ಮಟನ್‌ ಶಾಪಿನಲ್ಲಿ ಚಾಮರಾಜಪೇಟೆ ಉಲ್ಟಾ ನೇತಾಡಬೇಕೇ?

ನೀವು ಪದ್ಮಾವತ್‌ ಸಿನಿಮಾ ನೋಡಿದ್ದೀರಾ? ಅದರಲ್ಲಿ ಅಲ್ಲಾವುದ್ದೀನ್‌ ಖಿಲ್ಜಿ ಮಾತಾಡುವುದನ್ನು ಕೇಳಿದ್ದೀರಾ? ಮೇವಾರ್‌ನ ರಾಜನನ್ನು ಸೋಲಿಸುವುದಕ್ಕೆ ಆಗುವುದಿಲ್ಲ ಎಂದಾದಾಗ ಖಿಲ್ಜಿ ಸೈನಿಕರು ವಾಪಸ್‌ ಹೋಗುವುದಕ್ಕೆ ಅಣಿಯಾಗುತ್ತಾರೆ. ಆಗ ಖಿಲ್ಜಿ, ಎಲ್ಲರನ್ನುದ್ದೇಶಿಸಿ, ಆಕ್ರೋಶದಿಂದ, ನಾಭಿಯಿಂದ ಮಾತನಾಡುತ್ತಾನೆ. ಹಲ್ಲು ಕಡಿಯುತ್ತಾ ಆಡುವ ಆ ಮಾತು, ಮತಾಂಧ ಸೈನಿಕರಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ. ಮೇವಾರದ ರಾಜ ರತನ್‌ ಸಿಂಗ್‌ನನ್ನು ಸೋಲಿಸಬೇಕು, ಕೊಲ್ಲಬೇಕು ಎಂದು ಜೋರು ಧ್ವನಿಯಲ್ಲಿ ಮಾತನಾಡುತ್ತಾ ಕಣ್ಣೀರು ಹಾಕುತ್ತಾ ಅವರ ಧ್ವಜವನ್ನು ಎಸೆಯುತ್ತಾನೆ. ಆಗ ವಾಪಸ್‌ ಹೋಗಲು ಮನಸ್ಸು ಮಾಡಿದ್ದ ಸೈನಿಕರು ಧ್ವಜವನ್ನು ಹಿಡಿದು ನಿಲ್ಲಿಸಿ, ಸಮೂಹ ಸನ್ನಿಗೆ ಒಳಗಾಗಿ ಅಲ್ಲಾವುದ್ದೀನ್‌ ಖಿಲ್ಜಿಗೆ ಜೈಕಾರ ಹಾಕುತ್ತಾರೆ. ವಾಪಸ್‌ ಅವರ ಗುಡಿಸಲುಗಳಿಗೆ ಹೋಗುತ್ತಾರೆ. ಖಿಲ್ಜಿ ತನ್ನ ಮಂತ್ರಿಗೆ ತಾನು ಹೇಗೆ ಎಲ್ಲರನ್ನೂ ಮರುಳು ಮಾಡಿದೆ ನೋಡು ಎಂದು ಕಣ್ಣಲ್ಲೇ ಸಂಜ್ಞೆ ಮಾಡುತ್ತಾನೆ.
ಇದೊಂದೇ ಅಲ್ಲ, ಅಕ್ಬರ್‌, ಕುತುಬುದ್ದೀನ್‌ ಐಬಕ್‌, ಶಹಜಹಾನ್‌, ಬಾಬರ್‌, ಹುಮಾಯೂನ್‌, ಜಹಂಗೀರ್‌, ಔರಂಗಜೇಬ್‌ ಸೇರಿದಂತೆ ಯಾವುದೇ ಮುಸಲ್ಮಾನ ನಾಯಕರು ಹೇಗೆ ಭಾಷಣ ಮಾಡುತ್ತಿದ್ದರು ಎಂದು ನೀವು ಇತಿಹಾಸದ ಪುಸ್ತಕ ಓದಿದ್ದರೆ, ಅವರು ಹಲ್ಲನ್ನು ಮಸೆಯುತ್ತಾ ಹೇಗೆ ಭಾಷಣ ಮಾಡುತ್ತಿದ್ದರು ಎಂದು ತಿಳಿಯುತ್ತದೆ.
ಇದೇ ಸಂತತಿ ಇನ್ನೂ ನಮ್ಮ ದೇಶದಲ್ಲಿ ಇದೆಯಾ? ಎಂಬ ಅನುಮಾನ ಕಾಡುವುದು, ಜಮೀರ್‌ ಅಹ್ಮದ್‌ ಖಾನ್‌ ಅವರ ಭಾಷಣ ಕೇಳಿದಾಗ. ಇತ್ತೀಚೆಗೆ ಜಮೀರ್‌ ತಮ್ಮ ಮುಸಲ್ಮಾನರನ್ನೆಲ್ಲ ಒಂದು ಕಡೆ ಗುಡ್ಡೆ ಹಾಕಿಕೊಂಡು ಅವರನ್ನೆಲ್ಲ ರೊಚ್ಚಿಗೆಬ್ಬಿಸುವ ಹಾಗೆ ಮಾತನಾಡುತ್ತಿದ್ದರು. ಹಲ್ಲು ಮಸೆಯುತ್ತಾ, ಆಕ್ರೋಶದಿಂದ ಥೇಟ್‌ ಅಲ್ಲಾವುದ್ದೀನ್‌ ಖಿಲ್ಜಿಯ ಹಾಗೇ ಆ ಆಕ್ರೋಶ. ‘ನಾವು ವಿಧಾನ ಸೌಧದ ಒಳಗೆ ಹೋಗುವಾಗ ಪೊಲೀಸ್ರು ಪಾಸ್‌ ಕೇಳಿದ್ರು… ನನ್‌ ಮಕ್ಳಾ, ಮುಸಲ್ಮಾನ್‌ ಅಂತ ಪಾಸ್‌ ಕೇಳ್ತೀರಾ? ಅಂತ ಒಳಗ್‌ ನುಗ್ಗಿದ್ವಿ… ವಿಧಾನ್‌ ಸೌಧದ್‌ ಬಾಗಿಲು ಮುರಿದು ಒಳಗೆ ನುಗ್ಗೋರು ನಾವು…’ ಎಂದು ಜನರ ಚಪ್ಪಾಳೆ ಗಿಟ್ಟಿಸಿಕೊಂಡರು. ಇನ್ನೂ ಸಾಕಾಗಿಲ್ಲ ಜಮೀರ್‌ಗೆ. ‘ಟಿಪ್ಪು ಜಯಂತಿಗೆ ಒಪ್ಪಿಗೆ ತಗೊಂಡ್ವಿ… ವಿಧಾನ ಸೌಧದಲ್ಲೇ ಟಿಪ್ಪು ಜಯಂತಿ ಆಚರಣೆ ಮಾಡಿದ್ವಿ… ಯಾವನಾದ್ರೂ ಮಾತಾಡಿದ್ರೆ ಚಪ್ಲಿ.. ಚಪ್ಲಿ ತಗೊಂಡ್‌ ಮುಖಕ್‌ ಹೊಡೀತಾ ಇರೋದೇ…’ಎಂದಾಗ ಮತ್ತಷ್ಟು ಜನರು ಕೇಕೆ ಹಾಕುತ್ತಿದ್ದರು.
ಯಾಕಾಗಿ? ಯಾರ ವಿರುದ್ಧ ಇಂಥ ಆಕ್ರೋಶ? ಹೊರಗಿನವನಾದ ಅಲ್ಲಾವುದ್ದೀನ್‌ ಖಿಲ್ಜಿ ನಮ್ಮ ದೇಶದ ವಿರುದ್ಧ ಸೈನಿಕರನ್ನು ಎತ್ತಿಕಟ್ಟುವುದಕ್ಕಾಗಿ ಹಾಗೆ ಮಾಡಿದ ಎಂದುಕೊಳ್ಳೋಣ. ಆದರೆ ಜಮೀರ್‌ ಏನು ಪಕ್ಕದ ದೇಶದವರ ಜತೆ ಹೋರಾಡುತ್ತಿದ್ದಾರಾ? ಪಕ್ಕದ ರಾಜ್ಯದ ಜತೆ ಹೋರಾಡುತ್ತಿದ್ದಾರಾ? ಅಥವಾ ಧರ್ಮ ಯುದ್ಧ ಮಾಡುತ್ತಿದ್ದಾರಾ? ಯಾರಿಗೋ ಹೋಗಿ ಹೊಡೆದುಬಿಡ್ತೀನಿ, ಬಾಗಿಲು ಮುರಿಯುತ್ತೀನಿ ಎನ್ನುವವನು ಜನ ನಾಯಕನೋ? ರೌಡಿ ಗ್ಯಾಂಗ್‌ ನಾಯಕನೋ?
ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸುತ್ತಿರುವುದು ನಿಜವಾಗಿ ಟಿಪ್ಪುಗೆ ಗೌರವ ನೀಡುವುದಕ್ಕಲ್ಲ, ಬದಲಿಗೆ ಇಂಥ ನಾಯಕರು ಒತ್ತಾಯ ಮಾಡುವುದಕ್ಕೆ ಅಂತಾಯಿತಲ್ಲ. ಕೊಚ್ಚು , ಕಡಿ, ಅತ್ಯಾಚಾರ ಮಾಡು ಎಂದ ಟಿಪ್ಪುವನ್ನು ಅನುಸರಿಸುವವರೂ ಅವನ ಹಾಗೇ ಉಗ್ರವಾಗಿ ಮಾತಾಡುವುದು, ಚಪ್ಲಿಯಲ್ಲಿ ಹೊಡೆ ಎಂದು ಹೇಳುತ್ತಿದ್ದಾರೆ. ನಮಗೆ ಭಯವಾಗುವುದು ಇವರಾರ‍ಯರಿಂದಲೂ ಅಲ್ಲ. ಬದಲಿಗೆ, ಜಮೀರ್‌ ಅಹ್ಮದ್‌ ಚಪ್ಪಲಿಯಲ್ಲಿ ಹೊಡೀಬೇಕಾಗುತ್ತದೆ, ನನ್ನ ಒಳ್ಳೆಯ ಮುಖವನ್ನು ಮಾತ್ರ ನೋಡಿದ್ದೀರ, ಇನ್ನೊಂದು ಮುಖ ತೋರಿಸಿದರೆ ಹಂಗಾಮಾ…ಹಂಗಾಮಾ ಆಗಿಬಿಡುತ್ತದೆ ಎಂದು ಅಸಭ್ಯವಾಗಿ ನಾಲಿಗೆ ಕಚ್ಚಿದಾಗ ಕೇಕೆ ಹಾಕುವ ಪುಂಡರನ್ನು ಕಂಡರೆ ಭಯವಾಗುತ್ತದೆ.
ಇದೇ ಮಾತನ್ನು ಹಿಂದೂ ರಾಜಕಾರಣಿ ಅಥವಾ ತಿಲಕ ಇಟ್ಟಿರುವ ಯಾವನೇ ಮಾತಾಡಿದ್ದರೂ ಮಾಧ್ಯಮಗಳು ದೊಡ್ಡ ಸುದ್ದಿಯನ್ನಾಗಿ ಮಾಡಿ ಎದೆ ಎದೆ ಬಡಿದುಕೊಳ್ಳುತ್ತಿತ್ತು. ಹಿಂದೂ ಭಯೋತ್ಪಾದನೆ, ಸಂವಿಧಾನಕ್ಕೆ ಮಾಡಿದ ಅಪಮಾನ ಮಣ್ಣು ಮಸಿ ಅಂತೆಲ್ಲ ಸುದ್ದಿ ಮಾಡುತ್ತಿತ್ತು. ಸಾಕ್ಷಿ ಮಹಾರಾಜ್‌ ವಿಚಾರದಲ್ಲೇ ಇದು ಸಾಬೀತಾಗಿದೆಯಲ್ಲ. ಸಾಕ್ಷಿ ಮಹಾರಾಜ್‌ ಮುಸ್ಲಿಮರ ಹೆಸರು ಎತ್ತಲಿಲ್ಲ, ಜಮೀರ್‌ ಹಾಗೇ ಮಾತನಾಡಿದ್ದಾರೆ. ಅದನ್ನು ಬಹಳ ದೊಡ್ಡ ಸುದ್ದಿಯಾಗುವ ಹಾಗೆ ಮಾಡಿದರು. ಒಬ್ಬ ಮುಸ್ಲಿಂ ತಾನು ಅಧಿಕಾರಕ್ಕೆ ಬಂದರೆ ‘ಅವರನ್ನು’ ಸುಮ್ಮನೆ ಬಿಡುವುದಿಲ್ಲ ಎಂದರೂ ಸುದ್ದಿಯಿಲ್ಲ. ಅನಂತ್‌ ಕುಮಾರ್‌ ಹೆಗಡೆ ಮಾತನಾಡಿದರೆ ಅದು ಸಂವಿಧಾನಕ್ಕೆ ಮಾಡಿದ ಅಪಮಾನ, ಆದರೆ ವಿಧಾನಸೌಧದ ಬಾಗಿಲು ಒಡೆದೆ ನುಗ್ಗೋರು ನಾವು ಎಂದು ಹೇಳಿದರೆ ಸಂವಿಧಾನಕ್ಕೆ ಮರ್ಯಾದೆ ಕೊಟ್ಟಂತೆಯೇ?
