ಎಡಪಂಥೀಯರು ಈಗಾಗಲೇ ಹೋರಾಟದ ಹೆಸರಿನಲ್ಲಿ ನೆಲಕ್ಕೆ ಬಿದ್ದು ರಾಡಿ ಮಾಡಿಕೊಂಡು ಒದ್ದಾಡುತ್ತಿರುವ ಗೋ ಹತ್ಯೆ ಕಾನೂನಿನ ಬಗ್ಗೆ ಒಂದೇ ಒಂದು ಘಟನೆಯ ಮೂಲಕ ಹೇಳಿ ಬಿಡುತ್ತೇನೆ. ನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಮನೆಗೆ ಹಾಲು ಕೊಡುವುದು ಒಬ್ಬರೇ. ಪ್ರಭು ಅಂಕಲ್. ಇತ್ತೀಚೆಗೆ ಒಂದೆರಡು ದಿನ ಹಾಲು ಹಾಕಿರಲಿಲ್ಲ. ಮೂರನೇ ದಿನ ಬಂದು ಕಡಿಮೆ ಹಾಲು ಕೊಟ್ಟರು. ‘ಏನಾಯ್ತು ಅಂಕಲ್?’ ಎಂದು ಕೇಳಿದೆ. ಅದಕ್ಕೆ ಅವರು, ‘ಇಲ್ಲ ಚಿರು, ಬೆಂಗ್ಳೂರಲ್ಲಿ ದನಕ್ಕೆ ಎಷ್ಟು ಅಂತ ಮೇವು ಹಾಕಕ್ಕಾಗುತ್ತೆ ಹೇಳು? ಅದಕ್ಕೆ ದಿನಾ ಬಿಡೋ ಥರಾ ಮೇಯಕ್ಕೆ ಬಿಟ್ಟಿದ್ದೆ, ವಾಪಸ್ ಬರಲೇ ಇಲ್ಲ’ ಎಂದರು. ‘ಅರೇ ಎಲ್ ಹೋಗಿತ್ತು?’ ಎಂದು ಕೇಳಿದೆ. ಅದಕ್ಕವರು ‘ಯಾರೋ ಬೋ*ಮಕ್ಳು, ಲಾರಿಲಿ ಹಾಕ್ಕೊಂಡ್ ಹೋಗ್ಬಿಟ್ರು… ಇನ್ನೇನ್ ಕಡಿದು ತಿಂದಾಕಿರ್ತಾರೆ!’ ಎಂದರು.
‘ಕಾರ್ಪೊರೇಶನ್ ಅವ್ರು ಎತ್ತಾಕ್ಕೊಂಡ್ ಹೋಗಿರ್ಬೋದು ನೋಡಿ’ ಎಂದೆ… ಅದಕ್ಕವರು, ‘ಇಲ್ಲ, ಪಕ್ಕದ ರೋಡಲ್ಲೇ ಇತ್ತಂತೆ, ಲಾರೀಲಿ ಹಾಕ್ಕೊಂಡ್ ಹೋದ್ರಂತೆ… ಇಂಥದ್ ಇದೇ ಮೊದ್ಲೇನಲ್ಲ… ನಮ್ ಮನೆಯಿಂದನೇ ಕರುಗಳ್ನ ಎತ್ತಾಕ್ಕೊಂಡ್ ಹೋಗಿದಾರೆ’ ಎಂದರು. ಇದೊಂದೇ ಅಲ್ಲ, ದೇಶದಲ್ಲಿ ದಿನಕ್ಕೆ ಇಂಥ ನೂರಾರು ಗೋವುಗಳು ಕಳ್ಳತನವಾಗಿರುತ್ತವೆ. ಪ್ರಧಾನಿ ನರೇಂದ್ರ ಮೋದಿ ತಡೆಯಲು ಹೊರಟಿದ್ದು ಇದನ್ನೇ. ಇಷ್ಟನ್ನು ಮಾತ್ರ. ಆದರೆ ಎಲ್ಲೂ ಗೋ ಹತ್ಯೆಯನ್ನೇ ನಿಷೇಧಿಸಲಾಗಿದೆ ಎಂದು ಹೇಳಿಲ್ಲ. ಆದರೆ ಇದಕ್ಕೆ ನೂರಾರು ಬಣ್ಣ ಹಚ್ಚಿ, ನೆಮ್ಮದಿಯಿಂದ ತಮ್ಮ ಪಾಡಿಗೆ ತಾವು ಮೂರು ಹೊತ್ತು ಗಂಜಿ ಉಪ್ಪಿನಕಾಯಿ ತಿನ್ನುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬಡವರನ್ನೆಲ್ಲ ಎಳೆದು ತಂದು, ‘ನೋಡಿ ಬಡವರೆಲ್ಲ ಈಗ ಗೋ ಮಾಂಸ ಇಲ್ಲದೇ ಉಪವಾಸ ಬಿದ್ದಿದ್ದಾರೆ’ ಎಂದು ಎದೆ ಬಡಿದುಕೊಂಡಿದ್ದು ಎಡಪಂಥೀಯರು ಹಾಗೂ ಬುದ್ಧಿಜೀವಿಗಳು.
‘ಗೋ ಮಾಂಸ ಬೇಕಾದರೆ ತಿಂದುಕೊಳ್ಳಿ ಮಾರಾಯ್ರೇ, ಆದರೆ ನಮ್ಮ ಕರುಗಳನ್ನು ಕದಿಯುವುದೇಕೆ?’ ಎಂದು ಕೇಳಿದರೆ ಅದು ಹೇಗೆ ಬಡವರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ? ನಮ್ಮ ದನ ಕರುಗಳನ್ನು ರಕ್ಷಿಸಿಕೊಳ್ಳಲು ರಹೀಮ, ಹಫೀಜ, ಮಹಮ್ಮದನಿಗೆ ತದಕಿದರೆ, ಅದು ಕೋಮುವಾದ ಹೇಗಾಗುತ್ತದೆ? ಕದಿಯುವುದಕ್ಕೆ ಬಂದವರನ್ನು ಗೌರವಿಸಿ ಸತ್ಕರಿಸಬೇಕೆ? ಈ ಲದ್ದಿಜೀವಿಗಳ ಅರ್ಥ ಇಷ್ಟೇ, ದನ ಕದಿಯುವುದನ್ನು, ನಮ್ಮ ಮುಂದೆಯೇ ಕತ್ತರಿಸುತ್ತಿರುವುದನ್ನು ನೋಡುತ್ತಾ ಕೂರುವುದು ಜಾತ್ಯತೀತ. ಅದನ್ನು ತಡೆದರೆ ಕೋಮುವಾದ.
ಸರಿ, ಈ ಪ್ರಚಂಡ ಲದ್ದಿಜೀವಿಗಳು ಹೇಳುವ ಹಾಗೆ ಆಲೋಚಿಸೋಣ. ಬಡವರು ಅಥವಾ ಕೆಳ ಮಧ್ಯಮವರ್ಗ ಕೊಳ್ಳುವುದು ಯಾವುದನ್ನು? ಅತಿ ಕಡಿಮೆ ಬೆಲೆಯಲ್ಲಿ ಅತ್ಯಂತ ಉತ್ತಮ ಗುಣಮಟ್ಟವಿರುವುದನ್ನು. ಆದರೆ, ಗೋಮಾಂಸದ ಬೆಲೆ 500ರು. ವರೆಗೂ ಇದೆ. ಸಾಮಾನ್ಯವಾಗಿ ಮೇಲ್ವರ್ಗದವರೇ ದಿನಕ್ಕೆ ಐನೂರು ಖರ್ಚು ಮಾಡುವುದು ಕಡಿಮೆ. ಹೀಗಿರುವಾಗ ಯಾವ ಊರಿನ ಬಡವ ದಿನಕ್ಕೆ 500 ರು. ಖರ್ಚು ಮಾಡುತ್ತಾನೆ? ಅಸಲಿ ವಿಷಯ ಇರುವುದು ಇಲ್ಲಲ್ಲ. ಬದಲಿಗೆ ದನಗಳನ್ನು ಕದ್ದೊಯ್ಯುತ್ತಿದ್ದುದ್ದರಿಂದ, ಕಸಾಯಿಖಾನೆಯವರು ಅಥವಾ ಮಾಂಸದಂಗಡಿಯವನು ಎಷ್ಟು ಬೆಲೆ ಹೇಳಿದರೂ ಅಷ್ಟಕ್ಕೆ ಕಳ್ಳರು ಮಾರಿ ಬರುತ್ತಿದ್ದರು. ಹೀಗಾಗಿ ಗೋ ಮಾಂಸ ಕಡಿಮೆ ಬೆಲೆಗೆ ಸಿಗುತ್ತಿತ್ತು. ಇನ್ನು ಚಿಕನ್, ಮಟನ್ ಬೆಲೆ ಜಾಸ್ತಿಯಾದಾಗ ಗೋ ಮಾಂಸವನ್ನು ಚಿಕನ್, ಮಟನ್ ಜತೆ ಸೇರಿಸಿ ಮಾರಿದ್ದೂ ಇದೆ.
ಇಷ್ಟೇ ಅಲ್ಲ, ಗೋವಿನ ಚರ್ಮದಿಂದ ಬೇರೆ ಬೇರೆ ವಸ್ತುಗಳನ್ನು ತಯಾರಿಸುವವರಿಗೆ, ಔಷಧ ಮಾಡುವವರಿಗೆಲ್ಲರಿಗೂ ಕಡಿಮೆ ಬೆಲೆಯಲ್ಲಿ ಕಚ್ಚಾ ವಸ್ತುಗಳು ಸಿಗುತ್ತಿತ್ತು. ಈಗ ಅದಕ್ಕೆಲ್ಲ ಬ್ರೇಕ್ ಬಿದ್ದಿದೆ. ಸದಾ ಏನಾದರೊಂದು ಕ್ಯಾತೆ ತೆಗೆಯುತ್ತಾ ಬಾಯಿ ಬಡಿದುಕೊಳ್ಳುವ ಎಡಪಂಥೀಯರ ಬಳಿ ವ್ಯಾಪಾರಸ್ಥರೆಲ್ಲ ನಿವೇದಿಸಿಕೊಂಡಿದ್ದಾರೆ. ಅದಕ್ಕೆ ಇವರದ್ದೆಲ್ಲ ಅರಣ್ಯರೋದನ ಶುರುವಾಗಿದೆ. ಎಲ್ಲ ಬಿಡಿ ಸ್ವಾಮಿ, ದನ ಸಾಕುವವರಿಂದ ಕದ್ದು ಅವರ ಹೊಟ್ಟೆ ಮೇಲೆ ಹೊಡೆದು, ಯಾವ ಬಡವ ತಾನೆ ಊಟ ಮಾಡಲು ಇಷ್ಟ ಪಡುತ್ತಾನೆ? ಮೂರೂ ಬಿಟ್ಟು ಕಿತ್ತುಕೊಂಡು ತಿನ್ನಲು ಬಡವರೇನು ಎಡಪಂಥೀಯರೇ ಅಥವಾ ಬುದ್ಧಿಜೀವಿಗಳೇ?
ನೀವೇ ಆಲೋಚಿಸಿ, ಊಟ ಮಾಡುವುದು ಯಾವಾಗ? ಹಸಿವಾದಾಗ. ಆದರೆ ಎಡಪಂಥೀಯರು ಹಾಗಲ್ಲ. ಅವರು ತಿನ್ನುವುದು ತೀಟೆ ತೀರಿಸಿಕೊಳ್ಳುವುದಕ್ಕೇ ಎಂಬುದನ್ನು ಅವರೇ ಸಾಬೀತು ಮಾಡಿದ್ದಾರೆ. ದನದ ಮಾಂಸ ತಿನ್ನುವುದು ಜಾತ್ಯತೀತವಂತೆ. ಅದು ಹೇಗೆ ಎನ್ನುವುದು ತಿಳಿಯುತ್ತಿಲ್ಲ. ಸರಿ ಜಾತ್ಯತೀತವಾಗಿ ತಿನ್ನುವುದೆಂದರೆ ಏನು? ಯಾವ ಧರ್ಮದ ನಂಬಿಕೆಗಳಿಗೂ ತೊಂದರೆಯಾಗದಂತೆ ನೋಡಿಕೊಳ್ಳುವುದು. ಇಲ್ಲಿ ಗೋವನ್ನು ಕಡಿಯುವುದು ಹಿಂದೂಗಳಿಗೆ ನಿಷಿದ್ಧ ಎಂದು ಗೊತ್ತಿದ್ದರೂ, ಅದನ್ನು ಸಾರ್ವಜನಿಕವಾಗಿ ಕಡಿಯುತ್ತಾರೆ. ಆದರೆ ಆಗಲೇ ತಿನ್ನುವುದಿಲ್ಲವಂತೆ. ಏಕೆಂದರೆ ರಂಜಾನ್ ಉಪವಾಸದಲ್ಲಿರುವ ಮುಸ್ಲಿಮರ ಉಪವಾಸಕ್ಕೆ, ಭಾವನೆಗೆ ಧಕ್ಕೆಯಾಗಬಾರದು ಎಂದು ಚಂದ್ರನನ್ನು ನೋಡುತ್ತಾ ದನದ ಮಾಂಸ ತಿನ್ನುತ್ತಾರಂತೆ. ಹೀಗೆಂದು ಕೇರಳದಲ್ಲಿ ನಡೆದ ಬೀಫ್ ಫೆಸ್ಟಿವಲ್ನಲ್ಲಿ ಘೋಷಿಸಲಾಗಿತ್ತು.
ಇನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದ ಹೋರಾಟದಲ್ಲೂ ರಂಜಾನ್ ಉಪವಾಸದ ನಂತರ ದನದ ಮಾಂಸ ತಿನ್ನುತ್ತೇವೆ ಎಂದಿದ್ದರು. ಅರೇ? ಇದು ಹೇಗೆ ಸಾಧ್ಯ? ಹೊಟ್ಟೆಗೆ ದನದ ಮಾಂಸ ತಿನ್ನುವುದು ಹಸಿವಿಗೋ ಅಥವಾ ಬಹುಸಂಖ್ಯಾತ ಹಿಂದೂಗಳನ್ನು ರೊಚ್ಚಿಗೆಬ್ಬಿಸುವುದಕ್ಕಾಗಿಯೋ? ರಂಜಾನ್ ಉಪವಾಸ ಮುಗಿಯುವುದಕ್ಕಾಗಿ ಕಾಯುವುದು ಯಾವ ಸೀಮೆಯ ಜಾತ್ಯತೀತ? ಕೆಲವರು ಇನ್ನೂ ವಾದಿಸುತ್ತಾರೆ, ಯಾವಾಗ ತಿಂದರೇನು? ನಮಗೆ ರಂಜಾನ್ ಮುಗಿದಾಗಲೇ ಹಸಿವಾಗುತ್ತೆ ಏನ್ ಮಾಡೋದು ಅಂತ. ಅದಕ್ಕೂ ಉತ್ತರವಿದೆ. ಕೇರಳದಲ್ಲಿ ದನದ ಮಾಂಸ ಕಡಿದು ಬೀಫ್ ಫೆಸ್ಟಿವಲ್ ಮಾಡುವುದಕ್ಕೆ ಆಯ್ದುಕೊಂಡ ಜಾಗ ಕಣ್ಣೂರು. ಕಣ್ಣೂರೇ ಯಾಕೆ ಬೇಕಿತ್ತು? ಕಾರಣ ಸ್ಪಷ್ಟ: ಕಣ್ಣೂರಿನಲ್ಲಿ 60% ಹಿಂದೂಗಳೇ ಇರುವುದು. ಅಲ್ಲಿ ಎಲ್ಲ ಹಿಂದೂಗಳ ಮುಂದೆ ಮಾಂಸ ಕಡಿದು ರಾಕ್ಷಸರ ಹಾಗೆ ಬಾಯಲ್ಲಿ ರಕ್ತ ಸುರಿಸಿಕೊಂಡು ತಿನ್ನಬಹುದು ಎಂಬುದು ಇವರ ಆಲೋಚನೆ. ಇದಕ್ಕಿಂತ ಕ್ರೌರ್ಯ ಮತ್ತೊಂದು ಬೇಕೆ?
ನಾವು ಮಧ್ಯಾಹ್ನದ ಹೊತ್ತಿಗೆ ಯಾವುದಾದರೂ ಅಂಗಡಿಗೆ ಹೋದರೆ, ಆಗ ಅಂಗಡಿಯ ಮಾಲೀಕ/ಕೆಲಸಗಾರ ಊಟ ಮಾಡುತ್ತಿದ್ದರೆ, ತಕ್ಷಣ ತಟ್ಟೆಯನ್ನು ಮುಚ್ಚಿಡುತ್ತಾನೆ, ಸರಿಸಿ ಪಕ್ಕಕ್ಕಿಡುತ್ತಾನೆ. ಯಾವನೂ ಮುಖದ ಮುಂದೆ ಬಂದು ತಿನ್ನುವುದಿಲ್ಲ. ಹೀಗೆ ನಿಜವಾಗಿ ಗೋ ಮಾಂಸ ತಿನ್ನುವವನು ಅಥವಾ ಹಸಿವಾಗಿರುವವನು ಗೋಹತ್ಯೆಯ ವಿರುದ್ಧವಿರುವವನ ಮುಂದೆ ಬಂದು ಜಾತ್ಯತೀತದ ಬೋರ್ಡ್ ನೇತುಹಾಕಿಕೊಂಡು ತಿನ್ನುವುದಿಲ್ಲ. ಇವರ ಕ್ರೌರ್ಯಕ್ಕೆ ಇನ್ನೂ ಹಲವಾರು ಮುಖಗಳಿವೆ. ಕೇರಳದ ಬೀಫ್ ಫೆಸ್ಟಿವಲ್ನಲ್ಲಿ ದನದ ಮಾಂಸ ತಿಂದ ಶೈಲಿ ನೋಡಿದರೆ, ಇವರೇನು ಮನುಷ್ಯರೋ ರಾಕ್ಷಸರೋ ಎನ್ನುವಷ್ಟು ರಕ್ತ ಕುದಿಯತ್ತದೆ. ಸಹಜವಾಗಿ ಮನುಷ್ಯರೆಲ್ಲರೂ ಮಾಂಸವನ್ನು ಫ್ರೈ ಮಾಡಿ ತಿನ್ನುತ್ತಾರೆ. ಆದರೆ ಹೋರಾಟ ನಿರತ ಕಮ್ಯುನಿಸ್ಟ್ ಮತ್ತು ಎಡಪಂಥೀಯರು, ಟಿವಿ ಕ್ಯಾಮೆರಾಗಳ ಮುಂದೆ ಬಂದು ಹಸಿ ಮಾಂಸವನ್ನೇ ಕಚ್ಚಿ ಎಳೆಯುತ್ತಿದ್ದರು. ಇದರ ಉದ್ದೇಶವೇನು? ಈ ಆಡಂಬರ, ರಸ್ತೆ ಬದಿ ಹತ್ಯೆ ಮಾಡುವುದೆಲ್ಲವೂ ಹಿಂದೂಗಳನ್ನು ರೊಚ್ಚಿಗೆಬ್ಬಿಸಿ, ಇಲ್ಲೇನಿದ್ದರೂ ನಮ್ಮದೇ ಹವಾ ಎಂದು ಪ್ರಾಬಲ್ಯ ಮೆರೆಯುವ ಉದ್ದೇಶವಲ್ಲದೇ ಮತ್ತೇನು?
ಈ ‘ನನ್ನ ಆಹಾರ ನನ್ನ ಹಕ್ಕು’ ಎಂದು ಬೊಗಳುವ ಓರಾಟಗಾರರಿಗೆ ನಿಜವಾಗಿಯೂ ಅಷ್ಟು ಚರ್ಬಿ ಇದ್ದಿದ್ದೇ ಆದಲ್ಲಿ ಶಿವಾಜಿನಗರದಲ್ಲಿ ಹಂದಿ ಮಾಂಸವನ್ನು ಎಲ್ಲರಿಗೂ ಹಂಚಿ ತಿನ್ನಲಿ ನೋಡೋಣ? ಆಯ್ತು ಅಷ್ಟು ಧಮ್ ಇರದಿದ್ದರೆ, ಒಂದು ಅಂಗಡಿಯಲ್ಲಿ ‘ಹಂದಿ ಮಾಂಸ’ ಎಂದು ಬೋರ್ಡ್ ಹಾಕಿ ಮಾರಿ ಬಿಡಲಿ ನೋಡೋಣ? ಇಲ್ಲ, ತಾಕತ್ತಿಲ್ಲ. ಅಂಥ ಕೆಲಸವನ್ನೇನಾದರೂ ಅಪ್ಪಿ ತಪ್ಪಿ ಮಾಡಿದರೂ ರಸಲ್ ಮಾರ್ಕೆಟ್ನ ಅಂಗಡಿಯೊಂದರಲ್ಲಿ ತಾವೇ ಸುಲಿದ ಚರ್ಮಾವಸ್ಥೆಯಲ್ಲಿ ಉಲ್ಟಾ ನೇತಾಡುತ್ತಿರುತ್ತೇವೆ ಎಂಬುದು ಗೋ ಮಾಂಸ ಹೋರಾಟಗಾರರಿಗೆ ಚೆನ್ನಾಗಿ ಗೊತ್ತಿದೆ. ಆದರೆ ಹಿಂದೂಗಳು ಹಾಗಲ್ಲವಲ್ಲ, ಶಾಂತಿಪ್ರಿಯರು. ಎಲ್ಲಾದ್ರೂ ಒಬ್ಬ ಹಿಂದೂ ದೊಣ್ಣೆ ಹಿಡಿದು ಬಂದರೂ ಅವನನ್ನು ಕೋಮುವಾದಿ ಎಂದು ಬಿಂಬಿಸಿದರಾಯಿತು ಎಂಬ ಭಂಡ ಧೈರ್ಯ ಇದೆಯಲ್ಲ, ಅದು ಇವರನ್ನು ಕಾಲರ್ ಮೇಲೆತ್ತಿಕೊಂಡು ಬರುವಂತೆ ಮಾಡಿರುವುದು.
ಈಗ ಕೇರಳದಲ್ಲೇ ನೋಡಿ, ಕಣ್ಣೂರಿನಲ್ಲಿ 60% ಹಿಂದೂಗಳು ಇದ್ದಾಾರೆಂದು ಗೊತ್ತಿದ್ದರೂ ಅವರು ಬೇಕಂತಲೇ ಅಲ್ಲಿ ಹಬ್ಬ ಮಾಡಿದ್ದಾರೆ. ಅಷ್ಟು ದನಗಳನ್ನು ಕಡಿದಾಗಲೂ ಒಬ್ಬನೇ ಒಬ್ಬ ಹಿಂದೂ ಕೂಡ ತುಟಿ ಪಿಟಿಕ್ ಎನ್ನಲಿಲ್ಲ. ಬಹುಶಃ ಅವರೆಲ್ಲರೂ ಮನೆಯ ಬೀಗ ಗಟ್ಟಿಯಾಗಿ ಹಾಕಿಕೊಂಡು ಒಳಗೆ ಕುಳಿತಿದ್ದರೂ ಅಚ್ಚರಿಯಿಲ್ಲ. ಇವರು ಹಿಂದೂಗಳನ್ನು ರೊಚ್ಚಿಗೆಬ್ಬಿಸಲು ಅಥವಾ ರಾಜಕೀಯಕ್ಕೆ ಇದನ್ನು ಉಪಯೋಗಿಸಿಕೊಳ್ಳಲು ದನದ ಮಾಂಸದ ಉತ್ಸವ ಆಚರಿಸಲಿಲ್ಲ ಎಂದಾದರೆ, ಕಣ್ಣೂರಿನಲ್ಲಿ ದನ ಕಡಿಯುವಾಗ ಯೂತ್ ಕಾಂಗ್ರೆಸ್ ಜಿಂದಾಬಾದ್ ಎಂದು ಘೋಷಣೆ ಕೂಗುವ ದರ್ದಾದರೂ ಏನಿತ್ತು ಅಥವಾ ಅದ್ಯಾವ ಮಟ್ಟಿಗಿನ ಜಾತ್ಯತೀತತೆ?
ಐಐಟಿ ಮದ್ರಾಸಿನಲ್ಲೂ ಇದೇ ರೀತಿ ಆಗಿತ್ತು. ಐಐಟಿಗಳಲ್ಲಿ ಸೀಟು ಸಿಗಲಿ ಎಂದೇ ಹರಕೆ ಹೊರುತ್ತಾರೆ. ಆದರೆ ಸೀಟು ಸಿಕ್ಕಾಗ ಅದನ್ನು ಉಪಯೋಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಬದಲು ಹೋರಾಟ ಮಾಡಿ ಹೀರೋ ಆಗುವುದಕ್ಕೆ ನೋಡುತ್ತಾರೆ. ಕೇರಳದಲ್ಲಿ ಯಾವನೋ ದನ ಕಡಿದರೆ ಐಐಟಿ ಮದ್ರಾಸ್ಗೇನು ಸಂಬಂಧ? ಅಲ್ಲೂ ಸೂರಜ್ ಎಂಬ ವಿದ್ಯಾರ್ಥಿ ಹೀರೋ ಆಗೋಣವೆಂದು ಬೀಫ್ ಫೆಸ್ಟಿವಲ್ ಮಾಡಿದ್ದ. ಆದರೆ ಅಷ್ಟು ಮಾಡಿದ್ದರೆ ಬಚಾವ್ ಆಗಿಬಿಡುತ್ತಿದ್ದನೇನೋ. ಆದರೆ, ಶುದ್ಧ ಸಸ್ಯಹಾರಿ ಜೈನ್ ವಿದ್ಯಾರ್ಥಿಗಳ ಬಳಿ ಹೋಗಿ, ಗೋ ಮಾಂಸ ತಿನ್ನುವಂತೆ ಅವರ ಬಾಯಿಗೆ ಹಿಡಿದಿದ್ದ. ಆಗ ಅಲ್ಲಿರುವ ವಿದ್ಯಾರ್ಥಿಯಲ್ಲೊಬ್ಬ, ಹುಚ್ಚು ನಾಯಿಗೆ ಹೊಡೆದ ಹಾಗೇ ಹೊಡೆದಿದ್ದಾನೆ. ಬಿದ್ದ ಏಟಿಗೆ ರಕ್ತ ಹೆಪ್ಪುಗಟ್ಟಿ ಮುಖ ಮೂತಿಯೆಲ್ಲ ಊದಿ ಹೋಗಿತ್ತು. ಇಷ್ಟೇ.. ಇಲ್ಲಿಗೆ ಕೇರಳದ ಎಡಪಂಥೀಯರ ಉದ್ದೇಶ ಸಫಲವಾದ ಹಾಗೆ. ಹೇಗೆ ಎಂದು ಯೋಚಿಸುತ್ತಿದ್ದೀರಾ?
ಹಿಂದೂಗಳ ಮನಸ್ಸನ್ನು ಕೆರಳಿಸುವ ಹಾಗೆ ಗೋ ಮಾಂಸ ತಿನ್ನುವುದು, ಆಗ ಇದನ್ನೇ ದೇಶದ ವಿವಿಧೆಡೆ ಬಹಳಷ್ಟು ಮಂದಿ ಅನುಸರಿಸಲು ನೋಡುತ್ತಾರೆ.
ಆಗ, ಸಹಜವಾಗಿ ಹಿಂದೂಗಳು ಕೆರಳಿ ಅವರಿಗೆ ಒಂದು ಬಾರಿಸಿದರೆ, ಅಯ್ಯಯ್ಯೋ ಹಿಂದೂವೊಬ್ಬ ಹೊಡೆದ, ದಲಿತನನ್ನು ಹತ್ತಿಕ್ಕಲಾಗುತ್ತಿದೆ, ನಮ್ಮನ್ನು ಕಾಲ ಕೆಳಗೆ ಹಾಕಿ ತುಳಿಯುತ್ತಿದ್ದಾರೆ ಎಂದು ಚೀರಾಡುವುದು. ಇದರಿಂದ ಕ್ಲಾಸಿನಲ್ಲಿ ಹಾಜರಿ ಹಾಕುವ ಮಾಸ್ತರರಿಗೂ ಪರಿಚಯ ಇರದ ವಿದ್ಯಾರ್ಥಿ ಒಂದೇ ದಿನದಲ್ಲಿ ಅನಾಮತ್ತಾಗಿ ಫೇಮಸ್ ಆಗುತ್ತಾನೆ. ಐಐಟಿ ವಿಷಯದಲ್ಲಿ ಮಾಧ್ಯಮಗಳೂ ಎಂಥ ನಮಕ್ ಹರಾಮ್ ಕೆಲಸ ಮಾಡಿದವೆಂದರೆ, ಸೂರಜ್ನನ್ನು ಹೊಡೆದಿದ್ದು ಬಲಪಂಥೀಯ ವಿದ್ಯಾರ್ಥಿಗಳು ಎಂದು ವರದಿ ಮಾಡಿಬಿಟ್ಟವು. ಆದರೆ, ಹೊಡೆದ ವಿದ್ಯಾರ್ಥಿ ಮನೀಷ್ಗೂ ಬಲಪಂಥಕ್ಕೂ ಸಂಬಂಧವೇ ಇಲ್ಲ. ಅವನಿಗೆ ಮೋದಿ ಎಂದರೆ, ಪ್ರಧಾನಿ ಎಂಬುದು ಬಿಟ್ಟರೆ ಏನೇನೂ ಗೊತ್ತಿಲ್ಲ. ಹೀಗೆ, ಪ್ರತಿಯೊಂದು ಹಿಂದೂ ವಿರೋಧಿ, ದೇಶ ವಿರೋಧಿ ಡ್ರಾಮಾ ನಡೆಸಬೇಕಾದರೂ ಇದೇ ಅವರ ಹಿಡನ್ ಅಜೆಂಡಾ ಆಗಿರುತ್ತದೆ.
ಇಲ್ಲದಿದ್ದರೆ, ಬೀಫ್ ಪಾರ್ಟಿ ಆಯೋಜಿಸಿದ್ದ ಐಐಟಿ ಮದ್ರಾಸ್ನ ಸೂರಜ್ ಕೆಲ ತಿಂಗಳುಗಳ ಹಿಂದೆಯೇಕೆ ಹಿಂದೂ ಹುಡುಗರ ಎದುರೇ ಭಗವದ್ಗೀತೆ ಹರಿದು ಹಾಕುತ್ತಿದ್ದ? ಅಂದರೆ ಅವನಿಗೆ ಭಗವದ್ಗೀತೆಯನ್ನು ಹರಿದು ಹಾಕಿ ತಾನು ದೊಡ್ಡ ನಾಯಕ ಎಂದು ಬಿಂಬಿಸಿಕೊಳ್ಳುವ ಹುಚ್ಚು ಸ್ವಲ್ಪ ಹೆಚ್ಚಾಗೇ ಇತ್ತು. ಇದೇ ಬೆಳೆದೂ ಬೆಳೆದೂ, ಮೊನ್ನೆ ಗೋ ಮಾಂಸ ತಿನ್ನಿಸುವುದಕ್ಕೆ ಹೋಗಿ ಗೂಸಾ ತಿಂದಿದ್ದಾನೆ. ಹೊಡೆತ ತಿನ್ನುವುದಕ್ಕಾಗಿಯೇ, ಕೋಮು ಸಂಘರ್ಷವಾಗಲಿ ಎಂದೇ ಪ್ರತಿಭಟನೆಯ ಡ್ರಾಮಾ ಆಡುವವರಿಗೆ ಒಂದೆರಡು ಬಿದ್ದರೇನು ತಪ್ಪಿಲ್ಲ ಬಿಡಿ. ಅದನ್ನೇನು ದೊಡ್ಡದು ಮಾಡುವುದು ಬೇಡ.
ಏಕೆಂದರೆ, ಇಲ್ಲಿ ಹಸಿವಿಗಿಂತಲೂ, ಹಬ್ಬ ಮಾಡಬೇಕು ಎನ್ನುವುದಕ್ಕಿಂತಲೂ, ಹಿಂದೂ ಸಮುದಾಯಕ್ಕೆ, ಗೋವನ್ನು ಪೂಜಿಸುವವರಿಗೆ ಒಂದು ಸಂದೇಶ ನೀಡಬೇಕು ಎನ್ನುವುದೇ ಬೀಫ್ ಫೆಸ್ಟಿವಲ್ನ ಉದ್ದೇಶ. ಆದರೆ ಕರ್ನಾಟಕ ಇನ್ನೂ ಕೇರಳದಷ್ಟು ಹದಗೆಟ್ಟಿಲ್ಲ. ಸಿಕ್ಕ ಸಿಕ್ಕಲ್ಲಿ ಗೋವನ್ನು ತುಂಡರಿಸಿ ಮೆರವಣಿಗೆ ಮಾಡುತ್ತಿದ್ದರೂ ಪ್ರತಿಭಟಿಸದೇ ಸುಮ್ಮನಿರುವುದಕ್ಕೆ ಇದು ಕಣ್ಣೂರೂ ಅಲ್ಲ. ಇಲ್ಲಿರುವ ಬಿಳಿಮಂಡೆ ಪತ್ರಕರ್ತರಿಗೆ, ಬರೆಯುವುದನ್ನೇ ಮರೆತ ಮುದಿ ‘ಸಾಯಿತಿ’ಗಳಿಗೆ, ಕೆಲಸವಿಲ್ಲದ ಕವಯತ್ರಿಗಳಿಗೆಲ್ಲ ಜನ ಹೆದರುವುದಿಲ್ಲ. ಅದಕ್ಕೆ ಸಾಕ್ಷಿಯಾಗೇ ಟೌನ್ ಹಾಲ್ ಮುಂದೆ ನಡೆಯಬೇಕಿದ್ದ ಸಾಮೂಹಿಕವಾಗಿ ಗೋ ಮಾಂಸ ತಿನ್ನುವ ಕಾರ್ಯಕ್ರಮವನ್ನು ಬಂದ್ ಮಾಡಿಸಿದ್ದಾರೆ. ಕರ್ನಾಟಕದ ಯಾವುದೇ ಭಾಗದಲ್ಲಿ ಹೋರಾಟ ಮಾಡುವುದಕ್ಕೆ ನಿಂತರೂ ಇದೇ ಸ್ಥಿತಿ ಅನುಭವಿಸಬೇಕಾಗುತ್ತದೆ. ಬೇರೆಲ್ಲಿ ಹೇಗೋ ಗೊತ್ತಿಲ್ಲ, ಆದರೆ ಕರ್ನಾಟಕದಲ್ಲಿ ಮಾತ್ರ ಇಂಥ ಅಡ್ಡಕಸುಬಿಗಳಿಗೆ ಸವೆದ ಹಳೆಯ ಚಪ್ಪಲಿಗೆ ಸಿಗುವ ಮರ್ಯಾದೆಯೂ ಸಿಗುವುದಿಲ್ಲ.