
ನಮ್ಮ ಭಾರತೀಯ ನ್ಯಾಯಾಲಯಗಳಲ್ಲಿ ಒಂದೇ ವಿಷಯಕ್ಕೆ ಕೊಡುವ ಎಲ್ಲ ತೀರ್ಪುಗಳೂ ಒಂದೇ ರೀತಿಯ ಹಾಗೆ ಇರುವುದಿಲ್ಲ. ತೀರ್ಪು ನೀಡುವಾಗ ನ್ಯಾಯಾಧೀಶರು ಬೇರೆ ಯಾವ ವಿಚಾರಗಳನ್ನೂ ಚರ್ಚಿಸದೇ ನೇರವಾಗಿ ಸಮಸ್ಯೆಗೆ ತೀರ್ಪು ನೀಡಬಹುದು. ಅಥವಾ ಒಂದು ಸಮಸ್ಯೆಗೆ ತೀರ್ಪು ನೀಡುವಾಗ, ಅದರ ಆಳಕ್ಕಿಳಿದು ತೀರ್ಪು ನೀಡಿದ ಉದಾಹರಣೆಗಳೂ ಇವೆ. ಅಂಥ ತೀರ್ಪು ಕೆಲವೊಮ್ಮೆ ಇನ್ನಿತರ ಹೋರಾಟಗಳಿಗೆ ಧ್ವನಿಯೂ ಆಗಿದೆ.
ಮೊನ್ನೆ ಮೇಘಾಲಯ ಹೈಕೋರ್ಟ್ ಇಂಥದ್ದೇ ಒಂದು ತೀರ್ಪು ನೀಡಿದೆ. ನಿವಾಸ ಪ್ರಮಾಣಪತ್ರ ಕೊಡುವುದಕ್ಕೆ ನಿರಾಕರಿಸಿದ ಪ್ರಕರಣದಲ್ಲಿ ತೀರ್ಪು ಪ್ರಕಟಿಸುವಾಗ ನ್ಯಾಯಮೂರ್ತಿಗಳಾದ ಎಸ್.ಆರ್.ಸೇನ್ ಅವರು, ‘ಪಾಕಿಸ್ಥಾನ ತಾನು ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಿಕೊಂಡಿತ್ತು. ಭಾರತದ ವಿಭಜನೆ ಧರ್ಮದ ತಳಹದಿಯಲ್ಲಿ ಆಗಿದ್ದರಿಂದ, ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಿತ್ತು’ ಎಂದು ಹೇಳಿದ್ದಾರೆ.
ಇದಷ್ಟೇ ಅಲ್ಲ, ಪಾಕಿಸ್ಥಾನದಲ್ಲಿ ನೆಲೆಸಿರುವ ಹಿಂದೂ, ಜೈನ, ಪಾರ್ಸಿ, ಬೌದ್ಧ ಇತ್ಯಾದಿ ಧರ್ಮದ ಜನರು ಭಾರತಕ್ಕೆ ವಾಪಸ್ ಬರಲಿಚ್ಛಿಸಿದರೆ ಅಥವಾ ಬಂದು ಇಲ್ಲೇ ವಾಸಿಸುತ್ತಿದ್ದರೆ, ಅವರಿಗೆ ನಿವಾಸ ಪ್ರಮಾಣಪತ್ರ ಅಷ್ಟೇ ಅಲ್ಲದೇ ಭಾರತದ ಪೌರತ್ವವನ್ನು ಕೊಡಬೇಕು ಎಂದು ಹೇಳಿದ್ದಾರೆ. ಇದರ ಜತೆಗೆ ಏಕರೂಪ ನಾಗರಿಕ ಸಂಹಿತೆಯನ್ನೂ ತರಬೇಕು. ಇವೆಲ್ಲವೂ ಈಗಿರುವ ನರೇಂದ್ರ ಮೋದಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
ಈ ನ್ಯಾಯಮೂರ್ತಿಗಳು ತಾವು ಅಧ್ಯಯನ ಮಾಡಿದ ಪುಸ್ತಕದ ಕೆಲ ಅಂಶಗಳನ್ನು ಕೋಟ್ ಮಾಡಿ, ಪಾಕಿಸ್ಥಾನದ ಮುಸ್ಲಿಮರು ನಮ್ಮ ಹಿಂದೂಗಳಿಗೆ ಚಿತ್ರ ವಿಚಿತ್ರವಾದ ಹಿಂಸೆಗಳನ್ನು ನೀಡಿದ್ದರು. ಇದನ್ನೆಲ್ಲ ನೋಡಿದವರು ಬಹಳ ಖೇದವಾಗುತ್ತದೆ ಎಂದೂ ಹೇಳಿದ್ದಾರೆ. ಈ ಸಂಗತಿಗಳು ಈಗ ಎಲ್ಲೆಡೆ ಚರ್ಚೆಯಾಗುತ್ತಿವೆ. ಕೆಲ ಬುದ್ಧಿಜೀವಿಗಳಂತೂ ನ್ಯಾಯ ಮೂರ್ತಿಗಳನ್ನೇ ಹಿಂದೂಪರ, ಕೋಮುವಾದಿ ಎಂದೆಲ್ಲ ಮಾಡಿಬಿಟ್ಟಿದ್ದಾರೆ.
ಹಾಗಾದರೆ ಅವರು ಹೇಳಿರುವ ಸಂಗತಿ ಕೋಮುವಾದ ಹಬ್ಬಿಸುವಂಥದ್ದೋ ಅಥವಾ ಅವಿಭಜಿತ ಭಾರತದ ಮುಸ್ಲಿಮರು ಹಿಂದೂಗಳ ವಿರುದ್ಧ ಮಾಡಿದ್ದು ಕೋಮುವಾದವೋ ಎಂದು ಕೇಳಬೇಕಾಗುತ್ತದೆ. ಅದಕ್ಕೆ ಇತಿಹಾಸದಲ್ಲೇ ಉತ್ತರ ಸಿಗುತ್ತದೆ.
ಬೆಂಗಾಲಿ ಹಿಂದೂಗಳನ್ನು ಒಟ್ಟು ಮೂರು ಬಾರಿ ಬಾಂಗ್ಲಾದೇಶ ಅಥವಾ ಪೂರ್ವ ಪಾಕಿಸ್ಥಾನದಿಂದ ಹೊರಗಟ್ಟಲಾಗಿತ್ತು. ಅದೂ ಸಾಮಾನ್ಯವಾಗಲ್ಲ. ಹೊರಗಟ್ಟುವಾಗ ಅತ್ಯಾಚಾರ, ಹಿಂಸೆ, ಶರಿಯಾ ಪ್ರಕಾರ ಹತ್ಯೆ ಇತ್ಯಾದಿಗಳೆಲ್ಲವೂ ನಡೆಯುತ್ತಿತ್ತು.
ಮೊದಲನೇ ಸಲ ವಿಭಜನೆ ವೇಳೆ, ಎರಡನೇ ಬಾರಿ 1950 ಮತ್ತು 1960ರಲ್ಲಿ ಪಾಕಿಸ್ಥಾನಿ ಸರ್ಕಾರವಿದ್ದಾಗ ಹಾಗೂ ಮೂರನೇ ಬಾರಿ ಶೇಖ್ ಮುಜಿಬುರ್ ರಹಮಾನ್ನನ್ನು ಹತ್ಯೆ ಮಾಡಿದ್ದಾಗ. ಈ ಮೂರು ಸಂದರ್ಭದಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿಂದ (ಅವಿಭಜಿತ ಭಾರತದ/ಬಾಂಗ್ಲಾದೇಶಿ ಮುಸ್ಲಿಮರು) ಹಿಂಸೆ ಅನುಭವಿಸಿದವರು. ಅದು ಈಗಲೂ ನಡೆಯುತ್ತಿದೆ. ಆ ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶ ಪ್ರದೇಶದಲ್ಲಿ 1947ರಲ್ಲಿ 29.7% ಅಲ್ಪಸಂಖ್ಯಾತರಿದ್ದರು. 1970 ವೇಳೆಗೆ ಅದು 20%ಗೆ ಇಳಿದಿತ್ತು. ಈಗ ಅವರ ಸಂಖ್ಯೆ ಕೇವಲ 10% ಆಗಿದೆ. ಆ ಅಲ್ಪಸಂಖ್ಯಾತರಲ್ಲಿ 8-9% ಹಿಂದೂಗಳೇ ಇದ್ದಾರೆ.
ಈ ಸಂಖ್ಯೆಗಳೆಲ್ಲ ಹೇಳಿದರೆ, ಆ ಮುಸ್ಲಿಮರ ಕ್ರೌರ್ಯ ಹೇಗಿತ್ತು ಎಂದು ತಿಳಿಯುವುದಿಲ್ಲ. ಬಂಗಾಳಿ ಮತ್ತು ಅಸ್ಸಾಮಿ ಭಾಷೆಗಳಲ್ಲಿ ಬಂದ ಹಲವಾರು ಕಾದಂಬರಿಗಳಲ್ಲಿ ಸಹ ಇದರ ಉಲ್ಲೇಖವಿದೆ. 1950ರಲ್ಲಿ ಡಾಕಾ, ಚಿತ್ತಗಾಂಗ್, ಮೋಯ್ಮೊನ್ಸಿನ್ ಎಂಬ ಪ್ರದೇಶಗಳಲ್ಲಿ ಹಿಂದೂಗಳು ಬಹಳಷ್ಟು ಸಂಖ್ಯೆಯಲ್ಲಿದ್ದರು. ಉತ್ತಮ ಸ್ಥಾನದಲ್ಲಿದ್ದರು. ಅಲ್ಲಿ ಮುಸ್ಲಿಮರ ದಾಳಿ ಹೆಚ್ಚುತ್ತಿತ್ತು. ಮನೆ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ದೋಚುತ್ತಿದ್ದರು. ಇದಕ್ಕೆ ಹೆದರಿದ ಹಿಂದೂಗಳು ತಾವಾಗೇ ಮುಸ್ಲಿಮರಿಗೆ ಮನೆ ಮಾರಿ ಭಾರತದ ಕಡೆ ಮುಖ ಮಾಡುತ್ತಿದ್ದರು. ಕೆಲವರಿಗೆ ಮುಸ್ಲಿಮರು ಕೈತುಂಬ ಹಣ ನೀಡಿದರೆ, ಬಹುತೇಕರಿಗೆ ನಾಲ್ಕು ಕಾಸು ಕೊಟ್ಟು ಅಟ್ಟುತ್ತಿದ್ದರು. ಇಂಥ ಪರಿಸ್ಥಿತಿಗೆ ಮಹಾತ್ಮ ಗಾಂಧಿಯೂ ಕಾರಣ ಎಂದು ಆಗಿನ ಜನತೆಯಲ್ಲಿ ಮಾತು ಓಡಾಡುತ್ತಿತ್ತು.
ರಾಜಲಕ್ಷ್ಮೇ ದೇಬಿಯವರ ಕಮಲ್ ಲತಾ ಎಂಬ ಬೆಂಗಾಲಿ ಕಾದಂಬರಿಯಲ್ಲಿ ಮೋಯ್ಮೊನ್ಸಿನ್ನ ಹಿಂದೂ ಮತ್ತು ಕಲ್ಕತ್ತೆಯ ಮುಸ್ಲಿಂ ನಡುವೆ ವಿಭಜನೆ ಆದ ಕಾಲದಲ್ಲಿ ನಡೆಯುವ ಸಂಭಾಷಣೆಯಲ್ಲಿ ಮುಸ್ಲಿಂ ಅಹಂಕಾರದಿಂದ ಹೀಗೆನ್ನುತ್ತಾನೆ: ‘ನೋಡೋ, ನಿನ್ನ ಸ್ಥಾನ ಮತ್ತು ನನ್ನದು ಈಗ ಒಂದೇ ಸಮನಾಗಿಲ್ಲ. ಮಹಾತ್ಮ ಗಾಂಧಿ ಇರುವವರೆಗೆ ನಮಗೆ ಯಾವ ತೊಂದರೆಯೂ ಆಗುವುದಿಲ್ಲ. ಆದರೆ ನೀನು ಇಲ್ಲಿ ಬಹಳ ದಿನಗಳು ಬದುಕಿರುವುದಕ್ಕಾಗುವುದಿಲ್ಲ’ ಎನ್ನುತ್ತಾನೆ. ಅಲ್ಲದೆ ಚಿಂತಕ ಶ್ಯಾಮ ಪ್ರಸಾದ್ ಮುಖರ್ಜಿಯವರ ರಾಜಕೀಯ ಚಿಂತನೆಗೆ ತಿರುವನ್ನು ಕೊಟ್ಟಿದ್ದೂ ಇದೇ ಬಂಗಾಳದ ಕಗ್ಗೊಲೆಗಳು ಎನ್ನುವುದನ್ನು ನೆನಪಿಸಿಕೊಳ್ಳಬಹುದು. ಆಗಿನ ಕಾಲಕ್ಕೇ ಭಾರತದ ಒಂದು ಭಾಗ ಇಸ್ಲಾಮಿಕ್ ರಾಷ್ಟ್ರವಾಗಿಬಿಟ್ಟಿತ್ತು. ಕಂಡ ಕಂಡ ಕಡೆ ಮುಸ್ಲಿಮರು ನುಗ್ಗಿ, ಹಿಂಸಾಚಾರ ನಡೆಸಿದ ಪರಿಣಾಮ ಈಗಿನ ಬಾಂಗ್ಲಾದ ಸಿಲ್ಹಟ್, ಚಿತ್ತಗಾಂಗ್, ಖುಲ್ನಾ, ಮೋಯ್ಮೊನ್ಸಿನ್ನಂಥ ಹಿಂದೂ ಬಹುಸಂಖ್ಯಾತ ಪ್ರದೇಶಗಳು ಸಂಪೂರ್ಣ ನೆಲಸಮಗೊಂಡು, ಮುಸ್ಲಿಮರ ಪಾಲಾಗಿದ್ದವು. ಪಾಕಿಸ್ಥಾನ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಜೋಗೇಂದ್ರ ನಾಥ ಮಂಡಲ್, 1950ರ ಅಕ್ಟೋಬರ್ 8ರಂದು ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡುವಾಗ ಇಂಥ ಹಲವು ಸಂಗತಿಗಳನ್ನು ಬರೆದುಕೊಂಡಿದ್ದಾರೆ. ‘ಎಷ್ಟೇ ಅಕ್ರಮಗಳು ನಡೆದರೂ ನಾನು ಸುಮ್ಮನೇ ಇರಬೇಕಿತ್ತು. ಇದರಿಂದ 32 ಕೋಟಿ ಹಿಂದೂಗಳು ನನ್ನನ್ನು ದೂರ ತಳ್ಳಿದ್ದಾರೆ. ಆದರೂ ನಾನು ಪಾಕಿಸ್ಥಾನಕ್ಕೆ ನಿಯತ್ತಾಗಿಯೇ ಇದ್ದೆ. ಆದರೆ ಬರಬರುತ್ತಾ ಎಲ್ಲೆಡೆ ಹಿಂದೂ ವಿರೋಧಿ ನೀತಿಗಳೇ ಹೆಚ್ಚಾಯ್ತು.
ಚಾಂಡಾಲರು ಎಂದು ಮುಸ್ಲಿಮರು ಉಲ್ಲೇಖಿಸುತ್ತಿದ್ದ ನಾಮಶೂದ್ರ ಎಂಬ ಜನಾಂಗದ ಜನರು ಮುಸ್ಲಿಂ ಸಮುದಾಯದ ಸ್ತ್ರೀಯರಿಗೆ ಹಿಂಸೆ ನೀಡಿದ್ದರು ಎಂದು ಸುಳ್ಳೇ ಹೇಳಿ, ಮುಸ್ಲಿಂ ಸಮುದಾಯವು ನಾಮಶೂದ್ರ ಜನಾಂಗದ ಮೇಲೆ ಹಲ್ಲೆ ಮಾಡಿಸಿಬಿಟ್ಟರು. ದಿನೇದಿನೆ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ನಾನೆಷ್ಟೇ ಪತ್ರ ಬರೆದರೂ ಪಾಕ್ ಪ್ರಧಾನಿಯಾಗಿದ್ದ ಸುಹ್ರಾವಾರ್ದಿ ತಲೆ ಕೆಡಿಸಿಕೊಂಡಿಲ್ಲ.’ ಎಂಬ ಅನೇಕ ಕಾರಣ ಕೊಟ್ಟರು ರಾಜೀನಾಮೆ ನೀಡಿದ್ದರು.
ಮತ್ತೊಂದು ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾದ ಮುಲಾದಿ ಮತ್ತು ಮಧಾಪಾಷಾ ಎಂಬ ಪ್ರದೇಶದಲ್ಲಿ ನಡೆದ ಘಟನೆ, ಅಲ್ಲಿನ ಮುಸ್ಲಿಮರ ಕ್ರೌರ್ಯವನ್ನು ಎತ್ತಿ ತೋರಿಸುತ್ತದೆ. ಅಲ್ಲಿನ ಎಲ್ಲ ಹಿಂದೂಗಳ ಮನೆಗೆ ಬೆಂಕಿ ಹಚ್ಚಲಾಯಿತು. ಆಗ ಹಿಂದೂಗಳೆಲ್ಲ, ನೇರ ಪೊಲೀಸ್ ಠಾಣೆಗೆ ದೌಡಾಯಿಸಿದರು. ಅಲ್ಲಿನ ಚಿತ್ರಣ ಇನ್ನೂ ಕೆಟ್ಟದಾಗಿತ್ತು. ಪೊಲೀಸರ ಕೈಯಲ್ಲೇ ಹಿಂದೂಗಳ ಚಿನ್ನಾಭರಣಗಳಿದ್ದವು. ಎಲ್ಲರೂ ಮುಸ್ಲಿಮರ ಗುಲಾಮರಾಗಿದ್ದರು. ಆದರೂ ಎಲ್ಲ ಹಿಂದೂಗಳನ್ನು ಪೊಲೀಸ್ ಠಾಣೆಗೆ ನುಗ್ಗಿಯೇ ಕೊಲ್ಲಲಾಯಿತು.
ಆ ಪೈಕಿ ಒಬ್ಬ ಶಿಕ್ಷಕನಿದ್ದ. ದುರಂತ ನೋಡಿ, ಯಾವ ಮುಸ್ಲಿಂ ಹುಡುಗರು ಹಿಂಸಾಚಾರದಲ್ಲಿ ಭಾಗಿಯಾಗಿದ್ದರೋ ಅವರೆಲ್ಲ ಈ ಶಿಕ್ಷಕನ ಶಿಷ್ಯಂದಿರಾಗಿದ್ದರು. ನಾನು ಪಾಠ ಮಾಡಿದಕ್ಕಾದರೂ ನನ್ನ ಹುಡುಗರು ಬಿಟ್ಟು ಬಿಡುತ್ತಾರೆ ಎಂದುಕೊಂಡಿದ್ದ ಶಿಕ್ಷಕ, ಶಿಷ್ಯಂದಿರು ಕೊಟ್ಟ ಬೆಂಕಿಗೆ ಧಗಧಗ ಉರಿದು ಹೋಗಿದ್ದ. ಆತ ಉರಿ ತಾಳಲಾರದೇ ಸುತ್ತೆಲ್ಲ ಓಡಾಡುತ್ತಿದ್ದರೆ, ಈ ಮುಸ್ಲಿಂ ಹುಡುಗರು ಶಿಕ್ಷಕನ ಸುತ್ತ ಕೇಕೆ ಹಾಕುತ್ತಾ ಕುಣಿಯುತ್ತಿದ್ದರು. ಇನ್ನು ಬಾಬುಗುಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಧಾಪಾಷಾ ಎಂಬಲ್ಲಿ, ಎಲ್ಲ ಹಿಂದೂಗಳ ಮನೆ ಸುಡುವುದಲ್ಲದೇ, ಮುನ್ನೂರು ಹಿಂದೂಗಳನ್ನು ಸುತ್ತುವರಿದ ಮುಸ್ಲಿಮರು, ಎಲ್ಲರನ್ನೂ ಕೂರಿಸಿ, ಸಾರ್ವಜನಿಕವಾಗಿಯೇ ಒಬ್ಬರಾದ ಮೇಲೆ ಒಬ್ಬರ ತಲೆಯನ್ನು ಕಡಿದು ಹಾಕುತ್ತಿದ್ದರು. ಎಲ್ಲರನ್ನೂ ಒಟ್ಟಿಗೇ ಕಡಿದರೆ, ಅದರ ಭೀಕರತೆ ಮತ್ತೊಬ್ಬನಿಗೆ ತಿಳಿಯುವುದಿಲ್ಲ ಎಂದು ಹೀಗೆ ಕಡಿಯುತ್ತಿದ್ದರಂತೆ. ಅಷ್ಟೇ ಯಾಕೆ, ಸಾವಧಾನದಿಂದಲೇ ದೇಶ ಬಿಡುತ್ತಿದ್ದ ಮಹಿಳೆಯರು ಮಕ್ಕಳನ್ನೂ ಸುಮ್ಮನೇ ಬಿಡಲಿಲ್ಲ ಪಾಕಿಸ್ಥಾನದ ಮುಸ್ಲಿಂ ಸೈನಿಕರು. ಮಹಿಳೆಯರ ಮೈಮೇಲಿದ್ದ ಆಭರಣಗಳನ್ನೆಲ್ಲ ಕಿತ್ತುಕೊಂಡು, ಕೆಲ ಬಸುರಿಯರನ್ನು ಬೆತ್ತಲೆಯಾಗಿ ನಿಲ್ಲಿಸಿ, ಸಾವಿರಾರು ಜನರ ಮುಂದೆ ಅಲ್ಲಾಹುವಿನ ಘೋಷಣೆ ಕೂಗುತ್ತಾ ಆ ಮಹಿಳೆಯರ ಸ್ತನಗಳನ್ನು ಕತ್ತರಿಸುತ್ತಿದ್ದರು. ಅಷ್ಟರ ಮಟ್ಟಿಗಿನ ವಿಕೃತವದು. ಕೆಲವೊಂದು ಘಟನೆಗಳನ್ನು ಬರೆಯುವುದಕ್ಕೂ ಕೈ ನಡುಗುತ್ತದೆ. ಹಾಗಿದೆ. ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿತು. ಇತರೆ ಮುಸ್ಲಿಮರಿಗೆ ತಮಗೂ ಪೌರುಷ ತೋರಬೇಕೆನಿಸಿತು. ವಿವಿಧ ಪ್ರದೇಶದಲ್ಲಿರುವ ಹಿಂದೂಗಳು ಸದ್ದಿಲ್ಲದೇ, ಅನಿವಾರ್ಯವಾಗಿ ಮನೆ, ಆಸ್ತಿಗಳನ್ನೆಲ್ಲ ಬಿಟ್ಟು ಭಾರತಕ್ಕೆ ತೆರಳಲು ಶುರು ಮಾಡಿಕೊಂಡರು.
ಅವಿಭಜಿತ ಭಾರತದಲ್ಲಿ ಹಿಂದೂಗಳ ಹತ್ಯೆ ಇತ್ಯಾದಿಗಳು ಶುರುವಾಗಿದ್ದು ಮುಸ್ಲಿಂ ಲೀಗ್ನಿಂದ. ಅದೂ ಮಹಮ್ಮದ್ ಅಲಿ ಜಿನ್ನಾ ಕೈಗೆ ಬಂದ ನಂತರವಂತೂ ಮುಸ್ಲಿಂ ಲೀಗ್ ಕೇವಲ ಪ್ರತಿಭಟನೆ, ಗಲಭೆ, ಹಿಂಸಾಚಾರ ಇತ್ಯಾದಿಗಳಲ್ಲೇ ಮುಳುಗಿತ್ತು. ಈ ಮಹಮ್ಮದ್ ಅಲಿ ಜಿನ್ನಾ ಎಂಬ ರಾಕ್ಷಸನೇ ಎಲ್ಲ ಮುಸ್ಲಿಮರನ್ನೂ ರೊಚ್ಚಿಗೆಬ್ಬಿಸಿದ್ದು. ಮುಸ್ಲಿಮರಾದ ನಾವು ನಮ್ಮ ಧರ್ಮದವರ ಜತೆ ಬಿಟ್ಟರೆ ಇನ್ಯಾರ ಜತೆಯೂ ವ್ಯವಹಾರ ಮಾಡಬಾರದು ಎಂದು ಫರ್ಮಾನು ಹೊರಡಿಸಿದ್ದ. ಮುಸ್ಲಿಮರು ಅವನನ್ನು ಅನುಸರಿಸಿದರು. ದುರಂತ ಎಂದರೆ, ಈಗ ನಮ್ಮ ಭಾರತದಲ್ಲೂ ಮುಸ್ಲಿಮರು, ಮುಸ್ಲಿಮರಿಗೇ ಆಸ್ತಿ ಮಾರುವ, ತೆಗೆದುಕೊಳ್ಳುವ ಕೆಟ್ಟ ಪದ್ಧತಿ ಇದೆ.
ಆದರೆ ಈ ಮುಸ್ಲಿಮರೆಲ್ಲ ಜಿನ್ನಾ ಎಂಬ ನಕಲಿ ಮುಸ್ಲಿಮನನ್ನು ಒಮ್ಮೆಯೂ ಪರೀಕ್ಷಿಸಿ ನೋಡಲೇ ಇಲ್ಲ. 1920ರ ವೇಳೆಗೆ ಜಿನ್ನಾ ಎಂಬ ಇದೇ ವ್ಯಕ್ತಿ ಇಸ್ಲಾಂ ತತ್ತ್ವಗಳ ವಿರುದ್ಧ ಜೀವನ ಸಾಗಿಸುತ್ತಿದ್ದ. ಇವನೆಷ್ಟು ಅಧಾರ್ಮಿಕನಾಗಿದ್ದ ಎಂದರೆ, ಒಮ್ಮೆಯೂ ಮಸೀದಿಗೆ ಹೋದವನೇ ಅಲ್ಲ. ಹಂದಿ ಸ್ಯಾಂಡ್ವಿಚ್ಗಳನ್ನು ಬಾಯಿ ಚಪ್ಪರಿಸಿ ತಿನ್ನುತ್ತಿದ್ದ. ಹಂದಿ ಮಾಂಸ ಇಸ್ಲಾಮಿನಲ್ಲಿ ನಿಷಿದ್ಧ ಎಂದು ಗೊತ್ತಿದ್ದರೂ ಹಾಗೆ ತಿನ್ನುತ್ತಿದ್ದ. ಅಲ್ಲದೇ ಇವನಿಗೆ ರೂಟ್ಟಿ ಎಂಬ ಜೊರಾಸ್ಟ್ರಿಯನ್ ಹೆಂಡತಿಯೂ ಇದ್ದಳು. ಇಸ್ಲಾಮನ್ನೇ ಅನುಸರಿಸದ ಇಂಥ ಮುಸ್ಲಿಮನ ಮಾತು ಕೇಳಿ, ಬೇರೆ ಮುಸ್ಲಿಮರು ರೊಚ್ಚಿಗೆದ್ದು ಹಿಂದೂಗಳನ್ನು ಬುಡಮೇಲು ಮಾಡುತ್ತಿದ್ದರು.
ಮೇಘಾಲಯ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಎಸ್.ಆರ್. ಸೇನ್, ಭಾರತ ಹಿಂದೂ ರಾಷ್ಟ್ರವಾಗಬೇಕಿತ್ತು ಎಂದಾಗ, ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಬೇಕು ಎಂದಾಗ, ನಮ್ಮ ದೇಶ ಹಿಂದೂ ರಾಜರುಗಳಿಂದ ಆಳಲ್ಪಟ್ಟಿತ್ತು ಎಂದಾಗ ಅವರನ್ನು ಬಹಳ ಸುಲಭವಾಗಿ ಕೋಮುವಾದಿ ಎಂದುಬಿಟ್ಟರು. ಆದರೆ, ಇಷ್ಟೆಲ್ಲ ಸಂಗತಿಗಳನ್ನು ಗಮನಿಸಿದ ಮೇಲೆ ನನಗೂ ಅನಿಸಿದ್ದು ಅದೇ, ಭಾರತ ಅಂದೇ ತನ್ನದು ಹಿಂದೂ ರಾಷ್ಟ್ರ ಎಂದು ಘೋಷಿಸಿಕೊಳ್ಳಬೇಕಿತ್ತು.
ಆದರೆ ಇನ್ನೂ ಕಾಲ ಮಿಂಚಿಲ್ಲ, ಸೃಜನ್ ಪ್ರತಿಷ್ಠಾನವು ಹಿಂದೂ ಚಾರ್ಟರ್ ಎಂದು ಮಾಡಿದ್ದಾರೆ. ಅದರಲ್ಲಿ, ಜಗತ್ತಿನ ಯಾವುದೇ ಭಾಗದಲ್ಲಿರುವ ಹಿಂದೂಗಳು ನಮ್ಮ ದೇಶಕ್ಕೆ ಬಂದರೆ ಅವರಿಗೆ ಪೌರತ್ವ ನೀಡಬೇಕು. ಭಾರತದಲ್ಲಿ ಹುಟ್ಟಿದ ಹಿಂದುತ್ವಕ್ಕೆ ಭಾರತವೇ ಆಶ್ರಯವಾಗಬೇಕು. ಅಲ್ಲದೇ ಇದು ಕಾಯ್ದೆಯಾಗಬೇಕು ಎಂದು ಬೇಡಿಕೆಯಿಟ್ಟಿದ್ದಾರೆ. ನ್ಯಾ. ಎಸ್ಆರ್ ಸೇನ್ ಹೇಳಿದಂತೆ ಇಂಥದ್ದನ್ನೆಲ್ಲ ಕೇವಲ ನರೇಂದ್ರ ಮೋದಿ ಸರ್ಕಾರಕ್ಕೆ ಮಾತ್ರ ಮಾಡಲು ಸಾಧ್ಯವೇ ವಿನಾ, ಅಂಗಿಯ ಹೊರಗೆ ಜನಿವಾರ ಧರಿಸಿ ಓಡಾಡುವವರ ಸರ್ಕಾರದಿಂದ ಸಾಧ್ಯವಿಲ್ಲ.