ಭಾರತದ ಮಾನ ತೆಗೆಯುವುದಕ್ಕೆ ಜರ್ಮನಿಗೆ ಹೋಗಬೇಕಿತ್ತಾ?

 

 

ವಿವೇಕಾನಂದರು ವಿಶ್ವ ಧರ್ಮ ಸಮ್ಮೇಳನದಲ್ಲಿ ಏನು ಹೇಳಿದರು ಎಂದು ಚಿಕ್ಕ ಮಕ್ಕಳನ್ನು ಕೇಳಿದರೂ ಹೇಳುತ್ತಾರೆ ಹಾಗೂ ಅಮೆರಿಕ ಸೇರಿ ಬೇರೆ ದೇಶಗಳೂ ಹೇಳುತ್ತಾರೆ. 125 ವರ್ಷಗಳ ಹಿಂದೆ ಮಾತಾಡಿದ ಮಾತು ಇಂದಿಗೂ ಜನ ನೆನೆಯುತ್ತಾರೆ. ಕಾರಣ ಏನು? ಕೇವಲ ಬ್ರದರ್ಸ್‌ ಆ್ಯಂಟ್‌ ಸಿಸ್ಟರ್ಸ್‌ ಆಫ್‌ ಅಮೆರಿಕ ಎಂದಷ್ಟೇ ಅವರು ಹೇಳಿಲ್ಲ. ಬದಲಿಗೆ ಹಾಗೆನ್ನುವ ಮೂಲಕ ಶುರು ಮಾಡಿದ ಅವರು, ನಮ್ಮ ಭಾರತದಲ್ಲಿರುವ ಶ್ರೀಮಂತ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿದರು. ಅಂದು ಭಾರತದ ಕಡೆ ತಿರುಗಿ ನೋಡಿದ ವಿಶ್ವ, ಇಂದಿಗೂ ನಮ್ಮ ಸಂಸ್ಕೃತಿಯ ಮೇಲೆ ಅಷ್ಟು ನಂಬಿಕೆ, ವಿಶ್ವಾಸವಿಟ್ಟಿದೆ.

 

ಆದರೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾಡಿದ್ದೇನು? ಜರ್ಮನಿ ಪ್ರವಾಸದಲಿದ್ದಾಗ ಅವರು ಅಲ್ಲಿನ ಜನತೆ ಮುಂದೆ ಹೋಗಿ, ನಮ್ಮ ಭಾರತದಲ್ಲಿ ಹೆಣ್ಣು ಮಕ್ಕಳ ಮೇಲೆ ಬಹಳವೇ ದೌರ್ಜನ್ಯವಾಗುತ್ತಿದೆ ಮತ್ತು ಗಂಡುಮಕ್ಕಳು ಸರಿಯಾದ ದೃಷ್ಟಿಯಲ್ಲಿ ಹೆಣ್ಣುಮಕ್ಕಳನ್ನು ನೋಡುವುದಿಲ್ಲ. ಇದು ನಮ್ಮ ಸಂಸ್ಕೃತಿಯಲ್ಲಿರುವ ದೋಷ ಎಂದೆಲ್ಲ ಮಾತಾಡಿದ್ದಾರೆ.

 

ರಾಹುಲ್‌ ಗಾಂಧಿ ಯೋಗ್ಯತೆ ಏನು ಎಂದು ನಮ್ಮ ಇಡೀ ದೇಶಕ್ಕೇ ಗೊತ್ತು. ಕೈಯಲ್ಲಿರುವ ಚೀಟಿ ಉಲ್ಟಾ ಪಲ್ಟಾ ಆದರೆ ಮಾತಾಡುವುದಕ್ಕೆ ತಡವರಿಸುವ ಆಸಾಮಿ ಇವರು. ಇನ್ನು ಕೈಯಲ್ಲಿ ಚೀಟಿ ಇಲ್ಲದೇ ಇದ್ದರೆ, ಹೇಗೆ ಚಿಕ್ಕ ಮಕ್ಕಳು ಮಗ್ಗಿ ಒಪ್ಪಿಸಿದವರಂತೆ ಮಾತನಾಡುತ್ತಾರೆ ಎಂಬುದನ್ನು ಅರ್ಣಬ್‌ ಗೋಸ್ವಾಮಿ ಕಾರ್ಯಕ್ರಮದಲ್ಲೇ ನೋಡಿದ್ದೇವೆ. ಬರೆದು ಕೊಟ್ಟಿದ್ದನ್ನೇ ಸರಿಯಾಗಿ ಹೇಳುವುದಕ್ಕೆ ಬರದ ಇಂಥ ಮನುಷ್ಯನಿಗೇನು ಗೊತ್ತು ನಮ್ಮ ಸಂಸ್ಕೃತಿಯ ಬಗ್ಗೆ?

 

ರೀ ರಾಹುಲ್‌ ಗಾಂಧಿ, (ಕರ್ನಾಟಕ ಕಾಂಗ್ರೆಸ್‌ನವರೇ ಗಮನಿಸಿ, ನಿಮ್ಮ ಯುವನಾಯಕನಿಗೆ ಮುಟ್ಟಿಸಿ ಎಂದು ವಿನಂತಿಸುತ್ತಾ..) ಒಂದು ದಿನ ಜನಿವಾರ ಧಾರಿ ಬ್ರಾಹ್ಮಣನಾಗುವ ಮತ್ತೊಮ್ಮೆ ಮುಸ್ಲಿಮನಾಗುವ, ಇನ್ನೊಮ್ಮೆ ದೇವಸ್ಥಾನಗಳಿಗೆ ಓಡುವ ನೀವ್ಯಾರ್ರೀ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ಊರೆಲ್ಲ ಭಾಷಣ ಮಾಡುವುದಕ್ಕೆ?

ವಿವೇಕಾನಂದರ ಆಚಾರ, ವಿಚಾರ, ಗಟ್ಟಿ ಮೈಕಟ್ಟು ಎಲ್ಲವನ್ನೂ ಕಂಡು ಕಾಮಿಸಿದ ವಿದೇಶಿ ಮಹಿಳೆಯೊಬ್ಬಳು ನನ್ನನ್ನು ಮದುವೆಯಾಗುತ್ತೀರಾ? ನಿಮ್ಮ ಹಾಗೇ ಒಂದು ಮಗು ಬೇಕು ಎಂದಾಗ, ಹಲ್ಲು ಕಿರಿಯದೇ, ಹಿಂದೆ ಬೀಳದೇ, ‘ಆಗಲಿ ತಾಯಿ, ನಾನು ಮುಂದಿನ ಜನ್ಮದಲ್ಲಿ ನಿನ್ನ ಹೊಟ್ಟೆಯಲ್ಲೇ ಹುಟ್ಟಿ ಬರುತ್ತೇನೆ’ ಎನ್ನುವ ಮೂಲಕ ಆಕೆಗೆ ಮಾತೃಸ್ಥಾನ ನೀಡಿ ದೇಶವೇ ಹೆಮ್ಮೆ ಪಡುವಂತೆ ನಡೆದುಕೊಂಡರಲ್ಲ, ಅದು ನಮ್ಮ ಸಂಸ್ಕೃತಿ. ತಪ್ಪಿ ಹುಟ್ಟಿದ ಒಬ್ಬ ವ್ಯಕ್ತಿ ಕುಡಿದ ಅಮಲಿನಲ್ಲಿ ಸೌಜನ್ಯಾ ಮೇಲೆ ಅತ್ಯಾಚಾರ ಮಾಡಿದ್ದನಲ್ಲ, ಅದಲ್ಲ ನಮ್ಮ ಸಂಸ್ಕೃತಿ. ರಾಹುಲ್‌ ಗಾಂಧಿಯೇನಾದರೂ ಅಂಥ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿದ್ದಿದ್ದರೆ, ಖಂಡಿತವಾಗಿಯೂ ಅಂಥವರಿಂದಲೇ ನಮ್ಮ ದೇಶದ ಹೆಣ್ಣು  ಮಕ್ಕಳು ಸಂಕಷ್ಟಕ್ಕೀಡಾಗುತ್ತಿರುವುದು ಸತ್ಯ.

 

ಅಥವಾ ತಪ್ಪಿ ಹುಟ್ಟಿದ ಅದೇ ಭಾರತೀಯನೊಬ್ಬ ಅಮೆರಿಕದಲ್ಲಿ ಮಾದಕ ವಸ್ತುಗಳನ್ನು ಸೇವಿಸಿ ಸಿಕ್ಕಿಬಿದ್ದು ಎಲ್ಲೂ ಹೋಗುವುದಕ್ಕೆ ಅಲ್ಲಿ ಪೊಲೀಸರು ಬಂಧಿಸಿದ್ದಾಗ ಅಮೆರಿಕ ವಿಮಾನ ನಿಲ್ದಾಣದಲ್ಲಿ ನಾಯಿಯ ಹಾಗೆ ನಿಂತಿದ್ದನಲ್ಲ? ಅದಲ್ಲ ನಮ್ಮ ಸಂಸ್ಕೃತಿ. ಕಷ್ಟದಲ್ಲಿದ್ದ ಆ ತಪ್ಪಿ ಹುಟ್ಟಿದ ಮಗನನ್ನೂ ವಾಜಪೇಯಿಯವರು ಅಮೆರಿಕದೊಂದಿಗೆ ಮಾತನಾಡಿ ಬಿಡಿಸಿದರಲ್ಲ, ಆ ಪರೋಪಕಾರ ನಮ್ಮ ಸಂಸ್ಕೃತಿ.

 

ಚೀಟಿ ಇಟ್ಟುಕೊಳ್ಳದೇ ಭಾಷಣ ಮಾಡುವುದಕ್ಕೆ ಬರದ ರಾಹುಲ್‌ರನ್ನು ಮೇಧಾವಿ ಎಂಬಂತೆ ಜರ್ಮನಿಗೆ ಕರೆಸಿ ಮಾತನಾಡಿಸಿದ ಮೂರ್ಖ ಯಾರು ಎಂದು ಮೊದಲು ಹುಡುಕಬೇಕಿದೆ.

 

ಮಹಿಳೆಯರ ಮೇಲೆ ದೌರ್ಜನ್ಯ ಆಗುತ್ತಿರವುದು ದೇಶದ ಸಂಸ್ಕೃತಿಯಿಂದ ಅಲ್ಲ, ಬದಲಿಗೆ ಕಾಂಗ್ರೆಸ್‌ ಸಂಸ್ಕೃತಿ ಇಂದ ಎಂದು ರಾಹುಲ್‌ ಹೇಳಿದ್ದರೆ ಅದು ಸರಿಯಾಗುತ್ತಿತ್ತು. ಏಕೆಂದರೆ, ಅಂಥ ಸಂಸ್ಕಾರವಂತರು ಕಾಂಗ್ರೆಸ್‌ನಲ್ಲಿ ಹೇರಳವಾಗಿ ಸಿಗುತ್ತಾರೆ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸಮಸ್ಯೆ ಇದೆ ಎಂದು ಜರ್ಮನಿಯಲ್ಲಿ ಭಾರತದ ಮರ್ಯಾದೆ ತೆಗೆಯ ಹೊರಟವನ ಪಕ್ಷದಲ್ಲೇ ಲೈಂಗಿಕ ಕಿರುಕುಳ ಇತ್ಯಾದಿಗಳು ನಡೆಯುತ್ತಿದೆ. ಕಾಂಗ್ರೆಸ್‌ ಮಹಿಳೆಯರು ಕಾಂಗ್ರೆಸ್‌ ಪಕ್ಷದ ಪುರುಷರ ವಿರುದ್ಧವೇ ದೂರು ದಾಖಲಿಸಿದ ಬಗ್ಗೆಯೂ ಹೇಳಿದ್ದಿದ್ದರೆ, ರಾಹುಲ್‌ ಹೇಳಿದ್ದ ಆ ದರಿದ್ರ ಸಂಸ್ಕೃತಿ ಕಾಂಗ್ರೆಸ್‌ದೋ? ಭಾರತದ್ದೋ ಎಂಬುದು ಜರ್ಮನ್ನರಿಗೆ ಗೊತ್ತಾಗುತ್ತಿತ್ತು. ಕಾಮುಕರನ್ನು ಪಕ್ಷದಲ್ಲಿ ತುಂಬಿಸಿಕೊಂಡಿರುವ ರಾಹುಲ್‌, ನಿತ್ಯವೂ ಇಂಥ ಕಾಮುಕರ ಬಗ್ಗೆ ಸುದ್ದಿ ಓದಿ ಓದಿ ಅವರ ನಡುವೆಯೇ ಇದ್ದು ಬಾವಿಯ ಕಪ್ಪೆಯ ಹಾಗೆ ಕಾಂಗ್ರೆಸ್ಸೇ ಭಾರತ ಎಂದುಕೊಂಡಂತಿದೆ.

ಕಾಂಗ್ರೆಸ್‌ನ ಐಟಿ ಸೆಲ್‌ನಲ್ಲಿರುವ ಹಾಗೂ ರಮ್ಯಾಗೆ ಸದಾ ಐಡಿಯಾಗಳನ್ನು ಕೊಡುವ ಚಿರಾಗ್‌ ಪಟ್ನಾಯಕ್‌ ಎಂಬುವವರು ಕಾಂಗ್ರೆಸ್‌ ಕಚೇರಿಯಲ್ಲೇ ಕೆಲಸ ಮಾಡುವ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಅವರನ್ನು ಜುಲೈ ತಿಂಗಳಲ್ಲಿ ಬಂಧಿಸಿದ್ದರು.

 

ಕಾಂಗ್ರೆಸ್‌ನ ಮಂಗಳೂರು ಕಾರ್ಪೊರೇಟರ್‌ ಪ್ರತಿಭಾ ಕುಳಾಯಿ ಅವರಿಗೆ ಅಬ್ದುಲ್‌ ಸತ್ತಾರ್‌ ಎಂಬ ಮತ್ತೊಬ್ಬ ಕಾಂಗ್ರೆಸ್‌ ಮುಖಂಡ ಲೈಂಗಿಕ ಕಿರುಕುಳ ಕೊಟ್ಟ ಎಂದು ಆಕೆ ಕಣ್ಣೀರು ಹಾಕುತ್ತಿದ್ದದ್ದನ್ನು ನಾವು ಟಿವಿಯಲ್ಲೇ ನೋಡಿದ್ದೇವೆ. ಅಷ್ಟೇ ಅಲ್ಲದೇ ಇನ್ನೂ ಹುಬ್ಬಳ್ಳಿಯಲ್ಲೂ ಇಂಥ ದೂರು ಕೇಳಿಬಂದಿದೆ. ಇವರ ಪಕ್ಷದಲ್ಲೇ ದಂಡುಗಟ್ಟಲೆ ತುಂಬಿಕೊಂಡಿರುವಾಗ, ದೇಶದ ಸಂಸ್ಕೃತಿ ಬಗ್ಗೆ ಮಾತಾಡುವುದಕ್ಕೆ ರಾಹುಲ್‌ ಯಾವ ದೊಣೆ ನಾಯಕ ಸ್ವಾಮಿ?

 

ಇವರ ಅಪ್ಪನ ಕಾಲದಿಂದಲೂ ನಿಂತು ಗೆದ್ದು ಬರುತ್ತಿರುವ ಕ್ಷೇತ್ರ ಅಮೇಥಿ. ಅದನ್ನೇ ಇವರಿಗೆ ಉದ್ಧಾರ ಮಾಡುವುದಕ್ಕೆ ಆಗಲಿಲ್ಲ. ಇನ್ನು ಒಟ್ಟಾರೆ ಭಾರತದ ಬಗ್ಗೆ ಮಾತಾಡುವುದಕ್ಕೆ ಈ 48 ವರ್ಷದ ಮಗುವಿಗೆ ಏನು ಅರ್ಹತೆ ಇದೆ?

ಕೇರಳದಲ್ಲಿ ಈ ರೀತಿ ಜನಜೀವನ ಕೊಚ್ಚಿಕೊಂಡು ಹೋಗುತ್ತಿದೆ, ಕೊಡುಗಿನಲ್ಲಿ ಜನರು ಬದುಕಿದ್ದಾರೋ ಸತ್ತಿದ್ದಾರೋ ಗೊತ್ತಿಲ್ಲ. ನರೇಂದ್ರ ಮೋದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಂದಿಲ್ಲ ಎಂದು ಬೊಬ್ಬಿಡುವ ಕಾಂಗ್ರೆಸಿಗರು ರಾಹುಲ್‌ ಎಲ್ಲಿದ್ದಾನೆ ಕೇಳಬೇಕಲ್ಲವೇ? ಬೇರೆ ದೇಶಕ್ಕೆ ಹೋಗಿ ಅಯ್ಯೋ ನಮ್‌ ದೇಶ ಹಿಂಗಿದೆ, ನಮ್‌ ದೇಶ ಹಾಳಾಗಿದೆ, ನಮ್‌ ದೇಶದ ಸಂಸ್ಕಾರವೇ ಸರಿ ಇಲ್ಲ ಎನ್ನುವವನು ನಾಯಕನೋ? ಅಥವಾ ಇಂಥ ಸಂದರ್ಭದಲ್ಲಿ ದೇಶದಲ್ಲಿರುವವನೋ? ಈ ಪ್ರಕರಣ ಅಷ್ಟೇ ಅಲ್ಲ, ದೇಶ ಯಾವಾಗ ಕಷ್ಟದ ಸ್ಥಿತಿಯಲ್ಲಿದ್ದ ಅನೇಕ ಸಲ ರಾಹುಲ್‌ ಸಹಾಯಕ್ಕಾಗಿದ್ದಿಲ್ಲ.

ನಾಯಕನ ಅರ್ಹತೆಗಳೇ ಗೊತ್ತಿಲ್ಲದೇ ಇರುವವರನ್ನು ಇನ್ನೂ ಇವರು ತಮ್ಮ ನಾಯಕ ಎಂದು ಹೇಗೆ ಕಾಂಗ್ರೆಸ್‌ ಒಪ್ಪಿಕೊಳ್ಳುತ್ತದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಇನ್ನು ಈ ಮನುಷ್ಯ ಜರ್ಮನಿಯಲ್ಲಿ ಮತ್ತೊಂದು ಮಾತಾಡಿದ್ದಾರೆ, ‘ಕೆಲಸವಿಲ್ಲದ ಕಾರಣ, ಯುವಕರ ಕೈಗೆ ಮೊಬೈಲ್‌ ಸಿಕ್ಕು, ಶಸ್ತ್ರಾಸ್ತ್ರಗಳು ಸಿಕ್ಕಿ ಅದರಿಂದ ಐಸಿಸ್‌ ಎಂಬ ಹಾರಿಫಿಕ್‌(ಭಯಾನಕ) ಕಲ್ಪನೆ ಹುಟ್ಟಿಕೊಂಡಿತು’ ಎಂದು ರಾಹುಲ್‌ ಹೇಳಿದ್ದಾರೆ. ನನಗೆ ಈ ದಡ್ಡ ಹೇಳಿಕೆಯೇ ಹಾರಿಫಿಕ್‌ ಅನಿಸುತ್ತಿದೆ.

 

ಐಸಿಸ್‌ ಹೇಗೆ ಹುಟ್ಟಿಕೊಂಡಿತು ಎಂಬುದೇ ಗೊತ್ತಿಲ್ಲದ ಮೇಲೆ ಸುಮ್ಮನಿದ್ದುಬಿಡಬೇಕು. ಅದನ್ನು ಬಿಟ್ಟು ಒಂದಾದಮೇಲೊಂದು ರೈಲು ಬಿಡುವುದಕ್ಕೆ, ಪೋಡಿಯಂ ಮುಂದೆ ಕುಳಿತಿರುವವರು ಕಾಂಗ್ರೆಸ್‌ ಕಾರ್ಯಕರ್ತರಾ ಅಥವಾ ಇವರ ಬೂಟು ನೆಕ್ಕುವ ರಾಜಕಾರಣಿಗಳಾ?

 

ಇಷ್ಟೇ ಅಲ್ಲ, ಈ ಮನುಷ್ಯನ ಪ್ರಕಾರ ದೇಶದಲ್ಲಿ ಕೋಮು ಗಲಭೆ ಇತ್ಯಾದಿಗಳು ಆಗುತ್ತಿರುವುದು ಜಿಎಸ್‌ಟಿ ಇಂದ ಅಂತೆ. ಕಾಂಗ್ರೆಸ್‌ನವರು ಸಿಕ್ಖರನ್ನು ಬಡಿದು ತೆಗೆದರಲ್ಲ? ಆಗ ಮೋದಿ ಜಿಎಸ್‌ಟಿ ತಂದಿದ್ದರಾ? ಅಲ್ಲದೇ ಇನ್ನು ದಲಿತರ ಮೇಲೆ ತೆರಿಗೆ ಹಾಕುತ್ತಿದ್ದಾರೆ ಎಂದೆಲ್ಲಹೇಳಿಬಿಟ್ಟಿದ್ದಾರೆ.

 

ಮೊನ್ನೆ ದಲಿತ ಸಂಘಟನೆಯ ಮುಖ್ಯಸ್ಥೆಯೊಬ್ಬಳು, ಪೊಲೀಸರು ನನ್ನ ನಿಷ್ಕ್ರಿಯ ರೋಮಕ್ಕೆ ಸಮಾನರು ಎಂದಾಗಲೂ ಆಕೆಯನ್ನು ಬಂಧಿಸುವುದಕ್ಕೆ ಧೈರ್ಯವಿಲ್ಲದ ಭಾರತದಲ್ಲಿ ನಾವಿರುವಾಗ, ದಲಿತರ ಮೇಲೆ ತೆರಿಗೆ ಹಾಕಿ ಬದುಕುಳಿಯುವವನು ಯಾರೆಂದು ತಿಳಿಯಬೇಕಿದೆ? ಅಸಲಿಗೆ ದಲಿತರು, ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗದವರು ಎಂದರೆ ನಮ್ಮಲ್ಲಿ ಮೀಸಲು ಇದೆ. ಹೀಗಿರುವಾಗ ದಲಿತರ ಮೇಲೆ ಟ್ಯಾಕ್ಸ್‌ ಹಾಕುವ ಧೈರ್ಯ ಯಾರಿಗಿದೆ? ನಾಯಿ ಮರಿ ‘ಪಿಡಿ’ಯೊಂದಿಗೆ ಆಟವಾಡಿಕೊಂಡಿರುವವನಿಗೆ ಇದೆಲ್ಲ ಹೇಗೆ ತಿಳಿಯುತ್ತದೆ ಹೇಳಿ?

 

26/11ರಂದು ಮುಂಬೈನಲ್ಲಿ ದಾಳಿಯಾದಾಗ ಇಡೀ ದೇಶವೇ ಶೊಕದಲ್ಲಿತ್ತು. ಇನ್ನು ಆ ಕಾರ್ಯಾಚರಣೆಯ ವೇಳೆ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅವರು ಹುತಾತ್ಮರಾಗಿದ್ದರು. ಸಂದೀಪ್‌ ಯಾರದ್ದೋ ಮಗ ಇರಬಹುದು, ಆದರೆ, ಅವರು ನಮಗಾಗಿ, ನಮ್ಮನ್ನು ರಕ್ಷಿಸುವುದಕ್ಕಾಗಿ ಪ್ರಾಣ ತೆತ್ತಿದ್ದಾರೆ ಎಂದು ದೇಶ ಕಣ್ಣೀರಿಡುತ್ತಿತ್ತು. ನಿಜವಾಗಿ ಇದು ನಮ್ಮ ಸಂಸ್ಕೃತಿ. ಪ್ರತಿಯೊಬ್ಬ ಭಾರತೀಯನೂ ಇರುವುದೇ ಹೀಗೆ. ಆದರೆ ಆ ಸಮಯದಲ್ಲಿ ರಾಹುಲ್‌ ಗಾಂಧಿ ಎಲ್ಲಿದ್ದರು ನೆನಪಿಸಿಕೊಳ್ಳಿ? ದೆಹಲಿಯ ಹೊರವಲಯದಲ್ಲಿ ಸ್ನೇಹಿತರೊಂದಿಗೆ ಮಜಾ ಮಾಡುತ್ತಿದ್ದರು. ಮಜಾ ಮಾಡಬಾರದು ಅಂತಲ್ಲ. ಮಜಾ ಮಾಡುವವರದ್ದು ಒಂದು ಸಂಸ್ಕೃತಿಯಾದರೆ, ಯಾರೋ ನಮಗಾಗಿ ಸಾಯುತ್ತಿದ್ದಾರೆಂದು ಶೋಕದಲ್ಲಿರುವವರದ್ದು ಒಂದು ಸಂಸ್ಕೃತಿ. ಯಾವುದು ಭಾರತೀಯ ಸಂಸ್ಕೃತಿ, ಯಾವುದು ಇಟಲಿ ಸಂಸ್ಕೃತಿ ಎಂದು ಜನರು ತೀರ್ಮಾನಿಸಬೇಕು.

ಇನ್ನು ರಾಹುಲ್‌ ಮೊದಲು ಭಾಷಣ ಶುರು ಮಾಡಿದ್ದೇ, ನಮ್ಮ ದೇಶದಲ್ಲಿ ಬಡವರಿದ್ದಾರೆ, ಮೇಲು-ಕೀಳುಗಳಿವೆ, ಮನುಷ್ಯರನ್ನು ಮನುಷ್ಯರನ್ನಾಗಿ ನೋಡುತ್ತಿಲ್ಲ ಇತ್ಯಾದಿಗಳಿಂದ. ಯಾರಾದ್ರೂ ಇವರ ಬಳಿ ಭಾರತ ಎಷ್ಟು ಬಡ ರಾಷ್ಟ್ರ ಎಂದು ಮಾತಾಡುವುದಕ್ಕೆ ಕರೆದರಾ? ತಾಯ್ನಾಡನ್ನು ತೆಗಳುವುದು ಇಟಲಿಯ ಸಂಸ್ಕೃತಿಯಾ ಎಂದು ನೋಡಿದರೆ ಅದೂ ಇಲ್ಲ. ಹಾಗಾದರೆ ರಾಹುಲ್‌ರದ್ದು ಯಾವ ಸಂಸ್ಕೃತಿ?

 

ಈ ಮನುಷ್ಯ ಭಾರತವನ್ನಷ್ಟೇ ಅಲ್ಲದೇ, ಜರ್ಮನಿಯನ್ನೂ ಅವಮಾನಿಸಿದ್ದಾರೆ. ಹಿಟ್ಲರ್‌ ಒಳ್ಳೆಯವನು ಎನ್ನುವ ಮೂಲಕ ಜರ್ಮನ್ನರ ಕಣ್ಣು ಕೆಂಪಾಗಿಸಿದ್ದಾರೆ.

 

ಇದೆಲ್ಲ ನೋಡಿದ ಮೇಲೆ ಅನಿಸುತ್ತಿದೆ, ರಾಜೀವ್‌ ಗಾಂಧಿ ಅಂದು ಸ್ವಲ್ಪ ಆಲೋಚಿಸಿದ್ದರೆ ಇಂದು ಈ ಸ್ಥಿತಿಯೇ ಬರುತ್ತಿರಲಿಲ್ಲ. ಅನ್ಯತಾ ಭಾವಿಸಬೇಡಿ, ರಾಹುಲ್‌ ಗಾಂಧಿ ರಾಜಕಾರಣಿಯಾಗುವ ಬದಲು ಒಂದೊಳ್ಳೆ ಕಂಪನಿಯಲ್ಲಿ ಉತ್ತಮ ನೌಕರಿಯಲ್ಲಿರಬಹುದಿತ್ತು ಅಂದೆ ಅಷ್ಟೇ.

 

 

Leave a Reply

Copyright©2020 Chiranjeevi Bhat All Rights Reserved.
Powered by Dhyeya