ಭಯೋತ್ಪಾದಕರಲ್ಲಿ ತಿಲಕದವರೆಷ್ಟು, ಗಡ್ಡ-ಟೊಪ್ಪಿಯವರೆಷ್ಟು ಸಿದ್ದರಾಮಯ್ಯನವರೇ?

 

ತಿಲಕ ಅಥವಾ ನಾಮಕ್ಕೆ ಭಾರತದಲ್ಲಿ, ಹಿಂದೂ ಧರ್ಮದಲ್ಲಿಯಂತೂ ಬಹಳವೇ ಮಹತ್ವವಿದೆ. ಭಾರತದ ಬಹುತೇಕ ನಾಗರಿಕರು, ಹಿಂದೂಗಳಿದ್ದಾರೆ. ಹಾಗಾಗಿ ಅದರಲ್ಲೂ ಕೋಟ್ಯಾನುಕೋಟಿ ಮಂದಿ ಒಂದಲ್ಲ ಒಂದು ರೀತಿಯಲ್ಲಿ ತಿಲಕ ಇಟ್ಟೇ ಇರುತ್ತಾರೆ. ಸಾಮಾನ್ಯದಲ್ಲಿ ಸಾಮಾನ್ಯವಾಗಿರುವ ತಿಲಕವನ್ನು ನೋಡಿ ಹೆದರುವವರು ಒಂದೋ ದರೋಡೆ ಕೋರ ಆಗಿರುತ್ತಾನೆ, ಕ್ರಿಮಿನಲ್‌ ಆಗಿರುತ್ತಾನೆ ಅಥವಾ ಬೇರೆ ದೇಶದ ಗೂಂಡಾನೇ ಆಗಿರುತ್ತಾನೆ. ಹಾಗೆ ತಿಲಕ ಇಟ್ಟುಕೊಂಡವರು ಧರ್ಮ ರಕ್ಷಕರು, ದೇಶಾಭಿಮಾನ ಹೊಂದಿರುವವರು ಮತ್ತು ಜಯಶಾಲಿಗಳೇ ಆಗಿರುತ್ತಾರೆ. ಇದನ್ನು ನಾನು ಹೇಳುತ್ತಿಲ್ಲ. ಇತಿಹಾಸವೇ ಉದಾಹರಣೆ ಕೊಡುತ್ತದೆ.

ಇದಕ್ಕೆ ನಮ್ಮ ಮುಂದಿರುವ ಛತ್ರಪತಿ ಶಿವಾಜಿ ಮಹಾರಾಜರೇ ಉದಾಹರಣೆ. ಭೂಷಣ ಎಂಬ ಕವಿ, ತನ್ನ ಕಾವ್ಯದಲ್ಲಿ ಹೇಳುವ ಮಾತಿದು: ‘ಕಾಶಿಜೀ ಕೀ ಕಳಾಜಾತಿ, ಮಥುರಾ ಮಸ್ಜಿದ್‌ ಹೋತಿ, ಯದೀ ಶಿವಾಜಿ ನ ಹೋತಾ, ಸುನ್ನತ್‌ ಹೋತಿ ಸಬಕಿ…’
ಅಂದರೆ ಶಿವಾಜಿ ಮಹಾರಾಜರು ಒಬ್ಬರು ಇರಲಿಲ್ಲ ಎಂದರೆ ಎಲ್ಲರೂ ಮತಾಂತರವಾಗಿ ಸುನ್ನತ್‌ ಆಗುತ್ತಿತ್ತು ಎಂದು ಭೂಷಣರು ಹೇಳುತ್ತಾರೆ. ಒಬ್ಬ ತಿಲಕಧಾರಿಯ ವ್ಯಕ್ತಿತ್ವಹೀಗಿತ್ತು.

ಉತ್ತರದಲ್ಲಿ ಮೊಘಲ್‌ಶಾಹಿ, ದಕ್ಷಿಣದಲ್ಲಿ ಆದಿಲ್‌ ಶಾಹಿ, ಅಕ್ಕ ಪಕ್ಕದಲ್ಲಿ ನಿಜಾಮ್‌ ಶಾಹಿ, ಇಮಾಮ್‌ ಶಾಹಿ, ಬರೀದ್‌ ಶಾಹಿ, ಕುತುಬ್‌ ಶಾಹಿ, ಅಯೋಧ್ಯೆ ಬಂಗಾಳದಲ್ಲಿ ನವಾಬರು, ತಮಿಳು ನಾಡಿನಲ್ಲಿ ಫ್ರೆಂಚರು, ಗೋವಾದಲ್ಲಿ ಪೂರ್ಚುಗೀಸರು, ಸೂರತ್‌ನಲ್ಲಿ ಬ್ರಿಟಿಷರು, ಅದರ ಪಕ್ಕಕ್ಕೆ ತಿರುಗಿ ನೋಡಿದ್ರೆ ಡಚ್ಚರು. ಎಲ್ಲರೂ ಸುತ್ತುವರಿದಿದ್ರು… ಇನ್ನೂ ಅರ್ಥವಾಗುವ ಹಾಗೆ ಹೇಳುವುದಾದರೆ ಇವತ್ತಿನ ಇಸ್ರೇಲ್‌ ಹೇಗಿತ್ತೋ ಭಾರತ ಅವತ್ತು ಹಾಗಿತ್ತು. ಇಸ್ರೇಲ್‌ ಬಹಳ ದೂರ ಆಯ್ತು. ಇವತ್ತಿನ ಭಾರತ ಹೇಗಿತ್ತೋ ಹಾಗಿತ್ತು ಅವತ್ತಿನ ಭಾರತ.

ಇವತ್ತಿನ ಭಾರತ ಹೇಗಿದೆ? ದೆಹಲಿಗೆ ಹೋದ್ರೆ ಜೆಎನ್ಯು, ಹಾಗೇ ಮೇಲೆ ನೋಡಿದ್ರೆ ಕಾಶ್ಮೀರದಲ್ಲಿ ಗಿಲಾನಿ ಮತ್ತು ಅವನ ಕಲ್ಲು ಎಸೆಯುವ ಗ್ಯಾಂಗು. ಬಂಗಾಳದಲ್ಲಿ ಮಮತಾ ಆಳ್ವಿಕೆಯಲ್ಲಿ ಹಿಂದೂಗಳು ಬೀದಿ ಹೆಣವಾಗುತ್ತಿದ್ದಾರೆ. ಅಲ್ಲೇ ಕೆಳಗೆ ಬಂದ್ರೆ ಹೈದರಾಬಾದ್‌ನಲ್ಲಿ ಒಬ್ಬ ಓವೈಸಿ ಎಂಬ ಮತಾಂಧ 15 ನಿಮಿಷ ಟೈಂ ಕೊಡ್ರೀ ಹಿಂದೂಗಳನ್ನು ಏನ್‌ ಮಾಡ್ತೀವಿ ಅಂತಾನೆ. ಕರ್ನಾಟದಲ್ಲಿ ಹಿಂದೂಗಳ ಹತ್ಯೆ, ಕೇರಳದಲ್ಲಿ ಕಮ್ಯುನಿಸ್ಟರ ಅಟ್ಟಹಾಸ, ತಮಿಳ್ನಾಡಿನಲ್ಲಿ ಮಿಷನರಿ ಕ್ರಿಶ್ಚಿಯನ್ನರ ಹಾವಳಿ.

ಶಿವಾಜಿ ಇದ್ದ ಭಾರತಕ್ಕೂ, ಈಗ ಇರೋ ಭಾರತಕ್ಕೂ ಬಹಳ ವ್ಯತ್ಯಾಸ ಕಾಣುತ್ತಿಲ್ಲ ಹೇಗೋ, ನರೇಂದ್ರ ಮೋದಿ ಮತ್ತು ಶಿವಾಜಿಯ ನಡುವೆಯೂ ಏನೂ ವ್ಯತ್ಯಾಸ ಕಾಣುತ್ತಿಲ್ಲ. ಇಬ್ಬರೂ ತಿಲಕ ಇಡುತ್ತಾರೆ. ಇಬ್ಬರೂ ದೇಶವಿರೋಧಿಗಳ ವಿರುದ್ಧ ಹೋರಾಡಿದ್ದಾರೆ, ಹೋರಾಟ ಮಾಡುತ್ತಿದ್ದಾರೆ. ತಿಲಕವನ್ನು ಕಂಡರೆ ದುಷ್ಟರಿಗೆ, ದುರುಳರಿಗೆ ಹೆದರಿಕೆಯಾದ ಉದಾಹರಣೆ ಇದೆಯೇ ವಿನಾ ಉತ್ತಮರಿಗೆ, ಮರ್ಯಾದೆಯಿಂದ ಯಾರ ತಲೆಯನ್ನೂ ಒಡೆಯದೇ ಜೀವನ ಸಾಗಿಸುತ್ತಿರುವವರಿಗೆ ಯಾವತ್ತೂ ಭಯವಾಗಿದ್ದೇ ಇಲ್ಲ. ತಿಲಕವನ್ನು ಕಂಡು ಅಂದು ಅಫ್ಜಲ್‌ ಖಾನ್‌ ಹೆದರಿದ್ದರೆ, ಇಂದು ಇಮ್ರಾನ್‌ ಖಾನ್‌ ಹೆದರುತ್ತಿದ್ದಾನೆ.

ವಿಪರ್ಯಾಸ ನೋಡಿ ಅಂದಿನಿಂದ ಇಂದಿನವರೆಗೂ ತಿಲಕಕ್ಕೆ ಹೆದರುವ ಸಂತತಿ ಭಾರತದಲ್ಲೂ ಇದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ. ಸಿದ್ದರಾಮಯ್ಯನವರ ಹೊಸ ಹೇಳಿಕೆಯೊಂದು ಈಗ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಉದ್ದುದ್ದ ತಿಲಕ ಇಟ್ಟುಕೊಂಡವರನ್ನು ನೋಡಿದರೆ ನನಗೆ, ಭಯವಾಗುತ್ತದೆ ಎಂದಿದ್ದಾರೆ. ವೃತ್ತಾಕಾರದ ಸಿಂಧೂರಕ್ಕೆ ಹೆದರದ ಝಡ್‌ ಭದ್ರತೆಯಿರುವ ಮಾಜಿ ಮುಖ್ಯಮಂತ್ರಿಯೊಬ್ಬರು, ತಿಲಕಕ್ಕೆ ಹೆದರುತ್ತಿದ್ದಾರೆ ಎಂಬ ಕಾರಣಕ್ಕೋ ಏನೋ ಬಹಳ ಸುದ್ದಿಯಾಗುತ್ತಿದೆ.

ಖಾಲಿ ಕುಳಿತಿರುವ ಸಿದ್ದರಾಮಯ್ಯನವರು ಇತ್ತೀಚೆಗೆ ತಮ್ಮ ಮಾತು, ನಡವಳಿಕೆಗಳಿಂದಲೇ ಬಹಳ ಪ್ರಖ್ಯಾತಿ ಪಡೆಯುತ್ತಿದ್ದಾರೆ. ಧರ್ಮಸ್ಥಳಕ್ಕೆ ಮಾಂಸ ತಿಂದು ಹೋಗುವುದಲ್ಲದೇ, ಅದನ್ನು ಸಮರ್ಥಿಸಿಕೊಂಡ ಮೇಲೆ ಈಗ ತಿಲಕ ಕಂಡ್ರೆ ಹೆದರಿಕೆಯಾಗುತ್ತದೆ ಎಂಬ ಹೊಸ ಹೇಳಿಕೆಯವರೆಗೂ ಎಲ್ಲವೂ ಒಂದು ಧರ್ಮವನ್ನು ನೋಯಿಸುತ್ತಲೇ ಇದೆ. ಸಿದ್ದರಾಮಯ್ಯನವರೇ ಹೇಳಿ, ತಿಲಕ ಇಟ್ಟ ಎಷ್ಟು ಮಂದಿಯಿಂದ ಭಯೋತ್ಪಾದನೆ ನಡೆದಿದೆ. ಅಥವಾ ಯಾವ ಹಿಂಸಾಚಾರದಲ್ಲಿ ಅವರು ತೊಡಗಿದ್ದಾರೆ?
ಉದ್ದುದ್ದ ತಿಲಕ ಇಟ್ಟುಕೊಂಡವರನ್ನು ನೋಡಿದರೆ ಹೆದರಿಕೆಯಾಗುತ್ತದೆ ಎಂದು ಬಹುಶಃ ಸಿದ್ದರಾಮಯ್ಯನವರು ಬಜರಂಗದಳದವರನ್ನು ಕಂಡು ಹೇಳಿರಲೂಬಹುದು. ಹಾಗೆ ನೊಡುವುದಾದರೆ ಇಲ್ಲೂ ಅದೇ ಇತಿಹಾಸದ ಉದಾಹರಣೆಯೇ ಲೆಕ್ಕಕ್ಕೆ ಬರುತ್ತದೆ. ಬಜರಂಗದಳದವರನ್ನು ನೋಡಿದರೆ ದನವನ್ನು ಪೂಜೆ ಮಾಡುವವರು ಹೆದರುವುದಿಲ್ಲ ಆದರೆ, ದನ ಕದಿಯುವ ಟೊಪ್ಪಿಗಳಂತೂ ನಡುಗುತ್ತಾರೆ. ಹಿಂದೂ ಹೆಣ್ಣು ಮಕ್ಕಳನ್ನು ಲವ್‌ ಜಿಹಾದ್‌ ಹೆಸರಿನಲ್ಲಿ ಹೊತ್ತೊಯ್ದು ಮದುವೆಯಾಗುವ ಪ್ರತಿಯೊಬ್ಬನೂ ಹೆದರುತ್ತಾನೆ. ಹೆಣ್ಣು ಮಕ್ಕಳನ್ನು ಮುಟ್ಟಿದ ಕೈ ಮುಂದಿನ ತಿಂಗಳೂ ಹಾಗೇ ಇದೆಯಾ ಎಂದು ನೋಡಿಕೊಳ್ಳುವ ಹಾಗಿರುತ್ತದೆ ಅವರ ಹವಾ. ಇನ್ನು ಪಾರ್ಕ್‌ಗಳಲ್ಲಿ, ಪೊದೆಗಳಲ್ಲಿ, ಕಂಡಕಂಡಲ್ಲಿ ಕೂತು ಲಲ್ಲೆ ಹೊಡೆಯುವವರೂ ಒಮ್ಮೆ ಅಕ್ಕ ಪಕ್ಕ ಇಣುಕಿ ಉದ್ದ ತಿಲಕದವರು ಬಂದಿದ್ದಾರಾ ಇಲ್ಲವಾ ಎಂದು ನೋಡುತ್ತಾರೆ. ಬಹಳ ಹೇಳಿಬಿಟ್ಟೆ ಅನಿಸುತ್ತದೆ, ಚಿಕ್ಕದಾಗಿ ಹೇಳುವುದಾದರೆ, ಸ್ಟೇಜ್‌ನಲ್ಲೇ ಮುತ್ತು ಕೊಡಿಸಿಕೊಳ್ಳುವ ನಾಯಕರು, ಸೆಲಿಧಿಗಾಗಿ ಹುಡುಗಿ ರಟ್ಟೆ ಹಿಡಿದು ಹತ್ತಿರ ಬಿಟ್ಟುಕೊಳ್ಳುವ ಪ್ರತಿಯೊಬ್ಬ ನಾಯಕನೂ ತಿಲಕಕ್ಕೆ ಹೆದರುತ್ತಾನೆ ಎಂದರೆ, ಸಿದ್ದರಾಮಯ್ಯನವರೇ ನೀವೇ ಲೆಕ್ಕ ಹಾಕಿ ತಿಲಕಕ್ಕೆ ಇರುವ ಶಕ್ತಿ ಎಂಥದ್ದು ಅಂತ.

ತಿಲಕಕ್ಕೆ, ನಾಮಕ್ಕೆ ಒಂದಷ್ಟು ಮಂದಿ ಮರ್ಯಾದೆ ಕೊಡುತ್ತಾರೆ, ಒಂದಷ್ಟು ಜನ ಹೆದರುತ್ತಾರೆ. ಅದರಲ್ಲಿ ಅಚ್ಚರಿಯೇನಿಲ್ಲ. ಮೋದಿಯೂ ತಿಲಕ ಇಟ್ಟಿದ್ದನ್ನು ನೋಡಿದ್ದೇವೆ. ಅವರನ್ನು ಉಲ್ಲೇಖ ಮಾಡಿ ಹೇಳಿದರೆ ಅದೂ ಹೌದು. ಡಿಮಾನಿಟೈಸೇಷನ್‌ ಆದಮೇಲಂತೂ ಮೋದಿಯ ನೆರಳು ಕಂಡರೂ, ದೆವ್ವ ಕಂಡಂತೆ ಭಯ ಬೀಳುತ್ತಿದ್ದಾರೆ. ನಮ್ಮಲ್ಲೇ ಕೋಟ್ಯಂತರ ಮಂದಿ ಅವರನ್ನು ದೇವರ ಸ್ಥಾನದಲ್ಲಿಟ್ಟಿದ್ದನ್ನೂ ನೋಡಿದ್ದೇವೆ.
ಇರಲಿ, ತಿಲಕದ ವಿಷಯಕ್ಕೆ ಬರೋಣ. ತಿಲಕ ಇಟ್ಟುಕೊಳ್ಳುವ ಮತ್ತೊಬ್ಬ ದೇವತೆ ಕಾಳಿ. ಆದರೆ ಕಾಳಿಯನ್ನು ಕಂಡರೆ ಸಜ್ಜನರು ಎಲ್ಲೂ ಹೆದರಿದ ಉದಾಹರಣೆಯೇ ಇಲ್ಲ.

ಆದಿಗುರು ಶಂಕರಾಚಾರ್ಯರು ಸಹ ಕಾಳಿಯ ಬಳಿ ಮಾತಾಡುತ್ತಿದ್ದರು. ಹಾಗೇ ನಮ್ಮ ರಾಮಕೃಷ್ಣ ಪರಮಹಂಸರು ಸಹ. ಅವರಿಬ್ಬರೂ ಇಡೀ ವಿಶ್ವವೇ ಅವರನ್ನು ಅಧ್ಯಯನ ಮಾಡುವ, ಅನುಸರಿಸುವ, ಗೌರವಿಸುವ ಒಂದು ವ್ಯಕ್ತಿತ್ವವಾದರು. ಅಷ್ಟೇ ಯಾಕೆ, ಸ್ವತಃ ನಿಮ್ಮ ಪತ್ನಿ ನೀಡಿದ ಸೀರೆಯನ್ನೇ ಮೈಸೂರಿನ ದೇವತೆ ಚಾಮುಂಡಿಗೆ ತೊಡಿಸಬೇಕು ಎಂದು ಹಠ ಹಿಡಿದು, ಅದೇ ಸೀರೆಯನ್ನು ತೊಡಿಸಿದ್ದ ನಿಮ್ಮ ಪತ್ನಿ ಪಾರ್ವತಿಯವರಿಗೂ ಚಾಮುಂಡಿಯ ತಿಲಕ ಕಂಡು ಒಂಚೂರು ಹೆದರಿಕೆಯಾಗಿಲ್ಲ. ಬದಲಾಗಿ, ತಾನು ನೀಡಿದ ಸೀರೆಯನ್ನೇ ತೊಡಿಸಿ ಎಂಬ ಆದೇಶ(ಅಧಿಕಾರದ ಆದೇಶವಲ್ಲ, ಭಕ್ತಿಯಿಂದ ಎಂದು ಊಹಿಸಿಕೊಳ್ಳೋಣ) ನೀಡಿದ್ದರು. ಆದರೆ, ತಿಲಕ ಕಂಡು ಹೆದರಿದವರು ನೀವು ಮಾತ್ರ ನೋಡಿ.

ಒಂದೇ ಮನೆಯಲ್ಲಿ ಒಬ್ಬರು ತಿಲಕಕ್ಕೆ ಗೌರವ ಕೊಡುವುದು ಮತ್ತೊಬ್ಬರು ಹೆದರುವುದಕ್ಕೆ ಗ್ರಾಮೀಣ ಭಾಗದಲ್ಲಿ ಬೇರೆ ಅರ್ಥವೇ ಇದೆ. ನಮ್ಮೂರಲ್ಲೆಲ್ಲ, ಸಹಜವಾಗಿ ಗಾಳಿ ಸೋಕಿರುವ ಕುಟುಂಬಸ್ಥರೊಬ್ಬರಿಗೆ ತಿಲಕ, ಕುಂಕುಮ, ನಾಮ ಇತ್ಯಾದಿಗಳನ್ನು ಕಂಡರೆ ಭಯ ಇರುತ್ತದೆ. ಕೂಗಾಡಿ ಕಿರುಚಾಡುತ್ತಾರೆ. ಮಿಕ್ಕವರೆಲ್ಲ ಚೆನ್ನಾಗಿಯೇ ಇರುತ್ತಾರೆ. ಆದರೆ ಸಿದ್ದರಾಮಯ್ಯನವರಿಗೆ ಹಾಗೆಲ್ಲ ಏನೂ ಆದಂತಿಲ್ಲ. ಏಕೆಂದರೆ, ಸ್ವತಃ ಈ ಆಸಾಮಿಯೇ ವಿಧಾನಸಭೆ ಚುನಾವಣೆ ಸಮಯದಲ್ಲಿ ನಾಮ ಬಳಿದುಕೊಂಡು ದೇವಸ್ಥಾನಕ್ಕೆ ಹೋದ ನೂರಾರು ಚಿತ್ರಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ. ಆದರೂ ಸಿದ್ದರಾಮಯ್ಯ ಹೆದರಿದ್ದೇಕೆ? ಅವರೇ ಉತ್ತರಿಸಬೇಕು.

ಕೆಲವೊಮ್ಮೆ ಅಧಿಕಾರದ ಅಹಂ ಯಾವ ಮಟ್ಟಿಗೆ ಇರುತ್ತದೆ ನೋಡಿ. ಆಡಿರುವುದೇ ಒಂದು ಕೋಮನ್ನು ಕೆರಳಿಸುವ ಮಾತು. ಆದರಲ್ಲೂ ಅದನ್ನು ಟ್ವಿಟರ್‌ನಲ್ಲಿ ಬೇರೆ ಸಮರ್ಥಿಸಿಕೊಳ್ಳುತ್ತಾ, ‘ಬಹಷ್ಟು ಕ್ರಿಮಿನಲ್‌ಗಳು ತಮ್ಮ ರಕ್ಷಣೆಗಾಗಿ ತಿಲಕ ಧರಿಸಿ ಮೆರೆದಾಡುತ್ತಾರೆ’ ಎಂದಿದ್ದಾರೆ.

ಕ್ರಿಮಿನಲ್‌ಗಳೇ ತಿಲಕ ಧರಿಸುತ್ತಾರೆ ಎಂಬ ಇವರ ವಾದವನ್ನೇ ಒಪ್ಪಿ ಮುಂದೆ ನಡೆಯುವುದಾದರೆ, ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸೋನಿಯಾ ಗಾಂಧಿ ಹಣೆಯುದ್ದಕ್ಕೂ ನಿಮ್ಮನ್ನು ಹೆದರಿಸುವ ಎಲ್ಲ ರೀತಿಯಲ್ಲೂ ತಿಲಕ ಇಟ್ಟುಕೊಂಡು ಬಂದಿದ್ದರು. ನಂತರ ಅವರು ಕರ್ನಾಟಕಕ್ಕೆ ಬಂದಾಗಲೂ ನಿಮಗೆ ಹೆದರಿಕೆಯಾಗಿದ್ದನ್ನು ಹೇಳಿದ್ದಿರಾ? ನೀವಷ್ಟೇ ಅಲ್ಲ, ಸೋನಿಯಾರನ್ನು ಕಂಡರೆ ಇಡೀ ದೇಶವೇ ಹೆದರುತ್ತಿದೆ. ಏಕೆಂದರೆ, ಇಬ್ಬರೂ ಜಾಮೀನಿನ ಮೇಲೇ ಹೊರಗೆ ಓಡಾಡುತ್ತಾ ಇದ್ದಾರೆ. ಸಿದ್ದರಾಮಯ್ಯನರು ತಮ್ಮ ಮಂಡನೆಯನ್ನು ಸೋನಿಯಾ, ರಾಹುಲ್‌ರಿಗೂ ಅನ್ವಯಿಸುವ ತಾಕತ್ತು ಸಿದ್ದರಾಮನಹುಂಡಿಯ ಈ ಗಂಡಸಿಗಿದೆಯಾ? ದಿಲ್ಲಿಯ ಈ ಇಬ್ಬರನ್ನು ತಮ್ಮ ನಾಯಕರು ಎನ್ನುತ್ತೀರಲ್ಲ ಸಿದ್ದರಾಮಯ್ಯನವರೇ, ನಿಮ್ಮನ್ನು ರಾಜ್ಯದ ಜನತೆ ಏನೆನ್ನಬೇಕು ಹೇಳಿ?

ನಿಜವಾಗಿ ತಿಲಕಕ್ಕಿಂತ ಹೆದರಿಕೆಯಾಗಬೇಕಾದ್ದೇನಾದರೂ ಇದ್ದರೆ ಅದು ಟೊಪ್ಪಿ ಮತ್ತು ಗಡ್ಡ! ಎಲ್ಲರೂ ಹಾಗೆ ಎಂದು ನಾನು ಹೇಳಿದರೆ, ನನಗೂ ಸಿದ್ದರಾಮಯ್ಯನವರಿಗೂ ವ್ಯತ್ಯಾಸವೇ ಇಲ್ಲದಂತಾಗಿಬಿಡುತ್ತದೆ. ಎಲ್ಲರೂ ಹಾಗಿಲ್ಲವಾದರೂ, ಯಾವುದೇ ಉಗ್ರಗಾಮಿಯನ್ನು ನೋಡಿದರೂ, ಅವನು ಗಡ್ಡ ಬಿಟ್ಟು, ಟೊಪ್ಪಿ ಹಾಕಿದವನೇ ಆಗಿರುತ್ತಾನೆ ಎಂಬುದನ್ನು ಸಿದ್ದರಾಮಯ್ಯನವರು ಗಮನಿಸಿರಲಿಕ್ಕಿಲ್ಲ.

ಭಯೋತ್ಪಾದನೆಯಲ್ಲಿ ಅವರೇ ನಂಬರ್‌ ಒನ್‌. ಇಷ್ಟಾದರೂ, ತಿಲಕ ಇಟ್ಟ ಒಬ್ಬ ವ್ಯಕ್ತಿ ಬಾಂಬ್‌ ಹಾಕಿದ್ದನ್ನು ತೋರಿಸಿ ನೋಡೋಣ. ಸಿದ್ದರಾಮಯ್ಯನವರೇ, ಗಡ್ಡ-ಟೊಪ್ಪಿಗೆ ಮದುವೆ ಮಾಡಿಸುವ ಭಾಗ್ಯವನ್ನೇ ಕೊಟ್ಟ ನಿಮಗೆ ಅದ್ಯಾಕೆ ಒಮ್ಮೆಯೂ ಭಯವಾಗಲಿಲ್ಲ?
ಇತಿಹಾಸದ ಯಾವುದೇ ಪುಟವನ್ನು ತಿರುವಿ ಹಾಕಿ, ಭಾರತದಲ್ಲೇನಾದರೂ ಅತ್ಯಂತ ಹೆಚ್ಚು ನಾಶವಾಗಿದ್ದರೆ ಅದು ಗಡ್ಡ-ಟೊಪ್ಪಿಯಿಂದಲೇ. ಇತಿಹಾಸದ ಕಾಲದಿಂದ ಮೊನ್ನೆಯ ಪುಲ್ವಾಮಾದವರೆಗೂ ಎಲ್ಲರೂ ಗಡ್ಡ-ಟೊಪ್ಪಿಯವರೇ. ಇಂಥ ಮುನ್ನೂರು ಗಡ್ಡ-ಟೊಪ್ಪಿಯನ್ನು ಮೊನ್ನೆ ಸರ್ಜಿಕಲ್‌ ಸ್ಟ್ರೈಕ್‌ನಲ್ಲಿ ಹೊಡೆದು ಹಾಕಿದ್ದು ನೀವು ಹೆದರುವ ತಿಲಕಧಾರಿಗಳೇ. ಇದಕ್ಕೆ ನಿಮಗೆ ಭಯವಾಗುತ್ತಿದೆಯಾ?

ಆದರೂ ನಿಮಗೆ ತಿಲಕದಿಂದಲೇ ಭಯವಾಗುತ್ತದೆ ಎಂದರೆ, ನೀವು ಒಂದೋ ಗಡ್ಡ ಟೊಪ್ಪಿಯವರೇ ಆಗಿದ್ದು, ರಾಜಕಾರಣಕ್ಕಾಗಿ ತಿಲಕ ಧರಿಸಿರಬೇಕು ಅಥವಾ ನೀವು ಕನಸಿನಲ್ಲೂ ದೂರುವ ಸಂಘ ಪರಿವಾರ ನಿಮ್ಮನ್ನು ಘರ್‌ ವಾಪಸಿ ಮಾಡಿಸಿರಬೇಕು. ಅದಾಗಿದ್ದರೆ, ಆಗಾಗ ಹಳೆಯದು ನೆನಪಾಗಿ ತಿಲಕಕ್ಕೆ ಹೆದರುವುದು ಸಹಜ ಎಂದೇ ನಾವು ಭಾವಿಸಬೇಕಾಗುತ್ತದೆ.

ಅದೇನೇ ಇರಲಿ, ತಿಲಕದಿಂದ ಒಬ್ಬರಿಗೂ ಹೆದರಿಕೆಯಾದದ್ದಿಲ್ಲ. ಬದಲಿಗೆ ಆಶ್ರಯ ಕೊಟ್ಟಿದೆ. ಗಡ್ಡ-ಟೊಪ್ಪಿಯನ್ನೇ ಓಲೈಸುತ್ತಾ ಇನ್ನೇನು ಸುನ್ನತ್‌ ಆಗುವುದರಲ್ಲಿದ್ದ ನಿಮ್ಮ ಪಕ್ಷದ ಯುವರಾಜ ಕೊನೆಗೆ ಓಡಿದ್ದು ದೇವಸ್ಥಾನಕ್ಕೆ ಮತ್ತು ಹಣೆಗೆ ಹಚ್ಚಿದ್ದು ತಿಲಕವನ್ನೇ. ಮತಾಂತರ ಮಾಡುವ ಧರ್ಮದಿಂದ ಬಂದ ಅವನ ಅಮ್ಮ ಹಚ್ಚಿದ್ದೂ ತಿಲಕವೇ. ಅಷ್ಟೇ ಏಕೆ, ಇವತ್ತಿಗೂ ಭಾರತದ ಎಷ್ಟೋ ಮಂದಿ ರಾತ್ರಿ ಕೆಟ್ಟ ಕನಸು ಬೀಳಬಾರದು ಎಂಬುದಕ್ಕೆ ತಿಲಕವನ್ನೇ ಹಚ್ಚಿ ಮಲಗುತ್ತಾರೆ. ಇದು ನಿಮ್ಮ ಕೈಯಲ್ಲಿದ್ದ ನಿಂಬೆಹಣ್ಣಿನ ಆಣೆಗೂ ಸತ್ಯ. ನಿಮ್ಮ ಪತ್ನಿಯು ತಿಲಕ ಧಾರಿಣಿ ಚಾಮುಂಡಿಗೆ ಹೊದಿಸಿರುವ ಸೀರೆಯ ಆಣೆಗೂ ಸತ್ಯ.

 

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya