ಚಾಣಕ್ಯ ನೀತಿಯಲ್ಲಿ ಒಂದು ಉಲ್ಲೇಖ ಬರುತ್ತದೆ: ಒಬ್ಬ ಉತ್ತಮ ರಾಜ ಬಹಳ ಶಕ್ತಿಶಾಲಿಯಾಗಿ ದೇಶವನ್ನು ನಿಯಂತ್ರಿಸುತ್ತಾನೋ, ಆಗ ಕಳ್ಳರು, ಉಗ್ರರು, ದೇಶವಿರೋಧಿಗಳಿಗೆ ಬಿಸಿ ತಟ್ಟಿ, ಸಮಾಜದಲ್ಲಿ ಅಸಹಿಷ್ಣುತೆ ಇದೆ ಎಂದು ದೂರುತ್ತಾರೆ.
ಈಗ ಇದನ್ನೇ ತಳಕು ಹಾಕಿ ನೋಡಿದರೆ, ಅಂದು ಚಾಣಕ್ಯ ಹೇಳಿದ್ದು ಇಂದಿಗೂ ಅದೆಷ್ಟು ಪ್ರಸ್ತುತ ಎನ್ನುವುದು ಅರಿವಾಗುತ್ತದೆ. ಈಗ ನಮ್ಮ ದೇಶವನ್ನು ಆಳುತ್ತಿರುವ ರಾಜ ನರೇಂದ್ರ ಮೋದಿ. ನರೇಂದ್ರ ಮೋದಿ ದೇಶವನ್ನು ಒಂದೊಂದೇ ರಾಜ್ಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾ ಅದರ ಅಭಿವೃದ್ಧಿ ಮಾಡುತ್ತಾ, ಕಳ್ಳರು, ಭ್ರಷ್ಟರು, ನಕ್ಸಲರು ಎಲ್ಲರ ಹೆಡೆಮುರಿಕಟ್ಟುತ್ತಿದ್ದಾರೆ. ಕೇವಲ ನಾಲ್ಕೇ ವರ್ಷದಲ್ಲಿ ಇವೆಲ್ಲವೂ ಕಣ್ಣಿಗೇ ಗೋಚರವಾಗುತ್ತಿದೆ. 2019ರಲ್ಲೂ ಮೋದಿಯೇ ಪ್ರಧಾನಿಯಾಗಿಬಿಟ್ಟರೆ ನಮಗೆಲ್ಲ ಉಳಿವಿಲ್ಲ ಎಂದು ಷಡ್ಯಂತ್ರ ಮಾಡುತ್ತಿರುವ ಪ್ರತಿಯೊಬ್ಬರಿಗೂ ಗೊತ್ತು. ಭ್ರಷ್ಟರಾಗಿ ನಮ್ಮನ್ನು ಬದುಕಲು ಬಿಡುವುದಿಲ್ಲ ಎಂಬುದೂ ಇವರಿಗೆಲ್ಲ ತಿಳಿದಿದೆ. ಆದ್ದರಿಂದ ಈ ಬಾರಿ ಒಂದೋ ಮೋದಿ ಸಾಯಬೇಕು, ಇಲ್ಲವೇ ಸೋಲಬೇಕು ಎಂಬ ತಂತ್ರಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಮೋದಿ ಸೋಲುವುದು ಅಥವಾ ಸತ್ತು ಸೋಲುವುದು ಎಷ್ಟು ಅನಿವಾರ್ಯವಾಗಿದೆ ಎಂಬುದಕ್ಕೆ ಈಗ ಮೋದಿಯನ್ನು ಕೊಲ್ಲುವುದಕ್ಕೆ ರೂಪಿಸಿರುವ ಸಂಚು ಬಹಿರಂಗವಾಗಿರುವುದೇ ಸಾಕ್ಷಿ.
ಕಾಂಗ್ರೆಸ್ ಕೈವಾಡವೇನು ?
ಕಾಂಗ್ರೆಸ್ ಒಂದೊಂದು ಸಲ ಒಂದೊಂದು ತಂತ್ರಗಾರಿಕೆ ಪ್ರಯೋಗಿಸುತ್ತದೆ.
2006ರಲ್ಲಿ ಮಾಲೇಗಾಂವ್ ಸೊಧೀಟವಾದಾಗ ಹಲವಾರು ಜನರು ಮೃತಪಟ್ಟಿದ್ದರು. ಆದರೆ 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕಾಗಿ ಮಕೋಕಾ ಪೊಲೀಸರನ್ನು ಹಾಗೂ ಎಲ್ಲ ತನಿಖಾಧಿಕಾರಿಗಳಿಗೆ ಹಿಂದೂ ಭಯೋತ್ಪಾದನೆ ಅಥವಾ ಕೇಸರಿ ಭಯೋತ್ಪಾದನೆ ಇದೆ ಎಂಬ ಭಯ ಹುಟ್ಟಿಸಲು ಕಾಂಗ್ರೆಸ್ ನಿರ್ದೇಶಿಸಿತ್ತು. ಈ ಕಾರಣಕ್ಕಾಗೇ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಪುರೋಹಿತ್ರನ್ನು ಸಿಕ್ಕಿ ಹಾಕಿಸಿದ್ದರು.
2009: ಮೆಕ್ಕಾ ಮಸೀದಿ ಸೊಧೀಟವೂ ಹಿಂದೂಗಳಿಂದ ಆದದ್ದು ಹಾಗೂ ಇದರ ಹಿಂದೆ ಆರ್ಎಸ್ಎಸ್ ಇದೆ ಎಂದು ಸುಶೀಲ್ ಕುಮಾರ್ ಶಿಂಧೆ ಹೇಳಿದ್ದರು.
ಆದರೆ ಇವು ಹಿಂದೂ ಭಯೋತ್ಪಾದನೆಯಿಂದ ಆದದ್ದಲ್ಲ, ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂಬುದು ಸಾಬೀತಾಯಿತು. ಕೇಸರಿ ಭಯೋತ್ಪಾದನೆ ಎಂದು ಮೊದಲು ಪದಪ್ರಯೋಗ ಮಾಡಿದ್ದು ಕಾಂಗ್ರೆಸ್ನ ಚಿದಂಬರಂ. ಆದರೆ ಇದು ಸುಳ್ಳು ಎಂದು ತಿಳಿದಾಗ ರಾಹುಲ್ ಗಾಂಧಿಯೇ ಸ್ವತಃ ಕಾಂಗ್ರೆಸ್ ಅಂಥ ಪದಬಳಕೆ ಮಾಡಿಲ್ಲ ಎಂದಿದ್ದರು.
ಬಹಳ ಪ್ರಮುಖವಾದ ವಿಷಯವೇನೆಂದರೆ, ಆಗ ಗೃಹ ಸಚಿವಾಲಯದಲ್ಲಿದ್ದ ಅಧಿಕಾರಿ ಆರ್ವಿಎಸ್ ಮಣಿಗೆ ಇವೆಲ್ಲವೂ ತಿಳಿದಿದ್ದು, ಹೊರಗೆ ಹೇಳದಂತೆ ಅವರನ್ನು ಕಟ್ಟಿ ಹಾಕಿದ್ದರು. ಆದರೆ ಈಗ ಆರ್ವಿಎಸ್ ಮಣಿ ಅವರು ಹಿಂದೂ ಟೆರರ್ ಎಂಬ ಪುಸ್ತಕದಲ್ಲಿ ಕಾಂಗ್ರೆಸ್ನ ನೀಚ ಲೆಕ್ಕಗಳನ್ನು ಇಟ್ಟಿದ್ದಾರೆ.
ಈ ಎಲ್ಲ ತಂತ್ರಗಾರಿಕೆಯಿಂದ ಕಾಂಗ್ರೆಸ್ 2009ರಲ್ಲಿ ಜಯ ಸಾಧಿಸಿತು. ಆದರೆ 2014ರಲ್ಲಿ ಕೇಸರಿ ಭಯೋತ್ಪಾದನೆಯನ್ನು ಬಳಸಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಏಕೆಂದರೆ ಅದು ಕಾಂಗ್ರೆಸ್ ಪ್ರೇರಿತ ಎಂದು ಜಗತ್ತಿಗೇ ತಿಳಿದುಬಿಟ್ಟಿತ್ತು. ಹಾಗಾಗಿ ಇಂಟಾಲರೆನ್ಸ್ (ಅಸಹಿಷ್ಣುತೆ) ಎಂಬ ಹೊಸ ನಾಟಕ ಶುರು ಮಾಡಿದರು.
ಹಿಂದೂಗಳು ಮುಸ್ಲಿಮರ ವಿರುದ್ಧ ಅಸಹಿಷ್ಣುಗಳಾಗಿದ್ದಾರೆ ಎಂದು ಸುದ್ದಿ ಹಬ್ಬಿಸಿದರು. ಇಂಗ್ಲಿಷ್, ಹಿಂದಿ ಮತ್ತು ಇತರ ಭಾಷೆಯ ಪತ್ರಕರ್ತರು ಸುಪಾರಿ ಪಡೆದುಕೊಂಡವರಂತೆ ಮೋದಿ ವಿರುದ್ಧ ಸುದ್ದಿ ಮಾಡುತ್ತಿದ್ದರು. ಎಷ್ಟರ ಮಟ್ಟಿಗೆ ಎಂದರೆ 2014ರಲ್ಲಿ ಯಾವುದೇ ಪತ್ರಕರ್ತನನ್ನು ಮಾತನಾಡಿಸಿದರೂ ಆತ 2002ನೇ ಇಸವಿ ಬಿಟ್ಟು ಮುಂದೆ ಹೋಗುತ್ತಿರಲಿಲ್ಲ.
ಆದರೆ ಮೋದಿಯ ಬಗ್ಗೆ ಎಲ್ಲ ದುಷ್ಟ ಶಕ್ತಿಗಳಿಗೂ ಅಷ್ಟಾಗಿ ತಿಳಿಯದ ಕಾರಣ ಎಲ್ಲರೂ ಒಂದಾಗಲಿಲ್ಲ. ಪರಿಣಾಮ ಮೋದಿ ಗೆದ್ದರು.
ಮೋದಿಯನ್ನು ಸೋಲಿಸಬೇಕು ಅಥವಾ ಸಾಯಿಸಬೇಕು ಎಂದು ಮೋದಿ ಪ್ರಧಾನಿ ಆದಾಗಿನಿಂದ ಗಲಭೆಗಳನ್ನು ಹುಟ್ಟುಹಾಕಲಾಯಿತು. 2015ರಲ್ಲಿ ಅಖ್ಲಾಕ್ ಘಟನೆಗೆ ರೆಕ್ಕೆ ಪುಕ್ಕಗಳನ್ನೆಲ್ಲ ಅಂಟಿಸಿದರು. ಪ್ರಯೋಜನವಾಗಲಿಲ್ಲ. ಕೇಂಬ್ರಿಡ್ಜ್ ಅನಾಲಿಟಿಕಾ ಬಳಿ ಹೋದರು. ಕಾಂಗ್ರೆಸ್ನವರೇ ಸಿಕ್ಕಿ ಹಾಕಿಕೊಂಡರು.
ಕಾಂಗ್ರೆಸ್ಗೆ ಉಲ್ಟಾ ನಿಂತರೂ ಮೋದಿಯ ವರ್ಚಸ್ಸನ್ನು ಕಡಿಮೆ ಮಾಡಲಾಗಲಿಲ್ಲ. ಆಗಲೇ ಮೋದಿಯನ್ನು ಕೊಲ್ಲಬೇಕು ಎಂದು ಹೊಂಚು ಹಾಕುತ್ತಿದ್ದವರ ಬಳಿಗೆ ಹೋದರಾ ಎಂಬ ಅನುಮಾನ ದಟ್ಟವಾಗುತ್ತದೆ.
ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೆ ಹೋಗಿ ಮೋದಿಯನ್ನು ಸೋಲಿಸುವುದಕ್ಕೆ ಪಾಕಿಸ್ತಾನ ಸಹಾಯ ಮಾಡಬೇಕಿದೆ ಎನ್ನುತ್ತಾರೆ. ಅದಕ್ಕೆ ಪಾಕಿಸ್ತಾನದ ಜನತೆ ಅಸ್ತು ಎಂದಿತ್ತು. ಪಾಕ್ ಮೋದಿಯನ್ನು ಹೇಗೆ ತಡೆಯಬಲ್ಲದು? ಉಗ್ರರಿಗೆ ಕೊಲ್ಲುವುದರ ಹೊರತಾಗಿ ಬೇರಾವ ಮಾರ್ಗಗಳಿವೆ? ಸದ್ದಿಲ್ಲದೇ ಮಲಗಿದ್ದ ಹಫೀಜ್ ಸಯೀದ್ ಏಕಾಏಕಿ ಫೀನಿಕ್ಸ್ನಂತೆ ಬಂದು ಮೋದಿಯ ವಿರುದ್ಧ ಹೇಳಿಕೆ ನೀಡಿದ್ದು ಹಾಗೂ ಭಾರತವನ್ನು ಉಡಾಯಿಸುತ್ತೇನೆ ಎಂದಿದ್ದು ಆಗಲೇ ಅಲ್ಲವೇ? ಹಾಗಾದರೆ ಕಾಂಗ್ರೆಸ್ ಪಾಕ್ ಬಳಿ ಅವರ ರಾಜಕಾರಣಿಗಳು ಭಾರತಕ್ಕೆ ಬರಲಿ ಎಂದು ಭಿಕ್ಷೆ ಬೇಡಿದ್ದರೋ ಅಥವಾ ಮೋದಿಯನ್ನು ಹತ್ಯೆ ಮಾಡಿ ಎಂದಿದ್ದರೋ? ಕಾಂಗ್ರೆಸ್ನ ಅಜೆಂಡಾಗಳು ಬಯಲಾಗುತ್ತಿವೆ.
ಕಾಂಗ್ರೆಸ್ ಮಾವೋವಾದಿಗಳ ಲಿಂಕ್
ಇನ್ನು ಮುಂದಿನ ಚುನಾವಣೆ ಬರುವ ತನಕ ಯಾವುದಾದರೊಂದು ಕೋಮುಗಲಭೆಗಳು ನಡೆಯುತ್ತಲೇ ಇರಬೇಕು ಎಂಬುದು ಅಲಿಖಿತ ನಿಯಮ. ಹಾಗಾಗೇ ಒಂದಾದ ಮೇಲೆ ಒಂದು ಗಲಭೆಗಳು ನಡೆಯುತ್ತಲೇ ಇವೆ.
ಸುಪ್ರೀಂ ಕೋರ್ಟ್ ವಿರುದ್ಧ ದಲಿತರು ನಡೆಸಿದ ದಾಳಿ ಪ್ಲಾನ್ ಆದದ್ದು ಹೊರ ದೇಶದಿಂದ. ಈಗ ಈ ಭಿಮಾ-ಕೋರೆಗಾಂವ್ ಹಿಂಸಾಚಾರ.
ಪುಣೆ ಪೊಲೀಸರು ರೋನಾ ವಿಲ್ಸನ್ ಸೇರಿದಂತೆ ವಕೀಲರು, ಸಂಪಾದಕರನ್ನು ಬಂಧಿಸಿದಾಗ ಅವರ ಬಳಿ ವಶಪಡಿಸಿಕೊಂಡ ಪತ್ರ ಸ್ಪಷ್ಟವಾಗಿ ಹೇಳಿದ್ದು ಇದು: ನಾವು ರಾಜೀವ್ ಗಾಂಧಿ ಮಾದರಿಯಲ್ಲೇ ನರೇಂದ್ರ ಮೋದಿಯನ್ನು ಹತ್ಯೆ ಮಾಡಬೇಕು. ಅದಕ್ಕೆ ನಮಗೆ ಕೆಲ ಖರ್ಚುಗಳು ಇವೆ. ಅದನ್ನು ಜಿಗ್ನೇಶ್ ಮೇವಾನಿ ಮೂಲಕ ನಾವು ಕಾಂಗ್ರೆಸ್ ಅನ್ನು ತಲುಪಿ ಎಲ್ಲವನ್ನೂ ಪಡೆಯುತ್ತೇವೆ ಎಂದಿದೆ. ಅಲ್ಲದೇ ಮೋದಿಯನ್ನು ಕೊಲ್ಲುವ ಪ್ಲಾನ್ಗೆ ಅಮೆರಿಕದಲ್ಲಿ ತಯಾರಾಗುವ ಎಂ-4 ರೈಫಲ್ಗಳು ಬೇಕು. ಅದಕ್ಕಾಗಿ 8 ಕೋಟಿ ರುಪಾಯಿಗಳೂ ಬೇಕು ಎಂದಿದೆ.
ಈಗ ಹೇಳಿ, ನಿಜವಾಗಿ ಮೋದಿಯನ್ನು ಸಾಯಿಸಬೇಕು ಎಂಬ ಆಶಯವಿರುವುದು ಕಾಂಗ್ರೆಸ್ಗೋ? ನಕ್ಸಲರಿಗೋ? ಸುಪಾರಿ ನೀಡುವವನಿಗೆ ವ್ಯಕ್ತಿಯನ್ನು ಕೊಲ್ಲುವ ಉದ್ದೇಶವಿರುತ್ತದೆಯೋ/ ಉದ್ದೇಶ ಹುಟ್ಟಿಕೊಂಡಿದ್ದೋ ಅಥವಾ ಕೊಲೆ ಮಾಡುವವನಿಗೋ? ಹಾಗೆಯೇ, ನಕ್ಸಲರಿಗೆ ಹಣ ನೀಡುವ ಕಾಂಗ್ರೆಸ್ಗೆ ಮೋದಿಯನ್ನು ಕೊಲ್ಲುವ ಹಂಬಲವಿದೆಯೋ ಅಥವಾ ನಕ್ಸಲರಿಗೋ?
ಚರ್ಚ್ ರಾಜಕಾರಣ
ಮೊದಲಿಗೆ ಆರ್ಚ್ಬಿಷಪ್ ಅನಿಲ್ ಜೋಸೆಫ್ ಉತ್ತಮ ಸರ್ಕಾರ ಬರುವವರೆಗೂ(ಮೋದಿ ಸರ್ಕಾರ ಹೋಗಿ ಕಾಂಗ್ರೆಸ್ ಬರುವವರೆಗೂ) ಏಸುವಿನಲ್ಲಿ ಪ್ರಾರ್ಥನೆ ಮಾಡಲು ಕರೆ ಕೊಟ್ಟರು. ಇದನ್ನು ಮುಂಬೈನ ಮತ್ತೊಬ್ಬ ಪಾದ್ರಿ ಬೆಂಬಲಿಸಿದ.
ಇದರ ಜತೆಗೆ ಈಗ ಮತ್ತೊಬ್ಬ ಪಾದ್ರಿ ಮೋದಿಯ ವಿರುದ್ಧ ಪ್ರಾರ್ಥನೆಗೆ ಕರೆ ಕೊಟ್ಟಿದ್ದಾನೆ. ಇವರ ಉದ್ದೇಶವೂ ಒಂದೇ ಆದರೆ ಸ್ವಲ್ಪ ಭಿನ್ನ. ಮೋದಿ ಸೋಲಬೇಕು, ತಾವು ಮಾಡುವ ಕ್ರಿಶ್ಚಿಯನ್ ಮತಾಂತರವನ್ನು ವಿರೋಧಿಸುವುದಕ್ಕೆ ಯಾರೂ ಇರಬಾರದು ಎಂದು.
ಅಮೆರಿಕ ಬೆಂಬಲ ನೀಡುತ್ತಿದೆಯಾ?
ಇಂಥದ್ದೊಂದು ಅನುಮಾನ ಕಾಡುವುದು ಅಮೆರಿಕ ನಿರ್ಮಿತ ಎಂ-4 ರೈಫಲ್ ಹೆಸರನ್ನೇ ಮಾವೋವಾದಿಗಳು ಬೇಕು ಎಂದು ಸೂಚಿಸಿರುವುದರಿಂದ. ಎಂ-4 ರೈಫಲ್ಗಳು ಬೇಡ ಎಂದು ಅಮೆರಿಕದ ಸಂಸತ್ನಲ್ಲಿ ಬಹಳ ದೊಡ್ಡ ಚರ್ಚೆಯಾಗಿತ್ತು.
ಆದರೆ ಮಾವೋವಾದಿಗಳು ಮೋದಿಯನ್ನು ಕೊಲ್ಲುವುದಕ್ಕೆ ಇದೇ ಗನ್ಗಳು ಬೇಕು ಎಂದು ಕೇಳಿದ್ದು
ಯಾಕಾಗಿ?
ಒಂದೋ ಎಂ-4ಗೆ ಮಾರ್ಕೆಟ್ ಇಲ್ಲದೇ ಬಹಳ ಕಡಿಮೆ ದರದಲ್ಲಿ ಸ್ಮಗ್ಲಿಂಗ್ ಮಾಲು ವಾವೋವಾದಿಗಳ ಕೈಗೆ ಸಿಗಲಿಕ್ಕಿದೆ ಅಥವಾ ಅಮೆರಿಕದ ರಾಜಕಾರಣಿಗಲೇ ಗನ್ ಸರಬರಾಜು ಮಾಡುತ್ತಿದ್ದಾರೆ.
ಅದೇನೇ ಇರಲಿ, ಇತ್ತೀಚೆಗೆ ಸುಬ್ರಮಣಿಯನ್ ಸ್ವಾಮಿಯವರು ನಮ್ಮ ಮತ್ತು ಅಮೆರಿಕದ ಸಂಬಂಧ ಹಳಸುತ್ತಿದೆ ಎಂದು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಈಗ ಮಾವೋವಾದಿಗಳು/ ನಕ್ಸಲರು ಉಪಯೋಗಿಸುವುದು ಕಂಟ್ರಿ ಪಿಸ್ತೂಲು ಅಥವಾ ಇನ್ಯಾವುದಾದರೂ ರೈಫಲ್ಗಳು. ಆದರೆ ಈಗ ಅಮೆರಿಕ ನಿರ್ಮಿತ ಎಂ-4 ಬೇಕು ಎಂದು ಕೇಳುತ್ತಿರುವ ಉದ್ದೇಶ ಕಾಕತಾಳೀಯವೂ ಇರಬಹುದು ಅಥವಾ ಕುತಂತ್ರವೂ ಇರಬಹುದು .
ಇದಷ್ಟು ಬಿಂದುಗಳನ್ನು ಸೇರಿಸಿದರೆ ಎಲ್ಲರ ಗುರಿಯೂ ಒಂದೇ. 2019ರವರೆಗೆ ದಲಿತರನ್ನು ಎತ್ತಿಕಟ್ಟಿ ಗಲಭೆ ಮಾಡಿಸುವುದು ಮತ್ತು ದೇಶದಲ್ಲಿ ಅಶಾಂತಿ ಕಾಪಾಡುವಂತೆ ನೋಡಿಕೊಳ್ಳುವುದು. ಹೀಗಾದರೆ 2019ರಲ್ಲಿ ಮೋದಿಯನ್ನು ಆರಾಮಾಗಿ ಸೋಲಿಸಬಹುದು ಅಥವಾ ಸಾಯಿಸಬಹುದು ಎಂಬುದು ಉದ್ದೇಶ. ಚಾಣಕ್ಯ ಹೇಳಿದ ಹಾಗೇ ನಡೆಯುತ್ತಿದೆ. ಉತ್ತಮವಾಗಿ ಆಡಳಿತ ಮಾಡುತ್ತಿರುವ ರಾಜನಿಂದ ಕಳ್ಳ ಕಾಕರಿಗೆ ಬಿಸಿ ಮುಟ್ಟಿದೆ. ಅಸಹಿಷ್ಣುತೆಯೂ ಮುಗಿಲು ಮುಟ್ಟಿದೆ.