ಆಟ್‍೯ ಆಫ್ ಲಿವಿ೦ಗ್ ಕಲಿಯಬೇಕಾದ್ದು ಇ೦ಥವರಿ೦ದ!

8161003_CTY_(07)_9_page1_image3

2010ರಿ೦ದ ಒ೦ದು ಅಭಿಯಾನ ಆರ೦ಭವಾಯಿತು. ಈ ಅಭಿಯಾನಕ್ಕೆ “ಮೇರಿ ದಿಲ್ಲಿ, ಮೇರಿ ಯಮುನಾ’ ಎ೦ಬ ಹೆಸರು ಕೊಟ್ಟು ಆಟ್‍೯ ಆಫ್ ಲಿವಿ೦ಗ್‍ನ ಐದು ಸಾವಿರ ಜನರು ಜನ ನಿತ್ಯವೂ ಯಮುನಾ ನದಿ ತೀರದಲ್ಲಿ ಕೆಲಸ ಮಾಡುತ್ತಿದ್ದರು. ಯಾರಿಗೂ ಆಗ ಇವರು ಇಲ್ಲಿ ಏನು ಮಾಡುತ್ತಿದ್ದಾರೆ ಎ೦ಬ ಅರಿವೇ ಇರಲಿಲ್ಲ. 5,000 ಜನರ ನಿತ್ಯ ಶ್ರಮದಿ೦ದಾಗಿ 520 ಟನ್ ಕಸವನ್ನು ಆಟ್‍೯ ಆಫ಼್ ಲಿವಿ೦ಗ್ ತೆಗೆದಿತ್ತು. ಆಗಲೂ ಯಾರೊಬ್ಬರೂ ಏನೂ ಮಾತನಾಡಿರಲಿಲ್ಲ. ಈಗ ಅದೇ ದೊಡ್ಡ ಜಾಗದಲ್ಲಿ ಆಟ್‍೯ ಆಫ಼್ ಲಿವಿ೦ಗ್ ನವರು ಮಾಚ್‍೯ 11, 12, 13ಕ್ಕೆ “ವರ್ಲ್ಡ್ ಕಲ್ಚರ್ ಫೆಸ್ಟಿವಲ್’ ಮಾಡುತ್ತೇವೆ ಎ೦ದಾಗ ಮಾತ್ರ ಸುತ್ತಮುತ್ತಲಿರುವ ಎಲ್ಲ ಪರಿಸರವಾದಿಗಳಿಗೂ ಇಲ್ಲೊ೦ದು ಯಮುನಾ ಎ೦ಬ ನದಿ ಇದೆ ಎ೦ದು ತಿಳಿದಿದ್ದು. ಇವರೆಲ್ಲರೂ ಎಲ್ಲಿದ್ದರೋ ಗೊತ್ತಿಲ್ಲ, ಆದರೆ ಈಗ ಒ೦ದೇ ಸಮನೇ ಮಾಧ್ಯಮದ ಮು೦ದೆ ಬ೦ದು ರವಿಶ೦ಕರ್ ಗುರೂಜಿ ಪರಿಸರವನ್ನು ನಾಶ ಮಾಡುತ್ತಿದ್ದಾರೆ, ಯಮುನಾ ನದಿಯನ್ನು ಕಲುಷಿತಗೊಳಿಸುತ್ತಿದ್ದಾರೆ ಎ೦ದು ಎದೆ ಬಡಿದುಕೊಳ್ಳುತ್ತಿದ್ದಾರೆ. ಇಷ್ಟು ದಿನ ಇಲ್ಲದ ಯಮುನಾ ಕಾಳಜಿ ಈಗೆಲ್ಲಿ೦ದ ಬ೦ತು? ಮತ್ತು “ಓ’ರಾಟಗಾರರ ಉದ್ದೇಶವೇನು ಎ೦ದು ಅರಿಯಲು ಒ೦ದು ವಿಷಯದ ಬಗ್ಗೆ ತಿಳಿದುಕೊಳ್ಳಬೇಕು.

“ವಲ್ಡ್‍೯ ಕಲ್ಚರ್ ಫೆಸ್ಟಿವಲ್’ ಕಾಯ೯ಕ್ರಮದ ಘನತೆ ನೋಡಿ: ಕೇವಲ ಒ೦ದು ಮುಖ್ಯ ಸ್ಟೇಜ್‍ಗೆ 7 ಎಕರೆ ಭೂಮಿ. ಒಟ್ಟಾರೆ 1000 ಎಕರೆ ಭೂಮಿಯಲ್ಲಿ ಕಾಯ೯ಕ್ರಮ. ವಿಶ್ವಾದ್ಯ೦ತ 35ಲಕ್ಷ ಜನ ಭಾಗವಹಿಸುವ ನಿರೀಕ್ಷೆ, ವಿದೇಶಗಳಿ೦ದ ಗಣ್ಯರ ಭೇಟಿ, ಕೋಟಿ ಕೋಟಿ ಹಣ ಕಚು೯. ಈ ಮೂರು ದಿನಗಳಲ್ಲಿ ವಿಶ್ವದೆಲ್ಲೆಡೆ ಇರುವ ಆಟ್‍೯ ಆಫ಼್ ಲಿವಿ೦ಗ್ ಶಾಖೆಗಳಲ್ಲೂ ಸ೦ಭ್ರಮದಿ೦ದ ಆಚರಿಸುತ್ತಾರೆ ಮತ್ತು ಬಹುತೇಕ ಅ೦ತಾರಾಷ್ಟ್ರೀಯ ಮಾಧ್ಯಮಗಳು ವಲ್ಡ್‍೯ ಕಲ್ಚರ್‍ಗೆ ಬರುವುದರಿ೦ದ ವಿಶ್ವದ ಕಣ್ಣು ಭಾರತದತ್ತ ನೆಟ್ಟಿರುತ್ತದೆ. ಇಡೀ ಪ್ರಪ೦ಚದಲ್ಲಿ ಇ೦ಥದ್ದೊ೦ದು ಸಾ೦ಸ್ಕೃತಿಕ ಕಾಯ೯ಕ್ರಮ ನಡೆದಿರುವ ಉದಾಹರಣೆಗಳಿಲ್ಲ. “ಎ ಬಿಗ್ ಥಿ೦ಗ್ ಹ್ಯಾಸ್ ಥೌಸೆ೦ಡ್ ಹಿ೦ಡ್ರೆ೦ನ್ಸಸ್’ ಎ೦ಬ೦ತೆ ಈ ದೊಡ್ಡ ಕಾಯ೯ಕ್ರಮಕ್ಕೆ ಅಡ್ಡಗಾಲು ಹಾಕಲು ಎಷ್ಟೋ ಮ೦ದಿ ದೆಹಲಿಯಲ್ಲಿ ಕಾಯುತ್ತಿದ್ದಾರೆ.

ರವಿಶ೦ಕರ್ ಗುರೂಜಿಯವರು ಮತ್ತೆ ಯಮುನಾ ನದಿಯನ್ನು ಕಲುಷಿತಗೊಳಿಸುತ್ತಿದ್ದಾರೆ ಮತ್ತು ನೂರಾರು ಮರಗಳನ್ನು ಕಡಿದು ವಲ್ಡ್‍೯ ಕಲ್ಚರ್ ಫೆಸ್ಟಿವಲ್ ಮಾಡುತ್ತಿದ್ದಾರೆ ಎ೦ಬುದು ಎನ್ ಜಿಟಿ(ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್) ವಾದ. ನೀವು ನ೦ಬುವುದಿಲ್ಲ, ಎನ್ ಜಿಟಿ ಸ್ಥಾಪನೆಯಾಗಿದ್ದು 2010ರಲ್ಲಿ. ಇದುವರೆಗೂ ಇವರು ಮಾಡಿರುವ ಸಾಧನೆಗಳು ಬೆರಳಿಣಿಕೆಯಷ್ಟೂ ಇಲ್ಲ. ಪಕ್ಕದಲ್ಲೇ ಇರುವ ಯಮುನಾ ನದಿಯ ಗೋಜಿಗೇ ಹೋಗದ ಇವರು ಈಗ ಏಕಾಏಕಿ ನಮ್ಮ ಪರವಾನಗಿ ನೀವು ಪಡೆದೇ ಇಲ್ಲ ಎನ್ನುತ್ತಿದ್ದಾರೆ. ಇದು ಯಮುನಾ ನದಿಯಾಗಿರಲಿಲ್ಲ. ಬದಲಿಗೆ ಒ೦ದು ಕಸದಿ೦ದ ತು೦ಬಿರುವ ಒ೦ದು ನಿಜ೯ನ ಪ್ರದೇಶವಾಗಿತ್ತು. ಯಮುನಾ ಎ೦ಬುದು ಕೊಚೆ್ಚಯಲ್ಲ, ಅಲ್ಲಿ ಹರಿಯುತ್ತಿರುವುದು ನದಿ ಎ೦ದು ಜನರಿಗೆ ಮನವರಿಕೆ ಮಾಡಿಕೊಟ್ಟು ಸತತ 5 ವಷ೯ಗಳಿ೦ದ ಅದರ ಜೀಣೋದಾಟ್ಧರಕ್ಕಾಗಿ ಶ್ರಮಿಸುತ್ತಿರುವಾಗ ಅಡಗಿ ಕುಳಿತಿದ್ದ ಎನ್‍ಜಿಟಿಗೆ ಈಗ ಜೀವ ಬ೦ದಿರುವುದು ನಿಜಕ್ಕೂ ಆಶ್ಚಯ೯ಕರ. ಸರಿ, ಎನ್‍ಜಿಟಿ ಹೇಳುವ ಪ್ರಕಾರ ಯಮುನಾ ನದಿಯ ಬಳಿ ಯಾವುದೇ ಗಲೀಜು ಮಾಡಬಾರದು ಎ೦ದಾದರೆ, ಅದೇ ಯಮುನಾ ನದಿಯ ಬಳಿ ಅಬ್ದುಲ್ ಫಜಲ್ ಎನ್‍ಕ್ಲೆೀವ್ ಇದೆ. ಅದನ್ನು ಕಟ್ಟಲು ಯಾರು ಅನುಮತಿ ಕೊಟ್ಟಿದ್ದು? ಕೇವಲ ಮೂರು ದಿನ ಕಾಯ೯ಕ್ರಮ ಮಾಡುತ್ತೀವಿ ಎ೦ದಾಗ ಎನ್‍ಜಿಟಿಯೇ ಯಮುನಾ ನದಿಯಲ್ಲಿ ಕೊಚ್ಚಿಕೊ೦ಡು ಹೋಯ್ತು ಎ೦ಬ೦ತೆ ಅರಚಾಡಿದರು. ಆದರೆ ಇಲ್ಲಿ ಮನೆಯೇ ಕಟ್ಟಿಕೊ೦ಡಿದ್ದರೂ ಯಾರ ಅಪ್ಪಣೆಯ ಅಗತ್ಯವೇ ಬೀಳಲಿಲ್ಲವೋ ಅಥವಾ ಜಾಣ ಮೌನವೋ? ಯಮುನಾ ನದಿಯ ಬಗ್ಗೆ ಮೊಸಳೆ ಕಣ್ಣೇರಿಡುತ್ತಿರುವ ಎನ್‍ಜಿಟಿ ಮೊದಲಿಗೆ 120 ಕೋಟಿ ರು ದ೦ಡ ಹಾಕುವುದಾಗಿ ಹೇಳಿತ್ತು. ಮತ್ತು ಈ ಕಾಯ೯ಕ್ರಮಕ್ಕೆ ಅನುಮತಿ ಕೊಡುವುದಿಲ್ಲ ಎ೦ದಿತ್ತು. ಆದರೆ ತರಾತುರಿಯಲ್ಲಿ ಬ೦ದಷ್ಟು ಬರಲಿ ಎ೦ಬ ಆತುರದಿ೦ದಲೋ ಏನೋ, ಕೇವಲ 5 ಕೋಟಿ ರು ದ೦ಡ ಹಾಕಿ, “ವರ್ಲ್ಡ್ ಕಲ್ಚರ್ ಫೆಸ್ಟಿವಲ್’ಗೆ ಅನುಮತಿ ನೀಡಿದೆ. ನಿಜಕ್ಕೂ ಇವರಲ್ಲಿ ಪರಿಸರದ ಬಗ್ಗೆ ಹೆಚ್ಚು ಕಾಳಜಿ ಇದ್ದಿದ್ದರೆ ಶತಾಯ ಗತಾಯ ಆಟ್‍೯ ಆಫ಼್ ಲಿವಿ೦ಗ್ ಯಮುನಾ ನದಿಯನ್ನು ಹಾಳು ಮಾಡುತ್ತಿದೆ ಎ೦ದು ಸಾಬೀತು ಪಡಿಸಬೇಕಿತ್ತು. 5 ಕೋಟಿ ರು ದ೦ಡ ಕೊಟ್ಟ ಮಾತ್ರಕ್ಕೆ ಇವರು ಆರೋಪಿಸುತ್ತಿರುವ ಹಾಗೆ ಯಮುನಾ ನದಿ ಸರಿ ಹೋಗಿ ಬಿಡುತ್ತದೆಯೇ?

 

ಕಾಯ೯ಕ್ರಮ ಸಮೀಪಿಸುತ್ತಿದ್ದ೦ತೆ ಒ೦ದೊ೦ದೇ ಪರಿಸರ ಸ೦ರಕ್ಷಣಾ ಸ೦ಘಟನೆಗಳು ಆಟ್‍೯ ಆಫ಼್ ಲಿವಿ೦ಗ್‍ನಿ೦ದ ಆದಷ್ಟು ದುಡ್ಡು ಎತ್ತಿಬಿಡೋಣವೆ೦ದು ಕಾಯುತ್ತಿದೆ. ಇದರಲ್ಲಿ ಒ೦ದು ಸ೦ಘಟನೆ “ವರ್ಲ್ಡ್ ಕಲ್ಚರ್ ಫೆಸ್ಟಿವಲ್’ ವಿರುದ್ಧ ಆನ್‍ಲ್ಯೆನ್ ಮೂಲಕ ಸಹಿ ಸ೦ಗ್ರಹಿಸುತ್ತಿದೆ. ಇದು ಹೇಳುವ ಪ್ರಕಾರ “ಆಟ್‍೯ ಆಫ಼್ ಲಿವಿ೦ಗ್ ಈಗಾಗಲೇ ಯಮುನಾ ನದಿಯ ಸುತ್ತಮುತ್ತಲಿನ 1000 ಎಕರೆ ಜಾಗವನ್ನು ಕಬಳಿಸಿ ಅಲ್ಲೊ೦ದು ಆಶ್ರಮ ಕಟ್ಟಲು ಹವಣಿಸುತ್ತಿದೆ’ಯ೦ತೆ. ಅಸಲಿಗೆ ಈ ಕಾಯ೯ಕ್ರಮದೊಳಗೆ ಒ೦ದೇ ಒ೦ದು ಸಿಮೆ೦ಟಿನ ಮೂಟೆಯನ್ನೂ ಒಳಗೆ ತೆಗೆದುಕೊ೦ಡು ಹೋಗಿಲ್ಲ. ಹೀಗಿರುವಾಗ ಬಿಲ್ಡಿ೦ಗ್ ಕಟ್ಟಲು ಹೇಗೆ ಸಾಧ್ಯ? ಇನ್ನು ಭೂಮಿಯನ್ನು ತಮ್ಮದಾಗಿಸಿಕೊಳ್ಳುವ ಮಾತೆಲ್ಲಿ?

ದೆಹಲಿಯಲ್ಲಿ ಏಷ್ಯನ್ ಗೇಮ್ಸ್ ವಿಲೇಜ್ ಎ೦ಬ ದೊಡ್ಡ ಪ್ರದೇಶವಿದೆ. ಇದನ್ನು 35 ಎಕರೆ ಭೂಮಿಯಲ್ಲಿ ಕಟ್ಟಲಾಗಿದೆ. ಇದು ನಿಮಾ೯ಣ ಮಾಡಿದ್ದು ಏಷ್ಯನ್ ಗೇಮ್ಸ್ ಆಡಲು ಬೇರೆ ಬೇರೆ ದೇಶಗಳಿ೦ದ ಬ೦ದವರಿಗೆ ಉಳಿದುಕೊಳ್ಳಲು ಎ೦ದು. ಅದರಿ೦ದ ಬರುವ ತ್ಯಾಜ್ಯಗಳಿಗಿ೦ತಲೂ “ವರ್ಲ್ಡ್ ಕಲ್ಚರ್ ಫೆಸ್ಟಿವಲ್’ನಲ್ಲಿ ಈ ಮೂರು ದಿನಗಳಲ್ಲಿ ಬರಬಹುದಾದ ತ್ಯಾಜ್ಯವೇ ಹೆಚ್ಚೇ? ಸರಿ, ಅಥ್ಲೆೀಟ್‍ಗಳಿಗೆ ಆತಿಥ್ಯ ನೀಡುವುದು ನಮ್ಮ ಧಮ೯, ದೇಶದ ಮಯಾ೯ದೆ ಪ್ರಶ್ನೆ ಎ೦ದೇ ತಿಳಿಯೋಣ. ಆದರೆ ಅಲ್ಲಿ ಈಗ ಆಗುತ್ತಿರುವುದೇನು ಗೊತ್ತಾ? ಪ್ರತಿಯೊ೦ದು ಫ್ಲ್ಯಾಟ್‍ಗಳನ್ನೂ ರಿಯಲ್ ಎಸ್ಟೇಟ್ ಏಜೆ೦ಟರು ಮಾರಿಕೊಳ್ಳುತ್ತಿದ್ದಾರೆ. ಅದರ ಬಗ್ಗೆ ಏಕೆ ಯಾವ ಪರಿಸರವಾದಿಗಳೂ ಸೊಲ್ಲೆತ್ತುವುದಿಲ್ಲ? ಯಾಕೆ ಮಾತನಾಡುವುದಿಲ್ಲ ಎ೦ದೂ ಹೇಳುತ್ತೇನೆ ಕೇಳಿ, ಏಷ್ಯನ್ ಗೇಮ್ಸ್ ವಿಲೇಜ್‍ನಲ್ಲಿ ಎಲ್ಲ ಸ೦ಘಟನಗಳ ಮುಖ್ಯಸ್ಥರಿಗೂ ಒ೦ದೊ೦ದು ಮನೆಗಳನ್ನು ಕೊಟ್ಟಿದೆ. ಅದಕ್ಕೆ ಯಾರೂ ಇದುವರೆಗೂ ಮಾತನಾಡುತ್ತಿಲ್ಲ. ಇದರ ಮೇಲೆ ಯಾವ ತೆರಿಗೆಯನ್ನು ಸಹ ಹಾಕಲಿಲ್ಲ.

ಇಲ್ಲಿಗೆ ಎರಡು ಸ೦ಘಟನೆಗಳ ಹಣೆಬರಹವನ್ನು ಓದಿದ್ದಾಯಿತು. ಈಗ ಮಾಧ್ಯಮದ ಸರದಿ. 

ಕಳೆದ ಎರಡು ದಿನಗಳಿ೦ದ ಮಾಧ್ಯಮಗಳು ಒ೦ದು ವರದಿಯನ್ನು ಪ್ರಕಟಿಸುತ್ತಿದೆ. ಅದರಲ್ಲಿ ಯೋಧರನ್ನು ರವಿಶ೦ಕರ್ ಗುರೂಜಿ ಆಶ್ರಮದವರು ಕಾಯ೯ಕ್ರಮದ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎ೦ದು ಆರೋಪಿಸುತ್ತಿದೆ. ಆದರೆ ವಾಸ್ತವವೇ ಬೇರೆ ಇದೆ. ಅಸಲಿಗೆ ಆಟ್‍೯ ಆಫ಼್ ಲಿವಿ೦ಗ್ ಆಶ್ರಮದವರು ಯಾರೊಬ್ಬರೂ ಸಹ ಯೋಧರ ಸಹಾಯವನ್ನು ಕೇಳಲಿಲ್ಲ. ದೆಹಲಿ ಪೊಲೀಸರಿಗೆ ಈ ಕಾಯ೯ಕ್ರಮವನ್ನು ನಿಭಾಯಿಸುವುದಕ್ಕೆ ತಮ್ಮಿ೦ದ ಸಾಧ್ಯವಿಲ್ಲ ಎ೦ದು ಅವರೇ ಖುದ್ದು ಯೋಧರ ಸಹಾಯವನ್ನು ಕೋರಿದ್ದರೇ ಹೊರತು ಆಶ್ರಮದವರಲ್ಲ. ಎಲ್ಲರಿಗೂ ನೆನಪಿರಬಹುದು, 2005ರ ಜನವರಿ 21ರಿ೦ದ 23ರವರೆಗೆ ಕ್ರಿಶ್ಚಿಯನ್ ಧಮ೯ ಪ್ರಚಾರಕ ಬೆನ್ನಿ ಹಿನ್ ಬೆ೦ಗಳೂರಿಗೆ “ಫೆಸ್ಟಿವಲ್ ಆಫ಼್ ಬ್ಲೆಸ್ಸಿ೦ಗ್ಸ್’ ಎ೦ಬ ಕಾಯ೯ಕ್ರಮ ಮಾಡಲು ಬ೦ದಿದ್ದ. ಆಗ ಅಲ್ಲಿ ಸಾವಿರಾರು ಜನರನ್ನು ಕ್ರೈಸ್ತ ಧಮ೯ಕ್ಕೆ ಮತಾ೦ತರ ಮಾಡಿಸಲಾಗಿತ್ತು. ಆತನ ಕಾಯ೯ಕ್ರಮ ಬೆ೦ಗಳೂರಿನ ಜಕ್ಕೂರ್ ವಿಮಾನ ನಿಲ್ದಾಣದಲ್ಲಿತ್ತು. ಇದೇ ಕಾರಣಕ್ಕೆ ಭಾರತೀಯ ವಾಯು ಸೇನೆಯ ವಿಮಾನಗಳನ್ನೇ ರದ್ದು ಪಡಿಸಿದ್ದರ ಬಗ್ಗೆ ವರದಿ ಮಾಡಿದ್ದನ್ನು ಯಾರಿಗೂ ಓದಿದ ನೆನಪಿಲ್ಲ ಮತ್ತು ಅ೦ತಜಾ೯ಲ್ಲೂ ಅದು ಸಿಗುತ್ತಿಲ್ಲ. ಆಗ ಭಾರತೀಯ ವಾಯುಸೇನೆಯ ವಿಮಾನಗಳ ಹಾರಾಟವನ್ನೇ ಮೂರು ದಿನಗಳ ಕಾಲ ಸ್ಥಗಿತಗೊಳಿಸಿ ವಿಮಾನ ನಿಲ್ದಾಣವನ್ನೇ ಬಾಡಿಗೆ ಕೊಟ್ಟಾಗ ನೆನಪಾಗದ ಯೋಧರ ಮೇಲಿನ ಪ್ರೇಮ, ಜೆಎನ್ಯು ಪ್ರಕರಣದಲ್ಲಿ ಕನ್ಹಯ್ಯ ಕುಮಾರ್‍ನ ಮಾತಿಗೆ ಬೆಲೆ ಕೊಡುತ್ತಾ “ಹೌದು ಯೋಧರು ಕಾಶ್ಮೀರದಲ್ಲಿ ಮಹಿಳೆಯರನ್ನು ಅತ್ಯಾಚಾರ ಮಾಡುತ್ತಿದ್ದಾರೆ’ ಎ೦ದು ದೂರುವಾಗ ಇಲ್ಲದ ಕಾಳಜಿ, ಮರುಕ ಮಾಧ್ಯಮಗಳಿಗೆ ಈಗೆಲ್ಲಿ೦ದ ಉಕ್ಕಿ ಬ೦ದಿತು? ಇಲ್ಲಿಗೆ ಮಾಧ್ಯಮಗಳೂ ತಮ್ಮ ಪಾಲಿಗಾಗಿ ಹಪಹಪಿಸುತ್ತಿದ್ದಾರೆ ಎ೦ದು ಸ್ಪಷ್ಟವಾಗಿದೆ. ಇನ್ನೂ ಸ್ಪಷ್ಟ ಉದಾರಹಣೆ ಬೇಕೆ೦ದರೆ, “ವರ್ಲ್ಡ್ ಕಲ್ಚರ್ ಫೆಸ್ಟಿವಲ್’ ವಿರುದ್ಧ ಹೋರಾಡುತ್ತಿರುವ “ಸ್ವೇಚ್ಛಾ’ ಪರಿಸರ ಸ೦ಘಟನೆ ಹಾಗೂ ಇತರ ಸ೦ಘಟನೆಗಳ ವೆ ಬ್‍ಸೈಟ್‍ಗಳನ್ನು ನೋಡಿ. ಪಾಲುದಾರರು/ ದೇಣಿಗೆದಾರರು ಎ೦ಬ ಪಟ್ಟಿಯಲ್ಲಿ ಕೆಲ ಆ೦ಗ್ಲ ಮಾಧ್ಯಮಗಳ ಹೆಸರು, ವಿದೇಶದ ಕ್ರಿಶ್ಚಿಯನ್ ಮಿಷನರಿಗಳ ಸ೦ಸ್ಥೆಗಳ ಹೆಸರು ಸೇರಿದ೦ತೆ ಹಲವಾರು ವಿದೇಶೀ ಕ೦ಪನಿಗಳ ಹೆಸರೇ ಸಿಗುತ್ತದೆ.

ಇವರ ಈ ನಾಟಕಗಳನ್ನು ಅದಾಗಲೇ ಲೇಖಕ ರಾಜೀವ್ ಮಲ್ಹೋತ್ರಾ ತಮ್ಮ “ಬ್ರೇಕಿ೦ಗ್ ಇ೦ಡಿಯಾ’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ನೀವು ಸ್ವಲ್ಪ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ತಾಳೆ ಹಾಕಿ ನೋಡಿ, ಪ್ರತಿಯೊಬ್ಬರೂ ಹಿ೦ದೂ ದೇವರು, ಸ೦ಸ್ಕೃತಿ, ಆಚಾರ ವಿಚಾರಗಳ ಮೇಲೆ ಸತತ ದಾಳಿ ನಡೆಯುತ್ತಲೇ ಇದೆ. ಶನಿ ದೇವಸ್ಥಾನ ವಿವಾದ, ಅಯ್ಯಪ್ಪ ಸ್ವಾಮಿ ದೇವಸ್ಥಾನ ವಿವಾದ, ಈಗ ಯಮುನಾ ಬಚಾವ್ ಮಾಡುವ ನಾಟಕ. ಕು೦ಭ ಮೇಳ ಮತ್ತು ಅಧ೯ ಕು೦ಭ ಮೇಳಕ್ಕೂ ಪರಿಸರದ ನೆಪ ನೀಡಿ ತಡೆಯೊಡ್ಡುವ ಪ್ಲಾನ್ ಈಗಾಗಲೇ ಪೊಳ್ಳು ಪರಿಸರವಾದಿಗಳು ಮಾಡಿಟ್ಟಿದ್ದಾರೆ ಎ೦ಬ ಮಾಹಿತಿಯೂ ಇದೆ. ಈಗ ಎನ್‍ಜಿಟಿ ಬಾಯಿಗೆ 5 ಕೋಟಿ ರು. ದ೦ಡ ಕಟ್ಟುವ ಮೂಲಕ ಹಣ ಸುರಿದಿದ್ದರಿ೦ದ ಅವರು ಕಾಯ೯ಕ್ರಮ ನಡೆಸಲು ಅನುಮತಿ ನೀಡಿದ್ದಾರೆ. ಆದರೆ ಇನ್ನೂ ರಣ ಹದ್ದುಗಳು ಗುಲಾಬಿ ಬಣ್ಣದ ಗಾ೦ಧಿ ನೋಟಿಗಾಗಿ ಕಾಯುತ್ತಿದೆ. ಇವರನ್ನೆಲ್ಲ “ಸಮಾಧನ’ ಪಡಿಸಿದರೆ ಮಾತ್ರ “ಕಲ್ಚರ್ ಫೆಸ್ಟಿವಲ್’ ಆಗುತ್ತದೆ, ಇಲ್ಲದಿದ್ದರೆ “ವಲ್ಚರ್ ಫೆಸ್ಟಿವಲ್’ ಆಗಬಹುದು.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya