ನಕ್ಷತ್ರಿಕ ಹೇಳಿದ್ದು ಸತ್ಯ, ಹರಿಶ್ಚಂದ್ರ ಹೇಳಿದ್ದಲ್ಲವಂತೆ!

 

ಧಿಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ನಡೆದು ಸೆಪ್ಟೆಂಬರ್‌ 11ಕ್ಕೆ ಒಂದು ತಿಂಗಳಾಯಿತು. ಆಗಸ್ಟ್‌ ಹನ್ನೊಂದರ ಆ ರಾತ್ರಿ ನಾನು ಕಚೇರಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ, ಒಂದು ಸುದ್ದಿ ಬಂತು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಗಲಭೆ ಅಂತೆ ಎಂದು.

ಸ್ಥಳದಿಂದ ಬರುತ್ತಿದ್ದ ಸುದ್ದಿ ಬಹಳ ಅಚ್ಚರಿ ತರಿಸಿತ್ತು. ಕೆಲ ದಿನಗಳ ಹಿಂದಷ್ಟೇ ಪಾದರಾಯನಪುರದ ಗಲಭೆಯ ಹಾಗೇ ಇದೂ ಇತ್ತಾ ಎಂದು ಪ್ರಶ್ನೆ ಮಾಡಿದರೆ, ಇಲ್ಲ ಇದರ ಮುಂದೆ ಅದೆಲ್ಲ ಇದರ ಮುಂದೆ ಏನೂ ಇಲ್ಲ ಎಂದು ಹೇಳಿದರು.
ಆಗಿದ್ದಿಷ್ಟೇ – ಅದ್ಯಾರೋ ಒಬ್ಬ ಪ್ರವಾದಿಗೆ ಬಯ್ದನಂತೆ. ಮುಸ್ಲಿಮರು ಸೇರಿ ದೂರು ಕೊಡುವುದಕ್ಕೆ ಹೋದಾಗ ಸ್ವಲ್ಪ ತಡ ಮಾಡಿದ್ದಕ್ಕೆ ಎಲ್ಲರೂ ಆ ಆರೋಪಿಯ ಮನೆ ಧ್ವಂಸ ಮಾಡಿದ್ದಲ್ಲದೇ ಪೊಲೀಸ್‌ ಠಾಣೆ, ಡಿಸಿಪಿ ಕಾರು, ಸಾರ್ವಜನಿಕ ಆಸ್ಥಿಪಾಸ್ತಿ ಎಲ್ಲವನ್ನೂ ಸುಟ್ಟರು. ಹುಚ್ಚುತನ ಅಲ್ವಾ ಇದು?

ಈ ಪ್ರಕರಣದ ಬಗ್ಗೆ ಒಂದು ಸತ್ಯ ಶೋಧನಾ ಸಮಿತಿ ರಚನೆಯಾಗಿ ಒಂದಷ್ಟು ಮಾಹಿತಿಯನ್ನು ಕಲೆ ಹಾಕಿ, ಯಾರಾರ‍ಯರು ಇದರಲ್ಲಿ ಭಾಗಿಯಾಗಿದ್ದರು, ಅವರ ಮಾಹಿತಿ ಏನು ಎಂಬುದನ್ನೆಲ್ಲ ವರದಿಯಲ್ಲಿ ಉಲ್ಲೇಖಿಸಿ, ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಕೇಳಿದರು.

ವರದಿಯಲ್ಲಿದ್ದ ಅಂಶಗಳು:

*ಈ ಗಲಭೆಯು ಪೂರ್ವನಿಯೋಜಿತ
* ಈ ಗಲಭೆಗೆ ಕಾರಣವೇ ಎಸ್‌ಡಿಪಿಐ ಮತ್ತು ಪಿಎಫ್‌ಐ.
* ಹಿಂದೂಗಳ ಮನೆ ಮತ್ತು ಹಿಂದೂಗಳಿರುವ ಪ್ರದೇಶಗಳನ್ನೇ ಟಾರ್ಗೆಟ್‌ ಮಾಡಲಾಗಿತ್ತು.
* ಕೆಲ ಸ್ಥಳೀಯರೊಂದಿಗೆ ಮತ್ತು ಸಂತ್ರಸ್ತರೊಡನೆ ಮಾತಾಡಿದ ಮೇಲೆ ತಿಳಿದದ್ದೇನೆಂದರೆ, ಸ್ಥಳೀಯರು ಗಲಭೆಯಲ್ಲಿ ಭಾಗಿಯಾಗಿದ್ದಲ್ಲದೇ, ಅವರಿಗೆ ಗಲಭೆ ಆಗುವ ದಿನಾಂಕ ಸಹ ಗೊತ್ತಿತ್ತು ಎಂದಿದ್ದಾರೆ.
* ಮುಸ್ಲಿಮರ ಪ್ರಾಬಲ್ಯ ಹೆಚ್ಚಳಕ್ಕಾಗಿ ಗಲಭೆ

ಹೀಗೆ ಒಂದಷ್ಟು ಸಂಗತಿಗಳನ್ನು ಬಯಲು ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿಪಿಐ, ಈ ಸತ್ಯ ಶೋಧನೆಯಲ್ಲಿರುವವರೆಲ್ಲರೂ ಸಂಘ ಪರಿವಾರಕ್ಕೆ ಸೇರಿದವರು. ಸಂತೋಷ್‌ ತಮ್ಮಯ್ಯ ಪ್ರವಾದಿಯ ಬಗ್ಗೆ ಮಾತಾಡಿದ್ದ ಎಂಬೆಲ್ಲ ಹೇಳಿಕೆಗಳು ಬಂದವು.
ಈಗ ಪ್ರಶ್ನೆ ಇರುವುದು ಸತ್ಯ ಶೋಧನೆಯ ವರದಿ ಸರಿ ಇದೆಯೋ ಇಲ್ಲವೋ ಎಂಬುದು ಮತ್ತು ಸತ್ಯ ಹೇಳುವ ಅಧಿಕಾರ ಇದೆಯೋ ಇಲ್ಲವೊ ಎಂಬುದು.

ಮೊದಲಿಗೆ ಅವರ ವರದಿ ಸರಿ ಇದೆಯೋ ಇಲ್ಲವೋ ಎಂಬುದಕ್ಕೆ ಒಂದೇ ಒಂದು ನಿದರ್ಶನ ಸಾಕು. ಈಗ ಆ ಘಟನೆಯಲ್ಲಿ ಮುಸ್ಲಿಮರ ಪಾತ್ರವೇ ಇಲ್ಲದಿದ್ದರೆ, ಘಟನೆಯ ಮಾರನೇ ದಿನ ಮೌಲ್ವಿಗಳೆಲ್ಲ ಅಲ್ಲಿನ ಶಾಸಕ ಅಖಂಡ ಶ್ರೀನಿವಾಸಮೂರ್ತಿಯ ಮನೆಗೆ ಬಂದು ಸಂತಾಪ ಸೂಚಿಸಿ, ನಿಮ್ಮ ಮನೆಯ ಮರುನಿರ್ಮಾಣವನ್ನು ನಮ್ಮ ದುಡ್ಡಲ್ಲೇ ಮಾಡ್ತೀವಿ ಎಂದು ಆಶ್ವಾಸನೆ ಕೊಡುವ ಅಗತ್ಯವೇನಿತ್ತು?

ಆ ಏರಿಯಾದಲ್ಲಿ ಯಾರೊಬ್ಬ ಪಾದ್ರಿಯೂ, ಸಂತನೂ ಬಂದು ಮನೆ ಕಟ್ಟಿಕೊಡುವ ಆಶ್ವಾಸನೆ ಕೊಟ್ಟಿಲ್ಲ. ಇವರೇ ಯಾಕೆ ಬಂದರು?

ಇದೆಲ್ಲ ಬಿಡಿ, ಅಲ್ಲಿ ಆಗಿರುವ ಘಟನೆಯನ್ನು ಯಥಾವತ್‌ ಹೇಳಿದರೆ ಯಾರು ಹೇಳಿದರೆ ಇವರಿಗೇನು? ಸತ್ಯ ಎಂಬುದು ನನ್ನ ಸತ್ಯ ಮತ್ತೆ ನಿನ್ನ ಸತ್ಯ ಅಂತೆಲ್ಲ ಇದ್ದರೆ ಅದಕ್ಕೆ ಸತ್ಯ ಎಂದು ಕರೆಯುವುದೆಲ್ಲಿಂದ? ಇವರ ಆರೋಪ ಏನೆಂದರೆ, ಆರೆಸ್ಸೆಸ್‌ ಹೇಳಿದ್ದರೆ ಅದು ಸತ್ಯ ಎಂದಲ್ಲ ಎಂಬುದು. ಅವರು ದುರುದ್ದೇಶದಿಂದ ಮುಸ್ಲಿಮರು ಮತ್ತು ಮುಸ್ಲಿಂ ಸಂಘಟನೆಗಳ ಮೇಲೆ ಆರೋಪ ಹೊರಿಸುತ್ತಾರೆ ಎಂಬುದು.

ಹಾಗಾದರೆ ಸ್ವಲ್ಪ ಇತಿಹಾಸ ನೋಡೋಣ. 2002ರಲ್ಲಿ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಮಾನವ ಬಾಂಬ್‌ ದಾಳಿಯಾಯಿತು. 204 ಜನ ಸತ್ತು 209 ಜನ ಗಾಯಗೊಂಡರು. ಇದಾದ ನಂತರ ಅಲ್ಲಿ ಆರೆಸ್ಸೆಸ್‌ ಸತ್ಯ ಶೋಧನಾ ಸಮಿತಿ ಮಾಡಿ ಯಾರು ಈ ಘಟನೆಗೆ ಕಾರಣ ಎಂದೆಲ್ಲ ವರದಿ ನೀಡಿಲ್ಲ. ಅದೆಲ್ಲಕ್ಕಿಂತ ಮುಂಚೆಯೇ ಘಟನೆಯ ನಂತರ ಜಿಮಾಹ್‌ ಇಸ್ಲಾಮಿಯಾ ಮತ್ತು ಅಲ್‌ ಖೈದಾಗಳು ಹೊಣೆಯನ್ನು ಹೊತ್ತುಕೊಂಡವು. ಅವು ಹೊಣೆ ಹೊತ್ತುಕೊಳ್ಳಕೊಳ್ಳದೇ ಇರುತ್ತಿದ್ದರೂ ವಿಶ್ವಕ್ಕೆ ಸತ್ಯ ಏನೆಂಬುದು ತಿಳಿಯಯದೇನೂ ಇರುತ್ತಿರಲಿಲ್ಲ. ಇದು ಇಸ್ಲಾಮಿ ಭಯೋತ್ಪಾದಕರ ದಾಳಿ ಎಂದು ಆರೆಸ್ಸೆಸ್‌ ಬಂದು ಹೇಳದೇ ಇದ್ದರೂ ವಿಶ್ವಕ್ಕೆ ಸತ್ಯ ತಿಳಿಯುತ್ತಿತ್ತು.

ಸೆಪ್ಟೆಂಬರ್‌ 11, 2001. ಈ ದಾಳಿಯಂತೂ ನೆನಪಿರಬೇಕಲ್ಲ. ಈ ದಾಳಿಯಲ್ಲಿ 2,996 ಜನ ಸತ್ತಿದ್ದರು. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಅಲ್‌ ಖೈದಾ ಅದರ ಹೊಣೆಯನ್ನು ಹೆಮ್ಮೆಯಿಂದ ಹೊತ್ತುಕೊಂಡಿತ್ತು.

21 ಏಪ್ರಿಲ್‌ 2019ರಂದು ಈಸ್ಟರ್‌ ಹಬ್ಬದ ದಿನದಂದೇ ಕೊಲಂಬೋದ ಮೂರು ಚರ್ಚ್‌ಗಳ ಮೇಲೆ ಆತ್ಮಹತ್ಯಾ ದಾಳಿ ನಡೆಯಿತು. ತನಿಖೆಯಲ್ಲಿ ತೌಹೀತ್‌ ಜಮಾತ್‌, ಐಸಿಸ್‌ಗಳ ಕೈವಾಡ ಪತ್ತೆಯಾಯಿತು. ಹಾಗೆ ಪತ್ತೆಯಾಗಲು ಆರೆಸ್ಸೆಸ್‌ ಏನೂ ಕೊಲಂಬೋ ತನಿಖಾಧಿಕಾರಿಗಳಿಗೆ ಸಹಕಾರ ನೀಡಿರಲಿಲ್ಲ.
7 ಜನವರಿ 2015ರಲ್ಲಿ ಫ್ರಾನ್ಸಿನ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ದಾಳಿಯ ಉದ್ದೇಶಕ್ಕೆ ಸತ್ಯ ಶೋಧನಾ ಸಮಿತಿಯ ಅಗತ್ಯವಿತ್ತೇ?

ಅಲ್ರೀ ನೀವ್‌ ಮಾಡೋ ಕೆಲಸವನ್ನ ಎಷ್ಟು ದಿನ ಅಂತ ಮುಚ್ಚಿಡಕ್ಕೆ ಸಾಧ್ಯ? ತೇಪೆ ಹಚ್ಚುವುದಕ್ಕೆ ಸಾಧ್ಯ? ಅವನ್ಯಾರೋ ಒಬ್ಬ ಒಂದೂರಲ್ಲಿ ತಾನು ಮಲವಿಸರ್ಜನೆ ಮಾಡುವುದು ಗೊತ್ತಾಗಬಾರದು ಎಂದು ನೀರಲ್ಲಿ ಮುಳುಗಿ ಮಾಡಿದನಂತೆ. ಆದರೆ ಅವನು ನೀರಿನಿಂದ ಏಳುವುದಕ್ಕಿಂತ ಮುಂಚೆ ಅವನ ಮಲ ತೇಲುತ್ತಿತ್ತಂತೆ. ಈ ಕೆಲ ಸಂಘಟನೆಗಳದ್ದೂ ಹಾಗೇ.. ಇವರು ಮಾಡಿದ್ದನ್ನ ಮಾಡಿದ್ದಾರೆ ಎಂದು ಆರೆಸ್ಸೆಸ್‌ ಹೇಳಲೇ ಬೇಕೆಂದಿಲ್ಲ. ಜಗತ್ತಿಗೆ ಗೊತ್ತಾಗುವ ಮುನ್ನವೇ ಒಂದೊಂದು ಸಂಘಟನೆಗಳು ಹೊಣೆ ಹೊತ್ತಾಗಿರುತ್ತದೆ. ಅಷ್ಟೇ ಅಲ್ಲ, ಇಂಥ ಹೊಣೆ ಹೊತ್ತುಕೊಳ್ಳುವುದಕ್ಕೂ ಪೈಪೋಟಿ ಇರುತ್ತೆ. ಇನ್ನು ಆರೆಸ್ಸೆಸ್‌ ಎಂಬುದು ಇವರ ಮತ್ತೊಂದು ಮಲ ವಿಸರ್ಜನೆಯ ಮುಚ್ಚಿಕೊಳ್ಳುವ ನೆಪ ಮಾತ್ರ.

ಇನ್ನು ನವೀನ್‌ ಎಂಬುವವನು ಪ್ರವಾದಿಗೆ ಬಯ್ದಿದ್ದು, ಅದರಿಂದ ಜನರು ರೊಚ್ಚಿಗೆದ್ದಿದ್ದು ಅವೆಲ್ಲ ಆದರೂ ನಿಜವೇ?ಅದೂ ಇಲ್ಲ. ಈ ಗಲಭೆ ಪೂರ್ವನಿಯೋಜಿತ ಎಂಬುದನ್ನು ಒಂದು ಆಡಿಯೋ ಟೇಪ್‌ ಸಾರಿ ಸಾರಿ ಹೇಳಿತ್ತು. 10ನೇ ಆಗಸ್ವ್‌ 2020ರ ರಾತ್ರಿ ಬಿಡುಗಡೆಯಾದ ಆಡಿಯೋ ಟೇಪ್‌ನಲ್ಲಿ, ಅವರು ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಪ್ರಯತ್ನ ಆರಂಭಿಸಿದ್ದಾರೆ. ನನ್ನ ಪ್ರಿಯ ಮುಸ್ಲಿಂ ಸಹೋದರರು ಮತ್ತು ಸಹೋದರಿಯರೇ, ಬನ್ನಿ ಎಲ್ಲರೂ ಒಟ್ಟಾಗಿ ನಿಲ್ಲೋಣ, ಒಟ್ಟಾಗಿ ಸೇರಿ ನರೇಂದ್ರ ಮೋದಿಯು ಆಗಸ್ವ್‌ 15ರಂದು ರಾಷ್ಟ್ರ ಧ್ವಜ ಹಾರಿಸುವುದನ್ನು ತಡೆಯೋಣ. ನಾವು ನಮ್ಮ ಸಿಖ್‌ ಸಹೋದರ ಸಹೋದರಿಯರಿಂದ ಕಲಿಯಬೇಕು ಅವರು ಹೇಗೆಲ್ಲ ಪ್ರತ್ಯೇಕ ಖಾಲಿಸ್ಥಾನಕ್ಕೆ ರಿಫರೆಂಡಂ 2020 ಮಾಡುತ್ತಿದ್ದಾರೆ ಎಂದು. ನಾವೂ ಅವರಂತೇ ಪ್ರತ್ಯೇಕ ಮುಸ್ಲಿಂ ರಾಷ್ಟ್ರ ನಿರ್ಮಾಣದತ್ತ ಕೆಲಸ ಮಾಡೋಣ. ಅಲ್ಲಾ ಆಫಿಜ…. ಎಂದು ಉರ್ದುನಲ್ಲಿ ಹೇಳಿದ್ದರು. ಇದನ್ನು ಕೆಲವೇ ಮಾಧ್ಯಮಗಳು ವರದಿ ಮಾಡಿವೆ.

10ನೇ ತಾರೀಖಿಗೆ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಮಾತನಾಡುವಾತನ ಆಡಿಯೋ ವೈರಲ್‌ ಆಗಿ, 11ನೇ ತಾರೀಖಿನ ರಾತ್ರಿ ಬೆಂಗಳೂರಿನಲ್ಲಿ ಕ್ಷ ುಲ್ಲಕ ಕಾರಣಕ್ಕೆ ದೊಡ್ಡ ಗಲಭೆ ಆಗುತ್ತದೆ ಎಂದರೆ, ಇದನ್ನು ಪೂರ್ವನಿಯೋಜಿತ ಎಂದು ಆರೆಸ್ಸೆಸ್‌ನ ಒಲವು ಇರುವವರು ಹೇಳಿದರೆ ಕೋಮುವಾದ ಹೇಗಾಗುತ್ತದೆ? ಅವರು ಹೊಸತನ್ನೇನೂ ಹೇಳಿಲ್ಲವಲ್ಲ?

ಅದೆಲ್ಲ ಬಿಡಿ, ಈಗ ಕಾಂಗ್ರೆಸ್‌ನವರೂ ಸತ್ಯ ಶೋಧನಾ ಸಮಿತಿಯನ್ನು ರಚಿಸಿಕೊಂಡಿದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ದಾಳಿ ಆಗಿರುವುದೆಲ್ಲವೂ ಹಿಂದೂಗಳು ಕ್ರಿಶ್ಚಿಯನ್ನರ ಮನೆಯ ಮೇಲೇ ಆಗಿರುವಾಗ ಇವರ ಸತ್ಯ ಶೋಧನೆ ಸಮಿತಿ ಏನ್‌ ಬದನೇಕಾಯಿ ಶೋಧನೆ ಮಾಡುವುದಕ್ಕಿರುವುದು ಎಂಬುದೇ ಅರ್ಥವಾಗಲ್ಲ. ಹಾಗಾದರೆ ಅವರು ಕೊಟ್ಟಿದ್ದು ಮಾತ್ರ ಸತ್ಯ, ಸಂಘ ಪರಿವಾರಕ್ಕೆ ಹತ್ತಿರವಿರುವ ಕೆಲ ಮಂದಿಗೆ ಸತ್ಯ ಹೇಳುವ ಅಧಿಕಾರವೇ ಇಲ್ಲ ಎನ್ನುವುದು ಯಾವ ಸಿದ್ದಪ್ಪನ್‌ ನ್ಯಾಯ?

ಈ ಮಧ್ಯೆ ಮಾನ್ಯ ಸಿದ್ದರಾಮಯ್ಯನವರು ಗಾಂಧಿ ತಾತನ ಹಾಗೆ ಎಲ್ಲ ಹಿಂದೂ ಮತ್ತು ಮುಸ್ಲಿಮರು ಶಾಂತಿ ಕಾಪಾಡಬೇಕು ಎಂದು ಟ್ವೀಟ್‌ ಮಾಡಿದ್ದಾರೆ. ಅಲ್ರೀ, ಡಿಜೆ ಹಳ್ಳಿ ಗಲಭೆಯಲ್ಲಿ ಹಿಂದೂಗಳು ಎಲ್ಲಿ ಶಾಂತಿ ರಸ್ತೆಗಿಳಿದಿದ್ದರು? ಪೊಲೀಸ್‌ ಠಾಣೆಯ ಮೇಲೆ ಯಾವಾಗ ಕಲ್ಲೆಸೆದಿದ್ದರು? ಅದೆಲ್ಲ ಬಿಡಿ, ಎಫ್‌ಐಆರ್‌ನಲ್ಲಿ ಯಾವ ಧರ್ಮಕ್ಕೆ ಸೇರಿದವರ ಹೆಸರಿದೆ ಅಂತಾದ್ರೂ ನೋಡಿ ಒದರಬೇಕಲ್ವೇ? ರಾಮ ಕೃಷ್ಣ ಶಿವ ರಂಗ ಸುರೇಶ ರಮೇಶ ಎಂಬ ಒಂದೇ ಒಂದು ಹೆಸರಿಲ್ಲ.. ಇದ್ದಿದ್ದೆಲ್ಲ ಆ ಉಲ್ಲಾ, ಈ ಉಲ್ಲಾ.. ಒಂದೋ ಮುದುಕ ರಾಜಕಾರಣಿಗಳು ವಯಸ್ಸಾದ ಮೇಲೆ ಯಾರನ್ನಾದರೂ ಇಟ್ಕೊಬೇಕು(ಪತ್ರಿಕಾ ಹೇಳಿಕೆಯ ಸಲಹೆ ಕೊಡಲು ಮಾತ್ರ) ಇಲ್ಲವಾದರೆ ವಯೋಸಹಜವಾದ ಬುದ್ಧಿಗೆ ತೋಚಿದ್ದನ್ನು ಗೀಚುವುದನ್ನು ನಿಲ್ಲಿಸಬೇಕು. ಎರಡೂ ಮಾಡಲ್ಲ ನನ್ನ ಆಡಳಿತ ಮುಗೀತು ಎಂದು ಮನೆಯಲ್ಲಿರಬೇಕು. ಇಂಥವರ ಆದೇಶದ ಮೇರೆಗೆ ಕಾಂಗ್ರೆಸ್‌ನ ಸತ್ಯ ಶೋಧನಾ ಸಮಿತಿಯಲ್ಲಿ ಅದೆಂಥ ವರದಿ ಬರಬಹುದು ಎಂದು ನಾವೂ ಕೇಳಬಹುದಲ್ಲವೇ?

ಮಂಗಳೂರು ಗಲಭೆಯಾದಾಗಲೂ ಇಂಥ ಸುಮಾರು ಸಂಘಟನೆಗಳು ಸತ್ಯ ಸಂಶೋಧನಾ ವರದಿ ಮಾಡಿ ಒಂದು ಧರ್ಮದ ತಪ್ಪೇನೂ ಇಲ್ಲ, ಸತ್ತವರೆಲ್ಲರೂ ಒಂದೋ ಮೂಳೆ ಕಡಿದು ಹಲ್ಲಿಗೆ ಕಡ್ಡಿ ಹಾಕ್ತಾ ಬಂದವರು, ಇಲ್ಲವೇ ಪಟಾಕಿ ಗನ್‌ ಕೊಟ್ಟರೂ ಇದೇನು ಎಂದು ಕೇಳುವಂಥ ಕೊತ್ತಿಮಿರಿಗಳೇ ಆಗಿದ್ದರು ಎಂದು ಕ್ಲೀನ್‌ ಚಿಟ್‌ ನೀಡಿದ್ದು ನೋಡಿದ್ದೇವೆ. ಇದೇ ಸತ್ಯ, ಇದೇ ಗಾಸ್ಪೆಲ್‌.. ಪೊಲೀಸರ ತನಿಖೆಯೇ ಸುಳ್ಳು ಎಂದು ಹೇಳಿದ್ದನ್ನು ನೋಡಿದ್ದೇವೆ. ಅವರು ಕೊಟ್ಟಿದ್ದು ಸತ್ಯ, ಬಾಕಿಯವರು ಕೊಟ್ಟಿದ್ದು ಸುಳ್ಳು ಎಂಬ ಥರ್ಡ್‌ ಕ್ಲಾಸ್‌ ವರದಿಗಳನ್ನು ಓದಿದ್ದೇವೆ.

ಸ್ವಾತಂತ್ರ್ಯ ಬಂದ ಮೇಲೆ ಎಷ್ಟೋ ಗಲಭೆಗಳಾಗವೆ. ಆಗಿನಿಂದಲೂ ಸತ್ಯ ಶೋಧನೆ ಕಮಿಟಿಗಳು ಆಗುತ್ತಿದ್ದು ಒಂದೋ ಸರ್ಕಾರವೇ ಮಾಡುತ್ತಿದ್ದ ಬಿಳಿಮಂಡೆಗಳಿಂದ ಅಥವಾ ಪೂರ ಬುದ್ಧಿಜೀವಿಗಳೇ ಸೇರಿ ಮಾಡಿದ್ದಕ್ಕೆ. ಕೊಟ್ಟಿದ್ದೆಲ್ಲ ಬೇಕಾಬಿಟ್ಟಿ ವರದಿಗಳೇ. ಆಗೆಲ್ಲ ಅವರು ಹೇಳಿದ್ದ ಸತ್ಯ ಎಂದು ಅರ್ಥವೇ?

ಸತ್ಯ ಕಹಿಯಾಗೇ ಇರುತ್ತೆ ಸಾರ್‌.. ವಯೋಸಹಜವಾಗೇ ಹೋಗಬೇಕಿದ್ದ ಗೌರಿ ಲಂಕೇಶ್‌ಳನ್ನ ಯಾವನೋ ಬೇಕೂಫ ಕೊಂದದ್ದಕ್ಕೆ ಹಿಂದೂ ಭಯೋತ್ಪಾದನೆ, ಹಿಂದೂಗಳೇ ಅವಳನ್ನು ಕೊಂದರು ಎಂದೆಲ್ಲ ಅಂಡು ಬಡಿದುಕೊಳ್ಳವಾಗಿನ ಧೈರ್ಯ, ಶೌರ್ಯ ಈಗೆಲ್ಲಿ ಅಡಿಗಿದೆ?

ಅಷ್ಟಾಗಿ, ಇದು ಒಂದು ವರದಿ ಮಾತ್ರ. ನಾಳೆ ಕಾಂಗ್ರೆಸ್‌ ಸತ್ಯ ಶಂಶೋಧನಾ ಸಮಿತಿ ವರದಿ ನೀಡಿದರೂ ಅದು ಕೇವಲ ಒಂದು ವರದಿ ಅಷ್ಟೇ. ಅದನ್ನಿಟ್ಟುಕೊಂಡು ಹೈಕೋರ್ಟ್‌ನಲ್ಲಿ ತೀರ್ಪು ಬರೆಯಲ್ಲ ಅಥವಾ ಸರ್ಕಾರ ಕಾನೂನು ಮಾಡಲ್ಲ. ಸಮಾಧಾನ ಮಾಡಿಕೊಂಡು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಕೊಡುವುದನ್ನು ಕಲಿಯಿರಿ. ನಮ್ಮ ದೇಶಕ್ಕೆ ಅಂಬೇಡ್ಕರ್‌ ಬರೆದ ಸಂವಿಧಾನವೇ ಧರ್ಮಗ್ರಂಥ. ರಾಮ, ಏಸು, ಅಲ್ಲಾ ಎಲ್ಲ ಆಮೇಲೆ. ಯಾವುದೂ ಆಗಲ್ಲ ಅಂತಾದ್ರೆ ನಿಮ್ಮ ಭಾಯ್‌ಜಾನ್‌ಗಳಿಗೆ ಫೋನ್‌ ಮಾಡಿ, ಬಾಂಬ್‌ ಸೊಧೀಟಗಳ ಹೊಣೆ ಹೊತ್ತುಕೊಂಡ ಹಾಗೆ, ಇವರಿಗೂ ಗಲಭೆಯ ಹೊಣೆ ಹೊತ್ತುಕೊಳ್ಳುವುದಕ್ಕೆ ಹೇಳಿ.

 

Leave a Reply

Copyright©2021 Chiranjeevi Bhat All Rights Reserved.
Powered by Dhyeya