ದೇವರ ನಾಡಿನಲ್ಲಿ ದಾನವರು!

ಕೇರಳದಲ್ಲಿ ನೆಮ್ಮದಿಯ ನಿಟ್ಟುಸಿರುವ ಬಿಡುವವರು ಕೇವಲ ಪ್ರಕಾಶ್‌ ರೈ ಮತ್ತು ಕೆಂಪು ಬಾವುಟದವರು ಮಾತ್ರ. ದೇವರ ನಾಡಲ್ಲಿ ದಾನವರ ವನವಾಸಿ ಮಧು, ಸುಗತನ್‌ ಪ್ರಾಣ ಕಳೆದುಕೊಂಡಾಗಲೂ ಒಂದು ಮಾತಾಡದಿರುವುದಕ್ಕೆ ಕಾರಣ, ಷರಿಯಾ ಕಾನೂನಾ? ಅಥವಾ ಷರಿಯಾ ಶಾಂತಿದೂತರ ಅಟ್ಟಹಾಸವಾ?

ಒಂದು ಕಥೆ ನೆನಪಾಗುತ್ತಿದೆ: ಕೇರಳ ಬಿಟ್ಟು ಪಕ್ಕದ ರಾಜ್ಯಕ್ಕೆ ವಲಸೆ ಹೊರಟಿರುವ ಕೇರಳಿಗ ಮತ್ತು ಅದೇ ಊರಿನಿಂದ ಮತ್ತೊಂದು ರಾಜ್ಯ ನೋಡಲು ಹೋಗುತ್ತಿರುವ ವಿದೇಶಿ. ಇವರಿಬ್ಬರೂ ಒಂದೇ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆ ಕೇರಳಿಗ ಕಿಟಕಿಯಿಂದ ಕಾಣುವ ಒಂದೊಂದು ಜಾಗವನ್ನೂ ವಿದೇಶಿಗನಿಗೆ ತೋರಿಸುತ್ತಾ, ಅಗೋ, ಇದು ನೋಡಿ, ಎಷ್ಟು ಸುಂದರವಾಗಿದೆ. ಅದೆಷ್ಟು ಚೆನ್ನಾಗಿದೆ, ಇದು ನೂರಾರು ವರ್ಷ ಹಳೇಯ ದೇವಸ್ಥಾನ ಎಂದು ಹೇಳುತ್ತಾ, ಕೇರಳ ಯಾಕೆ ಭೂಮಿಯ ಸ್ವರ್ಗ ಮತ್ತು ಕೇರಳ ಹೇಗೆ ದೇವರ ನಾಡು ಎಂಬುದನ್ನೆಲ್ಲ ಬಹಳ ಟೈಂ ಇದ್ದಿದ್ದರಿಂದ ಸವಿಸ್ತಾರವಾಗಿ ವಿವರಿಸುತ್ತಾ ಬಂದ. ಈ ವಿದೇಶಿಗನೂ ಕೇಳುವಷ್ಟು ಕೇಳಿದ. ಇಳಿಯುವ ಹೊತ್ತು ಬಂದಾಗ ತುಂಬ ಗೊಂದಲದಿಂದ ಒಂದು ಪ್ರಶ್ನೆ ಕೇಳಿಯೇಬಿಟ್ಟ: ನನಗೆ ಬಹಳ ಹೊತ್ತಿನಿಂದ ಕೇಳಬೇಕಿನಿಸಿದೆ. ಇಷ್ಟೆಲ್ಲ, ಕೇರಳದ ಬಗ್ಗೆ ತಿಳಿದುಕೊಂಡಿರುವ, ಹೆಮ್ಮೆ ಇಟ್ಟುಕೊಂಡಿರುವ ನೀನು ಯಾಕಾಗಿ ಈ ಊರು ಬಿಟ್ಟು ಬೇರೆ ರಾಜ್ಯಕ್ಕೇಕೆ ವಲಸೆ ಹೊರಟಿರುವೆ?
ಅದಕ್ಕೆ ಕೇರಳಿಗ ಹೇಳಿದ: ಏನ್‌ ಮಾಡೋದು ಸಾರ್‌.. ಇದು ದೇವರ ನಾಡು ನಿಜ. ಆದರೆ ಇಲ್ಲಿನ ಜನ ದೆವ್ವದ ಕಡೆಯವರು.
ಅಂದೇ ಈ ಕಥೆ ಹುಟ್ಟಿಕೊಂಡಿತ್ತೆಂದರೆ, ಆಗಲೇ ಅದೆಷ್ಟರ ಮಟ್ಟಿಗೆ ಕ್ರೌರ್ಯವಿತ್ತು ಎಂಬುದನ್ನು ನಾವು ಊಹಿಸಿಕೊಳ್ಳಬಹುದು. ಆದರೆ ನಮ್ಮ ಪ್ರಕಾಶ್‌ ರೈ ಹುಟ್ಟಿಗಿಂತಲೂ ಮುಂಚೆ ಈ ಕಥೆ ಬಂದಿದ್ದರಿಂದ ಬಹುಶಃ ಅವರಿಗೆ ಗೊತ್ತಿರಲಿಕ್ಕಿಲ್ಲ. ಗೊತ್ತಿದ್ದರೆ ಅವರು ಅವತ್ತು ಅಂಥ ಮಾತಾಡುತ್ತಿರಲಿಲ್ಲ. 2017ರ ಡಿಸೆಂಬರ್‌ 8ರಂದು ಕೇರಳದಲ್ಲಿ ಎದೆಯನ್ನೆಲ್ಲ ನೆಟ್ಟಗೆ ಮಾಡಿಕೊಂಡು ಸೇನಾನಿಯ ಹಾಗೆ, ನಾನು ಕೇರಳದಲ್ಲಿ ಭಯವಿಲ್ಲದೇ ಉಸಿರಾಡಬಹುದು. ಇಲ್ಲಿ ಯಾವ ಮಾತಿಗೂ ಸೆನ್ಸರ್‌ ಇಲ್ಲ. ನಮ್ಮನ್ನು ಇಲ್ಲಿ ಯಾರೂ ಸೈಲೆಂಟ್‌ ಮಾಡುವುದಿಲ್ಲ ಎಂದಿದ್ದರು.

ಪ್ರಕಾಶ್‌ ರೈ ಅವರೇ ನಿಮ್ಮ ಮಾತನ್ನು ಸ್ವತಃ ನಿಮ್ಮ ಮನೆಯವರೇ ನಂಬುತ್ತಾರೋ ಇಲ್ಲವೋ ಗೊತ್ತಿಲ್ಲ. ತಮ್ಮ ಮಾತು ಅವಲಂಭಿಸಿರುವುದು ತಮ್ಮ ಫೌಂಡೇಷನ್‌ಗೆ ಯಾರು, ಎಷ್ಟು ಹಣ ಕೊಡುತ್ತಾರೆ ಎಂಬುದರ ಮೇಲೆ ಎಂಬುದು ಈಗಾಗಲೇ ನೀವೇ ಬಯಲು ಮಾಡಿಕೊಂಡಿದ್ದೀರಿ. ನಮ್ಮನ್ನು ಇಲ್ಲಿ ಯಾರೂ ಸೈಲೆಂಟ್‌ ಮಾಡುವುದಿಲ್ಲ ಎಂದ ಬೆನ್ನಲ್ಲೇ ಎಷ್ಟು ಜನರನ್ನು ಶಾಶ್ವತವಾಗಿ ಸೈಲೆಂಟ್‌ ಮಾಡಲಾಗಿದೆ ಎಂಬುದನ್ನು ಹೇಳುತ್ತೇನೆ. ನಿಮಗೆ ತಾಕತ್ತಿದ್ದರೆ ಅದನ್ನು ವಿರೋಧಿಸಿ.
ಇತ್ತೀಚೆಗೆ ಆದಿವಾಸಿ ಮಧು ಎಂಬುವವನನ್ನು ಕೇರಳದಲ್ಲಿ ಕಟ್ಟಿ ಹಾಕಿ ಕಮ್ಯುನಿಷ್ಟ ಮುಸ್ಲಿಮರು ಹೊಡೆದು ಕೊಂದರು. ಆತ ಏನು ಕಾಮುಕನಲ್ಲ ಅಥವಾ ದರೋಡೆ ಮಾಡಿಲ್ಲ, ಲಕ್ಷ ಲಕ್ಷ ಚಿನ್ನ ಕದ್ದಿಲ್ಲ. ಆತ ಮಾಡಿದ ಒಂದೇ ಒಂದು ತಪ್ಪೆಂದರೆ ಹೊಟ್ಟೆ ಹಸಿವೆಂದು ಅಕ್ಕಿ ಕದ್ದಿದ್ದು. ಮುಸ್ಲಿಮರ ಈ ಹತ್ಯೆಯನ್ನು ಒಬ್ಬನೇ ಒಬ್ಬ ಖಂಡಿಸಿಲ್ಲ. ಪ್ರಕಾಶ್‌ ರೈ ಪ್ರಪಂಚಕ್ಕಂತೂ ಇದೆಲ್ಲ ಗೊತ್ತೇ ಇಲ್ಲ. ಫೌಂಡೇಷನ್‌ ಹಣಕ್ಕಾಗಿ ಜೋಳಿಗೆ ಹಿಡಿದು ಓಡಾಡುವ ಪ್ರಕಾಶ್‌ ಬಗ್ಗೆ ನಾವು ಮಾತಾಡುವುದು ಬೇಡ ಬಿಡಿ. ಒಡಿಶಾದಲ್ಲಿ ಜಿಲ್ಲೆಯೊಂದರಲ್ಲಿ ದಾನಾ ಮಾಝಿ ತನ್ನ ಹೆಂಡತಿಯ ಶರೀರವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದನ್ನು ದೇಶವೇ ಇದಕ್ಕೆ ತಲೆ ತಗ್ಗಿಸಬೇಕು ಎಂಬಂತೆ ಎದೆ ಬಡಿದುಕೊಂಡರು ತಾನೇ? ಈಗ ಅನ್ನಕ್ಕಾಗಿ ಕಳ್ಳತನ ಮಾಡಿ ಕೊಲೆಯಾದವನ ಬಗ್ಗೆ ಬಡಿದುಕೊಳ್ಳದೇ ಬೆರಳಿಟ್ಟುಕೊಂಡು ಕುಳಿತಿರುವುದೇಕೆ? ಷರಿಯಾ ಭಯವೇ?

ಹೌದು, ಮಧುನನ್ನು ಕೊಂದದ್ದು ಷರಿಯಾ ಕಾನೂನಿನ ಪ್ರಕಾರ. ಯಾರು ಕಳ್ಳತನ ಮಾಡುತ್ತಾರೋ ಅವರನ್ನು ಹೊಡೆದು ಕೊಲ್ಲಬೇಕು ಎಂದು ಷರಿಯಾದಲ್ಲಿದೆ. ಅದರಂತೆ ಆತನನ್ನು ಕೊಂದಿದ್ದಾರೆ. ಇದಕ್ಕಿಂತ ಕ್ರೌರ್ಯವೇನೆಂದರೆ ಮಧುನನ್ನು ಸಾಯಿಸುವ ಮುನ್ನ ಅವನ ಜೊತೆಗೆ ಸೆಲಿಧಿ ಬೇರೆ ಕ್ಲಿಕ್ಕಿಸಿಕೊಂಡಿದ್ದಾರೆ. ಅರ್ಥಾತ್‌ ಅವನ ಸಾವು ಬದುಕು ಸಂಪೂರ್ಣವಾಗಿ ಈ ಷರಿಯಾ ಬೆಂಬಲಿಗರ ಕೈಯಲ್ಲೇ ಇತ್ತು. ಅಸಲಿಗೆ ಆದಿವಾಸಿ ಮಧು ಬಿಕಾರಿಯಲ್ಲಿ. ಅವನಿಗೂ ಒಂದು ಜಮೀನು ಅಂತ ಇತ್ತು. ಅವನಿರುವ ಜಾಗದಲ್ಲಿ ಸಣ್ಣ ಪುಟ್ಟ ಬೆಳೆ, ಮನೆ ಇತ್ತು. ಆದರೆ ಅ ಜಾಗದಲ್ಲಿ ಕ್ರಿಶ್ಚಿಯನ್‌ ಮಿಷನರಿಗಳ ಹಾವಳಿ ಹೆಚ್ಚಾಗಿದೆ. ಇವನ ಜಾಗದಲ್ಲಿ ಅವರು ಬೆಳೆ ಬೆಳೆಯುತ್ತಿದ್ದಾರೆ. ಮಧುನೊಬ್ಬನದ್ದೇ ಅಲ್ಲದೇ, ಅಲ್ಲಿನ ಸುಮಾರು ಪ್ರದೇಶಗಳಲ್ಲಿ ಮಿಷನರಿಗಳೇ ಬೀಡು ಬಿಟ್ಟು, ಆದಿವಾಸಿಗಳ ಜಮೀನನ್ನೆಲ್ಲ ಜೀಸಸ್‌ ಹೆಸರಲ್ಲಿ ಲೂಟಿ ಮಾಡಿ ಆದಿವಾಸಿಗಳನ್ನೆ ಜೀತದಾಳಾಗಿ ಇಟ್ಟುಕೊಂಡಿದ್ದಾರೆ. ಇವರು ನಿತ್ಯ ಆದಿವಾಸಿ ಮಹಿಳೆಯರನ್ನು ಹೀಲಿಂಗ್‌ ಹೆಸರಿನಲ್ಲಿ ಹಂಚಿ ತಿನ್ನುತ್ತಿದ್ದಾರೆ. ಈಗ ಇವನ ಸಾವಾದ ಮೇಲೆ ಮಧುನನ್ನು ಜಿಸಸ್‌ಗೆ ಹೋಲಿಸಿ, ಜೀಸಸ್‌ನಂತೆಯೇ ಮಧು ಸತ್ತಿದ್ದಾನೆ ಎಂದು ಅದರಿಂದಲೂ ಒಂದಷ್ಟು ಮತಾಂತರ ಮಾಡುತ್ತಿದ್ದಾರೆ. ಎಷ್ಟು ರಣಹದ್ದುಗಳು ಪ್ರಕಾಶ್‌ ರೈ ಅವರೇ? ಇವೆಲ್ಲ ಒಂದೂ ಕಾಣಿಸಲಿಲ್ಲವಾ? ಆಸ್ತಿ ಕಳೆದುಕೊಂಡ ಮಧು ಹೊಟ್ಟೆ ಹಸಿವಿಗಾಗಿ ಒಂದಷ್ಟು ಅಕ್ಕಿ ಕದ್ದಿದ್ದಾನೆ. ಅಷ್ಟಕ್ಕೇ ಹಿಡಿದು ಕೊಂದರಲ್ಲಾ ದೇವರ ನಾಡಿನ ದೆವ್ವಗಳು, ಥೂ! ಇಲ್ಲಿ ಷರಿಯಾ ಜಾರಿಯಾಗಬೇಕೆಂಬುದು ಮುಸ್ಲಿಮರ ಒತ್ತಾಯ. ಇದನ್ನೇ ರಾಜಕಾರಣಿಗಳು ಕಳೆದ ಚುನಾವಣೆಯಲ್ಲಿ ‘ಎಲ್ಲಾಮ್‌ ಷರಿಯಾ ಆಕ್ಕುಂ’(ಎಲ್ಲಾ ಷರಿಯಾ ಆಗುತ್ತದೆ) ಎಂದು ಸೂಚ್ಯವಾಗಿ ಹೇಳುತ್ತಿದ್ದುದ್ದು. ನಾವು ಹೀಗೆ ಹೇಳಿದ್ದು ಮುಸ್ಲಿಮರನ್ನು ಬಿಟ್ಟರೆ ಬೇರೆ ಯಾರಿಗೂ ತಿಳಿಯುವುದಿಲ್ಲ ಎಂದು ಅಲ್ಲಿನ ರಾಜಕಾರಣಿಗಳು ಕುಹಕವಾಡಿದ್ದರು ಸಹ. ಅದೇ ವಾಕ್ಯವನ್ನು ಮಂಗ್ಯಾನ ಹಾಗೆ ‘ಎಲ್ಲಾ ಶರಿ ಆಕ್ಕುಂ’(ಎಲ್ಲವೂ ಸರಿಯಾಗುತ್ತದೆ) ಎಂದು ಅರ್ಥೈಸಿಕೊಂಡ ಹಿಂದೂಗಳು ವೋಟು ಒತ್ತಿದರು. ಈಗ ದಿನನಿತ್ಯ ಷರಿಯಾ ಹೇಗೆ ಕೇರಳವನ್ನು ಆವರಿಸುತ್ತಿರುವುದು ಇವರಾರ‍ಯರಿಗೂ ತಿಳಿಯುತ್ತಲೇ ಇಲ್ಲ. ಅದಕ್ಕೆ ಈ ಆದಿವಾಸಿ ಮಧು ಎಷ್ಟನೇ ಬಲಿಯೋ ಎಂದು ಶಾಂತಿಧೂತರ ಆರಾಧ್ಯದೈವನೇ ಉತ್ತರಿಸಬೇಕು. ಪ್ರಕಾಶ್‌ ರೈ ಅವರೇ, ಮಧು ಬಳಿ ನಿಮ್ಮ ಫೌಂಡೇಷನ್‌ಗೆ ಮೊಗೆದು ಮೊಗೆದು ಕೊಡುವುದಕ್ಕೆ ಹಣ ಇರಲಿಲ್ಲ. ಅದಕ್ಕೆ ಇಂಥ ಅನಾಥ ಸಾವು ಸತ್ತ. ಸೆಲಿಧಿ ತೆಗೆದುಕೊಂಡ ಮಾನಗೆಟ್ಟವನಿಗೆ ‘ನಿನ್ನಲ್ಲಿ ಮನುಷ್ಯತ್ವ ಸತ್ತು ಬಿದ್ದಿದೆಯಾ ಬಡವ?’ ಎಂದು ಕೇಳಿದ್ದರೆ ನಿಮ್ಮ ಪ್ರಾಮಾಣಿಕರೆಯನ್ನು ಒಪ್ಪಬಹುದಿತ್ತು. ನಟ ಪ್ರಕಾಶ್‌ ರೈ ಕೇಳಿಲ್ಲ. ಯಾಕೆಂದರೆ ನಟಿಸುವುದಷ್ಟೇ ನಟನ ಕೆಲಸ. ಒಂದು ಸಾವನ್ನು ವಿರೋಧಿಸದ ವ್ಯಕ್ತಿ, ಫೌಂಡೇಷನ್‌ ಹಣದಿಂದ ಊರನ್ನು ಉದ್ಧಾರ ಮಾಡುತ್ತಾರೆಂಬುದನ್ನು, ಇವರು ದತ್ತು ತೆಗೆದುಕೊಳ್ಳುವ ಊರಿನ ಒಂದು ನಾಯಿಯಾದರೂ ನಂಬುತ್ತದೆಯಾ?

ಮತ್ತೊಂದು ಪ್ರಕರಣ: ಫೆಬ್ರವರಿ 23ಕ್ಕೆ 65 ವರ್ಷದ ಸುಗತನ್‌ ಎಂಬ ಅನಿವಾಸಿ ಭಾರತೀಯ ನೇಣಿಗೆ ಶರಣಾಗುತಾರೆ. ಗಲ್‌ಧಿನಲ್ಲಿ ಗಾಡಿ ಮೆಕಾನಿಕ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರು, ತಮ್ಮ ಜೀವನವನ್ನು ತಾವು ಜನಿಸಿದ ದೇವರ ನಾಡಲ್ಲೇ ಕಳೆಯುವುದಕ್ಕೆ ಎಲ್ಲ ಬಿಟ್ಟು ಬಂದರು. ಬಹಳ ಉಳ್ಳವರೇನಲ್ಲ. ತಮ್ಮ ಜಮೀನಿನಲ್ಲಿ ಮೆಕಾನಿಕ್‌ ಅಂಗಡಿ ಹಾಕುವುದಕ್ಕೆ ಶೆಡ್‌ ಹಾಕಿದರಷ್ಟೇ. ಅಲ್ಲಿಗೆ ಬಂದ ಕಮ್ಮಿನಿಷ್ಟರು, ಮೂರು ಲಕ್ಷ ಕೊಟ್ಟರೆ ಮಾತ್ರ ಇಲ್ಲಿ ಅಂಗಡಿ ಶುರುವಾಗುತ್ತೆ ಎಂದು ಹೆದರಿಸಿದರು. ‘ನನ್ನ ಮೂಳೆ ಮಾಂಸ ಬಿಟ್ಟರೆ ನನ್ನ ಹತ್ರ ಒಂದು ಬಿಡಿಗಾಸೂ ಇಲ್ಲ. ಎಲ್ಲವನ್ನೂ ವರ್ಕ್‌ಶಾಪ್‌ಗೆ ಹಾಕಿದ್ದೀನಿ. ದಯವಿಟ್ಟು ಬಿಟ್ಟುಕೊಡಿ’ ಎಂದು ಬೇಡಿಕೊಂಡ. ರಕ್ತ ಹರಿಸುವ ಕಿವಿಗಳಿಗೆ ಇದು ಕೇಳಲಿಲ್ಲ. ಸುಗತನ್‌ ಜಮೀನಿನಲ್ಲಿ ಕೆಂಪು ಧ್ವಜ ನೆಟ್ಟು, ಕೆಲಸ ಶುರು ಮಾಡಿದರೆ ಕೊಲ್ಲುತ್ತೇವೆಂದು ಲಾಲ್‌ ಸಲಾಮ್‌ ಹಾಕಿ ಹೋದರು. ದೇವರ ನಾಡಿನಲ್ಲಿ ಇದೇ ನೀತಿ. ಕೆಂಪು ಬಾವುಟ ತಂದು ನೆಲಕ್ಕೆ ಕುಕ್ಕಿದರು ಎಂದರೆ ಅದು ಅವರದ್ದೇ. ಕೆಲಸ ಮುಂದುವರಿಸಿದರೆ, ಕೆಂಪು ಬಾವುಟದ ಬುಡದಲ್ಲಿ ಕೆಂಪು ರಕ್ತ ಹರಿಯುತ್ತದೆ. ವಿಷಯ ತಿಳಿದಿದ್ದ ಸುಗತನ್‌, ದಿಕ್ಕೇ ತೋಚದೇ ಸಾವಿಗೆ ಶರಣಾದ.

ಹೆಣದ ಮುಂದೆ ಕಿತ್ತಾಡುವ ಕೇರಳದಲ್ಲಿ ನೆಮ್ಮದಿಯಿಂದ ಪ್ರಕಾಶ್‌ ರೈ ಮತ್ತು ಅವರ ಲಾಲ್‌ ಸಲಾಮ್‌ಗಳು ಮಾತ್ರ ಉಸಿರಾಡಬಹುದೇ ಹೊರತು ಮೈ ಮುರಿದು ದುಡಿಯುತ್ತಿರುವವರಲ್ಲ. ಬಿಡಿ, ಪ್ರಕಾಶ್‌ ರೈಗೆ ಮಹಮ್ಮದ್‌ ನಲಪಾಡ್‌ ಜೊತೆ ಎಣ್ಣೆ ಹೊಡೆಯುವುದಕ್ಕೇ ಪುರುಸೊತ್ತಿಲ್ಲ, ಇನ್ನು ಇಂಥ ಸಣ್ಣ ಪ್ರಕರಣಗಳಾದರೂ ಅವರಿಗೆ ತಿಳಿದಿರುವುದಿಲ್ಲ ಎಂದು ಭಾವಿಸೋಣ. ಆದರೆ ಇದೇ ಫೆಬ್ರವರಿಯಲ್ಲಿ ಸಿಪಿಎಂ ಮುಖಂಡ ತಂಬೀ ಎಂಬುವವನು ಭೂಮಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಗರ್ಭಿಣಿ ಮಹಿಳೆಯೊಬ್ಬರ ಮನೆಗೆ ಕುಡಿದು ಹೋಗಿ ಅವಳ ಹೊಟ್ಟೆಗೆ ಒದ್ದ ಪರಿಣಾಮ ಮಗು ಹೊಟ್ಟೆಯಲ್ಲೇ ಮೃತಪಟ್ಟು ಅಬಾರ್ಷನ್‌ ಮಾಡಿಸಬೇಕಾಗಿ ಬಂತು. ಆ ಮಹಿಳೆಯ ಧ್ವನಿಯನ್ನು ಕೇರಳದಲ್ಲಿ ಸೈಲೆಂಟ್‌ ಮಾಡಿದ್ದರಿಂದ ದೆಹಲಿಗೆ ಹೋಗಿ ಪ್ರತಿಭಟಿಸುವುದಕ್ಕೆ ಮುಂದಾಗಿದ್ದಾಳೆ. ಸಿಪಿಎಂ ಜೊತೆ ಅಪಾರ ನಂಟು, ಒಲವು ಹೊಂದಿರುವ ಪ್ರಕಾಶ್‌ ರೈಗೆ ಇದು ತಿಳಿದಿದೆಯೇ?

ಪ್ರಕಾಶ್‌ ರೈ ಡಿಸೆಂಬರ್‌ನಲ್ಲಿ ಭಾಷಣ ಮಾಡಿ ಹೋಗಿ ಮೂರೇ ತಿಂಗಳಿನಲ್ಲಿ ಆರ್‌ಎಸ್‌ಎಸ್‌, ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾಗಿದೆ. ನಿತ್ಯ ಅತ್ಯಾಚಾರ ನಡೆಯುತ್ತಿದೆ. ಹತ್ತು ಜನ ಸಿಡಿದೆದ್ದರೆ ನ್ಯೂಸ್‌ ಆಗುತ್ತೆ, ಇಲ್ಲವಾದರೆ ಕೆಂಪು ಧ್ವಜ ಹಾರುತ್ತದೆ. ಪ್ರಕಾಶ್‌ ರೈ ಅವರೇ ಪ್ರಶ್ನೆ ಕೇಳುವುದು ಗಂಡಸುತನ ಅಲ್ಲ, ಕೇಳಿದ ಪ್ರಶ್ನೆಗೆ ಉತ್ತರಿಸುವುದು ಗಂಡಸುತನ. ನಿಮಗದು ಆಗುವುದಿಲ್ಲ ಎಂದೇ ಮತ್ತೊಂದು ಆಫರ್‌ ನೀಡುತ್ತಿದ್ದೇನೆ, ತಾಕತ್ತಿದ್ದರೆ ಆದಿವಾಸಿ ಮಧು, ಸುಗತನ್‌ ಮತ್ತು ಗರ್ಭಿಣಿ ಮಹಿಳೆಯ ಪರವಾಗಿ ನಿಂತು ನಿಮ್ಮವರಿಗೇ ಒಂದು ಪ್ರಶ್ನೆ ಕೇಳಿಬಿಡಿ ನೋಡೋಣ!

Leave a Reply

Copyright©2021 Chiranjeevi Bhat All Rights Reserved.
Powered by Dhyeya