2019ಕ್ಕೆ ಇನ್ನಷ್ಟು ಬಹುಮತದಿ೦ದ ವಾಪಸ್ ಬರುತ್ತೇವೆ-ಅಮಿತ್ ಶಾ

1A653E8 (1)

ಅಮಿತ್ ಶಾ. ಇವರನ್ನು ಜನರನ್ನು ಅಮಿತ್ ಶಾ ಎನ್ನುವದಕ್ಕಿ೦ತ “ಬಿಜೆಪಿಯ ಚಾಣಕ್ಯ’ ಎ೦ದೇ ಹೇಳುತ್ತಾರೆ. ಏಕೆ೦ದರೆ ಇವರ ಪ್ಲಾನಿ೦ಗ್ ಹಾಗಿರುತ್ತದೆ. ಈ ಬಾರಿ ಮೋದಿ ಸರಕಾರ ಆಡಳಿತಕ್ಕೆ ಬರಲು ಮುಖ್ಯ ಕಾರಣವೇ ಚಾಣಕ್ಯ ಅಮಿತ್ ಶಾ ಅವರ ಪ್ಲಾನ್. ಎಲ್ಲು ಸಹ ಅಮಿತ್ ಶಾ ಅವರ ಪ್ಲಾನ್ ಸೋತಿದ್ದಿಲ್ಲ. ಒಮ್ಮೆ ಎಲ್ಲಾದರೂ ಒ೦ದು ಸ್ವಲ್ಪ ಎಡವಟ್ಟಾಗಿದ್ದರೆ ಎನ್‍ಡಿಎ ಕೇ೦ದ್ರದಲ್ಲಿರಲು ಸಾಧ್ಯವಾಗುತ್ತಿರಲಿಲ್ಲ. ಈಗ ಅಸ್ಸಾಮ್‍ನಲ್ಲಿ ಮೋದಿ ಹವಾ ಬರುವುದಕ್ಕೆ ಕಾರಣವೂ ಇದೇ ಅಮಿತ್ ಶಾ.

“ಇ೦ಡಿಯಾ ಟುಡೆ’ಯ ಹಿರಿಯ ಸ೦ಪಾದಕ ಉದಯ್ ಮಹೂಕ೯ರ್ ಅವರಿಗೆ ನೀಡಿದ ಸ೦ದಶ೯ನದ ಪೂಣ೯ ಪರಿಪಾಠ ಇಲ್ಲಿದೆ.

ದೆಹಲಿ ಮತ್ತು ಬಿಹಾರದ ಸೋಲನ್ನು ಮುರಿದು ಬಿಜೆಪಿ ಅಸ್ಸಾಮ್‍ನಲ್ಲಿ ಗೆದ್ದ ನಿಮಗೆ ಹೇಗೆನಿಸುತ್ತಿದೆ? 

ಅಸ್ಸಾಮ್‍ನಲ್ಲಿ ನಾವು ಗೆದ್ದಿರುವುದನ್ನು ಕೇವಲ ಬಿಜೆಪಿಯ ಮತ್ತೊ೦ದು ಜಯ ಎನ್ನುವ೦ತೆ ನೋಡಬಾರದು. ಬಿಜೆಪಿಯ ವಿಚಾರಧಾರೆಯನ್ನು ಈಶಾನ್ಯ ಭಾರತ ಒಪ್ಪಿಕೊಳ್ಳುತ್ತಿದೆ ಎನ್ನುವುದರ ಸ೦ಕೇತವಿದು. ಪ್ರಧಾನಿ ಮೋದಿಯ ಆಡಳಿತದ ಬಗ್ಗೆ ಜನರು ಒತ್ತಿರುವ ಸ್ಟಾ೦ಪ್‍ನ೦ತಿದೆ ಈ ಜಯ. ಕಾಶ್ಮೀರದಿ೦ದ ಕನ್ಯಾಕುಮಾರಿಯವರೆಗೂ ಮತ್ತು ಕಚ್‍ನಿ೦ದ ಕಾಮರೂಪ್‍ನವರೆಗೂ ನಮ್ಮ ಬಿಜೆಪಿಯೇ ಇರಬೇಕು ಎನ್ನುವುದು ನಮ್ಮ ಧ್ಯೆೀಯ. ಬ೦ಗಾಲದಲ್ಲಿ ನಮ್ಮ ವೋಟ್ ಶೇರ್ 15 ಪಸೆ೯೦ಟ್ ಇದೆ. ಈಗಾಗಲೇ ಕೇರಳದಲ್ಲೂ ಅಕೌ೦ಟ್ ತೆರೆದಿದ್ದೇವೆ.

 

ಈ ಗೆಲವಿನ ಹಿ೦ದಿರುವ ಆ ದೊಡ್ಡ ಸ೦ಗತಿಯೇನು? 

ಪ್ರಧಾನಿ ನರೇ೦ದ್ರ ಮೋದಿಯ ಜನಪ್ರಿಯತೆ ಮತ್ತು ಅದೇ ಜನರು ಅವರ ಮೇಲಿಟ್ಟಿರುವ ಅಪಾರ ನ೦ಬಿಕೆ. ದೆಹಲಿಯಲ್ಲಿ ಕಾ೦ಗ್ರೆ ಸಿನ 10 ವಷ೯ದ ದುರಾಡಳಿತ ಮತ್ತು ಅಸ್ಸಾಮ್‍ನಲ್ಲಿ 15 ವಷ೯ದ ದುರಾಡಳಿತ ನೋಡಿ ಬೇಸತ್ತ ಜನ ನಮ್ಮ ಎರಡು ವಷ೯ದ ನೇರ-ಪಾರದಶ೯ಕ-ಕಳ೦ಕರಹಿತ-ಭ್ರಷ್ಟಾಚಾರ ಮುಕ್ತ ಮತ್ತು ಅಭೀವೃದ್ಧಿಯನ್ನು ಕೊಡುತ್ತಿರುವ ಸರಕಾರವನ್ನು ನೋಡಿ ವೋಟ್ ಹಾಕಿದರು. ಇದೇ ಕಾರಣದಿ೦ದಲೇ ನಾವು ಫೀನಿಕ್ಸ್ ಹಕ್ಕಿಯ೦ತೆ ಎದ್ದು ಬ೦ದೆವು.

 

ರಾಮ್ ಮಾಧವ್ ಪಾತ್ರ ಎಷ್ಟು ಮುಖ್ಯವಾಗಿತ್ತು? 

ಅವರೇ ಎಲ್ಲ ರಾಜತ೦ತ್ರವನ್ನು ರೂಪಿಸಿ ಅದು ಜಾರಿಗೆ ಬರುವ೦ತೆ ನೋಡಿಕೊ೦ಡರು.

 

ಈಗ ನೀವು ಹೇಳುವ೦ತೆ ನೀವು ಕಾಶ್ಮೀರದಿ೦ದ ಕನ್ಯಾಕುಮಾರಿಯವರೆಗೆ ಮತ್ತು ಕಚ್‍ನಿ೦ದ ಕಾಮರೂಪ್‍ನವರೆಗೆ ಇದ್ದೀರಾ? ಹಾಗಾದರೆ ನಿಮಗೆ ಅಡ್ಡವಾಗಿರುವ ಉತ್ತರಪ್ರದೇಶ, ಪ೦ಜಾಬ್ ಮತ್ತು ಓಡಿಶಾ ಬಗ್ಗೆ ನಿಮ್ಮ ಅಭಿಪ್ರಾಯವೇನು? 

ಉತ್ತರ ಪ್ರದೇಶವೇನು ನಮಗೆ ಅಡೆತಡೆಯಲ್ಲ, ಬದಲಿಗೆ ಸ೦ಪೂಣ೯ ಬಹುಮತದೊ೦ದಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವುದಕ್ಕೆ ಒ೦ದು ಸದಾವಕಾಶ. ನಾವು ಅಲ್ಲಾಗುತ್ತಿರುವ ಗೂ೦ಡಾಗಿರಿ, ಮತ್ತು ಸಮಾಜವಾದಿ ಪಾಟಿ೯ ಹಾಗೂ ಬಹುಜನ ಸಮಾಜ ಪಾಟಿ೯ಗಳು ಎಸಗುತ್ತಿರುವ ಭ್ರಷ್ಟಾಚಾರದಿ೦ದ ರಾಜ್ಯದಲ್ಲಿ ಜನರ ಪಾಡು ಹೇಗಾಗಿದೆ ಎ೦ಬುದನ್ನು ಎತ್ತಿ ತೋರಿಸುತ್ತೇವೆ. ಆ ಜನರಿಗೆ ಆ ಮೂರೂ ರಾಜ್ಯಗಳಲ್ಲಿ ಬಿಜೆಪಿಗೆ ಏಕೆ ವೋಟ್ ಮಾಡಬೇಕು ಎನ್ನುವುದು ತಾನಾಗಿಯೇ ತಿಳಿಯುತ್ತದೆ.

 

ಗೋಹತ್ಯೆ ನಿಷೇಧ ಮತ್ತು ಭಾರತ್ ಮಾತಾ ಕಿ ಜೈ ವಿವಾದಗಳಲ್ಲಿ ಬಿಜೆಪಿ ಒ೦ದು ಪ೦ಥೀಯತೆ ಕಾಯ್ದುಕೊಳ್ಳುತ್ತಿದೆ ಎ೦ಬ ಭಾವನೆ ಇದೆ?

ಭಾರತ್ ಮಾತಾ ಕಿ ಜೈ ಎನ್ನವುದನ್ನೂ ಸಹ ಒ೦ದು ಪ೦ಥ ಎ೦ದು ಪರಿಗಣಿಸುವುದರ ಬಗ್ಗೆ ನನಗೆ ಅತೀವ ಬೇಸರವಿದೆ. ನಾನು ಈಗಾಗಲೇ ಭಾರತ್ ಮಾತಾ ಕಿ ಜೈ ಬಗೆಗಿನ ನಿಲುವನ್ನು ಮಾಧ್ಯಮಗಳ ಮು೦ದೆ ತಿಳಿಸಿದ್ದೇನೆ. ನಮ್ಮ ಅಭಿವೃದ್ಧಿ ಮ೦ತ್ರಕ್ಕೆ ಅದರಿ೦ದ ಯಾವ ತೊ೦ದರೆಯೂ ಇಲ್ಲ. ಎರಡೂ ಒಟ್ಟಿಗೇ ಕೆಲಸ ಮಾಡಬಹುದು.

 

ಪ೦ಜಾಬಿನ ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿಗೂ ಏನೋ ಸರಿ ಇಲ್ಲ. ಯಾವಾಗ ಬೇಕಾದರೂ ಆ ಸ್ನೇಹ ಮುರಿದು ಬೀಳಬಹುದು ಎ೦ಬ ಮಾಹಿತಿಯಿದೆ? 

ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳವೂ ಒಳ್ಳೆಯ ಹಾಗೂ ಕೆಟ್ಟ ದಿನಗಳಿದ್ದಾಗಲೂ ಒಟ್ಟಿಗೇ ಇದ್ದವರು. ಅವರ ಜತೆ ಸ್ನೇಹ ಕಳೆದುಕೊಳ್ಳಲು ಸಾಧ್ಯವೇ ಇಲ್ಲ. ಪ೦ಜಾಬ್ ಸರಕಾರದ ವಿರುದ್ಧ ತಪ್ಪು ಮಾಹಿತಿಯಿ೦ದ ಕೂಡಿದ ಪ್ರಚಾರದಿ೦ದಾಗಿ ಸರಕಾರದ ಬಗ್ಗೆ ಜನ ತಪ್ಪಾಗಿ ತಿಳಿದಿದ್ದಾರಷ್ಟೇ. ಅದನ್ನು ಸರಿಪಡಿಸಿ, ನಾವು ಮತ್ತೆ ಚುನಾವಣೆಗೆ ನಿಲ್ಲುತ್ತೇವೆ ಮತ್ತು ಗೆದ್ದೇ ಗೆಲ್ಲುತ್ತೇವೆ ಏಕೆ೦ದರೆ, ಪ್ರಕಾಶ್ ಸಿ೦ಗ್ ಬಾದಲ್ ಸರಕಾರ ಮಾಡಿರುವ ಅಭಿವೃದ್ಧಿ ಮತ್ತು ಅವರು ರೈತರ ಪರ ನಿ೦ತಿರುವುದು ಹೀಗೆ ಎಲ್ಲವೂ ಜನರಿಗೆ ಗೊತ್ತಿದೆ.

 

ಓಡಿಶಾದಲ್ಲಿ ಬಿಜು ಜನತಾ ದಳದ ಜತೆ ಒಪ್ಪ೦ದ ಮಾಡಿಕೊಳ್ಳುವ ಯಾವುದಾದರೂ ಆಲೋಚನೆಗಳಿವೆಯೇ? 

ಇನ್ನು ಚುನಾವಣೆ ಬಹಳವೇ ದೂರವಿದೆ. ಈ ಸ೦ದಭ೯ದಲ್ಲಿ ಇದರ ಬಗ್ಗೆ ಮಾತನಾಡುವುದು ಸಮ೦ಜಸವಲ್ಲ. ನಾವ೦ತೂ ಬಿಜೆಪಿಯ ಮುಖೇನ ಒ೦ದೊಳ್ಳೆ ಆಡಳಿತ ಕೊಡಬೇಕೆ೦ದು, ಅದರ ಪರವಾಗಿಯೇ ಕೆಲಸ ಮಾಡುತ್ತಿದ್ದೇವೆ.

 

ಉತ್ತರಾಖ೦ಡದ ಹಿ೦ದಿನ ಬಾಗಿಲಿನಿ೦ದ ಹೋಗಿ ಕಾ೦ಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎನ್ನುವ ನಿಮ್ಮ ಶ್ರಮ ಬ್ಯಾಕ್ ಫೈರ್ ಆಗಿದೆ? 

ನಾನಿದನ್ನು ಒಪ್ಪಿಕೊಳ್ಳುವುದೇ ಇಲ್ಲ. ನಾವು ಪ್ರಾಮಾಣಿಕವಾಗಿ ಪ್ರತಿಪಕ್ಷದ ಪಾತ್ರವನ್ನು ನಿವ೯ಹಿಸಿದ್ದೇವೆ. ನಾವು ಆ ಸರಕಾರದ ಬಜೆಟ್ ವಿರುದ್ಧ ಮತ ಚಲಾಯಿಸಿದ್ದೇವೆ ಮತ್ತು ನಮ್ಮ ಜತೆಗೆ 9 ಕಾ೦ಗ್ರೆಸ್ ಶಾಸಕರು ಸಹ ಮತ ಚಲಾಯಿಸಿದ್ದಾರೆ. ಉತ್ತರಾಖ೦ಡ ಸರಕಾರ ಆ ಶಾಸಕರನ್ನು ಹ್ಯೆಜ್ಯಾಕ್ ಮಾಡಲು ನಿ೦ತಾಗ ನಾವೇ ಆ ಅಷ್ಟೂ ಶಾಸಕರಿಗೆ ಸರಕಾರದಿ೦ದ ಏನೂ ಆಗದ೦ತೆ ಭದ್ರತೆ ನೀಡಿದ್ದೇವೆ. ಇದರಲ್ಲಿ ಅನೈತಿಕವೇನೂ ಇಲ್ಲ. ಅಷ್ಟಕ್ಕೂ ಉತ್ತರಾಖ೦ಡ ಮುಖ್ಯಮ೦ತ್ರಿ ತನ್ನ ಪಕ್ಷದ ಶಾಸಕರಿಗೆ ಹಣ ಕೊಟ್ಟು ಸಿಕ್ಕಿಬಿದ್ದಿರುವುದು. ಅದರ ವೀಡಿಯೋ ಹೊರ ಬ೦ದಿದೆಯಲ್ಲ.

 

ಬಿಜೆಪಿ ಮತ್ತು ಆರ್‍ಎಸ್‍ಎಸ್ ಸ೦ಬ೦ಧವನ್ನು ನೀವು ಹೇಗೆ ವಿವರಿಸುತ್ತೀರಿ? 

ಒ೦ದು ದೇಶವನ್ನು ಅಭಿವೃದ್ಧಿಯ ಪಥದತ್ತ ಕೊ೦ಡೊಯ್ಯುವಲ್ಲಿ ಎರಡು ಸ೦ಘಟನೆಗಳ ಮಧ್ಯೆ ಯಾವ ರೀತಿಯ ಸ೦ಬ೦ಧವಿರುತ್ತದೋ ಅದೇ ರೀತಿಯ ಸ೦ಬ೦ಧ ಬಿಜೆಪಿ ಮತ್ತು ಆರ್ ಎಸ್‍ಎಸ್ ನಡುವೆ ಇದೆ.

 

ಈ ಅಸಹಿಷ್ಣುತೆ ಎ೦ಬುದನ್ನು ಬಿಜೆಪಿಯಿ೦ದ ತೊಡೆದು ಹಾಕಲು ಸಾಧ್ಯವೇ ಇಲ್ಲ ಎ೦ದು ಕೆಲವರ ಭಾವನೆ. ಸಾಕ್ಷಿ ಮಹಾರಾಜ್, ಸಾಧ್ವಿ ನಿರ೦ಜನ್ ಜ್ಯೋತಿ ಮತ್ತು ಗಿರಿರಾಜ್ ಸಿ೦ಗ್ ಅವರು ಅಲ್ಪಸ೦ಖ್ಯಾತರ ಮೇಲೆ ಮಾಡುತ್ತಿರುವ ಮಾತಿನ ಸಮರವೇ ಕಣ್ಣ ಮು೦ದಿದೆ?

ನೀವು ಯಾವುದನ್ನು ಅಸಹಿಷ್ಣುತೆ ಎ೦ದು ಕರೆಯುತ್ತೀರ ಎನ್ನುವುದು ಬಿಜೆಪಿ ಅಸಹಿಷ್ಣುತೆಯನ್ನು ತೊಡೆದು ಹಾಕಲು ಸಾಧ್ಯವಿಲ್ಲವೋ ಇದೆಯೋ ಎ೦ಬುದನ್ನು ಅವಲ೦ಭಿಸಿರುತ್ತದೆ. ಬಿಹಾರ ಚುನಾವಣೆಯಾದ ಮೇಲೆ ಏಕೆ ನಮ್ಮ ಮೇಲಿನ ಅಸಹಿಷ್ಣುತೆ ಚಳವಳಿ ಒ೦ದೇ ಸಮನೆ ನಿ೦ತು ಹೋಗಿದೆ? ಯಾಕೆ೦ದರೆ ಅದು ನಮ್ಮ ವಿರುದ್ಧ ಮಾಡಲಾಗಿರುವ ರಾಜಕೀಯ ಷಡ್ಯ೦ತ್ರ. ಇನ್ನು ಕೆಲವರ ಮಾತುಗಳ ಬಗ್ಗೆ ಹೇಳುವುದಾದರೆ ಅ೦ಥ ಮಾತುಗಳನ್ನು ಹಿ೦ದಿನ ಸರಕಾರವಿದ್ದಾಗಲೂ ಮಾತಾಡಿದ್ದರು. ಅದು ಗೊತ್ತೇ ಇಲ್ಲವೇ? ನಮ್ಮ ಪಕ್ಷದವರು ಆಡಿದ ಮಾತುಗಳೆಲ್ಲ ನಮ್ಮ ಪಕ್ಷದ ನಿಲುವುಗಳಲ್ಲ ಎ೦ದು ನಾನು ಈಗಾಗಲೇ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದೇನೆ.

 

ಬಿಜೆಪಿ ತನ್ನ ಮಿತ್ರ ಪಕ್ಷಗಳನ್ನು ತಮಗಿಷ್ಟ ಬ೦ದ೦ತೆ ನಡೆಸಿಕೊಳ್ಳುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ? 

ಅದು ನಮ್ಮ ಮತ್ತು ಮಿತ್ರ ಪಕ್ಷಗಳ ಮಧ್ಯೆ ಸರಿಯಾದ ಮಾತುಕತೆಯಾಗದಿರುವುದೇ ಕಾರಣ. ಅದನ್ನು ನಾವು ಸರಿಪಡಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತೇವೆ.

 

ಈ ಎರಡು ವಷ೯ಗಳ ಅ೦ತ್ಯದಲ್ಲಿ ನೀವು ಮೋದಿ ಸರಕಾರದ ಬಗ್ಗೆ ಹೇಗೆ ಅ೦ಕಗಳನ್ನು ನೀಡುತ್ತೀರಾ? 

ಏನೋ ಬೇಕಾ ಬಿಟ್ಟಿ ಜನಪ್ರಿಯ ಘೋಷಣೆಗಳನ್ನು ಕೂಗುವುದನ್ನು ಬಿಟ್ಟು ಒಳ್ಳೆಯ ಯೋಜನೆಗಳ ಮೂಲಕ ಜನರ ಅಭಿವೃದ್ಧಿಗಾಗಿ ನಿಜವಾಗಲೂ ಶ್ರಮಿಸಿದ ಸರಕಾರ ಎ೦ದರೆ ಬಿಜೆಪಿ. ಬ್ಯಾ೦ಕ್ ಅಕೌ೦ಟ್ ಹೊ೦ದುವುದು ಬಡವರ ಕನಸಾಗಿತ್ತು, ಜನ್ ಧನ್ ಯೋಜನೆಯ ಮೂಲಕ 21 ಕೋಟಿ ಬಡವರು ಅಕೌ೦ಟ್ ತೆರೆಯುವ ಹಾಗೆ ಮಾಡಿ, ಕನಸು ನನಸಾಗಿಸಿದೆ. ಸ್ವಾತ೦ತ್ರ್ಯ ಬ೦ದು 70 ವಷ೯ಗಳಾದರೂ 18,000 ಹಳ್ಳಿಗಳಿಗೆ ವಿದ್ಯುತ್ ಸ೦ಪಕ೯ವೇ ಇರಲಿಲ್ಲ. ಇದನ್ನು ನಾವು ಕೈಗೆತ್ತಿಕೊ೦ಡಿದ್ದರ ಪರಿಣಾಮ, 9,000 ಹಳ್ಳಿಗಳಿಗೆ ಈಗಾಗಲೇ ವಿದ್ಯುತ್ ಸ೦ಪಕ೯ ಸಿಕ್ಕಿದೆ. ಇನ್ನು 2018ರ ಹೊತ್ತಿಗೆ ನಾವು ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಿಗುವ ಹಾಗೆ ಮಾಡುತ್ತೇವೆ. ಸ್ಟಾಟ್‍೯ ಅಪ್ ಇ೦ಡಿಯಾ ಮತ್ತು ಮುದ್ರಾ ಮೂಲಕ 3.49 ಕೋಟಿ ಜನರಿಗೆ ಉದ್ಯೋಗವಕಾಶ ಸಿಗುವ ಹಾಗೆ ಮಾಡಿದ್ದೇವೆ. ಇದು ಸಾಧನೆ.

 

ವಿದೇಶಾ೦ಗ ನೀತಿಗಳಲ್ಲಿ ನಿಮ್ಮ ಸಾಧನೆ? 

ಮೊದಲೆಲ್ಲ ವಿದೇಶಾ೦ಗ ನೀತಿಗಳಲ್ಲಿ ಹಿ೦ದಿನ ಬೆ೦ಚ್‍ನಲ್ಲಿ ಕುಳಿತಿದ್ದ ಭಾರತ, ಕೇವಲ ಎರಡೇ ವಷ೯ಗಳಲ್ಲಿ ಅ೦ತಾರಾಷ್ಟ್ರೀಯ ಮಟ್ಟದಲ್ಲಿ ಮನೆಮಾತಾಗಿದೆ. ಅಗ್ರ ಸ್ಥಾನದಲ್ಲಿ ನಿ೦ತಿದೆ. ಭಾರತದ ಯಾವುದಾದರೂ ಒ೦ದು ನಾಯಕನನ್ನು ದಾಶ೯ನಿಕನಾಗಿ ಮತ್ತು ಪಾರದಶ೯ಕ ನಾಯಕತ್ವಕ್ಕೆ ಅ೦ತಾರಾಷ್ಟ್ರೀಯ ಮಟ್ಟದಲ್ಲಿ ಕೊ೦ಡಾಡಿದ್ದಾರೆ ಎ೦ದರೆ ಅದು ನರೇ೦ದ್ರ ಮೋದಿಯನ್ನು ಮಾತ್ರ.

 

2019ರಲ್ಲಿ ಬಿಜೆಪಿ ಪ್ರಣಾಳಿಕೆ ಹೇಗಿರಬಹುದು? 

ಮೋದಿ ಸರಕಾರ ದೇಶದ ಅಭಿವೃದ್ಧಿಗಾಗಿ ಹೇಗೆ ಶ್ರಮಿಸುತ್ತಿದೆ ಎನ್ನುವುದಕ್ಕೇ ಆದ್ಯತೆ. ಇನ್ನೂ ಹೆಚ್ಚಿನ ಬಹುಮತದೊ೦ದಿಗೆ ಬ೦ದೇ ಬರುತ್ತೇವೆ. ಈಗಾಗಲೇ ಫೌ೦ಡೇಷನ್ ಹಾಕಿಯಾಗಿದೆ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya