ಹಿಂದೂವಾದರೆ ಅತ್ಯಾಚಾರ, ಪಾದ್ರಿ ಆಶಿರ್ವಾದವೇ?

ಅಸಾರಾಮ್‌ ಬಾಪು ಅತ್ಯಾಚಾರ ಪ್ರಕರಣ ಕೋರ್ಟ್‌ನಲ್ಲಿ ಸಾಬೀತಾದ ಹಾಗೂ ಜೈಲಿಗೆ ಕಳುಹಿಸಿದ ಮಾರನೇ ದಿನ ಭಾರತದ ಪ್ರತಿಷ್ಠಿತ ದಿನಪತ್ರಿಕೆಗಳು ಎಂದು ತಮ್ಮನ್ನು ತಾವೇ ಕರೆದುಕೊಳ್ಳುವ ದಿನಪತ್ರಿಕೆಗಳಲ್ಲಿ ಬಂದ ಹೆಡ್‌ಲೈನ್‌ಗಳಿವು. ಟೈಮ್ಸ್‌ ಆಫ್‌ ಇಂಡಿಯಾ: For raping 16-year-old girl in his ashram, ‘godman’ Asaram gets life in jail till death.
ಗಾರ್ಡಿಯನ್‌: Indian guru Asaram Bapu jailed for life for raping teenage girl.
ಇಂಡಿಯನ್‌ ಎಕ್ಸ್‌ಪ್ರೆಸ್‌: Asaram Bapu awarded life sentence for raping minor devotee in 2013: Two aides get 20 years jail term.
ಹಿಂದೂ ಪತ್ರಿಕೆ: Asaram to be in jail until death for raping minor.
ಡೆಕ್ಕನ್‌ ಹೆರಾಲ್ಡ್‌:
Self-styled godman Asaram sentenced to life.
ಹಿಂದುಸ್ಥಾನ್‌ ಟೈಮ್ಸ್‌: Asaram case verdict: self-styled godman cries in court after life sentence for raping minor devotees.

ಇನ್ನು ಡೈಲಿಓ ಎಂಬ ಜಾಲತಾಣ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಭಕ್ತಾದಿಗಳು ಏನು ಮಾಡಬೇಕು ಎಂಬುದನ್ನೂ ಜನರಿಗೆ ಉಪದೇಶಿಸಿತು. ಡೈಲಿಓ: Asaram’s follower should realise he’s a convicted rapist.

ಸರಿ. ಮಾಧ್ಯಮಗಳು ಅವರ ಡ್ಯೂಟಿ ಮಾಡಿದ್ದಾರೆ ಏನಿವಾಗ ಎಂದು ನೀವು ಕೇಳಬಹುದು. ಆದರೆ ಅದೇ ಅತ್ಯಾಚಾರಿಯ ಜಾಗದಲ್ಲಿ ಅನ್ಯಮತೀಯರು ಇದ್ದಿದ್ದರೆ ಮಾಧ್ಯಮಗಳು ಇದೇ ಡ್ಯೂಟಿ ಮಾಡುತ್ತಿದ್ದರಾ? ಅಥವಾ ಇಂಥ ಡ್ಯೂಟಿ ಮಾಡುವುದಕ್ಕೆ ಧಮ್‌ ಇದೆಯಾ ಎಂದು ಕೇಳಬೇಕೆನಿಸುತ್ತದೆ.

