ಈಗಲೂ ರಾಜಕೀಯ ಮಾಡುವವರಿಗೆ ಮೆಟ್ಟಲ್ಲಿ ಹೊಡೆದರೆ ಪಾಪ ಬಂದೀತೆ?
ಪದೇಪದೆ ಟಿವಿಯಲ್ಲಿ ಪ್ಯಾಂಗಾಂಗ್ ಟ್ಸೊ ಹೆಸರು ಬರುತ್ತಿದ್ದಾಗ ಬೇರೆಯವರಿಗೆ ಅದು
ಭಾರತದ ಒಂದು ಪ್ರದೇಶ ಎಂದಷ್ಟೇ ಆಗಿರಬಹುದು. ಆದರೆ ನನಗೆ ಹಾಗಲ್ಲ. ಯಾಕೆ
ಗೊತ್ತಾ? ನಾನು ಕಳೆದ ವರ್ಷ ನವೆಂಬರ್ನಲ್ಲಿ ಅಲ್ಲೇ ಇದ್ದೆ. ಅಲ್ಲಿನ ಪರಿಸ್ಥಿತಿ ಹೇಗಿದೆ
ಎಂದು ಕಣ್ಣಾರೆ ನೋಡಿ, ಅಲ್ಲೇ 10 ದಿನಗಳಿದ್ದು ಬದುಕಿ ಬಂದಿದ್ದೇನೆ.
ಇಂಥ ಪ್ಯಾಂಗಾಂಗ್ ಬಳಿಯೇ ಈ ಚೀನಾ-ಭಾರತದ ಘರ್ಷಣೆ ಉಂಟಾಗಿದೆ ಎಂದರೆ,
ನಿಜಕ್ಕೂ ಖೇದವಾಗುತ್ತದೆ. ಅಷ್ಟೇ ಅಲ್ಲ, ನಮಗಾಗಿ ಹೋರಾಡುವ ಯೋಧರ
ಪರಿಸ್ಥಿತಿಯೇ ಕಣ್ಣ ಮುಂದೆ ಬರುತ್ತದೆ. ಸಮುದ್ರ ಮಟ್ಟದಿಂದ ಹೆಚ್ಚು-ಕಡಿಮೆ 14 ಸಾವಿರ
ಅಡಿ ಮೇಲಿರುವ ಪ್ಯಾಂಗಾಂಗ್ನಲ್ಲಿ ಜೀವನ ಅಷ್ಟು ಸುಲಭ ಅಲ್ಲ. ಏಕೆಂದರೆ, ಸಮುದ್ರ
ಮಟ್ಟದಿಂದ ಮೇಲೆ ಹೋಗುತ್ತಿದ್ದಂತೆ ಆಮ್ಲಜನಕದ ಕೊರತೆಯಾಗುತ್ತಾ ಹೋಗುತ್ತದೆ.
ಹಾಗಾದರೆ ಏನಾಗುತ್ತದೆ ಎಂದು ಕೇಳುವವರಿಗೆ, ನೀವು ಈಗ ಕರ್ನಾಟಕದ ಯಾವುದೇ
ಭಾಗದಲ್ಲಿ ಇದ್ದರೂ, ಕೇವಲ ಹತ್ತು ಹೆಜ್ಜೆ ಮುಂದೆ ಹೋಗಿ, ಮತ್ತೆ ಹತ್ತು ಹೆಜ್ಜೆ ವಾಪಸ್
ಬನ್ನಿ. ಆರಾಮಾಗೇ ಇರುತ್ತೀರಿ ಅಲ್ಲವೇ? ಆದರೆ, ಪ್ಯಾಂಗಾಂಗ್ನಲ್ಲಿ ಕೇವಲ ಇಪ್ಪತ್ತು
ಹೆಜ್ಜೆ ವೇಗವಾಗಿ ನಡೆದರೆ ಸಾಕು ಏದುಸಿರು ಬಿಡುತ್ತಾ ಇರುತ್ತೇವೆ. ಕೆಲವರಿಗೆ
ಉಸಿರಾಡಲೂ ಕಷ್ಟ. ಆಕ್ಸಿಜನ್ ಸಿಲಿಂಡರ್ ಇಲ್ಲದಿದ್ದರೆ ಪ್ರಾಣವೂ ಹೋಗಬಹುದು.
ನಾನು ಅಲ್ಲಿ ರಾತ್ರಿ ಊಟ ಮಾಡಿ ಮಲಗಿ ಒಂದೇ ಗಂಟೆಯಲ್ಲಿ ಉಸಿರಾಟದ
ಸಮಸ್ಯೆಯಿಂದ ಎದ್ದು, ಬಿಸಿನೀರು ಕುಡಿದು, ಕರ್ಪೂರದ ಘಮವನ್ನು ಪಡೆದ ಮೇಲೆ
ಉಸಿರಾಟ ಹದಕ್ಕೆ ಬಂದಿದ್ದು. ಇಲ್ಲಿ ಚಳಿ ಎಂದು ಹೀಟರ್ ಹಾಕಿಕೊಂಡು ಮಲಗಿದರೆ,
ಬೆಳಗ್ಗೆ ಹೀಟರ್ ಜತೆಗೆ ನಿಮ್ಮ ಹೆಣವನ್ನೂ ಎತ್ತಬೇಕಾಗುತ್ತದೆ ಎಂದು ಕ್ಯಾಪ್ಟನ್
ರಾರಯಂಕ್ನಲ್ಲಿರುವ ಶಿವಮೊಗ್ಗದ ಯೋಧ ಹೇಳುವಾಗ ಮೈ ರೋಮಗಳೆಲ್ಲ ಎದ್ದು
ನಿಂತಿದ್ದವು. ಇವರು ಬರುವ ಮುನ್ನ ಇದ್ದ ಕಮಾಂಡರ್ ಒಬ್ಬರು ಹೀಗೆ ಕೋಣೆಯಲ್ಲಿ
ಹೀಟರ್ ಹಾಕಿಟ್ಟುಕೊಂಡವರು, ಆಫ್ ಮಾಡುವುದನ್ನು ಮರೆತು ಶವವಾಗಿ ಹೋಗಿದ್ದಾರೆ
ಎಂದು ಹೇಳಿದರು. ಇಂಥ ಪರಿಸ್ಥಿತಿಯಲ್ಲಿ ನಮ್ಮ ಸೈನಿಕರು ಆ ಚೀನಿಯರ ಜತೆ
ಹೋರಾಡಿದ್ದಾರೆ ಎಂದರೆ ಅದು ಕಡಿಮೆ ಮಾತಾ?
ಇಷ್ಟೇ ಅಲ್ಲ, ನಾವು ಲೇಹ್ನಿಂದ ವಾಪಸ್ ಬರುವಾಗ ತಾಂಗ್ಲಾಂಗ್ಲಾ ಪಾಸ್ನಲ್ಲಿ ಸಿಕ್ಕಿ
ಬಿದ್ದೆವು. ಕಾರಣ, ದೊಡ್ಡ ಯುದ್ಧ ಟ್ಯಾಂಕರ್ನ್ನು ಹೊತ್ತೊಯ್ಯುತ್ತಿದ್ದ ವಾಹನವು,
ರಸ್ತೆಯನ್ನು ಆವರಿಸಿದ್ದ ಹಿಮದಿಂದ ಜಾರಿ, ಕೆಲವೇ ಇಂಚುಗಳಲ್ಲಿ 15 ಸಾವಿರ ಅಡಿ
ಪ್ರಪಾತಕ್ಕೆ ಬೀಳುವುದರಿಂದ ತಪ್ಪಿಸಿಕೊಂಡು ನಿಂತಿತ್ತು. ಸಿನಿಮಾದಲ್ಲಿ ತೋರಿಸುವ
ಹಾಗೆ ಒಂದು ಚಕ್ರ ಭೂಮಿಯ ಮೇಲಿರದೇ, ಗಾಳಿಯಲ್ಲಿ ಬ್ಯಾಲೆನ್ಸ್ ಮಾಡುತ್ತಾ ಇತ್ತು.
ಒಮ್ಮೆ ಆ ಭಾರಿ ವಾಹನದ ಹಿಂದೆ ಬಾಲಂಗೋಚಿಯಂತಿರುವ ಈ ಯುದ್ಧದ ಟ್ಯಾಂಕರ್
ಏನಾದರೂ ಬಿದ್ದಿದ್ದರೆ ದೇಶಕ್ಕಾಗುವ ನಷ್ಟವೆಷ್ಟು? ಅದು ಬಿಡಿ, ಆ ಯೋಧ ಹೋಗಿದ್ದರೆ?
ಆ ಸಮಯದಲ್ಲೂ ಹೇಗೋ ಪ್ರಯತ್ನ ಮಾಡಿ ಗಾಡಿಯನ್ನು ಪ್ರಪಾತಕ್ಕೆ ಬೀಳುವುದನ್ನು
ತಪ್ಪಿಸಿದ್ದಲ್ಲದೇ, ತನ್ನ ಪ್ರಾಣವನ್ನೂ ಉಳಿಸಿಕೊಂಡಿರುವ ಯೋಧನ ಸಾಧನೆಗೆ ಸೆಲ್ಯೂಟ್
ಹೇಳಬೇಕಲ್ಲವೇ?
ಆದರೆ, ಇಂಥ ಸೈನಿಕರ ಹೆಸರಲ್ಲೂ ನೀಚ ರಾಜಕಾರಣ ಮಾಡುವ, ಮೋದಿಗೆ
ಹೊಡೆಯುವುದಕ್ಕೆ ಇದೇ ಸರಿಯಾದ ಟೈಮು ಎಂದು ಹಾರಿ ಬೀಳು ಬೋದಾಳರನ್ನು
ಕಂಡಾಗ ಮೈ ಉರಿಯದೇ ಇರಲಿಲ್ಲ. ನಿಜವಾಗಿ ನಾನು ಹೇಳಕ್ಕೆ ಹೊರಟಿದ್ದು ಇದರ ಬಗ್ಗೆ.
ಕೆಲ ಎಡಪಂಥೀಯ/ಮೋದಿ ವಿರೋಧಿ ಪತ್ರಕರ್ತರು, ಲಾಕ್ಡೌನ್ನಲ್ಲಿ ಕೆಲಸವಿಲ್ಲದೇ
ಬಿದ್ದಿರುವ ಸ್ಟ್ಯಾಂಡಪ್ ಕಮೀಡಿಯನ್ಗಳು ಎಲ್ಲರೂ ಇದೊಂದೇ ಒಂದು ಅವಕಾಶಕ್ಕಾಗಿ
ಕಾಯುತ್ತಿರುವಂತೆ, ಸಾಮಾಜಿಕ ಜಾಲತಾಣದಲ್ಲಿ ಲಾಕ್ಡೌನ್ನಲ್ಲಿ ತಿಂದು
ಜೀರ್ಣವಾಗದ್ದನ್ನೆಲ್ಲ ಕಾರಿಕೊಳ್ಳುತ್ತಿದ್ದಾರೆ. ಮೊದಲು ನಮ್ಮ 3 ಯೋಧರು
ಮೃತಪಟ್ಟಿದ್ದಾರೆ, ಎಲ್ಲಿದ್ದೀರ ಮೋದಿ ಎಂದರು. ಆ ಸಂಖ್ಯೆ 20ಕ್ಕೆ ಏರಿದಾಗ ಮೋದಿ
ಏನೂ ಮಾಡುತ್ತಿಲ್ಲ, ಅತ್ಯಂತ ದುರ್ಬಲ ಪ್ರಧಾನಿ ಎಂದು ಟ್ರೆಂಡ್ ಮಾಡಿದರು. ಆದರೆ,
ನಮ್ಮ ಯೋಧರು ಎಲ್ಲಿ ಚೀನಾದ 43 ಸೈನಿಕರನ್ನು ಕೊಂದಿದ್ದಾರೆ ಎಂಬ ಸುದ್ದಿ ಬಂತೋ
ಆಗ, ಮೋದಿಯನ್ನು ದುರ್ಬಲ ಎಂದು ಕರೆದ ವರಸೆಯನ್ನೇ ಬದಲಿಸಿ, ಮೃತಪಟ್ಟ ನಮ್ಮ
ಯೋಧರ ಜತೆಗೆ ಅವರದ್ದೆಷ್ಟು ಇವರದ್ದೆಷ್ಟು ಎಂದು ಆಟ ಆಡುತ್ತಿದ್ದೀರಾ? ಎಂದು ಟ್ವೀಟ್
ಮಾಡಿದರು.
ಈ ಕಚಡಾಗಳು, ಒಂದೇ ಒಂದು ಬಾರಿಯೂ, ಚೀನಾದ ನರಿ ಬುದ್ಧಿಯನ್ನು ವಿರೋಧಿಸಿ
ಎರಡಕ್ಷರ ಬರೆಯುವುದಕ್ಕೆ ನರ ಇರಲಿಲ್ಲ. ಬರೆಯೋದಕ್ಕೆ ಧಮ್ ಇಲ್ಲದಿದ್ದರೂ ಬಾಯಿ
ಮುಚ್ಚಿಕೊಂಡಿರಬೇಕಲ್ಲವೇ? ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯ ಮಧು
ಎಂಬುವವನು ‘ಸೈನಿಕರನ್ನು ಹೊತ್ತು ತರುವ ಶವ ಪೆಟ್ಟಿಗೆಗಳ ಮೇಲೆ ಪಿಎಂ ಕೇರ್ಸ್
ಎಂದು ಬರೆದಿರುತ್ತದೆಯೇ ಎಂಬ ಕುತೂಹಲ ನಂಗೆ’ ಎಂದು ಬರೆದಿದ್ದಾನೆ. ಇದೇ ರೀತಿ,
ಸೊಂಟದ ಕೆಳಗಿನ ಅಂಗಗಳನ್ನೇ ಹಾಸ್ಯ ಮಾಡುವುದಕ್ಕೆ ಬಳಸುವ ಕಿತ್ತೋದ
ಕಮೀಡಿಯನ್ ಅದಿತಿ ಸಹ ಹೀಗೇ ಬರೆದಿದ್ದಾಳೆ. ಇನ್ನು ಕೆಲ ಸಾಗರಿಕಾ ಘೋಶ್ರಂಥ
ಬಿಳಿಮಂಡೆ ಪತ್ರಕರ್ತರೂ ಈ ಸಮಯದಲ್ಲಿ ಹೇಗೆ ಬರೆಯಬೇಕೆಂದು ತಿಳಿಯದೇ
ಮೋದಿಯನ್ನು ಟೀಕಿಸುವುದರಲ್ಲೇ ಇದ್ದಾರೆ.
ಆದರೆ ದುರಂತ ಏನು ಗೊತ್ತಾ? ಗ್ಲೋಬಲ್ ಟೈಮ್ಸ್ ಎಂಬ ಚೀನಿ ಪತ್ರಕರ್ತ ಹು
ಕ್ಸಿಜಿನ್ ಎಂಬುವವನು ‘ನಮ್ಮಲ್ಲೂ ಸಾವುಗಳಾಗಿವೆ. ಆದರೆ ಭಾರತೀಯರು ಒಂದು
ನೆನಪಿಟ್ಟಕೊಳ್ಳಲಿ ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರುವವರಲ್ಲ. ಇದನ್ನು
ವಾರ್ನಿಂಗ್ ಎಂದು ಪರಿಗಣಿಸಿ’ ಎಂದು ಬರೆದಿದ್ದಾನೆ. ಚೋಟುದ್ದ ಇಲ್ಲದ, ಸರಿಯಾಗಿ
ಪೂರ್ತಿ ಕಣ್ಣು ತೆರೆಯದ ಚೀನಿ ನಮಗೆ ಬಿಟ್ಟಿ ಆವಾಜ್ ಹಾಕುತ್ತಿದ್ದರೂ ನಮ್ಮವರು
ಮೋದಿಗೆ ಬಯ್ಯುತ್ತಾ, ನಮ್ಮ ಯೋಧರಿಗೆ ತಾಕತ್ತಿಲ್ಲ ಎಂದು ಕುಳಿತಿದ್ದಾರಲ್ಲ ಇವರಿಗೆ
ಯಾವ ಹಳೆ ಮೆಟ್ಟಲ್ಲಿ ಹೊಡೆಯಬೇಕು?
ಇವರು ಮೋದಿ ಮೇಲಿನ ಉರಿಗೆ ಹಾಗೆ ಬರೆಯುತ್ತಿದ್ದಾರೋ ಅಥವಾ ಇನ್ಯಾವುದಕ್ಕೆ
ಬರೆಯುತ್ತಿದ್ದಾರೋ, ಆದರೆ ಒಂದಂತೂ ಸ್ಪಷ್ಟ ಚೀನಾ ಯುದ್ಧ ಮಾಡದೇ ಯುದ್ಧ
ಮಾಡುವ ರೀತಿಯ ಹಾಗೆ.
ಚೀನಾ ಯಾವಾಗಲೂ ಒಂದು ತಂತ್ರ ಮಾಡುತ್ತದೆ ಎಂದು ಅಮೆರಿಕದ ಜೋಶ್ವಾ
ಫಿಲಿಪ್ ಎಂಬ ಹಿರಿಯ ಪತ್ರಕರ್ತ ಒಂದು ಸಂದರ್ಶನದಲ್ಲಿ ಹೇಳಿದ ಮಾತು ಇಲ್ಲಿ
ಅನುಸಂಧೇಯ. ಚೀನಾ ಯಾವುದಾದರೂ ದೇಶದ ವಿರುದ್ಧ ಯುದ್ಧ ಮಾಡಬೇಕೆಂದರೆ,
ಅದು ಬಳಸುವ ತಂತ್ರ, ‘ನಿಮ್ಮ ವ್ಯವಸ್ಥೆಯಿಂದಲೇ ನಿಮ್ಮ ಕತ್ತು ಹಿಸುಕು’ ಎಂಬುದು.
ಅಂದರೆ, ಬೇರೆ ದೇಶಗಳು ಹೇಗೆಲ್ಲ ಕಾರ್ಯನಿರ್ವಹಿಸುತ್ತದೆ, ಅವರ ವ್ಯವಸ್ಥೆ ಹೇಗಿದೆ,
ಅಲ್ಲಿ ಏನೇನು ಲೋಪದೋಷಗಳಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಹರಿಸಿ, ಅದನ್ನು
ನಾವು ಹೇಗೆ ಉಪಯೋಗಿಸಿಕೊಳ್ಳುವುದು ಎಂದು ನೋಡುತ್ತಾರೆ. ಅದರಿಂದ, ಶತ್ರು
ದೇಶದಲ್ಲೇ ಹೇಗೆ ಸುದ್ದಿಯನ್ನೆಲ್ಲ ತಿರುಚಿ, ಶಾಂತಿ ನೆಮ್ಮದಿಯನ್ನೆಲ್ಲ ಹಾಳು ಮಾಡಿ, ಅಲ್ಲಿ
ಗಲಭೆ ಎಬ್ಬಿಸಿ, ಪೂರ ವ್ಯವಸ್ಥೆಯನ್ನೇ ಹೇಗೆ ಬುಡಮೇಲು ಮಾಡಬೇಕೋ ಅವೆಲ್ಲವನ್ನೂ
ಮಾಡುತ್ತಾರೆ.
ಉದಾಹರಣೆಗೆ, ನಿಮ್ಮ ದೇಶದಲ್ಲಿ ವಾಕ್ ಸ್ವಾತಂತ್ರ್ಯ/ಅಭಿವ್ಯಕ್ತಿ ಸ್ವಾತಂತ್ರ್ಯ
ಹೆಚ್ಚಾಗಿದ್ದರೆ, ನಿಮ್ಮ ದೇಶದಲ್ಲೇ ಎಲ್ಲೆಲ್ಲೂ ಪ್ರತಿಭಟನೆ ಇತ್ಯಾದಿಗಳನ್ನು ಮಾಡಿಸುವುದು.
ನಿಮ್ಮ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಇದ್ದರೆ, ಸುಳ್ಳು ಸುದ್ದಿಗಳನ್ನು ದೇಶದ ವಿರುದ್ಧ-
ಸರ್ಕಾರದ ವಿರುದ್ಧ ಹಾಕಿಸುವುದು. ಮಾರಾಟ/ಉದ್ಯಮದಲ್ಲಿ ಸ್ವಾತಂತ್ರ್ಯ ಇದ್ದರೆ, ಅಲ್ಲಿ
ಅತ್ಯಂತ ಕಡಿಮೆ ದರದಲ್ಲಿ ಒಳ್ಳೆಯ ಮಾಲನ್ನು ಬಿಟ್ಟು, ನಿಮ್ಮ ಕಂಪನಿಗಳೆಲ್ಲ ಬಾಗಿಲು
ಹಾಕುವಂತೆ ಮಾಡಿ, ಇಡೀ ಮಾರುಕಟ್ಟೆಯನ್ನೇ ತಮ್ಮದಾಗಿಸಿಕೊಳ್ಳುವುದು.
ಈಗ ಅಮೆರಿಕದಲ್ಲಿ ವರ್ಣಭೇದ ತುಂಬ ಇದೆ. ಹಾಗಾಗಿ, ಅಲ್ಲಿ ಚೀನಿ ಗೂಢಚಾರಿಯ
ಬಂಧನವಾದರೆ, ವರ್ಣಭೇದ ಎಂಬ ಹಣೆಪಟ್ಟಿ ಕಟ್ಟಿ ಪ್ರತಿಭಟನೆ ಮಾಡಿಸುವುದು
ಸೇರಿದಂತೆ ಇಂಥದ್ದೇ ಕುತಂತ್ರಗಳನ್ನು ಮಾಡಿ ಚೀನಾ ಮುಂದೆ ಬರುತ್ತದೆ. ನೀವು
ನಂಬಲೇ ಬೇಕು. ಈ ತಂತ್ರಗಳೆಲ್ಲ ಚೀನಾದವರು ಅಧಿಕೃತವಾಗಿ ಯುದ್ಧ ತಂತ್ರಗಳೆಂದು
ಅಳವಡಿಸಿಕೊಂಡಿದ್ದಾರೆ. ಚೀನಾದವರು ಕಳೆದ ವರ್ಷ ಒಬ್ಬ ಭಾರತೀಯ ಪತ್ರಕರ್ತನಿಗೆ
15 ಸಾವಿರ ರೂ. ಕೊಟ್ಟು 800 ಪದಗಳ ಒಂದು ಲೇಖನ ಬರೆದುಕೊಡು ಎಂದು ಕೇಳಿದ್ದು
ಬಹಿರಂಗವಾಗಿದ್ದನ್ನು ನಾವು ಇಲ್ಲಿ ನೆನೆಯಬಹುದು. ಈಗ ಮೋದಿ, ಸೇನೆ ವಿರುದ್ಧ
ಬೊಗಳುತ್ತಿರುವವರಿಗೆ ಎಷ್ಟು ಕೊಟ್ಟಿರಬಹುದು.
ಹಾಗಾದರೆ ಇಂಥದ್ದನ್ನು ತಡೆಯಲು ನಾವೇನು ಮಾಡಬಹುದು? ಸರ್ಕಾರವೇನು
ಮಾಡಬೇಕು? ಬಹಳ ಸಿಂಪಲ್. ಆ ಚೀನಿ ಪತ್ರಕರ್ತ ಹೇಗೆ ಭಯದಿಂದಲೋ,
ದೇಶಪ್ರೇಮದಿಂದಲೋ ತನ್ನ ದೇಶವನ್ನು, ತನ್ನ ಸೈನಿಕರನ್ನು ಬಿಟ್ಟುಕೊಡಲಿಲ್ಲವೋ,
ಹಾಗೇ ಸಾಮಾಜಿಕ ಜಾಲತಾಣದಲ್ಲಿ, ಪತ್ರಿಕೆಯಲ್ಲಿ ಬರೆಯುವ ನಮ್ಮವರಿಗೂ ಒಂದು
ಲಗಾಮು ಹಾಕಲೇಬೇಕು. ಇಂಥ ಸಮಯದಲ್ಲಿ ದೇಶದ ಭದ್ರತೆಯ ಬಗ್ಗೆ ಇಲ್ಲಸಲ್ಲದ್ದು
ಬರೆಯುವ ಮಕ್ಕಳನ್ನು ಮುಲಾಜಿಲ್ಲದೇ ದೇಶದ್ರೋಹ ಪ್ರಕರಣದಲ್ಲಿ ಜೈಲಿಗಟ್ಟಬೇಕು.
ಅಷ್ಟೇ ಅಲ್ಲ, ಇವರನ್ನೆಲ್ಲ ನಿಭಾಯಿಸುವುದಕ್ಕೆ ಒಂದು ಮಂಡಳಿ ಮಾಡಿ, ಈ ಸಮಯದಲ್ಲಿ
ಸೈನಿಕರು, ಭದ್ರತೆಯ ಬಗ್ಗೆ ಮಾತಾಡಿದರೆ ಟಿವಿ, ಪೇಪರ್ ಲೈಸೆನ್ಸ್ ರದ್ದು
ಮಾಡುತ್ತೇವೆಂದಾಗ ಮಾತ್ರ ಇಂಥ ನಾಯಿ-ನರಿಗಳ ಬೊಗಳುವಿಕೆಯನ್ನು
ನಿಲ್ಲಿಸಬಹುದು. ಇಲ್ಲದಿದ್ದರೆ, ನಾಳೆ ಮತ್ತೊಂದು ದೇಶ ಭಾರತದ ವಿರುದ್ಧ ಕಿಡಿ ಕಾರಿದರೂ
ಸಾಕು, ಯೋಧರನ್ನು ಅಡ್ಡ ಇಟ್ಟು ‘ನೋಡಿ ಸಾರ್ ನಮ್ಮ ದೇಶವನ್ನು ಮೋದಿಯಿಂದ
ಬಚಾವ್ ಮಾಡಿ’ ಎಂದು ತಲೆ ಹಿಡಿಯುವ ಸಂತತಿ ನಾಶವಾಗುವುದೇ ಇಲ್ಲ.