ನೆಹರೂರೇ ಬಹಿರಂಗವಾಗಿ ಹೇಳಿದ ಮೇಲೆ ಅಫ್ಕೋರ್ಸ್ ಗಾಂಧೀಜಿಗೂ ತಿಳಿಯಿತು. 1946 ಜನವರಿ 2ರಂದು ಗಾಂಧೀಜಿ, ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ನೇತಾಜಿ ಇನ್ನು ಸತ್ತಿಲ್ಲ, ಎಲ್ಲೋ ಒಂದು ಕಡೆ ಇನ್ನೂ ಜೀವಂತವಾಗೇ ಇದ್ದಾರೆ ಎಂದರು. ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ಹರಿದಾಡಿತ್ತು. ಇವರ ಈ ಒಂದು ಮಾತಿನಿಂದ ಮತ್ತೆ ತಲೆ ಕೆಡಿಸಿಕೊಂಡ ಬ್ರಿಟಿಷ್ ಗುಪ್ತಚರ ಸಂಸ್ಥೆ ತನಿಖೆ ಕೈಗೆತ್ತಿಕೊಂಡಿತು. ನೆಹರೂ ತಮ್ಮ ಕಾಲ ಮೇಲೆ ಕಲ್ಲು ಹೊತ್ತುಹಾಕಿಕೊಂಡದ್ದು ಇಲ್ಲೇ ನೋಡಿ. ಇತ್ತ ಸುಭಾಷ್ ಚಂದ್ರ ಬೋಸ್ ಸತ್ತಿದ್ದಾರೆ ಎಂದು ಗಟ್ಟಿಯಾಗಿ ಹೇಳದಿದ್ದರೆ ಮತ್ತೊಬ್ಬ ಯಾರೋ ಪ್ರಧಾನಿಯಾಗುವ ಸಾಧ್ಯತೆಗಳಿದ್ದವು ಅಥವಾ ತನ್ನ ಹಿಡಿತ ಸಾಧಿಸಲಾಗುತ್ತಿರಲಿಲ್ಲ. ಇನ್ನೊಂದೆಡೆ ಬಹಿರಂಗವಾಗಿ ಹೇಳಿದ್ದಕ್ಕೆ ಜನರಿಂದ ಒತ್ತಡ ಮತ್ತು ಬ್ರಿಟಿಷ್ ಗುಪ್ತಚರ ಸಂಸ್ಥೆಯ ವಿಚಾರಣೆ. ಇದೇ ವೇಳೆ ಬೋಸ್ ಬದುಕಿದ್ದಾರೆಂದು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟ ಮಹಾತ್ಮ ಗಾಂಧೀಜಿಯನ್ನೂ ಮೂಲೆಗುಂಪು ಮಾಡಿದ್ದರು ನೆಹರೂ.
ಬಟ್ ಗಾಂಧೀಜಿ ವಾಸ್ ರೈಟ್. ಅವರು ಹೇಳಿದ್ದರಲ್ಲಿ ಅಕ್ಷರಶಃ ಸತ್ಯವಿತ್ತು. ನೆಹರೂ ಬುದ್ಧಿ ಅದಾಗಲೇ ಗಾಂಧೀಜಿಗೆ ಅರ್ಥವಾಗಿತ್ತು. ನೆಹರೂ, ನೇತಾಜಿಯ ಸಾವಿನ ಬಗ್ಗೆ ಹೇಳಿಕೆ ನೀಡಿದ ಎರಡೇ ದಿನದಲ್ಲಿ ಗಾಂಧೀಜಿಯನ್ನ ಭೇಟಿ ಮಾಡಿ, ಇನ್ನು ನೇತಾಜಿಯ ಬಗ್ಗೆ ಮಾತನಾಡುವಂತಿಲ್ಲ ಎಂದಿದ್ದರು ಎಂದು ಬ್ರಿಟಿಷ್ ಗುಪ್ತಚರ ಸಂಸ್ಥೆ ದಾಖಲಿಸಿದೆ. ನಾನೇ ಬೆಳಸಿದ ನೆಹರೂ, ಈಗ ನನಗೇ ತಾಕೀತು ಮಾಡುತ್ತಾನಲ್ಲ ಎಂಬ ಬೇಜಾರೂ ಸಹ ಗಾಂಧೀಜಿಯನ್ನ ಕಾಡುತ್ತಿತ್ತು. ಇದಕ್ಕಿಂತ ಮೊದಲೇ ನೆಹರೂ ಗಾಂಧೀಜಿಯ ಬಗ್ಗೆ ಇಲ್ಲಸಲ್ಲದ್ದು ಮಾತನಾಡುತ್ತಿದ್ದರು ಎಂಬ ಮಾತುಗಳು ಗಾಂಧೀಜಿಯ ಕಿವಿಗೆ ಬಿದ್ದಿದ್ದರೂ ಸಹ ಅಷ್ಟಾಗಿ ತಲೆ ಕಡಿಸಿಕೊಂಡಿರಲಿಲ್ಲ. ನೆಹರೂ ರೀತಿ ಬಿಟ್ಟಿ ಹೆಸರು ತೆಗೆದುಕೊಳ್ಳಬೇಕೆಂಬ ಹಂಬಲದಿಂದ ಹೋರಾಟ ಮಾಡಿದವರಲ್ಲ ಗಾಂಧೀಜಿ. ಹಾಗಾಗಿ ಬೋಸ್ರ ಮೇಲೆ ಮತ್ತು ಅವರ ಹೋರಾಟದ ಮೇಲೆ ಒಂದು ಸ್ವಲ್ಪ ಮಟ್ಟಿಗೆ ಅಭಿಮಾನ ಇಟ್ಟುಕೊಂಡಿದ್ದರು. ಇದು ಗಾಂಧೀಜಿ ಭಾಷಣ ಮಾಡುವಾಗ ಎಷ್ಟೋ ಬಾರಿ ಅವರಿಂದಲೇ ವ್ಯಕ್ತವಾಗಿದೆ. “ನನಗೆ ನೇತಾಜಿಯ ಬತ್ತದ ಉತ್ಸಾಹ ಇಷ್ಟ. ಭಾರತದ ಸ್ವಾತಂತ್ರ್ಯಕ್ಕಾಗಿ ಅನವರತ ಹೋರಾಡುವ ಮನೋಭಾವ ಇಷ್ಟ. ಆದರೆ, ಅವರು ಹೋಗುತ್ತಿರುವ “ದಂಡಂ ದಶಗುಣಂ ಭವೇತ್” ಎನ್ನುವ ದಾರಿ ಅಷ್ಟು ಇಷ್ಟವಾಗುವುದಿಲ್ಲ ಎನ್ನುತ್ತಿದ್ದರು.
ಸ್ವಾಭಾವಿಕವಾಗಿ ನಮಗಿಷ್ಟವಾದವರನ್ನು ನಾವು ಬಿಟ್ಟುಕೊಡುವುದೇ ಇಲ್ಲ. ಆದರೆ, ಇಲ್ಲಿ ಗಾಂಧೀಜಿ, ನೇತಾಜಿ ಸಾವಿನ ಬಗ್ಗೆ ಯಾರನ್ನೂ ಪ್ರಶ್ನಿಸಲೇ ಇಲ್ಲ. ಗಟ್ಟಿಯಾಗಿ ಎಲ್ಲೂ ಆಕ್ರೋಶ ವ್ಯಕ್ತ ಪಡಿಸಲೇ ಇಲ್ಲ. ಗಾಂಧೀಜಿಯನ್ನೂ ತಮಗೆ ಬೇಕಾದಂತೆ ನೆಹರೂ ಬಗ್ಗಿಸಿಕೊಂಡಿದ್ದರು ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ನಮಗೆ ಸಿಗುವುದಿಲ್ಲ. ಆದರೆ, ಇಲ್ಲಿ ಗಾಂಧೀಜಿ ನೇತಾಜಿಯನ್ನ ಪ್ರೀತಿಸುತ್ತಿದ್ದರು ಎಂದು ತಿಳಿಯುವುದೇ ಬೇಡ. ಏಕೆಂದರೆ, ಗಾಂಧೀಜಿಗೂ ನೇತಾಜಿ ಕಾಣೆಯಾಗುವುದಕ್ಕೂ ಪರೋಕ್ಷವಾಗಿ ಸಂಬಂಧವಿರುವುದರ ಬಗ್ಗೆ ಬಹಳ ಅನುಮಾನಗಳಿವೆ. ಇನ್ನು ಇಷ್ಟರಲ್ಲಾಗಲೇ ಬ್ರಿಟಿಷ್ ಗುಪ್ತಚರ ವರದಿ ಹೊರಬಂದಿತ್ತು ಅದರಂತೆ ನೇತಾಜಿ ರಷ್ಯಾದಲ್ಲಿ ಇದ್ದಾರೆಂದು ಕೆಲವರು ನೋಡಿರುವುದರ ಬಗ್ಗೆ ಮಾಹಿತಿಯಿದೆ ಎಂದು ಹೇಳಿತ್ತು. ಸಚಿವಾಲಯಕ್ಕೆ ರಹಸ್ಯ ಮಾಹಿತಿ ಕೊಡುವ ಏಜೆನ್ಸಿಯ ನಿರ್ದೇಶಕರಾಗಿದ್ದ ರಾಯ್ ಸಿಂಗ್, ನೇತಾಜಿ ರಷ್ಯಾದಲ್ಲಿ ಇದ್ದಾರೆಂದು ಹೇಳಿದ್ದರು. ಜೋಸೆಫ್ ಸ್ಟಾಲಿನ್ನ ಬಲಗೈ ಬಂಟ ಬಾಬಜನ್ ಗೌಫ್ರೌ ಜೊತೆ ಬಹಳ ಸ್ನೇಹ ಹೊಂದಿದ್ದ ರಾಯ್ ಸಿಂಗ್ಗೆ ಬಹಳಷ್ಟು ಮಾಹಿತಿ ಸಿಗುತ್ತಿತ್ತು. ಗೌಫ್ರೌ ಹೇಳುವಂತೆ ನೇತಾಜಿ 1945ರಲ್ಲೇ ಮಂಚುರಿಯಾ ಮೂಲಕ ರಷ್ಯಾಗೆ ಬಂದಿದ್ದರು. ಅಲ್ಲಿನ ನಿಯಮದ ಪ್ರಕಾರ ದೇಶದ ಒಳಗೆ ಬಂದ ನೇತಾಜಿಯನ್ನ ಕೊಲ್ಲಬಹುದಿತ್ತು. ಆದರೆ ಮುಂದೆ ಭಾರತದ ಜೊತೆ ಏನಾದರೂ ಒಪ್ಪಂದಗಳನ್ನು ಮಾಡುವಾಗ ನೇತಾಜಿಯನ್ನು ಮುಂದಿಟ್ಟುಕೊಂಡು ಏನಾದರೂ ಮಾಡಬಹುದು ಎಂಬ ಆಲೋಚನೆಯೊಂದಿಗೆ ಸೈಬಿರಿಯಾದ ಲೇಬರ್ ಕ್ಯಾಂಪ್ನಲ್ಲಿ ಬಂಧಿಸಿಡಲಾಗಿತ್ತು. ಚಾಲಾಕಿ ನೆಹರೂಗೆ ಈ ವಿಷಯ 1945ರಲ್ಲೇ ಗೊತ್ತಿತ್ತು ಎನ್ನುವುದಕ್ಕೆ ತಾಜಾ ಉದಾಹರಣೆಯೊಂದನ್ನು ಕೊಡುತ್ತೇನೆ ಕೇಳಿ. ಸುಭಾಷ್ ಚಂದ್ರರು ರಷ್ಯಾದಿಂದ ನೆಹರೂಗೆ ಒಂದು ಪತ್ರ ಬರೆದಿದ್ದರು. “ನಾನು ಈಗ ರಷ್ಯಾದಲ್ಲಿದ್ದೇನೆ. ಹೇಗಾದರೂ ಮಾಡಿ ನನ್ನನ್ನು ಇಲ್ಲಿಂದ ಕರೆದೊಯ್ಯುವ ಪ್ರಯತ್ನ ಮಾಡಿ” ಎಂದಿದ್ದರು. ಇದನ್ನು ಓದಿದ ನೆಹರೂಗೆ ಏಕೋ ತನ್ನ ಪ್ಲಾನ್ ಉಲ್ಟಾ ಹೊಡೆಯುತ್ತಿದೆಯಲ್ಲ ಎಂದೆನಿಸಿ, ಒಂದು ಉಪಾಯ ಮಾಡಿದರು. ಅದರಂತೆ ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಅಟ್ಲೀಗೆ ಪತ್ರ ಬರೆಯುತ್ತಾರೆ. ಆ ಪತ್ರ ಓದಿದರೆ ಯಾವನಿಗಾದರೂ ರಕ್ತ ಕುದಿಯದೇ ಇರುವುದಿಲ್ಲ. ಏಕೆಂದರೆ ಒಬ್ಬ ದೇಶಭಕ್ತನ ಅಳಿವು-ಉಳಿವಿನ ನಡುವೆಯೂ ರಾಜಕೀಯದಾಟ ಆಡಿದ್ದರು. ಅದರ ಬಗ್ಗೆ ಹೇಳುವ ಬದಲು ಪತ್ರದ ಯಥಾವತ್ ಅನುವಾದ ನಿಮ್ಮ ಮುಂದಿಡುತ್ತೇನೆ ನೋಡಿ.
“ನಮಗೆ ಬಂದಿರುವ ನಿಖರ ಮಾಹಿತಿಯ ಪ್ರಕಾರ(ನಿಖರ ಮಾಹಿತಿಯೆಂದರೆ ನೇತಾಜಿಯ ಪತ್ರ) ನಿಮ್ಮ ಯುದ್ಧ ಖೈದಿಯಾದ ಸುಭಾಷ್ ಚಂದ್ರ ಬೋಸ್ಗೆ ರಷ್ಯಾದಲ್ಲಿ ಉಳಿಯಲು ಜಾಗ ಕೊಟ್ಟಿದ್ದಾರೆ ಸ್ಟಾಲಿನ್. ಬ್ರಿಟಿಷ್ ಮತ್ತು ಅಮೆರಿಕಾಗೆ ಮಿತ್ರ ರಾಷ್ಟ್ರವಾಗಿರುವ ರಷ್ಯಾ, ನಂಬಿಕೆ ದ್ರೋಹ ಮಾಡಿದೆ. ದಯವಿಟ್ಟು ಈ ಬಗ್ಗೆ ಗಮನಹರಿಸಿ ಹಾಗೂ ಸುಭಾಷ್ ಚಂದ್ರ ಬೋಸ್ ವಿಷಯದಲ್ಲಿ ನಿಮಗೆ ಏನು ಸರಿಯೆನಿಸುತ್ತದೆಯೋ ಅದನ್ನೇ ಮಾಡಿ” ಎಂದಿದ್ದಾರೆ. ಇದು ಖೋಸ್ಲಾ ಕಮಿಷನ್ನಿನ ವರದಿಯಲ್ಲಿ ದಾಖಲಾಗಿದೆ. ನಾಚಿಕೆಯಾಗಬೇಕು ನೆಹರೂರ ಈ ನೀಚ ಬುದ್ಧಿಗೆ. ದೇಶಕ್ಕಾಗಿ ಪ್ರಾಣ ಕೊಟ್ಟವನ ಪ್ರಾಣ ಕಾಪಾಡೋ ಯೋಗ್ಯತೆ ಅಂತೂ ಈ ನೆಹರೂಗೆ ಇಲ್ಲ. ಆದರೆ, ನೇತಾಜಿಯನ್ನ “ನಿಮ್ಮ (ಬ್ರಿಟಿಷರ) ಯುದ್ಧ ಖೈದಿ” ಎಂದು ಕರೆಯುವ ಹಕ್ಕನ್ನು ಈ ತೋಲಾಂಡಿ ನಾಯಕನಿಗೆ ಕೊಟ್ಟವನಾದರೂ ಯಾರು? ಇದಕ್ಕೆ ಯಾವ ಕಾಂಗ್ರೆಸ್ ನಾಯಕರು ಉತ್ತರಿಸುತ್ತಾರೆ? ಸತ್ಯವೇನು ಗೊತ್ತಾ? ನೇತಾಜಿ ಯಾವತ್ತೂ ತಾನು ರಾಜಕೀಯಕ್ಕೆ ಬರಬೇಕು ಎಂದು ಆಸೆ ಪಟ್ಟವರೇ ಅಲ್ಲ. ಇತಿಹಾಸ ಪುಸ್ತಕದ ಒಂದು ಸಾಲಲ್ಲೂ ನೇತಾಜಿಯ ಅಂಥ ಆಸೆ ಕಾಣಸಿಗುವುದಿಲ್ಲ. ಒಮ್ಮೆ ನೆಹರೂರೇ ನೇರವಾಗಿ ನೇತಾಜಿಯ ಬಳಿ ಹೋಗಿ ನಾನೇ ಪ್ರಧಾನಿಯಾಗುತ್ತೇನೆ ಎಂದಿದ್ದರೂ ನೇತಾಜಿ ಒಪ್ಪಿಬಿಡುತ್ತಿದ್ದರು. ಆದರೆ ಇಂಥ ಮಣ್ಣು ತಿನ್ನುವ ಕೆಲಸ ಮಾತ್ರ ನೆಹರೂ ಮಾಡಬಾರದಿತ್ತು. ಕೊನೆಯದಾಗಿ ಭಾರತಕ್ಕಾದರೂ ನೇತಾಜಿಯನ್ನ ಕೆರೆದುಕೊಂಡು ಬಂದು ಇಲ್ಲಿ ಎಂದಿನಂತೆ ರಾಜಕೀಯ ಪ್ಲಾನ್ಗಳನ್ನು ಮಾಡುತ್ತಿದ್ದರೆ ಜನರಿಗೂ ನೆಹರೂ ಮೇಲೆ ಒಂದೊಳ್ಳೆ ಅಭಿಪ್ರಾಯ ಬರುತ್ತಿತ್ತು. ಆದರೆ, ಅದನ್ನು ಸ್ವತಃ ನೆಹರೂರೇ ಹಾಳು ಮಾಡಿಕೊಂಡರು. ಯಾವುದೇ ಯುದ್ಧ ಖೈದಿಯಾಗಲಿ, ಅವನು ಕೈಗೆ ಸಿಕ್ಕರೆ ಮಾತ್ರ ರಹಸ್ಯ ವಿಷಯಗಳನ್ನು ಸಾಕಷ್ಟು ಹೀರಿ, ಚಿತ್ರ ಹಿಂಸೆ ಕೊಟ್ಟೇ ಸಾಯಿಸುತ್ತಾರೆ. ನೆಹರೂ ಪತ್ರದ ಕೊನೆಯ ವಾಕ್ಯ ಓದಿದ್ದೀರಾ? ಅದರಲ್ಲಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ “ಬೋಸ್ ವಿಚಾರದಲ್ಲಿ ಏನು ಬೇಕಾದರೂ ಮಾಡಿ” ಎಂದಿದ್ದಾರೆ. ನೆಹರೂಗೆ ನೇತಾಜಿ ಸತ್ತರೇ ಒಳ್ಳೆಯದು ಎಂಬಂತಿಲ್ಲವೇ ಅವರ ಪತ್ರ. ಒಬ್ಬ ಪ್ರಧಾನಿ ತನ್ನ ಪ್ರಜೆಯನ್ನ ಬಿಟ್ಟುಕೊಡಲೇಬಾರದು. ಅಂತಹುದರಲ್ಲಿ ಪ್ರಧಾನಿಯಂಥ ಪ್ರಧಾನಿಯೇ ನೀವೇನ್ ಬೇಕಾದ್ರೂ ಮಾಡಿಕೊಳ್ಳಿ ಎಂದು ಪತ್ರ ಬರೆದಿದ್ದಾರೆಂದರೆ, ಬ್ರಿಟನ್ ಪ್ರಧಾನಿಗೆ ಮತ್ತೊಮ್ಮೆ ಸ್ವಾತಂತ್ರ್ಯ ಕೊಟ್ಟಂತಾಗಲಿಲ್ಲವೇ? ನೆಹರೂ ಇಷ್ಟೊಂದು ನೀಚರಾಗಿದ್ದರಾ? ಸುಮಾರು ತಿಂಗಳುಗಳು ಕಾದರೂ ನೆಹರೂಗೆ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ಪತ್ರ ಬರೆದು ಅದಾಗಲೇ 10 ವರ್ಷ ಕಳೆದಿತ್ತು. ನೆಹರೂಗೆ ಮಾತ್ರ ಸಮಾಧಾನವಿಲ್ಲ. ಏಕೆಂದರೆ, ದಿನೇ ದಿನೇ ಜನಗಳಿಗೆ ನೇತಾಜಿ ರಷ್ಯಾದಲ್ಲಿರುವ ಬಗ್ಗೆ ತಿಳಿಯುತ್ತಾ ಬಂತು. ಇನ್ನು ಸುಮ್ಮನೆ ಕುಳಿತರೆ ಕಥೆ ಕೆಡುತ್ತದೆ ಎಂದು ತಿಳಿದು, ಜೂನ್ 1955ರ ಜೂನ್ 7ರಿಂದ 23ರರವರೆಗೆ ನೆಹರೂ ರಷ್ಯಾ ಪ್ರವಾಸ ಕೈಗೊಳ್ಳುತ್ತಾರೆ. ಮತ್ತೊಮ್ಮೆ ನೆಹರೂ ತಮ್ಮ ಬುದ್ಧಿ ತೋರಿಸಿಯೇ ಬಿಟ್ಟರು ನೋಡಿ. ಅಷ್ಟು ದಿನವಿಲ್ಲದ ಉಸಾಬರಿ 1955ರಲ್ಲೇ ಏಕೆ? ಅದೂ ರಷ್ಯಾಗೇ ಏಕೆ? ನೇತಾಜಿ ರಷ್ಯಾದಲ್ಲಿದ್ದಾರೆಂದು ಕೇಳಿದಾಗಿನಿಂದ ನೆಹರೂ ಸರಿಯಾಗಿ ನಿದ್ದೆ ಸಹ ಮಾಡಿರಲಿಲ್ಲ. ಅಷ್ಟು ಭಯ ಆವರಿಸಿತ್ತು. ಎಲ್ಲಿ ಮತ್ತೆ ರಷ್ಯಾದ ಸಹಾಯ ಪಡೆದು ಭಾರತಕ್ಕೆ ಬಂದುಬಿಡುತ್ತಾರೋ ಎಂದು. ನಮ್ಮ ದೇಶದ ಮತ್ತು ರಷ್ಯಾದ ಸಂಬಂಧಗಳನ್ನು ಸರಿ ಮಾಡಲು ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡಲು ಮಾಸ್ಕೋಗೆ ಹೋಗಬೇಕು ಎನ್ನುವ ಹೊಸ ನಾಟಕ ಶುರು ಮಾಡಿದರು ನೆಹರು. ಅಸಲಿಗೆ ಮಾಸ್ಕೋಗೆ ಹೋಗುವ ಮುಖ್ಯ ಕಾರಣ ನೇತಾಜಿ ಬಗೆಗಿನ ವಿಷಯ ಮಾತಾಡಲಿಕ್ಕೆ. ಆದರೆ, ಇಲ್ಲಿ ಒಂದು ತಿದ್ದುಪಡಿ. ನೇತಾಜಿಯ ಬಗ್ಗೆ ಮಾತನಾಡುವುದಕ್ಕೆ ಎಂದರೆ ವಾಪಸ್ ಕರೆತರುವುದಕ್ಕಲ್ಲ, ಬದಲಿಗೆ ಆ ಕಥೆಗೆ “ಅಂತ್ಯ” ಹಾಡಬೇಕು ಎನ್ನುವ ಸಲುವಾಗಿ. ಅದು ಅಷ್ಟು ಸುಲಭದಲ್ಲಿರಲಿಲ್ಲ. ಸಮಸ್ಯೆಯೇನೆಂದರೆ, ಈ ವಿಷಯಕ್ಕಾಗಿ ಹೋದರೆ ಸತ್ತ ನೇತಾಜಿ ಮತ್ತೆ ಹೇಗೆ ರಷ್ಯಾದಲ್ಲಿ ಕಂಡರು? ಎಂದು ಜನರೇ ನೆಹರೂ ಮುಖಕ್ಕೆ ಉಗಿಯುವ ಚಾನ್ಸ್ ಬಹಳ ಇತ್ತು. ಅದಕ್ಕೆ ಹೊಸದೊಂದು ಕಥೆ ಕಟ್ಟಿ ಅಂದಿನ ಪ್ರಧಾನಿ ನಿಕೋಲಾಯ್ ಬಲ್ಗಿನಿನ್ರನ್ನು ಭೇಟಿ ಮಾಡಿದರು. ಒಂದಲ್ಲ ಎರಡಲ್ಲ, ಸುಮಾರು 16 ದಿನಗಳ ಕಾಲ ಅಲ್ಲೇ ಇದ್ದರು. ಸಂಬಂಧವೇ ಇರದ ದೇಶದ ಜೊತೆ ಸಂಬಂಧ ಸರಿ ಮಾಡಿಕೊಳ್ಳುವ ಅಗತ್ಯವೇನಿತ್ತು? ಈ ಪುರುಷಾರ್ಥಕ್ಕೆ 16 ದಿನ ಬೇಕಾ? ಇದನ್ನು ನೀವು ನಂಬುತ್ತೀರಾ?
Thanks a lot for sharing this with all people you actually know what you are talking about! Bookmarked. Kindly additionally talk over with my site =). We may have a link exchange arrangement among us
AUQK0g Of course, what a great blog and revealing posts, I surely will bookmark your website.Best Regards!