ಬಹಳ ದಿನ ಏನಾಗಿಲ್ಲ. ನಾಲ್ಕೈದು ದಿನದ ಹಿಂದೆ ಕೇರಳದಲ್ಲಿ ಒಂದು ಆಡಿಯೊ ರೆಕಾರ್ಡ್‌ ಓಡಾಡಿತ್ತು. ಅದರಲ್ಲಿ ಒಬ್ಬ ಪತಿ ತನ್ನ ಪತ್ನಿಗೆ ಅನ್ಯಾಯ ಆಗಿದೆ. ಅತ್ಯಾಚಾರ ಆಗಿದೆ ಎಂದು ದೂರುತ್ತಿದ್ದ. ಕೇರಳದ ಮಲಂಕರ ಆರ್ಥಡಾಕ್ಸ್‌ ಚರ್ಚ್‌ನಲ್ಲಿ ಐದು ಪಾದ್ರಿಗಳು ಸೇರಿಕೊಂಡು ಒಬ್ಬ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಚರ್ಚ್‌ನಲ್ಲಿ ಒಂದು ಪದ್ಧತಿ ಇದೆ. ಮಾಡಿದ ತಪ್ಪನ್ನು ಒಂದು ಪೆಟ್ಟಿಗೆಯೊಳಗೆ ಕುಳಿತು ಪಾದ್ರಿಗೆ ತಾನು ಮಾಡಿದ ತಪ್ಪನ್ನು ನಿವೇದನೆ ಮಾಡಿಕೊಳ್ಳುವುದು. ತಪ್ಪನ್ನು ಹೇಳಿದ ಮೇಲೆ ಪಾದ್ರಿ ತಿದ್ದಿಕೊಳ್ಳಲು ಸಲಹೆ ಕೊಡುತ್ತಾನೆ ಅಥವಾ ಪ್ರಾಯಶ್ಚಿತ್ತವಾಯಿತು ಎಂದು ಹೇಳಿ ಕಳಿಸುವುದು ವಾಡಿಕೆ. ಹೀಗೆ ಮಹಿಳೆ ತಾನು ಮಾಡಿದ ಯಾವುದೋ ಒಂದು ತಪ್ಪನ್ನು ಮದುವೆಗೆ ಮುಂಚೆ ಹೋಗಿ ಹೇಳಿಕೊಂಡಿದ್ದಾಳೆ. ಆಕೆಯ ದೌರ್ಬಲ್ಯಗಳನ್ನು ತಿಳಿದ ಪಾದ್ರಿ ದುರುಪಯೋಗಪಡಿಸಿಕೊಂಡು, ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ. ಸಾಲದ್ದಕ್ಕೆ ಅವಳ ಚಿತ್ರವನ್ನು ಮತ್ತೆ ನಾಲ್ವರು ಪಾದ್ರಿಗಳಿಗೂ ಕಳಿಸಿ ಅತ್ಯಾಚಾರಕ್ಕೆ ಪ್ರಚೋದನೆ ನೀಡಿ ಅವರೂ ಅತ್ಯಾಚಾರ ಮಾಡುವಂತೆ ಮಾಡಿದ್ದಾನೆ. ಪಾದ್ರಿ ಜಾನ್ಸನ್‌ ವಿ ಮ್ಯಾಥ್ಯೂ, ಪಾದ್ರಿ ಜೈಸೇ ಕೆ. ಜಾರ್ಜ್‌, ಪಾದ್ರಿ ಜಾಬ್‌ ಮ್ಯಾಥ್ಯೂ, ಪಾದ್ರಿ ಅಬ್ರಹ್ಯಾಮ್‌ ವರ್ಗೀಸ್‌, ಪಾದ್ರಿ ಜೀಜೊ ಜೆ ಅಬ್ರಹ್ಯಾಮ್‌ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆಯ ಪತಿ ಆಡಿಯೋದಲ್ಲಿ ದುಃಖ ತೋರಿದ್ದಾರೆ.

ಇಷ್ಟೆಲ್ಲ ಆದರೂ ಯಾವ ದಿನಪತ್ರಿಯೂ ಇದನ್ನು ಮುಖಪುಟದಲ್ಲಿ ತೋರಿಸಲೇ ಇಲ್ಲ. ಮುಖಪುಟದಲ್ಲಿ ಬಿಡಿ, ಕನಿಷ್ಟ ಒಂದು ಕಾಲಂ ಸುದ್ದಿಯನ್ನಾಗಿಯೂ ತೆಗೆದುಕೊಂಡಿಲ್ಲ. ಎಲ್ಲೋ ಒಂದೆರಡು ದಿನಪತ್ರಿಕೆಗಳು ಪೇಪರಿನ ಯಾವುದೋ ಒಂದು ಮೂಲೆಯಲ್ಲಿ, ಅದೂ ಹಿಂದೂಗಳೇ ಅತ್ಯಾಚಾರ ಮಾಡುತ್ತಿದ್ದಾರೆ ಎಂದು ಭಾಸವಾಗುವಂತೆ ವರದಿ ಮಾಡಿದ್ದಾರೆ.

ಒಂದು ದೊಡ್ಡ ಪತ್ರಿಕೆ ತನ್ನ ವರದಿಯಲ್ಲಿ ಒಂದು ಕೇಸರಿ ಹಿನ್ನೆಲೆ ಬಣ್ಣದಲ್ಲಿ ಹುಡುಗಿಯನ್ನಿಟ್ಟು, Five kerala priests ‘blackmail, sexually abuse’ woman ಎಂದು ಬರೆದುಬಿಟ್ಟಿದೆ. ಆದರೆ priests ಎಂದು ದೇವಸ್ಥಾನದ ಪುರೋಹಿತರನ್ನೂ ಕರೆಯುತ್ತಾರೆ. ಪಾದ್ರಿಯನ್ನೂ ಪ್ರೀಸ್ಟ್‌ ಎಂದು ಕರೆಯುತ್ತಾರೆ. ಆಸಾರಾಮ್‌ ಬಾಪುಗೆ ಮಾತ್ರ, ಗುರು, ಹಿಂದೂ ಗುರು ಎಂದು ಬಳಸಿದ ಕೆಲ ಮಾಧ್ಯಮಗಳು ಸೊಂಟದ ಮೇಲೆ ಗೌನು ನಿಲ್ಲದ ಪಾದ್ರಿ ಅತ್ಯಾಚಾರವೆಸಗಿದಾಗ ಮಾತ್ರ ಕೇಸರಿ ಬಣ್ಣ ಹಾಕಿ ಪ್ರೀಸ್ಟ್‌ ಎಂದು ಬರೆದುಬಿಡುತ್ತವೆ. ಪಾದ್ರಿ ಎಂದು ಗೊತ್ತು ಮಾಡುವುದಕ್ಕೆ ಪ್ಯಾಸ್ಟರ್‌ ಎಂದೂ ಬರೆಯಬಹುದಿತ್ತು. ಆದರೂ ಬರೆಯುವುದು ಪ್ರೀಸ್ಟ್‌ ಎಂದೇ. ಏಕೆಂದರೆ ತಪ್ಪಿತಸ್ಥ ಹಿಂದೂ ಎಂದು ಜನರು ತಿಳಿಯಲಿ ಎಂಬುದೇ ಇವರ ಮೂಲ ಉದ್ದೇಶವಾಗಿರುವಾಗ ಚರ್ಚ್‌ನ ಪುರೋಹಿತ ಎಂದು ಬರೆದರೂ ಕಿಂಚಿತ್ತೂ ಅಚ್ಚರಿ ಪಡಬೇಕಿಲ್ಲ. ಇಂಥ ಕೆಲಸ ಮಾಡುವುದಕ್ಕೆ ಪತ್ರಕರ್ತನೇ ಆಗಬೇಕಿತ್ತಾ?

ಅವೆಲ್ಲ ಬಿಡಿ. ಹೋರಾಟಗಾರರು, ಪ್ರಗತಿಪರರು ಎಲ್ಲಿ ಸತ್ತು ಬಿದ್ದಿದ್ದಾರೆ? ಕಠುವಾ ಪ್ರಕರಣವಾದಾಗ ತ್ರಿಶೂಲಕ್ಕೆ ಕಾಂಡೋಮ್‌ ಸಿಕ್ಕಿಸಿ ವ್ಯಂಗ್ಯ ಚಿತ್ರ ಬಿಡಿಸಿದ ಆ ದುರ್ಗಾ ಎಂಬ ಸದ್ಗುಣ ಸಂಪನ್ನೆ ಈಗ ಶಿಲುಬೆಗೆ ಕಾಂಡೋಮ್‌ ಹಾಕಿದ ಚಿತ್ರ ಬಿಡಿಸಲೇ ಇಲ್ಲವಲ್ಲ? ಯಾಕೆ? ಕಮ್ಮಿನಿಷ್ಠರ ಕಾಂಡೋಮ್‌ಗಳು ಬಳಸಿ ಖಾಲಿಯಾಗಿದೆಯಾ? ಅಥವಾ ಹಿಂದೂಗಳು ಅತ್ಯಾಚಾರ ಮಾಡಿದರೆ ಮಾತ್ರ ಜೇಬಿನಿಂದ ಕಾಂಡೋಮ್‌ ತೆಗೆಯುತ್ತಾಳಾ?
ಯಾಕ್‌ ಬೇಕು ಸ್ವಾಮಿ ಇಂಥ ಹೇಸಿಗೆ ಜೀವನ? ಒಬ್ಬ ಮಹಿಳೆಯ ಮೇಲೆ ದೌರ್ಜನ್ಯ, ಅತ್ಯಾಚಾರವಾದರೂ ಮಾತಾಡುವುದಕ್ಕೆ ಬಿಡದ ಕೈ, ಕೆಂಪು ಬಾವುಟ ಪಕ್ಷದ ಮಹಿಳೆಯರು ಇನ್ನೂ ಜೀತದಲ್ಲೇ ಬದುಕುತ್ತಿದ್ದಾರೆ ಅನ್ನಿಸುತ್ತಿಲ್ಲವೇ?

ಹಿಂದೂಗಳು ಅತ್ಯಾಚಾರ ಮಾಡಿದ್ದರೆ ಆ ಪ್ರಕರಣವನ್ನು ಸುಪ್ರೀಂ ಕೋರ್ಟೇ ತೆಗೆದುಕೊಳ್ಳಬೇಕು. ಆದರೆ ಚರ್ಚ್‌ನಲ್ಲಿ ಅತ್ಯಾಚಾರ ಆದರೆ ಮಾತ್ರ ಅದು ಧರ್ಮದ ವಿಷಯ. ಚರ್ಚ್‌ನ ಆಂತರಿಕ ವಿಷಯ ಅಂತೆ.

ನೀವು ನಂಬಲೇ ಬೇಕು. ಪಾದ್ರಿ ವೇಷ ಧರಿಸಿದ 5 ಲಫಂಗಗಳು ಅತ್ಯಾಚಾರ ಮಾಡಿದ್ದರೂ, ಪ್ರಜಾಪ್ರಭುತ್ವ ಭಾರತದಲ್ಲಿ ಎಫ್‌ಐಆರ್‌ ಸಹ ಆಗಿಲ್ಲ. ಆಗುವುದೂ ಇಲ್ಲ. ಪತಿ, ಚರ್ಚ್‌ಗೇ ದೂರು ನೀಡಿದ್ದಾನೆ. ಇನ್ನು ಇದರ ಬಗ್ಗೆ ಮತ್ತೊಬ್ಬ ಪಾದ್ರಿ ಹೇಳುತ್ತಾನೆ: ಇದೇನು ಕೋರ್ಟ್‌ಗೆ ಹೋಗುವಂಥ ಗಂಭೀರ ಪ್ರಕರಣವಲ್ಲ. ಇದನ್ನು ನಾವು ಚರ್ಚ್‌ನ ಒಳಗೇ ಪ್ರಾಮಾಣಿಕ ತನಿಖೆ ನಡೆಸಿ, ತಪ್ಪು ಮಾಡಿದವರನ್ನು ಶಿಕ್ಷಿಸುತ್ತೇವೆ ಎನ್ನುತ್ತಾನೆ.
ಈಗ ಕೇಳಬೇಕಿರುವ ಪ್ರಶ್ನೆಯೇನೆಂದರೆ, ಇವನ ಅಮ್ಮ, ಅಕ್ಕನೇ ಆ ಸ್ಥಾನದಲ್ಲಿದ್ದಿದ್ದರೆ, ಚರ್ಚ್‌ ಒಳಗೇ ಪ್ರಾಮಾಣಿಕ ತನಿಖೆ ಮಾಡಿಸುತ್ತಿದ್ದನೇ. ಯಾವನದ್ದೋ ಹೆಂಡತಿ, ಯಾವನದ್ದೋ ಅಮ್ಮ ಆ ಸಂತ್ರಸ್ತೆ. ಚರ್ಚ್‌ ಯಾಕೆ? ಅವನ ಮನೆಯ ಕೋಣೆಯಲ್ಲೂ ಪ್ರಾಮಾಣಿಕ ತನಿಖೆ ಮಾಡುತ್ತಾನೆ. ಯಾರಿಗೇನಾಗಬೇಕು ಹೇಳಿ? ಪರಮ ದಯಾಳುವಾದ ಏಸುವೇನು ಲೆಕ್ಕ ಕೇಳುತ್ತಾನೆಯೇ? ಚರ್ಚ್‌ಗಳಲ್ಲಿ ಪಾದ್ರಿಗಳು ಆಡಿದ್ದೇ ಆಟ.

ಇದೊಂದೇ ಅಲ್ಲ 2018ರ ಏಪ್ರಿಲ್‌ 23ರಂದು ಆಂಧ್ರದ ವಲ್ಲಂಪಾಡು ಎಂಬ ಹಳ್ಳಿಯಲ್ಲಿರುವ ಚರ್ಚ್‌ನ 38 ವರ್ಷ ಪಾದ್ರಿ 11ರ ಪ್ರಾಯದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಮಾಡುತ್ತಾ ಬಂದಿದ್ದಾನೆ. ಅವಳ ದೇಹಸ್ಥಿತಿ ದಿನೇ ದಿನೇ ಕ್ಷೀಣಿಸುತ್ತಾ ಬಂದಾಗ ಪೋಷಕರಿಗೆ ವಿಷಯ ತಿಳಿದಿದೆ. ಇದು ಎಷ್ಟು ದಿನಪತ್ರಿಕೆಗಳಲ್ಲಿ ಬಂತು? ಜನವರಿಯಲ್ಲಾದ ಕಠುವಾ ಪ್ರಕರಣ ಏಪ್ರಿಲ್‌ನಲ್ಲಿ ತಿಳಿದರೂ ಮುಖಪುಟದ ಸುದ್ದಿಯಾಗುವಾಗ, ಏಪ್ರಿಲ್‌ನಲ್ಲೇ ನಡೆದ ಈ ಅತ್ಯಾಚಾರ ಯಾಕಾಗಿ ಮಾಧ್ಯಮಗಳಿಗೆ ಮಹತ್ವ ಎನಿಸಲಿಲ್ಲ?

ಕುಂಬಳಕಾಯಿ ಒಡೆದ ಮೇಲೆ ಅದರಲ್ಲಿರುವ ಒಂದು ರುಪಾಯಿ ನಾಣ್ಯ ಹೆಕ್ಕುವ ಪಡ್ಡೆ ಹುಡುಗರಂತೆ, ದೇವಸ್ಥಾನದ ಮುಂದೆ ಕಾಯಿ ಒಡೆದಾಗ ಗಬಗಬನೇ ತಮಗೆ ಬೇಕಾದ ಕಾಯಿ ಹೋಳನ್ನು ಆಯ್ದುಕೊಳ್ಳುವ ಪೊರಕಿಗಳಂತೆ, ಪತ್ರಕರ್ತರು, ಬುದ್ಧಿಜೀವಿಗಳು, ಪ್ರಗತಿಪರರು, ಎಡಪಂಥೀಯರು ಸಾವಿನಲ್ಲೂ, ಅತ್ಯಾಚಾರದಲ್ಲೂ ಹಿಂದೂಗಳು ಎಷ್ಟು, ಮುಸ್ಲಿಮರು ಎಷ್ಟು ಎಂದು ನೋಡುತ್ತಾ, ವಿಷಯ ದೊಡ್ಡದು ಮಾಡಬೇಕೋ ಬೇಡವೋ ಎನ್ನುತ್ತಾರೆ. ಕುಂಬಳಕಾಯಿ ಬಿದ್ದಾಗ ನಾಣ್ಯ ಹೆಕ್ಕುವವರಿಗೂ ಈ ಮಹಾನ್‌ ನಾಯಕರಿಗೂ ಬಹಳ ವ್ಯತ್ಯಾಸವೇನಿಲ್ಲ. ಅವರು ನಾಣ್ಯ ಕೆದಕುತ್ತಾರೆ, ಇವರು ನೋಟು ನುಂಗುತ್ತಾರೆ.

ಕೇವಲ ಭಾರತದಲ್ಲಷ್ಟೇ ಪಾದ್ರಿಗಳು, ಮಿಷನರಿಗಳು, ಬಿಷಪ್‌ಗಳ ಕಾಮಲೀಲೆಗಳಿಲ್ಲ. ಈ ಗೌನು ತೊಟ್ಟ ಮಂದಿ ಎಲ್ಲೆಲ್ಲಿದ್ದಾರೋ ಆಯಾ ದೇಶದಲ್ಲಿ ಪ್ರಕರಣ ದಾಖಲಾಗುತ್ತಲೇ ಇರುತ್ತದೆ. ಬ್ರೆಜಿಲ್‌ನ ಸೊಬ್ರಿನೊ ವಲ್ಡಸಿ ಪಿಕ್ಯಾಂಟೊ ಎಂಬ ಪಾದ್ರಿ, ಬರುವ ಭಕ್ತಾದಿಗಳ ಬಾಯಲ್ಲಿ ತನ್ನ ಮರ್ಮಾಂಗವನ್ನಿಟ್ಟು, ವೀರ್ಯವನ್ನು ಪವಿತ್ರ ಹಾಲು ಎಂದು ಕುಡಿಸುತ್ತಿದ್ದದ್ದು 2016ರಲ್ಲಿ ನಡೆದಿದೆ. ಆಗ ಇದನ್ನು ವಿರೋಧಿಸದ ಹೋರಾಟಗಾರರ, ಪತ್ರಕರ್ತರ, ಬುದ್ಧಿಜೀವಿಗಳ ಬಾಯಲ್ಲಿ ಏನಿತ್ತು ಎಂಬುದು ಈಗಲೂ ಯಕ್ಷ ಪ್ರಶ್ನೆ!

ಪ್ರಪಂಚಾದ್ಯಂತ ಪಾದ್ರಿಗಳು ಯಾವ್ಯಾವ ದೇಶದಲ್ಲಿ ಇಂಥ ಕೆಲಸ ಮಾಡಿದ್ದಾರೆ ಎಂದರೆ, ಏಸುವೇ ಧರ್ಮ ತ್ಯಜಿಸಬಹುದು. ಆದರೆ ಬಿಷಪ್‌ಗಳು ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ನಡೆಸಿದ ದೇಶಗಳ ಪಟ್ಟಿ ಇವು: ಅರ್ಜೆಂಟೀನಾ, ಆಸ್ಪ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬ್ರೆಜಿಲ್‌, ಕೆನಡಾ, ಚೀಲಿ, ಜರ್ಮನಿ, ಹಾಂಡುರಸ್‌,ಐಸ್ಲೆಂಡ್‌, ಐರ್ಲೆಂಡ್‌, ಇಟಲಿ, ಕೀನ್ಯಾ, ನೆದರ್ಲೆಂಡ್‌, ನೈಜೀರಿಯಾ, ನಾರ್ವೆ, ಫಿಲಿಪೈನ್ಸ್‌, ಸ್ಕಾಟ್ಲೆಂಡ್‌ ಹೀಗೆ 30ಕ್ಕೂ ಅಧಿಕ ದೇಶಗಳಲ್ಲಿ ಬಿಷಪ್‌ಗಳ ವಿರುದ್ಧವೇ ಪ್ರಕರಣ ದಾಖಲಾಗಿ ಸಾಬೀತು ಸಹ ಆಗಿರುವುದಿದು. ಇದು ಕೇವಲ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆಸಿದ ಲೆಕ್ಕ. ಭ್ರಷ್ಟಾಚಾರ, ಕೊಲೆ, ದ್ವೇಷದ ಬೀಜ ಬಿತ್ತುವ ಲೆಕ್ಕ ಕೇಳಿದರೆ ತಲೆ ತಿರುಗಿಬಿಡುತ್ತದೆ.
ನಾವು ಇಂಥ ಲಕ್ಷ ಲೆಕ್ಕ ಕೊಡಲಿ. ಒಬ್ಬ ಆಸಾರಾಮ್‌ ಬಾಪುವಿನಿಂದ ನಮ್ಮ ಹಿಂದೂ ಧರ್ಮವೇ ನೀಚ ಎಂದು ಸೀಲ್‌ ಒತ್ತಿ ಹೊರಟುಬಿಡುತ್ತಾರೆ.

ಕಾವಿ ತೊಟ್ಟುಕೊಂಡು ಅತ್ಯಾಚಾರ ಎಲ್ಲ ಯಾಕೆ ಮಾಡಬೇಕು ಕಾವಿ ಬಿಚ್ಚಿ ಹಾಕಲಿ ಎಂದು ಹಿಂದೂಗಳಿಗಾದ್ರೆ ಕೇಳುತ್ತೀರಲ್ಲವೇ? ಎಲೈ ಪಾದ್ರಿಯೇ, ಗೌನಿನೊಳಗೆ ಕಾಮವನ್ನೇಕೆ ಅಡಗಿಸಿಟ್ಟುಕೊಂಡಿದ್ದೀಯ ಎಂದು ಕೇಳುವುದಕ್ಕೆ ನರ ಇಲ್ಲವೇ? ಅಥವಾ ಗೌನು ಅತ್ಯಾಚಾರಕ್ಕೆ ಲೈಸೆನ್ಸೋ? ಎರಡಲ್ಲಿ ಒಂದನ್ನಾದರೂ ಮಾಡಬೇಕಲ್ಲವಾ?
ಗೌನಿನೊಳಗೆ ಕಾಮವನ್ನು ಅಡಗಿಸಿಟ್ಟುಕೊಂಡರೆ, ಏಸು ಸಿಗುತ್ತಾನಾ? ಮುಕ್ತಿ ಕೊಡುತ್ತಾನಾ? ಹಾಗೆ ಮಾಡಿದರೆ, ಸದಾ ಸನ್ಮಾರ್ಗವನ್ನೇ ತೋರಿದ ಏಸುವಿಗೇ ಮಾಡುವ ಅಪಮಾನ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya