ನೆಹರೂ ಕಾಲೇಜಿನ ಉಗ್ರ ವಿದ್ಯಾರ್ಥಿಗಳು!

JNUಅಫ್ಜಲ್ , ತುಮ್ ಹಮಾರೆ ಅರ್ಮಾನೋಕೊ ಮಂಜಿಲ್ ತಕ್ ಪೌಹುಚಾವೋಗೆ(ಅಫ್ಜಲ್ ನೀನು ನಮ್ಮ ಆಸೆ, ಕನಸುಗಳನ್ನು ಗುರಿ ತಲುಪಿಸುತ್ತೀಯಾ)(ಕಾಶ್ಮೀರ ಪ್ರತ್ಯೇಕದ ಕುರಿತು)ಇಂಡಿಯಾ ಗೋ ಬ್ಯಾಕ್(ಭಾರತ ವಾಪಸ್ ಹೋಗು)ಭಾರತ್ ಬರ್ಬಾದಿ ತಕ್ ಜಂಗ್ ರಹೇಗಿ(ಭಾರತ ಸರ್ವನಾಶವಾಗುವವರೆಗೂ ನಾವು ಹೋರಾಡುತ್ತೇವೆ)ಭಾರತ್ ತೇರೆ ತುಕಡೇ ಹೋಂಗೆ ಇನ್‌ಶಾ ಅಲ್ಲಾ, ಇನ್‌ಶಾ ಅಲ್ಲಾ!(ಭಾರತವೇ ದೇವರ ಸತ್ಯವಾಗಿ ನೀನು ತುಂಡು ತುಂಡಾಗಿ ಹೋಗುತ್ತೀಯ)ಅಫ್ಜಲ್ ಹಮ್ ಶರ್ಮಿಂದಾ ಹೇ, ತೇರೆ ಕಾತಿಲ್ ಜಿಂದಾ ಹೇ(ಅಫ್ಜಲ್ ಇಂದ (ಅಫ್ಜಲ್ ನೇಣಿಗೇರಿಸಿದ್ದಕ್ಕೆ) ನಮಗೆ ನಾಚಿಕೆಯಾಗಿದೆ, ಆದರೆ ನಿನ್ನ ಹೆಸರು ಅಜರಾಮರ)ಇಂಡಿಯಾ ಮುರ್ದಾಬಾದ್ ಮಾವೋವಾದ್ ಜಿಂದಾಬಾದ್(ಭಾರತಕ್ಕೆ ಧಿಕ್ಕಾರ, ಮಾವೋವಾದಕ್ಕೆ ಜೈ)

ಇವು ಪಾಕಿಸ್ತಾನದಲ್ಲೋ ಬಾಂಗ್ಲಾದೇಶದಲ್ಲೋ ಭಾರತದ ವಿರುದ್ಧ ಕೂಗಿದ ಘೋಷಣೆಗಳಲ್ಲ. ಬದಲಿಗೆ ಭಾರತದಲ್ಲೇ, ಅದೂ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ. ಇವರು ಪಾಕಿಸ್ತಾನದವರೂ ಅಲ್ಲ. ಭಾರತೀಯರೇ ಎನ್ನುವುದು ಮತ್ತೊಂದು ಆಘಾತಕಾರಿ ಸಂಗತಿ. ಈ ಮೇಲಿನ ಮಾತುಗಳನ್ನು ಕೇಳಿದರೆ ಎಂಥವನಿಗಾದರೂ ರಕ್ತ ಕುದಿಯದೇ ಇರುವುದಿಲ್ಲ. ಇದನ್ನ ಯಾವ ದೇಶಪ್ರೇಮಿ ಒಪ್ಪುತ್ತಾನೆ ಹೇಳಿ? ಜೆಎನ್‌ಯುದಲ್ಲಿ ಕೆಲ ದಿನಗಳ ಹಿಂದೆ ‘ಸಾಂಸ್ಕೃತಿಕ ಕಾರ್ಯಕ್ರಮ’ ಎನ್ನುವ ಹೆಸರಿನಲ್ಲಿ ‘ಅಫ್ಜಲ್ ಗುರುವಿನ ನ್ಯಾಯಾಂಗ ಹತ್ಯೆಯನ್ನು ಖಂಡಿಸಿ’ ಎಂದು ಟ್ಯಾಗ್ ಲೈನ್ ನೀಡಿ ಎಲ್ಲ ವಿದ್ಯಾರ್ಥಿಗಳನ್ನೂ ಆಹ್ವಾನಿಸಿ ಹೋರಾಟ ಮಾಡಿದ್ದಾರೆ.

ಅಫ್ಜಲ್ ಗುರು ಉಗ್ರ, ಮತ್ತು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ್ದ ಎಂಬ ತೀರ್ಪು ನ್ಯಾಯಾಲಯದಿಂದ ಹೊರಬಂದ ಮೇಲೆಯೇ ಅವನನ್ನು ನೇಣಿಗೇರಿಸಲಾಗಿತ್ತು. ಒಬ್ಬ ಮನುಷ್ಯನನ್ನು ನೇಣಿಗೇರಿಸಿರುವುದನ್ನು ಪ್ರಶ್ನಿಸಿ ಇವರ ಹೋರಾಟ ಅಂದೇ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಇವರ ಜತೆಗೆ ನಾಡಿನ ಎಡಪಂಥೀಯ ವರ್ಗವೂ ಸೇರಿತ್ತು. ಆದರೆ, ಸ್ವಲ್ಪ ಹಿಂದೆ ಹೋಗೋಣ… ಕೆಲ ತಿಂಗಳುಗಳ ಹಿಂದೆ ಗೋಡ್ಸೆಯನ್ನು ಕೆಲ ಸಂಘಟನೆಗಳು ಬೆಂಬಲಿಸಿದ್ದವು. ಗೋಡ್ಸೆ ಜಯಂತಿಯನ್ನೂ ಆಚರಿಸಿತ್ತು. ಗಾಂಧಿಜಿ ಹಂತಕರನ್ನು ವೈಭವೀಕರಿಸಿದ್ದು ತಪ್ಪೇ. ಈಗ ಸದ್ಯದ ಮಟ್ಟಿಗೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಊಹಿಸಿಕೊಳ್ಳೋಣ. ಆದರೆ ಅಷ್ಟಕ್ಕೇ ಇದೇ ಜಾತ್ಯತೀತವಾದಿಗಳು ತಮಗೇನೋ ಮೈ ಮೇಲೆ ಬಂದಂತೆ ನಾಥೂರಾಮ್ ಗೋಡ್ಸೆ ಆರಾಧಕರು ಉಗ್ರಗಾಮಿಗಳು ಎಂದು ಎದೆ ಬಡಿದುಕೊಂಡರು. ಅಂಥವರನ್ನು ನೇಣಿಗೆ ಹಾಕಿ ಎಂದು ಇದೇ ಜೆಎನ್‌ಯು ವಿದ್ಯಾರ್ಥಿಗಳು ಮಾಧ್ಯಮಗಳಲ್ಲಿ ಮಾತನಾಡುತ್ತಾ ಹೋರಾಟ ಮಾಡಿದ್ದರು. ಇಲ್ಲಿ ಪ್ರಶ್ನೆ ಇರುವುದು, ಗೋಡ್ಸೆ ಆರಾಧಕರನ್ನು ಮಾತ್ರ ನೇಣಿಗೆ ಹಾಕಬಹಹುದು ಎಂದು ಹೇಳುವಾಗ ‘ಮಾನವ ಪ್ರೀತಿ’ ಬರಲಿಲ್ಲ ಆದರೆ ಉಗ್ರ ಅಫ್ಜಲ್ ಗುರುವನ್ನು ನೇಣಿಗೆ ಹಾಕುವಾಗ ಕನಿಕರ, ನೋವು, ಪ್ರೀತಿ, ವಾತ್ಸಲ್ಯ, ಮಾನವೀಯತೆ ಇತ್ಯಾದಿಗಳೆಲ್ಲ ಒಟ್ಟಿಗೇ ಉಕ್ಕುಕ್ಕಿ ಬಂತೇ? ಆಗ ಅಫ್ಜಲ್ ಗುರುವನ್ನು ನೇಣಿಗೆ ಹಾಕುವಾಗ ನೇರವಾಗಿ ಅವರಿಗೆ ಆ ಉಗ್ರನನ್ನು ಬೆಂಬಲಿಸುವ ಪೊಗರು ಇನ್ನೂ ಹುಟ್ಟಿರಲಿಲ್ಲ. ಅದಕ್ಕೆ ನಾವು ಯಾರಿಗಾದರೂ ನೇಣು ಶಿಕ್ಷೆಯನ್ನೇ ವಿರೋಧಿಸುತ್ತೇವೆ ಎಂದರು. ಆದರೆ ಈಗ ಪರಿಸ್ಥಿತಿ ಬೇರೆ ಇದೆ. ಹಣ ಎಲ್ಲೆಲ್ಲಿಂದಲೋ ಹರಿದು ಬರುತ್ತಿದೆ. ಕಾಂಗ್ರೆಸ್, ಆಮ್‌ಆದ್ಮಿ ಪಕ್ಷಗಳ ಬೆಂಬಲವಿದೆ.

ಹೀಗಾಗಿ ಆಗ ಮನುಷ್ಯನನ್ನು ನೇಣಿಗೆ ಹಾಕುವುದನ್ನು ವಿರೋಧಿಸುತ್ತಿದ್ದವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿಟ್ಟುಕೊಂಡು ದೇಶದ ವಿರುದ್ಧವೇ ಘೋಷಣೆ ಕೂಗುತ್ತಿರುವುದು. ಅಸಲಿಗೆ ಈ ಮೇಲಿನ ಘೋಷಣೆಗಳನ್ನು ಯಾರ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಪರಿಗಣಿಸಲಾಗಿದೆ? ಪಾಕಿಸ್ತಾನದ್ದೋ? ಭಾರತದ್ದೋ? ಇದೆಲ್ಲ ಒಬ್ಬ ದೇಶದ್ರೋಹಿಯಾಗುವ ಮುನ್ಸೂಚನೆಗಳು. ಜೆಎನ್‌ಯು ವಿದ್ಯಾರ್ಥಿಗಳು ವಿದ್ಯಾರ್ಥಿಗಳಾಗೇ ಇದ್ದುಕೊಂಡು ಕಾಲೇಜಿಗೆ ಬಂದ್ವಾ ಹೋದ್ವಾ ಎಂದುಕೊಂಡಿರುವುದನ್ನು ಬಿಟ್ಟು ಅಫ್ಜಲ್ ಗುರುಗೆ ನೇಣು ಶಿಕ್ಷೆ ಬೇಡ ಎಂದಾಗಲೇ ನಮಗೆಲ್ಲ ತಿಳಿಯಬೇಕಿತ್ತು ಇವರೆಲ್ಲ ಮುಂದಿನ ಉಗ್ರಗಾಮಿ ಬೆಂಬಲಿಗರು ಎಂದು. ಆದರೆ ಅದು ತಿಳಿಯಲಿಲ್ಲ. ಅಲ್ಲಿನ ಮಾಹಿತಿಯ ಪ್ರಕಾರ ಜೆಎನ್‌ಯು ಆವರಣದಲ್ಲಿ ಈಗಲೂ ದೇಶದ್ರೋಹಿ ಚಟುವಟಿಕೆಗಳ ಬಗ್ಗೆ ಮಾತನಾಡುವುದಕ್ಕೆ ಮೀಟಿಂಗ್ ಮಾಡುತ್ತಾರೆ. ಇದಕ್ಕೆ ಅವರಿಗೆ ಆರ್‌ಎಸ್‌ಎಸ್ ಪ್ರೇರಣೆಯಂತೆ. ಸಾಂಕ್‌ನಲ್ಲಿ ಮಾಡುವಂತೆ ಒಂದು ಸರ್ಕಲ್ ಮಾಡಿ ಎಲ್ಲರೂ ಮಾತನಾಡುತ್ತಾರೆ. ಯಾವ್ಯಾವ ಹೋರಾಟಗಳಿಗೆ ಮೊದಮೊದಲು ಯಾವ್ಯಾವ ಬಣ್ಣ ಬಳಿಯಬೇಕು ಎನ್ನುವ ಪ್ಲಾನ್ ಮಾಡುವುದೂ ಇಲ್ಲೇ.ಬಂಧಿತನಾಗಿರುವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಮತ್ತು ಈಗ ಟಿವಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವ್ಯಕ್ತಿ ಓಮರ್ ಖಾಲೀದ್ಗೆ ಕಲ್ಚರಲ್ ಈವೆಂಟ್ ಮಾಡುವ ಮುನ್ನ ಪಾಕ್‌ನಿಂದ ಕರೆ ಬಂದಿದೆ.

ನೀವೇ ಆಲೋಚಿಸಿ ಭಾರತದಲ್ಲಿ ಯಾವುದೋ ’ಸಾಂಸ್ಕೃತಿಕ ಕಾರ್ಯಕ್ರಮ’ಗಳಾದರೆ ಇದಕ್ಕೆ ಪಾಕಿಸ್ತಾನ ಏಕೆ ಮೂಗು ತೂರಿಸಬೇಕು. ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಸಂಬಂಧವಿರುವುದಕ್ಕೇ ಪೊಲೀಸರು ಅಫ್ಜಲ್ ಗುರುಗೂ, ಹೋರಾಟ ಮಾಡುತ್ತಿರುವ ಮಂದಿಗೂ ಏನೋ ಲಿಂಕ್ ಇದೆ ಎಂದು ಶಂಕಿಸಿ ಸ್ಪೆಷಲ್ ಸೆಲ್‌ಗೆ ಆ ಲಿಂಕ್ ಪತ್ತೆ ಹಚ್ಚಲು ಹೇಳಿzರೆ. ಪಾಕಿಸ್ತಾನದ ಬೆಂಬಲ ಇವರಿಗೆ ಹೇಗಿತ್ತು ಎಂದರೆ ಇಲ್ಲಿ ಕೂಗುತ್ತಿರುವ ಒಂದೊಂದು ಘೋಷವಾಕ್ಯಗಳೂ ಹμಜ್ ಸಯೀದ್‌ನ ಅಪ್ಪಣೆಯಂತೆಯೇ ಮಾಡಲಾಗಿದೆ. ಹೀಗೆಂದು ಹಲವಾರು ಗುಪ್ತಚರ ಮಾಹಿತಿ ಇದೆ. ಅಷ್ಟರ ಮಟ್ಟಿಗೆ ಇವರ ಲಿಂಕ್ ಸ್ಟ್ರಾಂಗ್ ಆಗಿದೆ. ಜೆಎನ್‌ಯುದಲ್ಲಿ ಓದುವುದಕ್ಕೆ ಬರುವುದಕ್ಕಿಂತ ದೇಶದ್ರೋಹಿ ಕೆಲಸಕ್ಕಾಗಿಯೇ ಬಂದು ಸೇರಿಕೊಳ್ಳುವ ಸಂಖ್ಯೆ 90ರ ದಶಕದಿಂದ ಹೆಚ್ಚಾಗಿದೆ. ಇವರ ಹಾಸ್ಟೆಲಿನಲ್ಲಿ ಯಾರು ಬೇಕಾದ್ರೂ ಉಳಿಯಬಹುದು.

ಹಾಸ್ಟೆಲ್ಲಿಗೆ ಯಾರು ಬಂದರೂ ಯಾಕೆ ಬಂದೆ? ಎಂದು ಕೇಳುವುದಿಲ್ಲ. ಒಂದು ಸಲ ಹಾಸ್ಟೆಲಿಗೆ ಬಂದರೆ ಮುಗಿಯಿತು ಅವನು ಜಪ್ಪಯ್ಯ ಅಂದ್ರೂ ಹೋಗುವುದಿಲ್ಲ. ಜತೆಗೆ ನಾಲ್ಕು ತಿಂಗಳ ಹಿಂದೆ ಜಮಾಲ್ ಎಂಬುವವನನ್ನು ಓಮರ್ ಖಾಲೀದ್ ತನ್ನ ಪಕ್ಕದ ಕೋಣೆಯಲ್ಲಿ ತಂದಿರಿಸಿಕೊಂಡಿದ್ದ. ಇವನ ಬಳಿ ಆಧಾರ್ ಕಾಡ್ ಇಲ್ಲ, ಡಿಎಲ್ ಇಲ್ಲ, ವೋಟರ್ ಐಡಿ ಇಲ್ಲ. ಕಾಲೇಜು ಐಡಿಯಂತೂ ಮೊದಲೇ ಇಲ್ಲ. ಹಾಗಾದರೆ ಇವನು ಯಾರು? ನಾಲ್ಕು ತಿಂಗಳ ಹಿಂದೆಯೇ ಬಂದಿದ್ದರೂ ವಿಶ್ವವಿದ್ಯಾಲಯ ಏನು ಮಾಡುತ್ತಿದೆ? ಈಗ ಜಮಾಲ್ ಆ ರೂಮಲ್ಲಿ ಇಲ್ಲ. ಕಲ್ಚರಲ್ ಈವೆಂಟ್ ನಂತರ ನಾಪತ್ತೆಯಾಗಿzನೆ. ಇವನನ್ನು ಪತ್ತೆಹಚ್ಚಿದರೆ ಎಲ್ಲವೂ ಹೊರ ಬರುತ್ತದೆ. ಅನಾಮಿಕನಾಗಿ ಬಂದಿರುವುದು ಇದೇ ಮೊದಲಲ್ಲ. 90ರಲ್ಲಿ ಜೆಎನ್‌ಯು ಕ್ಯಾಂಪಸ್‌ನಿಂದಲೇ ಶಹಾಬುದ್ದಿನ್ ಘಾವ್ರಿ ಎಂಬ ಉಗ್ರನನ್ನು ಪೊಲೀಸರು ಬಂಧಿಸಿಕೊಂಡು ಹೊಗಿದ್ದನ್ನು ಇಂದಿಗೂ ಅಲ್ಲಿನ ಹಳೆಯ ವಿದ್ಯಾರ್ಥಿಗಳು ಮರೆತಿಲ್ಲ. ಈ ಕಾಲೇಜು ಕೇವಲ ಉಗ್ರವಾದವಷ್ಟನ್ನೇ ಬೆಂಬಲಿಸುವುದಲ್ಲ, ಬದಲಿಗೆ ಅಹಿಂದವನ್ನೂ ಬೆಳೆಸಿಕೊಂಡು ಬಂದಿದೆ. ನೀವು 2001ರಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಒಂದು ಮಾತು ಕೇಳಿದರೆ ಸಾಕು ಎಲ್ಲವೂ ಹೊರಬರುತ್ತದೆ.

ವಿಶ್ವವಿದ್ಯಾಲಯವೋವಿಷವಿದ್ಯಾಲಯವೋ

ಯಾಕೂಬ್ ಮೆಮನ್ ನೇಣಿಗೇರಿಸಿದ್ದ ವಿಚಾರ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆಗೆ ಕಾರಣವಾದರೆ, ಅಫ್ಜಲ್ ಗುರು ಗಲ್ಲು ವಿಚಾರ ದೆಹಲಿಯ ಜೆಎನ್ಯು ನಲ್ಲಿ ಪ್ರತಿಭಟನೆಯ ಕಿಚ್ಚು ಹತ್ತಿಸಿದೆ.

ಇಲ್ಲಿ ದುರ್ಗಾ ಪೂಜೆ ಮಾಡುತ್ತೇವೆ ಎಂದರೆ ಸ್ವತಃ ಡೀನ್‌ಗಳೇ ‘ಇಲ್ಲಿ ಅಂಥದ್ದೇನಾದರೂ ಕಂಡರೆ ಹೋಮದ ಕುಂಡ ಸೇರಿದಂತೆ ನಿಮ್ಮ ದುರ್ಗೆಯ ವಿಗ್ರಹವನ್ನೂ ಮುಲಾಜಿಲ್ಲದೇ ಗೇಟಿನ ಹೊರಗೆ ಬಿಸಾಡುತ್ತೇವೆ’ ಎಂದು ಹೇಳುತ್ತಾರೆ. ಆದರೆ ‘ಶಾಂತಿಪ್ರಿಯ’ರ ಒಂದು ಹಬ್ಬವನ್ನೂ ನಿಷೇಧಿಲ್ಲ. ಹೀಗೆ ಅನೇಕ ವಿಚಾರಗಳನ್ನು ಹೇಳುತ್ತಾ ಹಳೆಯ ವಿದ್ಯಾರ್ಥಿಗಳು ಕಣ್ಣೀರಿಡುತ್ತಾರೆ. ಅಲ್ಲಿ ಇವತ್ತಿಗೂ ನಮ್ಮ ಯೋಧರನ್ನು ಉಗ್ರಗಾಮಿಗಳು ಎಂದೇ ಸೀನಿಯರ್ಗಳು ಹೇಳಿಕೊಡುತ್ತಾರೆ. ಅದಕ್ಕೆ ಸಾಕ್ಷಿಯೇ ಓಮರ್ ಖಾಲೀದ್ ಟಿವಿಯೊಂದರಲ್ಲಿ ಆಡಿದ ಮಾತು, ರಿಪೊರ್ಟ್‌ರ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ‘ನೀವು ಹೇಳೋ ಯೋಧರ ಹಣೆಬರಹವನ್ನು ನಾವು ಬಲ್ಲೆವು. ಕಾಶ್ಮೀರದಲ್ಲಿರುವ ಎಷ್ಟೋ ಹೆಣ್ಣು ಮಕ್ಕಳನ್ನು ಅವರು ದಿನ ನಿತ್ಯ ಅತ್ಯಾಚಾರ ಮಾಡುವುದು ನಮಗೆ ಗೊತ್ತು.’ ಎಂದಿದ್ದಾನೆ.

ಈ ಪುರುಷಾರ್ಥಕ್ಕೇನು ಇವರನ್ನು ನಾವು ಕಟ್ಟುವ ತೆರಿಗೆ ಹಣದಿಂದ ಸಬ್ಸಿಡಿ ಕೊಟ್ಟು ಓದಿಸುತ್ತಿರುವುದು? ನಿತ್ಯವೂ ಅತ್ಯಾಚಾರ ಮಾಡುವ ಅತ್ಯಾಚಾರಿಗಳಿಗೆ ಪಠಾಣ್‌ಕೋಟ್‌ನಲ್ಲಿ ಉಗ್ರರ ಜತೆ ಹೋರಾಡಿ ಸಾಯುವ ದರ್ದಾದರೂ ಏನಿದೆ? ಟಿವಿಯವರು ಬಂದ ಕೂಡಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಗೂಟದ ಮೇಲೆ ಕುಳಿತು ಮೈಕ್ ಮುಂದೆ ಬೊಗಳುವ ಓಮರ್ ಖಾಲೀದ್ ಅಥವಾ ಇನ್ಯಾವುದೇ ಹೇತಲಾಂಡಿಗಳನ್ನು ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಸೇವೆ ಸಲ್ಲಿಸಿದ ಸಿಯಾಚಿನ್‌ನಲ್ಲಿ ಬಿಟ್ಟು 10 ನಿಮಿಷ ಇರಿಸಿ ಯೋಧರ ಬಗ್ಗೆ ಮಾತನಾಡುವುದಕ್ಕೆ ಹೇಳಬೇಕು. ಆಗ ತಿಳಿಯುತ್ತದೆ ಯೋಧರು ಅತ್ಯಾಚಾರಿಗಳೋ? ಮತ್ತೊಂದೋ ಎಂದು. ಇನ್ನು ಈ ಲೋಕೋದ್ಧಾರಕನನ್ನು ಬಂಧಿಸಿರುವುದಕ್ಕೆ ಮತ್ತಷ್ಟು ಜನರಿಂದ ಹೋರಾಟ. ಅದರಲ್ಲಿ ’ನಮ್ಮ ವಿದ್ಯಾರ್ಥಿಗೆ ಕಿಂಚಿತ್ತಾದರೂ ತೊಂದರೆಯಾದರೆ ರಕ್ತದ ಹೊಳೆಯೇ ಹರಿದುಬಿಡುತ್ತದೆ’ ಎಂದು ಬೋರ್ಡ್ ಬರೆದು ಪ್ರತಿಭಟನೆ. ಹಿಂದೂ ಸಂಘಟನೆಗಳು ಯಾರದ್ದಾದರೂ ಮುಖಕ್ಕೆ ಮಸಿ ಬಳಿದರೆ ಅಸಹಿಷ್ಣುತೆ ಎನ್ನುವ ಮಂದಿ ಈಗೆಲ್ಲಿ ಹೋದರು? ಇದು ಅಸಹಿಷ್ಣುತೆಯಲ್ಲವೇ?

ದುರದೃಷ್ಟವಷಾತ್ ಇಂಥ ಉಗ್ರ ವಿದ್ಯಾರ್ಥಿಗಳಿಗೆ ರಾಜಕೀಯ ಬೆಂಬಲ ಬೇರೆ. ಸ್ವತಃ ರಾಹುಲ್ ಗಾಂಧಿಯೇ ಮುಂದೆ ನಿಂತು ಅಫ್ಜಲ್ ಗುರುವನ್ನು ನೇಣಿಗೇರಿಸಿದ್ದನ್ನು ಖಂಡಿಸಿ ಹೋರಾಟ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಪೆದ್ದರೋ? ಬುದ್ಧಿವಂತರೋ ತಿಳಿಯುತ್ತಿಲ್ಲ. ಅಫ್ಜಲ್ ಗುರುನನ್ನು ನೇಣಿಗೇರಿಸುವಾಗ ಇದ್ದದ್ದು ಕಾಂಗ್ರೆಸ್ ಸರಕಾರ. ಇದು ಮುಗ್ಧ ರಾಹುಲ್‌ಗೆ ಗೊತ್ತಿಲ್ಲದೆಯೇನೂ ಇಲ್ಲ. ಆದರೆ ಈಗ ಹೋರಾಟ ಮಾಡುತ್ತಿರುವುದು ಮಾತ್ರ ಅಫ್ಜಲ್ ಗುರುವನ್ನು ನೇಣಿಗೇರಿಸಬಾರದಿತ್ತು ಎಂದು. ಇದು ಅಲ್ಲಿನ ವಿದ್ಯಾರ್ಥಿಗಳಿಗೂ ಗೊತ್ತಿದ್ದು ಹೀಗೆ ರಾಹುಲ್‌ರನ್ನು ಒಳಗೆ ಬಿಟ್ಟುಕೊಂಡಿದ್ದಾರೆಂದರೆ ಕೆಲ ಒಳ ಒಪ್ಪಂದಗಳನ್ನು ನಾವು ಅರ್ಥ ಮಾಡಿಕೊಳ್ಳಲೇ ಬೇಕು. ಪಠಾಣ್‌ಕೋಟ್ ದಾಳಿ ನಡೆದಾಗ, ಮಾಲ್ಡಾ ಗಲಭೆಯಾದಾಗ, ಕರ್ನಾಟಕದಲ್ಲಿ ಪ್ರಶಾಂತ್ ಪೂಜಾರಿ ಹತ್ಯೆಯಾದಾಗ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಿಕಾರ ಎಲ್ಲಿ ಅಡಗಿ ಕುಳಿತಿದ್ದರು? ದೇಶದ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದ ಇಂಥ ಅಯೋಗ್ಯರಿಗೆ ಓದುವ ನೆಪದಲ್ಲಿ ಸಬ್ಸಿಡಿ ನಮ್ಮ ಕಾಸಿನಿಂದ ಬೇರೆ. ತಿಂಗಳಿಗೆ ರೂಮಿನ ಬಾಡಿಗೆ 11ರು. ಅದನ್ನೂ ಕಂತಿನಲ್ಲಿ ಕಟ್ಟಬಹುದಂತೆ.

ಊಟ ತಿಂಡಿಗಳೆಲ್ಲವೂ ಇವರು ತೆಗೆದುಕೊಳ್ಳುವ ಸಿಗರೇಟಿಗಿಂತಲೂ ಅಗ್ಗ. ಕಷ್ಟದ ಅರಿವಿಲ್ಲದೇ ಬೆಳೆಯುವ ಇವರಿಗೆ ಸಬ್ಸಿಡಿ ಕೊಡುತಿ ರುವುದು ಓದಿ ಉಗ್ರರಾಗುವುದಕ್ಕೆ ಎಂದು ತಿಳಿದಂತಿದೆ. ಈಗಾಗಲೇ ರತನ್ ಟಾಟಾ ತನ್ನ ಕಂಪನಿಯಲ್ಲಿ ಜೆಎನ್ಯುದಲ್ಲಿ ಓದಿದವರಿಗೆ ಕೆಲಸ ಕೊಡುವುದಿಲ್ಲ ಎಂದು ಹೇಳಿದಂತೆ, ಒಮ್ಮೆ ಈ ಸಬ್ಸಿಡಿಯನ್ನು ತೆಗೆದು, ಜೆಎನ್ಯುದಲ್ಲಿ ಅಡಗಿರುವ ಕೆಲ ಸ್ಲೀಪರ್ ಸೆಲ್‌ಗಳನ್ನು ಉಚ್ಚಾಟಿಸಿ ಜವಾಹರ್ಲಾಲ್ ನೆಹರೂ ಬದಲು ಭಗತ್ ಸಿಂಗ್ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಿದರೆ ಎಲ್ಲವೂ ಹಾದಿಗೆ ಬರುತ್ತದೆ. ಇದಕ್ಕೆ ಮೋದಿ ಸರಕಾರ ಶತಾಯ ಗತಾಯ ಪ್ರಯತ್ನಿ ಸಬೇಕಷ್ಟೇ.

Leave a Reply

Your email address will not be published. Required fields are marked *

Copyright©2021 Chiranjeevi Bhat All Rights Reserved.
Powered by Dhyeya