ಜಲ್ಲಿಕಟ್ಟು ಹೋರಾಟದಲ್ಲಿ ಜಿಹಾದಿಗಳ ಲೆಕ್ಕಾಚಾರ!

jalli kattu - PTI_0_0_0_0_0_0ಸ್ವಾಮಿ ವಿವೇಕಾನಂದರು ಒಮ್ಮೆ ಉಪನ್ಯಾಸ ನೀಡುವಾಗ ಹೇಳಿದ್ದರು. ‘ನಮ್ಮ ಹಿಂದೂಗಳ ಸಮಸ್ಯೆ ಯೇ ಇದು. ಇಬ್ಬರು ಹಿಂದೂಗಳಿದ್ದರೆ ಮೂರು ಸಂಘಟನೆಗಳಿರುತ್ತವೆ. ಇಲ್ಲಿ ಜನರು ತಿಲಕ ಹಾಗೆ ಇಡಬೇಕಾ? ಹೀಗೆ ಇಡಬೇಕಾ? ಎಂದೇ ಹೋರಾಟ ಮಾಡುತ್ತಿರುತ್ತಾರೆ’! ಎಂದು. ಅಂದರೆ ಹಿಂದೂಗಳು ಯಾವುದರಲ್ಲೂ ಒಗ್ಗಟ್ಟಾಗಿರುವುದಿಲ್ಲ ಎನ್ನುವುದನ್ನು ಉದ್ದೇಶಿಸಿ ಹೇಳಿದ್ದು. ಆದರೆ ಸ್ವಾಮೀಜಿಯ ಮಾತಿಗೆ ಅಪವಾದವೆಂಬಂತೆ ತಮಿಳುನಾಡಿನಲ್ಲಿ ಅಪರೂಪಕ್ಕೊಮ್ಮೆ ಹಿಂದೂಗಳೆಲ್ಲ ಒಂದಾಗಿದ್ದರು. ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ನಡೆದ ಹೋರಾಟ ಅದು.

ಜಲ್ಲಿಕಟ್ಟು ನಮ್ಮ ಸಂಸ್ಕೃತಿ ಅದನ್ನು ಉಳಿಸಿ ಎಂದು ಸಾವಿರಾರು ಜನರು ಮರೀನಾ ಬೀಚ್ ಬಳಿ ಜಮಾಯಿಸಿದ್ದರು. ಸ್ಟಾರ್ ನಟರೂ ಬಂದಿದ್ದರು. ಎಲ್ಲರೂ ಒಗ್ಗಟ್ಟಿನಿಂದ ನಡೆಸಿದ ಹೋರಾಟ ದೇಶಾದ್ಯಂತ ಸದ್ದು ಮಾಡಿತ್ತು.  ದೇಶದ್ರೋಹಿಗಳ ಕಣ್ಣು ಬಿದ್ದಿದ್ದೂ ಆಗಲೇ. ನಮ್ಮ ದೇಶದಲ್ಲಿ ವ್ಯವಸ್ಥೆ ಹೇಗಿದೆಯೆಂದರೆ, ಶಾಂತಿ, ಸಹಬಾಳ್ವೆ, ಸೌಹಾರ್ದ ಇತ್ಯಾದಿಗಳೆಲ್ಲವೂ ಪುಸ್ತಕದ ಬದನೇಕಾಯಿಗಳಷ್ಟೇ. ಇಲ್ಲಿ ಎಲ್ಲರೂ ಹೊಡೆದಾಡುತ್ತಿರಬೇಕು ಎನ್ನುವುದೇ ರಾಜಕಾರಣಿಗಳ, ದೇಶವಿರೋಧಿಗಳ ಮೂಲ ಉದ್ದೇಶ. ಇದಕ್ಕೆ ಸರಿಯಾಗಿ ಎಲ್‌ಟಿಟಿಇ ಮತ್ತು ಉಗ್ರರೆಲ್ಲರೂ ಆ ಕಾರ್ಯಕ್ರಮವನ್ನು ಹೈಜಾಕ್ ಮಾಡಲು ಪ್ಲಾನ್ ಮಾಡಿದ್ದರು. ಇವರ ಉದ್ದೇಶ ಇಷ್ಟೇ- ಸಾಕಷ್ಟು ಜನರು ಸೇರಿರುವ ಕಾರ್ಯಕ್ರಮದಲ್ಲಿ ಬಂದು ದೇಶವಿರೋಧಿ ಚಿಂತನೆಯನ್ನು ಆಳವಾಗಿ ತುಂಬಿದರೆ ಅದರಲ್ಲಿ ಸ್ವಲ್ಪ ಜನರಾದರೂ ತಮ್ಮ ಚಿಂತನೆಗಳಿಗೆ ಒಲಿಯಬಹುದು ಎಂಬುದು ಇವರ ಆಲೋಚನೆ. ಇದು ಅಲ್ಲಲ್ಲಿ ಸರ್ವೇ ಸಾಮಾನ್ಯವಾಗಿ ನಡೆಯುತ್ತಿತ್ತು. ಆದರೆ ಈಗ ಲೇಖನದ ವಿಷಯ ಇದಲ್ಲ. ಬದಲಿಗೆ ಜಲ್ಲಿಕಟ್ಟುವಿನಲ್ಲೂ ಜಿಹಾದ್ ಪ್ರವೇಶಿಸಿದ್ದು.

ಸಾಮಾಜಿಕ ಜಾಲತಾಣದಲ್ಲಿ ಜಲ್ಲಿಕಟ್ಟುವನ್ನು ಬೆಂಬಲಿಸುವ ಕೆಲ ಮುಸ್ಲಿಮರನ್ನು ನೀವೆಲ್ಲ ನೋಡಿರುತ್ತೀರಿ. ಮರೀನಾ ಬೀಚ್‌ನಲ್ಲೂ ಸುಮಾರು ಟೋಪಿಧಾರಿ ಮುಸ್ಲಿಮರು ಜಮಾಯಿಸಿದ್ದರು. ಇವರೆಲ್ಲರದ್ದೂ ಒಂದೇ ಕೂಗು. ‘ಜಲ್ಲಿಕಟ್ಟು ಉಳಿಸಿ, ಸಂಸ್ಕೃತಿ ಬೆಳೆಸಿ’ಆದರೆ, ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ? ನಾವು ದಿನ ಬೆಳಗಾದರೆ ಟಿವಿಯಲ್ಲಿ ನೋಡುತ್ತಿರುತ್ತೇವೆ. ಅಕ್ರಮ ಗೋ ಸಾಗಣೆ, ಕಸಾಯಿಖಾನೆಗೆ ಹಸುಗಳನ್ನು ಕಳಿಸಿಕೊಡುವುದು ಎಲ್ಲದರಲ್ಲೂ ಮುಸ್ಲಿಮರ ಹೆಸರೇ ಕೇಳಿ ಬರುತ್ತವೆ. ಗೋ ಮಾಂಸ ತಿನ್ನುವ ಮುಸ್ಲಿಮರು ಜಲ್ಲಿಕಟ್ಟು ಉಳಿಸಿ ಎಂದು ಹೋರಾಟ ಮಾಡುವ ಅವಶ್ಯವಾದರೂ ಏನಿದೆ? ಹಸುಗಳನ್ನು ಉಳಿಸಿ ಅವರಿಗೇನು ಆಗಬೇಕು ಮತ್ತು ಗೋವಿಗೆ ಪೂಜೆ ಮಾಡುವ ಸಂಸ್ಕೃತಿಯನ್ನು ಉಳಿಸಿ ಮುಸ್ಲಿಮರಿಗೆ ಏನಾಗಬೇಕಿದೆ ಹೇಳಿ? ಒಮ್ಮೆ ಜಲ್ಲಿಕಟ್ಟು ಹೋರಾಟವನ್ನು ಗಮನಿಸೋಣ.

ಮೊದಲು ಜಲ್ಲಿಕಟ್ಟು ಹೋರಾಟ ಶುರುವಾದಾಗ, ಇದಕ್ಕೆ ಯಾವ ಮುಸಲ್ಮಾನನೂ ಬೆಂಬಲ ಸೂಚಿಸಿರಲಿಲ್ಲ. ಇನ್ನು ಕೆಲವರು ಇದರ ಬಗ್ಗೆ ತಲೆಯೂ ಕೆಡಿಸಿಕೊಂಡಿರಲಿಲ್ಲ. ಆದರೆ ಏಕಾಏಕಿ ಎಲ್ಲ ಮುಸಲ್ಮಾನರೂ ಜಲ್ಲಿಕಟ್ಟುವಿಗೆ ಬೆಂಬಲ ಸೂಚಿಸಿ ಮರೀನಾ ಬೀಚ್‌ಗೆ ಬಂದರು. ಸಹಜವಾಗಿ ಇಂಥ ಸಂದರ್ಭದಲ್ಲಿ ಜಲ್ಲಿಕಟ್ಟು ಪರ ಅನ್ಯಧರ್ಮೀಯರು ಕೂಗಿದಾಗ ಬಹಳ ಖುಷಿಯಾಗುತ್ತದೆ. ನಾವು ಹಿಂದೂಗಳು ಉಬ್ಬಿ ಹೋಗುತ್ತೇವೆ. ಆದರೆ ಅಲ್ಲಿರುವ ಯಾರೂ ಇವರು ಏಕೆ ನಮ್ಮ ಸಂಸ್ಕೃತಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಆಲೋಚಿಸುವುದೇ ಇಲ್ಲ.

ನಾನು ಇಲ್ಲಿ ಮುಸಲ್ಮಾನರು ಹಿಂದೂಗಳ ಜತೆ ಬರಲೇಬಾರದು ಎಂದು ಹೇಳುತ್ತಿಲ್ಲ. ಅವರು ಯಾಕೆ ಬರುತ್ತಿದ್ದಾರೆ ಎಂದು ಒಬ್ಬನೂ ಆಲೋಚಿಸುತ್ತಿಲ್ಲವೇಕೆ ಎನ್ನುವುದಷ್ಟೇ ನನ್ನ ಪ್ರಶ್ನೆ. ಜಲ್ಲಿಕಟ್ಟು ನಮ್ಮ ದೇಶದ ಸಮಸ್ಯೆಯೇನಲ್ಲ ಅಥವಾ ಎಲ್ಲ ಧರ್ಮೀಯರೂ ಹೋರಾಡಿ ಪಡೆದುಕೊಳ್ಳುವುದಕ್ಕೆ ನಾವು ಪಾಕಿಸ್ತಾನದ ಮೇಲೆ ಎಗರಿ ಬೀಳುತ್ತಿಲ್ಲ. ಆದರೂ ಮುಸ್ಲಿಮರ ಉತ್ಸಾಹವೇಕೆ? ಒಂದು ವೇಳೆ ಮುಸ್ಲಿಮರು ನಮಗೆ ಗೋ ಮಾಂಸ ಬೇಕು ಎಂದು ಹೋರಾಟ ಮಾಡುತ್ತಿದ್ದಿದ್ದರೆ, ಎಷ್ಟು ಹಿಂದೂಗಳು ಅವರನ್ನು ಬೆಂಬಲಿಸುತ್ತಿದ್ದರು ಅಥವಾ ಬಕ್ರೀದ್ ಸಮಯದಲ್ಲಿ ಕುರಿ ಕತ್ತರಿಸಿ ರಸ್ತೆಯೆಲ್ಲ ರಕ್ತದ ಹೊಳೆ ಮಾಡುತ್ತಾರೆ ಎಂದು ಹಬ್ಬದ ಮೇಲೆ ಕೋರ್ಟ್ ನಿಷೇಧ ಹೇರಿ, ಅದಕ್ಕೆ ಮುಸ್ಲಿಮರು ಹೋರಾಟ ಮಾಡುತ್ತಿದ್ದಿದ್ದರೆ, ಎಷ್ಟು ಹಿಂದೂಗಳು ಹೋರಾಟಕ್ಕೆ ಬೆಂಬಲಿಸುತ್ತಿದ್ದರು ಎಂದು ಆಲೋಚಿಸಿ! ಒಮ್ಮೆ ನಾವು ಹೋದರೂ ನಮ್ಮನ್ನು ಅವರು ಹೇಗೆ ನೋಡುತ್ತಿದ್ದರು ಎಂದು ಆಲೋಚಿಸಬೇಕು.

ಮುಸ್ಲಿಮ್ ಸಂಸ್ಕೃತಿ ಉಳಿಸಲು ಹೋರಾಡುವ ಕಾರ್ಯಕ್ರಮದಲ್ಲಿ ನಾವು ಗಣಪತಿ ಪೂಜೆ, ಚಂಡಿಕಾ ಹೋಮ, ಗಂಟಾನಾದಗಳನ್ನು ಮೊಳಗಿಸಿದ್ದರೆ, ಅದನ್ನು ಮುಸಲ್ಮಾನರು ಒಪ್ಪುತ್ತಿದ್ದರೇ ಎಂದು ನಾವು ಯೋಚಿಸಬೇಕಿದೆ. ಈ ಮಾತು ಹೇಳುವುದಕ್ಕೂ ಕಾರಣವಿದೆ. ಮೊನ್ನೆ ಜಲ್ಲಿಕಟ್ಟು ಉಳಿಸಿ ಹೋರಾಟದಲ್ಲಿ ಮುಸಲ್ಮಾನರೆಲ್ಲರೂ ಒಟ್ಟಾಗಿ ಸಂಜೆಯ ನಮಾಜ್ ಮಾಡಿದರು. ಅದಕ್ಕೆ ಹಿಂದೂಗಳು ಮಾನವ ಸರಪಳಿ ಮಾಡಿ ಅವರಿಗೆ ರಕ್ಷಣೆ ನೀಡಿದರು. ಮಾಧ್ಯಮಗಳಲ್ಲಿ ಇಂಥ ವರದಿಯನ್ನು ಓದಿದಾಗ ನಾನು ಬಹಳ ಪುಳಕಿತನಾಗಿದ್ದೆ. ಅನ್ಯಧರ್ಮೀಯರ ಪೂಜೆಗೆ ಹಿಂದೂಗಳು ಹೀರೋಗಳಂತೆ ನಿಂತು ರಕ್ಷಣೆ ಕೊಡುವುದು ನೋಡುವುದಕ್ಕೆ ಬಹಳ ಚೆನ್ನಾಗಿರುತ್ತದೆ ನಿಜ. ಅವೆಲ್ಲ ಸಿನಿಮಾದಲ್ಲಿ ಬಹಳ ಚೆಂದದ ಕಲ್ಪನೆಯಾಗಿ ಕಾಣುತ್ತದೆ.

ಆದರೆ ಅವಷ್ಟನ್ನೂ ಪ್ಲಾನ್ ಮಾಡಿ ಮಾಡಿದ್ದು ಎಂದು ಗೊತ್ತಾದರೆ ಅದು ನನಗಂತೂ ಒಂದು ದೊಡ್ಡ ನಾಟಕದಂತೆ ಕಾಣುತ್ತದೆ. ಹಿಂದೂಗಳೆಲ್ಲ ದೊಡ್ಡ ಬಕ್ರಾಗಳಂತೆ ಕಾಣುತ್ತಾರೆ. ಅಲ್ಲಿ ನಡೆಯುತ್ತಿರುವುದೆಲ್ಲವೂ ಜಿಹಾದ್ ಆಗಿ ಕಾಣುತ್ತದೆ. ಬೇರೆ ಎಲ್ಲ ವಿಚಾರ ಮರೆತು– ಬಿಡಿ, ಜಲ್ಲಿಕಟ್ಟು ವಿಚಾರವನ್ನು ಬಗೆಹರಿಸುವ ತಾಕತ್ತು ಇರುವುದು ಯಾರಿಗೆ? ಸುಪ್ರೀಂ ಕೋರ್ಟ್‌ಗೆ. ಕೋರ್ಟ್‌ಗೆ ಒತ್ತಡ ಹಾಕಬೇಕೋ ಅಥವಾ ನಮಾಜ್ ಮಾಡಬೇಕೋ? ಒಮ್ಮೆ ತಮಿಳುನಾಡಿನ ಅಮ್ಮ ದಿ.ಜಯಲಲಿತಾ ಅವರು ಬದುಕಿದ್ದು ಅವರಿಗೆ ಹುಷಾರು ತಪ್ಪಿದಾಗ ಮುಸ್ಲಿಮರು ನಮಾಜ್ ಮಾಡುವುದು, ಕ್ರಿಶ್ಚಿಯನ್ನರು ಕ್ಯಾಂಡಲ್ ಹಿಡಿದು ನಿಲ್ಲುವುದು, ಹಿಂದೂಗಳು ಹೋಮ ಮಾಡುವುದರಲ್ಲಿ ನ್ಯಾಯವಿದೆ. ಆದರೆ ನಮಾಜ್ ಮಾಡಿದರೆ ಕೋರ್ಟ್ ಅದನ್ನು ಹೇಗೆ ಪರಿಗಣಿಸುತ್ತೆ ಸ್ವಾಮಿ? ಈ ಲಾಜಿಕ್ಕೇ ಅರ್ಥವಾಗುತ್ತಿಲ್ಲವಲ್ಲ? ಜಲ್ಲಿಕಟ್ಟುವಿಗೂ ನಮಾಜ್ ಮಾಡುವುದಕ್ಕೂ ಏನು ಸಂಬಂಧ? ಅಲ್ಲಾಹು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಬಲ್ಲನೇ? ಹಾಗೆ ನೋಡಿದರೆ ದೇವರೇ ಜಲ್ಲಿಕಟ್ಟು ಉಳಿಸಿಕೊಡು ಎಂದು ಹಿಂದೂಗಳು ಹೋಮ ಮಾಡಬೇಕಿತ್ತು.

ಅವರೇ ಕಚ್ಚೆಕಟ್ಟಿ ಹೋರಾಟಕ್ಕೆ ನಿಂತಿರುವಾಗ ಯಾವ ದೊಣ್ಣೆನಾಯಕನನ್ನು ಮೆಚ್ಚಿಸಲು ನಮಾಜ್ ಮಾಡುವುದು? ಹೌದು, ಮೊನ್ನೆ ನಡೆದ ಜಲ್ಲಿಕಟ್ಟು ಹೋರಾಟದಲ್ಲಿ ಮುಸ್ಲಿಮರು ಬಂದಿದ್ದು, ನಮಾಜ್ ಮಾಡಿದ್ದು ಎಲ್ಲವೂ ಪೂರ್ವನಿಯೋಜಿತ ಮತ್ತು ಅಕ್ಷರಶಃ ಮತ್ತೊಂದು ರೀತಿಯ ಜಿಹಾದ್. ಮುಸ್ಲಿಮರು ಈ ಹೋರಾಟಕ್ಕೆ ಬರುವುದಕ್ಕೆ ಮುಂಚೆ ವಾಟ್ಸ್‌ಆ್ಯಪ್‌ನಲ್ಲಿ ಅವರೆಲ್ಲರಿಗೂ ಒಂದು ಮೆಸೇಜ್ ಕಳುಹಿಸಲಾಗಿತ್ತು. ಅದರ ಸ್ಕ್ರೀನ್‌ಶಾಟ್ ಸಹ ನಿಮ್ಮ ಮುಂದಿಟ್ಟಿದ್ದೇನೆ. ಆ ಮೆಸೇಜ್ ಇಂತಿದೆ – ಇನ್‌ಶಾ ಅಲ್ಲಾಹ್ 1. ನಾವು ಕಡಿದು ತಿನ್ನುವ ಪ್ರಾಣಿಗಳನ್ನು ನಾವೆಂದೂ ಪೂಜಿ–ಸುವಂತಿಲ್ಲ. ಅದು ನಮ್ಮ ಧರ್ಮಕ್ಕೆ ವಿರುದ್ಧ. ಆದರೆ ನಮ್ಮ ಧರ್ಮದ ಪ್ರಚಾರ ಮಾಡಲು, ರಾಜಕೀಯವಾಗಿ ಮೈಲೇಜ್ ಗಳಿಸಲು ಇದು ಸಕಾಲ. ಅದಕ್ಕಾಗಿ ಎಲ್ಲರೂ ಜಲ್ಲಿಕಟ್ಟು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ. 2. ನಾವು ಅಲ್ಲಿಗೆ ಹೋದಮೇಲೆ ಹೋರಾಟದ ಹಾದಿ ಯನ್ನು ಸಾಧ್ಯವಾದಷ್ಟು ತಪ್ಪಿಸೋಣ. ಎಲ್ಲರೂ ಆ ನಾಯಿ ಮೋದಿಯನ್ನು ವಿರೋಧಿಸುವಂತೆ ದಾರಿ ತಪ್ಪಿಸೋಣ. 3. ಎಲ್ಲರೂ ಮೋದಿ ವಿರುದ್ಧ, ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಮತ್ತು ಅದನ್ನೇ ಬೋರ್ಡ್‌ಗಳಲ್ಲಿ ಬರೆದುಕೊಂಡು ಹೋಗಿ. 4. ಶ್ರೀಮಂತರಿದ್ದರೆ ದಯವಿಟ್ಟು ಹೋರಾಟ ನಡೆಯುವ ಸ್ಥಳದಲ್ಲಿ ಎಲ್ಲರಿಗೂ ಆಹಾರ ದಾನ ಮಾಡಿ. 5. ಜಲ್ಲಿಕಟ್ಟು ಪರ ಪ್ರತಿಭಟಿಸುತ್ತಿರುವ ಹಿಂದೂಗಳೊಂದಿಗೆ ನಿಂತುಕೊಂಡು ಫೋಟೊ ಕ್ಲಿಕ್ಕಿಸಿಕೊಳ್ಳಿ. ಆ ಫೋಟೊ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳಿ. ಮುಸ್ಲಿಮರು ಜಲ್ಲಿಕಟ್ಟುವನ್ನು ಬೆಂಬಲಿಸುತ್ತಿದ್ದಾರೆಂದು ಬಿಂಬಿಸಿ. 6. ಪ್ರತಿಭಟನೆ ನಡೆಯುವ ಸ್ಥಳದಲ್ಲಿ ನಮಾಜ್ ಮಾಡು–ವುದನ್ನು ಮರೆಯದಿರಿ. 7. ನಿಮ್ಮ ಮಕ್ಕಳನ್ನು ಮೋದಿ ವಿರುದ್ಧ ಮಾತಾಡುವುದಕ್ಕೆ ತರಬೇತಿ ನೀಡಿ. ಆ ಸ್ಥಳದಲ್ಲಿ ಮಾಧ್ಯಮಗಳ ಜತೆ ಮಾತಾ– ಡುವುದಕ್ಕೆ ಒಂದಲ್ಲ ಒಂದು ಅವಕಾಶ ಸಿಕ್ಕೇ ಸಿಗುತ್ತದೆ. ಆಗ ತರಬೇತಿ ನೀಡಿದ್ದು ಉಪಯೋಗಕ್ಕೆ ಬರುತ್ತೆ. 8. ಇದು ಅಲ್ಲಾಹುವೇ ನಮಗಾಗಿ ಸೃಷ್ಟಿಸಿರುವ ಸುವರ್ಣಾ–ವಕಾಶ. ಇದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು.

ಇನ್ನೊಮ್ಮೆ ಇಂಥ ಅವಕಾಶ ಸಿಗದಿರಬಹುದು. ಇನ್‌ಶಾ ಅಲ್ಲಾಹ್! ಇಂಥ ಮೆಸೇಜ್ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಲು ಶುರುವಾದ ಮೇಲೆ ಹೋರಾಟಕ್ಕೆ ಮುಸ್ಲಿಮರ ಬರುವಿಕೆಯೂ ಜಾಸ್ತಿ ಆಯ್ತು. ಇದನ್ನು ನೋಡಿ ನಮ್ಮ ಹಿಂದೂಗಳು ಸಹಜವಾಗಿ ಪುಳಕಿತಗೊಂಡರು. ಸೆಲ್ಫಿಗೆ ಪೋಸ್ ಕೊಟ್ಟರು. ನಮಾಜ್ ಮಾಡುವಾಗ ಕಾದು ರಕ್ಷಣೆ ಕೊಟ್ಟಿದ್ದಕ್ಕೆ ತಾವೇನೋ ಮಹಾನ್ ಸಾಧನೆ ಮಾಡಿದೆವು ಎಂಬ ಭ್ರಮೆಯಲ್ಲಿ ಹಿಂದೂಗಳಿದ್ದರು. ಇನ್ನೊಂದು ಕಡೆಯಲ್ಲಿ ಜಲ್ಲಿಕಟ್ಟು ಹೋರಾಟದಲ್ಲಿ ಒಡಕು ತಂದು ಹಾಕಲು ಇಸ್ಲಾಮಿಕ್ ಉಗ್ರ ಸಂಘಟನೆಗಳು India Go Back (ಭಾರತ ವಾಪಸ್ ಹೋಗು) ಎಂದು ಹೇಳಿ ತಮಿಳುನಾಡನ್ನು ಪ್ರತ್ಯೇಕ ರಾಷ್ಟ್ರವನ್ನಾಗಿಸುವ ಕೂಗು ಹುಟ್ಟಿಸಿದರು. ಎಲ್‌ಟಿಟಿಇ ಉಗ್ರರು ಮತ್ತೊಂದು ರೀತಿಯಲ್ಲಿ ಹೋರಾಟದ ಹಾದಿಯನ್ನು ತಪ್ಪಿಸಿದರು.

ಒಟ್ಟಾರೆ ಅಲ್ಲಿ ಜಲ್ಲಿಕಟ್ಟು ಹೋರಾಟಕ್ಕಿಂತ ಮುಸ್ಲಿಮರ ಧರ್ಮ ಪ್ರಚಾರ, ಮೋದಿಯ ವಿರುದ್ಧ ಪ್ರಚಾರ, ಇಸ್ಲಾಮಿಕ್ ಉಗ್ರರಿಂದ ದೇಶ ವಿಭಜನೆಯ ಸಂಚೇ ನಡೆಯಲು ಒಳ್ಳೆಯ ಜಾಗ ಮಾಡಿಕೊಟ್ಟಂತಾಗಿತ್ತು. ಇಸ್ಲಾಂನಲ್ಲಿ ತಾಕಿಯಾ ಎಂದು ಒಂದು ಪದವಿದೆ. ತಾಕಿಯಾ ಎಂದರೆ, ಕಾಫಿರರ(ಮುಸ್ಲಿಮರಲ್ಲದವರು) ದಾರಿ ತಪ್ಪಿಸಿ, ಅವರ ನಂಬಿಕೆಗಳನ್ನು ಸುಳ್ಳು ಎಂದು ಹೇಳಿ ಘಾಸಿಗೊಳಿಸುವುದು. ಇಸ್ಲಾಂನಲ್ಲಿ ಸುಳ್ಳು ಹೇಳುವುದು ನಿಷಿದ್ಧವಾದರೂ ತಾಕಿಯಾದಲ್ಲಿ, ಇಸ್ಲಾಂ ಅಥವಾ ಜಿಹಾದ್ ಗಾಗಿ ಕಾಫಿರರಿಗೆ ಸುಳ್ಳು ಹೇಳಿದರೆ ಪಾಪ ಸುತ್ತಿಕೊಳ್ಳು–ವುದಿಲ್ಲವಂತೆ. ಜಲ್ಲಿಕಟ್ಟು ಹೋರಾಟದಲ್ಲಿ ಆಗಿದ್ದೂ ಇದೇ… ಆದರೆ ಯಾವ ಹಿಂದೂಗಳಿಗೂ ಇದು ಗೊತ್ತಾಗದೇ ಇರುವುದೇ ಅಚ್ಚರಿ.

ನಮ್ಮದೇ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮುಸ್ಲಿಮರ ಹಬ್ಬವಾದಾಗ ಅಲ್ಲಿ ಯಾವ ದೇವಸ್ಥಾನಗಳ ಗಂಟೆ, ಮಂತ್ರ ಶಬ್ದಗಳು ಜೋರಾಗಿ ಕೇಳಿದರೂ ಸಾಕು. ಕೋಮು ಗಲಭೆಗಳಾಗಿ ಬಿಡುತ್ತವೆ. ಯಾವ ಹಿಂದೂಗಳಿಗೆ ಮುಸ್ಲಿಮರ ಹೋರಾಟದಲ್ಲಿ ಸೇರಿಸಿಕೊಂಡು, ಪೂಜೆ ಮಾಡಿ, ಜೋರಾಗಿ ಮಂತ್ರ ಹೇಳುವುದಕ್ಕೆ ಬಿಟ್ಟಿದ್ದಾರೆ? ಅಲ್ಲಿ ನಾವು ಬಂದರೆ, ಕೆಕ್ಕರಿಸಿಕೊಂಡು ನೋಡುವವರೇ ಹೆಚ್ಚು. ಶಾಂತಿಯುತವಾಗಿ ನಡೆಯುತ್ತಿದ್ದ ಜಲ್ಲಿಕಟ್ಟು ಪ್ರತಿಭಟನೆಯಲ್ಲಿ ಅಪಸ್ವರ ಕೇಳಿ ಬಂದಿದ್ದು, ಲಾಠಿ ಬೀಸುವಂತೆ ಆಗಿದ್ದು ಇದೇ ಮುಸ್ಲಿಮರ, ಇಸ್ಲಾಮಿಕ್ ಉಗ್ರಗಾಮಿಗಳ ಮತ್ತು ಎಲ್‌ಟಿಟಿಇಗಳ ನುಸುಳುವಿಕೆಯಿಂದ. ಇವನ್ನೆಲ್ಲ ನಾವು ಹೇಳಿದರೆ ನಮಗೆ ಸಿಗುವ ಪಟ್ಟ ಕೋಮುವಾದಿ, ಕೇಸರೀಕರಣ, ಬಲಪಂಥೀಯ ಇತ್ಯಾದಿಗಳು. ಆದರೆ ಜಲ್ಲಿಕಟ್ಟುವಿನಲ್ಲಿ ಜಿಹಾದ್ ನಡೆದದ್ದು ಮಾತ್ರ ಯಾರಿಗೂ ತಿಳಿಯುವುದೇ ಇಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಯಾವ್ಯಾವ ಆದೇಶಗಳು ಹರಿದಾಡಿದ್ದವೋ ಅವೆಲ್ಲವೂ ಪಾಲನೆಯಾಗಿವೆ. ಹೋದ ಎಲ್ಲ ಮುಸ್ಲಿಮರೂ ನಮಾಜ್ ಮಾಡಿದ್ದಾರೆ, ಫೋಟೊ ತೆಗೆದು ಫೇಸ್‌ಬುಕ್ ಮತ್ತು ಟ್ವಿಟರ್‌ಗೆ ಅಪ್ಲೋಡ್ ಮಾಡಿದ್ದಾರೆ.

ಇಷ್ಟು ಸಾಕಲ್ಲವೇ ಜಲ್ಲಿಕಟ್ಟು ಹೋರಾಟವನ್ನು ಒಡೆದು ಚೂರು ಮಾಡಿದ್ದಾರೆ ಎಂದು ಹೇಳುವುದಕ್ಕೆ? ಇನ್ನು ಕರ್ನಾಟಕದಲ್ಲೂ ಜ.29ರಂದು ಫ್ರೀಡಂ ಪಾರ್ಕ್‌ನಲ್ಲಿ ಕಂಬಳ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಇಲ್ಲೂ ಅಂಥದ್ದೇ ನಾಟಕ ನಡೆಯುವ ಎಲ್ಲ ಸೂಚನೆಗಳಿವೆ. ಮೋದಿ ವಿರೋಧಿ ಫಲಕಗಳು, ಜೈ ಭೀಮ್ ಘೋಷಣೆಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಭಾರತ ವಿರೋಧಿ ಬೋರ್ಡ್‌ಗಳು ರಾರಾಜಿಸುವ ಎಲ್ಲ ತಯಾರಿ ನಡೆಯುತ್ತಿವೆ.

ನಮ್ಮ ಸಂಸ್ಕೃತಿಯ ಉಳಿವಿಗಾಗಿ ನಾವಷ್ಟೇ ಹೋರಾಡೋಣ. ಬೇರೆ ಧರ್ಮದವರು ಬಂದರೆ, ಅವರನ್ನು ಜತೆಗೆ ಸೇರಿಸಿಕೊಂಡು ‘ಕಂಬಳ ಬೇಕು’ ಎನ್ನುವ ಘೋಷಣೆಯಷ್ಟೇ ಕೂಗೋಣ. ಅದು ಬಿಟ್ಟು ಉಬ್ಬಿ ಹೋಗಿ ಹೋರಾಟ/ಪ್ರತಿಭಟನೆಯ ಮುಂದಾಳತ್ವವನ್ನೇ ಅವರಿಗೆ ಬಿಟ್ಟು ಕೊಡುವುದು ಬೇಡ. ಒಂದು ವಿಚಾರ ನೆನಪಿಡಿ: ನಾವು ನಮ್ಮ ಸಂಸ್ಕೃತಿಗಾಗಿ ಹೋರಾಡುತ್ತಿದ್ದರೆ, ಇನ್ನೊಬ್ಬರು ನಮ್ಮ ಜತೆಗೇ ಸೇರಿಕೊಂಡು ಅದೇ ಸಂಸ್ಕೃತಿಗೆ ಕೊಕ್ಕೆ ಹಾಕುತ್ತಿರುತ್ತಾರೆ. ಸರ್ವಧರ್ಮ ಸಹಭಾಗಿತ್ವವಿರಲಿ. ಜತೆಗೆ ಸ್ವಲ್ಪ ಎಚ್ಚರವೂ ಇರಲಿ.

Leave a Reply

Copyright©2021 Chiranjeevi Bhat All Rights Reserved.
Powered by Dhyeya