇದಕ್ಕೂ ಕಲ್ಲು ಹಾಕಿದ ಬಜರಂಗದಳದಂಥ ಸಂಘಟನೆ, ಹಿಂದೂ ಹುಡುಗಿ ಮುಸ್ಲಿಮನ ಜತೆ ಕಂಡರೆ ಸಾಕು ಕೈಗೆ ಸಿಕ್ಕಿದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಯುವ ಜನತೆಗೆ, ಪೋಷಕರಿಗೆ ಮುಸ್ಲಿಂ ಕುಟುಂಬ ಎಂದರೆ ಅಕ್ಕರೆಯ ಬೀಡು, ಮಮತೆಯ ಗೂಡು, ಇದೊಂಥರಾ ಫ್ಯಾಷನ್ ಎಂದೆಲ್ಲ ಮನವರಿಕೆ ಮಾಡಿಕೊಟ್ಟರೆ, ಯಾವ ಕಾನೂನೂ-ಸಂಘಟನೆಯೂ ಬರುವುದಿಲ್ಲ ಎಂಬುದು ಹೊಸ ಐಡಿಯಾ. ಇದನ್ನು ಸಾಕಾರ ಮಾಡುವುದಕ್ಕೆ ಇರುವ ಒಂದೇ ಒಂದು ಮಾರ್ಗ, ಜಾಹೀರಾತು.
ನಂಬಿಕೆ ಬರ್ತಾ ಇಲ್ವಾ? ನಿನ್ನಷ್ಟಕ್ಕೆ ನೀನೇ ಕಲ್ಪಿಸಿಕೊಂಡು ಏನೇನೋ ಹೇಳ್ತಿದ್ಯಾ ಗುರೂ ಅಂತ ಹೇಳ್ತಾ ಇದೀರಾ? ನನ್ ಹತ್ರ ಇನ್ನೂ ಉದಾಹರಣೆಗಳಿವೆ. ಈ ಜಾಹೀರಾತು ಮಾಡುವವರ ಹಿನ್ನೆಲೆಯ ಬಗ್ಗೆ ಮತ್ತು ಅದನ್ನು ಜಿಹಾದಿಗಳು ಹೇಗೆಲ್ಲ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ.
ಇದೇ ತನಿಷ್ಕ್ ಕಂಪನಿ ತಾನು ಡಿಲೀಟ್ ಮಾಡಿದ ಆ ಜಿಹಾದಿ ಜಾಹೀರಾತನ್ನ ಅದೇ ಶೂಟ್ ಮಾಡಲ್ಲ. ಅದನ್ನು ಒಂದು ನಿರ್ಮಾಣ ಸಂಸ್ಥೆಗೆ ಕೊಡುತ್ತದೆ. ಕಂಪನಿಗೆ ಒಟ್ನಲ್ಲಿ ಚೆನ್ನಾಗಿ ತಮ್ಮ ಚಿನ್ನಾಭರಣವನ್ನು ಮಾರ್ಕೆಟ್ ಮಾಡುವ ಒಂದು ಸುಂದರ, ಭಾವನಾತ್ಮಕ ವೀಡಿಯೋ ಬೇಕು ಅಷ್ಟೇ. ಜಾಹೀರಾತು ಸಂಸ್ಥೆಯ, ಅಲ್ಲಿ ಕೆಲಸ ಮಾಡುವವರ ಹಿನ್ನೆಲೆ ತಿಳಿದಿರುವುದಿಲ್ಲ. ಹಾಗೇ, ಈ ತನಿಷ್ಕ್ ಜಾಹೀರಾತು ನಿರ್ಮಿಸಿದ ಯುವತಿಯ ಹೆಸರು ಮೋಯೀತಾ(ಹೆಸರು ಬದಲಾಯಿಸಲಾಗಿದೆ) ಎಂದು. ಕೇಂದ್ರ ಸರ್ಕಾರದ ಇತ್ತೀಚಿನ ಸಿಎಎ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯೆಂಬ ಷಡ್ಯಂತ್ರಕ್ಕೆ ಬೆಂಬಲ ಕೊಟ್ಟಿದ್ದಳು ಈಕೆ. ಇದನ್ನ ಫೇಸ್ಬುಕ್ನಲ್ಲಿ ಆಕೆಯೇ ಬರೆದುಕೊಂಡಿದ್ದಾಳೆ. ಅಷ್ಟೇ ಅಲ್ಲ, ಶಹೀನ್ಭಾಗ್ ಧರಣಿಯ ಸಮಯದಲ್ಲಿ ಒಂದು ಧರ್ಮದವರು ‘ನಿಮ್ಮನ್ನ ನೋಡ್ಕೊತ್ತೀವಿ’ ಎಂದು ಹಾಡಿದ ಹಾಡುಗಳನ್ನೆಲ್ಲ ಶೇರ್ ಮಾಡಿಕೊಂಡಿದ್ದಾಳೆ ಈಕೆ.
ಇಂಥ ಹಿನ್ನೆಲೆಯಿರುವ ಮಹಿಳೆಯಿಂದ, ಹಿಂದೂ ಮಗಳು ಮುಸ್ಲಿಂ ಮನೆಗೆ ಸೊಸೆಯಾಗುವ ಜಾಹೀರಾತು ನಿರ್ಮಾಣವಾದರೆ, ಅದನ್ನ ಸಾಮರಸ್ಯ ಅಂತೆಲ್ಲ ನಾವ್ ನಾವೇ ಭ್ರಮಿಸಿಕೊಳ್ಳುವುದಕ್ಕೆ ನಾವೇನು ಆಕೆಯ ಬಾಯ್ಫ್ರೆಂಡ್ಗಳೇ?
ಇದಕ್ಕೂ ನಿಮ್ಮಲ್ಲಿ ಏನಾದ್ರೂ ತಕರಾರಿದ್ದರೆ, ಮತ್ತೊಂದು ಕಟ್ಟ ಕಡೆಯ ಉದಾಹರಣೆ ಕೊಡುತ್ತೇನೆ.
ತನಿಷ್ಕ್ನ ಈ ಹಬ್ಬದ ಕಲೆಕ್ಷನ್ ಹೆಸರು ಏಕತ್ವಂ ಎಂದು. ಇದರ್ಥ ‘ಏಕತೆ’. ಇದನ್ನ ಇವರು ಹಿಂದೂ ಹಬ್ಬದಲ್ಲಿ ಹಿಂದೂ ಹೆಣ್ಣುಮಗಳು ಮುಸ್ಲಿಂ ಕುಟುಂಬಕ್ಕೆ ಸೇರಿಕೊಂಡಿರುವ ಹಾಗೆ ತೋರಿಸುತ್ತಿದ್ದಾರಲ್ಲವೇ? ಹಾಗಾದರೆ ಈ ಜಗತ್ತಿನಲ್ಲಿ ಎಂಥೆಂಥ ಕಾಕತಾಳೀಯ ಇದೆ ನೋಡಿ.. ತಮಿಳುನಾಡಿನಲ್ಲಿ ‘ಏಗತ್ವಂ’ ಎಂಬ ಇದೇ ಹೆಸರಿನಲ್ಲಿ ಅಲ್ಲಾಹುವೇ ಎಲ್ಲರ ದೇವರು, ಅವನೊಬ್ಬನೇ ದೇವರು ಎಂದು ಸಾರಲು ಕೆಲ ಸಂಘಟನೆಗಳು ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಮ್ಯುನಿಟಿ-ಗ್ರೂಪ್ಗಳನ್ನು ಮಾಡಿಕೊಂಡಿದೆ. ತಮಿಳುನಾಡಿನಲ್ಲಿನ ಮುಸ್ಲಿಮರಿಂದ ಹಿಡಿದು, ಐಸಿಸ್ನ ಉಗ್ರಗಾಮಿಗಳವರೆಗೂ ಎಲ್ಲರೂ ತೋರು ಬೆರಳು ಒಂದನ್ನೇ ಎತ್ತಿ ಪೋಸು ಕೊಡುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲೇ ಲಭ್ಯವಿದೆ. ಸರ್ವದೇವ ನಮಸ್ಕಾರಂ ಕೇಶವಂ ಪ್ರತಿಗಚ್ಛತಿ ಎಂದು ನಾವು ನಂಬುವುದಕ್ಕೂ, ಅಲ್ಲಾಹುವನ್ನು ಒಪ್ಪಿಕೊಳ್ಳದವರು ಕಾಫಿರರು ಎಂದು, ಆ ಮೂಲಕ ಕಾಫಿರರನ್ನು ಶಿಕ್ಷಿಸುವ ಅವರ ಏಕತೆಗೂ, ನಮ್ಮ ಏಕತೆಗೂ ಬಹಳ ವ್ಯತ್ಯಾಸ ಇದೆ ಸ್ವಾಮಿ.
ಪವಿತ್ರ ಕುರಾನ್ ಹೆಸರಿನಲ್ಲಿ ‘ಕುರಾನ್ ಸರ್ಕಲ್’ ಎಂಬ ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡು ಉಗ್ರವಾದ ಚಟುವಟಿಕೆಗಳನ್ನು ಪ್ಲ್ಯಾನ್ ಮಾಡುವ ಮಂದಿಯ ಬಗ್ಗೆ ಇತ್ತೀಚೆಗಷ್ಟೇ ಎನ್ಐಎ ವಿವರವಾಗಿ ಹೇಳಿದೆ. ಕುರಾನ್ ಹೆಸರಲ್ಲೇ ಇಂಥ ದಂಧೆ ಮಾಡುವ ಮಕ್ಕಳಿರಬೇಕಾದರೆ, ಇವರ ‘ಏಕತೆ’ಗಾಗಿ ಶ್ರಮಿಸುತ್ತಾರೆ ಎಂದು ನಾವು ನಂಬಿದರೆ, ಏನ್ ಡದ್ ನನ್ಮಕ್ಳಪ್ಪಾ ನೀವು ಎಂದು ಬಿನ್ ಲಾಡೆನ್ನ ಆತ್ಮ ನಗುವುದರಲ್ಲಿ ಅಚ್ಚರಿಯೇ ಇಲ್ಲ.
ಇಂಥ ಹೆಸರನ್ನು ನಮ್ಮ ಹಿಂದೂಗಳ ಒಂದು ಬ್ರ್ಯಾಂಡ್ಗೆ ಇಟ್ಟಿರುವುದೇ ಭಯ ಹುಟ್ಟಿಸುವಂಥದ್ದು. ಇಡಲೇಬಾರದು ಅಂತಲ್ಲ, ಆದರೆ, ಏಗತ್ವಂ ಎಂದು ತಮಿಳುನಾಡಿನಲ್ಲಿರುವುದಕ್ಕೂ ಹೊಸೂರ್ನಲ್ಲಿರುವ ಟೈಟಾನ್ ಕಚೇರಿ ಏಕತ್ವಂ ಎಂದು ಹೆಸರಿಡುವುದಕ್ಕೂ ಏನಾದರೂ ಸಂಬಂಧವಿದೆಯೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡಾಗ ಎದೆಯಲ್ಲಿ ಹುಟ್ಟುವ ಭಯಕ್ಕೆ ಹೋಲಿಕೆಯಿಲ್ಲ.
ನೀವು ಎಲ್ಲಿಯವರೆಗೆ ಇವೆಲ್ಲವನ್ನೂ ಬುಲ್ಶಿಟ್ ಎನ್ನಬಹುದೆಂದರೆ, ನಾಳೆ ನಮ್ಮ ಮನೆಯ ಹೆಣ್ಣುಮಗಳು ಜಿಹಾದಿಯ ಪಾಲಾಗುವವರೆಗೆ, ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲೇ ಒಬ್ಬ ಐಸಿಸ್ಗೆ ಬೆಂಬಲ ನೀಡುವ ಶಂಕಿತ ಡಾಕ್ಟರ್ನನ್ನು ಎನ್ಐಎ ಎತ್ತಾಕ್ಕೊಂಡು ಹೋದ್ರಲ್ಲ ಅಲ್ಲಿಯವರೆಗೆ ಅಥವಾ ನಮ್ಮ ಕಂಪನಿಯಲ್ಲಿ ಜಾಹೀರಾತು ಮಾಡುವವನೇ ದೇಶದ ವಿರುದ್ಧದ ಹೋರಾಟದಲ್ಲಿ ಇದ್ದನಲ್ಲ ಎಂದು ಗೊತ್ತಾಗುವವರೆಗಷ್ಟೇ. ಇನ್ನೂ ಎಚ್ಚೆತ್ತುಕೊಳ್ಳದೇ ಫ್ಯಾಷನ್ ಎಂಬ ಹೆಸರಿನಲ್ಲಿ ಬರುವ ಇಂಥ ಜಾಹೀರಾತನ್ನು ವಿರೋಧಿಸದೇ ಸುಮ್ಮನೇ ಇದ್ದರೆ, ನಾಳೆ ಮಿಸ್ಟರ್ ಜಿಹಾದ್ ಎಂಬ ಟೈ ಕಟ್ಟಿ ಬರುವ ಸೇಲ್ಸ್ಮನ್ ನಿಮ್ಮ ಮನೆಯ ಹೊಸ್ತಿಲಲ್ಲೇ ಬಂದು ನಿಂತಾಗ ಬಗ್ಗಿ ಕತ್ತು ಕೊಡದೇ ಬೇರೆ ದಾರಿಯೇ ಇರುವುದಿಲ್ಲ.