ನಮ್ಮ ಯೋಧರು ಅತ್ಯಾಚಾರಿಗಳೇ?

630Untitled-2

ಇವರೆಲ್ಲ ಹುಟ್ಟಿ ದೇಶಕ್ಕೆ ನಯಾ ಪೈಸ ಲಾಭವಾಗದಿದ್ದರೂ, ಮನೆಯ ಬೀಗ ಗಟ್ಟಿಯಾಗಿ ಹಾಕಿಕೊಂಡು ಕಾಫಿ ಹೀರುತ್ತಾ ಭಾರತೀಯ ಯೋಧರು ಅತ್ಯಾಚಾರ ಮಾಡುತ್ತಾರೆ ಎನ್ನುವ ನಪುಂಸಕರಿಗೆ ನಾಚಿಕೆಯಾಗಬೇಕು! ಯೋಧರ ಬಗ್ಗೆ ಮಾತನಾಡಲು ಇವರೆಷ್ಟು ಅರ್ಹರು?

ನಮ್ಮ ಯೋಧರು ಅತ್ಯಾಚಾರಿಗಳೇ?

ತಮ್ಮ ಬುಡಕ್ಕೆ ಬೆಂಕಿ ಬಿದ್ದರೆ ಭಾರತೀಯ ಯೋಧರ ಮೇಲೆ ತಮ್ಮ ತೆವಲಿಗಾಗಿ ಯಾವ ಆರೋಪ ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯಿದು. 2004ರಲ್ಲಿ ಮಣಿಪುರದಲ್ಲಿ ಒಂದು ಪ್ರತಿಭಟನೆ ನಡೆಯುತ್ತದೆ. ಅದರಲ್ಲಿ ಕೆಲ ಮಹಿಳೆಯರು ಸಂಪೂರ್ಣ ನಗ್ನರಾಗಿ ‘”Indian Army Rape Us” (ಭಾರತೀಯ ಸೈನಿಕರೇ ನಮ್ಮನ್ನು ಅತ್ಯಾಚಾರ ಮಾಡಿ) ಎಂದು ಬರೆದಿರುವ ಬಟ್ಟೆಯನ್ನು ಗುಪ್ತಾಂಗಗಳಿಗೆ ಅಡ್ಡಲಾಗಿಟ್ಟುಕೊಂಡು ಬೀದಿಗಿಳಿದು ಹೋರಾಟ ಮಾಡಿದ್ದರು. ಇದು ಭಾರತೀಯ ಯೋಧರ ವಿರುದ್ಧ ಹೋರಾಟ! ದಶಕದ ಹಿಂದಿನ ವಿಷಯ ಈಗೇಕೆ ಎಂದರೆ, ಮೊನ್ನೆ ಟೈಮ್ಸ್ ನೌ ವಾಹಿನಿಯಲ್ಲಿ ಅರ್ನಬ್ ಗೋಸ್ವಾಮಿ ನಡೆಸಿಕೊಡುವ ಕಾರ‍್ಕ್ರಮದಲ್ಲಿ, ರಾಷ್ಟ್ರಧ್ವಜ ಹಾರಿಸುವುದರ ವಿಷಯದ ಬಗ್ಗೆ ಚರ್ಚೆಗೆ ಬಂದಿದ್ದ ನಿವೃತ್ತ ಯೋಧ ಜನರಲ್ ಬಕ್ಷಿಯವರು, ಧ್ವಜ ಹಾರಿಸುವುದನ್ನೂ ವಿರೋಧಿಸಿದ್ದರಿಂದ ಬಹಳ ಮನನೊಂದು ಕ್ಯಾಮೆರಾ ಮುಂದೆಯೇ ಅತ್ತುಬಿಟ್ಟರು. ತಕ್ಷಣವೇ ಸಚಿವೆ ಸ್ಮೃತಿ ಇರಾನಿಯವರು ಟೈಮ್ಸ್ ನೌಗೆ ಫೋನಾಯಿಸಿ, ಸಮಾಧಾನ ಮಾಡಿದರು. ನಮ್ಮನ್ನು ಕಾಯುವ ಯೋಧನೊಬ್ಬ ಕಣ್ಣೀರು ಹಾಕುತ್ತಿದ್ದಾನೆ ಎಂದರೆ ಯಾರಿಗೆ ತಾನೆ ರಕ್ತ ಕುದಿಯುವುದಿಲ್ಲ? ಜನರೂ ರೊಚ್ಚಿಗೆದ್ದು ಯೋಧರಿಗೆ ನಮನಗಳನ್ನು ಸಲ್ಲಿಸುತ್ತಾ ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿತ್ತು. ಜನರಿಗೆ ಯೋಧರ ಮೇಲೆ ಏಕಾಏಕಿ ಮೂಡುತ್ತಿರುವ ಅಪಾರ ಭಕ್ತಿ ಮತ್ತು ಅಭಿಮಾನವನ್ನು ತಡೆಯುವ ದರ್ದು ಕೆಲವರಿಗೆ ಇತ್ತು. ಅದಕ್ಕೆ ಬಾಯಿಗೆ ಬಂದಂತೆ ಮಾತನಾಡಿದರು. ಯಾವನೋ ಒಬ್ಬ ಫೋಸ್ಬುಕ್ಕಲ್ಲಿ ಗೀಚಿಕೊಂಡರೆ ಅದನ್ನೇ ಎತ್ತಿಕೊಂಡು ಈಗ ಮತ್ತೊಮ್ಮೆ 2004ರ ವಿಷಯವನ್ನು ಮಾಧ್ಯಮಗಳು ಬೇಕಂತಲೇ ಕೆದಕುತ್ತಿವೆ. ಏನೋ ಇತಿಹಾಸದ ಪುಟಗಳನ್ನು ತಿರುವಿ ಹಾಕಿದ ಖುಷಿಯಲ್ಲಿದೆ. ಆದರೆ ಅಸಲಿಗೆ ಅಲ್ಲಿ ಆಗಿದ್ದೇನು?

1958 ಸೆಪ್ಟೆಂಬರ್ 11ಕ್ಕೆ ಒಂದು ಕಾಯ್ದೆ ಜಾರಿಯಾಗುತ್ತದೆ. ಆಮರ್ಡ್ ಫೋರ‍್ಸಸ್ ಸ್ಪೆಷಲ್ ಪವರ‍್ಸ್ ಆಕ್ಟ್(AFSPA). ಈ ಕಾಯ್ದೆಯಲ್ಲಿ ಏನಿದೆಯಂದರೆ ಭಾರತದ ಈಶಾನ್ಯ ಸಹೋದರಿ ರಾಜ್ಯಗಳಾದ ‘ಅರುಣಾಚಲ ಪ್ರದೇಶ, ಅಸ್ಸಾಮ್, ಮೇಘಾಲಯ, ಮಣಿಪುರ, ಮಿಜೋರಾಮ್, ನಾಗಾಲ್ಯಾಂಡ್’ ಮತ್ತು ತ್ರಿಪುರಾದಲ್ಲಿ ಮತ್ತು ಈಗ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧರಿಗೆ ಯಾರ ಮೇಲೆ ಬಹಳ ಅನುಮಾನ ಬರುತ್ತದೆಯೋ ಅವರನ್ನು ತಕ್ಷಣವೇ ಗುಂಡಿಕ್ಕಿ ಕೊಲ್ಲಬಹುದು, ವಾರೆಂಟ್ ಇಲ್ಲದೇ ಬಂಧಿಸಬಹುದು, ಯಾವುದೇ ಮನೆ, ಸ್ಥಳಗಳನ್ನಾದರೂ ಪರಿಶೀಲಿಸಬಹುದು ಇತ್ಯಾದಿ. ಇದಕ್ಕೆ ಯಾವ ಕಾನೂನು ಸಹ ಅಡ್ಡಬರುವುದಿಲ್ಲ ಮತ್ತು ಯೋಧರನ್ನು ಪ್ರಶ್ನಿಸುವಂತಿಲ್ಲ. ಇದರಿಂದ ಯೋಧರು ಪಾಕಿಸ್ತಾನ ಕಳುಹಿಸುತ್ತಿದ್ದ ಉಗ್ರಗಾಮಿಗಳನ್ನು ಅವರ ಅಡಗು ತಾಣಗಳಲ್ಲೇ ಬಹಳ ಆರಾಮವಾಗಿ ಕಂಡುಹಿಡಿದು ಎನ್‌ಕೌಂಟರ್ ಮಾಡುತ್ತಿದ್ದರು. ಕೆಲವರನ್ನು ವಿಚಾರಣೆಗೊಳಪಡಿಸಿ ದೇಶದ ವಿರುದ್ಧ ರೂಪಿಸಲ್ಪಟ್ಟ ಸಂಚುಗಳನ್ನು ವಿಫೋಲಗೊಳಿಸುತ್ತಿದ್ದರು. ಇಲ್ಲಿಂದಲೇ ಈಶಾನ್ಯ ಗಡಿ ರಾಜ್ಯಗಳಲ್ಲಿ ಆಗಾಗ ಈ (AFSPA). ಅನ್ನು ತೆಗೆದುಹಾಕಿ ಎಂದು ಪ್ರತಿಭಟನೆಗಳು ನಡೆಯುತ್ತಿದ್ದವು. ಇವರ ಉಪಟಳ ಹೆಚ್ಚಾಗಿರುವುದು ಯಾವಾಗಿನಿಂದ ಗೊತ್ತಾ? 2003ರ ಜೂನ್ 04ರಂದು ಭಾರತೀಯ ಸೇನೆ ಅರುಣಾಚಲ ಪ್ರದೇಶದಲ್ಲಿ ಮಾವೋವಾದಿಗಳನ್ನು ಗುಂಡಿಕ್ಕಿ ಕೊಂದಿತ್ತು, ಇದರ ಜತೆಗೇ ಇಬ್ಬರು ಲಷ್ಕರ್ಫೋಎಫೋತಯ್ಬಾದ ಉಗ್ರರನ್ನೂ ಹತ್ಯೆಗೈದಿತ್ತು. ಹೀಗೆ ಬೇಟೆ ಕಾರ್ಯ ಸಖತ್ ಜೋರಾಗಿಯೇ ನಡೆಯುತ್ತಿದ್ದಿದ್ದರಿಂದ ಇದು ಮೊದಲ ದೊಡ್ಡ ಹೋರಾಟಕ್ಕೆ ಕಾರಣವಾಯಿತು. 2012ರ ಮಾರ್ಚ್ 28ಕ್ಕೆ ನಮ್ಮ ಯೋಧರು ಜಮ್ಮು ಕಾಶ್ಮೀರದ ಕುಪ್ವಾರಾದಲ್ಲಿ 5 ಜನ ಮತ್ತೆ ಲಷ್ಕರ್-ಎ -ತಯ್ಬಾದ ಉಗ್ರರನ್ನು ಗುಂಡಿಕ್ಕಿ ಕೊಲ್ಲುತ್ತಾರೆ. ಇದು ಕಾಶ್ಮೀರದಲ್ಲಿ ಆಗ ಬಹಳವೇ ಸದ್ದು ಮಾಡಿತ್ತು. ಇದೇ ಭಾರತೀಯ ಸೇನೆಯಿಂದ ಮುಕ್ತಿ ಪಡೆಯಬೇಕೆಂಬ ಹೆಸರಿನಲ್ಲಿ ಸುಮಾರು ಸಣ್ಣ ಸಣ್ಣ ಉಗ್ರ ಸಂಘಟನೆಗಳು ಹುಟ್ಟಿಕೊಂಡಿದ್ದು ಆಗಲೇ. ಅವತ್ತಿಂದ ಹಲವಾರು ಬಗೆಯ ಹೋರಾಟಮಾಡುತ್ತಾ ಬಂದರೂ ಅದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರಲಿಲ್ಲ. ಆದರೆ ಈಗ ದೇಶದ್ರೋಹಿಗಳ ಎಲ್ಲಿ ಪೊಳ್ಳು ಹೋರಾಟ ಎಲ್ಲಿ ಶುರುವಾಯಿತೋ, ಜನರು ಎಲ್ಲಿ ಯೋಧರ ಬಗ್ಗೆ ಹೆಚ್ಚು ಒಲವು ತೋರಲು ನಿಂತರೋ ಮತ್ತು ಇಂಥವರಿಗೆ ಎಲ್ಲಿ ಮಾಧ್ಯಮಗಳು ಮಣೆ ಹಾಕಲು ಶುರು ಮಾಡಿಕೊಂಡವೋ ಈಗ ಅಲ್ಲಿನ ಹೋರಾಟಗಳು ಜಗಜ್ಜಾಹೀರಾಗಿವೆ.

ಆಲೋಚನೆ ಮಾಡಿ, (AFSPA). ನ ಹೊರತಾಗಿ ನೋಡಿದರೆ ಯೋಧರಿಂದಲೇ ನಮಗೆ ತೊಂದರೆ ಎಂದು ಜನರು ಕೂಗುತ್ತಿರುವುದು ಯಾವ್ಯಾವ ಪ್ರದೇಶದಲ್ಲಿ ಗೊತ್ತಾ? ಅಸ್ಸಾಮ್, ಜಮ್ಮುಕಾಶ್ಮೀರ, ತ್ರಿಪುರಾ, ಹೀಗೇ ಭಾರತದ ಗಡಿ ರಾಜ್ಯಗಳು. ಅಷ್ಟಕ್ಕೂ ಇಲ್ಲಿ ಇಡೀ ರಾಜ್ಯವೇ ಹೋರಾಡುತ್ತಾ ದೊಡ್ಡ ಆಂದೋಲನವಾಗುತ್ತಿದೆಯಾ? ಅದೂ ಇಲ್ಲ. ಹಾಗಾದರೆ ಹೋರಾಟ ಮಾಡುತ್ತಿರುವವರ ಹಿನ್ನೆಲೆ ಚೆನ್ನಾಗಿದೆಯಾ? ಅದನ್ನು ಕೇಳಲೇಬೇಡಿ. ಹೋರಾಟಕ್ಕೆ ಬರುವ 90% ಜನರ ಮೇಲೆ ದೇಶದ್ರೋಹ ಮತ್ತು ಇನ್ನಿತರ ಕ್ರಿಮಿನಲ್ ಆರೋಪವಿದೆ. ಅಂದರೆ, ಇಲ್ಲಿ ನಾವು ತಿಳಿಯಬೇಕಾದ ಎರಡು ಅಂಶಗಳಿವೆ. ಒಂದು ಫೋ ಭಾರತದ ಗಡಿ ರಾಜ್ಯಗಳಲ್ಲಿ ನಮ್ಮ ಯೋಧರು ಸ್ಪಷ್ಟವಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ. ಇದರಿಂದ ಉಗ್ರರಿಗೆ ಭಾರತದೊಳಗೆ ನುಸುಳಲು ಕಷ್ಟವಾಗುತ್ತಿದೆ. ಈ ಸಮಸ್ಯೆ ಬಗೆಹರಿಯಬೇಕೆಂದರೆ ಅವಶ್ಯವಾಗಿ ಭಾರತೀಯರ ಬೆಂಬಲ ಬೇಕೇ ಬೇಕು. ಎರಡು ಅಮಾಯಕರು ಹಾಗೂ ಪ್ರಜ್ಞಾವಂತ ಭಾರತೀಯರನ್ನು ಬಳಸಿಕೊಳ್ಳಲು ಆಗಲ್ಲ. ಅದಕ್ಕೆ ಈ ಕ್ರಿಮಿನಲ್ ಹಿನ್ನೆಲೆಯಿರುವ ಜನರಿಗೆ ಹಣ ಕೊಟ್ಟು ಅವರಿಗೆ ಹೋರಾಟಗಾರರೆಂಬ ಬಿರುದೂ ಕೊಟ್ಟು ಭಾರತೀಯ ಸೇನೆಗಿರುವ ಒಂದು ಪ್ರಬಲ ಅಧಿಕಾರ ಅಊಖPಅಅನ್ನು ಮುರಿದು ಹಾಕಲು ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ. ಇವರಿಗೆ ಹಣ ಬರುತ್ತಿದೆ ಎಂಬುದು ಕಪೋಲಕಲ್ಪಿತವಲ್ಲ. ದಾಖಲೆಯಿದೆ ಸ್ವಾಮಿ. ಒಮ್ಮೆ ವಿವೇಕ್ ಚದ್ಧಾರ ಸಂಪಾದಕತ್ವದಲ್ಲಿ ಬಿಡುಗಡೆಯಾಗಿರುವ “Armed Forces Special Powers Act The Debate”ಎಂಬ ಪುಸ್ತಕ ಓದಿದರೆ ಎಲ್ಲವೂ ತಿಳಿಯುತ್ತದೆ. ಇದರಲ್ಲಿ ಸುಮಾರು ಲೇಖಕರು AFSPAಪರಫೋವಿರೋಧ ಮಾತನಾಡಿದ್ದಾರೆ. ಅದರಲ್ಲಿ ಲೆಫಿನೆಂಟ್ ಜನರಲ್ ಸತೀಶ್ ನಾಂಬಿಯಾರ್‌ರವರು 2012ರ ಜುಲೈ 8ರಂದು ಡೈರೆಕ್ಟರ್ ಜನರಲ್ ಡಾ. ಅರವಿಂದ್ ಗುಪ್ತಾಗೆ ನೀಡಿದ ಪತ್ರದಲ್ಲಿ ಭಾರತೀಯ ಯೋಧರ ಅಊಖPಅ ನಿಷೇಧಿಸಲು ಭಾರತಕ್ಕೆ ಹವಾಲಾ ಹಣ ಸಖತ್ತಾಗಿಯೇ ಹರಿದು ಬರುತ್ತಿದೆ, ಆದಷ್ಟು ಬೇಗ ಇದರ ಬಗ್ಗೆ ಗಮನಹರಿಸಬೇಕು ಎಂದು ಬರೆದಿದ್ದಾರೆ. ಇನ್ನು ಇದು ಇಂದಿಗೂ ಎಷ್ಟು ಸತ್ಯ ಎಂದರೆ 2016ರ ಫೋಬ್ರವರಿ 25ರಂದು ಅಮೆರಿಕದ ವಾಲ್ಸ್ಟ್ರೀಟ್ ಜರ್ನಲ್ ಕೆಲ ಸಮೀಕ್ಷೆಗಳಿಂದ ಒಂದು ವರದಿ ಮಾಡಿದೆ ಫೋ ಅದರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಹಣ 2014ಫೋ2015ರಲ್ಲಿ 5 ಮಿಲಿಯನ್ ಮುಟ್ಟಿದೆ ಎಂದು ಹೇಳಿದೆ. ಅಸಲಿಗೆ ಆರ್‌ಬಿಐ ಪ್ರಕಾರ ಪಾಕಿಸ್ತಾನದಲ್ಲಿ ಕೆಲಸ ಮಾಡಲು ನೆಲಸಿರುವ ಭಾರತೀಯರೋ, ವಿಭಜನೆ ಆದ ಮೇಲೂ ಪಾಕಿಸ್ತಾನದಲ್ಲಿ ನೆಲಸಿರುವವರು ಭಾರತದಲ್ಲಿರುವ ಸಂಬಂಧಿಕರಿಗೆ ಹಣ ಕಳಿಸುವುದನ್ನು ಮತ್ತು ಇನ್ನಿತರ ಕಾನೂನು ಬದ್ಧ ವ್ಯವಹಾರಗಳನ್ನು ಗಮನಿಸಿದರೆ ವರ್ಷಕ್ಕೆ ಒಂದು ಮಿಲಿಯನ್ ಡಾಲರ್ ಹಣ ಪಾಕಿಸ್ತಾನದಿಂದ ಭಾರತದ ಬ್ಯಾಂಕ್ ಅಕೌಂಟುಗಳಿಗೆ ಬರುತ್ತವೆ. ಆದರೆ ಇದು 2014 ಮತ್ತು 2015ರಲ್ಲಿ 5 ಮಿಲಿಯನ್ ಡಾಲರ್‌ಗೆ ಬಂದು ಮುಟ್ಟಿದೆ ಎಂದರೆ ಇವರ ಈ ಹೋರಾಟಗಾರರಿಗೆ, ಬೆಂಬಲಿಗರಿಗೆ ಮತ್ತು ಅವರ ತಾಳಕ್ಕೆ ಕುಣಿಯುವ ಮಾಧ್ಯಮಗಳಿಗೆ ಏನೇನೆಲ್ಲ ಸವಲತ್ತುಗಳು ಸಿಗುತ್ತಿವೆ ಎಂದು ನೀವು ಊಹಿಸಬಹುದು.

ಆದರೆ ಮಾಧ್ಯಮಗಳಿಗೇನಾಗಿದೆ? ಕೇವಲ ಮೋದಿಯನ್ನು ದೂರುವುದಕ್ಕಾಗಿ ಶಿಲ್ಲಾಂಗ್‌ನಲ್ಲಿರುವ ಚಿಂಗ್ಲೆನ್ ಕ್ಷತ್ರಿಯಮಯುಮ್ ಎಂಬ ಯಾವನೋ ಕೆಲಸವಿಲ್ಲದ ಈಡಿಯಟ್, ಫೋಸ್ಬುಕ್ಕಲ್ಲಿ ಜನರಲ್ ಬಕ್ಷಿಯನ್ನು ಉದ್ದೇಶಿಸಿ ಇಡೀ ನಮ್ಮ ದೇಶದ ಯೋಧರ ಬಗ್ಗೆ ಪುಂಖಾನುಪುಂಖವಾಗಿ ಸ್ಟೇಟಸ್ ಕೆತ್ತಿಕೊಂಡರೆ ಅದನ್ನು ತೆಗೆದು ಪತ್ರಿಕೆಯಲ್ಲೋ, ಟಿವಿಯಲ್ಲೋ ಪ್ರಕಟಿಸುತ್ತಾರೆಂದರೆ ನಿಜಕ್ಕೂ ಮಾಧ್ಯಮಗಳು ಜನರಿಂದ ಜನರಿಗೆ ಸುದ್ದಿ ತಲುಪಿಸುವ ‘ಮಾಧ್ಯಮ’ವಾಗಿಯೇ ಇದೆಯೋ ಅಥವಾ ಭಾರತದ ತಲೆ ಹಿಡಿಯುವ ಕೆಲಸ ಮಾಡುತ್ತಾ ಅಕ್ಷರ ಹಾದರ ಮಾಡುತ್ತಿದೆಯೋ?

ನಿಮಗೆಲ್ಲ ಒಂದು ಪ್ರಶ್ನೆ ಮೂಡಬಹುದು, ನಮ್ಮ ಭವ್ಯ ಪರಂಪರೆಯ ಭಾರತದಲ್ಲಿ ಹೆಣ್ಣು ಮಕ್ಕಳು ಬೆತ್ತಲಾಗಿ ಹೋರಾಟ ಮಾಡುತ್ತಿದ್ದಾರೆಂದರೆ ಅವರು ಅದೆಷ್ಟು ನೊಂದಿರಬಹುದು? ಯಾಕೆ ಹೀಗೆ ಈ ಮಹಿಳೆಯರ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನಬಹುದು. ದಯವಿಟ್ಟು ಅಂಥ ಪ್ರಶ್ನೆ ಇಟ್ಟುಕೊಳ್ಳಲೇ ಬೇಡಿ… ಈ ರೀತಿ ಹೋರಾಟ ಮಾಡುವುದು ಈಗ ಉತ್ತರ ಭಾರತದ ಕಡೆ ಕಾಮನ್ ಆಗಿಬಿಟ್ಟಿದೆ. ಉದಾಹರಣೆಗೆ ಇತ್ತೀಚೆಗೆ ಉತ್ತರಪ್ರದೇಶದಲ್ಲಿ ದಲಿತ ಮಹಿಳೆಯರನ್ನು ಪೊಲೀಸರು ಎಲ್ಲರೆದುರು ಬಟ್ಟೆ ಬಿಚ್ಚಿದರು ಎಂದು ಸುದ್ದಿಯಾಗಿತ್ತು. ಅಸಲಿಗೆ ಅಲ್ಲಿ ಹೆಂಗಸರೇ ತಮ್ಮ ಬಟ್ಟೆಗಳನ್ನು ಹರಿದುಕೊಂಡು ನ್ಯೂಸೆನ್ಸ್ ಕ್ರಿಯೇಟ್ ಮಾಡುತ್ತಿದ್ದದ್ದು ತಡವಾಗಿ ಬಂದ ಇನ್ನೊಂದು ವೀಡಿಯೋ ಇಂದ ತಿಳಿದಿದೆ. ಆದರೆ ಇಂಥವರ ಮಾತನ್ನು ಯಾವ ಆಧಾರವೂ ಇಲ್ಲದೇ ನಂಬುವುದು ಎಷ್ಟು ಸೂಕ್ತ? ಇವರಿಗೆ ಬೇಕಾಗಿರುವುದು ಅಊಖPಅ ಕಾಯ್ದೆಯನ್ನು ನಿಷೇಧಿಸಿ ಸ್ವಚ್ಛಂದವಾಗಿ ದೇಶದ್ರೋಹಿಗಳಾಗಿರುವುದಕ್ಕೆ ಬಿಡಬೇಕು. ಯೋಧರು ಅದಕ್ಕೆ ಅಡ್ಡಿಯಾಗಿದ್ದರಿಂದ ಅವರ ಮೇಲೆ ಅತ್ಯಾಚಾರ ಆರೋಪ ಮತ್ತು ಬೆತ್ತಲೆ ನಾಟಕ.

ಯೋಧರಿಗೆ ಅತ್ಯಾಚಾರ ಮಾಡುವ ಇರಾದೆಗಳಿದ್ದಿದ್ದರೆ  ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮೇಜರ್ ಶೈತಾನ್ ಸಿಂಗ್, ಅಬ್ದುಲ್ ಹಮೀದ್, ಕ್ಯಾಪ್ಟನ್ ವಿಕ್ರಂ ಬಾತ್ರಾ, ಲೆಫಿನೆಂಟ್ ಮನೋಜ್ ಕುಮಾರ್ ಪಾಂಡೆ, ನಾಯಬ್ ಸುಬೇದಾರ್ ಬಾಣಾ ಸಿಂಗ್, ಮೇಜರ್ ಆರ್ ಪರಮೇಸ್ವರನ್, ಲೆಫಿನೆಂಟ್ ಅರುಣ್ ಖೇತ್ರಪಾಲ್, ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ, ರೈಫೋಲ್ ಮ್ಯಾನ್ ಮೊಹಮ್ಮದ್ ಮುಷ್ತಾಖ್, ಹೀಗೆ ಇನ್ನೂ ಸಾವಿರಗಟ್ಟಲೆ ಯೋಧರು ತಮ್ಮ ಪ್ರಾಣವನ್ನೇಕೆ ತ್ಯಾಗ ಮಾಡಬೇಕಿತ್ತು? ಎರಡು ನಿಮಿಷದ ಸುಖಕ್ಕೆ ತಮ್ಮ ಕುಟುಂಬವನ್ನೆಲ್ಲ ತೊರೆದು ಬರುವ ದರ್ದು ಖಂಡಿತಾ ಯೋಧರಿಗಿಲ್ಲJust Think!(ಲೇಖಕರು ಪತ್ರಕರ್ತರು)

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya