ಮೂರೆಳೆ ಜನಿವಾರದವರು V/S ಮೂರೂ ಬಿಟ್ಟವರು!

download (1)

 

ಸ್ವಲ್ಪ ತಿಂಗಳು ಹಿಂದೆ ಹೋಗೋಣ…. ಆಗ ಪತ್ರಿಕೆಯ ಹೆಡ್‌ಲೈನ್‌ಗಳು ಹೇಗೆ ಬರುತ್ತಿದ್ದವೆಂದರೆ,
1. ಇಫ್ತಾರ್ ಕೂಟದಲ್ಲಿ ಪಾಲ್ಗೊಡು ಮುಸಲ್ಮಾನರಿಗೆ ಶುಭ ಕೋರಿದ ….(ಆಯಾ ರಾಜಕಾರಣಿಯ ಹೆಸರು)
2. ಎಲ್ಲೆಲ್ಲೂ ಬಕ್ರಿದ್ ಹಬ್ಬ ಸಂಭ್ರಮದಿಂದ ಆಚರಿಸಿದ ಮುಸಲ್ಮಾನ ‘ಬಾಂಧವರು’!
3. ನಾಟಿಕೋಳಿ ಮತ್ತಷ್ಟು ಅಗ್ಗ!

ಈಗ ನನ್ನ ಪ್ರಶ್ನೆ ಇರುವುದು ಇಫ್ತಾರ್ ಕೂಟದಲ್ಲಿ ಕುರಿ, ಮೇಕೆ, ಒಂಟೆಗಳನ್ನು ಕಡಿದು ಮಾಂಸದೂಟ ಇಟ್ಟಿದ್ದರೋ ಅಥವಾ ಪುಳಿಯೊಗರೆ ಮೊಸ್ರನ್ನ ಇಟ್ಟು ಸಂಭ್ರಮಾಚರಿಸಿದರೋ?
ಎಲ್ಲಲ್ಲೂ ಬಕ್ರಿದ್ ಆಚರಿಸಿದ್ದು ಬಹಳ ಸಂತಸದ ಸಂಗತಿಯೇ… ಆದರೆ ಮುಸಲ್ಮಾನರು ಕೇವಲ ಒಬ್ಬರನ್ನೊಬ್ಬರು ತಬ್ಬಿಕೊಂಡು ಹಬ್ಬ ಮುಗಿಸಿದ್ದರೋ? ಅಥವಾ ಬಕ್ರಿ ಲೆಸ್ ಬಕ್ರಿದ್ ಮಾಡಿದ್ದರೋ?
ಈ ನಾಟಿ ಕೋಳಿಯ ರೇಟು ಕಡಿಮೆಯಾಗಿದೆ ಎಂದು ಹೆಡ್‌ಲೈನ್‌ನಲ್ಲಿ ಹಾಕಿ ವರದಿ ಮಾಡಿದ್ದು ನಾಟಿ ಕೋಳಿ ಆಟ ಆಡುವುದಕ್ಕೆ ತೆಗೆದುಕೊಳ್ಳುವುದಕ್ಕೋ ಅಥವಾ ಕತ್ತರಿಸಿ ಹೊಟ್ಟೆಗಿಳಿಸಿ ಕೊಳ್ಳುವುದಕ್ಕೋ?
ಈ ಅಷ್ಟೂ ಹೆಡ್‌ಲೈನ್‌ಗಳಲ್ಲಿ ಮತ್ತು ವರದಿಯಲ್ಲಿ ಒಂದು ಕಡೆಯೂ ಪ್ರಾಣಿಹತ್ಯೆಯನ್ನು ಖಂಡಿಸಿ ಬರೆಯುವುದಕ್ಕೆ ಒಬ್ಬ ಪತ್ರಕರ್ತನ ಪೆನ್ನಲ್ಲೂ ಶಾಯಿಯೇ ಇರಲಿಲ್ಲವಂತೆ. ಈಗ ಮಾತ್ರ ಯಾವುದೋ ಹತ್ತೇ ಹತ್ತು ಮನೆ ಇರುವ ಊರಲ್ಲಿ ಬಡ ಬ್ರಾಹ್ಮಣರು, ಲೋಕದಲ್ಲಿರುವ ಕೆಟ್ಟ ಜನರನ್ನೂ ಸೇರಿಸಿ ಲೋಕ ಕಲ್ಯಾಣಕ್ಕಾಗಿ ಸೋಮಯಾಗ ಮಾಡಿದರೆ ಶಾಯಿ ಇಲ್ಲದೇ ಸತ್ತಿದ್ದ ಪೆನ್ನುಗಳು ಎದ್ದು ‘ಪುರೋಹಿತಶಾಹಿ’ ಎಂದು ಊಳಿಡುತ್ತಿದೆ.

ಅಂದು ಸೋಮಯಾಗದಲ್ಲಿ ಆಗಿದ್ದಿಷ್ಟೇ – ಮತ್ತೂರು ಎಂಬುದು ಪುಟ್ಟ ಊರಾದರೂ ಸಂಸ್ಕೃತ ಮಾತಾಡುವ ಊರು. ಅಲ್ಲಿ ನೂರಕ್ಕೆ ನೂರು ಶೇಕಡ ಸಂಸ್ಕೃತ ಮಾತಾಡುವವರೇ. ಆ ಊರಿನಲ್ಲಿರುವವರು ಶುದ್ಧ ಸಸ್ಯಾಹಾರಿಗಳು. ಇವರು ಓಡಾಡುವ ರಸ್ತೆಯಲ್ಲಿ ಮೊಟ್ಟೆ ಒಡೆದು ಬಿದ್ದಿದ್ದರೂ ನೇರವಾಗಿ ಮನೆಗೆ ಬಂದು ಸ್ನಾನ ಮಾಡುವಂಥವರು.

ಇಂಥ ಬ್ರಾಹ್ಮಣರ ಊರಲ್ಲಿ ಮಾಂಸ ಮಾಡುತ್ತಾರಾ ಎಂದು ನಾನೂ ಒಂದು ಕ್ಷಣ ದಂಗಾದೆ. ಆದರೆ, ವೇದ, ಶಾಸ್ತ್ರ ಪುರಾಣಗಳ ಮೇಲೆ ಮತ್ತೂರು ಜನ ನಂಬಿಕೆ ಇಟ್ಟಿದ್ದರಿಂದ ಸೋಮಯಾಗ ಹೇಗೆ ಮಾಡುವುದು ಎಂದೆಲ್ಲ ಹುಡುಕಿ ನೋಡಿದೆ. ಪುರಾಣಗಳ ಉದಾಹರಣೆ ಬೇಕೆಂದರೆ ಮಹಾಭಾರತದಲ್ಲೂ ಸೋಮಯಾಗದ ಉಲ್ಲೇಖವಿದೆ. ಆದರೆ ಒಂದು ಕಡೆಯೂ ಕುರಿ, ಮೇಕೆ ಮತ್ತೊಂದನ್ನೋ ಬಲಿ ಕೊಡುವ ಯಾವುದೇ ಉಲ್ಲೇಖವೇ ಇಲ್ಲ. ಆದರೆ ಇಲ್ಲೊಂದು ಗಮನಿಸಬೇಕಾದ ಸಂಗತಿಯಿದೆ. ಅದೇನೆಂದರೆ, ಸೋಮಯಾಗದ ಸಮಯದಲ್ಲಿ ಮೇಕೆ ಹಾಲು ಮತ್ತು ಹಸುವಿನ ಹಾಲು ಅಲ್ಲೇ ಕರೆದು ಹೋಮಕ್ಕೆ ಹಾಕಲಾಗುತ್ತದೆ.

ಮೊನ್ನೆ ಮ್ತೂರಿನಲ್ಲೂ ಹೀಗೆ ಮೇಕೆ ಮತ್ತು ಹಸುವನ್ನು ತಂದು ಕಟ್ಟಿ ಹಾಕಿ. ಆಗಾಗ ಹಾಲು ಕರೆದು ಅಲ್ಲೇ ಇದ್ದ ಹೋಮಕುಂಡಕ್ಕೆೆ ಹಾಕತ್ತಿದ್ದರು. ಬೆಂಕಿ ಜೋರಾಗಿ ಹೊತ್ತಿ ಉರಿಯುವ ಹೋಮಕುಂಡಕ್ಕೆ ಕೈ ಇಂದ ಆಹುತಿ ನೀಡಲಾಗುವುದಿಲ್ಲ ಎಂದು ಸೃಕ್ ಸ್ರುವ. ಬಳಸುತ್ತಿದ್ದರು. ಸೃಕ್ ಸ್ರುವ ಎಂದರೆ ಯಾವುದೋ ಹೆಂಡದ ಹೆಸರು ಎಂದು ರೊಚ್ಚಿಗೇಳುವ ಪತ್ರಕರ್ತರಿಗೆ ಅರ್ಥವಾಗುವ ಹಾಗೆ ಹೇಳುವುದಾರೆ, ಸೃಕ್ ಸ್ರುವ ಎಂದರೆ ಮರದ ಚಮಚ. ಸೃಕ್ ಎಂದರೆ ದೊಡ್ಡ ಚಮಚ, ಸ್ರುವ ಎಂದರೆ ಸಣ್ಣ ಚಮಚ. ಅದರಲ್ಲಿ, ಹಾಲು, ತುಪ್ಪ ಇತ್ಯಾದಿಗಳನ್ನು ತಟ್ಟೆಯಿಂದ ತೆಗೆದುಕೊಂಡು ಹೋಮಕ್ಕೆ ಹಾಕುತ್ತಾರೆ. ಕೆಲ ಮಾಧ್ಯಮಗಳು ತೋರಿಸುವ ಫೋಟೋದಲ್ಲಿರುವುದು ದೊಡ್ಡ ಚಮಚ. ಹಾಲು ತುಪ್ಪ ಎಲ್ಲ ಒಂದರಲ್ಲೇ ಬೆಂಕಿಗೆ ಸುರಿಯುತ್ತಿದ್ದರಿಂದ ಅದು ಕೆಂಪಾಗಿತ್ತು. ಇದು ಸಹಜ. ಈ ವಿಚಾರ ಎಂಥ ದಡ್ಡನಿಗೂ ಅರ್ಥವಾಗುತ್ತದೆ. ಅದಕ್ಕೆ ಪತ್ರಕರ್ತನೇ ಆಗಬೇಕೆಂದಿಲ್ಲ.

ಆದರೆ, ಈ ಸುದ್ದಿ ಮಾಡಿರುವ ಪತ್ರಕರ್ತರಲ್ಲಿರುವುದು ಬ್ರಾಹ್ಮಣರ ವಿರುದ್ಧದ ಧ್ವೇಷವೇ ಹೊರತು ಮತ್ತೇನೂ ಅಲ್ಲ ಎನ್ನುವುದಕ್ಕೆೆ ಸಾಕ್ಷಿಯೇ ಚಮಚವನ್ನು ನೋಡಿ ಮಾಂಸ ಎಂದು ಊಳಿಟ್ಟಿದ್ದು. ಮನಸ್ಸು ಕನ್ನಡಿ ಎನ್ನುತ್ತಾರೆ. ಒಂದು ಚಮಚ ಇವರಿಗೆ ಮಾಂಸವಾಗಿ ಕಂಡಿದೆ ಎಂದಾದರೆ ಪತ್ರಕರ್ತರ ಕ್ರೌರ್ಯ ಇದರಲ್ಲಿ ಕಾಣಬಹುದು. ಇನ್ನೂ ಮಜಾ ಎಂದರೆ ಯಾವನೋ ಒಬ್ಬ ತಲೆಯಿಲ್ಲದ ಪತ್ರಕರ್ತ ಬರೆದ ಎಂದು ಅದನ್ನು ಕೆಲ ಟಿವಿ ಚಾನೆಲ್‌ಗಳೂ ಪ್ರಸಾರ ಮಾಡುವುದಕ್ಕೆ ನಿಂತವು. ‘ಈ ಪತ್ರಕರ್ತನಿಗಿಂತ ನಾನೇನು ಕಡಿಮೆ ರಾಕ್ಷನಾ?’ ಎಂಬಂತೆ ಒಂದು ಹೆಜ್ಜೆ ಮುಂದೆ ಹೋಗಿ ಹೋಮದ ಕುಂಡದಲ್ಲಿ ಹಾಕಿದ್ದ ಮಾಂಸವನ್ನು ಬ್ರಾಹ್ಮಣರೆಲ್ಲ ಪ್ರಸಾದವಾಗಿ ಸ್ವೀಕರಿಸಿದರು ಎಂದು ಘೋಷಿಸಿಬಿಟ್ಟರು. ಒಂದೆರಡು ದಿನ ಎಲ್ಲಿ ನೋಡಿದರೂ ಬ್ರಾಹ್ಮಣರು, ಬ್ರಾಹ್ಮಣರು, ಬ್ರಾಹ್ಮಣರು! ಮೂರೆಳೆ ಜನಿವಾರ ಧರಿಸಿರುವ ಬ್ರಾಹ್ಮಣ ಇವರಿಗೆಲ್ಲ ಇಷ್ಟು ಕಿರಿಕಿರಿ ಮಾಡುತ್ತಿದ್ದಾನೆಂದರೆ, ಈ ಪತ್ರಕರ್ತರಿಗೆ ಅದೆಷ್ಟು ಅಭದ್ರತೆ ಕಾಡುತ್ತಿದೆ ಎಂದು ನೀವು ಊಹಿಸಿಕೊಳ್ಳಬಹುದು.
ಇವರಿಗೆ ಬ್ರಾಹ್ಮಣರ ಬಗ್ಗೆ ಧ್ವೇಷವಿದೆ ಎಂದು ಸ್ಪಷ್ಟಪಡಿಸುವುದಕ್ಕೆ, ಮತ್ತೊಂದು ನಿದರ್ಶನ ಕೊಡುತ್ತೇನೆ ಕೇಳಿ. ಈ ಎಲ್ಲ ವೃತ್ತಾಂತ ಆದ ಮೇಲೆ ಹಲವಾರು ಪತ್ರಕರ್ತರು, ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ, ಇಲ್ಲಿ ಯಾವ ಬಲಿಯೂ ನಡೆದಿಲ್ಲ, ಯಾವ ಬ್ರಾಹ್ಮಣನ ಹೊಟ್ಟೆಯಲ್ಲೂ ಮಾಂಸವಿಲ್ಲ ಎಂದು ಮುದ್ರೆ ಒತ್ತಿದ ಮೇಲೆ, ‘ಸುದ್ದಿ ಬ್ರೇಕ್’ ಮಾಡಿದ್ದೇವೆ ಎಂದು ಕೊಚ್ಚಿಕೊಂಡ ಪತ್ರಕರ್ತರು ಮಾಂಸ ತಿಂದು ಹಲ್ಲಿಗೆ ಕಡ್ಡಿಿ ಹಾಕುತ್ತಾಾ ಬೆಂಗಳೂರಿಗೆ ಬಂದು ಮತ್ತೆೆ ಪೆನ್ನಿನ ಶಾಯಿ ಖಾಲಿ ಮಾಡಿ ಕುಳಿತಿದ್ದಾಾರೆ. ಒಂದು ಸಂಕೇತಿ ಬ್ರಾಹ್ಮಣರ ಸಮುದಾಯಕ್ಕೆ ಮಾಡಿದ ಹಾನಿಗೆ ಇವರ್ಯಾಾರಿಗೂ ಕ್ಷಮೆ ಕೇಳಬೇಕು ಎನಿಸದೇ ಇರುವುದು ಬ್ರಾಹ್ಮಣ್ಯ ವಿರೋಧದ ಮನಸ್ಥಿತಿಯನ್ನು ತೋರಿಸುತ್ತದೆ.
ಇವರ ಬ್ರಾಹ್ಮಣ ಧ್ವೇಷಿ ಪತ್ರಿಕೋದ್ಯಮಕ್ಕೆ ಮತ್ತೊಂದು ಉದಾಹರಣೆಯೂ ಇಲ್ಲೇ ಸಿಗುತ್ತದೆ. ಯಾವುದೇ ಧರ್ಮದ, ಜಾತಿಯ ವ್ಯಕತಿ ಕೆಟ್ಟ ಕೆಲಸಗಳಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಾಗ ಅವನನ್ನು ಇಂಥ ಧರ್ಮದವನು ಎಂದು ಕರೆದರೆ ಆ ಧರ್ಮದ ಇತರರಿಗೆ ಅವಮಾನವಾಗುತ್ತದೆ ಎಂದು ‘ಅನ್ಯಕೋಮಿನ ವ್ಯಕ್ತಿಯಿದ ಅತ್ಯಾಚಾರ’ ಹೀಗೆ ಬಳಸುವುದು ಸಹಜ. ಇಲ್ಲಿಯವರೆಗೂ ಯಾವುದೇ ಮುಸ್ಲಿಮ್, ಕ್ರಶ್ಚಿಯನ್ ಅಥವಾ ಹಿಂದೂ ಅಲ್ಲದ ಇನ್ಯಾವುದೇ ಧರ್ಮದವರು ತಪ್ಪಿತಸ್ಥರಾಗಿದ್ದರೆ ‘ಅನ್ಯಕೋಮು’ ಎಂಬ ಪದ ಬಳಕೆಯಾಗುತ್ತದೆ. ಆದರೆ ಹಿಂದೂವೊಬ್ಬ ಆರೋಪಿಯಾದರೂ ಸಾಕು ಹಿಂದೂ ವ್ಯಕ್ತಿಯಿಂದ ಕೊಲೆ ಇತ್ಯಾದಿಗಳು ಪತ್ರಿಕೆಯಲ್ಲಿ ರಾರಾಜಿಸುತ್ತವೆ. ಈಗ ಸಂಕೇತಿ ಬ್ರಾಹ್ಮಣರ ವಿಷಯದಲ್ಲೂ ಮೇಲ್ಜಾತಿ(ಇವರೇ ನೀಡಿರುವ ಬಿರುದು)ಯ ವ್ಯಕ್ತಿಗಳಿಂದ ಮಾಂಸ ಭಕ್ಷಣೆ ಎಂದು ಹಾಕಬಹುದಿತ್ತು. ಆದರೆ, ನೇರವಾಗಿ ಬ್ರಾಹ್ಮಣ, ಬ್ರಾಹ್ಮಣ ಎಂದು ಪ್ರಕಟಿಸುವ, ಟಿವಿಯಲ್ಲಿ ಊಳಿಡುವ ಮುಟ್ಠಾಳ ಪತ್ರಕರ್ತರಿಗೆ ಬ್ರಾಹ್ಮಣರು ಹೋಮದ ಹೊಗೆಯಿಂದಲೇ ಅಭದ್ರತೆ ಕಾಡುವಂತೆ ಮಾಡಿದ್ದಂತೂ ಸುಳ್ಳಲ್ಲ. ಇಲ್ಲೂ ಪತ್ರಕರ್ತರು ಬೆತ್ತಲಾದರು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya