ಶರಿಯಾ ಭಾರತದಲ್ಲಿದ್ದಿದ್ದರೆ, ಶಶಿ ತರೂರ್‌ ಶಫೀ ತಾಹಿರ್‌ ಆಗಿರುತ್ತಿದ್ದರು

Courtesy: Fb

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ ಪ್ರಚಾರ ಶುರುವಾಗಿದೆ. ಹಾಗೆಯೇ ಇಲ್ಲಸಲ್ಲದ ಸುಳ್ಳುಗಳೂ ಹೊರಬರುತ್ತಿದೆ. ಈಗ ಬರುತ್ತಿರುವ ಹೊಸ ಸುಳ್ಳು ಏನೆಂದರೆ,ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತವು ಹಿಂದೂ ಪಾಕಿಸ್ಥಾನ ಆಗುತ್ತದೆ.

ಹೀಗೆಂದು ಘೋಷಿಸಿದವರು ಹೆಂಡತಿಯ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ವಿಚಾರಣೆಯಲ್ಲಿರುವ ಕಾಂಗ್ರೆಸ್‌ನ ಮುಖಂಡ ಶಶಿ ತರೂರ್‌. ಕಾಂಗ್ರೆಸ್‌ನವರಿಗೆ ಒಂದು ವಿಚಿತ್ರ ಚಟ ಇದೆ. ಚುನಾವಣೆಗೆ ಒಂದು ವರ್ಷ ಇರುವಾಗ ನಿಧಾನವಾಗಿ ಜನರಲ್ಲಿ ಒಂದು ಭಯ ಹುಟ್ಟಿಸುವುದು. ಬಿಜೆಪಿಗೆ ಮತ ಹಾಕಿದರೆ, ಮುಸ್ಲಿಮರು ಪಾಕಿಸ್ಥಾನಕ್ಕೇ ಹೋಗಬೇಕಾಗುತ್ತದೆ. ಹಿಂದೂಗಳು ಎಲ್ಲರನ್ನೂ ಮುಗಿಸಿಬಿಡುತ್ತಾರೆ ಎನ್ನುವವರೆಗೂ ಎಲ್ಲವೂ ನಡೆಯುತ್ತದೆ. ಇದಕ್ಕೆ ಉದಾಹರಣೆ, ಪಿ ಚಿದಂಬರಂ ಹುಟ್ಟುಹಾಕಿದ್ದ ಕೇಸರಿ ಭಯೋತ್ಪಾದನೆ ಎಂಬ ಶಬ್ದ. 2010ರಲ್ಲಿ ಪಿ. ಚಿದಂಬರಂ ಮುಸ್ಲಿಮರನ್ನು ಹೆದರಿಸುವುದಕ್ಕೆ ಕೇಸರಿ ಭಯೋತ್ಪಾದನೆ ಎಂಬ ಪದಪ್ರಯೋಗ ಮಾಡಿದ್ದರು. ಆದರೆ ಇತ್ತೀಚೆಗೆ ರಾಹುಲ್‌ ಗಾಂಧಿ ನಾವು ಕೇಸರಿ ಭಯೋತ್ಪಾದನೆ ಎಂದು ನಾನು ಹೇಳಿಯೇ ಇಲ್ಲ ಎಂದಿದ್ದರು.

ಆಕ್ಸ್‌ಫರ್ಡ್‌ ಶಬ್ದಕೋಶದಲ್ಲಿರುವ ಪದಗಳನ್ನು ಹೆಕ್ಕಿ ಇಂಗ್ಲಿಷ್‌ ಮಾತಾಡಿದ ಹಾಗೆಯೇ ಧರ್ಮ ದೇಶದ ಬಗ್ಗೆ ಮಾತಾಡುವುದು ಎಂದು ತರೂರ್‌ ತಿಳಿದಿರಬೇಕು. ಆದರೆ ಆಂಗ್ಲ ಭಾಷೆಯೇ ಬೇರೆ ಧರ್ಮವೇ ಬೇರೆ. ಶಶಿ ತರೂರ್‌ ಒಂದು ವಿಷಯವನ್ನು ತಿಳಿಯಬೇಕು. ಬಿಜೆಪಿ ಬಂದರೆ ಹೇಗೆ ಭಾರತ ಹಿಂದೂ ಪಾಕಿಸ್ಥಾನ ಆಗುತ್ತದೆ ಎಂದು ಹೇಳುತ್ತಿದ್ದಾರೋ, ಹಾಗೆಯೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ನಿತ್ಯ ಹಿಂಸೆ, ಕಿರುಕುಳ ಅನುಭವಿಸುತ್ತಿರುವ, ಪಾಕಿಸ್ಥಾನದಲ್ಲಿರುವ ಹಿಂದೂಗಳಂತಾಗುತ್ತದೆ ಭಾರತದ ಹಿಂದೂಗಳ ಪರಿಸ್ಥಿತಿ.

ಶಶಿ ತರೂರ್‌ ಹೇಳಿದ್ದಕ್ಕೆ, ಅವರ ಧಾಟಿಯಲ್ಲೇ ಪದಗಳಲ್ಲಿ ಆಟವಾಡುವ ಕೆಲಸ ನಾನೇನು ಮಾಡುತ್ತಿಲ್ಲ. ಅಥವಾ, ಹೀಗೆ ಬರೆದು ಹಿಂದೂಗಳನ್ನು ಮೆಚ್ಚಿಸಬೇಕು ಎಂಬುದೂ ಇಲ್ಲ. ಶಶಿ ತರೂರ್‌ ಹಿಂದೂಗಳ ಕಾನೂನು, ಪುರಾಣ, ವೇದ, ಶಾಸ್ತ್ರಗಳನ್ನು ಉಲ್ಲೇಖಿಸದೇ ಬಾಯಿ ಚಪಲಕ್ಕೆ ಮೇಲಿನ ಮಾತಾಡಿದ್ದಾರೆ.

ಆದರೆ ಕಾಂಗ್ರೆಸ್‌ ಬಂದರೆ ಭಾರತದಲ್ಲಿ ಹಿಂದೂಗಳ ಪರಿಸ್ಥಿತಿ ಪಾಕಿಸ್ಥಾನಿ ಹಿಂದೂಗಳಂತಾಗುವುದು ಹೇಗೆ ಎಂಬುದನ್ನು ಕಾಂಗ್ರೆಸ್‌ ಈಗ ಬೆಂಬಲಿಸುತ್ತಿರುವ ಶರಿಯಾ ಕಾನೂನನ್ನು ಉಲ್ಲೇಖಿಸಿಯೇ ಹೇಳುತ್ತೇನೆ.

ಅಲ್ಪಜ್ಞಾನಿಯಾಗಿರುವ ತರೂರ್‌ಗೆ ಇಸ್ಲಾಮ್‌ನ ಬಗ್ಗೆ ಏನೇನೂ ಗೊತ್ತಿಲ್ಲ. ಪಾಪ ಶಶಿ ತರೂರ್‌ ಹೆಂಡತಿಯ ಹತ್ಯೆ ಪ್ರಕರಣದಲ್ಲಿ ಬಹಳ ಬ್ಯುಸಿ ಇರುತ್ತಾರೆ. ಹಾಗಾಗಿ ಅವರಿಗೆ ಇಸ್ಲಾಮಿಕ್‌ ಕಾನೂನು ಅಥವಾ ಶರಿಯಾದಲ್ಲಿ ಏನು ಹೇಳಿದ್ದಾರೆ ಎಂದು ತಿಳಿದುಕೊಳ್ಳುವುದಕ್ಕೆ ಸಮಯವಿರುವುದಿಲ್ಲ. ಶರಿಯಾ ಓದಿ ಎಂದು ಬುದ್ಧಿ ಹೇಳುವ ಬದಲು ನಾವೇ ಅವರಿಗೆ ವಿವರಿಸೋಣ. ಶರಿಯಾ ಕಾನೂನಿನಲ್ಲಿ ಪ್ರಪಂಚವನ್ನು ಮೂರು ಭಾಗಗಳಾಗಿ ಮಾಡಲಾಗಿದೆ.

ದಾರ್‌-ಅಲ್‌-ಇಸ್ಲಾಂ, ದಾರ್‌-ಅಲ್‌-ಹರಬ್‌ ಮತ್ತು ದಾರ್‌-ಅಲ್‌-ಸಲ್ಹ್‌ ಎಂಬ ಭಾಗಗಳಿವೆ.

ದಾರ್‌-ಅಲ್‌-ಇಸ್ಲಾಂ ಎಂದರೆ ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವ ಮತ್ತು ಇಸ್ಲಾಮಿಕ್‌ ಕಾನೂನು(ಶರಿಯಾ) ಆಚರಣೆಯಲ್ಲಿರುವ ಖಂಡ ಎಂದು ಅರ್ಥ. ಉದಾಹರಣೆಗೆ ಪಾಕಿಸ್ಥಾನ ಇತ್ಯಾದಿ ಇಸ್ಲಾಮಿಕ್‌ ರಾಷ್ಟ್ರಗಳು. ಅಲ್ಲಿ ಮುಸ್ಲಿಂ ಹೊರತಾಗಿ ಇತರೆ ಧರ್ಮಗಳು ಇದ್ದಿದ್ದೇ ಆದರೆ, ಅವರನ್ನು ಮತಾಂತರ ಮಾಡುತ್ತಾರೆ, ಕೊಲ್ಲುತ್ತಾರೆ ಅಥವಾ ದೇಶ ಬಿಟ್ಟು ಓಡಿಸುತ್ತಾರೆ. ಅದಕ್ಕೆ ಇಸ್ಲಾಮ್‌ನಲ್ಲಿ ಯಾವುದೇ ವಿರೋಧವಿರುವುದಿಲ್ಲ. ಜಿಹಾದ್‌ನ ಅಂತಿಮ ಉದ್ದೇಶವೇ ಇಡೀ ಪ್ರಪಂಚವನ್ನು ದಾರ್‌-ಅಲ್‌-ಇಸ್ಲಾಂ ಮಾಡುವುದು. ರಾಬರ್ಟ್‌ ಸ್ಪೆನ್ಸರ್‌ ಬರೆದಿರುವ ‘ಇಸ್ಲಾಂ ಅನ್ವೀಲ್ಡ್‌’ ಎಂಬ ಪುಸ್ತಕದಲ್ಲಿ ಇದರ ಬಗ್ಗೆ ಬರೆಯುವುದು ಹೀಗೆ:

‘ದಾರ್‌-ಅಲ್‌-ಹರಬ್‌ ಬಳಸಿಕೊಂಡು ದಾರ್‌-ಅಲ್‌-ಇಸ್ಲಾಂ ಅನ್ನು ಎಲ್ಲೆಡೆ ಹೆಚ್ಚಿಸುವ ಗುರಿ ಹೊಂದಿದ ಜಿಹಾದ್‌ ಒಂದು ನಿರ್ದಿಷ್ಟವಾಗಿ ಆರಂಭಗೊಂಡು ಮತ್ತೊಂದು ಹಂತದಲ್ಲಿ ಕೊನೆಗೊಳ್ಳುವ ಒಂದು ಸಾಂಪ್ರದಾಯಿಕ ಯುದ್ಧವಲ್ಲ. ಜಿಹಾದ್‌ ಶಾಶ್ವತ ಯುದ್ಧವಾಗಿದ್ದು ಅದು ಶಾಂತಿಯ ಪರಿಕಲ್ಪನೆಯನ್ನು ಹೊರತುಪಡಿಸಿ, ರಾಜಕೀಯ ಪರಿಸ್ಥಿತಿ (ಮುಡಹಾನಾ)ಗೆ ಸಂಬಂಧಿಸಿದ ತಾತ್ಕಾಲಿಕ ತಂತ್ರಗಳನ್ನು ಅನುಮೋದಿಸುತ್ತದೆ.’

ದಾರ್‌-ಅಲ್‌-ಇಸ್ಲಾಂ ಇರುವ ಸೌದಿಯಲ್ಲಿ ಎಲ್ಲಿ ಹಿಂದೂಗಳು ತಮ್ಮ ಹಬ್ಬಗಳನ್ನು ಆಚರಿಸುತ್ತಿದ್ದಾರೆ ಹೇಳಿ? ಪಾಕಿಸ್ಥಾನದಲ್ಲಿ ನೆಮ್ಮದಿಯಿಂದ ಹಿಂದೂಗಳು ಹಬ್ಬ ಆಚರಿಸಿರುವ ಸುದ್ದಿಯನ್ನಾದರೂ ಓದಿದ್ದೀರಾ? ಇದು ದಾರ್‌-ಅಲ್‌-ಇಸ್ಲಾಂನ ಕರಾಳ ಮುಖ.

ಈಗ ದಾರ್‌-ಅಲ್‌-ಇಸ್ಲಾಂ ಎಂದರೇನು? ಅದು ನಮ್ಮ ಭಾರತದಲ್ಲಿ ಇರುವ ಹಾಗಿನ ಇಸ್ಲಾಂ ವ್ಯವಸ್ಥೆ. ದಾರ್‌-ಅಲ್‌-ಹರಬ್‌ ಎಂದರೆಯುದ್ಧದ ಖಂಡ ಅಥವಾ ಮನೆ ಎಂದು ಅರ್ಥ. ದಾರ್‌-ಅಲ್‌-ಹರಬ್‌ ಇರುವ ಪ್ರದೇಶದಲ್ಲಿ ಶರಿಯಾ ಕಾನೂನು ಇರುವುದಿಲ್ಲ. ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದಾಗ ತಮಗೆ ಮಾನ್ಯತೆ ಬೇಕು, ಅಧಿಕಾರ ಬೇಕು, ಮಸೀದಿಗಳು ಬೇಕು ಎಂದು ಡಿಮ್ಯಾಂಡ್‌ ಮಾಡುತ್ತಿರುವುದು, ಧ್ವನಿ ಎತ್ತುತ್ತಿರುವುದು. ಎಲ್ಲಿಯವರೆಗೆ? ತಮಗೆ ಅಧಿಕಾರ ಸಿಗುವವರೆಗೆ. ಅಧಿಕಾರ ಸಿಕ್ಕ ಮೇಲೆ ಇಸ್ಲಾಂ ಸ್ಥಾಪನೆ ಮಾಡಿ ದಾರ್‌-ಅಲ್‌-ಇಸ್ಲಾಂ ಮಾಡುವುದು. ಅರ್ಥಾತ್‌, ಹಿಂದೂಗಳು ಅಥವಾ ಬೇರೆ ಧರ್ಮಗಳನ್ನು ಹೊಡೆದೋಡಿಸುವುದು, ಮತಾಂತರ ಮಾಡುವುದು ಅಥವಾ ಹತ್ಯೆ ಮಾಡುವುದು.

ಇದು ಭಾರತದಲ್ಲೇ ನಡೆದಿದೆ. ಕಾಶ್ಮೀರದಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಾದ ಮೇಲೆ ಏನು ಮಾಡಿದರು ನೆನಪಿದೆಯೇ? ಮುಸ್ಲಿಮರು ಲಕ್ಷ ಲಕ್ಷ ಕಾಶ್ಮೀರಿ ಪಂಡಿತರನ್ನು ಕಾಶ್ಮೀರದಿಂದಲೇ ಹೊರ ಹಾಕಿದರು, ಅತ್ಯಾಚಾರ ಮಾಡಿದರು, ಹತ್ಯೆ ಮಾಡಿದರು. ಕೇರಳದ ಮಲ್ಲಪ್ಪುರಂನಲ್ಲಿ ಮುಸ್ಲಿಮರೇ ಹೆಚ್ಚಾಗಿರುವುದು. ಅವರದ್ದೊಂದು ಅಲಿಖಿತ ನಿಯಮವೇನು ಗೊತ್ತಾ? ಮುಸ್ಲಿಮರು ಅಂಗಡಿ, ಮನೆಗಳನ್ನು ಮಾರಾಟ ಮಾಡಬೇಕಾಗಿ ಬಂದರೆ, ಅದನ್ನು  ಮತ್ತೊಬ್ಬ ಮುಸ್ಲಿಮನಿಗೇ ಮಾರುವುದು ಹೊರತು ಹಿಂದೂಗಳಿಗಲ್ಲ. ಬೇಕಾದರೆ ಈ ನಿಯಮ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳಿ.

ಪಶ್ಚಿಮ ಬಂಗಾಳದ ದೀದಿಯ ಸರ್ಕಾರ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗರನ್ನು ಒಳಬಿಟ್ಟುಕೊಳ್ಳುತ್ತಿವೆ. ಅದರ ಪರಿಣಾಮ ಈಗ ಅಲ್ಲಿ ಕಾಳಿ ಆರಾಧನೆ ಮಾಡಿದರೆ ಕಲ್ಲು ತೂರುತ್ತಾರೆ. ದೇವಸ್ಥಾನಗಳು ಧ್ವಂಸವಾಗುತ್ತಿದೆ. ಹೌದು, ಆಯಾ ಪ್ರದೇಶಗಳು ಈಗ ದಾರ್‌-ಅಲ್‌-ಇಸ್ಲಾಮ್‌ನ ಸಮೀಪದಲ್ಲಿದೆ.

ನಮ್ಮ ಭಾರತ ವಿಭಜನೆ ಆಗಿದ್ದು ಧರ್ಮದ ಆಧಾರದ ಮೇಲೆ. ಆದರೂ ಭಾರತದಲ್ಲಿರುವ ಮುಸ್ಲಿಮರು, ಇಲ್ಲಿದ್ದು, ಈ ದೇಶದ ಸಂವಿಧಾನವನ್ನು ಕಾನೂನನ್ನು ಅನುಸರಿಸುವ ಬದಲು, ದಾರ್‌-ಅಲ್‌-ಹರಬ್‌ನಲ್ಲಿ ಕೇಳುವಂತೆ ಎಲ್ಲ ಡಿಮ್ಯಾಂಡ್‌ಗಳನ್ನು ಮಾಡಿ ಈಗ ಶರಿಯಾ ಕಾನೂನು, ಶರಿಯಾ ಕೋರ್ಟ್‌ ಬೇಕು ಎಂದು ಕೇಳುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್‌ ಸಹ ಬೆಂಬಲಿಸುತ್ತಿದೆ. ಶರಿಯಾ ಕೇಳುವ ಮುಸ್ಲಿಮರ ಪರ ನಿಂತಿದೆ ಕಾಂಗ್ರೆಸ್‌. ಭಾರತದಲ್ಲಿ ಶರಿಯಾ ಇಲ್ಲದೆಯೇ, ಕೇವಲ ಮುಸ್ಲಿಮರ ಪ್ರಾಬಲ್ಯ ಇರುವ ಕಡೆಯೇ ದಾರ್‌-ಅಲ್‌-ಇಸ್ಲಾಂ ಚಾಲ್ತಿಯಲ್ಲಿದೆ. ಇನ್ನು ಶರಿಯಾ ಬಂದರೆ, ಭಾರತದ ಪರಿಸ್ಥಿತಿ ಏನಾಗಬೇಡ ಆಲೋಚಿಸಿ.

ಇನ್ನು ಶರಿಯಾ ಪ್ರಕಾರ ಪ್ರಪಂಚನ್ನು ವಿಂಗಡಿಸಲಾದ ಮೂರನೇ ಭಾಗ ದಾರ್‌-ಅಲ್‌-ಸಲ್ಹ್‌. ಇಲ್ಲೂ , ಶರಿಯಾ ಇರುವುದಿಲ್ಲ, ಆದರೆ ಬಹುಸಂಖ್ಯಾತರು ಯಾವ ಧರ್ಮದವರು ಇರುತ್ತಾರೆ ಅವರೆಲ್ಲ ಒಂದಾಗಿರುತ್ತಾರೆ ಹಾಗೂ ಮುಸ್ಲಿಮರ ತಂಟೆಗೆ ಹೋಗುವುದಿಲ್ಲ. ಅವರಿಗೆ ಕೇರ್‌ ಸಹ ಮಾಡುವುದಿಲ್ಲ. ಅಂಥ ಸಂದರ್ಭದಲ್ಲಿ ಮುಸ್ಲಿಮರು ಎಲ್ಲರೊಳಗೊಂದಾಗಿ ಇದ್ದುಬಿಡಬೇಕು. ಯಾವ ಡಿಮ್ಯಾಂಡ್‌ಗಳೂ ಇಡುವುದಿಲ್ಲ. ಇದರ ನಿದರ್ಶನವೇ ಆಸ್ಪ್ರೇಲಿಯಾ. ಆಸ್ಪ್ರೇಯಾಲಿಯಾದ 2.2% ಜನಸಂಖ್ಯೆ ಮುಸ್ಲಿಮರಿದ್ದಾರೆ. ಈಗಲೂ ಅಲ್ಲಿ ಶರಿಯಾ ಕಾನೂನಿನ ಬಗ್ಗೆ ಒಬ್ಬನೇ ಒಬ್ಬ ಮುಸ್ಲಿಂ ಬಹಿರಂಗವಾಗಿ ಮಾತನಾಡುತ್ತಿಲ್ಲ. ಕ್ರಿಶ್ಚಿಯನ್ನರ ಜತೆಗೇ ಆರಾಮಾಗಿ ಇದ್ದಾರೆ.

ಇಂಥ ಶರಿಯಾ ಕಾನೂನನ್ನು ಭಾರತದಲ್ಲಿ ತಂದು ಕಾಂಗ್ರೆಸ್‌ ಸಾಧನೆ ಮಾಡುವುದಾದರೂ ಏನು ಹೇಳಿ? ಶಶಿ ತರೂರ್‌ಗೆ ಶರಿಯಾ ಇಂದ ಆಗುತ್ತಿರುವ ಪರಿಣಾಮಗಳು ಗೊತ್ತಾಗುವುದಿಲ್ಲ. ಗೊತ್ತಾದರೂ ಹೇಳುವುದಿಲ್ಲ. 2020ರಲ್ಲೋ, ಲೋಕಸಭಾ ಚುನಾವಣೆ ಮುಗಿದ ಮೇಲೋ ಅಥವಾ ಶರಿಯಾ ಕೋರ್ಟ್‌ಗಳಿಂದ ಮುಸ್ಲಿಮರು ಅನ್ಯಾಯಕ್ಕೊಳಗಾಗಿ ಧ್ವನಿ ಏಳಲಾರಂಭಿಸಿದರೆ, ರಾಹುಲ್‌ ಗಾಂಧಿ ಬಂದು, ಕೇಸರಿ ಭಯೋತ್ಪಾದನೆಯ ಬಗ್ಗೆ ಹೇಳಿದಂತೆ, ತಮಗೇನು ಗೊತ್ತಿಲ್ಲ, ತಾವೇನೂ ಹೇಳಿಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ.

ಈಗಾಗಲೇ ಶರಿಯಾ ತರುವ ಸರ್ವ ಪ್ರಯತ್ನಗಳೂ ನಡೆಯುತ್ತಿವೆ. ಶರಿಯಾ ಬರದೆಯೇ ಮುಸ್ಲಿಮರು ಏನು ಮಾಡಿದ್ದಾರೆ ಎಂದು ಕಾಶ್ಮೀರ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಆಂಧ್ರ ಸಾರಿ ಸಾರಿ ಹೇಳಿದೆ. ಇನ್ನು ಅಧಿಕೃತವಾಗಿ ಶರಿಯಾ ಬಂದರೆ ಶಶಿ ತರೂರ್‌ ಸಹ ಶೇಖ್‌ ಅಬ್ದುಲ್ಲಾಹ್‌ ಆಗುವುದರ ಬಗ್ಗೆ ನನಗೆ ತೀವ್ರ ಭಯವಿದೆ. ನಾನು ಯಾಕೆ ಹಿಂದೂ ಎಂದು ತರೂರ್‌ ಪುಸ್ತಕ ಬರೆದವರು, ನಾನು ಯಾಕಾಗಿ ಮುಸ್ಲಿಂ ಎಂದು ಬರೆಯಬಹುದು ಎಂಬ ಭಯ ಇದೆ. ಇಂಥ ಶರಿಯಾದ ಪರ ಶಶಿ ತರೂರ್‌ ತಮ್ಮ ಬುಡದಲ್ಲೇ ಬಾಂಬ್‌ ಇಟ್ಟುಕೊಂಡು ಭಾರತ ಹಿಂದೂ ಪಾಕಿಸ್ಥಾನ ಆಗುತ್ತದೆ ಎನ್ನುವುದನ್ನು ಕೇಳಿದರೆ, ಸುನಂದಾ ತರೂರ್‌ ಆತ್ಮ ಸಹ ಗಹಗಹಿಸಿ ನಗಬಹುದೇನೋ.

ಸರಿ ಎಲ್ಲ ವಾದವನ್ನೂ ಬದಿಗಿಡಿ, ಮೋದಿ ಸರ್ಕಾರ ಬಂದು ಐದು ವರ್ಷವಾಗುತ್ತಾ ಬಂತು. ಪಾಕಿಸ್ಥಾನದಂತೆ ಎಷ್ಟು ಉಗ್ರರ ದಾಳಿಯಾಗಿವೆ? ಎಷ್ಟು ಹಿಂದೂಗಳು ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಮತಾಂತರ ಮಾಡಿದ್ದಾರೆ? ಶಶಿ ತರೂರ್‌ ಲೆಕ್ಕ ಕೊಡಲಿ ನೋಡೋಣ. ಇಸ್ಲಾಮ್‌ನಲ್ಲಿ ಸುಳ್ಳು ಹೇಳುವುದು ಬಾಹಿರ. ಆದರೆ, ತಮ್ಮ ಬುಡಕ್ಕೆ ಬೆಂಕಿ ಬಿದ್ದಾಗ ಸುಳ್ಳು ಹೇಳಬಹುದು. ಅದಕ್ಕೆ ಮಹಮ್ಮದರಿಂದ ಅನುಮತಿ ಇದೆ. ಇದಕ್ಕೆ ತಾಕಿಯಾ ಎನ್ನುತ್ತಾರೆ. ಬರೆದುಕೊಡುತ್ತೇನೆ, ಶಶಿ ತರೂರ್‌, ತಾಕಿಯಾ ಹೇಳಿದರೂ ಹಿಂದೂಗಳ ವಿರುದ್ಧ ಇಂಥ ಮಾಹಿತಿಗಳು ಸಿಗುವುದಿಲ್ಲ.

ಅದೆಲ್ಲ ಬಿಡಿ, ಭಾರತದಲ್ಲಿ ಶರಿಯಾ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಗೊತ್ತಿದ್ದರೂ ಮೂರ್ಖ ಹಿಂದೂಗಳು ಧ್ವನಿ ಎತ್ತದೇ ಕುಳಿತು ಕುಮಾರಸ್ವಾಮಿಯ ಕಣ್ಣೀರಿಗೆ ಕರಗುತ್ತಿರುವಾಗ,ಭಾರತ ಹಿಂದೂ ಪಾಕಿಸ್ಥಾನ ಆಗುವ ಮಾತೆಲ್ಲಿ? ಹಿಂದೂಗಳಿಗೆ ಅಷ್ಟೆಲ್ಲ ಧಮ್‌ ಇಲ್ಲ ಬಿಡಿ.

ಆಗಿದ್ದಿಷ್ಟೇ, ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಚಾಲನೆ ಬೇಕಿತ್ತು ಇನ್ನೊಂದು ಕಡೆ ಸುಬ್ರಮಣಿಯನ್‌ ಸ್ವಾಮಿ ಶಶಿ ತರೂರ್‌ ಬೆನ್ನೇರಿದ್ದಾರೆ. ಮೊನ್ನೆಯಷ್ಟೇ ಪತ್ನಿ ಸುನಂದಾ ತರೂರ್‌ ವಿಷಯದಲ್ಲಿ ದೆಹಲಿ ಕೋರ್ಟ್‌, ಶಶಿ ತರೂರ್‌ನನ್ನು ದೆಹಲಿ ಪೊಲೀಸರಿಗೆ ವಿಚಾರಣೆ ಮಾಡುವುದಕ್ಕೆ ಅನುಮತಿ ನೀಡಿದೆ. ಮೋದಿ ಸರ್ಕಾರವೇ ಬಂದರೆ ಇವರದ್ದೇ, ಖಂಡಿತವಾಗಿಯೂ ಸತ್ಯ ಹೊರ ಬರುತ್ತದೆ ಎಂದು ಹೆದರಿದ ತರೂರ್‌ ಏನೇನೋ ಬಡಬಡಿಸುತ್ತಿದ್ದಾರಷ್ಟೇ. ಅಷ್ಟಕ್ಕೂ ಇಸ್ಲಾಮಿಕ್‌ ರಾಷ್ಟ್ರಗಳಂತೆ ಶರಿಯಾ ಭಾರತದಲ್ಲಿದ್ದಿದ್ದರೆ, ಶಶಿ ತರೂರ್‌, ಶಶಿ ತರೂರ್‌ ಆಗಿರದೇ ಶಫೀ ತಾಹಿರ್‌ ಆಗಿ ಬದಲಾದ ಪ್ರಕಟಣೆಯನ್ನು ನಾವು ಪತ್ರಿಕೆಯ ಜಾಹೀರಾತು ಕಾಲಂನಲ್ಲಿ ನೋಡಬೇಕಿರುತ್ತಿತ್ತು. ಅಭದ್ರತೆ ಶಶಿಗೆ, ಮುಸ್ಲಿಮರಿಗಲ್ಲ.

Leave a Reply

Copyright©2021 Chiranjeevi Bhat All Rights Reserved.
Powered by Dhyeya