ಯುದ್ಧ ಬೇಡ ಎನ್ನುವವರು ಉಗ್ರರ ಜತೆ ಶಾಂತಿ ಮಾತುಕತೆಗೆ ಹೋಗುತ್ತಾರಾ?

 

2018 ಫೆಬ್ರವರಿ 14. ಭಾರತದ ಪುಲ್ವಾಮಾದಲ್ಲಿ 350 ಕೆಜಿ ತೂಕದಷ್ಟು ಬಾಂಬ್‌ಗಳನ್ನು ಹೊತ್ತಿದ್ದ ಕಾರ್‌ ಒಂದು ಸೇನಾ ವಾಹನಕ್ಕೆ ಡಿಕ್ಕಿ ಹೊಡೆದು 44 ಯೋಧರು ಹುತಾತ್ಮರಾದರು.

ಸರಿಯಾಗಿ 12ನೇ ದಿನಕ್ಕೆ ಭಾರತೀಯ ವಾಯುಸೇನೆಯು ಪಾಕಿಸ್ಥಾನದೊಳಕ್ಕೆ ನುಗ್ಗಿ, ನಮ್ಮ ಯೋಧರನ್ನು ಕೊಂದ ಜೈಷ್‌-ಎ-ಮಹಮ್ಮದ್‌ ಸಂಘಟನೆಯ ಕ್ಯಾಂಪ್‌ಗಳ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ಮಾಡಿ ಸುಮಾರು 300 ಉಗ್ರರನ್ನು ಹೊಡೆದು ಹಾಕಿತ್ತು. ನೆನಪಿರಲಿ, ಈ ಸರ್ಜಿಕಲ್‌ ಸ್ಟ್ರೈಕ್‌ನಲ್ಲಿ ಒಬ್ಬೇ ಒಬ್ಬ ಪಾಕಿಸ್ಥಾನಿ ಯೋಧನಿಗೂ ಗಾಯವಾಗಿಲ್ಲ, ಯಾವ ಪಾಕಿಸ್ಥಾನಿ ನಾಗರಿಕನ ಪ್ರಾಣವೂ ಹೋಗಿಲ್ಲ. ಕೇವಲ ಉಗ್ರಗಾಮಿಗಳ ಪ್ರಾಣವನ್ನಷ್ಟೇ, ಅದೂ ಅವರು ಭಾರತದ ಮೇಲೆ ಮತ್ತಷ್ಟು ದಾಳಿಯನ್ನು ಮಾಡಲು ಪ್ಲಾನ್‌ ಮಾಡುತ್ತಿದ್ದಿದ್ದರ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದೆ ಭಾರತ. ಇದನ್ನು ಪ್ರತೀಕಾರದ ದಾಳಿ ಎಂದೂ ಕರೆಯುವುದಕ್ಕಾಗುವುದಿಲ್ಲ ಏಕೆಂದರೆ, ಪ್ಲಾನ್‌ ಮಾಡಿದ ಮಸೂದ್‌ ಅಜರ್‌ ಎಂಬ ಉಗ್ರ ಇನ್ನೂ ಬದುಕಿಯೇ ಇದ್ದಾನೆ. ದಾಳಿಗೆ ಸತ್ತಿದ್ದು ಆತನ ಬಾವ ಅಷ್ಟೇ.

ಆದರೆ, ಉಗ್ರರನ್ನು ಕೊಂದರೆ ಪಾಕಿಸ್ಥಾನಕ್ಕೆ ಮೆಣಸಿನಕಾಯಿ ಇಟ್ಟ ಅನುಭವವಾಗಿ ಭಾರತದ ಮೇಲೆ ದಾಳಿ ಮಾಡಿ, ಭಾರತದ ಮಿಗ್‌ ವಿಮಾನವನ್ನು ಹೊಡೆದುರುಳಿಸಿ ಅಭಿನಂದನ್‌ ಎಂಬ ಪೈಲಟ್‌ನನ್ನು ಬಂಧಿಸಿದೆ. ಕೇವಲ ಬಂಧನವಲ್ಲ, ಬಂಧನಕ್ಕೂ ಮುನ್ನ ಆತನಿಗೆ ಹಿಂಸೆ ನೀಡಲಾಗಿದೆ. ನಂತರ ಆತನ ಹೆಸರು ಕುಲ ಗೋತ್ರವನ್ನೆಲ್ಲ ಕೇಳಿ ಸಂದರ್ಶನ ಮಾಡಿ ವಿಡಿಯೊವನ್ನು ಸಹ ಬಿಟ್ಟಿದೆ. ಯುದ್ಧ ಖೈದಿಯ ಜತೆ ಹೀಗೆ ನಡೆದುಕೊಳ್ಳುವುದು, ನಡೆಸಿಕೊಳ್ಳುವುದು ಜೆನೀವಾ ಕನ್ವೆನ್ಷನ್‌ ಪ್ರಕಾರವೂ ದೊಡ್ಡ ಅಪರಾಧ. ಅಂದರೆ ಒಂದು ದೇಶ ಯುದ್ಧಕ್ಕೆ ತಯಾರಾಗಬೇಕಾದಂಥ ಎಲ್ಲ ತಪ್ಪನ್ನು ಪಾಕ್‌ ಮಾಡುತ್ತಿದೆ.

ಆದರೆæ ಭಾರತದಲ್ಲಿ ಕೆಲ ಮೆದುಳಿರುವ ಜಾಗದಲ್ಲಿ ಮೂತ್ರಪಿಂಡವಿರುವ ಮಂದಿ ಮಾತ್ರ ಯುದ್ಧ ಬೇಡ ಎಂದು ಬೊಬ್ಬೆಯಿಡುತ್ತಿದ್ದಾರೆ. ಅಯ್ಯೋ ಯುದ್ಧದಲ್ಲಿ ಸಾವು ನೋವುಗಳಾಗುತ್ತವೆ, ರಕ್ತ ಹರಿಯುತ್ತದೆ ಹಾಗಾಗಿ ಯುದ್ಧ ಬೇಡವೆಂದು ಅದೇ ಕೆಂಪು ರಕ್ತ ಹರಿಸಿಯೇ ಬಂದ ಮಾಜಿ ನಕ್ಸಲರೂ ಒದರುತ್ತಿದ್ದಾರೆ.

ಯುದ್ಧ ಮಾಡುತ್ತೀವಿ ಎಂದು ಇವರಿಗೆ ಹೇಳಿದವರಾದರೂ ಯಾರು? ಭಾರತ ಸರ್ಕಾರಕ್ಕೆ, ಭಾರತದ ಹಿತ ಮುಖ್ಯವೇ ಹೊರತು ಭಾರತ ಪಾಕಿಸ್ಥಾನದ ಮೇಲೆ ಯುದ್ಧ ಮಾಡಬೇಕೋ ಬೇಡವೋ ಎಂಬುದಲ್ಲ. ಯುದ್ಧ ಬೇಡ ಎಂದು ಈ ಸಮಯದಲ್ಲಿ ಬುದ್ಧಿಜೀವಿಗಳು ಓಲೈಸುವ, ಹಾರೈಸುವ ಪಾಕಿಸ್ಥಾನಕ್ಕೆ ಹೇಳಬೇಕೇ ವಿನಾ ಭಾರತಕ್ಕಲ್ಲ.
ಅಸಲಿಗೆ ಭಾರತ ಯುದ್ಧವನ್ನು ಶುರು ಮಾಡಿಯೇ ಇಲ್ಲ. ನಮ್ಮ ಯುದ್ಧ ವಿಮಾನಗಳ ಮೇಲೆ ದಾಳಿ ಮಾಡಿ, ನಮ್ಮವರನ್ನು ಬಂಧಿಸಿ ಯುದ್ಧ ಮಾಡುವಂತೆ ಪ್ರೇರೇಪಿಸುತ್ತಿರುವುದು ಪಾಕಿಸ್ಥಾನ. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಉಗ್ರರ ಪಟ್ಟಿಯಲ್ಲಿರುವ ಮಸೂದ್‌ ಅಜರ್‌ನನ್ನು ಐಎಸ್‌ಐ ಸೇಫ್‌ ಹೌಸ್‌ನಲ್ಲಿಟ್ಟು ಅವನಿಗೆ ಅನ್ನ ನೀರು ಕೊಟ್ಟು, ಸಂಘಟನೆ ನಡೆಸುವುದಕ್ಕೆ ಹಣವೂ ಕೊಟ್ಟು ಬೆಳೆಸುತ್ತಿರುವ ಪಾಕಿಸ್ಥಾನಕ್ಕೆ ಯುದ್ಧ ಬೇಕಾಗಿದೆಯೇ ವಿನಾ ಭಾರತಕ್ಕಲ್ಲ.

ಪಾಕಿಸ್ಥಾನ ನಮ್ಮನ್ನು ಇವತ್ತು ನಿನ್ನೆಯಿಂದ ಕೆಣಕುತ್ತಿಲ್ಲ. ಅದು ವಿಭಜನೆ ಆಗುವುದಕ್ಕೂ ಮುನ್ನ ಅವಿಭಜಿತ ಪಾಕ್‌ನ ಮುಸ್ಲಿಮರು ಕಾಟ ಕೊಟ್ಟರು, ವಿಭಜನೆ ಆದಮೇಲೆ ಪಾಕಿಸ್ಥಾನವೇ ಭಾರತದ ವಿರುದ್ಧ ನಿಂತಿದೆ.

1993ರಲ್ಲಿ ನಡೆದ ಬಾಂಬೇ ಬ್ಲಾಸ್ಟ್‌ನಲ್ಲಿ 257 ಜನ ಮೃತಪಟ್ಟರು, 2001ರ ಜಮ್ಮು ಕಾಶ್ಮೀರ ಅಸೆಂಬ್ಲಿಯಲ್ಲಿ 38 ಸಾವು, 2001ರ ಪಾರ್ಲಿಮೆಂಟ್‌ ದಾಳಿಯಲ್ಲಿ 9, 2002ರ ಅಕ್ಷರಧಾಮ ದೇವಸ್ಥಾನ ದಾಳಿಯಲ್ಲಿ 30, 2003ರ ಮುಂಬೈ ಬ್ಲಾಸ್ಟ್‌ನಲ್ಲಿ 54, 2005ರ ದೆಹಲಿಯಲ್ಲಿ 62, 2006ರ ಮುಂಬೈ ರೈಲು ಸೊಧೀಟಿಸಿ 209 ಜನರ ಸಾವು, 2008ರ ಜೈಪುರದಲ್ಲಿ 63, 2008ರ ಮುಂಬೈನಲ್ಲಿ 171 ಜನ, ಉರಿ ದಾಳಿಯಲ್ಲಿ 19, ಈಗ ಪುಲ್ವಾಮಾದಲ್ಲಿ 44! ಅಷ್ಟೇ ಅಲ್ಲ, ಈಗ ನಮ್ಮ ಭಾರತದ ಯುದ್ಧ ವಿಮಾನವನ್ನು ಕೆಡವಿದ ಮೇಲೂ ಯುದ್ಧ ಮಾಡಬಾರದು ಮಾತುಕತೆಯಿಂದ ಉಗ್ರವಾದವನ್ನು ನಿಲ್ಲಿಸಬೇಕು ಎಂಬ ಬುದ್ಧಿಜೀವಿಯು ನಿಜಕ್ಕೂ ಭಾರತೀಯ ಅಪ್ಪನಿಗೇ ಹುಟ್ಟಿದ್ದಾನೇಯೇ/ಹುಟ್ಟಿದ್ದಾಳೆಯೇ ಎಂದು ಪರೀಕ್ಷೆ ಮಾಡಿ ನೋಡಿಕೊಕೊಳ್ಳಲಿ.

44 ಯೋಧರ ಪ್ರಾಣ ಹೋಯ್ತಲ್ಲ, ಈಗ ಅವರ ಮನೆಗೆ ಯಾರು ದಿಕ್ಕು? ಈ ಬುದ್ಧಿಜೀವಿಗಳು ಒಮ್ಮೆಯಾದರೂ ಹೋಗಿ ನೋಡಿದ್ದಾರಾ? ರಾತ್ರಿಯಾಗುವುದನ್ನೇ ಕಾಯುತ್ತಾ ಎಣ್ಣೆಯನ್ನು ಗ್ಲಾಸಿಗೆ ಹಾಕಿ ದೇಶದ ಬಗ್ಗೆ ಮಾತಾಡುವ ಬುದ್ಧಿಜೀವಿಗಳಿಗೆ/ಕವಯತ್ರಿಗಳಿಗೆ/ದೊಡ್ಡ ಬಿಂದಿ ಮನೆಹಾಳರಿಗೆ ಅದೇ ರಾತ್ರಿಯಾಗುವುದನ್ನೇ ಕಾದು, ಶತ್ರುಗಳೊಂದಿಗೆ ಹೋರಾಟ ಮಾಡುತ್ತಾರಲ್ಲಆ ಯೋಧರ ಬಗ್ಗೆ ತಿಳಿಯುವುದಿಲ್ಲವೇಕೆ?

ಯುದ್ಧದಲ್ಲಿ ಏನಾಗುತ್ತದೆ, ಏನಾಗುವುದಿಲ್ಲವೆಂದು ನಮಗೆ ಬುದ್ಧಿಜೀವಿಗಳಿಂದ ತಿಳಿಯಬೇಕಾದ ಅವಶ್ಯಕತೆಯೇ ಇಲ್ಲ. ಕಳೆದ ಬಾರಿ ಯುದ್ಧ ಬೇಡ ಎಂದದ್ದಕ್ಕೇ ಅಲ್ಲವೇ1999ರಲ್ಲಿ ಕಂದಾಹಾರ್‌ ವಿಮಾನ ಹೈಜಾಕ್‌ ಆದಾಗ ಉಗ್ರರ ಬೇಡಿಕೆಯಂತೆ ಮೌಲಾನಾ ಮಸೂದ್‌ ಅಜರ್‌ನನ್ನು ಬಿಡುಗಡೆ ಮಾಡಿ ಕಳುಹಿಸಿದ್ದು? ಆದರೆ ನಮ್ಮಿಂದ ಬಿಡಿಸಿಕೊಂಡು ಹೋದ ಈ ಮೌಲಾನಾ ಮಸೂದ್‌ನ ಮನಸ್ಸು ಪರಿವರ್ತನೆಯಾಗಿ ಯುದ್ಧ ಬೇಡ ಎಂದು ಮಸೀದಿಯಲ್ಲಿ ನಮಾಜ್‌ ಮಾಡುತ್ತಾ ಕೂರಲಿಲ್ಲ. ಅಲ್ಲಾಹುವಿನ ಹೆಸರಿನಲ್ಲಿ ಭಾರತದ ಮೇಲೆ ಮತ್ತೊಮ್ಮೆ ದಾಳಿ ಮಾಡಿ, ನಮಗೆ ವಾಪಸ್‌ ಒಳ್ಳೆಯ ಬಹುಮಾನವನ್ನೇ ನೀಡಿದ್ದಾನೆ. ಈಗ ಮಾಧ್ಯಮಗಳು, ಬುದ್ಧಿಜೀವಿಗಳು ಬಳೆ ಒಡೆದುಕೊಳ್ಳುತ್ತಿದ್ದ ಹಾಗೇ, ಅಂದೂ ಶಾಂತಿ ಶಾಂತಿ ಎಂದು ಬಳೆ ಒಡೆದುಕೊಂಡಿದ್ದರು.

ಆಗೆಲ್ಲ ಬೇರೆ ಸಾಮಾಜಿಕ ಜಾಲತಾಣಗಳು ಇಲ್ಲವಾದ್ದರಿಂದ, ಎನ್‌ಡಿಟಿವಿ ಹಾಕಿದ್ದೇ ಸುದ್ದಿ. ಆ ಸಮಯದಲ್ಲಿ ಆಫ್ಘಾನಿಸ್ಥಾನ, ತಾಲಿಬಾನ್‌ ಮತ್ತು ಈ ಮಾಧ್ಯಮದ ಪತ್ರಕರ್ತೆಯೊಬ್ಬಳ ಸಹಾಯ ಪಡೆದ ಐಎಸ್‌ಐ ಮೂರು ಉಗ್ರಗಾಮಿಗಳನ್ನು ಭಾರತದಿಂದ ಬಿಡಿಸಿಕೊಂಡಿತ್ತು. ಬಿಡುಗಡೆಯಾದ ಉಗ್ರರ ಪೈಕಿ ಒಬ್ಬ , ಪಾಕಿಸ್ಥಾನದಲ್ಲಿರುವ ಅಮೆರಿಕ ಮೂಲದ ವಾಲ್‌ ಸ್ಟ್ರೀಟ್‌ ಜರ್ನಲ್‌ ಪತ್ರಕರ್ತ ಡೇನಿಯಲ್‌ ಪರ್ಲ್‌ನ ತಲೆ ಕತ್ತರಿಸಿದ್ದ. ಶಾಂತಿ ಶಾಂತಿ ಎಂದು ನಾವು ಈ ಉಗ್ರಗಾಮಿಗಳನ್ನು ಬಿಟ್ಟರೆ ಅವರು ನಮ್ಮನ್ನು ವಾಪಸ್‌ ಬಂದು ಕೊಲ್ಲುತ್ತಾರೆಯೇ ವಿನಾ, ಇಸ್ಲಾಮಿನ ನಂಬಿಕೆಯ ಹಾಗೆ ನ್ಯಾಯಯುತವಾಗಿ ಜನ್ನತ್‌ಗೆ ಹೋಗಿ 72 ಕನ್ಯೆಯರನ್ನು ಅನುಭವಿಸುವ ಒಂದು ಕೆಲಸವನ್ನೂ ಅವರು ಮಾಡುವುದಿಲ್ಲ. ಇಂಥವರ ಜತೆ ಶಾಂತಿ ಮಾತುಕತೆಯಾಡಿದರೂ ಏನ ಪ್ರಯೋಜನ ಹೇಳಿ? ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ಹಫೀಜ್‌ ಸಯೀದ್‌ನನ್ನು ಕೊಲ್ಲುವುದಕ್ಕೆ ಯುದ್ಧ ಮಾಡದೇ ಬಿಟ್ಟ ನಮಗೆ ಸಿಕ್ಕ ಉಡುಗೊರೆಯೇನು ಹೇಳಿ?

ಆದರೆ ಇಷ್ಟರ ಮೇಲೂ ಉಗ್ರಗಾಮಿಗಳನ್ನು ಕೊಲ್ಲಬಾರದು ಹಿಂಸಾಚಾರ ಬೇಡ ಎನ್ನಲು ಭಾರತೀಯ ಯೋಧರು ಷಂಡರಲ್ಲ. ಪ್ರತ್ಯುತ್ತರ ಕೊಡುವುದಿಲ್ಲ ಎನ್ನಲು ನಿಮ್ಮ ಹಾಗೆ ಅವರ ಮೈಯಲ್ಲಿ ಹರಿಯುತ್ತಿರುವುದು ರಾತ್ರಿ ಕುಡಿದ ವೈನ್‌ ಅಲ್ಲ. ತಾಯಿ ಭಾರತಿಯ ರಕ್ತ. ಇದರ ಬಗ್ಗೆ ಯಾಕೆ ದೇಶ ವಿರೋಧಿ ಕವಯತ್ರಿಯರು, ಹಾಡುಗಾರ್ತಿಯರು ಬಾಯಿ ಬಿಚ್ಚುವುದಿಲ್ಲ.

ನಿಜ ಹೇಳಬೇಕೆಂದರೆ, ಬುದ್ಧಿಜೀವಿಗಳು ಹೀಗೆ ಮಾತಾಡುವುದೇ ಪಾಕಿಸ್ಥಾನದ ಆಶಯ. ಅದೇ ಅವರ ಅಮನ್‌ ಕಿ ಆಶಾ! ಇಲ್ಲಿನ ಬುದ್ಧಿಜೀವಿಯೊಬ್ಬ ಯುದ್ಧ ಬೇಡ ಎಂದಿದ್ದನ್ನು ಪಾಕಿಸ್ಥಾನದ ನ್ಯೂಸ್‌ ಚಾನೆಲ್‌ಗಳು ಬಿತ್ತರಿಸುತ್ತಿದೆ. ಸರ್ಜಿಕಲ್‌ ಸ್ಟ್ರೈಕ್‌ನ್ನು ಕಾಂಗ್ರೆಸ್‌ ಮೊದಲು ಬೆಂಬಲಿಸಿದರೂ, ನಂತರ ಮೋದಿ ವಿರುದ್ಧ ಹೇಳಿಕೆ ನೀಡುತ್ತಿದೆ. ರಾಹುಲ್‌ ಗಾಂಧಿ ಹೀಗೆ ನೀಡುತ್ತಿರುವ ಪ್ರತಿಯೊಂದು ಹೇಳಿಕೆಯನ್ನೂ ಪಾಕಿಸ್ಥಾನದ ಟ್ವಿಟರ್‌ ಹ್ಯಾಂಡಲ್‌, ಪಾಕ್‌ ರೇಡಿಯೊ ಇತ್ಯಾದಿಗಳು ಪ್ರಚಾರ ಮಾಡುತ್ತಿವೆ.

ಅಂದರೆ ಈಗ ಯುದ್ಧ ಬೇಡ, ಹೊಡೆದಾಟ ಬೇಡ ಎಂಬ ಮಾತು ಭಾರತದ ಪ್ರಜೆಗಳದ್ದೋ ಅಥವಾ ಪಾಕಿಸ್ಥಾನಿಯರದ್ದೋ?

ಕಾರ್ಗಿಲ್‌ ಯುದ್ಧದ ಸಮಯದಲ್ಲೂ, ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರು ಕಷ್ಟಪಟ್ಟು ಭಾರತೀಯ ಸೇನೆಯನ್ನು ಮುನ್ನಡೆಸುತ್ತಿದ್ದರೆ, ಅತ್ತ ಸೋನಿಯಾ ಗಾಂಧಿ ಮತ್ತು ಆಕೆಯ ಸರ್ಕಾರ, ಭಾರತ ಸರ್ಕಾರದ ನಡೆಗಳ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಾ ಭಾರತದ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿದ್ದರು. ಈಗಲೂ ಯುದ್ಧ ಬೇಡ ಎನ್ನುತ್ತಿರುವವರ ಉದ್ದೇಶವೂ ಅದೇ ಆಗಿದೆ.

ಈಗ ಇವರ ವಾದಕ್ಕೆ ಸರಿಯಾಗಿ ಸಿಕ್ಕಿರುವವರು ಪೈಲಟ್‌ ಅಭಿನಂದನ್‌ ವರ್ತಮಾನ್‌. ನಮಗೆ ಈಗ ಅಭಿನಂದನ್‌ ವಾಪಸ್‌ ಬರುವುದು ಮುಖ್ಯವೇ ಹೊರತು, ಯುದ್ಧವಲ್ಲ ಎಂದು ಹೊಸ ರೀತಿಯಲ್ಲಿ ಬಳೆ ಒಡೆದುಕೊಳ್ಳುತ್ತಿದ್ದಾರೆ. ಇದರಲ್ಲೂ ಒಂದು ಷಡ್ಯಂತ್ರವಿದೆ. ಅಭಿನಂದನ್‌ ಮುಖ ತೋರಿಸಿ, ಪಾಕಿಸ್ಥಾನಕ್ಕೆ ಭಾರತ ಹಾನಿ ಮಾಡದಂತೆ ನೋಡಿಕೊಳ್ಳಲಾಗುತ್ತಿದೆ. ಮೊದಲಿಗೆ ಇದೂ ಕೂಡ ಪಾಕಿಸ್ಥಾನದ ಪ್ಲಾನ್‌! ಅವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಕ್ಕೆ ಬಿಟ್ಟರು. ಇಲ್ಲಿರುವ ಸ್ಲೀಪರ್‌ ಸೆಲ್‌ಗಳು ಅದನ್ನು ಬೆಂಬಲಿಸಿದರು. ಇದನ್ನು ನಾವು ಪ್ರಶ್ನಿಸಿದರೆ, ಅಭಿನಂದನ್‌ ಜಾಗಕ್ಕೆ ನೀವು ಹೋಗುತ್ತೀರಾ ಎಂದು ಮೇಧಾವಿಗಳಂತೆ, ಜೀವಪರರಂತೆ ಪ್ರಶ್ನಿಸುತ್ತಾರೆ. ಹೀಗೆ ಪ್ರಶ್ನಿಸುವವರಲ್ಲಿ ಹಾಡುಗಾರ್ತಿ ಎಂ.ಡಿ. ಪಲ್ಲವಿಯೂ ಒಬ್ಬರು.

ಬೇರೆಯವರಿಗೆ ಅಭಿನಂದನ್‌ ಜಾಗಕ್ಕೆ ನೀವು ಹೋಗುತ್ತೀರಾ ಎಂದೋ ಅಥವಾ ಯುದ್ಧವಾದರೆ ನಿಮ್ಮ ಮಕ್ಕಳನ್ನು ಕಳುಹಿಸುತ್ತೀರಾ ಎಂದೋ ಕೇಳುವ ಈ ಎಂ.ಡಿ. ಪಲ್ಲವಿ, ಉಗ್ರಗಾಮಿಗಳ ಜತೆ ಶಾಂತಿ ಮಾತುಕತೆಗೆ ಹೋಗುತ್ತಾರಂತಾ? ನೂರಾರು ಜನರನ್ನು ಕೊಂದ, ಅತ್ಯಾಚಾರವೆಸಗಿದ ಉಗ್ರರು ಇರುವ ಕಡೆ ಯಾಕೆ ಎಂ.ಡಿ.ಪಲ್ಲವಿಯೇ ಹೋಗಿ ಒಂದು ಹಾಡಿನ ಪಲ್ಲವಿ ಹಾಡಿ, ಶಾಂತಿ ಮಾತುಕತೆ ನಡೆಸಬಾರದು. ಅದಕ್ಕೆಲ್ಲ ವ್ಯವಸ್ಥೆಯನ್ನು ಸರ್ಕಾರ ಬೇಡ, ನಾವು ಭಾರತೀಯರೇ ಮಾಡೋಣವಲ್ಲವೇ?

ಆಗಲ್ಲ ತಾನೇ? ಹಾಗಾದರೆ, ಬಿಟ್ಟಿ ಇಂಟರ್ನೆಟ್‌ ಇದೆ ಎಂದು ಫೇಸ್ಬುಕ್‌ನಲ್ಲಿ ಸ್ಟೇಟಸ್‌ ಜಪ್ಪುವುದು ಬಿಡಿ! ಪುಲ್ವಾಮಾದಲ್ಲಿ ನಮ್ಮ ಯೋಧರು ಹುತಾತ್ಮರಾದಾಗ ಇವರೆಲ್ಲ ಒಂದೇ ಒಂದು ಶ್ರದ್ಧಾಂಜಲಿಯನ್ನೂ ಅರ್ಪಿಸಿಲ್ಲ. ಈಗ ಬಂದು ನಮಗೇ ಬುದ್ಧಿ ಹೇಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರಧಾನಿ ಮೋದಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎನ್ನುತ್ತಿದ್ದಾರೆ. ಅಂದು ಮುಂಬೈನ ತಾಜ್‌ ದಾಳಿಯಾದ ದಿನ ಇದೇ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಪಾರ್ಟಿ ಮಾಡುತ್ತಿದ್ದರು ಎಂಬ ವಿಷಯವನ್ನ ಅಡಿಗೆ ಹಾಕಿ ಕುಳಿತಿರುವುದು ಮಾತ್ರ ಸೋಜಿಗ.

ಭಾರತೀಯ ಯೋಧರು ಎಂಥ ಸ್ಥಿತಿಗೂ ತಯಾರಾಗೇ ಹೋಗಿರುತ್ತಾರೆ. ಅವರಿಗೆ ಇಂಥ ಪರಿಸ್ಥಿತಿಗೆ ತರಬೇತಿ ನೀಡಿರುತ್ತಾರೆ. ಅಭಿನಂದನ್‌ಗೂ ಹಾಗೆಯೇ. ಪಾಕಿಸ್ಥಾನದ ನೆಲದಲ್ಲಿದ್ದರೂ, ಅವರು ನಿನ್ನ ಬಾಸ್‌ ಯಾರು? ನಿನಗೆ ಭಾರತ ಏನು ಹೇಳಿ ಕಳುಹಿಸಿತ್ತು? ನಿನ್ನ ಕುಟುಂಬ ಎಲ್ಲಿದೆ ಎಂದೆಲ್ಲ ಕೇಳಿದರೂ, ನನ್ನ ಹೆಸರು ವಿಂಗ್‌ ಕಮಾಂಡರ್‌ ಅಭಿನಂದನ್‌, ನನ್ನ ಧರ್ಮ ಹಿಂದೂ, ನಾನು ಪೈಲಟ್‌. ಮಿಕ್ಕ ಯಾವುದೇ ವಿಷಯಗಳೂ ನಿಮಗೆ ಅನಗತ್ಯ. ಅದನ್ನೆಲ್ಲ ನಾನು ಹೇಳುವುದೂ ಇಲ್ಲ ಎಂದಿದ್ದಾರೆ.

ಇಂಥ ಅಭಿನಂದನ್‌ಗೆ ಬುದ್ಧಿಜೀವಿಗಳ ಸ್ಪಂದನೆ ಅಗತ್ಯವಿದೆ ಎಂದು ಅನಿಸುತ್ತದೆಯಾ? ಜೆನೀವಾ ಕನ್ವೆನ್ಷನ್‌ ಪ್ರಕಾರ ಯುದ್ಧ ಖೈದಿಯನ್ನು ಬಿಡಲೇ ಬೇಕು. ಇಮ್ರಾನ್‌ ಖಾನ್‌ ಬಿಡುತ್ತೇನೆ ಎಂದೂ ಹೇಳಿದ್ದಾರೆ. ವಾಪಸ್‌ ಬಂದು ಮತ್ತೆ ವಿಮಾನ ಹತ್ತು, ಪಾಕಿಸ್ಥಾನಕ್ಕೆ ಬಾಂಬ್‌ ಹಾಕು ಎಂದರೂ ಮುಲಾಜಿಲ್ಲದೇ ಮತ್ತೊಮ್ಮೆ ಹೋಗಬಲ್ಲರು ಅಭಿನಂದನ್‌.
ಮಾತಾಡುವ ಚಟವಿದ್ದರೆ, ಯುದ್ಧ ಬೇಡ ಎಂದು ಪಾಕಿಸ್ಥಾನಕ್ಕೆ ಬುದ್ಧಿ ಹೇಳಿ. ಭಾರತಕ್ಕೂ ಯುದ್ಧ ಬೇಕಾಗಿಲ್ಲ. ಆದರೆ ಶಾಂತಿ ಸ್ಥಾಪನೆಗೆ ಯುದ್ಧ ಅನಿವಾರ್ಯ ಎಂದರೆ, ಅದಕ್ಕೂ ನಮ್ಮ ಯೋಧರು ತಯಾರಾಗಿದ್ದಾರೆ. ಯುದ್ಧ ಮಾಡುತ್ತಾರೆ.

 

Leave a Reply

Copyright©2020 Chiranjeevi Bhat All Rights Reserved.
Powered by Dhyeya