ಜಮೀರ್‌ ಅಹ್ಮದ್‌ ಒಬ್ಬ ಕನ್ನಡದ ನಾಯಕ ಎಂದು ಹೇಳುವುದಕ್ಕೆ ನೀವು ಏನಾದರೂ ಒಂದು ಉದಾಹರಣೆ ಕೊಡಬಹುದಾ? ಅವರೇನು ಪಾಕಿಸ್ತಾನದಲ್ಲಿ ಪ್ರಚಾರ ಮಾಡುತ್ತಿದ್ದಾರೋ ಅಥವಾ ಚಾಮರಾಜಪೇಟೆಯಲ್ಲಿ ಪ್ರಚಾರ ಮಾಡುತ್ತಿದ್ದಾರೋ ಎಂದೇ ಗೊತ್ತಾಗುವುದಿಲ್ಲ. ಅಷ್ಟರ ಮಟ್ಟಿಗೆ ಉರ್ದುವಿನಲ್ಲೇ ಪ್ರಚಾರ ಮಾಡುತ್ತಿದ್ದಾರೆ. ಅಲ್ಲಾಹ್‌ ಮೇಲೆ ಆಣೆ ಇಡುವುದು, ಹಲ್ಲು ಮಸೆಯುತ್ತಾ ‘ನಾನ್‌ ಮಂತ್ರಿಯಾಗ್ತೀನಿ, ಆಮೇಲೆ ನೋಡಿ ಅವ್ರಗೆಲ್ಲ ಏನ್‌ ಮಾಡ್ತೀನಿ’ ಎಂದು ಹೇಳುವುದು. ಯಾರಿಗೋ ಏನೋ ಮಾಡುವುದಕ್ಕೆ ಈ ಜಮೀರ್‌ ಅಹ್ಮದ್‌ ಮಂತ್ರಿಯೇ ಯಾಕಾಗಬೇಕು? ಅಂಡರ್‌ವರ್ಲ್ಡ್‌ ಡಾನ್‌ ಆದರೂ ಸಾಕು ಇವರು ಯಾರಿಗೆ ಏನು ಬೇಕಾದರೂ ಮಾಡಬಹುದಲ್ಲ?!
ಇಂದಿಗೂ ಜಮೀರ್‌ ಅಹ್ಮದ್‌ ವ್ಯಾಪ್ತಿಯಲ್ಲಿ ಮೀಟರ್‌ ಬಡ್ಡಿ ದಂಧೆ ಚಾಲ್ತಿಯಲ್ಲಿದೆ. ಮಾರ್ಕೆಟ್‌ಗೆ ಹೋಗಿ ತರಕಾರಿ ತೆಗೆದುಕೊಳ್ಳುವ ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಬೆಳಗ್ಗೆ 5.30ಕ್ಕೆ 1000 ರುಪಾಯಿ ಸಾಲ ನೀಡಿದರೆ, 9.30ಗೆ ಕಲೆಕ್ಷನ್‌ಗೆ ಬರುತ್ತಾರೆ. ಆಗ 1300 ರುಪಾಯಿ ಕೊಡಬೇಕಿದೆ. ಎಲ್ಲ ರೀತಿಯ ಬ್ರ್ಯಾಂಡೆಡ್‌ ಬಟ್ಟೆಗಳ, ವಸ್ತುಗಳ ನಕಲಿ ಆವೃತ್ತಿ ತಯಾರಾಗುವುದು ಜಮೀರ್‌ ಅವರ ಕ್ಷೇತ್ರದ ಒಳಗೇ. ಎಲ್ಲ ಕಣ್ಣು ಮುಂದೆಯೇ ನಡೆಯುತ್ತಿದ್ದರೂ ಜಮೀರ್‌ಗೆ ಇದೆಲ್ಲ ಗೊತ್ತೇ ಇಲ್ಲ ಎಂದು ನಂಬುವುದು ಹೇಗೆ? ಈ ಅಕ್ರಮ ದಂಧೆ ಮಾಡುತ್ತಿರುವ ಬಹುತೇಕರು ಜಮೀರ್‌ ಬೆಂಬಲಿಗರು ಎಂಬುದು ಸುಳ್ಳಲ್ಲ.
ಸರಿ, ಜಮೀರ್‌ ಅಹ್ಮದ್‌ ನಿಜವಾಗಿಯೂ ಮುಸ್ಲಿಮರ ಪರನಾ? ಅದೂ ಇಲ್ಲ. ಕಾರಣ ಅವರು ಜೆಡಿಎಸ್‌ನಲ್ಲಿದ್ದಾಗ ಮಾಡಿದ್ದ ಒಂದು ಭಾಷಣದಲ್ಲಿ ಅವರೇ ಹೇಳಿರುವ ಮಾತೇನು ಗೊತ್ತಾ? ‘ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ಇದುವರೆಗೂ ಮುಸ್ಲಿಮರಿಗಾಗಿ ಏನೂ ಮಾಡಿಲ್ಲ. ಎಲ್ಲರೂ ಮುಸ್ಲಿಮರನ್ನು ಉಪಯೋಗಿಸಿಕೊಂಡು ಮೇಲೆ ಬಂದರು ಅಷ್ಟೇ. ಆದರೆ ಜೆಡಿಎಸ್‌ ಮಾತ್ರ ದೇವೇಗೌಡರ ನೇತೃತ್ವದಲ್ಲಿ ಮೊದಲನೇ ಸಲ ಮುಸ್ಲಿಮರ ಪರವಾಗಿ ಪ್ರಣಾಳಿಕೆಯಲ್ಲಿ ಧ್ವನಿ ಎತ್ತಿತ್ತು. ಅಂಥ ಜಾತ್ಯತೀತ ಪಕ್ಷ ಅದು. ಅದಕ್ಕೇ ಮುಸ್ಲಿಮರು ಕಾಂಗ್ರೆಸ್‌ನ ನಂಬಬಾರದು’ ಎಂದು ಹೇಳಿದ್ದರು. ಆದರೆ ಈಗ ಜಮೀರ್‌ ಅಹ್ಮದ್‌ ಅವರೇ ಈಗ ಕಾಂಗ್ರೆಸ್‌ ಸೇರಿದ್ದಾರೆಂದರೆ, ನಿಜವಾಗಿಯೂ ಇವರಿಗೆ ಮುಸ್ಲಿಮರ ಮೇಲೆ ಪ್ರೀತಿ ಇದೆಯಾ? ಕಾಳಜಿ ಇದೆಯಾ? ಇದನ್ನು ಪ್ರಶ್ನೆ ಮಾಡುವಂಥ ಪ್ರಜ್ಞಾವಂತ ಮುಸ್ಲಿಂ ಚಾಮರಾಜಪೇಟೆಯಲ್ಲಿ ಇದ್ದಾರಾ? ಕಾಂಗ್ರೆಸ್‌ ಮುಸ್ಲಿಮರನ್ನು ಉಪಯೋಗಿಸಿಕೊಂಡು ಮೇಲೆ ಬರುತ್ತದೆ ಎಂದಮೇಲೆ ಅದೇ ಪಕ್ಷಕ್ಕೆ ಸೇರಿದ ಜಮೀರ್‌ ಅಹ್ಮದ್‌ ಸಹ ತಾನು ಮೇಲೆ ಬರುವುದಕ್ಕೇ ಮುಸ್ಲಿಮರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದೇ ಇದರ ಅರ್ಥವಲ್ಲವೇ?
ಸರಿಯಾಗಿ ಮಾತನಾಡುವುದಕ್ಕೆ ಬರುವುದಿಲ್ಲ, ಹಿಂದೂಗಳ ಬಗ್ಗೆ ಕಾಳಜಿಯಿಲ್ಲ, ಮುಸ್ಲಿಮರಿಗೇ ತನ್ನನ್ನು ತಾನು ಬರೆದುಕೊಟ್ಟುಕೊಂಡಿದ್ದೇನೆ ಎಂಬಂತೆ ಆಡುವ ರಾಜಕಾರಣಿಯೊಬ್ಬ ಅದ್ಯಾವ ಕೋನದಿಂದ ಎಲ್ಲರ ಶಾಸಕ ಆಗುವುದಕ್ಕೆ ಸಾಧ್ಯ? ಹೆಚ್ಚೆಂದರೆ ಒಂದು ಮಸೀದಿಯ ಮೌಲ್ವಿಆಗಬಹುದು. ಸರಿಯಾಗಿ ನೋಡಿದರೆ ಅದಕ್ಕೂ ಲಾಯಕ್ಕಿಲ್ಲ. ಏಕೆಂದರೆ ಯಾವ ಮೌಲ್ವಿಯೂ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಮಾತಾಡುವುದಿಲ್ಲ.
ಜಮೀರ್‌ ಅಹ್ಮದ್‌ ಬೆಂಬಲಿಗರನ್ನು ನೋಡಿದರೆ ನಮ್ಮ ಸಮಾಜದಲ್ಲಿ ಇಂಥವರೂ ಇದ್ದಾರಾ ಎಂದು ಹೇಸಿಗೆಯಾಗುತ್ತದೆ. ಜಮೀರ್‌ ಅಹ್ಮದ್‌ ಹಿಂದೂಗಳ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕೆ ಅವರ ವಿರುದ್ಧ ಯಾರೋ ಒಬ್ಬ ವ್ಯಕ್ತಿ ಜಮೀರ್‌ರನ್ನು ಬಯ್ದು ವಿಡಿಯೊ ಮಾಡಿದ. ಅದಕ್ಕೆ ಒಂದು ಗುಡ್ಡೆ ಮುಸ್ಲಿಮರು ವಿಡಿಯೊ ಹಾಕಿ, ‘ಏಯ್‌, ಚಾಮರಾಜಪೇಟೆಗೆ ಬಾ, ನಿನ್ನನ್ನ ಮೇಲಿಂದ ಕೆಳವರೆಗೂ ಲಾಂಗ್‌ನಲ್ಲಿ ಕೊಯ್ದುಬಿಡುತ್ತೇನೆ.. ನಿನ್ನ ಕತ್ತನ್ನು ಕೊಯ್ಯುತ್ತೇನೆ.’ ಎಂಬ ಬಯ್ಗುಳದಲ್ಲಿ ಅಮ್ಮ, ಅಕ್ಕ, ಹೆಂಡತಿ ಎಲ್ಲರನ್ನೂ ಎಳೆದು ತಂದು ತೀರಾ ಕೊಳಕು ಭಾಷೆಯಲ್ಲಿ ಸಂಸ್ಕಾರವೇ ಇಲ್ಲದೇ ಬೆಳೆದವರ ಹಾಗೆ ಮಾತನಾಡುತ್ತಿದ್ದಾರೆ. ಜಮೀರ್‌ ಅಧಿಕಾರಕ್ಕೆ ಬಂದರೆ ನಾವು ಹಿಂದೂಗಳು ಚಾಮರಾಜಪೇಟೆಯಲ್ಲಿ ಓಡಾಡುವುದಕ್ಕಾಗುತ್ತದೆಯೇ? ಮೊದಲೆಲ್ಲ ಕಾಡಿನಲ್ಲಿ ರಾತ್ರಿ ಪ್ರಯಾಣ ಮಾಡುತ್ತಿದ್ದಾಗ ರಾಕ್ಷಸರು ಅಡ್ಡಗಟ್ಟಿ ಕೊಂದುಬಿಡುತ್ತಿದ್ದರಂತೆ. ಹಾಗೆ ದಾರಿಯಲ್ಲಿ ಹೋಗುತ್ತಿರುವಾಗ ನಮ್ಮನ್ನು ಎಳೆದು ತಂದು ಮೇಲಿಂದ ಕೆಳಗಿನವರೆಗೂ ಕೊಯ್ದು ಫ್ಲೈಓವರ್‌ ಕೆಳಗಿನ ಯಾವುದೋ ಮಟನ್‌ ಶಾಪ್‌ನಲ್ಲಿ ಕುರಿಯ ಪಕ್ಕ ಉಲ್ಟಾ ನೇತುಹಾಕಿದರೆ ಏನು ಮಾಡೋದು?
ಒಮ್ಮೆ ಚಾಮರಾಜಪೇಟೆಯಲ್ಲಿ ಜಮೀರ್‌ ಗೆದ್ದೇ ಬಿಟ್ಟರು ಎಂದುಕೊಳ್ಳೋಣ. ಆಗ ನಮ್ಮ ಶಾಸಕರು ವಿಧಾನ ಸೌಧದ ಬಾಗಿಲನ್ನೇ ಮುರಿಯುತ್ತಾರೆ, ಚಪ್ಲೀಲಿ ಹೊಡೆಯಬೇಕು ಎಂದು ಹೇಳುತ್ತಾರೆ ಎಂದು ಹೇಳಿಕೊಳ್ಳುವುದು ನಮಗೆ ಹೆಮ್ಮೆಯ ಸಂಕೇತವೋ? ಅವಮಾನದ ಸಂಕೇತವೋ? ಹಲ್ಲು ಕಚ್ಚಿಕೊಂಡು ಮಾತನಾಡುವುದನ್ನು ಬಿಟ್ಟು ಒಂದೇ ಒಂದು ದಿನವಾದರೂ ಅಭಿವೃದ್ಧಿಯ ಬಗ್ಗೆ ಮಾತನಾಡುವ ಜಮೀರ್‌ ವಿಡಿಯೊ ನಾವು ನೋಡಿದ್ದೇವಾ?
ಅಷ್ಟಕ್ಕೂ ಜಮೀರ್‌ಗೆ ಚಾಮರಾಜಪೇಟೆಯ ಮಹತ್ವವಾದರೂ ಗೊತ್ತಿದೆಯಾ? ಕರ್ನಾಟಕದ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಮಂಗಳೂರು ಹೇಗೋ, ಪುತ್ತೂರು ಹೇಗೋ ಹುಬ್ಬಳ್ಳಿ-ಧಾರವಾಡಗಳು ಹೇಗೋ ಬೆಂಗಳೂರಿಗೆ ಚಾಮರಾಜಪೇಟೆ ಮತ್ತು ಪಕ್ಕದ ಬಸವನಗುಡಿ ಹಾಗೆ. ಇಲ್ಲಿನ ಗಲ್ಲಿ ಗಲ್ಲಿಗಳಲ್ಲೂ ಕನ್ನಡ ತಾಯಿಯ ಪದಚಿಹ್ನೆಗಳಿವೆ. ಸಾಮರಸ್ಯಕ್ಕೆ ಶ್ರಮಿಸಿದವರ ಕುರುಹುಗಳಿವೆ. ಸಾಹಿತ್ಯ ಸೃಷ್ಟಿಗೆ ಪ್ರೇರಣೆ ನೀಡಿದ ಅಸಂಖ್ಯ ಉದಾಹರಣೆಗಳಿವೆ. ಅಂಥಾ ಚಾಮರಾಜಪೇಟೆ ಹಲಾಲ್‌ ಕಟ್‌ ಆಗಿ ಮಟನ್‌ ಶಾಪಿನಲ್ಲಿ ಉಲ್ಟಾ ನೇತಾಡುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.
ಹಾಗಾಗಿ, ಚಾಮರಾಜಪೇಟೆ ಹಾಗೇ ಇರಬೇಕೋ ಪಾಕಿಸ್ತಾನ ಮಾಡಬೇಕೋ ಅದು ಜನರೇ ನಿರ್ಧರಿಸಬೇಕಿದೆ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya